31 ಡಿಸೆಂಬರ್ 2008

ಮರೆಯಲಾರದ ದಿನ





ಹೊಸ ವರ್ಷ ಅಥವಾ ಹಳೆಯ ನೆನಪು


ಗೋಡೆಯ ಮೇಲಿನ ಕ್ಯಾಲೆಂಡರ್ ಬದಲಾಗುತ್ತಿದೆ,ಅಂದರೇ, ಅದರ ಸೂಚನೆ ಮತ್ತೊಂದು ವರ್ಷ ಮುಗಿದು ಹೋಯಿತೆಂಬುದನ್ನು ನಮಗೆ ಮನವರಿಕೆ ಮಾಡಿಕೊಡುವುದು. ಹೊಸವರ್ಷವೆಂದೊಡನೆ ಏನೋ ಒಂದು ಬಗೆಯ ಸಡಗರ, ಯಾವುದಕ್ಕೊ ಸಜ್ಜಾಗುತಿದ್ದೇವೆಂದೆನಿಸುತ್ತದೆ. ಇದು ಇಂದು ನಿನ್ನೆಯದಲ್ಲ. ನನಗೆ ತಿಳಿದಾಗಿನಿಂದಲೂ ಇದು ನಡೆಯುತ್ತಲೇ ಇದೆ ಮುಂದೆ ನಡೆದು ಹೋಗುತ್ತದೆ. ನಾನು ಚಿಕ್ಕವನಿದ್ದಾಗ ನನ್ನೂರು ಹಳ್ಳಿಯಾದ್ದರಿಂದ ಇಂಥಹ ಆಚರಣೆಗಳಿಗೆ ಅಂಥಹ ಮಹತ್ವವಿರಲಿಲ್ಲ. ನಮ್ಮಲ್ಲಿ ನಡೆಯುತಿದ್ದ ಕೆಲವು ಹಬ್ಬಗಳನ್ನು ಮಾತ್ರ ನಾವು ಸಂಭ್ರಮದಿಂದ ಮೆರೆಸುತಿದ್ದವೇ ಹೊರತು, ಇವೆಲ್ಲ ನಮಗೆ ಅವಶ್ಯಕ ಅನ್ನಿಸುತ್ತಿರಲಿಲ್ಲ, ಅವಶ್ಯಕತೆ ಅನ್ನುವುದಕ್ಕಿಂತ ತಿಳಿದೇ ಇರಲಿಲ್ಲವೆಂದರೂ ತಪ್ಪಿಲ್ಲ. ಕೆಲವೇ ಕೆಲವು ಮನೆಗಳಲ್ಲಿ ಹೊಸವರ್ಷದಂದು ಸ್ನಾನ ಮಡಿಗುಡಿ ಮಾಡಿ,ಮನೆಮುಂದೆ ರಂಗೋಲಿ ಹಚ್ಚಿ, ಸಿಹಿ ಮಾಡುತಿದ್ದರು. ಅದರಲ್ಲಿ ನಮ್ಮ ಮನೆಯೂ ಒಂದು, ನಾವು ಹಳ್ಳಿಯಲ್ಲಿದ್ದರೂ ಅಪ್ಪ ಸರ್ಕಾರಿ ಉದ್ಯೋಗದಲ್ಲಿದ್ದರಿಂದ ಮತ್ತು ಅಮ್ಮ ಪಟ್ಟಣದಿಂದ ಬಂದವಳಾದ್ದರಿಂದ ಈ ಬಗೆಯ ಆಚರಣೆಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸುತಿದ್ದರು. ನಾನು ಶಾಲೆಗೆ ಹೋಗುವ ಸಮಯದಲ್ಲಿ ವರ್ಷದ ಕೊನೆಯ ವಾರದಲ್ಲಿಯೇ ಗ್ರೀಟಿಂಗ್ ಕಾರ್ಡುಗಳನ್ನು ಅಪ್ಪ ಕೊಣನೂರಿನಿಂದ ತರುತಿದ್ದರು. ನಾನು ಕೊಣನೂರು ನೋಡುತಿದ್ದದ್ದು ಎಂದೋ ಒಮ್ಮೊಮ್ಮೆ ಅಷ್ಟೇ. ಗ್ರೀಟಿಂಗ್ ಕಾರ್ಡುಗಳನ್ನು ತಂದು ಕಳುಹಿಸುವುದೆಂದರೇ ನಮಗೆ ಎಲ್ಲಿಲ್ಲದ ಆನಂದ, ಯಾಕೆಂದರೇ ನಮ್ಮೂರಿನಲ್ಲಿ ಈ ಬಗೆಯ ಆಚರಣೆ ಮಾಡುತಿದ್ದವರೇ ಕಡಿಮೆಯಾದ್ದರಿಂದ ತಂದ ಗ್ರೀಟಿಂಗ್ ನೋಡಲು ನನ್ನ ಮಿತ್ರವೃಂದವೇ ಹಾಜರಿರುತಿತ್ತು.ನಮಗೆ ಹೊರ ಊರುಗಳಿಂದ ಕಳುಹಿಸಿದ ಗ್ರೀಟಿಂಗ್ ಗಳನ್ನು ಕಂಡರೂ ಅಷ್ಟೆ ಆನಂದವಾಗುತ್ತಿತ್ತು.ಒಂದೇ ಮಗುವಿನ ಚಿತ್ರವನ್ನು ಕಳುಹಿಸಿದರೆ ಅದು ನನಗೆ ಕಳುಹಿಸಿರುವುದೆಂದು ತೀರ್ಮಾನಿಸುತ್ತಿದ್ದೆ. ಕೆಲವರು ತಡವಾಗಿ ನಮಗೆ ಗ್ರೀಟಿಂಗ್ ಕಳುಹಿಸಿದರೇ, ಅವರಿಗೆ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿ ಕಳುಹಿಸುತಿದ್ದೇವು.


ಹೀಗೆ ಆರಂಭವಾದ ಆಚರಣೆ ನಾನು ಹೈಸ್ಕೂಲ್ ಮುಗಿಸುವ ಹೊತ್ತಿಗೆ, ನಮ್ಮೂರಿನ ಅಂಗಡಿಗಳಲ್ಲಿಯೇ ಸಿನೆಮಾ ನಾಯಕ ನಾಯಕಿಯರ ಚಿತ್ರಗಳಿರುವ ಕಾರ್ಡುಗಳು ದೊರೆಯಲಾರಂಬಿಸಿದವು.ನಮ್ಮ ಬಳಿ ೫೦ ಪೈಸೆಯಿದ್ದರೇ ಸಾಕು ಅದನ್ನು ಕೊಂಡು ವಿನಿಮಯ ಮಾಡಿಕೊಳ್ಳುತ್ತಿದ್ದೆವು.ಕೆಲವೊಮ್ಮೆ ನಮಗೆ ಬೇಕಾದ ಹೀರೋಗಳ ಫೋಟೋವನ್ನೆ ಕೊಡಬೇಕೆಂದು ಕೇಳಿ ಪಡೆದುಕೊಳ್ಳುತಿದ್ದೆವು.ಆದರೇ, ಇಂದು ನಮ್ಮೂರಿಗೆ ಹೋದರೇ ಅದು ಯಾವ ನಗರ ಪ್ರದೇಶಗಳಿಗೂ ಕಡಿಮೆಯಿಲ್ಲವೆಂಬಂತೆ, ಹೊಸವರ್ಷದ ಮೊದಲ ದಿನದಂದು, ಮನೆಯ ಮುಂದೆ ರಂಗೋಲಿ ಇಟ್ಟು ಬಣ್ಣ ಬಣ್ಣಗಳಿಂದ ಶುಭಾಷಯಗಳನ್ನು ಕೋರುತ್ತಾರೆ. ವಿಚಿತ್ರವೆಂದರೇ, ನಮ್ಮ ಮನೆಯಲ್ಲಿ ಈ ಆಚರಣೆ ಅಂದು ಆರಂಭವಾದಂತೆಯೇ ಇಂದಿಗೂ ಇದೆ. ಆದರೇ ಗ್ರೀಟೀಂಗ್ ಎಂಬ ವಸ್ತು ನಮ್ಮ ಜಗತ್ತಿನಿಂದ ಮರೆಯಾಗಿ, ಫೋನ್ ಮಾಡಿ ಶುಭಾಷಯವನ್ನು ಕೋರುತ್ತಿದ್ದೇವೆ. ಆ ದಿನಗಳಲ್ಲಿದ್ದ ಆ ತಳಮಳ,ಗ್ರೀಟಿಂಗ್ ಗಾಗಿ ಕಾಯುವ ಕಾತುರತೆ ಕಡಿಮೆಯಾಗಿ, ಇದೊಂದು ಯಾಂತ್ರಿಕತೆ ಎನಿಸತೊಡಗಿದೆ. ವಿಪರ್ಯಾಸವೆಂದರೇ, ನನ್ನೂರಿನಲ್ಲಿಯೂ ರಾತ್ರಿ ಮೈಕಾ ಹಾಕಿಸಿ, ಕುಡಿದು ಕುಣೀಯುತ್ತಿರುವುದು ಇತ್ತೀಚೆಗೆ ನನ್ನನ್ನು ಬೆರಗುಗೊಳಿಸಿದೆ. ರಾತ್ರಿ ಕುಡಿದು ಕುಣಿದು, ನಮ್ಮನ್ನ್ಯಾರು ಕೇಳುವವರು, ಎನ್ನುವ ಮಟ್ಟಕ್ಕೆ ಮೆರೆಯುತ್ತಿರುವ ನನ್ನೂರಿನ ಯುವಶಕ್ತಿಯ ಮೇಲೆ ನನಗೆ ಅಭಿಮಾನವುಳಿದಿಲ್ಲ. ಅವರು ರಾತ್ರಿ ಕುಡಿದು ಅದು ಇಳಿಯದೇ ಹೊಸವರ್ಷದ ಹೊಸದಿನದಂದು ಅವರ ಮುಖವನ್ನು ನೊಡಿದರೇ ಇವನು ಈ ಶತಮಾನದವನಲ್ಲವೇ ಅಲ್ಲ ಎನಿಸುವಷ್ಟು ಘೋರವಾಗಿರುತ್ತದೆ.ನನ್ನ ಕಾಲೇಜು ದಿನಗಳಲ್ಲಿ, ಅದರಲ್ಲೂ ಪಿ.ಯು.ಸಿ. ದಿನಗಳಲ್ಲಿ, ಅದೆಷ್ಟು ಚಡಪಡಿಸುತ್ತಿದ್ದೆವೆಂದರೇ, ತಿಂಗಳು ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸತೊಡಗಿದ್ದೇವು.ನನಗಿದ್ದ ಒಂದು ದುರ್ಬುದ್ದಿಯೆಂದರೇ, ವರ್ಷವೆಲ್ಲಾ ಕುಡಿದು ಕುಣಿದಾಡಿದರೂ ಬೇರೆಯವರು ಹೆಚ್ಚು ಕುಡೀಯುವಾಗ ನಾನು ಹೆಚ್ಚು ಕುಡಿಯುತ್ತಿರಲಿಲ್ಲ. ಅವರ ಆಟಗಳನ್ನು ಮಾರನೇ ದಿನ ನೆನೆದು ಅವರನ್ನು ಗೋಳುಯ್ಯುತ್ತಿದ್ದೆ. ಅದೇ ಕೊನೆಯೆನಿಸುತ್ತದೆ, ಅದಾದ ಮೇಲೆ ಅಂಥಹ ಆಚರಣೆಗಳು ಕಡಿಮೆಯಾದವು. ಕೆಲವು ವರ್ಷಗಳು ಆವಿಷ್ಕಾರಗಳೊಂದಿಗೆ ಆಚರಿಸತೊಡಗಿದ್ದೆವು. ಈ ವರ್ಷ ಏನೆಲ್ಲಾ ಮಾಡಬೇಕೆಂದು ಮುಂಚಿತವಾಗಿ ಯೋಚಿಸತೊಡಗಿದೆವು, ಹಾಗೆ ಇರಬೇಕು, ಹೀಗೆ ಇರಬೇಕೆಂದು ಹತ್ತು ಹಲವನ್ನು ಪಟ್ಟಿ ಮಾಡಿ ನೋಡುತಿದ್ದೆ. ಅವುಗಳಲ್ಲಿ ಒಂದನ್ನು ನೆರವೇರಿಸಲಾಗದೇ, ಇವೆಲ್ಲಾ ಕೈಗೂಡೂವ ಕೆಲಸವಲ್ಲ ವೆನಿಸಿ ಕೈಚೆಲ್ಲುತ್ತಿದ್ದೆ. ಚಿಕ್ಕವನಿದ್ದಾಗ ಆ ದಿನಕ್ಕೆ ಕೊಡುತಿದ್ದ ಮಹತ್ವ ಅಷ್ಟಿಸ್ಟಲ್ಲ, ಸುಳ್ಳು ಹೇಳಿದರೇ ವರ್ಷವಿಡೀ ಸುಳ್ಳು ಹೇಳುತ್ತಿವಿ, ಹೊಡೆಸಿಕೊಂಡರೇ ವರ್ಷವಿಡಿ ಹೊದೆಸಿಕೊಳ್ಳುತ್ತೀವಿ.ಆದರೇ, ಒಮ್ಮೊಮ್ಮೆ ಅನಿಸುತಿತ್ತು ಹೊಸವರ್ಷದಲ್ಲಿ ಹುಟ್ಟಿದರೇ? ಹೊಸವರ್ಷದಲ್ಲಿ ಸತ್ತರೇ? ಇವೆಲ್ಲಾ ನನ್ನ ತಲೆ ಹರಟೆ ಎನಿಸಿ ಯಾರಿಗು ಹೇಳದೆ ಸುಮ್ಮನಾಗುತ್ತಿದ್ದೆ.


ಇಂದು ಅಷ್ಟೇ, ಯಾರಾದರೂ ಹೇಗೆ ಹೊಸವರ್ಷ ಅಂತಾ ಕೇಳಿದರೇ, ಏನು ಹೇಳುವುದು, ಅಂತಾ ಸುಮ್ಮನಾಗುತ್ತೇನೆ. ಕೆಲವು ಮೂಲಭೂತವಾದಿಗಳು, ಇವೆಲ್ಲಾ ನಮ್ಮ ಸಂಸ್ಕೃತಿಯಲ್ಲ, ನಮಗೆ ಯುಗಾದಿಯಂದು ಹೊಸವರ್ಷ, ಇವೆಲ್ಲಾ ನಾವು ಪಾಶ್ಚಿಮಾತ್ಯರಿಂದ ಕಲಿತಿರುವುದು, ನಮ್ಮ ಯುವಜನತೆ ಕುಡಿದು ಕುಣಿದಾಡಿ ಹಾಳಾಗುವುದಕೊಂದು ವೇದಿಕೆಯಷ್ಟೆ ಅಂತಾ ಎಲ್ಲಾ ಬೊಗಳೆ ಹೊಡೆಯುತ್ತಾರೆ. ನನಗೆ ಸುಮ್ಮನೆ ಒಂದು ಸಂಸ್ಕೃತಿಯನ್ನು ದೂರುವುದರಲ್ಲಿ ಅಥವ ಇನ್ಯಾರನ್ನೋ ಹಂಗಿಸುವುದರಲ್ಲಿ ಅಷ್ಟೇನೂ ಆಸಕ್ತಿಯಿಲ್ಲ. ಒಂದು ಆಚರಣೆಗೆ, ಕಾರಣ ಬೇಕಿಲ್ಲ, ಜನೆವರಿಯಂದು ಹೊಸವರ್ಷ ಆಚರಿಸಿದರೇ, ಯುಗಾದಿ ಆಚರಿಸಬೇಡವೆಂದು ಯಾರು ತಡೆದಿಲ್ಲ. ಹತ್ತಾರು ಜನ ಒಂದೆಡೆ, ಕಲೆತು ಬೆರೆಯಲಿ ಅದಕ್ಕೊಸ್ಕರ ಇದೊಂದು ವೇದಿಕೆಯಾಗುವುದಾದರೆ ಅದರಲ್ಲಿ ತಪ್ಪೇನು? ಹಲವು ವರ್ಷಗಳ ಹಿಂದೆ ನನ್ನೂರಿನಲ್ಲಿ ಸಂಕ್ರಾಂತಿ ಹಬ್ಬವೆನ್ನುವುದರ ಆಚರಣೆಯೇ ಇರಲಿಲ್ಲ. ಎಳ್ಳು ಬೆಲ್ಲ ಇವೆಲ್ಲ ನಮಗೆ ತಿಳಿದೇ ಇರಲಿಲ್ಲ. ನಮ್ಮಮ್ಮ, ಹದಿನೈದು ದಿನ ಮುಂಚಿತವಾಗಿಯೇ, ಎಳ್ಳು, ಬೆಲ್ಲ, ಕಡ್ಲೆ ಬೀಜ, ಕೊಬ್ಬರಿ ಯನ್ನು ತುಂಡುಮಾಡಿ ಒಣಗಿಸುವಾಗ ನನಗೆ ಅನ್ನಿಸುತಿತ್ತು, ೧೫ ದಿನ ಕಾಯಬೇಕಾ ಇದನ್ನ ತಿನ್ನಲ್ಲಿಕ್ಕೆ? ಅಂತೂ ಮುಂಚಿತವಾಗಿಯೇ ಕದ್ದು ನನ್ನ ಜೇಬು ತುಂಬಿಸಿಕೊಂಡು ಓಡಿ ಹೋಗಿ ತಿನ್ನುತಿದ್ದೆ. ಆದರೇ, ಈಗ ಪ್ರತಿ ಮನೆಯಲ್ಲಿಯೂ ಅದನ್ನು ಆಚರಿಸುತ್ತಾರೆ, ಪ್ರತಿ ವಸ್ತುವನ್ನು ಅಂಗಡಿಯಿಂದ ತಂದು ಆಚರಿಸುತ್ತಾರೆ, ಯಾವುದನ್ನು ಮನೆಯಿಂದ ಮಾಡುವ ಗೋಜಿಗೆ ಹೋಗುವುದಿಲ್ಲ. ಎಲ್ಲವೂ ಸಿದ್ದವಾಗಿ ಬಾಗಿಲಿಗೆ ಬಂದು ಬೀಳಬೇಕು ಇದು ಸೋಮಾರಿತವವೋ? ಅಥವಾ ಪ್ರಗತಿಯೋ? ನನಗಂತೂ ಗೊತ್ತಿಲ್ಲ. ಕೆಲವು ತಾಂತ್ರಿಕತೆಯಿಂದ ಸುಲಭವಾಗಿದೆಯೆನಿಸಿದರೂ ನಮ್ಮಲ್ಲಿ ಸೋಮಾರಿತನವನ್ನು ಹೆಚ್ಚಿಸಿದೆಯೆಂದೇ ಹೇಳಬೇಕು. ನಮ್ಮಮ್ಮ, ಒಮ್ಮೆ ಮೆಣಸಿನಪುಡಿ, ಧನಿಯಾ ಪುಡಿ ಮಾಡಿಸಬೇಕೆಂದರೆ, ಕನಿಷ್ಟ ೧೫ ದಿನಗಳಾಗುತಿತ್ತು. ಸಂತೆಗೆ ಹೋಗಿ ಅದನ್ನು ತಂದು, ಒಣಗಿಸಿ, ಹದಮಾಡಿ ನಂತರ ನಮ್ಮೂರಲ್ಲಿ ಮಿಲ್ ಇಲ್ಲದೇ ಇದ್ದುದರಿಂದ ಕೊಣನೂರಿಗೆ ಹೋಗಿ ಪುಡಿ ಮಾಡಿಸಿಕೊಂಡು ಬರುತ್ತಿದ್ದಳು. ಆದರೇ, ಇಂದು ಅವೆಲ್ಲದರ ತಕರಾರು ಇಲ್ಲವೇ ಇಲ್ಲ.ಅಂಗಡಿಯಿಂದ ನೇರವಾಗಿ ತಂದು ಒಲೆಯ ಮೇಲಿನ ಪಾತ್ರೆಗೆ ಹಾಕಿ ಧಾರವಾಹಿ ನೋಡುತ್ತಾ ಕೂರುವುದಷ್ಟೆ.

ಮೊನ್ನೆ ಅಮ್ಮನ ಜೊತೆ ನನ್ನ ಹೈದರಾಬಾದಿನ ಅಡುಗೆ ಅರಮನೆಯ ಬಗ್ಗೆ ಹರಟುತ್ತಾ ಕುಳಿತಾಗ, ಹೇಳುತಿದ್ದಳು. ಈಗಿನ ಕಾಲದಲ್ಲಿ ಗಂಡಸರು ಚೆನ್ನಾಗಿ ಅಡುಗೆ ಮಾಡಬಹುದು ಬಿಡು, ಹೆಂಗಸರ ಅವಶ್ಯಕತೆಯೇ ಇಲ್ಲ ಅಡುಗೆ ಮನೆಗೆ. ಎಲ್ಲವೂ ಸಿದ್ದವಾಗಿರುತ್ತದೆ, ಅದರ ಮೇಲಿನ ಕವರಿನಲ್ಲಿ ಬರೆದು ಇರುತ್ತಾರೆ, ಇನ್ನೇನು ಬೇಕು, ಅದನ್ನು ತಂದು ಹೆಂಗಸು ಮಾಡಿದರೂ ಅಷ್ಟೇ, ಗಂಡಸು ಮಾಡಿದರೂ ಅಷ್ಟೇ. ನನಗೂ ಹಾಗೆ ಅನ್ಸುತ್ತೆ, ಎಲ್ಲರ ಮನೆಯಲ್ಲಿಯೂ ಒಂದೇ ಬಗೆಯ ರುಚಿ ಇರುತ್ತದೆ. ಅಲ್ಲಿ ಹೇಗೆ ಮಾಡಿದ್ದಿರಿ ಅನ್ನುವ ಹಾಗೆಯೇ ಇಲ್ಲ ಯಾವ ಪುಡಿ ಹಾಕಿದ್ದೀರಿ ಎಂದಷ್ಟೇ ಕೇಳಬೇಕು. ಆದರೇ, ನಾನು ಭಾವಿಸಿದಂತೆ, ನಮ್ಮನೆ ಯಾವುದೇ ತಿಂಡಿ ತಿನಿಸುಗಳು, ಕೆಲವೊಮ್ಮೆ ಉಪ್ಪಿನಕಾಯಿ ಮಾಡಿದಾಗಲೂ ಬಂದವರೂ ಅಮ್ಮನನ್ನು ಕೇಳುತ್ತಿದ್ದರು, ಹೇಗೆ ಮಾಡಿದ್ರಿ? ಏನೇನು ಹಾಕಬೇಕು? ಹೀಗೆ ಎಲ್ಲವನ್ನು ಕೇಳಿ ತಿಳಿದುಕೊಂಡು ಹೋಗುತ್ತಿದ್ದಾಗ ನನಗೆ ಅಮ್ಮನ ಬಗ್ಗೆ ಬಹಳ ಹೆಮ್ಮೆಯೆನಿಸುತಿತ್ತು. ಇಂದಿಗೂ ಅಷ್ಟೇ ನಾನು ಊರಿಗೆ ಬರುತ್ತೇನೆಂದರೇ ಸಾಕು ನನಗೆ ಇಷ್ಟವಿರುವ ಅಡುಗೆ ಸಿದ್ದವಿರುತ್ತದೆ, ಮತ್ತು ಅಮ್ಮನ ಮತ್ತು ನನ್ನಜ್ಜಿಯ ಕೈರುಚಿಗೆ ಸಮಾನದ ರುಚಿಯನ್ನು ಈ ಪಟ್ಟಣಗಳಲ್ಲಿ ಕಂಡಿಲ್ಲ. ನಾನು ಅಲ್ಲಿಯವನು ಅಭಿವೃದ್ದಿಯನ್ನು ಬಯಸದೇ ಇರುವವನೆನಿಸಿದರೂ ಸರಿಯೇ, ಆದರೇ ಅಂಗಡಿಯಿಂದ ಎಲ್ಲವನ್ನು ಸಿದ್ದರೂಪದಲ್ಲಿ ಕೊಂಡು ತಂದು ಅಡುಗೆ ಮಾಡುವ ಹೆಂಗಸರನ್ನು ನಾನು ಒಪ್ಪುವುದಿಲ್ಲ. ಕಾರಣ ಸಾವಿರ ಕೊಡಲಿ, ಎಲ್ಲವೂ ಸಿದ್ದವಿರುವಾಗ ನಾವೇಕೆ ತೊಂದರೆ ತೆಗೆದುಕೊಳ್ಳಬೇಕು, ನಿಮಗೆ ನಾವು ಸದಾ ಕೆಲಸ ಮಾಡುತ್ತಿರಬೇಕೆಂದು ದೂರಿದರೂ ಸರಿಯೇ, ನಾನು ಇದನ್ನೆಲ್ಲ ಒಪ್ಪುವುದಿಲ್ಲ. ನಮ್ಮ ಹಿರಿಯರ ಅಡುಗೆ ರುಚಿಯ ಪ್ರಖ್ಯಾತಿ ಇವರಿಗೆಲ್ಲಾ ತಿಳಿದಿಲ್ಲವೆಂದಲ್ಲ ಗೊತ್ತಿದೆ ಆದರೂ ಅದನ್ನು ಒಪ್ಪಲು ಸಿದ್ದವಿಲ್ಲ.

ಅಮ್ಮ ನಾನು ಊರಿನಲ್ಲಿದ್ದಾಗ ಆಗ್ಗಾಗ್ಗೆ ಹೇಳುತ್ತಿದ್ದಳು, ಚಿಕ್ಕ ಹುಡುಗಿಯರು ಹೇಗೆ ಅಡುಗೆ ಮಾಡುತ್ತಾರೆ ಮತ್ತು ಅವರು ಅಡುಗೆ ಮನೆಯನ್ನು ಎಷ್ಟು ಚೊಕ್ಕವಾಗಿಡುತ್ತಾರೆಂದು. ಇಂದಿಗೂ ಅಮ್ಮನನ್ನು ಅಪ್ಪ ಬೈಯುತ್ತಲೇ ಇರುತ್ತಾರೆ. ದಿನಕ್ಕೆರಡು ಬಾರಿ ಮನೆ ಸಾರಿಸುವುದು, ತೊಳೆಯುವುದು, ಪಾತ್ರೆಗಳು ಚೂರು ಮಸಿಯಾಗದ ರೀತಿ ಇಡುವುದು ಇದರಲ್ಲಿಯೇ ನಿನ್ನ ಜೀವನ ಕಳೆದು ಹೋಯಿತು. ಅದರಿಂದ ಏನು ಬರುತ್ತೇ ಅಂತಾ ನಾನು ಇದನ್ನು ಸುತರಾಂ ಒಪ್ಪುವುದಿಲ್ಲ. ನಾನು ಹೊರಗಡೆ ಎಲ್ಲೆಲ್ಲಿಯೂ ಸುತ್ತಾಡಿ ಮನೆಗೆ ಬಂದ ತಕ್ಷಣ ನಾನು ಯಾವುದೋ ಪುಣ್ಯಸ್ಥಳಕ್ಕೆ ಬಂದೆ ಎನಿಸುತ್ತದೆ, ಅದಕ್ಕೆ ಕಾರಣ ಅಮ್ಮ ಮನೆಯನ್ನು ಆ ಮಟ್ಟಕ್ಕೆ ಚೊಕ್ಕವಾಗಿಟ್ಟಿರುವುದು. ಇದನ್ನು ಮನೆಕೆಲಸದಾಕೆಯೋ ಅಥವಾ ಇನ್ನಾರೋ ಮಾಡಿದಾಗ ಅಲ್ಲಿ ಕೆಲಸ ಆಗಿರುತ್ತದೆಯೋ ಹೊರತು ಅದೊಂದು ಕಸೂತಿಯಾಗಿರುವುದಿಲ್ಲವೆಂಬುದು ನನ್ನ ಅನಿಸಿಕೆ. ಆದರೇ ನನ್ನ ಎಷ್ಟೋ ಗೆಳತಿಯರಿಗೆ ಕಾಫಿ, ಟೀ ಕೂಡ ಮಾಡಲು ಬರುತ್ತಿರಲಿಲ್ಲ. ಹಕ್ಕು ಸ್ವಾತಂತ್ರ್ಯ ಅಂತಾ ಎಲ್ಲ ಬೊಬ್ಬೆ ಹೊಡೆಯುವ ಮಹಾಮಣಿಯರು, ನಾವು ಹೆಣ್ಣಿಗೆ ಕೊಟ್ಟಿರುವ ಗೌರವವನ್ನು ಮರೆಯುವುದು ಸರಿ ಕಾಣುವುದಿಲ್ಲ. ನಾನು ಹೆಣ್ಣು ಅಡುಗೆ ಮನೆಯಲ್ಲಿಯೇ ಕೂರಬೇಕೆನ್ನುವುದಿಲ್ಲ, ಆದರೇ, ಅಡುಗೆ ಮನೆಯ ಬಗ್ಗೆ ಒಲವಿರಬೇಕು ಅದನ್ನು ಮರೆಯಬಾರದು ಮತ್ತು ಅಡುಗೆಯ ಬಗ್ಗೆ ಕೀಳರಿಮೆ ಒಲಿತಲ್ಲ. ನಾನು ಅಮ್ಮನಿಗೆ ನನ್ನ ಸ್ನೇಹಿತ ಒಬ್ಬನನ್ನು ಪರಿಚಯಿಸಿ ಇವನು ಫುಡ್ ಸೈನ್ಸ್ ಎಂದಾಗ ಅವಳಿಗೆ ಅರ್ಥವಾಗಿರಲಿಲ್ಲ. ಅವನು ಹೋದ ನಂತರ ಅವನು ಅಡುಗೆಯ ಬಗ್ಗೆ ಆಹಾರದ ಬಗ್ಗೆ ಕಲಿಯುತ್ತಾನೆ ಮತ್ತು ಒಳ್ಳೊಳ್ಳೆ ಅಡುಗೆ ಮಾಡುತ್ತಾನೆಂದಾಗ ಗಾಬರಿಯಾದಳು. ಅಯ್ಯೊ ಅಡುಗೆ ಮಾಡುವುದನ್ನು ಕಲಿಯಲು ಕಾಲೇಜಿಗೆ ಹೋಗಬೇಕಾ? ಮನೆ ಚೊಕ್ಕವಾಗಿಡುವುದು ತಮ್ಮ ಬೆಳವಣಿಗೆಯಿಂದ ಬರಬೇಕೆಂದು ಹೇಳಿದಳು. ನನಗೂ ಅದು ಸರಿಯೆನಿಸಿತು, ಇಂದು ನಾವು ಕಾಣುವ ಹೋಟೆಲ್ ಮ್ಯಾನೇಜ್ ಮೆಂಟ್, ಅಷ್ಟೇ, ಒಮ್ಮೆ ಅಮ್ಮನ ಜೊತೆ ಹೋಟೆಲ್ ಗೆ ಹೋಗಿದ್ದೆ, ಅವಳಿಗೆ ಊಟಬಡಿಸಲು, ಎಂ.ಬಿ.ಎ. ಮಾಡಿರುತ್ತಾರೆ, ಮತ್ತು ಅದಕ್ಕೆ ೩-೪ ಲಕ್ಷ ಖರ್ಚುಮಾಡಿರುತ್ತಾರೆಂದಾಗ ಆದ ಆಶ್ಚರ್ಯ ನೋಡಿದರೆ ಅಮ್ಮ ಈ ಕಾಲೇಜಿಗೆ ಹೋಗಿ ಓದುತ್ತಿರುವುದೇನು ಎನ್ನುವಂತೆ ನನ್ನನ್ನು ನೊಡಿದ್ದಳು. ನನಗೂ ಅಮ್ಮನ ಮಾತಿನಲ್ಲಿ ಬಹಳ ಸತ್ಯವಿದೆಯೆನಿಸುತ್ತದೆ, ನಮ್ಮ ಮನೆಯ ಅಡುಗೆ ಮನೆಗೆ ಒಮ್ಮೆಯೂ ತಿರುಗಿ ನೋಡದಿದ್ದರೂ, ಹೋಂ ಸೈನ್ಸ್ ತೆಗೆದುಕೊಂಡು ಅಭ್ಯಸಿಸುತ್ತೇವೆ. ನನ್ನೂರಿನಲ್ಲಂತೂ ಹಿಂದೆ, ೮-೧೦ ವರ್ಷದ ಹುಡುಗಿಯರು ಅಡುಗೆ ಮಾಡುತಿದ್ದರು, ಆಗೆಲ್ಲಾ, ಅಮ್ಮನ ಜೊತೆ ಹರಟಲು ಬರುತ್ತಿದ್ದ ಕೆಲವು ಹೆಂಗಸರಿಗೆ ಹೇಳುತಿದ್ದಳು, ಪರ್ವಾಗಿಲ್ಲ ಮಗಳು ಕೈಯ್ಯಿಗೆ ಬಂದಳು ಅಂತಾ. ನನ್ನ ಕಡೆಗೂ ಒಮ್ಮೆ ನೋಡುತಿದ್ದಳು, ನೋಡು ಮಗನೇ, ನೀನು ಹುಡುಗಿಯಾಗಿದಿದ್ದರೇ, ನಾನು ಆರಾಮಾಗಿ ಇರಬಹುದಿತ್ತು ಅಂತಾ. ಹೆಣ್ಣು ಹೆತ್ತವರು ಪಡುವ ಕಷ್ಟ ಗೊತ್ತಾದದ್ದು ನನ್ನ ಎಂ.ಎಸ್ಸಿಯಲ್ಲಿ ನನ್ನ ಗೆಳತಿಯರ ಮನೆಗೆ ಹೋದಾಗ, ಅವರ ಅಮ್ಮಂದಿರು ಎದ್ದು ಅಡುಗೆ ಮಾಡಿ, ಬಾಕ್ಸ್ ತುಂಬಿಸಿ, ಕಳುಹಿಸುತಿದ್ದರು. ಅವರು ತಿಂದುಂಡು ನನ್ನ ರೀತಿಯಲ್ಲಿಯೇ ಬೆಳೆದಿದ್ದರು. ಈ ವಿಷಯದಲ್ಲಿಯೂ ಅಷ್ಟೇ ೨೦-೨೨ ವರ್ಷ ಓದಿ, ಮದುವೆಯಾದ ನಂತರ ಆ ಓದಿಗೂ ತಮಗೂ ಸಂಬಂದವೇ ಇಲ್ಲವೆನ್ನುವಂತೆ ಗಂಡನ ಮೇಲೆ ಎಲ್ಲಾ ಜವಬ್ದಾರಿ ಹಾಕಿ ಎಕ್ತಾ ಕಪೂರ್ ಅಭಿಮಾನಿಯಾಗಿ ಟಿ.ವಿ.ಮುಂದೆ ಕೂರುವುದಾದರೂ ಏಕೆ ಅಂತಾ?


ಈ ರೀತಿಯ ಬದಲಾವಣೆಗಳು ಆಗ್ಗಾಗ್ಗೆ ಆಗುತ್ತಲೇ ಇರುತ್ತವೆ, ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಆಚರಿಸುತಿದ್ದ ಹೊಸವರ್ಷಕ್ಕೂ ಇಂದಿಗೂ ಇಷ್ಟೊಂದು ವ್ಯತ್ಯಾಸವಾಗಿದ್ದನ್ನು ಕಂಡು ನನಗನಿಸುವುದಿಷ್ಟೆ, ಕೇವಲ ಹದಿನೈದು ವರ್ಷಗಳಲ್ಲಿ, ನಮ್ಮ ಆಚರಣೆಗಳು ಇಷ್ಟೇಲಾ ಬದಲಾದರೂ ನಮ್ಮ ಜಾತೀಯತೆ, ಮತೀಯತೆ, ಯಾಕೆ ಶತಮಾನದಿಂದಲೂ ಬದಲಾಗಲಿಲ್ಲ. ಹಳ್ಳಿಯಲ್ಲಿ ನಡೆಯುತ್ತಿದ್ದ ಹಲವಾರು ಹಬ್ಬಗಳು, ಆಚರಣೆಗಳು ಬದಲಾಗುತ್ತ ಬಂದವು. ಕೆಲವಂತು ನಿಂತೆ ಹೋದವು. ಆದರೇ, ಹೊಸವರ್ಷಾಚರಣೆ, ವ್ಯಾಲೆಂಟೈನ್ಸ್ ದಿನ, ಸ್ನೇಹಿತರ ದಿನ, ಹೀಗೆ ಹತ್ತು ಹಲವು ದಿನಗಳು ಆಚರಣೆಗೆ ಬಂದರೂ ನಮ್ಮ ಹಲವಾರು ಹಬ್ಬ ಹರಿ ದಿನಗಳು ಕಡಿಮೆಯಾಗುತ್ತ ಮರೆಯಾದವು. ಅವುಗಳೆಲ್ಲವುದರಲ್ಲಿಯೂ ಯಾವುದೋ ಒಂದು ಬಗೆಯ ಆಧುನಿಕರಣ ಹೆಚ್ಚತೊಡಗಿತು. ನಮ್ಮ ಜಾತ್ರೆಗಳಲ್ಲಿ ಮೊದಲಿದ್ದ ಚಿಕ್ಕ ಪುಟ್ಟ ಕುದುರೆಗಳು ಮರೆಯಾಗಿ ದೊಡ್ಡ ದೊಡ್ಡ ಜಾಯಿಂಟ್ ವ್ಹೀಲ್ ಗಳು, ಕೊಲೊಂಬಸ್, ಹೀಗೆ ಎಲ್ಲೆಂದರಲ್ಲಿ ಆಧಿನಿಕರಣದ ಹೊದಿಕೆ ಹೆಚ್ಚಾಯಿತು. ನಮ್ಮ ವರ್ಷಾಚರಣೆಯಲ್ಲಿಯೂ ಅಷ್ಟೆ, ಪೂಜೆ ಪುರಸ್ಕಾರಗಳಿಂದ ನಡೆಯುತಿದ್ದ ಕಾರ್ಯಕ್ರಮಗಳು, ನಂತರ ಆರ್ಕೇಶ್ಟ್ರಾಗಳೊಂದಿಗೆ ನಡೆಯುತಿದ್ದವು. ಈಗ ಇವುಗಳಲ್ಲೆಲ್ಲಾ, ಡಿಸ್ಕೊ, ರೈನಿ ಡ್ಯಾನ್ಸ್, ಹೀಗೆ ಆಚರಣೆ ಯಾವ ಮಟ್ಟಕ್ಕಿಳಿದಿದೆಯೆಂದರೇ, ಅಬ್ಬಬ್ಬಾ ಎನಿಸುತ್ತದೆ. ಇವೆಲ್ಲಾ ವ್ಯಶ್ಯವಾತಿಕಾ ಗೃಹಗಳಾಗಿವೆ. ದೊಡ್ಡ ಮೈದಾನದಲ್ಲಿ ಕೂಗಾಡಿ ಕುಣೀದಾಡಿ, ಹೆಣ್ಣು ಗಂಡು ತಬ್ಬಾಡಿ ಆಚರಿಸಬೇಕು ಅದಕ್ಕೆ ಪೋಲಿಸರು ಕಾವಲು ಬೇಕು. ಕೆಲವಂತೂ ಜೋಡಿಯಲ್ಲಿಯೇ ಬರಬೇಕು ಅದು ಅವರು ಇವರನ್ನು ಮಧುಚಂದ್ರಕ್ಕೆ ಕರೆದೊಯ್ಯುತಿದ್ದಾರೆಂಬ ಗುಮಾನಿ ಹುಟ್ಟಿಸುತದೆ.

ಇಷ್ಟೇಲ್ಲಾ ನನ್ನ ಸುತ್ತಾ ಮುತ್ತಾ ನಡೆಯುತ್ತಿರುವಾಗ ನನ್ನನ್ನು ಹೊಸವರ್ಷದ ಯೋಜನೆಯೆಂದರೇ, ಕಂಗಾಲಾಗುತ್ತೀನಿ. ಆದರೂ, ವರ್ಷಕ್ಕೊಮ್ಮೆ ನಮ್ಮ ಹಿಂದಿನ ವರ್ಷದ ಆಗು ಹೋಗುಗಳನ್ನು ನೆನೆದು ಮುಂದಿನ ವರ್ಷದ ಯೋಜನೆಗಳಿಗೆ ರೂಪುರೇಷೆ ಕೊಡುವ ಈ ದಿವಸವನ್ನು ನಾನು ಬಹಳ ಆನಂದದಿಂದ ಸ್ವೀಕರಿಸುತ್ತೆನೆ. ಮುಂದಿನ ವರ್ಷದ ಬಗ್ಗೆ ಹೆಚ್ಚು ಗಮನಕೊಡುವುದಿಲ್ಲ. ಮತ್ತು ಅವಿಷ್ಕಾರಗಳು ಯೋಜನೆಗಳು ಇಂಥವುದರಲ್ಲಿ ನನಗೆ ಅಷ್ಟೇನು ನಂಬಿಕೆಯೂ ಇಲ್ಲ. ಇಂಥಹ ೨೬ ವರ್ಷಗಳನ್ನು ಹಿಮ್ಮೆಟ್ಟಿದ್ದಿನಿ. ನಾನು ಆ ದಿನದಂದು ಅಂದುಕೊಂಡದ್ದನ್ನು ಎಂದು ಸಾಧಿಸಿಲ್ಲ, ಸಾಧಿಸುವುದಿರಲಿ, ಅದನ್ನು ನೆನಪಿಸಿಕೊಳ್ಳುವುದು ಇಲ್ಲ. ಇಂದಿನವರೆಗೂ ೮ಗಂಟೆಗೆ ಏಳುತ್ತಿದ್ದವನು ದಿಡಿರ್ ನೇ ೫ ಗಂಟೆಗೆ ಏಳಬೇಕೆಂದು ನಿರ್ದರಿಸುವುದು, ಸಿಗರೇಟ್ ಬಿಡಬೇಕು, ಕುಡಿಯುವುದನ್ನು ಬಿಡಬೇಕು, ಇವೆಲ್ಲಾ ಬರಿ ಮಾತುಗಳಾಗೆ ಉಳಿಯುವುದರಿಂದ ಅದಕ್ಕೆಲ್ಲ ನನ್ನಲ್ಲಿ ಮಹತ್ವವಿಲ್ಲ. ಆದರೇ, ಕಳೆದ ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲಾ ಒಗ್ಗೂಡಿಸಿ ಅದಕ್ಕೆ ನನ್ನಿಂದ ಆದ ತಪ್ಪುಗಳನ್ನು ತಿದ್ದಿ ನಡೆಯುವುದನ್ನು ಕಳೆದ ನಾಲ್ಕಾರು ವರ್ಷಗಳಿಂದ ಮಾಡುತಿದ್ದೇನೆ. ಅದೇ ಸಮಯದಲ್ಲಿ ನನಗೆ ನೆರವಾದ ಮತ್ತು ನನಗೆ ಬೇಸರ ತರಿಸಿದ ಎಲ್ಲರನ್ನೂ ನೆನೆದು ಮುನ್ನೆಡೆಯುತಿದ್ದೇನೆ.

ಕಳೆದ ಬಾರಿ ಅಂದರೇ, ೨೦೦೭ ರ ಡಿಸೇಂಬರ್ ೩೧ ರ ಮಧ್ಯರಾತ್ರಿಯಂದು, ಹೊಸವರ್ಷಚಾರಣೆಯ ನೆಪದಲ್ಲಿ ಕುಡಿದು ಮಲಗಿ ಮಾರನೇ ಬೆಳಗ್ಗೆ ಮಾಮೂಲಿಯಾಗಿ ಆರಂಭವಾದ್ದದ್ದು ನಿನ್ನೆಯೋ ಮೊನ್ನೆಯೋ ಎಂಬಂತಿದೆ. ನನ್ನ ಬದುಕಿನ ೩೬೫ ದಿನಗಳನ್ನ ಇಷ್ಟು ಸರಾಗವಾಗಿ ನೀರು ಕುಡಿದು ನೀಗಿದೆನೆಂದರೆ ನನಗೆ ಅಯ್ಯೊ ಎನಿಸುತ್ತದೆ. ಪ್ರತಿ ವರ್ಷ ಹುಟ್ಟಿದ ದಿನಾಂಕ ನೆನೆದಾಗಲೂ ಅಷ್ಟೆ ನನಗೆ ಬಹಳ ಭಯವಾಗುತ್ತದೆ. ಆಯಸ್ಸಿನ ಕೊನೆದಿನಗಳು ಸಮೀಪಿಸುತ್ತಿವೆನಿಸುತ್ತದೆ. ಆದರೂ ಈ ವರ್ಷದಲ್ಲಿ ಏರು ಪೇರುಗಳಿದ್ದರೂ ನನಗೆ ಏರಿಕೆ ಹೆಚ್ಚೆನಿಸುತ್ತದೆ. ಬರವಣಿಗೆಯ ಮಟ್ಟಿಗೆ ನಾನು ಸ್ವಲ್ಪ ಯೋಗ್ಯನೆನಿಸುವಂತೆ ಬರೆಯುತಿದ್ದೇನೆಂಬ ಆಶಯ ಮೂಡಿದೆ. ಈ ವರ್ಷದಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದೆನೆಂಬ ನೆಮ್ಮದಿಯಿದ್ದರೂ ಅಂದುಕೊಂಡಷ್ಟನ್ನು ಓದಲಿಲ್ಲವೆಂಅಬ್ ಕೊರಗು ಇದೆ. ಹೈದರಾಬಾದಿಗೆ ಬಂದು ನೆಲೆಸಿ ನನ್ನ ಜೀವನದ ತಿರುವುಗಳನ್ನು ನೋಡುತ್ತಿದ್ದೆನೆನಿಸುತ್ತಿದೆ. ವೈಚಾರಿಕತೆಯ ನಿಟ್ಟಿನಲ್ಲಿ ಹೇಳುವುದಾದರೇ, ನನಗೆ ಅದರಲ್ಲಿಯೂ ಆರ್ಕುಟ್ ನಿಂದ ಮಿತ್ರರಾದ ಬಹಳ ಗೆಳೆಯ ಗೆಳತಿಯರಿಗೆ ನಾನು ಋಣಿ. ಅವರಿಂದ ನಾನು ಕಲಿತಿರುವುದು ಬಹಳವೆಂದರೂ ಸರಿ. ಉದ್ಯೋಗದ ದಾರಿಯಲ್ಲಿ ಕೆಲಸ ಬದಲಾದದ್ದು, ಇವೆಲ್ಲಾ ಸಾಮಾನ್ಯಾವಗಿರುವುದರಿಂದ ಅಂಥಹ ಯಾವುದು ಗಮನಾರ್ಹವಲ್ಲ. ಸಾಮಾಜಿಕ ನೆಲೆಕಟ್ಟಿನಲ್ಲಿ ನಡೆದ ಘಟನೆಗಳು ಬಹಳ ನೋವನ್ನುಂಟು ಮಾಡಿದೆ. ದೇಶದ ಹಣದುಬ್ಬರ, ರಸಗೊಬ್ಬರಕ್ಕಾಗಿ ನಡೆದ ಗೋಲಿಬಾರ್, ವೈಯಕ್ತಿಕ ರಾಜಕೀಯ, ಸಾಮಾಜಿಕ ಕಾಳಜಿಯಿಲ್ಲದ, ನಾಲ್ಕನೇ ದರ್ಜೆ ರಾಜಕೀಯ, ಇವೆಲ್ಲ ಬಹಳ ಸೋಜಿಗವೆನಿಸಿದೆ. ಈ ಕೊಳೆಯು ನಾರುತ್ತಿರುವ ಸಮಾಜದಲ್ಲು ನನ್ನ ಕೆಲವು ಮಿತ್ರರ ಸಾಮಾಜಿಕ ಹೋರಾಟ, ಜೀವನ ಬದಲಾವಣೆ ಇವೆಲ್ಲವೂ ನನ್ನೊಳಗೆ ನನ್ನ ದೇಶ ಮುಂದೊಮ್ಮೆ ಬಲಿಷ್ಠ ರಾಷ್ಟ್ರವಾಗಿ ಮೆರೆಯುತ್ತದೆಂಬ ವಿಶ್ವಾಸ ಇಮ್ಮಡಿಯಾಗಿದೆ. ಅಂಥಹ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೊಡನೆ ನೀವು ಇರುತ್ತೀರೆಂಬ ಆಶ್ವಾಸನೆ ನನಗಿದೆ. ಒಂದು ವರ್ಷದಲ್ಲಿ ನನ್ನೊಡನಿದ್ದ ನನ್ನ ನಾಡಿಗಳಾದ ನನ್ನ ಮಿತ್ರರಿಗೆ ನನ್ನ ಧನ್ಯವಾದಗಳು.

ಅದೇ ಸಮಯದಲ್ಲಿ ನನ್ನ ಮನ ನೋಯಿಸಿದ ಕೆಲವು ಯುನಿವರ್ಸಿಟಿ ಪ್ರೋಫೆಸರ್ ಗಳು, ಕೊಳೆತ ವ್ಯವಸ್ಥೆ, ಸ್ವಾರ್ಥ ಬರವಣಿಗೆಗಾರರು, ಮತೀಯ ಗಲಭೆ ಮಾಡಿದ ಪಾಪಿಗಳು ಆದಷ್ಟು ಬೇಗ ಸರ್ವನಾಶವಾಗಲಿ ಎಂದು ಬಯಸುತ್ತೇನೆ.



ಹೊಸ ವರ್ಷದ ಶುಭಾಷಯಗಳು
ನಿಮ್ಮವ
ಹರೀಶ್ ಬಾನುಗೊಂದಿ

30 ಡಿಸೆಂಬರ್ 2008

ನನ್ನಂತರಾಳದ ಮಾತು




ನನ್ನಂತರಾಳದ ಮಾತು

ನಾನರಿಯ(ದ) ನನ್ನಂತಾರಳ ಹೊತ್ತಿಗೆಯೂ, ನಾನು ನನ್ನ ಸ್ನಾತಕೊತ್ತರ ಅವಧಿಯಲ್ಲಿ ಜಾಣ ಎಂಬ ವಾರಪತ್ರಿಕೆಗೆ ಕೆಲಸ ಮಾಡಿ ಅಂಕಣವನ್ನು ಬರೆಯುತಿದ್ದೆ. ಅಂಕಣದ ಹೆಸರು, ಬಾಯ್ ಫ್ರೆಂಡ್ ಎಂತಿದ್ದು, ನಾನು ಕೆಲವೇ ತಿಂಗಳುಗಳು ಮಾತ್ರ ಕೆಲಸ ಮಾಡಿದ್ದು ನನ್ನ ದುರ್ಭಾಗ್ಯ. ಅದು ಕಾರಣಾಂತರಗಳಿಂದ ಮುಚ್ಚಿಹೋಯಿತು. ಆದರೂ ಅಂದು ಬರೆದ ಸಣ್ಣ ಕಥೆಗಳು ಮತ್ತು ಕೆಲವು ಅಂಕಣಗಳು ನನ್ನ ಸ್ನೇಹಿತರಿಗೆ ಹಿಡಿಸಿ ಅವರು ಅದನ್ನು ಪುಸ್ತಕ ರೂಪದಲ್ಲಿ ತರುವಂತೆ ಒತ್ತಾಯಿಸಿದರು. ನನ್ನಯ ಪುಸ್ತಕದಲ್ಲಿ ಹೆಚ್ಚು ಹುಡುಗರ ಮಾನಸಿಕ ವೇದನೆಗೆ, ಅಂತರಾಳದಲ್ಲಿ ಅಡಗಿರುವ ತಳಮಳಗಳಿಗೆ ಒತ್ತು ನೀಡಿದ್ದು, ಹೆಣ್ಣಿನ ಬಗ್ಗೆ ಕೆಲವು ನಿಷ್ಟುರ ಸತ್ಯಗಳನ್ನು ಹೇಳಿದ್ದರೂ ಅದೆಲ್ಲಾ ಒಪ್ಪಲೇಬೇಕಾದ ವಿಷಯವೆಂದು ನಾನು ಪ್ರತಿಪಾದಿಸುತ್ತಿಲ್ಲ. ಇಲ್ಲಿ ಬರುವ ಎಲ್ಲಾ ಸನ್ನಿವೇಶಗಳು ಕಾಲ್ಪನಿಕತೆಯಿಂದ ಕೂಡಿರುತ್ತವೆ. ಈ ಪುಸ್ತಕವನ್ನು ಹೊರತರಲು ಪ್ರೋತ್ಸಾಹಿಸಿದ ನನ್ನೆಲ್ಲಾ ಸ್ನೇಹಿತರಿಗೂ ನನ್ನ ಧನ್ಯವಾದಗಳು.
ಈ ಪುಸ್ತಕವೂ ಯುವ ಮನಸ್ಸಿಗೆ ಹಿಡಿದಿರುವ ಕನ್ನಡಿಯೆಂದರೆ ತಪ್ಪಾಗುವುದಿಲ್ಲವೆಂಬುದು ನನ್ನ ಅನಿಸಿಕೆ, ಅದನ್ನು ತೀರ್ಮಾನಿಸಬೇಕಾದವರು ನೀವಾಗಿರುವುದರಿಂದ ನಿಮ್ಮ ಸಲಹೆಗಳಿಗೆ ನಾನು ಕಾಯುತ್ತಿರುತ್ತೇನೆ. ನನ್ನ ಮುಂದಿನ ಪುಸ್ತಕಗಳು ಪರಿಸರಕ್ಕೆ ಸಂಭಂಧಪಟ್ಟ ವಿಷಯಗಳನ್ನೊಳಗೊಂಡಿರುತ್ತವೆ. ಆದ್ದರಿಂದ ಇಲ್ಲಿರುವ ಎಷ್ಟೋ ಪುಟಗಳು ನನ್ನ ವಿಧ್ಯಾರ್ಥಿದೆಸೆಯಲ್ಲಿ ಬರೆದವುಗಳು, ನನ್ನ ಯೋಚನೆಗಳು ಆಗ ಇದ್ದವುಗಳಿಗಿಂತ ಈಗ ಭಿನ್ನವಗಿವೆ ಆದ್ದರಿಂದ ನನ್ನ ಈಗಿನ ಮಾತುಗಳಿಗೂ ನಡುವಳಿಕೆಗೂ ಇಲ್ಲಿ ಬರುವ ಕಥೆಗಳಿಗೂ ನೇರ ಸಂಭಂಧವಿರುವುದಿಲ್ಲ. ಇದು ನನ್ನ ಭಾಷೆಯ ಮೇಲಿರುವ ಹಿಡಿತವನ್ನರಿಯಲು ಮುದ್ರಿಸುತಿದ್ದೇನೆ. ಮುದ್ರಣೆಗೆ ಸಹಾಯ ಮಾಡಿದ ಮುದ್ರಕರಿಗೂ ನನ್ನ ವಂದನೆಗಳು.
ಹರಿಶ್ ಬಾನುಗೊಂದಿ
೧೬-೦೮-೦೮

ನೆನಪುಗಳ ಮಾತು ಮಧುರ
ನಾಳೆ ಎಂಬ ದೈತ್ಯನನ್ನ ನೆನೆದರೆ ನನ್ನ ಮೈ ರೋಮವೆಲ್ಲಾ ನಿಲ್ಲುತ್ತವೆ, ಹೌದು, ಈ ನಾಳೆ ಎಂಬುದೇ ಹೀಗೆ. ಅದು ಭಯಾನಕ, ಅದನ್ನ ಎದುರಿಸಲು ಅದೆಷ್ಟು ತಯರಾಗಬೇಕು. ಎಷ್ಟು ತಯರಾದರೂ ಕಡಿಮೇನೇ. ನಾಳೆ ಏನಾಗಬಹುದು, ನನಗೆ ಇಂದು ಸಿಕ್ಕಿರುವ ಮರ್ಯಾದೆ ಎಲ್ಲಿ ಕಳೆದು ಹೋಗುವುದೋ, ನನ್ನ ಅಧಿಪತಿಗೆ ಎಲ್ಲಿ ತೊಡಕು ಉಂಟಾಗಬಹುದೋ, ನಾಳೆ ಯಾರು ನನ್ನ ಜೊತೆ ಜಗಳ ಆಡಿ ಬಿಡುತ್ತಾರೋ, ಯಾರು ನನ್ನ ವಿರುದ್ದ ನನ್ನ ಹೆಸರಿಗೆ ಮಸಿ ಬಳಿಯುತ್ತಾರೋ, ನನ್ನ ಗೆಳತಿ ನನ್ನೆಡೆಗೆ ಒಲವನ್ನು ಕಡಿಮೆ ಮಾಡಿ ದೂರ ಹೋಗುತ್ತಾಳೋ, ಹೀಗೆ ಪ್ರಶ್ನೆಗಳ ಮಹಾಪೂರವೇ ಹರಿದು ಬರುತ್ತವೆ. ಆದರೇ ನಿನ್ನೆ ಎಂಬುದಿದೆಯೆಲ್ಲ ನೆಮ್ಮದಿ, ಆನಂದ ಆಶ್ಚರ್ಯದಿಂದ ತುಂಬಿರುತ್ತದೆ. ಆಹಾ! ಆದಿನ ಹೇಗಿತ್ತು ಅಲ್ವಾ? ನಿಜವಾಗಿಯೂ ಅದು ಹೇಗೆ ಕಳೆದು ಬಿಟ್ಟೆ. ಅದು ಹಾಗೆ ಆಗದೇ ಹೋಗಿದ್ದರೇ ನಾನು ಎಂಬುವನು ಇನ್ನೇನು ಆಗುತ್ತಿದ್ದೇನೋ? ಸದ್ಯಾ ದೇವರು ದೊಡ್ಡವನು ನನ್ನ ಕೈ ಬಿಡಲಿಲ್ಲ. ಎಲ್ಲಾ ಸುಗಮವಾಯಿತು ಹೀಗೆ ನೆಮ್ಮದಿಯ ನಿಟ್ಟುಸಿರು ಅದೆಷ್ಟು ವರ್ಷಗಳು ಕಳೆದರೂ ಜೇಂಕರಿಸುತ್ತಿರುತ್ತವೆ.
ಇಲ್ಲಿ ನೆನಪುಗಳು ಅದೆಷ್ಟು ಮಧುರವಾಗಿರುತ್ತವೆಂದರೇ ನಿಜಕ್ಕೂ ಬಣ್ಣಿಸಲು ಪದಗಳ ಕೊರತೆ ತೀವ್ರವೆನಿಸುತ್ತದೆ. ಆದರೆ ಪ್ರಚಲಿತ ಅನ್ನೋದು ಇದೆಯಲ್ಲ ಅಬ್ಬಾ ಅದು ಏನು? ಹೇಗೆಂದು ಹೇಳೋದೇ ಕಠಿಣ ಕಾರ್ಯ. ನಡೆಯುತ್ತಿರುವ ಸಂಭಾಷಣೆಯಿಂದ ಜೀವದ ಗೆಳತಿಯಾಗಿದ್ದವಳು ಒಡನೆಯೆ ದೂರಾಗುತ್ತಾಳೆಂಬ ಒಂದೇ ಒಂದು ಸುಳಿವು ನಮ್ಮ ಮನಸ್ಸಿಗೆ ದೊರೆಯುವುದಿಲ್ಲ. ಈ ದುಷ್ಟ ಮನಸ್ಸು ಅದರ ಬಗ್ಗೆ ಆ ಕ್ಷಣಕ್ಕೆ ಯೋಚಿಸೋದೆ ಇಲ್ಲ. ಆದರೇ ಅದು ನಿನ್ನೆಯಾದಗ ಅದರ ಬಗ್ಗೆ ಮರುಗುವ ಪರಿ ಎಂಥಹದೆಂದರೇ, ಗಂಗಾನದಿಯ ದಂಡೆಯಲ್ಲಿದ್ದವನನ್ನು ನಿದ್ದೆಯ ಮಬ್ಬಿನಲ್ಲಿ ಮರುಭೂಮಿಯ ಮಧ್ಯೆ ತಂದು ಎಸೆದರೇ ಪಡುವ ವ್ಯತೆಯನ್ನು ಮೀರಿಸುತ್ತದೆ. ಆ ಸಮಯಕ್ಕೆ ಕಾಲ ಎಂಬ ಮಾಯೆ ಮುಂದುವರೆದಿರುತ್ತದೆ. ನದಿ ನೀರು ಸಮುದ್ರ ಸೆರಿದ ಮೇಲೆ ಬೇರೆ ಮಾಡುಲಾಗುವುದಿಲ್ಲವೆಂದು ತಿಳಿದರೂ ಪರಿಕ್ಷೀಸುವ ಬಂಡ ಧೈರ್ಯ ಮಡುವಾಗುತ್ತದೆ. ಅದೇ ಈ ಯೌವ್ವನದ ದೌರ್ಬಲ್ಯವೆನಿಸಿದರೂ, ಅಲ್ಲಿ ನಂಬಿಕೆಯೆಂಬುದು ತನ್ನನ್ನು ಎಂಥಹ ಕಾರ್ಯಕ್ಕೂ ಮುನ್ನುಗ್ಗ್ಗುವಂತೆ ಮಾಡುತ್ತದೆ. ಯಾರೆನೂ ಮಾಡುತ್ತಾರೆ, ನನ್ನ ಗೆಳತಿ ನನ್ನನ್ನು ಬಿಟ್ಟು ದೂರಹೋಗುವಾ ಮಾತೇ? ಅದು ಈ ಭೂಮಿ ಮುಳುಗಿದರೂ ಆಗದೆಂಬ ಹುಂಬ ಉಢಾಫೆತನ, ಅವಳ ಶೀಲದವರೆಗೂ ಮಾತನಾಡಿಸಿಬಿಡುತ್ತದೆ.ಹಾಗೆಂದುಕೊಂಡೇ ಅವನಿಗೆ ತಿಳಿದೆಯೇ ಅವಳ ಶಿಲದ ಬಗ್ಗೆ ಮಾತನಾಡಿಬಿದುತ್ತಾನೆ. ನಾನು ಕಾಣದವಳ ನೀನು ಸಾಕು ಸುಮ್ಮನಿರು ಎಂಬ ಒಂದು ಮಾತು ಅವಳು ಅವನ ಮೇಲಿರಿಸಿದ್ದ ಸಂಪೂರ್ಣ ಭಾವನೆಯನ್ನೆ ಅಲ್ಲೊಲಕಲ್ಲೊಲವೆನಿಸುತ್ತದೆ. ಹಾಲು ಜೇನಿನಂತಿದ್ದ ಆ ಸಂಭಂಧ ನೋಡು ನೋಡುತ್ತಲೇ ಮುರಿದು ಬೀಳುತ್ತದೆ. ಹೀಗಾಗಬಹುದೆಂಬ ಊಹೆಯು ಇರುವುದಿಲ್ಲ. ಅದರಂತೆ ಯೌವ್ವನದಲ್ಲಿರುವ ಬಹುತೇಕ ಯುವಕ ಯುವತಿಯರು ಮಾಡುವುದು ಇದನ್ನೆ, ಮನ್ನಸ್ಸಿಗೆ ಬಂದದ್ದೆಲ್ಲವನ್ನು ಮಾಡಬೇಕು, ಯಾರಿಗೂ ತಲೆಬಾಗಬಾರದು. ನಾನು ದಿಗ್ವಿಜಯನಾಗಬೇಕು ಅಥವಾ ತಾನು ಬಹಳ ನೇರ ನಡೆಯವನೆಂದು ತೋರಬೇಕು ಹೀಗೆ ಹತ್ತು ಹಲವು ವಿಷಯಗಳು ಸಾಲು ಸಾಲಾಗಿ ಎದ್ದು ಕುಣಿದು ಅವರು ತೋಡಿದ ಭಾವಿಗೆ ಅವರನ್ನೆ ದೂಡಿ ಮುಳುಗಿಸುತ್ತದೆ. ಅವುಗಳಲ್ಲಿ ದಡ ತಲುಪುವುದು ತೀರಾ ಕಡಿಮೆ, ತಲುಪಿದರೂ ಆ ವೇಳೆಗೆ ನಾವು ಅದರ ಖುಷಿಯನ್ನನುಭವಿಸುವ ಶಕ್ತಿಯನ್ನು ಕಳೆದುಕೊಂಡಿರತ್ತೇವೆ. ಆತುರದಲ್ಲಿ ತೆಗೆದು ಕೊಂಡ ನಿರ್ಧಾರದಿಂದ ಮುಂದೇಸಾಗುವ ತನಕ ನಮ್ಮದು ಕವಲುದಾರಿಯ ಪಯಣ, ನಾವು ಪಯಣಿಸುತ್ತಿರುವುದು ತಪ್ಪುದಾರಿಯಲ್ಲೆಂಬ ಸತ್ಯ ದಾರಿ ತಪ್ಪಿದ ಮೇಲೆ ಗೊತ್ತಾಗುತ್ತದೆ. ಆ ಸಮಯದಲ್ಲಿ ನಾಳೆಯೆಂಬ ದೈತ್ಯ ನಮ್ಮೆದುರು ಅವಿತು ಕುಳಿತು ಕಾಯತೊಡಗುತ್ತಾನೆ.

***



ಪ್ರೀತಿಯ ತೀವ್ರತೆಯಲ್ಲಿದೆ?
ಕೆಲವೊಮ್ಮೆ ಬದುಕಲ್ಲಿ ಏನು ನಡೆಯುತ್ತಿದೆಂಬುದನ್ನೆ ಊಹಿಸಲಾಗುವುದಿಲ್ಲ, ಅದು ಭಾವನೆಗಳಿಗೆ ಸಂಬಂಧಿಸಿದರಂತೂ ಮುಗಿದೇ ಹೋಯಿತು, ಅಲ್ಲಿ ನಿರ್ಣಯಕ್ಕೂ ನಿಲುಕದ ತಿರುವು ಮುಗಿದು ಹೋಗಿರುತ್ತದೆ.ನಾನು ಪದೆ ಪದೆ ಹೇಳುವುಂತೆ,ಮನಸ್ಸು ಜ್ವರ ಬಂದ ಮಗುವಿನಂತೆ,ಅದು ಸದಾ ಒಂದು ನೆಮ್ಮದಿಯ ಅಪ್ಪುಗೆಯನ್ನ ಬಯಸುತ್ತಿರುತ್ತದೆ, ಅಲ್ಲಿ ಅದಕ್ಕೆ ಆ ಕ್ಷಣದ ಬೇಡಿಕೆ ಆ ಕ್ಷ್ಣಣದ ನೆಮ್ಮದಿ ಮುಖ್ಯವಾಗುತ್ತದೆ.ಅದು ಆ ದಿನದ ಆ ಕ್ಷಣದ ಬೇಡಿಕೆಯೆಂದೆನಿಸಿದರೂ ಅದು ಉಳಿಸಿ ಹೋಗುವ ನೋವು ಅಷ್ಟಿಸ್ಟಲ್ಲ. ಅವರು ಮನದಾಳದಲ್ಲಿ ಮೂಡಿಸಿದ ಅವರ ಚಿತ್ರಗಳನ್ನು ಅಳಿಸುವುದು ಅಂಗೈನಲ್ಲಿ ಗೆರೆಯನ್ನು ಅಳಿಸಿದಷ್ಟೆ ಕಷ್ಟವೆಂದರೂ ಸರಿಯೆ.
ಅದು ಒಂದೇ ದಿನದ ಗೆಳೆತನವಿರಬಹುದು, ಅದೊಂದೆ ದಿನ ನಡೆಸಿದ ಸಂಭಾಷಣೆಯಿರಬಹುದು, ಆದರೂ ಅದರ ನೆನಪುಗಳ ಕೊರೆತ ಎಂಥಹ ಕಡಲ ಕೊರೆತವನ್ನು ಮೀರಿಸುವಷ್ಟರ ಮಟ್ಟಿಗಿರುತ್ತದೆ.ಅದೆಂದೊ ಪರಿಚಯಸ್ಥರ ಮದುವೆ ಮನೆಗೆ ಹೋಗಿ, ಅಲ್ಲಿ ನೋಡಿದ ಹುಡುಗಿಯ ಮೇಲೆ ಇನ್ನಿಲ್ಲದ ಕಲ್ಪನೆ ಆಸೆಗಳನ್ನ ತನ್ನೊಳಗೆ ಮೂಡಿಸಿ ಅದರ ಬಗೆಗೆ ತನ್ನೆಲ್ಲ ಶಕ್ತಿಗಳನ್ನ ಒಗ್ಗೊಡಿಸಿ ಪ್ರಯತ್ನಿಸತೊಡಗುತ್ತದೆ.ಅವಳ ಬಗೆಗಿನ ಎಲ್ಲ ಮಾಹಿತಿಗಳನ್ನ ಸಂಗ್ರಹಿಸಹೊರಡುತ್ತದೆ. ಅವಳು ನನ್ನೊಡನೆ ಒಂದು ಬಾರಿ ಮಾತನಾಡಿದರೂ ಸಾಕು ಎಂಬ ಬೃಹದಾಸೆ ಮನೆ ಮಾಡುತ್ತದೆ.
ಅಲ್ಲಿ ಪ್ರೀತಿ ಎನ್ನುವುದಕಿಂತ ಆಕರ್ಷಣೆ ಹೆಚ್ಚಿರಬಹುದು, ಆದರೇ ಗಮನಿಸಬೇಕಾದ ವಿಷಯವೊಂದಿದೆ, ಮನುಷ್ಯ ಹುಟ್ಟಿದಾಗ ಒಂಟಿಯಾಗಿರುತ್ತಾನೆ, ಸಾಯುವಾಗಲೂ ಒಂಟಿಯೆಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಬಹುತೇಕ ಚಟುವಟಿಕೆಗಳು ಸಮಾಜದೊಂದಿಗೆ ನಡೆದರೂ, ಆಂತರಿಕ ಸಂಘರ್ಷ ದಿನ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಅದಕ್ಕೆ ಕಾರಣಗಳು ಸಹಸ್ರಗಳಿರಬಹುದು,ಸರಳವಾಗಿ, ನೈಜತೆಯಿಂದ ನೋಡಿದಾಗ ವಸ್ತು ಸ್ಥಿತಿ ನಮಗೆ ಗೋಚರಿಸುತ್ತದೆ. ಅಲ್ಲಿ ನಮಗೆ ಒಂಟಿತನ ಸಂತೋಷ ಕೋಡುವಂತೆ ಕಾಣುತ್ತದೆ. ಆದರಲ್ಲಿ ಶಾಶ್ವತ ಸಂತೋಷವೆಂಬುದು ಸಿಗಲೂ ಸಾಧ್ಯವಿಲ್ಲ.ಕಾರಣ ಮನಸ್ಸು ಒಂದಲ್ಲ ಒಂದು ಸಮಸ್ಯೆಯನ್ನು ಹುಡುಕುತ್ತಲೇ ಇರುತ್ತದೆ ಅಥವಾ ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿ ದೊಡ್ಡದಾಗಿಸುತ್ತಾ ಹೋಗುತ್ತದೆ. ಒಂದೇ ನೋಟಕ್ಕೆ ನನ್ನನ್ನು ನೋಡಿ ಪ್ರೀತಿಸುತ್ತೇನೆಂದು ಕೇಳುತ್ತಿಯಲ್ಲ ನಿನಗೆ ನಾಚಿಕೆಯಾಗುವುದಿಲ್ವಾ? ಪ್ರೀತಿ ಒಂದು ದಿನದಲ್ಲಿ ಹುಟ್ಟಿ ಬರುವುದಲ್ಲ, ನನ್ನ ಬಗ್ಗೆ ನಿನಗೇನೂ ತಿಳಿದಿಲ್ಲ, ನನ್ನ ಜಾತಿ, ನನ್ನ ಕುಟುಂಬ, ಸಮಾಜ, ನನ್ನ ಆಸೆಗಳು, ನನ್ನ ಗುರಿ, ಉದ್ದೇಶ, ನನ್ನ ಭವಿಷ್ಯ, ಹೀಗೆ ನೂರಾರು ಪ್ರಶ್ನೆಗಳು ಹುಡುಗಿಯ ಬಾಯಲ್ಲಿ ತುಪಾಕಿಯಿಂದ ಗುಂಡು ಸಿಡಿದಂತೆ ಬರುತ್ತಿರುತ್ತವೆ.
ನಾಚಿಕೆ ಏಕೆ ಆಗಬೇಕು? ಪ್ರೀತಿಸುವುದರಲ್ಲಿ ತಪ್ಪೇನು? ಹುಟ್ಟಿದಾಗ ನಮಗೆ ಇವರೇ ಅಪ್ಪ ಅಮ್ಮ ಅಂಥ ತಿಳಿದಿತ್ತಾ? ಕೆಲವೊಮ್ಮೆ, ಕೆಲವೊಮ್ಮೆಯೇನು ಅನೇಕ ಬಾರಿ ಅಮ್ಮ ಅಪ್ಪನಿಗಿಂತ ನಮ್ಮ ಹತ್ತಿರದ ಬಂಧುಗಳೆ ಹೆಚ್ಚು ಪ್ರಿಯರಾಗಿರುತ್ತಾರೆ. ಅಲ್ಲಿ ಒಂದು ಕಂಫರ್ಟ್ ಮನೆಮಾಡಿರುತ್ತದೆ. ಅದಕ್ಕೆ ಇಂಥವರೆಂದು ಬೇಕಿರುವುದಿಲ್ಲ.ಮನಸ್ಸಿಗೆ ಬೇಕಿರುವುದು ತನ್ನ ಭಾವನೆಗಳಿಗೆ ಬೆಲೆ ಕೊಡುವ ತನ್ನ ಮೌನಕ್ಕೆ ದನಿಗೂಡಿಸುವ ಹೃದಯವೇ ಹೊರತು ಅವಳ ದೇಹವಲ್ಲ, ಅವಳ ಮನೆತನವಲ್ಲ, ಚಾರಿತ್ರ್ಯವೂ ಅಲ್ಲ. ಭವಿಷ್ಯ ಹುಡುಗಿ ಒಬ್ಬಳಿಗೆ ಮಾತ್ರ ಮೀಸಲಾ? ನಮ್ಮದು ಪುರುಷ ಪ್ರಧಾನ ರಾಷ್ಟ್ರವಾಗಿರುವುದರಿಂದ ಹೆಣ್ಣಿಗಿಂತ ಗಂಡಿಗೆ ಜವಬ್ದಾರಿ ಹೆಚ್ಚಿರುತ್ತದೆಂಬುದು ನಂಬಲೇಬೇಕಾದ ವಿಷಯ. ಅಂಥಹದರಲ್ಲಿ ಒಂದು ಬಾರಿ ನೋಡಿದ ಹೆಣ್ಣಿಗೆ ಸರ್ವವನ್ನು
ತ್ಯಜಿಸಿ ಬಾಳಸಂಗಾತಿಯಾಗ ಹೊರಟವನನ್ನು ಅನುಮಾನಿಸಿ ಕೇಳಬಾರದ ಪ್ರಶ್ನೆಗಳನ್ನು ಕೇಳಿ ಮೊದಲೇ ಒಂಟಿತನದಿಂದ ಕೊರಗಿ ಸಾಯುತ್ತಿರುವ ಮನಸ್ಸನು ಇನ್ನು ಛಿದ್ರಗೊಳಿಸುವ ಕಾರ್ಯವನ್ನು ನೀನು ನಿಲ್ಲಿಸಬಾರದೇಕೆ.
ನಾನು ನಿನ್ನನ್ನ ಕೇಳಿದಾದರೂ ಏನು? ನನಗೆ ನೀನು ಬಹಳ ಇಷ್ಟವಾಗಿದ್ದೀಯ, ಅದು ಇಂದು ಆಕರ್ಷಣೆಯಾಗಿದೆ ಅದನ್ನು ಪ್ರೀತಿಯಾಗಿ ತಿರುಗಿಸಲು ನನಗೆ ನಿನ್ನ ಸಹಕಾರಬೇಕು ಇದಕ್ಕೆ ನಿನ್ನ ಒಪ್ಪಿಗೆ ಇದೆಯಾ? ಇಷ್ಟವಾದಲ್ಲಿ ಹೌದು ಅನ್ನು ಇಲ್ಲವಾದಲ್ಲಿ ಇಲ್ಲವೆನ್ನು, ಒಂದು ಅಂಕದ ಪ್ರಶ್ನೆಗೆ ಎಷ್ಟು ಉತ್ತರಿಸಬೇಕೊ ಅಷ್ಟನ್ನು ಮಾತ್ರ ಉತ್ತರಿಸಬೇಕಲ್ಲವೇ? ಅದನ್ನ ಬಿಟ್ಟು, ನಾನು ನಿನಗೆ ಜೀವನ ಪರ್ಯಂತ ಸ್ನೇಹಿತಳಾಗಿರುತ್ತೇನೆ, ಪ್ರೇಮಿಯಾಗಬಯಸಿದವನನ್ನ ಸ್ನೆಹಿತನಾಗು ಎಂದರೇ ಅದು ಸಾಧ್ಯವಾ? ಈ ಹುಡುಗಿಯರಿಗೇಕೆ ಹುಡುಗರ ಮನಸ್ಸು ಅರ್ಥ ಆಗುವುದಿಲ್ಲ? ಯಾರೊ ಒಬ್ಬ ಹುಡುಗ ಮಾಡಿದ ತಪ್ಪನ್ನೆ, ಅಥವಾ ಮೋಸವನ್ನೆ ಎಲ್ಲರೂ ಮಾಡುತ್ತಾರೆಂದೇಕೆ ನಂಬಬೇಕು. ಸಾಮಾನ್ಯಕರಿಸಿ ಉತ್ತರಿಸುವುದನ್ನ ನಿಲ್ಲಿಸಬೇಕಲ್ಲವೆ,ಎಲ್ಲರನ್ನು ಒಂದೆ ತಟ್ಟೆಯಲ್ಲಿಟ್ಟು ತೂಗುವುದು ನಾಗರೀಕತೆಯ ಗುಣವಲ್ಲವೆನಿಸುವುದಿಲ್ಲವಾ?
ಇಡೀ ಪಾತ್ರೆಯಲ್ಲಿರುವ ಅನ್ನವನ್ನು ಪರೀಕ್ಷಿಸಲು ಎಲ್ಲ ಅಕ್ಕಿಯನ್ನು ನೋಡಬೇಕಿಲ್ಲ ಆದರೇ ಅದು ಒಂದೇ ಭೂಮಿಯಲ್ಲಿ ಬೆಳೆದದ್ದು ಅಲ್ಲಿ ಕಲಬೆರಕೆ ಆಗಿಲ್ಲವೆಂಬ ನಂಬಿಕೆ ಅದನ್ನು ತಡೆಯುತ್ತದೆ. ಅಂಗಿ ಕೊಂಡುಕೊಳ್ಳಲು ಅಂಗಡಿಗೆ ಹೋದರೇ, ನೋಡಿ ಸರ್, ಅಂಗಿಗಿಂತ ಇದನ್ನ ತೆಗೆದು ಕೊಳ್ಳಿ ಸರ್ ಅಂತಾ ಅವನು ಜರ್ಕಿನ್ ಕೊಟ್ಟರೆ ತೆಗೆದುಕೊಳ್ಳೊಕೆ ಆಗುತ್ತಾ,ನಮಗೆ ಬಯಸಿದ್ದು ಸಿಗಬೇಕಲ್ವಾ? ಪ್ರೇಮಿ ಆಗು ಅಂದ್ರೆ ಸ್ನೇಹಿತೆ ಆಗ್ತಿನಿ, ಬಂಧು ಆಗ್ತಿನಿ, ಬಳಗ ಆಗ್ತಿನಿ ಇಷ್ಟು ಸರಳವಾಗಿ ಯೋಚಿಸೋದು ನಿಮಗೆ ಮಾತ್ರ ಸಾಧ್ಯ ಅನ್ಸುತ್ತೆ ಅಲ್ವಾ?
ಪುಣ್ಯಕ್ಕೆ ಅಕ್ಕ ಆಗ್ತಿನಿ ತಂಗಿ ಆಗ್ತಿನಿ ಅಂತಾ ಯಾರು ಅಂದಿಲ್ವೇನೊ ಅಲ್ವಾ? ಆದರಿಲ್ಲಿ ಅದು ಅನ್ವಯಿಸುವುದಿಲ್ಲ, ಕಾರಣ ಪ್ರತಿಯೊಬ್ಬ ಮನುಷ್ಯನ ಒಳಗೆ ನೂರಾರು ಮನುಷ್ಯ ಅಡಗಿರುತ್ತಾನೆ. ಪ್ರೀತಿಯ ಹಸಿವನ್ನು ನೀಗಿಸುವುದು ಭಾರತದ ಸರ್ವಾಂಗೀನ ಅಭಿವೃದ್ದಿಗಿಂತ ಕಷ್ಟ. ಅದರ ಕೊರತೆ ನೀಗಿದಾಕ್ಷಣ ಈ ಭೂಮಿ ಸ್ವರ್ಗವಾಗುವುದರಲ್ಲಿ ಅನುಮಾನವಿಲ್ಲ. ಅಂಥಹ ಸ್ವರ್ಗಕ್ಕೆ ಕರೆದೊಯ್ಯಲು ಹವನಿಸುತ್ತಿರುವ ಹುಡುಗನನ್ನು ಮಸಣದತ್ತ ಮುಖಮಾಡುವಂತೆ ಮಾಡುವುದೆಷ್ಟು ಸರಿ ನೀವೆ ಹೇಳಿ.

***


ಹೂವಿನಲ್ಲಿ ನಿನಗ್ಯಾವುದಿಷ್ಟ?
ಅವಳು ತುಂಬಾ ಒಳ್ಳೆ ಹುಡುಗಿ. She is Clever, She is kind ಇದು ಎಲ್ಲಾ ಹುಡುಗಿಯರಿಗೂ ಹೇಳುವ ಮಾತಲ್ಲ. ಆದರೆಈ ಮಾತನ್ನು ಅವಳಿಗೆ ಹೇಳಲೇಬೇಕು ಇಲ್ಲವಾದರೆ ಆ ಪದಗಳಿಗೆ ಅಪಮಾನ ಮಾಡಿದಂತಾಗುತ್ತದೆ. ಅದೊಂದು ದಿನ, ಅವನು ಅವಳ ಬಳಿಗೆ ಬಂದು ನಿನ್ನ ಹತ್ತಿರ ಮಾತನಾಡಬೇಕು ಎಂದ. ಬೇರೆ ಯಾವ ಹುಡುಗಿಯಾದರೂ ಇಲ್ಲಿಯೇ ಮಾತನಾಡು ಎಂದು ಹೇಳುತ್ತಿದ್ದಳು. ಆದರೇ ಅವಳು ಹುಡುಗರ, ಮನಸ್ಸನ್ನು ತುಂಬಾ ಸನಿಹದಿಂದ ಬಲ್ಲವಳಂತೆ ವರ್ತಿಸಿದಳು. ಸರಿ ಎಲ್ಲಿ ಮಾತನಾಡೋಣವೆಂದು ಕೇಳಿದಳು. ಅವನು ನಿರೀಕ್ಷಿಸಿದಂತೆ ನಡೆಯುತ್ತಿದ್ದನು ಗಮನಿಸಿ ಬಹಳ ಆನಂದಿಸಿದ. ಅವನು ಅವಳ ಮಾತಿಗೆ ಮಾರುಹೋಗಿದ್ದ. ಅವಳು ತಾಳ್ಮೆಗೆ ಮತ್ತೊಂದು ಹೆಸರೇ ತಾನೆಂಬಂತೆ ವರ್ತಿಸುತ್ತಿದ್ದಳು. ಅವನು ಈವರೆಗೆ ಕಂಡ ಬಹುತೇಕ ಹುಡುಗಿಯರು ಕೋಪ ತಮ್ಮ ಸ್ವಂತ ಆಸ್ತಿ ಅದರಲ್ಲೂ ದಿಡೀರ್ ಕೋಪವಂತು ತಮಗೇ ಮೀಸಲೆಂಬಂತೆ ಇದ್ದದ್ದು ಹುಡುಗಿಯರ ಮೇಲೆ ಅಸಹನೆ ಮೂಡಿಸುವಂತೆ ಮಾಡಿತ್ತು. ಒಬ್ಬ ಮಾದರಿ ಹುಡುಗಿಯೆಂದರೆ ಹೇಗಿರಬೇಕೆಂಬ ಆಸೆ ಕಲ್ಪನೆಗಳಿದ್ದವೋ ಅವೆಲ್ಲಾ ಹೆಣ್ಣಾಗಿ ಅವನ ಮುಂದೆ ನಿಂತಿತ್ತು. ಈವರೆಗೂ ಹೆಣ್ಣನ್ನು ಬಣ್ಣಿಸುವಾಗ, ಅವಳನ್ನು ಭೂಮಿಗೆ, ನಿಸರ್ಗಕ್ಕೆ, ಆಕಾಶಕ್ಕೆ, ಹೀಗೆ ಹತ್ತು ಹಲವಾರು ವರ್ಣನೆಗೆ ಮೀರಿದ ವಸ್ತುಗಳಿಗೆ ಹೋಲಿಸುತ್ತಿದ್ದನ್ನು ಓದಿ ತಿಳಿದಿದ್ದ. ಆದರೇ ಅವಳನ್ನು ಕಂಡ ಮೇಲೆ ಹೆಣ್ಣೆಂದರೇ ಹೀಗೆ ಇರಬೇಕೆಂದು ನಿರ್ಧರಿಸಿಯುಬಿಟ್ಟ. ಇನ್ನು ಮುಂದೆ ಇತಿಹಾಸದಲ್ಲಿ ಹೆಣ್ಣೆಂದರೇ ಇವಳೆ ಮಾದರಿಯಾಗಲೆಂದು ಮನದಾಳದಲ್ಲಿ ಮುದ್ರೆಯೊತ್ತಿಬಿಟ್ಟ. ಸ್ವಲ್ಪ ದೂರ ನಡೆಯುತ್ತ ಮಾತನಾಡುವುದೆಂದು ತೀರ್ಮಾನಿಸಿ, ಮುಂದುವರೆದರು. ಹೆಜ್ಜೆ ಸಪ್ಪಲ ಕೇಳಿಸುವಷ್ಟು ಮೌನ ಅವರನ್ನಾವರಿಸಿತು. ಆದರೇ ಅದು ಇನ್ನರ್ಧ ಕ್ಷಣದಲ್ಲೇ ದೂರಾಯಿತು.
ಹೆಜ್ಜೆ ವೇಗ ಕುಂಠಿತವಾಗಿರುವಾಗಲೇ, ಅವನು ಅವಳೊಂದಿಗೆ ಸಂಭಾಷಣೆಗಿಳಿದು, ನೇರವಾಗಿ ಕೇಳಿಯೇಬಿಟ್ಟ. ನಿನಗೆ ನನ್ನನ್ನು ಕಂಡರೆ ಹೇಗೆನಿಸುತ್ತದೆ? ಆವಳು ತಟ್ಟನೆ, ಯೂ ಆರ್ ಮೈ ಗೂಡ್ ಫ್ರೆಂಡ್ ಎಂದಳು. ಹುಡುಗನು ಸಾಧರಣ ಬುದ್ದಿವಂತ, ತಟ್ಟನೇ ಕೇಳಿಯೇ ಬಿಟ್ಟ, ನಿನಗೆ ಕೆಟ್ಟವರು ಅಂತಾ ಯಾರಾದರೂ ಇದ್ದಾರಾ? ಇಲ್ಲಾ ನನ್ನಗ್ಯಾರು ಕೆಟ್ಟವರೆನಿಸಿಲ್ಲ ಎಂದಳು. ಹೌದು ಒಳ್ಳೆಯದು ಕೆಟ್ಟದೆಂಬುದು ಪ್ರೀತಿಸುವ ಮನಸ್ಸಿನಲ್ಲಿ ಅಡಗಿರುತ್ತದೆ. ಪ್ರಪಂಚದಲ್ಲಿರುವ ಎಲ್ಲರೂ ಒಳ್ಳೆಯವರೇ ಅವಳಿಗೆ, ಅವಳ ದೃಷ್ಟಿಯೇ ಅಂತಹದ್ದು. ಅಲ್ಲಿ ನಿರ್ಮಲತೆಗೆ ಮಾತ್ರ ಸ್ಥಾನ. ಹುಡುಗ ಹೇಳಿದ ನನಗೆ ನನ್ನ ಭಾವನೆಗಳನ್ನ, ಆಸೆಗಳನ್ನ ಹಂಚಿಕೊಳ್ಳುವದಕ್ಕೆ ಒಂದು ಹೃದಯದ ಅವಶ್ಯಕತೆಯಿದೆ, ಅದು ನಿರ್ಮಲತೆಯ ಪೂರಕತೆಯಿರಬೇಕು. ಅದು ನಿನ್ನದೇ ಆದರೇ ನಾನು ಈ ಭೂಮಿಯ ಅತ್ಯಂತ ಅದೃಷ್ಟಶಾಲಿಯಾಗಿರುತ್ತೇನೆಂಬುದು ನನ್ನ ಬಯಕೆ. ಅದಕ್ಕೆ ನಿನ್ನ ಒಪ್ಪಿಗೆ ಕೇಳುತ್ತಿದ್ದೇನೆ. ಅವಳ ಮುಖದಲ್ಲಿ ಅಂಥಹ ಬದಲಾವಣೆಯೇನೂ ಆದಂತೆ ಕಾಣಲೇ ಇಲ್ಲ, ಇದು ಸಹಜ ನಿರೀಕ್ಷೆಯೆಂಬಂತೆ ಅಥವಾ ಅದನ್ನು ಎಂದೊ ಬಯಸಿದ್ದಳು ಎಂಬಂತೆ ವರ್ತಿಸಿದಳು.ಒಂದು ಹುಡುಗ ಮತ್ತೊಂದು ಹುಡುಗಿಯ ಬಳಿ ವಯ್ಯಕ್ತಿಕ ವಿಷಯದ ಪ್ರಸ್ತಾವನೆಯೆಂದೊಡನೆ ಅದು ಪ್ರೀತಿ, ಪ್ರೇಮದ ವಿಷಯವೇ ಆಗಿರುತ್ತದೆಂಬುದ ಎಲ್ಲಾ ಹುಡುಗಿಯರ ನಂಬಿಕೆ ಅದರಂತೆ ಇದು ಆದದ್ದು ಸಹಜವಾಗಿತ್ತು. ಅವಳಿಗೆ ಅವಳ ಬಗ್ಗೆ ತುಂಬಾ ದೃಡವಾದ ನಂಬಿಕೆಯಿತ್ತು. ಅವಳೇನೆಂಬುದು ಅವಳಿಗೆ ತಿಳಿದಿತ್ತು. ಅವಳು ನಗುತ್ತಲೇ ಪ್ರತಿಕ್ರಿಯಿಸಿದಳು, ನಾನು ಸದಾ ನಿನ್ನ ಒಳ್ಳೆಯ ಗೆಳತಿಯಾಗಿರುತ್ತೇನೆ, ಯೂ ಆರ್ ಮೈ ಗುಡ್ ಫ್ರೆಂಡ್ ಆಂಡ್ ಐ ವಿಲ್ ಬಿ ಯುವರ್ ಗುಡ್ ಫ್ರೆಂಡ್ ಆಲ್ವೇಸ್, ಇದರಲ್ಲಿ ಎರಡು ಮಾತಿಲ್ಲ. ಅವನಿಗೆ ಸ್ವಲ್ಪ ಇರುಸು ಮುರಿಸಾಯಿತು, ನಾನು ಹೇಳುತ್ತಿರುವುದು ಗೆಳೆತನದ ಬಗ್ಗೆಯಲ್ಲ, ಅದರಿಂದಾಚೇಗೆ ಎಂದ. ಒಬ್ಬನಿಗೆ ಎಷ್ಟು ಜನ ಬೇಕಿದ್ದರೂ ಸೇಹಿತರಿರಬಹುದು, ಆದರೇ ಹೃದಯದೊಳಗೆ ಪ್ರವೇಶ ಒಬ್ಬರಿಗೆ ಮಾತ್ರ ಮೀಸಲಿರುತ್ತದೆ. ಅದು ನನಗೆ ಬೇಕು, ನಿನ್ನಂತರಾಳವರಿಯಲು ನನಗೆ ಪ್ರವೇಶಬೇಕು. ಗೆಳೆತನದಲ್ಲಿ best friend, true friend,close friend, lifetime friend, just friend, ಹೀಗೆ ಹಲವಾರು ರೀತಿಯ ಗೆಳೆತನವಿರಬಹುದು, ಆದರೇ ನನಗದರ ಅವಶ್ಯಕತೆಯಿಲ್ಲ, ನಾನು ಬಯಸುತ್ತಿರುವುದು ನಿನ್ನ ಪ್ರೇಮವನ್ನ, ನಿನ್ನ lover ಆಗಬೇಕೆಂಬ ಆಸೆ ನನ್ನಲ್ಲಿ ಮೂಡಿದೆ. ಅದು ನನಗೆ ಬೇಕು.
ಹುಡುಗಿ ಬಹಳ ಸಾವಧಾನದಿಂದ ಕೇಳಿದಳು, ನಾನು ಒಂದು ಪ್ರಶ್ನೆ ಕೇಳುತ್ತೇನೆ, ಅದು ಮನಶಾಶ್ತ್ರಕ್ಕೆ ಸಂಭಂದಪಟ್ಟದ್ದು, ಅದಕ್ಕೆ ನೇರವಾಗಿ ಉತ್ತರಿಸು, ಅವನಿಗೆ ಆಶ್ಚರ್ಯ, ನಾನು ಇಷ್ಟು ಗಂಭೀರದ ವಿಷಯ ಚರ್ಚಿಸುವಾಗ ಇವಳೇನು, ಯಾವುದೋ ಮನಶಾಶ್ತ್ರದ ವಿಷಯ ಕೇಳುತ್ತೇನೆಂದು. ತಲೆಯಾಡಿಸಿದ ಹುಡುಗ. ಪ್ರಶ್ನೆ ಪ್ರಾರಂಭಿಸುವ ಮುನ್ನ, ನೇರ ಮತ್ತು ನಿನ್ನಂತರಾಳದಿಂದ ಬರಲಿ ಉತ್ತರವೆಂದಳು. ನೀನು ಒಂದು ಹುಡುಗಿಯನ್ನು ಪ್ರೀತಿಸುತಿದ್ದೀಯಾ ಎಂದು ಭಾವಿಸೋಣ, ಅವಳನ್ನು, ನೋಡಲು ಹೋಗಲು, ಎರಡು ದಾರಿಗಳಿವೆ, ಒಂದು ಬಹಳ ಹತ್ತಿರದ್ದು ಆದರೆ ತುಂಬಾ ಕಲ್ಲು ಮುಳ್ಳುಗಳಿವೆ. ಎರಡನೆಯದು, ಉದ್ದನೆಯ ದಾರಿ ಸುಗಮವಾಗಿ ಸಾಗುವ ಹಾದಿ, ಯಾವುದೇ ಅಡಿ ತಡೆಗಳಿಲ್ಲ. ಇದರಲ್ಲಿ ಯಾವುದನ್ನು ಆರಿಸುತ್ತೀಯಾ? ಹುಡುಗ ದಿಡಿರನೇ, ಎರಡನೆಯದೇ ಇರಲಿ, ತೊಂದರೆ ತಾಪತ್ರೆ ಬೇಡವೆಂದ.
ಎರಡನೇ ಪ್ರಶ್ನೆ: ದಾರಿಯಲ್ಲಿ ಹೋಗುವಾಗ ಹೂವು ತೆಗೆದುಕೊಡು ಹೋಗುವ ಆಸೆ ಬರುತ್ತದೆ. ಇರುವುದು ಕೆಂಪು ಮತ್ತು ಬಿಳಿ ಗುಲಾಬಿ ಮಾತ್ರ, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತ್ತೀಯಾ?
ಬಿಳಿಗುಲಾಬಿಯೆಂದ ಹುಡುಗ
ಮೂರನೇಯ ಪ್ರಶ್ನೆ: ಅವಳ ಮನೆಗೆ ಬಂದೊಡನೆ, ನೀನು ಬಾಗಿಲ್ಲನ್ನು ಜೋರಾಗಿ ಬಡಿಯುತ್ತೀಯೋ ಅಥವಾ ಮೆಲ್ಲಗೆ ತಟ್ಟುತ್ತೀಯೋ?
ನಾಗರೀಕತೆಯ ಪ್ರಶ್ನೆ ಮೆಲ್ಲನೆ ತಟ್ಟುತ್ತೇನೆ
ನಾಲ್ಕನೆಯ ಪ್ರಶ್ನೆ: ಅವಳ ಸಂಬಂಧಿಕರು ಬಂದು ಬಾಗಿಲು ತೆರೆಯುತ್ತಾರೆ ಅವರಷ್ಟು ಮುಖ್ಯವಲ್ಲದವರು, ಅವರನ್ನು ಕಂಡೊಡನೆ ನಿನ್ನ ಪ್ರತಿಕ್ರಿಯೆ ಏನು? ಕುಳಿತು ಮಾತನಾಡಿಸಿ ಹೋಗುತ್ತೀಯೋ ಅಥವಾ ಹಾಗೆ ಒಂದು ಚಿಕ್ಕ ನಗು ಸೂಸಿ ಹೋಗುತ್ತೀಯಾ?
ಕುಳಿತು ಮಾತನಾಡಿಸಿ ಹೋಗುತ್ತೇನೆ, ಅವಳ ಸಂಬಂಧಿಕರೆಂದಮೇಲೆ ಅವರು ಮುಖ್ಯವೇ ಸರಿ.
ಐದನೇ ಪ್ರಶ್ನೆ: ರೂಮಿಗೆ ಬಂದೊಡನೆ ರೂಮಿನಲ್ಲಿ ಅವಳು ಇರುವುದಿಲ್ಲ ನನ್ನ ಕೈಯಲ್ಲಿರುವ ಹೂವನ್ನು ಹಾಸಿಗೆ ಮೇಲಿಡುವೆಯೋ ಅಥವಾ ಟಾಬಲ್ ಮೇಲಿಡುವೆಯೋ?
ಬೆಡ್ ಮೇಲೆ ಬೇಡ ಯಾರಾದರೂ ಕುಳಿತರೆ ಹಾಳಾಗುತ್ತದೆ, ಟೇಬಲ್ ಮೇಲಿಡುತ್ತೇನೆ.
ಕೊನೆಯ ಪ್ರಶ್ನೆ: ಅಂದು ರಾತ್ರಿ ವಾಪಾಸ್ಸಾಗಲೂ ಆಗದೇ ಅಲ್ಲೇ ಉಳಿಯಬೇಕಾಗುತ್ತದೆ. ಮಾರನೇ ಬೆಳಿಗ್ಗೆ ಬರುವಾಗ ಅವಳು ಮಲಗಿರುತ್ತಾಳೆ ಎಬ್ಬಿಸಿ ಹೇಳಿಹೋರಡುತ್ತೀಯಾ ಅಥವಾ ಹಾಗೆ ಬರುತ್ತೀಯಾ?
ಹುಡುಗ ಸ್ವಲ್ಪ ಸ್ಮಾರ್ಟ್ ಅಂತಾ ತೋರಿಸುವುದಕ್ಕೋಸ್ಕರ ಅವಳಿಗೆ ಡಿಸ್ಟರ್ಬ್ ಮಾಡುವುದಿಲ್ಲ ಎಂದ.
ಅವಳಿಗೇನನಿಸಿತ್ತೋ ಗೊತ್ತಿಲ್ಲ ಸ್ವಲ್ಪ ನಗುಮುಖ ಮಾಡಿ ಹೇಳಿದಳು, ದಾರಿಯಲ್ಲಿ ಉದ್ದ ದಾರಿ ಅಂದರೇ ಯೋಚಿಸಿ ಯೋಚಿಸಿ ಪ್ರೀತಿಸ್ತೀಯಾ, ಬಿಳಿ ಹೂವು ಕೊಡುವುದರಿಂದ ನೀನು ಹೆಚ್ಚು ಪ್ರೀತಿ ಕೊಡುತ್ತೀಯಾ, ಮನೆ ಬಾಗಿಲು ಮೆಲ್ಲನೆ ತಟ್ಟುವುದರಿಂದ ನಿನಗೆ ಅವಳನ್ನು ಕಾಣಲೇಬೇಕೆಂಬ ಕಾತುರತೆಯಿಲ್ಲ, ಸಂಬಂಧಿಕರನ್ನು ಮಾತನಾಡಿಸಿ ಹೋಗುತ್ತೀಯಾ ಸುತ್ತಮುತ್ತಲಿನ ಜನಕ್ಕೆ ಬೆಲೆ ನೀಡುತ್ತೀಯಾ, ಟೇಬಲ್ ಮೇಲೆ ಹೂವು ಇಡುವುದರಿಂದ ಕಾಮಕ್ಕಿಂತ ಪ್ರೇಮ ದೊಡ್ಡದೆಂಬ ಭಾವನೆ ನಿನ್ನದು. ಬೆಳ್ಳಿಗ್ಗೆ ಬರುವಾಗ ಹೇಳದೇ ಬರುತ್ತೀಯಾ ಎಂದ ಮೇಲೆ ಅವಳ ಬಗ್ಗೆ ಅಷ್ಟು ಕೇರ್ ತೆಗೆದುಕೊಳ್ಳುವುದಿಲ್ಲವೆಂದು ಮಾತು ಮುಗಿಸಿದಳು. ಹುಡುಗನ ಮುಖ ಒಡನೆಯೆ ಬಾಡತೊಡಗಿತು. ಸರಿ ಹೊರಡೋಣ ನಡಿಯೆಂದಳು. ಅವನು ನನ್ನ ವಿಷಯವೆಂದನು, ಪ್ರತ್ಯ್ತುತ್ತರವಾಗಿ “ಅವಸರವೇ ಅಪಘಾತಕ್ಕೆ ಕಾರಣವೆಂದಳು”.
ಹೌದು ಇಷ್ಟು ತಾಳ್ಮೆಯ ಹುಡುಗಿಯರು ನಮ್ಮೊಳಗಿದ್ದಾರೆ. ಅವರಂತೆಯೇ ಎಲ್ಲಾ ಹುಡುಗಿಯರು ಯೋಚಿಸಿದ್ದರೇ ಯೌವ್ವನದಲ್ಲಿ ಆಗುವ ಎಲ್ಲಾ ಅವಘಡಗಳನ್ನು ತಡೆಯಬಹುದು. ಆದರೇ, ಯೌವ್ವನ, ಬಿಸಿರಕ್ತ ವೇಗವಾಗಿ ಓಡುವಂತೆ ಪ್ರಚೋದಿಸುತ್ತದೆ. ಈ ಸಮಯದಲ್ಲಿ “In great joy never make promise to anyone, in great anger never answer to anyone” ಅನ್ನೋದನ್ನೆ ಮರೆಸುತ್ತದೆ.
***
ಅವಳು ಸ್ವರ್ಗದಿಂದಿಳಿದ ರತಿ...!
ನಾನು ನಿನ್ನೊಬ್ಬಳನ್ನೆ ಪ್ರೀತಿಸ್ತಿರೋದು, ಅದೇನೋ ಗೊತ್ತಿಲ್ಲ ಇದುವರೆಗೂ ಯಾರನ್ನು ಪ್ರೇಮಿಸ್ಬೇಕು ಅನ್ನಿಸಲೇ ಇಲ್ಲ. ಯಾರು ಇಷ್ಟ ಆಗಲೇ ಇಲ್ಲ. ನಿನ್ನ ನೋಡಿದಾಗಲಿಂದ ನನಗೆ ಅರಿವಿಲ್ಲದೇ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನಿಲ್ಲದೇ ಬದುಕುವುದು ಹೇಗೆ ಅಂತಾ ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲವೆನ್ನುವಷ್ಟು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಐ ಟ್ರೂಲೀ ಲವ್ ಯೂ, ಹೀಗೆ ಮಾತುಗಳ ಸುರಿಮಳೆಗೈದು ತನ್ನಂತರಾಳದ ಭಾವನೆಗಳು ಹರಿಬಿಡುತ್ತಿದ್ದಾನೆ. ಅವನಿಗೆ ಅವಳೆನೂ ಕಮ್ಮಿಯಿಲ್ಲವೆಂಬಂತೆ ಪ್ರಾರಂಭಿಸುತ್ತಾಳೆಮ್ ನನಗೆ ಈ ಪ್ರೀತಿಯೆಂದರೆ ಅಲರ್ಜಿಯಂತಿದ್ದ್ದೆ, ಅದೇನಾಯಿತೋ ಗೊತ್ತಿಲ್ಲ, ಈ ಭಾವನೆಗಳ ಮಹಾಪೂರವೇ ಹರಿದಿದೆ. ನಿನ್ನನ್ನು ಪ್ರೀತಿಸತೊಡಗಿರುವುದೆ ನನಗೆ ಆಶ್ಚರ್ಯ. ಹಿಂದೆ ಈ ಭಾವನೆಯೆಂದೂ, ಯಾರ ಮೇಲೂ ಮೂಡಿರಲಿಲ್ಲ.
ಒಂದೆರಡು ಪ್ರೊಪೊಸಲ್ಸ್ ಬಂದಿದ್ದವು. ನನಗೆ ನನ್ನ ಕಾಲೇಜಿನಲ್ಲಿದ್ದಾಗ ನನ್ನೊಬ್ಬ ಸ್ನೇಹಿತನಿದ್ದ, ನನ್ನನ್ನು ತುಂಬಾ ಹಚ್ಚಿಕೊಂಡಿದ್ದ. ದಿನ ನನಗೆ ಚಾಕಲೇಟ್ ಕೊಡದೇ ದಿನ ಆರಂಬಿಸುತ್ತಲೇ ಇರಲಿಲ್ಲ. ನನಗೆಂದರೇ ಎಲ್ಲಾ ನೋಟ್ಸ್ ರೆಡಿ ಮಾಡಿಕೊಡುತ್ತಿದ್ದ. ನನ್ನ ಜೊತೆಯ ಒಂದೈದು ನಿಮಿಷದ ಮಾತುಕತೆಗೆ ದಿನವಿಡಿ ಕಾಯುತ್ತಿದ್ದ. ನಾನು ಒಂಟಿಯಾಗಿ ಸಿಗುತ್ತೇನೆಂದರೇ ಹಿಗ್ಗಿ ಹೀರುತ್ತಿದ್ದ. ಬಹಳ ಒಳ್ಳೆಯ ಹುಡುಗ, ಆದರೇ ಒಂದು ದಿನ ಇದ್ದಕ್ಕಿದ್ದ ಹಾಗೆ ನನ್ನ ಪ್ರೀತಿನ ಒಪ್ಪಿಕೊ ಎಂದು ಕೇಳಿಬಿಟ್ಟ. ನನಗೆ ತುಂಬಾ ಬೇಸರವಾಯ್ತು, ಬೈದುಬಿಟ್ಟೆ. ಇನ್ನು ಮುಂದೆ ನನಗೆ ನಿನ್ನ ಮುಖ ತೋರಿಸಬೇಡವೆಂದೆ, ಇನ್ಮುಂದೆ ಮಾತಾಡೊದನ್ನೆ ನಿಲ್ಲಿಸಿಬಿಟ್ಟೆ. ಅವನು ನನ್ಮುಂದೆ ಕಂಡರೇ, ಮೈಯಿಗೆ ಮುಳ್ಳು ಚುಚ್ಚಿದಂತಾಗುತ್ತಿತ್ತು. ಹೀಗೆ ಹೊಗಳಿ ಹೊಗಳಿ, ತನಗೆ ಈವರೆಗೆ ನಿನ್ನಂತವಾರಾರು ಸಿಗಲಿಲ್ಲ, ಸಿಕ್ಕಿದರೂ ಪ್ರೀತಿಸಲಿಲ್ಲವೆಂಬ ಸತ್ಯಾಂಶವನ್ನು ಅವನ ಮುಂದೆ ಹರಡಿಸದಳು. ಅದು ಹೊಗಳಿ, ತನಗೆ ಸಿಕ್ಕಿದವರಿಗಿಂತ ನೀನು ಮಿಗಲೆಂಬ ಮನಸ್ಸೋ ಅಥವಾ ಅದು ಬರಿ ಮಾತೋ ತಿಳಿಯಲಿಲ್ಲ. ಇಬ್ಬರೂ ಹಿಂದಿನ ಪ್ರೀತಿಯ, ಅನುರಾಗದ ವಿಷಯದ ಬಗ್ಗೆ ಆಗ್ಗಾಗ್ಗೆ ಮಾತನಾಡುತಿರ್ರುತ್ತಾರೆ. ಅದು ಸಿಹಿ ನೆನಪೋ, ಕಹಿ ನೆನಪೋ ಅದನ್ನು ಮರೆಯುವ ಪ್ರಯತ್ನವಂತೂ ಯಾರೂ ಮಾಡಿದಂತೆ ತೋರುವುದೇ ಇಲ್ಲ. ಅದನ್ನೇ ಹೇಳುವುದು ಮೊದಲ ಪ್ರೇಮವೆಂದು. The First Love, ನಮಗೆ ದಿನದಲ್ಲಿ ಅದೆಷ್ಟು ಮಂದಿಯನ್ನು ನೋಡುವಾಗ ಅವರಂತೆ ಆಗಬೇಕೆಂಬ ಬಯಕೆ ಬರುತ್ತದೋ ಹಾಗೆಯೇ ಪ್ರೀತಿಯ ವಿಷಯದಲ್ಲಿ ಕೂಡ. ಸಿನೆಮಾ ನೋಡುವಾಗ ಆ ಕ್ಷಣದಲ್ಲಿ ನಾನು ಅದೇ ರೀತಿ ಆ ಹೀರೋ ಆಗಬೇಕು ಅಂತಾ ಆಸೆ ಬರುವುದು ಸರ್ವೇಸಾಮಾನ್ಯ. ಸುಂದರ ಯುವತಿಯರು ಒಡಾಡುವಾಗ ನಾನು ಅವರೊಂದಿಗೆ ಅಥವಾ ಅವರು ನನ್ನೊಂದಿಗಿದ್ದಿದ್ದರೆಂಬ ಬಯಕೆ ಮೂಡುವುದು ಸಹಜವೆನಿಸುತ್ತದೆ. ಆದರೇ ವಿಪರ್ಯಾಸವೆನಿಸುವುದು ಕಾಲದ ಮಹಿಮೆಯಿಂದ ಮಾತ್ರ, ಯಾರು ನಮ್ಮ ಆಸೆಗಳಿಗೆ, ಭಾವನೆಗಳಿಗೆ ಆ ದಿನದಲ್ಲಿ ಸೊಪ್ಪು ಹಾಕುತ್ತಾರೋ, ಅವರು ಆ ದಿನಕ್ಕೆ, ಸ್ವರ್ಗದಿಂದಿಳಿದ ರತಿ, ಮನ್ಮತನಂತೆ ಕಾಣುತ್ತಾರೆ. ಅದೇ ವ್ಯಕ್ತಿತ್ವದ ಬಣ್ಣ ಮಾಸುತ್ತಾ ಹೋಗುವುದು ಕಾಲದ ಕೈಯಲ್ಲಿರುತ್ತದೆ. ಕೆಲವೇ ದಿನಗಳಲ್ಲಿ, ಅವರೊಡನೆ ಯಾವುದೋ ಹೇಳಲಾರದ ಬೇಸರ ಉದ್ಬವಿಸತೊಡಗುತ್ತದೆ. ಅಲ್ಲಿಂದ ಹೊರಬರಲು ಪ್ರಯತ್ನಿಸಲೆತ್ನಿಸುತ್ತದೆ ಮನಸ್ಸು. ಹದಿಹರೆಯದ ಮನಸ್ಸಿನಲ್ಲಿ ಆತುರ ಪಡುವ, ಪಟ್ಟು ನಿರ್ಧಾರ ತೆಗೆದುಕೊಂಡ ಎಲ್ಲ ಪ್ರೇಮಿಗಳ ಗೋಳು ಇದಕ್ಕೆ ಹೊರತಲ್ಲ. ಎಲ್ಲರೂ ಇದನ್ನೆ ಪದೆ ಪದೇ ಮಾಡಿ ಹೆಣಗುತ್ತಾರೆ. ಯಾವ ವ್ಯಕ್ತಿಯೂ ಇರುವುದರಲ್ಲಿ ಸಂತೋಷಪಡುವುದನ್ನು ಕಲಿಯಬಯಸುವುದೇ ಇಲ್ಲ.
ಇದಕ್ಕೇ ಕಾರಣ ವಸ್ತು ಪ್ರಧಾನ ಜೀವನವೊಂದಾದರೇ, ಆತುರತೆಯು ಮತ್ತೊಂದು. ಇಲ್ಲಿ ವ್ಯಕ್ತಿ ಚಾರಿತ್ರ್ಯಕಿಂತ, ವಸ್ತುವಿಗೆ ಹೆಚ್ಚು ಬೆಲೆ ಕೊಟ್ಟು ಅವನನ್ನು ತೂಗಿಸತೊಡಗುತ್ತಾರೆ. ಭಾವನೆಗಳಿಂದ ಅರಳಬೇಕಿದ್ದ ಪ್ರೀತಿಯನ್ನು, ಅವನ ವಯಕ್ತಿಕ ವರ್ಚಸ್ಸಿನಿಂದ ಅಳೆಯುತ್ತಾರೆ. ಒಂದು ಮೊಬೈಲ್ ಆದರೇ ಬದಲಾಯಿಸಬಹುದು, ಒಂದು ವಾಹನವಾದರೇ, ಬದಲಾಯಿಸಬಹುದು. ಆದರೇ ಪ್ರೀತಿಸುವ ವ್ಯಕ್ತಿಯನ್ನು ಬದಲಾಯಿಸುವುದು ಸಾಧ್ಯವೇ? ಅವನನ್ನು ಮರೆಯಲು ಸಾಧ್ಯವೇ?
ಅದಕ್ಕೋಸ್ಕರವೇ ನಾವು ಎಷ್ಟೇ ವರ್ಷಗಳು ಕಳೆದರೂ ನಮ್ಮ ಹಳೆಯ ಮೊದಲ ಪ್ರೇಮದ ಸವಿ ನೆನಪಲ್ಲಿ ಕಿರುನಗೆ ಬೀರುತ್ತಿರುತ್ತೇವೆ. ಅದು ಬಹಳ ಸಾರಿ ಮೆಲುಕು ಹಾಕುತ್ತಲೇ ಇರುತ್ತದೆ. ಏಕೆಂದರೇ, ಅದು ಇಂದಿನದಕ್ಕಿಂತ ಚೆನ್ನಾಗಿತ್ತು ಎಂಬ ಒಳನಾದದ ಪರ್ಯಾಯ. ಅಲ್ಲಿ ನಾವು ಏನನ್ನು ಜಡ್ಜ್ ಮಾಡಿರಲಿಲ್ಲ. ಇದ್ದದ್ದನ್ನು ಹಾಗೆ ಸ್ವೀಕರಿಸುವ ಪ್ರಯತ್ನ ಮಾಡಿದ್ದೇವು. first impression is best impression ನೆನಪಾಗುವುದರ ಜೊತೆಗೆ, when you start judge a person you dont find time to love him ಎಂಬ ತೆರೆಸಾರ ಮಾತು ಕಿವಿಗೆ ಬೀಳುತ್ತದೆ. ಇದನ್ನೆ ಹದಿಹರೆಯದ ನಿಷ್ಕಲ್ಮಶ ಪ್ರೀತಿಯೆನ್ನಬಹುದು.

***
ಬೇರೆಯವರು ಕೈ ಹಾಕಿದಾಗ ಅದು ನನಗೆ ಬೇಕೆನಿಸುತ್ತದೆ
ಈ ವಯಸ್ಸೇ ಅಂತಹದ್ದು. ಪ್ರತಿನಿತ್ಯ ಒಡಾಡುವ ದಾರಿಯಲ್ಲಿ ಅದೊಂದು ಗಿಡ, ಅದರ ಎಲೆ ಮುಟ್ಟಿದ ನಂತರವೇ ಮುಂದಿನ ಪಯಣ ಸಾಗುವುದು. ಮೊದಲು ಆ ಗಿಡವನ್ನು ದೂರದಿಂದ ನೋಡಿ ಹೋಗುತ್ತಿದ್ದೆ. ನಂತರ ಹತ್ತಿರ ಬಂದು ಹೋಗಲಾರಂಭಿಸಿದೆ ಈಗ ಅದನ್ನೊಮ್ಮೆ ಮುಟ್ಟಿ ಹೋಗಲೇಬೇಕೆನಿಸುವಂತಾಗಿದೆ. ನಮ್ಮ ಸುತ್ತಲಿನ ಪರಿಸರವೂ ಅಷ್ಟೇ, ನಾವು ನೋಡು ನೋಡುತ್ತಾ, ಎಷ್ಟೋ ದಿನ ಜತೆಯಲ್ಲಿಯೇ ಒಂದೇ ಬಸ್ಸಿನಲ್ಲಿಯೇ ಒಡಾಡುತ್ತಿದ್ದರೂ ಎಂದೂ ಅವರನ್ನು ಮಾತನಾಡಿಸಿರುವುದಿಲ್ಲ. ಅವರೂ ನಮ್ಮೊಂದಿಗೆ ದಿನದಲ್ಲಿ ಭೌತಿಕವಾಗಿ ಕೆಲವು ನಿಮಿಷಗಳು ಜೊತೆಗಿದ್ದರೂ ಅವರ ಹೆಸರನ್ನೂ ಕೇಳುವ ಹಂಬಲ ನಮಗಿರುವುದಿಲ್ಲ. ಆದರೇ ಅವರು ಎಂದಾದರೊಮ್ಮೆ, ಬಾರದೆ ಹೋದರೇ, ಏಕೆ ಬಂದಿಲ್ಲವೆಂದು ಕೇಳಿ ತಿಳಿಯುವ ಬಯಕೆಯ ಜೊತೆಕೆ ಕಾತುರತೆಯೂ ಬೆರೆಯುತ್ತದೆ. ತನ್ನ ಜೊತೆಯಲ್ಲಿರುವ ಗೆಳೆಯನಿಗೆ ಹೇಳುತ್ತಾನೆ, ಅವಳು ಚೆನ್ನಾಗಿದ್ದಾಳೆ, ಸುಂದರವಾಗಿದ್ದಾಳೆ.ಅವಳಿಗೆ ಇಂಥಹ ಉಡುಪುಗಳು ಚೆನ್ನಾಗಿ ಹೊಂದುತ್ತವೆ. ಅವಳ ಕಣ್ಣಿನ ನೋಟ, ನಡೆ, ನಗು ಬಹಳ ಚೆನ್ನಾಗಿದೆ ಎಂದು ಹೆಳುತ್ತಿರುತಾನೆ. ಅದೆನೋ ಹಾಗೆಯೇ ಅವಳ ಮೇಲೆ ಅರಿಯದ ಒಂದು ಕೇರ್ ಬೆಳೆಯುತ್ತದೆ. ಗೆಳೆಯರೇನಾದರೂ "ಏನು ವಿಷಯ ವೆಂದರೆ" ಏನು ಇಲ್ಲ ಹಾಗೆ ಸುಮ್ಮನೆ ಒಳ್ಳೆ ಹುಡುಗಿ ಅಲ್ವಾ ಅದಕ್ಕೆ ಹೇಳಿದೆ ಅಷ್ಟೆ ಎನ್ನುತ್ತಿರುತ್ತಾನೆ. ಅವನಿಗೂ ಅಷ್ಟೆ ಅಲ್ಲಿ ಅಂಥಹ ಗಮನಿಸುವಂಥಹ ಯಾವ ಬೆಳವಣಿಗೆಗಳು ಇರುವುದಿಲ್ಲ. ಆದರೆ ಅವಳ ಬಗ್ಗೆ ಅವನಿಗೆ ಅರಿವಾಗದಂತೆ ಅವಳೆಡೆಗೆ ಒಲವು, ಸೆಳೆತ ಬರುವಂತೆ ಮಾಡುವುದೇ ಅವನ ಸುತ್ತಲಿರುವ ಪರಿಸರ.
ಸುಮ್ಮನೆ ಅವರಿಗೇನೋ ಕುತೂಹಲ ಮತ್ತು ಆಸಕ್ತಿ ಆದಿನದ ಟೈಮ್ ಪಾಸ್ಸ್ ಮಾಡಲು ಅವನು ಬೇಕೆಂಬುದು ಕೂಡ ಒಪ್ಪಲೇ ಬೇಕಾದ ವಿಷಯ. ಅವಳು ಎದುರಿರುವಾಗ "ನೋಡು ಮಗಾ ಅವಳು ನಿನ್ನನ್ನೆ ನೋಡ್ತಾಯಿದ್ದಾಳೆ, ಅವಳೇನೋ ನಾವು ಹೋದಕಡೆಯೆಲ್ಲಾ ಬರ್ತಾಳೆ" ಏನೋ ಇದೆ ಅಂತಾ ಹೇಳೋದೆ ತಡಾ.ಅದು ಮೊದಲ ಹಂತದ ಪ್ರೇಮಕ್ಕೆ ಅಡಿಪಾಯ ಹಾಕತೊಡಗುತ್ತದೆ, ಅವನು ಅವಳ ಬಗ್ಗೆ ಕನಸುಗಳನ್ನ ಹೆಣೆಯತೊಡಗುತ್ತಾನೆ. ಅವಳ ಬಗ್ಗೆ ಯೋಚಿಸತೊಡಗುತ್ತಾನೆ. ಅವಳ ಬಗೆಗಿನ ಎಲ್ಲಾ ವಿವರಗಳನ್ನು ಕಳೆಹಾಕತೊಡಗುತ್ತಾನೆ. ಅವನು ಅವಳ ಮುಂದೆ ನಾಯಕನಾಗಬಯುಸುತ್ತಾನೆ. ಅವನ ವರ್ತನೆ, ಉಡುಗೆ ತೊಡುಗೆಗಲೆಲ್ಲಾ ಬದಲಾಗತೊಡಗುತ್ತದೆ. ಅವಳಿಗೆ ನಾನು ಯಾವ ರೀತಿಯಿದ್ದರೆ ಚೆನ್ನಾಗಿ ಕಾಣಬಹುದು, ಹೇಗಿದ್ದರೆ ಅವಳನ್ನು ಸೆಳೆಯಬಹುದೆಂದು ಚಿಂತನೆ ನಡೆಸುತ್ತಾನೆ. ಅವಳನ್ನು ತನ್ನೆಡೆಗೆ ಆಕರ್ಷಿಸಲು ಇನ್ನಿಲ್ಲದ ಉಪಾಯಗಳನ್ನ ಹುಡುಕತೊಡಗುತ್ತಾನೆ. ಕಾಲೇಜಿಗೆ ಚಕ್ಕರ್ ಹಾಕಿ ಸಿನೆಮಾಗೆ ಹೋಗುತ್ತಿದ್ದ ಹುಡುಗ ಕ್ಲಾಸ್ ಇಲ್ಲದಿದ್ದರೂ ಕಾಲೇಜಿನಲ್ಲೇ ಕಾಲ ಕಳೆಯತೊಡಗುತ್ತಾನೆ.ಅವಳೊಮ್ಮೆ ನೋದಿದರೇ ಸಾಕು ಎಂಬಂತೆ ತನ್ನ ದಿನಗಳನ್ನೆಲಾ ಮೀಸಲಿಡುತ್ತಾನೆ. ತಾನು ಬಹಳ ವಿನಯವಂತನೆಂಬಂತೆ ವರ್ತನೆ ಬದಲಾಯಿಸುತ್ತಾನೆ. ಅವನು ಹೊಸ ಉಡುಪು ಧರಿಸಿದರಂತೂ ಮುಗಿದೇ ಹೋಯಿತು, ಅವಳು ನೋಡಲೇ ಬೇಕೆಂಬಂತೆ ಹುಡುಕತೊಡಗುತ್ತಾನೆ. ಅವಳ ದೃಷ್ಟಿ ತನ್ನೆಡೆಗೆ ಬೀರಿದರೇ ಧನ್ಯವೆಂಬಂತೆ ಹಾತೊರೆಯತೊಡಗುತ್ತದೆ ಅವನ ಮನಸ್ಸು. ಆದರೇ, ಅವನೆಂದು ಅವಳೊಡನೆ ಮಾತನಾಡಿರುವುದಿಲ್ಲ, ಅವಳ ಮನಸ್ಸೇನೆಂಬುದನ್ನು ಹತ್ತಿರದಿಂದ ಅರಿತಿರುವುದಿಲ್ಲ, ಆದರೂ ಪ್ರೀತಿಸತೊಡಗುತ್ತಾನೆ. ಒಂದು ದಿನ ಅವಳನ್ನು ಬೇರೆ ಹುಡುಗನೊಡನೆ ಕಂಡಾಗ ಏನೋ ಒಂದು ಬಗೆಯ ಕೋಪ ಕಾಣಿಸುತ್ತದೆ. ಅವನು ಅನುಭವಿಸುವ ಆತಂಕವನ್ನು ಯಾರ ಮುಂದೆಯೂ ಹೇಳಲಾಗುವುದಿಲ್ಲ. ಮತ್ತೆ ತನ್ನ ಸ್ನೇಹಿತರ ಸಹಾಯ ಬೇಡುತ್ತಾನೆ, ಯಾರದೆಂದು ತಿಳಿಯಲು, ಅವನು ಅವಳ ಪ್ರೇಮಿ ಅಂದದ್ದೆ ತಡ, ಮುಗಿಯಿತು ಅವನ ಇಷ್ಟು ದಿನದ ಸಂತೋಷದ ಕ್ಷ್ಣಣಗಳು ಅಂತಿಮತೆಗೆ ಬೀಳುತ್ತವೆ. ಮುಂದಿನ ಕರಾಳತೆಯನ್ನು ನೆನೆದು ಕಗ್ಗತ್ತಲು ಆವರಿಸುತ್ತದೆ. ಅವನು ಅವಳ ಪ್ರೇಮಿಯೆಂದು ತಿಳಿದರೂ, ಅವಳು ತನಗೆ ಸಿಗುವುದಿಲ್ಲವೆಂದು ಅರಿವಾದರೂ ಅವಳ ಬಗೆಗಿನ ಮೋಹ ಕಿಂಚಿತ್ತು ಕುಗ್ಗುವುದಿಲ್ಲ. ಏಕೆಂದರೆ, ಅದಾಗಲೇ, ಬೆಳೆದು ಹೆಮ್ಮರವಾಗಿರುತ್ತದೆ.ಮತ್ತದೇ ಹುಚ್ಚು ಕನಸುಗಳ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೊರಬಂದು ಬದುಕುವ ಶಕ್ತಿಯಿಲ್ಲ ಅಲ್ಲೇ ಇದ್ದು ಜಯಿಸುವ ಸಾಮರ್ಥ್ಯವೂ ಇಲ್ಲ. ಅವನು ಅವಳ ಪ್ರೇಮಿಯನ್ನು ದೂರ ಮಾಡಿ ತನ್ನೆಡೆಗೆ ಬರುವಂತೆ ಮಾಡುವ ಹುಮ್ಮಸ್ಸು ಪಾಪ ಅದು ಸಿನೆಮಾಗೆ ಮೀಸಲೆಂಬುದು ಅವನಿಗೂ ತಿಳಿದಿರುವ ಸತ್ಯ. ಆ ಧೈರ್ಯ ಮಾಡುವುದೂ ಇಲ್ಲ, ಅವಳನ್ನು ಮರೆಯುವ ಪ್ರಯತ್ನವನ್ನು ಮಾಡುವುದಿಲ್ಲ. ಯಾಕೆಂದರೇ ಅದು ಸದಾ ಹಸಿರಿರುವ ಪ್ರೀತಿ ಅಲ್ಲಿಗೆ ಯಾರು ಪ್ರೀತಿಯನ್ನೆರೆಯಬೇಕಿಲ್ಲ ಆದರೂ ಅದು ಬಾಡುವುದಿಲ್ಲ, ಬತ್ತುವುದೂ ಇಲ್ಲ. ಮೇಯಲು ಹೋದ ಹಸುವಿನ ಬರುವಿಗಾಗಿ ಕಾಯುವ ಕರುವಿನ ಹಾಗೆ ಆಗಿದ್ದಿದ್ದರೆ ಆ ಒಲವು ಹಸುವಿಗು ಇರುವುದರಿಂದ ಹಸುವು ತನ್ನ ಕರುವನ್ನು ಹರಸಿ ಬರುತ್ತಿತ್ತೆಂಬ ನಂಬಿಕೆಯಿರುತ್ತಿತ್ತು. ಆದರಿದು ಕಾಗೆ ಗೂಡಿನಲ್ಲಿರುವ ಕೋಗಿಲೆ ಮರಿಯ ಹಾಗೆ, ಕಾಗೆ ಇದು ನನ್ನದೇ ಮರಿಯೆಂದು ಪ್ರೀತಿಸಬೇಕೆ ಹೊರತು ಅದರೆದುರು ಹೇಳುವಂತಿಲ್ಲ. ಏಕೆಂದರೇ ಅದರ ಪ್ರೀತಿ ಅದಕ್ಕೆ ಅರ್ಥವಾಗುವುದೇ ಇಲ್ಲ.
ಹೌದು ನಾವು ತಪ್ಪು ಮಾಡುವುದೇ ಇಲ್ಲಿ, ಯಾರ್ಯಾರದೋ ಮಾತನ್ನು ನಂಬುತ್ತೇವೆ. ಅವರ ಮಾತುಗಳನ್ನು ಅಳೆದು ತೂಗುವ ಗೋಜಿಗೆ ಹೋಗುವುದಿಲ್ಲ. ಒಂದು ವಸ್ತುವನ್ನು ಅಥವಾ ಹುಡುಗಿಯನ್ನು ನಾವು ನೋಡಿದ ತಕ್ಷಣ ಬೇಕೆನಿಸುವುದಿಲ್ಲ. ಆದರೇ ಬೇರೆ ಯಾರಾದರೂ ಅದನ್ನು ತೆಗೆದು ಕೊಳ್ಳುತ್ತಾರೆಂದೊಡನೆ ಅದು ನಮಗೆ ಬೇಕೆನಿಸುತ್ತದೆ. ಅದು ನನ್ನದೇ ವಸ್ತು ಬೇರೆಯವರು ನನ್ನಿಂದ ಕಸಿಯುತ್ತಿದ್ದಾರೆಂಬ ಆತಂಕ ಗಗನ ಮುಟ್ಟುತ್ತದೆ. ಆದರೇ ಸಮಯವೆಂಬುದು ಬಹಳ ದೂರ ಸರಿದಿರುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸ ಪ್ರಯೋಜನವಿಲ್ಲ. ಆದರೇ ಅದರ ನೆನಪಿಗೆ ಕೊನೆಯಿಲ್ಲ.

ಆಕಾಶಕ್ಕೆ ಏಣಿ ಹಾಕ ಹೊರಟವರು..!
ನೀನು ನನ್ನನ್ನ ಅರ್ಥ ಮಾದಿಕೊಳ್ಳುವುದೇ ಇಲ್ಲ, ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನೀನು ಬದಲಾಗುವುದೂ ಇಲ್ಲ, ನಿನ್ನ ನಡುವಳಿಕೆ ನನಗಂತೂ ಕಿಂಚಿತ್ತೂ ಹಿಡಿಸುವುದಿಲ್ಲ. ಅದು ಏಕೆ ಹೀಗೆ ಮಾಡ್ತೀಯಾ, ಹೀಗೆಕೆ ನಡುಕೊಳ್ತೀಯಾ? ಇಷ್ಟೊಂದು ತೊಂದರೆ ಕೊಡ್ತೀಯಾ? ಇಷ್ಟುವರ್ಷದ ಜೀವನದಲ್ಲಿ ನನ್ನನ್ನ ಇಷ್ಟು ಯಾರು ನೋಯಿಸಿರಲಿಲ್ಲ. ಆದರೆ ನೀನು ನನಗೆ ತುಂಬಾ ನೊವು ಮಾಡಿಬಿಟ್ಟೆ. ಸಾಕು ಪ್ಲೀಸ್ ನನ್ನನ್ನ ಒಂಟಿಯಾಗಿ ಇರೊದಿಕ್ಕೆ ಬಿಡು. ನಿನ್ನ ಸಹವಾಸವೂ ಬೇಡ, ನಿನ್ನ ಪ್ರೀತಿಯೂ ಬೇಡ. ನಾನು ಬಹಳ ದೊಡ್ಡ ತಪ್ಪು ಮಾಡಿದೆ, ಅದಕ್ಕಾಗಿ ನನ್ನ ಜೀವನವನ್ನ ಬಲಿ ಕೊಟ್ಟೆ ಆದರೆ ಅದು ಜೀವನ ಪರ್ಯಂತ ನಡೆಯಬೇಕೆಂಬ ಆಸೆ ಇಲ್ಲ. ಇಂದಿಗೆ ಎಲ್ಲಾ ಮುಗಿದು ಹೋಗಲಿ. ಇನ್ನು ಮುಂದೆ ನೀನ್ಯಾರೋ, ನಾನ್ಯಾರೋ....ಹೀಗೆ ಅಲ್ಲಿಗೋಂದು ಪೂರ್ಣಸೂಚಕ ಚಿಹ್ನೆ ಇಡಬಹುದೆಂಬ ಬಯಕೆಯೂ ಇಲ್ಲದೆ ಹುಡುಗಿಯ ಮನಸ್ಸು ಒಂದೇ ಸಮನೆ ಸೋನೆ ಮಳೆಯ ಹಾಗೆ ಆರೋಪಗಳ ಸರಣಿಯೊಂದಿಗೆ ನುಗ್ಗುತ್ತಿದೆ. ನಂಬಿಕೆಯ ನೆರಳಿನಲ್ಲಿದ್ದವನು ಒಡನೆಯೇ ಎಲ್ಲವನ್ನು ಕದ್ದು ಪರಾರಿಯಾದ ಹಾಗೆ, ನೀರಿನಿಂದ ಹೊರಬಂದ ಮೀನಿನ ಹಾಗೆ ಮರುಕಪಡುತ್ತಿದೆ ಆ ಹೆಣ್ಣು ಜೀವ. ಎಷ್ಟೋ ವರ್ಷ ತನ್ನ ಜೊತೆಯಲ್ಲಿದ್ದ ಜೀವದ ಗೆಳೆಯ ಮೋಸ ಮಾಡಿದ ಹಾಗೆ, ಅಣ್ಣನೇ ಜೀವವೆಂದು ನಂಬಿದ್ದವನು ದಾಯಾದಿಯಾದ ಹಾಗೆ, ಸಾಮಾನ್ಯವಾಗಿ ಪ್ರೀತಿಸುವಾಗ ಆತುರಬಿದ್ದು, ಯಾವುದೋ ಒತ್ತಡಕ್ಕೆ ಮಣಿದು ಕಾಡುವ ಮನಸ್ತಾಪಗಳೇ ಈ ಮೇಲಿನ ಸಾಲುಗಳಾಗಿ ಹರಿಯುತ್ತಿವೆ. ಅಲ್ಲಿನ ಬೇಡಿಕೆ “ಅರ್ಥ ಮಾಡಿಕೊಳ್ಳುವುದೆಂದು, ಅಂಡರ್ ಸ್ಟ್ಯಾಂಡಿಗ್” ಯಾವುದೋ ನೀತಿ ನಿಯಮಗಳ ಮೇಲೆ ಬದುಕುವುದೇ ಅವನ ಜೀವನ. ಅವನು ಈಡಿ ಜಗತ್ತೇ ಒಂದು ಎಂದು ಯೊಚಿಸಿ ನಡೆಯುವ ತರುಣ. ಒಂದು ಹುಡುಗಿಯೆ ತನ್ನ ಜೀವನವಲ್ಲ, ಪ್ರಪಂಚವಲ್ಲ, ಅವಳು ತನ್ನ ಜೀವನದ ನಾಟಕದಲ್ಲಿ ಬಂದು ಹೋಗುವ ಒಂದು ಪ್ರಮುಖ ಪಾತ್ರಗಳಲ್ಲಿ ಒಂದು. ಅವಳಿಗಾಗಿ ತನ್ನ ಗುರಿ, ಯಶಸ್ಸು, ಕೀರ್ತಿ, ಸಮಯವನ್ನು ವ್ಯರ್ಥಮಾಡುವಷ್ಟು ಮೂರ್ಖ ತಾನಲ್ಲವೆಂಬ ಅರಿವು. ತನ್ನ ಜೀವನದ ಕನಸು, ಈ ಬದುಕು ತನ್ನ ತಂದೆ ತಾಯಿಯರ ಆಸರೆಯ ಬಿಕ್ಷೆ, ಅವರಿಂದ ಬಳುವಳಿ ಪಡೆದದ್ದು. ಪೋಷಕರ ನೆರವಿಲ್ಲದಿದ್ದರೆ ತಾನು ಈ ಮಟ್ಟದಲ್ಲಿರುತ್ತಿರಲಿಲ್ಲ, ತಾನಾರೆಂಬ ಅರಿವು ಈ ಜಗತ್ತಿಗೆ ಮುಟ್ಟುತ್ತಿರಲಿಲ್ಲ, ಅವರಿಲ್ಲದಿದ್ದರೆ ತನ್ನ ಬಾಳೆಂಬುದು ಇರುತ್ತಲೇ ಇರಲಿಲ್ಲ. ತಾನು ಹೀಗಿಲ್ಲದಿದ್ದರೇ ಅವಳು ನನ್ನನ್ನು ಪ್ರೀತಿಸುತ್ತಲೂ ಇರಲಿಲ್ಲ.
ನನಗೆ ಅವಳ ಪ್ರೀತಿ ಜೀವನ ಪರ್ಯಂತ ಸಿಗಬೇಕು, ಅವಳೇ ನನ್ನುಸಿರಿನಂತಾಗಿ ಬದುಕಬೇಕು, ಅದು ಇಂದಿಗೆ ಕೊನೆಯಾಗಬಾರದು. ಅವಳು ನನ್ನೊಡನಿರಬೇಕೆಂದರೆ ನಾನು ಅವಳನ್ನು ಮದುವೆಯಾಗಬೇಕು, ಮದುವೆಯೆಂದರೇ ತಮಾಷೆಯ ಮಾತಾಯಿತೆ? ಯಾವ ತಂದೆಯಾದರೂ ತನ್ನ ಮಗಳು ಯಾರು ಹೇಳ ಹೆಸರಿಲ್ಲದವನನ್ನು ಮದುವೆಯಾಗಲು ಒಪ್ಪುವರೇ? ಕೀರ್ತಿ, ಹಣ, ಹೆಸರು ಎಲ್ಲವೂ ಇದ್ದರೇ ಜಾತಿಯೆಂಬ ಬೇಲಿಯನ್ನು ಜಿಗಿದು ಬರಬಹುದು. ಅವನ ಸರ್ವಸ್ವವೂ ಚೆನ್ನಾಗಿದ್ದರೂ ಅವನ ಆರ್ಥಿಕ ಸ್ಥಿತಿ ಬಹಳ ಪ್ರಾಮುಖ್ಯತೆ ಹೊಂದುತ್ತದೆ. ಅದು ಸತ್ಯವೂ ಕೂಡ ಹಣವಿಲ್ಲದಿದ್ದರೆ ಬದುಕುವುದೆಂತೂ? ಬದುಕದಿದ್ದರೆ ಪ್ರೀತಿಸುವುದೆಂತೂ? ಪ್ರಾಯದಲ್ಲಿ ಪ್ರೀತಿಸುವ ಕಾತುರದಲ್ಲಿ, ಆಕಾಶಕ್ಕೆ ಏಣಿ ಹಾಕುವ ಆಸೆ ಸರ್ವೇ ಸಾಮಾನ್ಯ. ಅಪ್ಪನ ಹಣದಿಂದ ಶ್ರೀಮಂತಿಕೆ ರುಚಿ ಹತ್ತಿಸಿದರೂ, ಅದು ಶಾಶ್ವತವಾಗಲೂ ಸಾಧ್ಯವೇ ಇಲ್ಲ, ಅದೆಲ್ಲಾ ತಾತ್ಕಾಲಿಕವೆಂಬುದು ಅರಿವಿರುವ ಎಲ್ಲರ ಅಭಿಪ್ರಾಯ. ಪ್ರೀತಿ ಪ್ರೇಮವೆನ್ನುವುದು ಕೇವಲ ಕಾಲ್ಪನಿಕ, ಮತ್ತು ತಾತ್ಕಾಲಿಕ ಉಪಶಮನವಷ್ಟೆ. ತನ್ನ ಸುತ್ತಲಿನ ಪರಿಸರ, ಬಳಗ ಅವನಿಗೆ ಪ್ರೀತಿಯ ಕೊರತೆ ನೀಡಿದಾಗ ಮಾತ್ರ ಅದು ಅವಳ ಆಂತರ್ಯವನ್ನು ಬಯಸುತ್ತದೆ, ಅವಳ ಜಗತ್ತೆನಿಸುತ್ತದೆ. ಆದರೆ ನಾನೆ ಜೀವನೆವೆಂದು ಪ್ರೀತಿಸುವ ತಾಯಿ, ನನಗಿಂತ ಒಳ್ಳೆಯ ಸ್ನೇಹಿತನಿಲ್ಲವೆಂಬ ಮನಸುಳ್ಳ ಅಪ್ಪ, ಅಣ್ಣನೇ ದೇವರೆನ್ನುವ ತಂಗಿ, ತಮ್ಮನ ಗುಣವೇ ಬಂಗಾರವೆನ್ನುವ ಅಕ್ಕ, ನಿನಗಿಂತ ನನ್ನ ಜೀವನವೇನು ಎನ್ನುವ ಸ್ನೇಹಿತರು. ಅದಕಿಂತ ಹೋದಲ್ಲಿ ಬಂದಲ್ಲಿ ಎಲ್ಲರನ್ನು ಸ್ನೇಹಿತರನ್ನಾಗಿಸಿಕೊಳ್ಳುವ, ತಾರತಮ್ಯವಿಲ್ಲದ ಮನಸ್ಸು. ಇಷ್ಟೆಲ್ಲ ಇರುವ ಹುಡುಗನಿಗೆ, ಅವಳೊಬ್ಬಳೇ ಬದುಕು ಎಂದು ಅವಳ ಹಿಂದೆ ಸುತ್ತಾಡಿ ಜಪ ಮಾಡಲು ಸಾಧ್ಯವೇ?

ಅವಳು ಕೇಳುವುದೇನು? ನನಗೆ ನಿನ್ನ ಜೀವನದಲ್ಲಿ ಪ್ರಮುಖ ಸ್ಥಾನ ನೀಡು, ನಾನೆ ನಿನಗೆಲ್ಲಾ ಆಗಬೇಕು, ಮರ್ಯಾದೆ, ಘನತೆಗಳು, ಹೇಳಿ ಕೇಳಿ ಪಡೆಯುವ ವಸ್ತುಗಳಾ? ಅದು ಅವರವರ ಆತ್ಮಸಾಕ್ಷಿಗೆ ಬಿಟ್ಟವಿಚಾರ, ಅವರ ವಿವೆಚನೆಗೆ ಸೇರಿದ್ದು. ನೀನು ನನ್ನನ್ನು ಇಷ್ಟೇ ಪ್ರೀತಿಸಬೇಕೆಂಎದರೇ ಅಳೆದು ತೂಗಿ ಪ್ರೀತಿಸಲು ಅದೇನು ಪ್ರೀತಿಯಾ ದಿನಸಿಯಾ? ಪ್ರೀತಿಗೆ ತನ್ನ ಸ್ಥಾನಗಳಿಸುವ ಎಲ್ಲಾ ಶಕ್ತಿಯಿದೆ.
ತಮ್ಮ ಕೆಲಸಗಳುನ್ನು ಯಾವುದೆ ಕೋರಿಕೆಗಳಿಲ್ಲದೆ ಮಾಡಿದ್ದಲ್ಲಿ, ಅದರ ಫಲ ನಿಮ್ಮದಾಗುತ್ತದೆ. ಇದು ಪ್ರೀತಿಯ ವಿಚಾರದಲ್ಲು ಅಷ್ಟೆ, ಪ್ರೀತಿಸುವವರ ಸದಾನಂದಕ್ಕೆ, ಚಿರನಗುವಿಗೆ ಶ್ರಮಿಸುವುದೇ ನಿಜವಾದ ನೈಜ ಪ್ರೀತಿ. ತನ್ನ ಪ್ರೇಮಿಯ ನಗು, ಸುಖ, ಯಶಸ್ಸು, ಗೆಲುವಿನಲ್ಲಿ ಯಾರು ತನ್ನ ಪ್ರೀತಿಯ ಪತಾಕೆ ಹಾರಿಸುತ್ತಾರೋ ಅವರೇ ನಿಜವಾದ ಪ್ರೇಮಿಗಳು. ಪ್ರೀತಿಯಿರುವುದು ಶಕ್ತಿ ತುಂಬಿ ಗೆಲ್ಲಲೇ ಹೊರತು ಕಾಲಹರಣ ಮಾಡಿ ಕೊಲ್ಲಲಲ್ಲ....
***
ಮೆಂಟಾಲಿಟಿ ಅರ್ಥವ ಹುಡುಕಿದರೆ?
ಆಗ್ಗಾಗ್ಗೆ, ನಮ್ಮ ಕಿವಿಗೆ ಬೀಳುವ ಒಂದು ಪದವೆಂದರೆ, ಮನಸ್ಥಿತಿ, ಇಂಗ್ಲಿಷನಲ್ಲಿ ಹೇಳಬೇಕೆಂದರೆ, ಮೆಂಟಾಲಿಟಿ. ದಿನಕ್ಕೆ ಕಡಿಮೆಯೆಂದರೂ ಒಂದು ಹತ್ತು ಬಾರಿಯಾದರೂ ಹೇಳಿರುತ್ತೇವೆ, ಇಲ್ಲಾ ಕೇಳಿರುತ್ತೇವೆ. ಇಬ್ಬರೂ ಪರಸ್ಪರ ಮಾತನಾಡಿಕೊಳ್ಳುತ್ತಾ ಮೂರನೆಯವರ ವಿಷಯ ತೆಗೆದರೆ ಮುಗಿದೇ ಹೊಯಿತು, ಅವರೇ ಹತ್ತಾರು ಬಾರಿ ಉಪಯೊಗಿಸುತ್ತಾರೆ ಆ ಪದದ ಮಹಿಮೆಯೇ ಅಂಥಹದ್ದಿರಬೇಕು. ಅವನ ಮೆಂಟಾಲಿಟಿನೇ ಸರಿಯಿಲ್ಲಾ ರೀ, ಓಂಥರಾ ಮೆಂಟಾಲಿಟಿ ರೀ, ತುಂಬಾ ಚೀಪ್ ಮೆಂಟಾಲಿಟಿ ರೀ, ಅದೆಷ್ಟು ಕೆಟ್ಟ ಮೆಂಟಾಲಿಟಿನಪ್ಪ ಹೀಗೆ ಒಂದು ಕಡೆಗಾದ್ರೆ, ಇನ್ನೋಂದು ಕಡೆಗೆ, ಹೇ ಅವನು ಬಿಡಪ್ಪ ಕ್ಲಾಸ್ ಮೆಂಟಾಲಿಟಿ ತುಂಬಾ ಬೋಲ್ಡ್, ಡೇರ್ ಆಗಿ ಯೋಚಿಸ್ತಾನೆ ಹೀಗೆ ಒಳ್ಳೆದಕ್ಕೂ ಸರಿ ಕೆಟ್ಟದಕ್ಕೂ ಸರಿ ಅನ್ನೋ ರೀತಿಯಲ್ಲಿ ಬಳಸ್ತಾ ಇರ್ತಿವಿ ಈ ಪದವನ್ನ.
ಇದು ಪ್ರೇಮಿಗಳ ವಿಷಯಕ್ಕೆ ಬಂದಾಗ ಕಷ್ಟವೆನಿಸುತ್ತದೆ, ಒಬ್ಬ ವ್ಯಕ್ತಿಗೆ ಏನಾದರೂ ಸಿಗಬೇಕೆಂದರೇ ಅಥವಾ ಸಾಧಿಸಬೇಕಾದರೆ ತಾಳ್ಮೆಯೆಂಬೌದು ಬಹಳ ಮುಖ್ಯವಾಗುತ್ತದೆ. ಆ ತಾಳ್ಮೆ ಪಡೆಯಲು ಅವನೇನು ಹಿಮಾಲಯಕ್ಕೆ ಹೋಗಿ ತಪಸ್ವಿಯಾಗಬೇಕಾಗಿಲ್ಲ, ನಿಜವಾದ, ನೈಜವಾದ ಪ್ರೀತಿಯನ್ನು ಒಂದು ಹುಡುಗಿಯ ಬಳಿ ಪಡೆಯಲು ಹೋದರೇ ಸಾಕು, ಹುಡುಗಿಯರು ಬಹಳ ಬುದ್ದಿವಂತರು. ನೋಡಿದ ತಕ್ಷಣ ಮಾರುಹೋಗುವ ಹುಡುಗರಂತಲ್ಲ ಅವರು. ತಾಳ್ಮೆಯ ಪ್ರತೀಕವೇ ಇವರೆಂದರೆ ಉತ್ಪ್ರೇಕ್ಷೆಯಲ್ಲ. ಹುಡುಗಿ ಎಂದಿಗೂ ತನ್ನ ಮನಸಲ್ಲಿ ಬೇರೆಯವರಿಗೆ ಸುಮ್ಮನೆ ಜಾಗ ನೀಡುವುದಿಲ್ಲ. ಕೊಟ್ಟರು ಅದು ಸಂಪೂರ್ಣತೆ ಹೊಂದಿರುವುದಿಲ್ಲ. ಕೊಟ್ಟಿದ್ದಾಳೆಂದರೇ ಅದು ನಿಮ್ಮ ಮೂರ್ಖತನದ ಪರಮಾವಧಿ. ಪ್ರೇಮ ಕಥೆಗಳು ಮುರಿದು ಬೀಳುವಲ್ಲಿ ಬಹುಪಾಲು ಹುಡುಗಿಯರದ್ದೇ ಪ್ರಾಮುಖ್ಯತೆ ಹೊಂದಿರುತ್ತದೆ.
ಅವನು ಅವಳನ್ನು ನೋಡು ನೋಡುತ್ತಾ, ಅವಳ ಅಂದ ಸೌಂದರ್ಯಕ್ಕೆ ಬೆರಗಾಗಿ, ಪ್ರೀತಿಸಲು ಕೋರಿ ಅರ್ಜಿ ಹಾಕಿದ ಅಷ್ಟೆ, ಅದು ಅವಳಿಂದ ಪಾಸಾಯಿತು. ಅವಳು ಅವನೊಡನೆ ಸೇರಿ ಸುತ್ತಾಡಿದಳು, ಖುಷಿಪಟ್ಟಳು, ಅನುಮಾನಿಸಿದಳು, ಕೋಪಗೊಂಡಳು. ಅವನ ಪ್ರೀತಿ ಮೊದಲನೇ ದಿನದಿಂದ ಇಂದಿನವರೆಗೂ ಕುಗ್ಗಲೇ ಇಲ್ಲ, ವೃದ್ದಿಸತೊಡಗಿತು. ಏಕೆಂದರೆ, ಅವನು ಅವನ ಪ್ರೀತಿಯಲ್ಲಿ ಅವನಿಗಿಂತ ನಂಬಿಕೆಯಿತ್ತು, ಅದು ದೈವಿಕ ಪ್ರೀತಿಯೆಂಬ ಧೈರ್ಯ ಅವನೊಳಗಿತ್ತು. ಪ್ರೀತಿಸಲು ಅರ್ಜಿ ಹಾಕಿದ ದಿನವೇ ಅವನು ಜಗತ್ತನ್ನೆ, ಗೆದ್ದಷ್ಟು ಸಂಬ್ರಮದಲ್ಲಿದ್ದ. ಅವನು ಬಯಸಿದ್ದು, ನೂರಾರು ಕಲ್ಪನೆಗಳ, ಭಾವನೆಗಳ, ಉಸಿರಲ್ಲಿ ಹಸಿರಾಗುವ ಪ್ರೀತಿ. ಆ ಕ್ಷಣದಿಂದಲೇ ಅವಳೆ ಅವನ ಜಗತ್ತಾದಳು.ತನ್ನ ಬದುಕು, ಬದುಕಿಗೆ ಸ್ಪೂರ್ತಿ, ಜೀವ, ಕನಸು, ಎಲ್ಲವೂ ಅವಳೆ ಎಂದು ನಿರ್ಧರಿಸಿಯು ಬಿಟ್ಟ. ತನ್ನ ಬಳಗದವರಿಗೆಲ್ಲಾ ಹೇಳಿಯೂ ಬಿಟ್ಟ ಅವಳೆ ನನ್ನ ಬದುಕು, ನನ್ನ ಮುಂದಿನ ಬದುಕೇನಿದ್ದ್ರೂ ಅವಳೊಂದಿಗೆ ಮಾತ್ರ. ಅವಳೆ ನನ್ನ ಜೀವದ ಗೆಳತಿ, ಅವಳಿಲ್ಲದ ಬಾಳು ಮುಗಿದೇ ಹೋಯಿತು. ಹೀಗೆ ಕನಸಿನ ಗೋಪುರದ ಚಿತ್ರಣ ತನ್ನ ಸುತ್ತಲಿನ ಎಲ್ಲರಿಗೂ ಅರಿವಾಗುವಂತೆ ಮಾಡತೊಡಗಿದ. ಆದರೇ, ತಾನೊಂದು ಬಗೆದರೆ, ವಿಧಿಯೊಂದು ಬಗೆದೀತು, ಅವಳು ಯಾರ ಬಳಿಯು ಇವನ ಬಗ್ಗೆ ಹೇಳಿಯೂ ಇಲ್ಲ, ಯಾರಾದರೂ ಕೇಳಿದರೂ, ಅವನು ನನ್ನ ಪರಿಚಯಸ್ಥ ಅಷ್ಟೆ. ನನ್ನೊಬ್ಬ ಸ್ನೇಹಿತ ಅದಕಿಂತ ಹೆಚ್ಚೇನು ಇಲ್ಲ ನನಗೆ ಆ ರೀತಿಯಲ್ಲಿ, ಈ ಪ್ರೀತಿಯಲ್ಲಿ ನಂಬಿಕೆಯಿಲ್ಲ. ಅವಳಿಗೆ ಮುಂದಾಲೋಚನೆಯೆಂಬುದು ರಕ್ತದಿಂದಲೇ ಬಂದಿದೆ. ಹೆಣ್ಣು ಸದಾ ಮುಂದಿನ ಪೀಳಿಗೆಯವರೆಗೂ ಯೋಚಿಸುತ್ತಾಳೆ, ಅಲ್ಲಿ ಅಭದ್ರತೆಗೆ ತಾವಿಲ್ಲ, ಎಲ್ಲವೂ ಸ್ವಚ್ಚವಾಗಿ, ಸ್ಪುಟವಾಗಿರಬೇಕು. ಅದು ಅವಳ ಪೂರ್ವನಿಯೋಜಿತ ಯೋಜನೆಯೂ ಆಗಿತ್ತು. ಆದರ ಆ ಅಮಾಯಕ, ಪ್ರಾಮಾಣಿಕ ಪ್ರೇಮಿಗೆ ಇದರ ಯಾವ ಸುಳಿವು ಸಿಕ್ಕಿರಲಿಲ್ಲ,ಅಲ್ಲಿ ಅನುಮಾನಕ್ಕೆ ಸ್ಥಳ ಕೊಡುವ ಸಮಯವೇ ಇರಲಿಲ್ಲ, ಅಥವಾ ಅವಶ್ಯಕತೆಯೂ ಇರಲಿಲ್ಲ.ಕಾಲ ಕ್ರಮೇಣ ಅವಳ ಮನಸ್ಥಿತಿ ಬದಲಾಗತೊಡಗಿತ್ತು, ಅಥವಾ ಅವಳ ನಡುವಳಿಕೆಯೆ ಬದಲಾಯಿತೊ, ಅಂತೂ ಅವರ ಪ್ರೇಮದ ತಿರುವುಗಳು ಬದಲಾದವು.
ಅವಳ ದಿನನಿತ್ಯ ಅವನ ಬದಲಾವಣೆಗೆ ಒತ್ತು ನೀಡತೊಡಗಿದಳು, ಅವನ ನಡೆ, ನುಡಿ, ಉಡುಪು, ಎಲ್ಲವನ್ನು ಬದಲಾಯಿಸಲು ಹವಣಿಸಿದಳು. ಇಲ್ಲಸಲ್ಲದ ತರ್ಕಗಳ ಸುರಿಮಳೆ ಉಂಟಾಯಿತು ಅದು ನಿರಂತರವಾಗತೊಡಗಿತು. ನಿನ್ನ ಜೀವನದಲ್ಲಿ ಅಭಿರುಚಿಯೆಂಬುದಿಲ್ಲವೆನ್ನುವ ತೀರ್ಮಾನ ಅವಳ ಮನಸ್ಸಿನಲ್ಲಿ ಮೂಡಿ ಅದು ಹೆಮ್ಮರವಾಗಿತ್ತು.
ಆ ಹುಡುಗ ತನ್ನತನವನ್ನು ಬಿಟ್ಟು, ಅವಳ ಹೇಳಿಕೆಗನುಗುಣವಾಗಿ, ಬದಲಾಗತೊಡಗಿದ. ಅವನು ತನ್ನ ಬಗೆಗಿನ ಈ ಕಾಳಜಿ ಹಿಂದಿನ ದುರುದ್ದೇಶವನ್ನು ಅರಿಯಲು ವಿಫಲನಾದ. ತನ್ನಂತೆಯೇ ಅವಳು ತನ್ನನ್ನು ಅವಳ ಮಟ್ಟಕ್ಕೇರಿಸಲು ಪ್ರಯತ್ನಿಸುತ್ತಿದ್ದಾಳೆಂದು ಭಾವಿಸಿದ.ನಾನು ಅವಳಲ್ಲಿರುವ ಕೆಟ್ಟತನಗಳನ್ನು ದೂರವಿಡಲು ಪ್ರಯತ್ನಿಸುವ ಹಾಗೆ ಅವಳು ನನ್ನಲ್ಲಿನ ಕೆಟ್ಟತನವನ್ನು ಬದಲಾಯಿಸ ಹೊರಟಿದ್ದಾಳೆಂದು, ಅದು ಸರಿಯೆಂದು ತೀರ್ಮಾನಿಸಿದ. ನನ್ನ ಪ್ರೀತಿಗಾಗಿ ಇಷ್ಟೆಲ್ಲಾ ಮಾಡುವಾಗ ನಾನು ಬದಲಾಗುವುದರಲ್ಲಿ ತಪ್ಪೇನು ಬದಲಾವಣೆ ಜಗದ ನಿಯಮ ಅದು ನನ್ನಯ ಗೆಳತಿಗಾದರೆ ಒಲಿತೆಂದ. ಅವಳೆ ನನ್ನ ಜೀವನವೆಂದ ಮೇಲೆ ಅವಳು ಹೇಳಿದಂತೆ ಬದುಕುವುದರಲ್ಲಿ ತಪ್ಪೇನು? ಅದು ಅಮೃತ ಘಳಿಗೆಯೆಂದು ಬಗೆದು ಬದಲಾವಣೆಗೆ ಸಿದ್ದನಾದ. ಆದರೇ ಕಾಲವೆಂಬುದು ಮರಳಿ ಅವನ ಬಾಳಿಗೆ ದುಃಖದ ದಿನಗಳನ್ನ ಹೊತ್ತು ತಂದು ಬಿಟ್ಟಿತು. ಆ ದಿನ ಕೂಡಿ ಬಂತು, ನೀನು ನನ್ನ ಸ್ನೇಹಿತನಷ್ಟೆ, ಅದನ್ನು ನೀನು ತಪ್ಪಾಗಿ ಅರ್ಥೈಸಿಕೊಂಡರೆ ನೀನು ಹೊಣೆ ನಾನಲ್ಲ. ಸರಳ ಮತ್ತು ನೇರ ಉತ್ತರ ಅಂತೂ ದೊರಕಿತವನಿಗೆ. ಅವನಿಗೆ ಈಗ ಅವಳ ಒಂದೊಂದು ಪೂರ್ವನಿಯೋಜಿತ ಯೊಜನೆಗಳ ಸುಳಿವುಗಳು ಬಿಡಲಾರಂಬಿಸಿದವು. ಅವನಲ್ಲಿ, ಬಯಸಿದ್ದ ಬದಲಾವಣೆ, ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡುವಾಗ ಅಲ್ಲಿನ ಆಂತರಿಕ ವಾಸ್ತುವನ್ನು ನಮಗೆ ಹೊಂದುವಂತೆ ಬದಲಾಯಿಸುವ ಒಂದು ಚಿಕ್ಕ ಯೋಜನೆಯಷ್ಟೆ. ಅವಳು ಅಷ್ಟು ದಿನ ಉಪಯೋಗಿಸಿದ್ದು ಬಾಡಿಗೆ ಮನೆಯನ್ನು, ಅಲ್ಲಿ ಅವಳಿಗೆ ಬೇಕಾದ ರೀತಿಯಲ್ಲಿ ಅವಳು ಬದಲಾಯಿಸಿದಳು. ತಾನು ಜೊತೆಯವರೊಡನೆ ಓಡಾಡುವಾಗಲೂ ತನ್ನ ಸ್ನೇಹಿತ ಹೀಗೆ ಇರಬೇಕೆಂದು ಬಯಸಿದ್ದಳು. ಸಂಪೂರ್ಣವಾಗಿ ಬಳಸಿಕೊಂಡಳು, ಮನೆ ಖಾಲಿ ಮಾಡಿ ಸ್ವಂತ ಮನೆಗೆ ಹೋಗುವಾಗ ಬಾಡಿಗೆ ಮನೆ ಬಿಡುವುದು ಸಾಮಾನ್ಯ, ಅಲ್ಲಿ ಕೊರೆದ ಗೋಡೆಗಳು, ಗಲೀಜುಗಳೆಲ್ಲಾ ನೆನಪುಗಳು, ಅದು ಕಹಿನೆನಪಾದರೂ ಸರಿಯೆ, ಸಿಹಿಯಾದರೂ ಸರಿಯೇ, ಅದು ವಾಸ್ತವವಂತು ಅಲ್ಲ. ಕೊನೆಯ ಪದವೊಂದೆ ಅವಳ ಬಳಿ ಉಳಿದದ್ದು, ನಿನ್ನ ಮೆಂಟಾಲಿಟಿ ನನಗೆ ಹೊಂದಲಿಲ್ಲ, ಆದ್ದರಿಂದ, ನಾನು ನೀನು ಇಬ್ಬರೂ ಸಂತೋಷವಾಗಿರುವುದಿಲ್ಲ, ಒಬ್ಬ ಹುಡುಗ ಬೇರೆಯವರಿಗಾಗಿ ತನ್ನತನವನ್ನು ಬಿಟ್ಟು ನಿಲ್ಲುತ್ತಾನೆಂದರೆ, ಸ್ವಾಭಿಮಾನವಿಲ್ಲದ ಹುಡುಗನನ್ನು ಪ್ರೀತಿಸಲು ನನ್ನ ಮನಸ್ಸು ಒಪ್ಪುವುದಿಲ್ಲವೆಂದಳು.
ಇದೊಂದೆ ಮಾತು ಸಾಕಾಯಿತು ಜ್ನಾನೋದಯವಾಗಲು, ತನ್ನೊಳಗೆ ಹೇಳಿಕೊಂಡ, ಯಾವಾಗ ತನ್ನತನವನ್ನು ಬಿಟ್ಟು ಹೋಗುತ್ತೇವೋ ಆಗ ಮರ್ಯಾದೆಯೆಂಬುದು ನಮ್ಮನ್ನು ಬಿಟ್ಟು ಬಹುದೂರ ಹೋಗಿರುತ್ತದೆ. ನಮ್ಮ ಪಾತ್ರವನ್ನು ನಾವೇ ನಿಭಾಯಿಸಬೇಕು, ಬೇರೆಯವರ ಪಾತ್ರ ನಾವು ಮಾಡಲು ಹೋದರೆ ಅವರ ಪಾತ್ರಕ್ಕೂ ನ್ಯಾಯ ದೊರಕದು, ನಮ್ಮ ಪಾತ್ರಕ್ಕೂ ದೊರಕದು. ನಮ್ಮತನವನ್ನು ಮೆರೆದು ಬದುಕುವವನೇ ನಿಜವಾದ ನಾಗರೀಕ,ಅವರವರ ಮನಬಂದಂತೆ ನಡೆದುಕೊಳ್ಳಬೇಕು. ಅದನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ, ಆ ಪ್ರಯತ್ನ ಯಾರೂ ಮಾಡಬಾರದು, ಮತ್ತು ಅದಕ್ಕೆ ಮಣೆ ಹಾಕಲೂ ಬಾರದು. ನ್ಯಾಯಸಮ್ಮತವಾದ ಪ್ರತಿ ಬದುಕು ಅರ್ಥಪೂರ್ಣ ಅಲ್ಲಿ ಮೆಂಟಾಲಿಟಿ ಮುಖ್ಯವಲ್ಲ ಪ್ರೀತಿಸುವ ಮನಸ್ಸು ಮುಖ್ಯ.
No one can play your role better than you, try to be yourself in your life.
***
ಪ್ರೀತಿ, ಅನುಭವವೋ? ಪ್ರಯೋಗವೋ?
ಮನುಷ್ಯನಂತ ಸೋಮಾರಿ ಪ್ರಾಣಿ ಮತ್ತೊಂದಿಲ್ಲವೆನಿಸುತ್ತದೆ, ತಾನು ಸುತ್ತಮುತ್ತಲಿನ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲಾಗದಾಗ, ಪರಿಸರವೇ ತನ್ನಂತೆ ಬದಲಾಗಲೆಂದು ಬಯಸುತ್ತಾನೆ. ಸಾಧ್ಯವಾಗದಿದ್ದಲ್ಲಿ ಅನಿವಾರ್ಯತೆ ಬಂದಾಗ ಅವನೇ ಬದಲಾಗುತ್ತಾನೆ ಅದು ಸರಿಯೂ ಇರಬಹುದು.ಈ ಮಾತು ಪ್ರೀತಿಸುವ ಎರಡು ಮನಸ್ಸಿಗೂ ಹೊರತಲ್ಲ. ಸದಾ ಜೊತೆ ಬಯಸುತ್ತಲೇ ಇರುತ್ತವೆ. ನಾನು ಇದರ ಕುರಿತು ಹಿಂದೆಲ್ಲಾ ಬಹಳ ಸಾರಿ ಹೇಳಿದ್ದೇನೆ. ಪ್ರೀತಿಸುವ ಯುವ ಜೋಡಿಗಳನ್ನು ಗಮನಿಸಿ ನೋಡಿ, ಒಬ್ಬ ಸ್ನೇಹಿತನೆಂದು ಪ್ರೀತಿಸಲು ಹೊಗಿರುವುದಿಲ್ಲ, ಅವನಿಗೊಬ್ಬ ಸೇನಾಧಿಪತಿ ಬೇಕೇ ಬೇಕು. ಹುಡುಗಿಗೂ ಅಷ್ಟೆ, ಅವಳೊಬ್ಬಳೇ ಹೋಗುವುದೇ ಇಲ್ಲ. ಮೊದಲು ಒಂಟಿಯಾಗಿ ಬರುತ್ತಿದ್ದರೂ ನಂತರ ಹೋದಲ್ಲಿ ಬಂದಲ್ಲೆಲ್ಲಾ ಅವನ ಜೊತೆಗೆ ಒಬ್ಬ ಸ್ನೇಹಿತ ಬಂದೇ ಬರುತ್ತಾನೆ ಅಥವಾ ಅವನೇ ಕರೆದು ತರುತ್ತಾನೆ. ಅವಳ ಜೊತೆಯಲ್ಲಿಯೂ ಅಷ್ಟೆ, ಒಬ್ಬ ಸ್ನೇಹಿತೆಯಿದ್ದೆ ಇರುತ್ತಾಳೆ. ಇದು ಕಾಕತಾಳಿಯವೋ? ಅಥವಾ ಉದ್ದೇಶಪೂರ್ವಕವೋ? ಅವರಿಬ್ಬರ ಜೊತೆಗಾರರೂ ಜೋಡಿಹಕ್ಕಿಯಾಗಬಯಸುತ್ತಾರೆ, ಆಗಿಯೂ ತೀರುತ್ತಾರೆ. ವಿಪರ್ಯಾಸವೆಂದರೆ,ಆ ಪ್ರೀತಿಯ ಉಗಮದ ವಿಷಯ,ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದಾದರೂ ಹೇಗೆ? ಪ್ರೀತಿ ಬೆಳೆದಾದರೂ ಹೇಗೆ? ಅವಳು ಸದಾ ಅವಳ ಪ್ರಿಯಕರನ ವಿಷಯವನ್ನು ಮಾತನಾಡುತ್ತಿರುವುದು ಇವಳಲ್ಲಿ ಜಿಗುಪ್ಸೆ ಮೂಡಿಸುತ್ತದೆ. ಯಾರಿಗೂ ಇಲ್ಲದ boyfriend ಅಂತಾ ಹೇಳಿಕೊಳ್ಳುತ್ತಾಳೆ ಅಂತಾ ಕೂಡ ಅನ್ನಿಸುತ್ತಿರುತ್ತದೆ. ಜೊತೆಗೆ ಪ್ರೀತಿಸುವ ಹುಡುಗನಿಗಾಗಿ ಹಾತೊರೆಯುವ ಪರಿ, ಅವನ ಒಂದು ಮೊಬೈಲ್ ಕಾಲಿಗೆ ಕಾಯುವ ತವಕ, ಇದೆಲ್ಲಾ ಅವಳಿಗೆ ಕುತೂಹಲ ಮೂಡಿಸುತ್ತದೆ.ನಾನು ಇವಳಿಗೇನೂ ಕಮ್ಮಿಯಿಲ್ಲ ಮತ್ತೆ ನಾನ್ಯಾಕೆ ಒಬ್ಬನನ್ನು ಪ್ರೀತಿಸಬಾರದೆಂಬ ಸ್ಪರ್ಧಾತ್ಮಕ ಮನೋಭಾವ ಮನೆಮಾಡುತ್ತದೆ. ಆದರೂ ಅದನ್ನ ಹೊರಹಾಕಲಾರದೇ, ಚೇ! ಇದೆಲ್ಲಾ ಬೇಡಪ್ಪ ಈ ಪ್ರೀತಿಯಲ್ಲಿರೋ, ಗೋಳು, ನಿಮಗೆ ಇರಲಿ, ನಮಗೆ ಇದೆಲ್ಲಾ ಬೇಡ, ಬೇರೆಯವರಿಗಾಗಿ ಬದುಕುವ ಸಹವಾಸವೇ ಬೇಡ. ಅವಳ ಗೆಳತಿಯು, ಒಮ್ಮೆ ಯೊಚಿಸುತ್ತಾಳೆ, ಇವಳು ನನ್ನಿಂದ ದೂರಾದರೇ, ನನ್ನ ಆಂತರಿಕ ವಿಷಯವೆಲ್ಲಾ ಬಲ್ಲವಳಿವಳು, ನಾಳೆ ದಿನ ಯಾರಿಗಾದರೂ ಹೇಳಿದರೆ, ಬೇಡ ಹೀಗಾಗುವುದು ಸರಿಯಿಲ್ಲ. ಇವಳು ನನ್ನೊಂದಿಗೆ ಇರಲಿ, ಇರಲೇ ಬೇಕು ಹಾಗೆ ಮಾಡಿಕೊಳ್ಳಬೇಕು.
ಈ ಪ್ರೀತಿಯಲ್ಲಿರುವ ಸುಖ ಅವಳಿಗೆ ಬೇಡ, ಅವಳು ಸದಾ ನನ್ನ ಸಖಿಯಂತೆಯೇ ಇರಬೇಕು. ಹೌದು ನೀನು ಹೇಳುವುದು ಸರಿ, ಈ ಪ್ರೀತಿಯಲ್ಲಿರೋ ಕಷ್ಟ ಸಾಕು ಕಣೇ, ನನಗೆ, ನೀನು ಯಾರನ್ನು ಪ್ರೀತಿಸಬೇಡ. ನಾನು ಇಲ್ಲಿಂದ ಹೊರಗೆ ಬರೋಕಾಗದೇ, ವಿಧಿಯಿಲ್ಲದೆ, ಅನುಭವಿಸುತ್ತಿದ್ದೇನೆ. ನೀನು ನನ್ನ ತಪ್ಪು ಮಾಡ್ಬೇಡ. ಇದು ದೂರದ ಬೇಟ್ಟವಿದ್ದಂತೆ, ಹೊರಗಿನಿಂದ ನಿಂತು ನೋಡುವಾಗ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಒಳಹೊಕ್ಕಾಗ ಅದರ ನೈಜತೆ, ನೋವಿನ ಬದುಕು ಬಿಡಿ ಬಿಡಿಯಾಗಿ ಬಯಲಾಗುತ್ತದೆ.ಇಲ್ಲ ಸಲ್ಲದ ಕಥೆಗಳನ್ನ ಹೇಳಿ ಅವಳ ದಿಕ್ಕು ಬದಲಿಸುವ ಪ್ರಯತ್ನಮಾಡುತ್ತಾಳೆ. ಛೆ! ಇವಳು, ಹೀಗೆ ಹೇಳಿಬಿಟ್ಟಳಲ್ಲ ನಾನು ಹೇಳಿದ ಮಾತನ್ನು ನನಗೆ ತಿರುಗಿಸಿಬಿಟ್ಟಳಲ್ಲ. ಇದು ಈ ರೀತಿ ತಿರುಗುಬಾಣವಗುತ್ತದೆಂದು ಭಾವಿಸಿರಲಿಲ್ಲ. ಅದರಲ್ಲಿರೋ ಕಷ್ಟವಾದರು ಒಮ್ಮೆ ನೋಡಲೇಬೇಕು. Yes atleast for experience ಅಂತ ತೀರ್ಮಾನಿಸುತ್ತಾಳೆ. ಹಾಗೆಯೇ, ಆ ಹುಡುಗಿ ಕೂಡ ಹೋಗಲಿ, ಪ್ರೀತಿಸಲಿ, ಪ್ರೀತಿಸಿದರೆ ಇವಳು ರಹಸ್ಯವಿಷಯಗಳು ನನಗೆ ತಿಳಿಯುತ್ತವೆ, ಆಗ ಅವಳು ನಾನು ಇಬ್ಬರು ಒಂದೇ ದೋಣಿಯ ಪ್ರಯಾಣಿಕರಾಗುತ್ತೇವೆ.
ಆದರೇ ಈಗ ಇವಳನ್ನು ಪ್ರೀತಿಸುವ ಹುಡುಗನನ್ನು ಎಲ್ಲಿಂದ ಹುಡುಕುವುದು? ನಂತರ ಒಂದು ತೀರ್ಮಾನಕ್ಕೆ ಬಂದು ತನ್ನ ಪ್ರೆಮಿಯ ಸ್ನೇಹಿತನನ್ನು ಪ್ರೀತಿಸುವಂತೆ ಮಾಡುತ್ತಾಳೆ. ಅವನು ಬಹಳ ಒಳ್ಳೆಯ ಹುಡುಗ ಎಂದು certificate ಕೂಡ ಕೊಡುತ್ತಾಳೆ. ನೋಡು ಒತ್ತಾಯವೇನುವಿಲ್ಲ ಇಷ್ಟವಿದ್ದರೆ ಒಪ್ಪಿಕೋ ಇಲ್ಲವಾದರೆ ಬೇಡ, ಅವನಿಗೂ ನಿನ್ನ ಕಂಡರೆ ಬಹಳ ಇಷ್ಟ, ನಿನ್ನ ಅನಿಸಿಕೆ ಕೇಳೆಂದು ನನಗೆ ತಿಳಿಸಿದ್ದ, ನಿನ್ನನ್ನು ನೋಡುವ ಸಲುವಾಗಿಯೇ ಅವನು ನನ್ನ ಗೆಳೆಯನ ಜೊತೆ ಬರುತ್ತಿದ್ದ. ಒಳ್ಳೆ ಗುಣವಂತ, ಹಣವಂತ, ವಿದ್ಯಾವಂತ ಇದಕ್ಕಿಂತ ಇನ್ನೇನು ಬೇಕು ಪ್ರೀತಿಸಲು? ಇವರಿಬ್ಬರೂ ಒಬ್ಬರಿಗೊಬ್ಬರು ಎಂದು ಮನಬಿಚ್ಚಿ ಮಾತನಾಡಿರುವುದಿಲ್ಲ, ತಮ್ಮ ಇಚ್ಚಾನುರಾಗವೆಂಬುದು ಬರಲೇ ಇಲ್ಲ, ಆದರೂ ಸಮ್ಮತಿಸುತ್ತಾರೆ. ಯಾರದೋ ವೈಯಕ್ತಿಕ ಅನುಕೂಲತೆಗಾಗಿ ಅವರು ದಾನ ನೀಡಿದ ಪ್ರೀತಿಯ ಗಿಡದಂತೆ ಕಾಣುವ ಹೆಸರಿಲ್ಲದ ಗಿಡವೊಂದನ್ನು ನೆಡಲು ಮುಂದೆ ಬರುತ್ತಾರೆ.ಆದರೆ ಅವರಿಬ್ಬರೂ ತಾವುಗಳೇನು? ತಮಗೆ ಬೇಕಿರುವುದೇನು? ಎಂದು ತಿಳಿಯುವ ವೇಳೆಗೆ ಮೊದಲ ಪ್ರೇಮಿಗಳಿಬ್ಬರೂ ಬಹಳ ದೂರ ದೂರ ದೂರಾಗೆ ಹೋಗಿರುತ್ತಾರೆ. ಕಾರಣ ಬಹಳ ಸುಲಭ ಮತ್ತು ಒಂದೆ ಪದದ ಉತ್ತರ, ಅವರು ಮಾಡಿದ್ದು, just for an Experience ಇವರು ಸಿಕ್ಕಿಬಿದ್ದಿರುವುದು ಅಷ್ಟೆ just for an Experience ಅದರ ಉದ್ದೇಶವೇ ಇಂತಾದರೇ ಇನ್ನು ಅದರ ಬೆಳವಣಿಗೆ ತಿಳಿದಿರುವ ವಿಷಯವಲ್ಲವೇ? ಏಕೆಂದರೇ ಇವರಿಬ್ಬರೂ ಪ್ರೀತಿಸಿದ್ದು ಪ್ರೀತಿಸಲೇ ಬೇಕೆಂಬ ಅನಿವಾರ್ಯತೆಗಾಗಿ, ಸ್ವಾರ್ಥ ಉದ್ದೇಶದೊಂದಿಗೆ ಹುಟ್ಟಿದ್ದರಿಂದ ಅದನ್ನು ನಿಶ್ವಾರ್ಥವಾಗಿಸುವ ಪ್ರಯತ್ನವೂ ಇಲ್ಲ ಅದು ಬದುಕಲೇಬೇಕೆಂಬ ಬಯಕೆಯೂ ಇಲ್ಲ. ಪ್ರೀತಿ ಎಂದೂ ಸ್ವಾರ್ಥಕ್ಕಾಗಿ, ಸ್ವಾರ್ಥದಿಂದ ಹುಟ್ಟಿ ಬೆಳೆಯುವುದಿಲ್ಲ. ಬೇಡಿಕೆಯಿಲ್ಲದ, ಯಾವುದೇ ಕೋರಿಕೆಯಿಲ್ಲದ ಪ್ರೀತಿಯಾದರೇ ಮಾತ್ರ ಒಲವೇ ಜೀವನ ಸಾಕ್ಷಾತಾರವೆನ್ನಬಹುದು.
***
ಪ್ರೇಮಿಯ ಬದಲಾವಣೆ ಇಷ್ಟೊಂದು ಸುಲಭವಾ?
ಬಡವನಾದರೇ ಏನು ಪ್ರಿಯೇ, ಕೈತುತ್ತು ತಿನಿಸುವೆ, ಇದು ಸಾಮಾನ್ಯ ಪ್ರೇಮಿಯ ಬಾಯಲ್ಲಿ ಉದುರುವು ಮುತ್ತಿನ ಮಾಲೆ. ನಮ್ಮ ಪ್ರೀತಿಗೆ ಬಡತನವಿಲ್ಲ. ಅದೆಂಥ ಮನಸ್ಸು ನಮ್ಮದು, ಪ್ರತಿದಿನ, ಪ್ರತಿಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆ ಅಗತ್ಯತೆ ಎರಡನೇಯ ವಿಷಯ. ಎಲ್ಲದರಲ್ಲೂ ಬದಲಾವಣೆ ಬಯಸುತ್ತಲೇ ಇರುತ್ತದೆ ನಾಗರೀಕ ಸಮಾಜ. ಇದು ಬರೀ ಸಮಾಜದ ವಿಷಯದಲ್ಲಿಯೇ ಉಳಿದಿಲ್ಲ, ಅದು ಪ್ರೀತಿ ಪ್ರೇಮಕ್ಕೂ ಮುಟ್ಟಿದಾಗ, ಅಲ್ಲಿಯೂ ಬದಲಾವಣೆಯ ಅವಶ್ಯಕತೆಯಿದೆಯಾ? ಅದಕ್ಕೇ ಉತ್ತರ ಪ್ರೀತಿಸುವ ಮನಸ್ಸನ್ನು ಕೇಳಿದರೂ ಸಿಗುವುದಿಲ್ಲ, ಹಣೆಬರಹ ಗೀಚಿದ ಬೊಮ್ಮನನ್ನು ಕೇಳಿದರೂ ಸಿಗುವುದಿಲ್ಲ. ಆದರೂ, ಗಮನಿಸಿ ನೋಡಿ, ಪ್ರೇಮಿಗಳೇಕೆ, ಬದಲಾವಣೆಯನ್ನು ಬಯಸುತ್ತಾರೆ? ಅಥವ ಬದಲಾಗೇ ಬಿಡುತ್ತಾರೆ. ಪ್ರೀತಿಯ ಆರಂಭದ ದಿನದಲ್ಲಿ ಆಕಾಶದಲ್ಲಿದ್ದ ಚಂದ್ರನಲ್ಲಿಯೂ ತನ್ನ ಪ್ರೇಯಸಿಯ ಮೊಗವನ್ನು ಕಂಡು ಹಿಗ್ಗುತ್ತಿದ್ದವನು, ಕಾಲಕ್ರಮೇಣ ಸಂತೋಷವೆಂಬುದು ಅಮವಾಸ್ಯೆಯಲ್ಲಿಯ ಚಂದ್ರನಂತಾಗಿರುತ್ತದೆ, ಮತ್ತೆ ನಗುವೆಂಬುದು ಅವನ ಮುಖದಲ್ಲಿ ಹುಟ್ಟಲು ಸಾಧ್ಯವೇ ಇಲ್ಲದಂತಾಗುತ್ತದೆ.
ಮೊದಲ ದಿನಗಳಲ್ಲಿ, ಅವಳನ್ನು ಕಾಣಲು ಹಾತೊರೆಯುತ್ತಿದ್ದವನು, ಅವಳೊಡನೆ ಮಾತನಾಡುವುದೇ ಬದುಕು ಎನ್ನುತ್ತಿದ್ದವನು, ಅವಳ ಆ ಒಂದು ನಗು ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆನ್ನುತ್ತಿದ್ದವನು, ಬರಬರುತ್ತಲೇ, ಬದಲಾಗಿಬಿಡುತ್ತಾನೆ. ಕಾರಣ ಗಣಿಗಾರಿಕೆ ಮಾಡಿ ಅಗೆದರೂ ಸಿಗುವುದಿಲ್ಲ ಅವನಾಳದಲ್ಲೇನಿದೆಂಬುದು. ಅವಳ ಬಗೆಗೆ ಏನೋ ಒಂದು ಬಗೆಯ ತಾತ್ಸಾರ ಮೂಡುತ್ತದೆ, ಅದೇಕೆಂಬುದು ಅವನಿಗೆ ಗೊತ್ತಿರಬಹುದಾ? ಅವನಿಂದಲೇ ಕೇಳಬೇಕೆಂದರೆ, ಅವಳು ಸರಿಯಿಲ್ಲ, ಸುಲಭದ ಮಾತು. ಮುಂದಿನ್ದ ಪರಿಣಾಮವಾಗಲಿ ಮುಂದಿನ ಸಾಲಾಗಾಲಿ ಅವನ ಬಾಯಲ್ಲಿ ಮೂಡುವುದಿಲ್ಲ. ಮೂಡಲು ಸಾಧ್ಯವೂ ಇಲ್ಲ. ಪ್ರೀತಿಯಲ್ಲಿ ತಾತ್ಸಾರವಿರುವುದಾದರೂ ಹೇಗೆ ಅದು ಆಗಲೂ ಸಾಧ್ಯವಾ? ಪ್ರೀತಿಯಲ್ಲಿ ಅದು ಬಂದರೆ ಇನ್ಯಾವುದರಲ್ಲಿ ಹುಡುಕುವುದು ಅನ್ಯೋನ್ಯತೆಯನ್ನ?
ಮೊದಲ ದಿನದಲ್ಲಿದ್ದ, ಕಾತುರತೆಯಲ್ಲಿ ಮಾಯವಾಯಿತು? ಅವಳ ಬರುವಿಗಾಗಿ, ಮೂರು ಗಂಟೆಗಳ ಪೂರ್ವ ಸಿದ್ದತೆ, ಒಂದು ಗಂಟೆ ಮುಂಚಿತವಾಗಿ ಆ ಸ್ಥಳದಲ್ಲಿ ಪ್ರತ್ಯಕ್ಷನಿರುತ್ತಿದ್ದ.ಆ ಮಿಂಚಿನ ನೋಟಕ್ಕೆ, ಆ ಮೋಹಕ ನಗುವಿಗಿರುವ ಶಕ್ತಿಯನ್ನು ತನ್ನೊಳಗೆ ಅನುಭವಿಸಿ ಆನಂದಿಸುತ್ತಿದ್ದ. ಆ ನಗುವಿಗಿರುವ ಚೈತನ್ಯ, ಒಂದೇ ಒಂದು ಫೋನ್ ಕಾಲ್ ಅವಳಿಂದ ಬಂದು ಹತ್ತು ನಿಮಿಷ ಮಾತನಾಡಿದರೇ ತನ್ನ ಇಂದಿನ ದಿನ ಸಾರ್ಥಕವಾಯಿತೆನ್ನುತಿದ್ದವನಿವನು. ರಜೆ ಬಂತೆಂದರೆ, ರಜಾದಿನ ಮಾಡಿದ ವ್ಯಕ್ತಿಯ ಜೊತೆಗೆ ಅವನ ಬಂಧುಬಳಗವನ್ನೆ ಬೈಯ್ಯುತ್ತಿದ್ದ. ಇದ್ಯಾಕಾದರೂ ಮಾಡಿದರೋ ಎಂಬ ದೂರು ದುಗುಡವನ್ನುಂಟುಮಾಡಿತ್ತು.ತನ್ನ ಬಳಿಯಲ್ಲಿ ಹಣವಿಲ್ಲದಿದ್ದರೆಂತು, ಸಾಲ ಮಾಡಿಯಾದರೂ ಸರಿಯೆ, ಅವಳಿಗೆ ಫೋನ್ ಮಾಡ್ಬೇಕು, ವಾರಕ್ಕೊಮ್ಮೆಯಾದರೂ ಅವಳಿಗೊಂದು ಉಡುಗೊರೆ ಕೊಡಬೇಕು. ತನ್ನ ಮಟ್ಟಕ್ಕೇ ಮೀರಿ ಅವಳಿಗೆ ಉಡುಗೊರೆ ಕೊಡಬೇಕು, ಪ್ರೇಮಿಗಳ ದಿನದಂದು, ಸಾವಿರಾರು ರೂಪಾಯಿ ಹೋದರೂ ಸರಿಯೆ, ಡಿಸ್ಕೋಗೆ ಹೋಗಬೇಕು, ವಾರದ ಕೊನೆಯಲ್ಲಿ ಅವಳನ್ನು ಹೊರಗೆ ಕರೆದೊಯ್ಯಲೇ ಬೇಕು, ಅದು ಬರಿಸ್ತಾದಿಂದ ಪ್ರಾರಂಭವಾಗಿ, ಕಾಫಿ ಡೇ ಮುಗಿಸಿ, ರೆಸಾರ್ಟ್ ತನಕ ಹೋಗಿ ಬರಬೇಕು. ಇಷ್ಟೆಲ್ಲ ಮಾಡಿದರ ಉದ್ದೇಶವೊಂದೆ ಅವಳು ತನ್ನೊಡನಿರಬೇಕಷ್ಟೆ.
ಅವನಿಗೆ ಈ ಹಣ ಎಲ್ಲ್ಲಿಂದ ಬರುತ್ತಿತ್ತು, ತಾನೇನು, ತನ್ನ ಘನತೆಯೇನು? ಇದರ ಪರಿವೇ ಇರಲಿಲ್ಲ, ಅವಳ ಮುಂದೆ ತೋರಿಸಲು ಇಲ್ಲ. ಆರ್ಥಿಕತೆಯ ಕೊರತೆಯೊಂದಿದೆಂಬುದು ಅವಳಲ್ಲಿ ಕಾಣದಂತೆ ಮಾಡಿದ. ಅವಳೆತ್ತರಕ್ಕೇರುವ ದಾರಿಯೊಂದನ್ನು ಬಿಟ್ಟರೇ, ಬೇರೇನೂ ಅವನ ಮುಂದಿರಲಿಲ್ಲ. ಅವಳು ಶ್ರೀಮಂತೆ ತಾನು ಬಡವನೆಂಬುದು ಇಬ್ಬರ ಮನಸ್ಸಿನಲ್ಲಿಯೂ ಬರಲೇ ಇಲ್ಲ. ಇಬ್ಬರೂ ಸಮಾನಸ್ಕರು ಎಂದು ತಿಳಿದಿದ್ದರು. ಹಣದ ಕೊರತೆ ನೀಗಿಸಲು, ಬಿಡುವಿನ ವೇಳೆಯಲ್ಲಿ ಕೆಲಸ ಮಾಡತೊಡಗಿದ. ಮೂರು ರೂಪಾಯಿ ಉಳಿಸಲು, ಮೂರು ಕೀಲೋ ಮೀಟರ್ ನಡೆಯುತಿದ್ದ, ಪೈಸೆ ಪಸೆಯನ್ನು ಗುಣಿಸಲು ಯೋಚಿಸುತ್ತಿದ್ದ. ಇನ್ನೊಂದು ಮುಖದಲ್ಲಿ, ಅವಳಿಗೆ ಈಡಿ ಕರ್ನಾಟಕ ದರ್ಶನವನ್ನೇ ಮಾಡಿಸಿದ್ದ, ಪ್ರಮುಖ ಸ್ಥಳಗಳ ವೀಕ್ಷಣೆ ಮುಗಿಸಿದ್ದರು. ತನಗೆ ಆರೋಗ್ಯ ಕೆಟ್ಟರೇ ಒಂದು ಗುಳಿಗೆಯಿಂದ ಗುಣಮಾಡಿಕೊಳ್ಳುತ್ತಿದ್ದವನು, ಅವಳಿಗೆ ಒಂದು ಸಣ್ಣ ಪುಟ್ಟ ತಲೆ ನೋವು ಬಂದರೂ ಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮಾಡಿಸುತ್ತಿದ್ದ, ದೊಡ್ಡ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಕೊಡಿಸುತಿದ್ದ. ದಿನಗಳು ಕಳೆದಂತೆ ತಾನು ಅವಳಿಗೆ ಮಾಡಿದ ಕಷ್ಟ ಕಾರ್ಪನ್ಯಗಳು ಮನಸಲ್ಲಿ ಬಯಲಾಗತೊಡಗಿದವು. ಅವು ಇವನನ್ನು ತನ್ನ ಬದಲಾವಣೆಗೆ ಪೂರಕ ನೀಡುತ್ತಾ ಹೋದವು.
ಒಂದು ಸತ್ಯ ಬಯಲಿಗೆ ಬರತೊಡಗಿತು, ಅದು ಅವಳು ತನ್ನಿಂದ ದೂರಾಗಬಹುದೆಂಬ ಶಂಕೆ, ಅವಳ ಬಗ್ಗೆ ಅನುಮಾನದ ಛಾಯೆ ಬೆನ್ನತ್ತ ಹೊರಟಿತ್ತು. ಪೊರ್ಶ್ ಲೈಫ್ ಹೆಸರಿನಲ್ಲಿ ಅವಳು ತನ್ನಿಂದ ದೂರಾಗಬಹುದೆಂಬ ಸುಳಿವು ದೊರಕತೊಡಗಿತ್ತು. ದೂರಾದರೆಂಬ ಮಾನಸಿಕ ತಳಮಳ, ತಾನು ಮಾಡಿದ ತಪ್ಪಿಗೆ ಈ ಮಟ್ಟದ ಶಿಕ್ಷೆಯಾ,ಇದಕ್ಕೆ ಪರಿಹಾರ ಹುಡುಕ ಹೊರಟ. ತಾನು ಮಾಡಿದ್ದು ತಪ್ಪೆಂಬ ಭಾವನೆ ತಲೆದೋರಿತು. ತನಗೆ ಮಾನಸಿಕವಾಗಿ, ಆರ್ಥಿಕವಾಗಿ ಎರಡರಲ್ಲೂ ಎರಡರಲ್ಲೂ ಅಲ್ಲಾ ಎಲ್ಲದರಲ್ಲೂ ಹಾನಿಯಾಗಿದೆ, ನೋವಾಗಿದೆ. ಜೀವನದಲ್ಲಿ ಹಣ ಮುಖ್ಯವಲ್ಲವೆಂಬುದು ಸರಿಯೇ, ಆದರೆ ತಾನಿದ್ದ ಸ್ಥಿತಿಯಲ್ಲಿ ಹಣಕ್ಕಿಂತ ಮುಖ್ಯವಸ್ತು ಮತ್ತೊಂದಿಲ್ಲ. ನಾನು ಅವಳನ್ನು ಪ್ರೀತಿಸಿ ಅವಳಿಗಾಗಿ ವ್ಯಯ ಮಾಡಿದ ಹಣ, ಸಮಯ, ಶಕ್ತಿಯನ್ನು ಬೇರೆಡೆಗೆ ಉಪಯೋಗಿಸಿದ್ದಿದ್ದರೆ ತಾನು ಸಮಾಜದ ಪಟದಲ್ಲಿ ಗುರುತಿನಂತರದಲ್ಲಿರುತ್ತಿದೆನೆಂಬ ನೋವಿನ ಮಾತುಗಳು ಕಣ್ಣೀರಿನ ಹಣಿಗಳಿಗೆ ಪ್ರೋತ್ಸಾಹ ನೀಡುತ್ತಿವೆ.
ಆದರೆ, ಇದು ಎರಡು ಕಡೆಯಿಂದ ಬರುತ್ತಲಿಲ್ಲ, ಆ ಹುಡುಗಿ ತನೆಗೇನು ಆಗಿಲ್ಲವೆಂಬಂತಿದ್ದಾಳೆ. ಅವಳಿಗೆ ಇವನ ಮೇಲೆ ನಂಬಿಕೆಯಿದೆ ಇವನು ನನ್ನನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿಸುವುದಿಲ್ಲ, ಇವನು ಪ್ರೀತಿಸುತ್ತೆನೆಂದರೂ ಇವನನ್ನು ಒಪ್ಪುವ ಹುಡುಗಿ ಸಿಗುವುದಿಲ್ಲ. ಬುದ್ದಿವಂತಿಕೆಯ ಪರಮಾವಧಿಯೆ ಇದು, ಅವನು ನನ್ನಿಂದ ದೂರಾಗುವುದಿಲ್ಲ, ದೂರಾದರೂ ಚಿಂತೆಯಿಲ್ಲ, ಇದಕಿಂತ ಒಳ್ಳೆಯದು ತನಗೆ ಕಾಯುತ್ತಿದೆಯೆಂಬ ನಂಬಿಕೆಯಿದೆ. ಜೀವನ ಬಹಳ ಚಿಕ್ಕದು ಅದನ್ನು ಆನಂದಿಸಬೇಕೆ ಹೊರತು ಕಳೆದು ಹೋದದ್ದಕ್ಕೆ ಚಿಂತಿಸಿ ಕೂರುವುದಲ್ಲ. ಅವನು ಹೋದರೇನು ಜೀವನವೆಂಬುದು ಯಾರಿಂದಲೋ ಆರಂಭವಾಗಿ ಯಾರಿಂದಲೋ ಮುಗಿಯುವುದಿಲ್ಲ, ಅದು ನಮ್ಮಿಂದ ಆರಂಭವಾಗಿ ನಮ್ಮಿಂದಲೇ ಮುಗಿಯುತ್ತದೆ. ಭಾವನೆಗಳ ಒಡಲು ಪ್ರೀತಿಯಾದರೇ, ಆಸೆಗಳ ಮಹಾಕಡಲು ನಮ್ಮ ಜೀವನ. ಆಸೆಯ ಬೆನ್ನತ್ತಿ ಹೋದ ಮೇಲೆ ಅದಕ್ಕೆ ದಿಗಂತವಿಲ್ಲ ನೀವು ಸಾಗಲೇಬೇಕು. ಅಲ್ಲಿನ ಅಲೆಗಳ ಏರಿಳಿತ ಅನುಭವಿಸಲೇಬೇಕು, ಈ ಪಯಣ ಬಯಸಿದವರೂ ನೀವು ಫಲ ಉನ್ನುವವರೂ ನೀವುಗಳೆ.
***
ಪೋಸ್ಟ್ ಮ್ಯಾರೇಜ್ ಕಾಂಪ್ಲಿಮೆಂಟ್ಸ್?
ಆ ಹುಡುಗಿ ಅಷ್ಟೇನೂ ಚೆನ್ನಾಗಿಲ್ಲ, ತುಂಬಾ ತೆಳ್ಳಗಿದ್ದಾಳೆ, ಅವರ ಮನೆ ಕೆಲಸ ಅದೇಗೆ ಮಾಡ್ತಾಳೋ? ಅದೇನ್ ನೋಡಿ ಮದುವೆ ಆದನೋ? ಹೀಗೆ ಹೊಗಳಿಕೆಯ ಮಾಲೆ ಬೀಳತೊಡಗುತ್ತದೆ. ಅವರು ಮಾತನಾಡುತ್ತಿದ್ದದ್ದು ಹಿಂದೆಂದೊ, ಪರಿಚಯಸ್ಥರ ಮನೆಯವರ ಮದುವೆ ಮಂಟಪದಲ್ಲಿದ್ದ ಹುಡುಗಿಯ ಬಗ್ಗೆ.ಅದು ಪ್ರಿತಿಸಿ ಆದ ಮದುವೆ ಜೋಡಿಯ ಕುರಿತಾದ ಸಂಭಾಷಣೆ, ಎರಡು ಕುಟುಂಬದವರ ಸಹಮತಿ ಸಿಕ್ಕಿತ್ತು. ಅವರಿಬ್ಬರು ಪ್ರೀತಿಸಿ ಪರಸ್ಪರ ಅರ್ಥ ಮಾಡಿಕೊಂಡು, ಮದುವೆಯಾಗಬೇಕೆಂಬ ನಿರ್ಧಾರ ಮಾಡಿ ಪೋಷಕರ ಮುಂದೆ ಬಂದಾಗ ಅವರು ಒಪ್ಪಿಗೆ ನೀಡಿದ್ದರು.ಅವರಿಗೆ ಮಕ್ಕಳ ಆಸೆಯ ವಿರುದ್ದ ಹೋಗುವ ಮನಸ್ಸಿರಲಿಲ್ಲ, ಮಾಡುವ ಶಕ್ತಿಯು ಇರಲಿಲ್ಲ, ಅವರ ಪ್ರೀತಿ ಅಷ್ಟೆ ಪ್ರಾಮಾನಿಕವಾಗಿತ್ತು ಅನ್ನಿಸುತ್ತದೆ.ಕೂಡಿ ಬಾಳುವ ಜೋಡಿಗೂ ಇರದ, ತಮ್ಮೊಡನಿರಬೇಕಾದ ತಂದೆತಾಯಿಯರಿಗೂ ಬಾರದ, ಎಷ್ಟೋ ಅನುಮಾನಗಳು, ಅಲ್ಲಿ ನೆರೆದಿದ್ದ ಮತ್ತು ಹೋಗಿ ಬಂದ ಮಹಾಮಣಿಯರಲ್ಲಿತ್ತು.
ಈ ಸಮಾಜದ ಹುಟ್ಟುಗುಣವೇ ಅಂಥಹದ್ದು ಅನಿಸುತ್ತದೆ, ಇಲ್ಲಿ ಬೇರೆಯವರ ವಿಷಯಕ್ಕೆ ಬಂದಾಗ ಎಲ್ಲರೂ ಒಂದೇ ರೀತಿಯಾಗಿ ವರ್ತಿಸುತ್ತಾರೆ. ತಮ್ಮ ವಯಕ್ತಿಕ ಜವಬ್ದಾರಿಗಿಂತ ಹೆಚ್ಚಾಗಿ ಬೇರೆಯವರ ವಿಚಾರಗಳಲ್ಲಿ ಮೂಗುತೂರಿಸಿ ಸಮಧಾನಪಟ್ಟಿಕೊಳ್ಳುತ್ತಾರೆ. ತಮ್ಮ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸದಿದ್ದರೂ, ಬೇರೆಯವರ ವಿಷಯಗಳ ಕುರಿತು ತಮ್ಮ ಗಮನ ಕೇಂದ್ರೀಕೃತವಾಗಿರುತ್ತದೆ.ಆದರೇ ಅಕ್ಕಪಕ್ಕದ ಮನೆಯವರ ವಿಷಯವೆಂದರೇ ತೀರಿತು ಅಂದುಕೊಳ್ಳಿ, ಇಲ್ಲ ಸಲ್ಲದ ಊಹಾಪೋಹಗಳನ್ನು ಹುಟ್ಟಿಸಿ, ಅದನ್ನು ಬೆಳಸಿ ಹೆಮ್ಮರವಾಗಿಸದ ಹೊರತು ಅವರಿಗೆ ಸಮಾಧಾನವೇ ಇಲ್ಲ. ಅವರಿಗೆ ಅದರಲ್ಲಿ ಏನು ಮಹದಾನಂದ ಸಿಗುತ್ತದೆಯೋ ಗೊತ್ತಿಲ್ಲ ಆದರೆ ಅದನ್ನು ಲಾಭದಾಯಕ ಹುದ್ದೆಯಂಬಂತೆ ಮಾಡಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಮೇಲೆ ದೂರುವಾಗ ಅಥವಾ ಹಂಗಿಸುವಾಗ ಹಿಂದೆ, ಮುಂದಿನದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ರೀತಿ ಜನರೇ ಹಾಗೆ, ಅವರಿಗೆ ಆ ದಿನಕ್ಕೆ, ಆ ಕ್ಷಣಕ್ಕೆ ಸಮಯ ಸಾಧಿಸಲು ಸಹಕರಿಸುವ ಒಂದು ದೇಹ ದೊರೆತರೆ ಸಾಕು. ಹಳಿಯಿಲ್ಲದ ರೈಲು ಸರಾಗವಾಗಿ ಎಲ್ಲೆಂದರಲ್ಲಿ ಹರಿಯಬಿಡುತ್ತಾರೆ. ಅದರಿಂದ ಯಾರ ಪ್ರಾಣಹಾನಿಯಾದರೂ ಸರಿಯೇ ಅವರಿಗೆ ಅದರ ಬಗ್ಗೆ ಕಿಂಚಿಂತೂ ಯೋಚನೆಯಿಲ್ಲ.ಅಪರಿಚಿತರ ಮದುವೆಯಂಬುದನ್ನು ಮರೆತು ಅವಳ ಗುಣಗಾನ ಮಾಡಲು ನಿಂತಿರುತ್ತಾರೆ. ಆ ಹುಡುಗಿ ಸರಿಯಿಲ್ಲ,ಅವಳು ಕಂಡ ಕಂಡ ಹುಡುಗರ ಜೊತೆಯಲ್ಲಿ ಅಲೆಯುತಿದ್ದಳಂತೆ, ಯಾರು ಸಿಕ್ಕರೂ ಸರಿಯೆ ಹರಟೆ ಹೊಡೆಯುತ್ತಿರುತ್ತಾಳೆ. ಪಾಪ ಆ ಹುಡುಗ ಮುಗ್ಧ, ಬಲೆಗೆ ಹಾಕಿಕೊಂಡಿದ್ದಾಳೆ, ಯಾವ ಜನ್ಮದಲ್ಲಿ ಏನು ಕರ್ಮ ಮಾಡಿದ್ದನೋ ಏನೋ? ಅಂತೂ ಒಳ್ಳೆಯವರಿಗೆ ಒಳ್ಳೆಯವರು ಸಿಗಲ್ಲ ಬಿಡಿ. ಅವಳ ನಡೆತೆನೇ ಸರಿಯಿಲ್ವಂತೆ,ಮೊದಲೇ ಗಂಡು ಮಕ್ಕಳಿರುವ ಮನೆ ಅದೇನು ಕಥೆನೋ ಎನೋ? ಹುಡುಗನ ಅಪ್ಪ, ಅಮ್ಮ ಎಷ್ಟು ಒಳ್ಳೆಯವರಲ್ವಾ? ಒಬ್ಬರಿಗೆ ಒಂದು ದಿನ ಬೈದು ಗೊತ್ತಿಲ್ಲ, ಅಂದು ಗೊತ್ತಿಲ್ಲ, ಇಂಥಾ ಹುಡುಗೀನಾ ಮನೆತುಂಬಿಸ್ತಾವ್ರಲ್ಲಾ, ಇದಕ್ಕೆ ಅಲ್ವಾ ಹೇಳೋದು ದೇವರಿಗೆ ಕಣ್ಣಿಲ್ಲ ಅಂತಾ. ಹೀಗೆ ಕಥೆಗೆ ಅಂತ್ಯಾ ಆದಿಗಳಿಲ್ಲದೆ ಓಡತೊಡಗುತ್ತದೆ. ಇಲ್ಲಿ ಹುಡುಗನ ಸದ್ವಿದ್ಯೆಯನ್ನು ಕುರಿತು ಹರಿಕಥೆ ಮಾಡಿದವರೇ, ಹುಡುಗಿಯ ಮನೆಗೆ ಹೋಗಿ, ಹುಡುಗನ ಮತ್ತೊಂದು ಮುಖದ ವಿವರಣೆ ನೀಡುತ್ತಾರೆ. "ಹುಡುಗ ಶೋಕಿಲಾಲನಂತೆ, ಹುಡುಗಿಯರ ಚಪಲವಂತೆ, ಕುಡಿಯೋದು, ಸೇದೋದೆಲ್ಲಾ ಮಾಡ್ತಾನಂತೆ, ಬಹಳ ಸೋಮಾರಿಯಂತೆ, ಒಂದು ಕಡೆ ಕೆಲಸ ಮಾಡಲ್ವಂತೆ, ಅಂಥವನಿಗೆ ಹೋಗಿ ಹೋಗಿ ಇಂಥಾ ಹುಡುಗೀನಾ? ಗಿಳಿ ಕಾಯಲು ಹದ್ದು ತಂದು ಬಿಟ್ಟಂತಾಯಿತು". ಅದೇ ಹಳೆಯ ಸಿ.ಡಿ. ಹಾಕಿ ಒಳ್ಳೆತನದ ಪ್ರತಿನಿಧಿಗಳಂತೆ ಮಾತನಾಡುತ್ತಾರೆ.
ಎರಡೂ ಕುಟುಂಬಗಳಲ್ಲಿಯೂ ಒಂದೇ ವೇಳೆಯಲ್ಲಿ ಬಿತ್ತಿದ ವಿಷಮ ಬೀಜವೂ ಸದ್ದಿಲ್ಲದೇ ಮೊಳಕೆಯೊಡೆದು ಬೆಳೆಯುತ್ತಿರುತ್ತದೆ. ಒಮ್ಮೊಮ್ಮೆ ಅದರ ಕುರುವು ಗೋಚರಿಸಿದರೂ ಅದಷ್ಟು ಮುಖ್ಯವೆನಿಸುವುದಿಲ್ಲ. ಅವರಿಬ್ಬರ ಜೋಡಿ ಪೋಷಕರೆನಿಸಿಕೊಳ್ಳುವ ವೇಳೆಗೆ ಬಿರುಕೆಂಬುದು ಬೆಳಕಿಗೆ ಬರುತ್ತದೆ.ಅವರು ಒಮ್ಮೊಮ್ಮೆ ತಾವು ಮಾಡಿದು ತಪ್ಪೆಂದು ತಮ್ಮತಮ್ಮನ್ನೆ ದೂರಿಕೊಳ್ಳುತ್ತಾರೆ. ದೂರಾಗುವ ಆಲೋಚನೆಗಳು ಆಗಾಗ್ಗೆ ಮರುಕಳಿಸುತ್ತವೆ.ಆ ಸಮಯಕ್ಕೆ ಹಿಂದೆ ಹುಳಿ ಹಿಂಡಿದವರು ನೆರೆದರೆ ಮುಗಿದೇಹೋಯಿತು. ಅಲ್ಲಿಗೆ ಅವರಿಬ್ಬರೂ ಮಾಜಿ ದಂಪತಿಗಳಾಗಿಬಿಡುತ್ತಾರೆ. ಆ ಸಮಯಕ್ಕೆ ಸರಿಯಾಗಿ ಯಾರದರೂ ಪ್ರೀತಿಯ ವಿಚಾರ ಕುರಿತು ಅವರಿಬ್ಬರ ಮನವರಿಕೆ ಮಾಡಿದರೆ ಒಲಿತು. ಪ್ರೀತಿಯೆಂಬುದು ಹುಟ್ಟಿದ ಮೇಲೆ ಅದು ಬೆಳೆಯುತ್ತಾ ಹೊಗುತ್ತದೆ ಹೊರತು ಕುಗ್ಗುವುದಿಲ್ಲ ಸಾಯುವುದೆಂಬುದು ಮೂರ್ಖತನದ ಪರಮಾವಧಿ. ಪ್ರೀತಿಯಲ್ಲಿ ಮತ್ತು ಸಂಭಂಧಗಳಲ್ಲಿ ನಂಬಿಕೆಯೆ ಬುನಾದಿಯಾಗಿರಬೇಕು, ಅದೊಂದಿದ್ದರೆ ಎಷ್ಟು ಹಳೆಯದಾದ ಸಂಭಂಧಗಳು ಚಿಗುರಿನಂತೆ ಪ್ರಜ್ವಲಿಸುತ್ತದೆ. ತಾನು ಯಾರಿಗಾದರು ಸಹಾಯ ಮಾಡಲಾದರೆ ಮಾಡಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು ಸುಮ್ಮನಿದ್ದವರ ಮನಸ್ಸಿಗೆ ಕೆಡುಕುಂಟುಮಾಡುವುದು ಒಳ್ಳೆಯದಲ್ಲ.

ಕ್ಷಣಿಕ ಪ್ರೀತಿಯಂದರೆ ಇದೇನಾ?
ಈ ಪ್ರೀತಿ ಅನ್ನೋದೆ ಹಾಗೆ ಅನ್ನಿಸುತ್ತದೆ. ಹೇಗೆ ಹುಟ್ಟುತ್ತೇ? ಎಲ್ಲಿ ಹುಟ್ಟುತ್ತೆ? ಅನ್ನೊದನ್ನಾ ಹೇಳೊದಕ್ಕೆ ಆಗಲ್ಲ. ಅದು ನಮ್ಮನ್ನು ಹೇಳದೇ ಕೇಳದೇ ಹುಟ್ಟಿಬಿಡುತ್ತದೆ. ಆದರೇ ಸಾಯುವುದು, 'ಪ್ರೀತಿಗೆ ಸಾವಿಲ್ಲವಂತೆ ಅದು ಸತ್ಯವೋ ಅಥವಾ ಪ್ರೀತಿ ಮನುಷ್ಯನ ಜೀವನದ ಬದಲಾವಣೆಯ ಸಂಕೇತ' ಇದು ಸತ್ಯವೇ? ಎಲ್ಲರ ಪ್ರೀತಿಯೂ ಒಂದೇಸಮನಿರುವುದಿಲ್ಲ. ಎಲ್ಲರೂ ತಮ್ಮ ಪ್ರೀತಿಯೇ ಅದ್ಬುತವೆನ್ನುತ್ತಾರೆ, ಅದರಲ್ಲಿ ಗೆಲ್ಲುವವರು ಕೆಲವರು, ಸಾಯುವವರು ಕೆಲವರು, ಸೋಲುವವರು ಹಲವರು, ಸೋಲುವವರ ಜೊತೆಯಲ್ಲಿ ಅದಕ್ಕೆ ತಕ್ಕಂತೆ ತ್ಯಾಗಮಾಡುವವರು ಹಲವರು. ಅಲ್ಲಿ ಗೆಲ್ಲಲು ಶಕ್ತಿಯಿಲ್ಲದೇ ಸೋಲುವವರು ಇದ್ದಾರೆ, ಸಮಯಕ್ಕೆ ತಕ್ಕಂತೆ ವರ್ತಿಸಿ ಪ್ರೀತಿಯ ಹೆಸರು ಬಳಸಿ ಜೀವನ ಚಿಕ್ಕದು ಸಿಹಿ ಬಾಳು ನಮ್ಮದೆಂಬವರೂ ಇದ್ದಾರೆ. ಅದೆಲ್ಲಾ ಒಂದು ಕಡೆಯಿರಲಿ, ಅದರ ಬಗ್ಗೆ ಬರೆಯ ಹೊರಟರೇ, ಒಂದು ಮಹಕಾವ್ಯ ಬರೆಯಬಹುದು. ಈ ಸಂಚಿಕಯಲ್ಲಿ ಹೇಳಹೊರಟಿರುವುದು, ಅದ್ಬುತ ಪ್ರೇಮಿಗಳ ವಿಷಯವಲ್ಲ, ಪ್ರೀತಿಗಾಗಿ ಸತ್ತವರೂ ಅಲ್ಲಾ, ತಾಜಮಹಲ್ ಕಟ್ಟಿದವರೂ ಅಲ್ಲ. ಆಕರ್ಷಣೆಯೆಂಬ ಬಹಳ ಚಿಕ್ಕ ಪದದ ಬಗ್ಗೆ ಸ್ವಲ್ಪ ಚರ್ಚಿಸೋಣ. ಒಬ್ಬೊರಿಗೆ ಒಂದೋಂದು ಬಗೆಯ ಚಟವಿರುತ್ತದೆ, ಅದರ ಬಗ್ಗೆ ಆಕರ್ಷಣೆಯಿರುತ್ತದೆ, ಅದರಂತೆ ಕೆಲವರಿಗೆ ಪ್ರೀತಿಸುವುದು ಒಂದು ಚಟವೇ ಪ್ರೀತಿಸಿ ಅನ್ನುವುದಕ್ಕಿಂತ ಪ್ರೀತಿಯ ಹೆಸರಲ್ಲಿ ಆಟವಾಡುವುದು ಒಂದು ಹವ್ಯಾಸವೆ ಆಗಿರುತ್ತದೆ. ಕೈಗೊಂದು ಮೊಬೈಲ್, ಹತ್ತಿ ಸುತ್ತಾಡಲು ಒಂದು ಬೈಕ್ ಸಿಕ್ಕಿದರೆ ಮುಗಿತು, ಸಿಟಿಯಲ್ಲಿರುವ ಎಲ್ಲಾ ಕಾಲೇಜುಗಳ ಮುಂದೆ ಅವರದ್ದೇ ಆದ ಒಂದು ದಂಡು ಹಾಜರಿರುತ್ತದೆ.
ಅವರನ್ನು ಕೇಳಿನೋಡಿ, ಎಲ್ಲಾ ladies ಕಾಲೇಜುಗಳ time table ಅವರ ಜೇಬಿನಲ್ಲೇ ಇರುತ್ತದೆ. ಆ ಕಾಲೇಜಿನಲ್ಲಿ ಓದುತ್ತಿರುವ ಎಷ್ಟೋ ವಿಧ್ಯಾರ್ಥಿನಿಯರಿಗೆ ತಿಳಿಯದ ವಿಷಯಗಳೆಲ್ಲಾ ಇವರಿಗೆ ತಿಳಿದಿರುತ್ತದೆ. ಕೆಲವರಂತೂ ಅಲ್ಲಿನ ಹುಡುಗಿಯರ ಜನ್ಮರಹಸ್ಯವೇ ತಮ್ಮ ಬಳಿಯಲ್ಲಿರುವಂತೆ ವರ್ತಿಸುತ್ತಾರೆ. ಅವರ ಗುಂಪಿನಲ್ಲಿ ಅನ್ಯೊನ್ಯತೆಯೆಂಬುದಂತೂ ಸಮಗ್ರ ಭಾರತೆವೆಂಬಂತಿರುತ್ತದೆ. ಅವರುಗಳು ತಮ್ಮ ತಮ್ಮಗೆ ಬೇಕಿರುವ ಹುಡುಗಿಯರನ್ನು ಮೊದಲೇ ನಿರ್ಧರಿಸಿ, ಅವರನ್ನು ಶತಾಯ ಗತಾಯ ತಮ್ಮ ಬಲೆಗೆ ಬೀಳಿಸಲೇಬೇಕೆಂದು ಹೊರಟಿರುತ್ತಾರೆ. ಅವರು ಅದೊಂದೆ ಹುಡುಗಿಯ ಹಿಂದೆ ಅಲೆದಾಡಿದ್ದರೆ ಅದರಲ್ಲಾದರೂ ನಿಯತ್ತಿದೆ ಹೋಗಲಿ ಅನ್ನಬಹುದಿತ್ತು, ಆದರೆ ಅವರು ಎಲ್ಲಾ ಕಾಲೇಜುಗಳಲ್ಲಿಯೂ ಒಂದೇರಡು ಹುಡುಗಿಯರ ಹಿಂದೆ ಬಿದ್ದಿರುತ್ತಾರೆ.ಬಲಗೈಯಲ್ಲಿ ಮಾಡಿದ್ದು ಎಡಗೈಯ್ಯಿಗೆ ಗೊತ್ತಾಗಬಾರದೆಂಬಂತೆ ಅಷ್ಟು ಕ್ರಮಬದ್ದವಾಗಿ ಕಾರ್ಯನಡೆಸುತ್ತಾರೆ ಆ ಮಟ್ಟದಲ್ಲಿ ಅವರನ್ನು ನಮ್ಮ ಸಿ.ಬಿ.ಐ.ಗೆ ಸೇರಿಸಬಹುದು. ಅವರು ಹುಡುಕುವುದು ಅಷ್ಟೆ, ಆಗ ತಾನೆ ಶಾಲಾ ಜೀವನದಿಂದ ಗರಿ ಬಿಚ್ಚಿ ಹಾರಾಡಲು ಕಲಿಯುತ್ತಿರುವ ಕಾಲೇಜು ಮೆಟ್ಟಲೇರಿರುವ ಹುಡುಗಿಯರನ್ನಾರಸಿಕೊಂಡಿರುತ್ತಾರೆ.
ನಂಬಿಸದೇ ಮೋಸ ಮಾಡುವುದು ಹೇಗೆ?
ಅವನು ನನ್ನ ನಂಬಿಕೆಗೆ ದ್ರೋಹ ಬಗೆದ, ಅವಳು ನನ್ನನ್ನು ನಂಬಿಸಿ ಮೋಸ ಮಾಡಿದಳು, ಇದು ಸರ್ವೇಸಾಮಾನ್ಯವಾಗಿ ಕೇಳುವ ಸಂಗತಿಗಳು. ಅಂದರೇ ನಂಬಿಸದೇ ದ್ರೋಹ ಮಾಡುವುದು ಹೇಗೆ, ಓದುವುದಕ್ಕೆಂದು ಅಪ್ಪನಿಂದ ಹಣಪಡೆದು, ಓದದೇ, ಸಿನೆಮಾ, ಸುತ್ತಾಟ ಮಾಡುವುದು ನಂಬಿಕೆ ದ್ರೋಹವಲ್ಲವಾ? ಸ್ನೇಹಿತರನ್ನು ಭೇಟಿ ಮಾಡುತ್ತೇನೆಂದು, ಅವರಿಗೆ ಸಹಾಯ ಮಾಡುತ್ತೇನೆಂದು, ನಂತರ ಕೈಕೊಟ್ಟು ಹೋಗುವುದು, ಅಸಹ್ಯವೆನಿಸುವಂತಿರುವ ಹುಡುಗಿಯನ್ನು ಮಹಾಚೆಲುವೆಯೆಂದು ಬಣ್ಣಿಸುವುದು, ಮಹಾಪಾಪಿ ಹುಡುಗನನ್ನು ದೇವರಂತವನು ಎಂದು ಉಬ್ಬಿಸಿ ಹಳ್ಳ ಹತ್ತಿಸುವುದು, ಇವೆಲ್ಲಾ ನಂಬಿಕೆ ದ್ರೋಹವಲ್ಲವಾ? ಹಾಗಿದ್ದ ಮೇಲೆ ಪ್ರೀತಿಯ ಲೋಕದಲ್ಲಿ ಹಾರಾಡುತ್ತಿದ್ದ ಹಕ್ಕಿ ತನ್ನ ಆಹಾರವಿದಲ್ಲವೆಂದು ಭಾವಿಸಿ ದೂರ ಹೋದರೆ ಅದು ಹೇಗೆ ಮೋಸವಾಗುತ್ತದೆ?
ಯಾರು ಯಾರಿಗು ಸಾಯುವ ತನಕ ಒಂದೇ ಕಂಬಳಿಯಡಿಯಲ್ಲಿ ಮಲಗುತ್ತೇವೆಂದು ಕರಾರು ಪತ್ರ ಬರೆದು ಹುಟ್ಟಿರುವುದಿಲ್ಲ. ಪ್ರೀತಿಯ ವಿಷಯದಲ್ಲಿಯೂ ಅಷ್ಟೇ, ಅದೊಂದು ಆಕರ್ಷಣೆಯಾಗಿ ಮೂಡಿ ನಂತರ ಆಳವಾಗತೊಡಗುತ್ತದೆ. ಮದುವೆಯೆಂಬ ಕಂಕಣಕ್ಕೆ ಬರುವವರೆಗೂ ಅದು ಶಾಶ್ವತವೆನಿಸುವುದಿಲ್ಲ. ಅಲ್ಲಿ ಸಮಯ ಆಡತೊಡಗಿರುತ್ತದೆ, ಯಾರು ಯಾರಿಗೂ ಬೇಕುಂದು ಮೋಸಮಾಡಬಯಸುವುದಿಲ್ಲ. ಜೀವಕ್ಕೆ ಜೀವವೆನ್ನುವಷ್ಟು ಪ್ರೀತಿಸುವ ಹುಡುಗ ಕೂಡ ಮೋಸಗಾರನಂತೆ ಕಾಣುತ್ತಾನೆ, ಅವನಿರುವ ಸನ್ನಿವೇಶ, ಸಂಧರ್ಭ ಅವನನ್ನು ಬಿಟ್ಟರೆ ಮತ್ತ್ಯಾರಿಗೂ ಅರ್ಥವಾಗುವುದಿಲ್ಲ. ಅಭಿನಯ ಸುಲಭ ಅನುಭವ ಅಸಾಧ್ಯ. ಭೋಧನೆ ಹೇಳಬಹುದು, ಅನುಭವಿಸಿದನಿಗೆ ಮಾತ್ರ ಗೊತ್ತು, ಕೆಳಗೆ ಕುರುವಾಗಿ ಕೂರಲು ಸಾಧ್ಯವಾಗದವನ ಕಷ್ಟ ಅವನಿಗೆ ಬಿಟ್ಟರೆ ಮತ್ಥ್ಯಾರಿಗೂ ಗೊತ್ತಾಗುವುದಿಲ್ಲ.






ಲಂಕಾ ಪ್ರವಾಸ
ನನಗಂತೂ ಪ್ರವಾಸ, ಪ್ರಯಾಣ, ಸುತ್ತಾಡೋದು ಅಂದರೇ ಎಲ್ಲಿಲ್ಲದ ಆನಂದ ಅಂತಾನೇ ಹೇಳ್ಬೇಕು. ಚಿಕ್ಕಂದಿನಲ್ಲಿ ನಮ್ಮೂರ ಹತ್ತಿರದ ರಾಮನಾಥಪುರದ ಜಾತ್ರೆಗೆ ಹೋಗುವುದು, ಕುಶಾಲನಗರ ಜಾತ್ರೆ, ಬೇಸಿಗೆಯಲ್ಲಿ ಬೇಲೂರು ನಮ್ಮ ಮನೆ ದೇವರಾದ್ದರಿಂದ ಅಲ್ಲಿಗೆ ಹೋಗುತ್ತಿದ್ದೆವು. ಬೇಲೂರಿಗೆ ಹೋದ ಮೇಲೆ ಹಳೆಬೀಡಿಗೂ ಹೋಗಲೇ ಬೇಕಾದ್ದರಿಂದ ಅಲ್ಲಿಗೂ ಹೋಗಿ ಬರುತ್ತಿದ್ದೆವು. ಅದೇ ರೀತಿ, ವರ್ಷಕ್ಕೊಮ್ಮೆ, ಧರ್ಮಸ್ಥಳ, ಸುಬ್ರಹ್ಮಣ್ಯ, ಇತ್ತಕಡೆ ಮೈಸೂರು, ನಂಜನಗೂಡು ಹೀಗೆ ದೇವಸ್ಥಾನಗಳಿಗೆ ಕರೆದೊಯ್ಯುತ್ತಿದ್ದರು. ನನಗೆ ನನ್ನೂರಿನಿಂದ ಹೊರಗೆ ಹೋಗುವುದೆಂದರೇ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ಕಾರಣ ನನ್ನೂರಿನ ಬಗ್ಗೆ ನನಗೆ ಅಸಡ್ಡೆಯಾಗಲಿ, ದ್ವೇಷವಾಗಲಿ ಏನು ಇರಲಿಲ್ಲ. ಆದರೇ, ನಮ್ಮನೆಯಲ್ಲಿ ನಾನು ಒಬ್ಬನೆ ಇದ್ದದ್ದು. ಆಡಲು ಜೊತೆಗಾರರಿಲ್ಲ, ಎಲ್ಲರೂ ದನಕರುಗಳೆಂದು ಹೊಲಗಳಿಗೆ ಹೋಗುತಿದ್ದರು, ಹೊಳೆದಂಡೆಯಲ್ಲಿ ಅಲೆದಾಡುತಿದ್ದರು. ನಾನು ಅಲ್ಲಿಗೆ ಹೋದರು ಹೆಚ್ಚು ಹೊತ್ತು ಇರುವಂತಿರಲಿಲ್ಲ, ನನ್ನಮ್ಮ ಯಾರಾದರೂ ಕೈಯಲ್ಲಿ ಮನೆಗೆ ಬರಲು ಹೇಳಿ ಕಳುಹಿಸುತಿದ್ದಳು. ನೀರಲ್ಲಿದ್ದೆ ಎಂಬ ವಿಷಯ ತಿಳಿದರಂತೂ ಮುಗಿದೇ ಹೋಯಿತು, ಅಲ್ಲಿ ಜಾಗ ಸರಿಯಿಲ್ಲ, ದೆವ್ವ, ಭೂತ ಅದು ಇದು ಅಂತಾ ಹೆದರಿಸಿ ನಾಲ್ಕು ಬಾರಿಸುತಿದ್ದಳು. ಆಗ್ಗಾಗ್ಗೆ ನಮ್ಮೂರಲ್ಲಿ ದೆವ್ವ ಮೆಟ್ಟಿದೆ, ಭೂತ ಮೆಟ್ಟಿದೆ ಅಂತಾ ಹೇಳುತ್ತಿರುವುದು, ಮತ್ತು ಅವರನ್ನು ನಮ್ಮೂರಿನ ಶನಿದೇವರ ದೇವಸ್ಥಾನಕ್ಕೆ ಕರೆ ತರುತ್ತಿದ್ದನ್ನು ಕೇಳುತಿದ್ದೆ. ನನಗೆ ಇನ್ನಿಲ್ಲದ ಕುತೂಹಲ, ದೆವ್ವ ಹೇಗೆ ಬರುತ್ತದೆ, ಬಂದಾಗ ಹೇಗಿರುತ್ತಾರೆ, ಅವರು ಕಲ್ಲನ್ನು ತಿಂದು ಕಲ್ಲನ್ನು ಅರಗಿಸುವಷ್ಟ ಗಟ್ಟಿಗರಾಗುತ್ತಾರೆಂದು ಹೇಳಿದ್ದಾಗೆಲ್ಲ, ನನಗೂ ದೆವ್ವ ಹಿಡಿದು, ನಾನು ನೀರಿನಲ್ಲಿ ಆಡುವಾಗ ಹೆದರಿಸುವು, ಜೋರು ಮಾಡುವ, ದಡಿಯಂದಿರಿಗೆ ಹೊಡೆಯಬೇಕೆನಿಸುತಿತ್ತು. ಆದರೇ, ಕೆಲವೊಮ್ಮೆ, ದೆವ್ವ ಹಿಡಿದು ಸತ್ತೇ ಹೋದರೆಂದಾಗ ಇನ್ನಿಲ್ಲದ ಭಯ ಆವರಿಸುತ್ತಿತ್ತು. ಈ ಭೀಕರ ಕೊನೆಯನ್ನು ಕಂಡು ನಾನು ಎಷ್ಟೋ ಬಾರಿ ಬೆಚ್ಚಿ ಬಿದ್ದಿದ್ದೇನೆ. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ ಈ ಹಳ್ಳಿಯ ವಾತವರಣದಿಂದ ನನಗೆ ಬಿಡುಗಡೆ ಬೇಕೇಂದು ಹಾತೊರೆಯುತ್ತಿದ್ದದ್ದು ಇದೇ ಕಾರಣಕ್ಕೆ.


ಪ್ರತೀ ವರ್ಷವೂ ಹೋದ ಜಾಗಗಳಿಗೆ ಹೋಗುತ್ತಿದ್ದರೂ ನನಗೆ ಆಸಕ್ತಿ ಕಡಿಮೆಯಾಗಿರಲಿಲ್ಲ, ಇದಕ್ಕೆ ಕಾರಣ ಎಷ್ಟು ಬಾರಿ ನೋಡಿದರೂ ಅರ್ಥಮಾಡಿಕೊಳ್ಳದ ಮುಠ್ಠಾಳನೆಂಬುದಲ್ಲ. ನನ್ನ ಮನಸ್ಸು ಹೊರ ಪ್ರಪಂಚಕ್ಕೆ ಹಾತೊರೆಯುತಿತ್ತು ಮತ್ತು ಹೊಸತನ್ನು ಬೇಡುತಿತ್ತು. ಹೀಗೆ ಮೊದಲುಗೊಂಡ ನನ್ನ ಪ್ರವಾಸದ ಹುಚ್ಚು, ಕೆಲವೊಮ್ಮೆ ಎಂಥಹ ವೈಪರೀತ್ಯಕ್ಕೆ ಏರಿತಿದ್ದೆಂದರೇ, ನಾನು ನನ್ನ ಜೇಬಿನಲ್ಲಿ ೫೦೦ರೂಪಾಯಿಗಿಂತ ಹೆಚ್ಚಿದ್ದರೆ ಸಾಕು ಸುಮ್ಮನ್ನೆ ಯಾವುದೋ ಊರಿಗೆ ಹೊರಟು ಅಲ್ಲಿನ ಊರು ಕೇರಿಯನ್ನು ಸುತ್ತಾಡಿ ಬರುತ್ತಿದ್ದೆ. ಆ ಬಗೆಯಲ್ಲಿಯೇ ಕರ್ನಾಟಕದ ಹಲವಾರು ಸ್ಥಳಗಳನ್ನು ನೋಡಿ ಬಂದಿದ್ದೇನೆ. ನನ್ನ ಸ್ನೇಹಿತ ಒಮ್ಮೆ ನನಗೆ ಹೇಳಿದ್ದ, ನೀನು ಹೋಗುವುದು ಸರಿ ಆದರೇ, ಒಂದು ಕ್ಯಾಮೆರಾ ತೆಗೆದುಕೊಂಡು ಹೋದರೇ, ಅನೂಕೂಲವೆಂದು, ನಾನು ಅವನಿಗೆ ಹೇಳಿದ್ದೆ, ಕ್ಯಾಮೆರಾ, ಅದಕ್ಕೆ ಬೇಕಾದ ಬ್ಯಾಗು, ಬಟ್ಟೆ ಅಂತಾ ಕುಳಿತರೇ ಈ ಜನ್ಮದಲ್ಲಿ ನಾನು ಹೋಗುವುದೇ ಇಲ್ಲ, ಅದಕ್ಕೆ ಹಾಕುವ ೧೦-೨೦ ಸಾವಿರಗಳಿಗೆ ಹೆಚ್ಚು ಕಡಿಮೆ ಕರ್ನಾಟಕ ಮುಗಿಸೇ ಬರುತ್ತೇನೆಂದು. ನಮ್ಮ ಬಹಳ ಜನ ಇದನ್ನು ಆಗ್ಗಾಗ್ಗೆ ಮಾಡುತ್ತಿರುತ್ತಾರೆ, ಅವರಿಗೆ ಪ್ರವಾಸವೆಂದರೆ ಒಂದು ಕ್ರಮಪದ್ದ ಪ್ರಾರ್ಥಮಿಕ ಶಾಲೆಯ ಪ್ರವಾಸದಂತೇ ಇರಬೇಕು. ಅಲ್ಲಿ ಕಿಂಚಿಷ್ಟೂ ಏರು ಪೇರಾಗಬಾರದು. ಬಟ್ಟೆ ಬರಿ ಪ್ರತಿಯೊಂದು ಚೊಕ್ಕವಾಗಿರಬೇಕು. ಇದೆಲ್ಲಾ ನನ್ನ ಪ್ರವಾಸದಲ್ಲಿಲ್ಲ, ಆ ಊರಿನ ಬಗ್ಗೆ ಇಲ್ಲೇ ತಿಳಿದು ಅರಿತು ಪೂರ್ವಾಗ್ರಹ ಪೀಡಿತರಾಗಿ ಹೋದರೇ ಅಲ್ಲಿನ ನೈಜತೆ ತಿಳಿಯುವುದಿಲ್ಲ. ಅದಕ್ಕಾಗಿಯೇ ನಾನು ಎಷ್ಟೋ ಬಾರಿ ಹೋಗಿ ಬಂದ ಮೇಲೆ ಹೇಳುತಿದ್ದದ್ದು.

ಆದರೇ, ಕೊಲೊಂಬೊ ಪ್ರವಾಸ ಹಾಗಾಗಲಿಲ್ಲ, ಅದೊಂದನ್ನು ನನ್ನ ಜೀವನದ ಮಹತ್ತರ ಸಾಧನೆ ಅಂತಾ ತೋರಿಸುವ ಗುಂಗಿನಲ್ಲಿ ನನ್ನ ಅಹಂಕಾರವು ಆಟ ಆಡಿತ್ತು ಅನ್ನಿಸುತ್ತದೆ. ನಾನು ಹೋಗುವುದನ್ನು ಸಾಕಷ್ಟು ಮಂದಿಗೆ ತಿಳಿಸಿಯೇಬಿಟ್ಟಿದ್ದೆ. ಅದು ಘೋರ ಅಪರಾಧವೆಂಬುದು ಆಮೇಲೆ ತಿಳಿಯಿತು. ನನಗೆ ಮೊದಲು ಏನು ಎನಿಸದಿದ್ದರೂ, ಕೆಲವು ನನ್ನ ಸ್ನೇಹಿತರಂತೂ ನಾನೇ ಮೊದಲ ಬಾರಿಗೆ, ಕೊಲೊಂಬೊಗೆ ಹೋಗುತ್ತಿರುವುದೆನ್ನುವಂತೆಯೂ ಹೇಳಿ ನನ್ನ ಬಗ್ಗೆ ಅತೀ ಹೆಚ್ಚಿನ ಜಾಗೃತೆವಹಿಸಿದ್ದರು. ಅವರ ಆ ನೆರವಿಗೆ ನಾನು ಋಣಿಯಾಗಿದ್ದೇನೆ. ಅದರಂತೇಯೇ, ಹೋಗುವ ದಿನ ಬಂದಾಗ, ಏನೇನೊ ಕಲ್ಪನೆಗಳು ನನ್ನ ಕಣ್ಣಲ್ಲಿ, ಕೊಲೊಂಬೊ ಬಗ್ಗೆ, ನನ್ನ ಕಳೆದ ದಿನಗಳ ಬಗ್ಗೆ, ಅದನ್ನು ನನ್ನ ತೆವಳಿಗಾಗಿಯೇ, ಬಯಸದೇ ಬಂದ ಭಾಗ್ಯವೆಂಬ ಅಂಕಣವೊಂದನ್ನು ಬರೆದೆ. ಅದು, ನನಗೆ ಕೊನೆ ಕೊನೆಗೆ ಅದೆಷ್ಟು ಭಾಲಿಷವೆನಿಸಿತೆಂದರೆ, ಅಲ್ಪನಿಗೆ ಸಿರಿ ಬಂದರೇ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿಯುವುದು ಎಂದರೇ ಇದೇ ಎನಿಸತೊಡಗಿತು. ನನ್ನ ಬಗ್ಗೆ ನನಗೆ, ಅಸಹ್ಯ ಹುಟ್ಟಿಸಿತೆಂದರೇ, ತಪ್ಪಾಗುವುದಿಲ್ಲ. ನಾನು ಆ ಅಂಕಣ ಬರೆದು ವಿಮಾನ ನಿಲ್ದಾಣಕ್ಕೆ ಹೊರಡುವಾಗ, ನನ್ನಲ್ಲಿ ಮಿಂಚಿನಂತೆ ಎಲ್ಲವೂ ಬಂದು ಹೋದವು. ನನ್ನ ಹುಟ್ಟೂರು, ನನ್ನೂರಿನ ಸಾರಿಗೆ ವ್ಯವಸ್ಥೆ, ವಿದ್ಯಾಬ್ಯಾಸ, ನನ್ನ ಆ ದಿನದ ಸ್ತಿತಿಗತಿ, ಇಂದಿನ ವೇದಿಕೆ, ಹೀಗೆ ಹತ್ತು ಹಲವು. ನಾನು ಯಾವ ಅಂಧಶ್ರದ್ದೆಯಲ್ಲಿದ್ದೆನೆಂದರೇ, ನಾನು ಚಿಕ್ಕವನಿದ್ದಾಗ, ನಾಳೆ ಬೆಳಿಗ್ಗೆ, ಶಾಲೆಯಿಂದ ಪ್ರವಾಸ ಹೋಗುತ್ತಿದ್ದೆನೆಂದು ನಮ್ಮ ಬೀದಿಯ ಎಲ್ಲ ಹುಡುಗರಿಗೂ ಹೇಳಿ, ನೆಂಟರಿಗೆಲ್ಲಾ ಹೇಳಿ ಅವರಿಂದ ೫-೧೦ ರೂಪಾಯಿಯನ್ನು ಪಡೆದು, ರಾತ್ರಿಯಿಡಿ ನಿದ್ದೆ ಮಾಡದೇ, ಅಮ್ಮ ಬಂದು, ಮಲಗು ಬೆಳ್ಳಿಗ್ಗೆ ನಾನು ಏಳಿಸ್ತಿನಿ, ಇಲ್ಲಂದ್ರೆ ಬಸ ನಲ್ಲಿ ಮಲಗಿ ಬಿಡ್ತೀಯಾ ಏನು ನೋಡೋದಿಲ್ಲ ಎಂದು ಹೇಳಿ ಮಲಗಿಸುತಿದ್ದಳು. ಆ ರಾತ್ರಿಯೂ ಅಷ್ಟೇ ಎಲ್ಲರಿಗೂ ಮಿಸ್ ಕಾಲ್ ಕೊಟ್ಟು ನಾಳೆ ನಾನು ಕೊಲೊಂಬೊ ಹೋಗುತ್ತಿದ್ದೆನೆಂದು ಹೇಳತೊಡಗಿದೆ. ಕೆಲವರು, ಈ ನನ್ ಮಗ ಅಲ್ಲೇ ಸತ್ತರೇ ಸಾಕು ಎನಿಸುವಷ್ಟು ಇದನ್ನು ಮೇಲಕ್ಕೆ ತೆಗೆದು ಕೊಂಡು ಹೋದೆ.

ವಿಮಾನ ನಿಲ್ದಾನದ ಬಳಿ ಬಂದಾಗ, ಅಲ್ಲಿನ ಬೆಳಕು, ಅಲ್ಲಿನ ಸಿರಿ, ನನ್ನೂರಿನ ಚಿತ್ರ ಹಾಗೆ ಬಂದು ತೀರಾ ಮಂಕಾಗತೊಡಗಿತ್ತು. ನನ್ನೂರೆಲ್ಲಿ, ಈ ವಿಮಾನ ನಿಲ್ದಾನವೆಲ್ಲಿ? ನಮ್ಮೂರಿಗೆ ಬರುವ ಬಸಗಳನ್ನು, ಕಂಡರೇ, ಒಂದು ವಾರ ಅನ್ನ ಸೇರುವುದಿಲ್ಲ, ಹೊರಗಡೆ, ಬಸ್ ಬಣ್ಣ ಮಾಸಿ ಹೋಗಿ, ಮಣ್ಣು ಮೆತ್ತಿರುತ್ತದೆ, ಕಂಡಕ್ಟರ್ ಗಳಂತೂ ಅವರ ಬಟ್ಟೆ ತೊಳೆಯುವುದು ಅಕ್ಷಮ್ಯ ಅಪರಾಧವೆಂದು ಭಾವಿಸಿ ಅವರು ಅದನ್ನು ತೊಳೆಯದೇ ಆ ಖಾಕಿ ಬಟ್ಟೆ ಅದರ ಬಣ್ಣವನ್ನೆ ಬದಲಾಯಿಸಿರುತ್ತದೆ. ವಿಮಾನ ನಿಲ್ದಾಣದ ಹೊರಗೆ, ಕಿವಿ ಕಿತ್ತು ಹೋಗುವಂತೆ ಅಬ್ಬರಿಸುವ ಈ ವಿಮಾನಗಳು ನಿಲ್ದಾನದ ಒಳಗಿದ್ದಾಗ ಸದ್ದೇ ಮಾಡುವುದಿಲ್ಲ. ಮಾಡುವುದಿಲ್ಲವೆನ್ನುವುದಕಿಂತ ಕೇಳುವುದೇ ಇಲ್ಲ. ನಮ್ಮೂರ ಬಸ್ ಸ್ಟ್ಯಾಂಡ್ ನಲ್ಲಿ ಸುತ್ತಾಡುವ ಪೋಲಿ ಹುಡುಗರು ಇಲ್ಲಿರುವುದಿಲ್ಲ. ಕಂಡ ಕಂಡ ಉಗಿಯುವ ಚಿತ್ರವೇ ಕಾಣುವುದಿಲ್ಲ. ಪರಿಸರವೆಷ್ಟು ತಂಪಾಗಿರುತದೆಂದರೇ, ಟಿಕೆಟ್ ಕೌಂಟರಿನಲ್ಲಿ ಕುಳಿತಿರುವ ಆ ಸೌಂದರ್ಯದ ಗಣಿಗಳಿಂದ ಹೊರಸೂಸುವ ಮುತ್ತಿನಂತ ದಂತಪಂಕ್ತಿ, ಎಂಥಹ ಅರಸಿಕನನ್ನು ರಸಿಕತೆಯ ಉನ್ಮಾತೆಗೆ ಕರೆದೊಯ್ಯುತ್ತವೆ. ನಾನು ಒಳಗೆ ಹೋಗಿ, ಅಲ್ಲಿ ವಲಸಿಗರ ಪರವಾನಗಿ ಪಡೆಯಲು ಅರ್ಜಿ ತುಂಬಿಸುವಾಗ, ನನ್ನೆಡೆಗೆ ನಾಲ್ಕಾರು ಜನರು ಬಂದು ತುಂಬಿಕೊಡಲು ಕೇಳಿದರು. ನಾನು ನನ್ನ ಹರಕು ಮುರುಕು ತೆಲುಗನ್ನು ಬಳಸಿ, ಅವರ ಅರ್ಜಿಗಳನ್ನು ತುಂಬಿಸಲೆತ್ನಿಸಿದೆ. ನಂತರವಷ್ಟೆ ಗೊತ್ತಾದದ್ದು ಅವರು ನನ್ನೊಡನೆ ಕೊಲೊಂಬೊಗೆ ಪ್ರಯಾಣಿಸುತಿದ್ದಾರೆಂದು. ನನಗೆ ಕುತೂಹಲ ತಡೆಯಲಾರದೆ, ಅವರನ್ನು ಪ್ರಶ್ನಿಸತೊಡಗಿದೆ, ಅವರು ಈ ನನ್ಮಗ ಬರೆದಿರೋ ನಾಲ್ಕು ಸಾಲಿಗೆ, ನಲ್ವತ್ತು ಪ್ರಶ್ನೆ ಕೇಳ್ತಾನೆಂದು ಭಾವಿಸಿಕೊಂಡು ನನ್ನಿಂದ ಹೊರಟೆ ಹೋದರು. ಅವರ ನನ್ನ ನಡುವೆ ನಡೆದ ೨೦-೩೦ ನಿಮಿಷಗಳ ತಾತ್ಪರ್ಯವಿಷ್ಟೆ, ಅವರು ಆಂಧ್ರಪ್ರದೇಶದ, ತೀರಾ ಪ್ರದೇಶದವರು, ಅಲ್ಲಿಂದ ಕೊಲೊಂಬೊಗೆ ಗಾರೆ, ಕೆಲಸ, ಕಬ್ಬಿಣದ ಕೆಲಸಗಳಿಗೆ ಹೋಗುತ್ತಿದ್ದರು. ಅಲ್ಲಿಗೆ ಅವರು ಹೋಗಿ ಬರಲು ವಿಮಾನವನ್ನೆ ಬಳಸುತಿದ್ದರು. ಅವರ ಊರುಗಳಿಂದ ಬಹಳ ಮಂದಿ ಅಲ್ಲಿಗೆ ಹೋಗಿ ನೆಲೆಸಿದ್ದರು ಕೂಡ. ಇದು ನನ್ನನ್ನು ಒಮ್ಮೆಲೆ ಮನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತು. ಮೊದಲ ಬಾರಿ ವಿಮಾನಯಾನವೆಂದು ಬೀಗುತ್ತಿದ್ದ ನನ್ನ ಮನಸ್ಸು ಹಾಗೆ ತಣ್ಣಗಾಗತೊಡಗಿತು. ವಿಮಾನಯಾನವನ್ನು ನನ್ನ ಅದೃಷ್ಟದ ಸಂಕೇತವೆಂದು ಭಾವಿಸಿದ್ದ ನನಗೆ ಇದೆಲ್ಲಾ ಇಂದಿನ ದಿನದಲ್ಲಿ ದಿನನಿತ್ಯ ಅವಶ್ಯಕತೆಗಳು, ನಾನಿರುವ ಕೂಪದಲ್ಲಿ ವಿಮಾನಯಾನ ದೊಡ್ಡದೆನಿಸಿದರೂ ಇದು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಿಗೂ ಯಾವ ರೀತಿಯ ಉನ್ಮಾದವನ್ನು ನೀಡಿರಲಿಲ್ಲ. ಅವರೆಲ್ಲರೂ, ಸಾಮಾನ್ಯ ಒಂದು ಬಸ್ಸನಲ್ಲಿ ಪ್ರಯಾಣಿಸುತ್ತಿರುವಂತೆಯೋ ಅಥವಾ ಆಟೋದಲ್ಲಿ ಹೋಗುತ್ತಿರುವಂತೆಯೋ ಭಾವಿಸಿದ್ದರು. ಇದು ನನ್ನ ಮುಠ್ಠಾಳತನದ ಪರಮಾವಧಿಯೆನಿಸತೊಡಗಿತು. ನಾನು ನನ್ನೊಡನೆ ನನ್ನ ಬಗ್ಗೆ, ಈ ಪ್ರಯಾಣದ ಬಗ್ಗೆ ಕಟ್ಟಿದ್ದ ಎಲ್ಲ ಗೋಪುರಗಳು ತಲೆಕೆಳಗಾಗಿ, ನನ್ನ ಕ್ಯಾಮೆರಾ ತೆಗೆದು ಫೋಟೋ ತೆಗೆದರೇ ನಾನೆಲ್ಲಿ ಯಾವುದೋ ಕಾಡಿನಿಂದ ಬಂದವನಾಗಿ ಕಲ್ಪಿಸಿಕೊಳ್ಳುತಾರೆನಿಸತೊಡಗಿತು. ಆದರೂ, ನನ್ನನ್ನ್ನು ಬೆರಗುಗೊಳಿಸುವಂಥಹ ಹಲವಾರು ವಿಷಯಗಳು ಅಲ್ಲಿದ್ದವು, ಅವುಗಳಲ್ಲ್ಲಿ ನನ್ನನ್ನು ಬಿಡದೇ ಕಾಡಿದ್ದು, ಗಗನಸಖಿಯರ ರೂಪು ರೇಷೆಗಳು. ಪ್ರತಿಯೊಂದು ಕಂಪನಿಯೂ ತನ್ನ ವಿಮಾನದ ಅಥವಾ ತನ್ನ ಕಂಪನಿಯ ಬಣ್ಣವನ್ನು ಬಿಂಬಿಸುವ ಧರಿಸುಗಳನ್ನು ಅವರದೇ ಶೈಲಿಯಲ್ಲಿ ಮಾರ್ಪಾಡುಮಾಡಿರುತ್ತವೆ. ಕೆಲವರು ಮಂಡಿತನಕ ತುಂಡುಲಂಗ ಉಟ್ಟು, ಅಲ್ಲಿಂದ ಕೆಳಕ್ಕೆ, ಉದ್ದ ಕಾಲು ಚೀಲಗಳನ್ನು ತೊಟ್ಟ ಸ್ವಲ್ಪ ನಿರಾಸೆ ಮಾಡಿದರೇ, ಇನ್ನು ಕೆಲವರೂ ಇವ್ಯಾವುದರ ಗೋಜಿಗೆ ಹೋಗದೇ ಸೀರೆ ಸುತ್ತಿಸಿ ಕಳುಹಿಸಿರುತ್ತಾರೆ. ಸೀರೆಯುಡುವುದು ಹೆಂಗಸಿನ ಅಂದವನ್ನು ಹೆಚ್ಚಿಸುತ್ತದೆಂದು ಎಲ್ಲರೂ ಹೇಳುತ್ತಾರೆ, ನನಗೇನೋ ಹಾಗೆ ಅನಿಸುವುದಿಲ್ಲ, ನಮ್ಮ ಉಡುಪುಗಳು ಎಲ್ಲರಿಗೂ ಹೊಂದುವುದಿಲ್ಲ. ನಮ್ಮ ಭಾರತೀಯ ಸೀರೆಯನ್ನು ಬಿಳಿ ಚರ್ಮದ ಹೆಂಗಸು ಉಟ್ಟರೇ ಅವಳು ಸುಂದರವಾಗಿ ಕಾಣುತ್ತಾಳಾ! ಆದರೇ, ಈ ಗಗನ ಸಖಿಯರನ್ನು ನೋಡಿದಾಗ, ಅಥವಾ ಹೋಟೆಲ್ ಗಳಲ್ಲಿ, ಕೆಲಸ ಮಾಡುವ ಹುಡುಗಿಯರನ್ನೆಲ್ಲಾ ಕಂಡಾಗ ನನಗೆ ಬಹಳ ಅಸೂಯೆಯೆನಿಸುತ್ತದೆ. ಅವರಲ್ಲಿರುವ ಆ ಸೌಮ್ಯ ಸ್ಮಾಭಾವ, ಆ ತಾಳ್ಮೆ, ನನ್ನಂಥ ತಿಳಿಗೆಡಿಯ ಅರಿವಿಗೆ ಸಿಗುವುದೇ ಇಲ್ಲಾ. ನೀವು ಏನನ್ನೆ ಕೇಳುತ್ತಿರಿ ಅವರು ಅಷ್ಟೇ ನಗು ಮುಖದಿಂದ ಉತ್ತರಿಸಿ ನಿಮ್ಮನ್ನು ಸಾಗುಹಾಕುತ್ತಾರೆ. ನಾನು ನೋಡಿದಂತೆ ಕೆಲವೊಮ್ಮೆ ಕಚ್ಚೆ ಬದ್ರವಿರದ ಎಷ್ಟೋ ಗಂಡಸರು ಅವರ ಸಂಸಾರಿಕ ವಿಚಾರಗಳನ್ನು ಕೆಣುಕುತ್ತಿರುತ್ತಾರೆ, ಆದರೆ ಇವರೆಂದು ಕೋಪಿಸಿ ಕೊಂಡು ರೇಗಾಡಿದ್ದನ್ನು ನಾನು ಕಂಡಿಲ್ಲ. ಮೌನವನ್ನು ನಮ್ಮ ದೌರ್ಬಲ್ಯವೆಂದೂ ತೀರ್ಮಾನಿಸುವವರೇ ಹೆಚ್ಚು. ನಾನು ವಿಮಾನದ ಒಳಕ್ಕೆ ಹೋದಾಗ, ಬಾಗಿಲಲ್ಲಿಯೇ ನಮಸ್ತೆ ಮಾಡಿ ಬರಮಾಡಿಕೊಂಡರು. ನಾನು ಹೋಗಿ ಕುಳಿತ ನಂತರ, ಸ್ವಲ್ಪ ಸಮಯದ ನಂತರ, ಇಬ್ಬರು ಗಗನ ಸಖಿಯರು ನಾವು ಕುಳಿತುಕೊಳ್ಳುವಾಗ ಎಚ್ಚರವಹಿಸಬೇಕು, ಅಪಾಯ ಸಂಭವಿಸಿದರೆ ಮಾಡಬೇಕಾದುದರ ಬಗ್ಗೆ ಹೇಳತೊಡಗಿದರು. ಅವರು ಬಾನುವಾರ ಬರುತ್ತಿದ್ದ ಮೂಖಿವಾರ್ತೆಯ ರೀತಿ ವಿವರಿಸುತ್ತಿದ್ದದ್ದು ಏನು ಅರ್ಥವಾಗದಿದ್ದರೂ ಅವರ ಬೆಡಗು ಬಿನ್ನಾನ ಮಾತ್ರ ಅವರೆಡೆಗೆ ಆಕರ್ಷಿಸುತಿತ್ತು. ಅವರುಟ್ಟಿದ್ದ ಹಸಿರು ಬಣ್ಣದ ಸೀರೆ ಅದರ ಮೇಲಿದ್ದ ಚಿಕ್ಕ ಚಿಕ್ಕ ಹೂವಿನ ಆಕಾರಗಳು, “ಲಂಗದ ಮೇಲಿದೆ ಚಿಟ್ಟೆ, ಚಿಟ್ಟೆಗೆ ಮನಸನು ಕೊಟ್ಟೆಯೆನಿಸತೊಡಗಿತು”. ನನಗೆ ಇವರೆಲ್ಲಾ ಮೊದಲು ಕೆಲಸಕ್ಕೆ ಅರ್ಜಿ ಹಾಕಿ ನಂತರ ಅದಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಮಾಡಿಬರುತ್ತಾರೆನಿಸಿತು. ಯಾಕೆಂದರೇ, ಅವರು ವಿಮಾನದಲ್ಲಿರುವಷ್ಟು ಸಮಯ ಯಾವ ಮೂರ್ಖನು ಅತ್ತಿತ್ತ ತಿರುಗುವುದಿಲ್ಲ, ಅಂಥಹ ಸೌಂದರ್ಯ ಅವರಲ್ಲಿರುತ್ತದೆ, ಅಷ್ಟೇ ಮೋಹಕತೆ ಅವರೆಡೆಗೆ ಸೆಲೆಯುತ್ತದೆ. ನಾನು ಹಾಗೆ ಯೋಚಿಸತೊಡಗಿದೆ, ನನ್ನೂರಲ್ಲಿ, ನಾನು ಶಾಲೆಗೆ ಹೋಗುವ ಸಮಯದಲ್ಲಿ, ಹೆಣ್ಣನ್ನು ರೇಗಿಸಿ, ಹೊಡೆತ ತಿಂದ, ಇವನು ಹಿಂದೆ ಹೋಗಿದ್ದಕ್ಕ್ ಅವಳ್ಯ್ ಉಗಿದು ಹೋದಳು, ಹೀಗೆ ಹತ್ತು ಹಲವು ಮನಸ್ಸಿಗೆ ಬರತೊಡಗಿದವು. ನಾನು ಚಿಕ್ಕವನಿದ್ದಾಗಲೂ ಅಷ್ಟೇ, ಗಲಾಟೆ ಮಾಡಿದವರನ್ನು, ಹೆಣ್ಣು ಮಕ್ಕಳ ಮಧ್ಯೆ ಕೂರಿಸಿಬಿಡುತಿದ್ದರೂ ನಮಗಂತೂ ಯಾವುದೋ ಪರಲೋಕಕ್ಕೆ ಹೋಗಿ ಬಂದವರಂತೆ ಅನಿಸುವುದಲ್ಲದೇ ಅದಕ್ಕಿಂತ ಅವಮಾನ ಮತ್ತೊಂದಿಲ್ಲವೆನಿಸುತಿತ್ತು. ಆದರೇ, ನಾವು ಬೆಳೆ ಬೆಳೆಯುತ್ತಾ, ಹೆಣ್ಣಿನ ಕಡೆಗೆ ವಾಲುವುದನ್ನು ನೆನೆದರೇ ಇದೆಂಥ ವಿಚಿತ್ರವೆನಿಸುತ್ತದೆ. ನಾನು ಆ ಕಲ್ಪನಾ ಲೋಕದಿಂದ ಬರುತ್ತಿದ್ದಂತೆ, ಆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅವಳನ್ನು ಮಾತನಾಡಿಸತೊಡಗಿದ್ದ. ಅದು, ಇಳಿಯುವಾಗ ಅವಳಿಗೆ ಇವನ ವಿಳಾಸವನ್ನು ಕೊಟ್ಟು ಇಳಿದ ಅದಿಲ್ಲೆ ಬೇಕಿಲ್ಲದ ವಿಚಾರ.

ಸ್ವಲ್ಪ ಸಮಯದ ನಂತರ, ವಿಮಾನ ನಿಧಾನಕ್ಕೆ, ತಿರುಗಿಸಿ ಹೊರತಿತು, ನನಗೆ ಮೊದಲಲ್ಲಿದ್ದ, ಎಲ್ಲ ಬಗೆಯ ಆಸಕ್ತಿಗಳು ಕುಗ್ಗಿ, ನಾನು ಸಾಮಾನ್ಯ ಎ.ಸಿ.ಬಸ್ಸಿನಲ್ಲಿ ಕುಳಿತಿರುವಂತೆ ಭಾಸವಾಯಿತು. ಒಮ್ಮೆಲೇ, ನಮ್ಮ ಜಾತ್ರೆಯಲ್ಲಿ ಬರುವ ಕೊಲೊಂಬಸ್ ರೀತಿ ಮೇಲಕ್ಕೇರಿತು ಎನ್ನುವುದನ್ನು ಬಿಟ್ಟರೇ, ಮಿಕ್ಕಾವ ಸಂತೋಷವೂ ಆಗಲಿಲ್ಲ. ನನ್ನ ಮಿತ್ರವೃಂದ, ನೀನು ಅರಬ್ಬಿ ಸಮುದ್ರದ ಕಡೆಯಿಂದ ಹೋಗುವುದರಿಂದ ಆದಷ್ಟು ಫೋಟೋಗಳನ್ನು ತೆಗೆದುಕೊಂಡು ಬರಬೇಕೆಂದು, ಕಟ್ಟಪ್ಪಣೆ ಮಾಡಿತು. ದುರ್ವಿದಿಯೆಂಬಂತೆ, ನಾನು ಕುಳಿತ ಎಡಬದಿಯಲ್ಲಿ ವಿಮಾನದ ರೆಕ್ಕೆಯಿದ್ದುದರಿಂದ ಏನೇನೂ ಕಾಣುತ್ತಿರಲಿಲ್ಲ.

02 ಡಿಸೆಂಬರ್ 2008

ನನ್ನೂರು ಬಾನುಗೊಂದಿ




ಕುಡಿದು ಕುಡಿದು ಕುಣಿದಾಡೋ ಮನುಜ, ಕುಡಿತವನರಿತವ ನಿಜಕೂ ರಾಜ ಎಂಬುದೊಂದು ನಾಣ್ಣುಡಿಯಿದೆ ಅದನ್ನ ಕುಡಿದು ಕುಣಿದಾಡೋ ನನ್ನಂಥ ಮಂಗಗಳೆಲ್ಲಾ ನಮ್ಮ ಶ್ಲೋಗನ್ ಎಂದೇ ಬಿಂಬಿಸಿದ್ದೇವೆ. ನೀವು ಬೆಂಗಳೂರಿನಿಂದ ಬರುತ್ತಿದ್ದೇರೆಂದರೆ, ಹಾಸನಕ್ಕೆ ಬಂದು ಅಲ್ಲಿಂದ ಕುಶಾಲನಗರಕ್ಕೆ ಹೋಗುವ ಬಸ್ಸಿನಲ್ಲಿ ಹತ್ತಿ ಒಂದು ಗಂಟೆ ಕಳೆದ ನಂತರ ಕೊಣನೂರು ಎಂಬ ಒಂದು ಊರು ಸಿಗುತ್ತದೆ, ಇದನ್ನು ಅಪಹಾಸ್ಯ ಮಾಡಬೇಡಿ, ನಮ್ಮ ಹಳ್ಳಿಯ ಕಥೆಗಳೇ ಹೀಗೆ, ಹುಟ್ಟುದಾಗ ಇದ್ದ, ಕಥೆಗಳೆಲ್ಲ ಹಳಸಲಾಗಿ ಮರು ಜನ್ಮ ಪಡೆದು ಅರ್ಥವೇ ಬದಲಾಗುತ್ತಾ ಹೋಗುತ್ತದೆ. ಇದಕ್ಕೆಂದು ನಾನೇನು ಉದಾಹರಣೆ ಕೊಡಬೇಕಾಗಿಲ್ಲ, ಎಲ್ಲ ಊರಿನ ಹೆಸರಿನ ಹಿಂದೆಯೂ ಒಂದೊಂದು ಇತಿಹಾಸವಿದ್ದೆ ಇರುತ್ತದೆ. ಕೊಳಲೂರು ಎಂಬುದು ಈ ಉರಿನ ಮೊದಲ ಹೆಸರು, ಊರಿನ ಉತ್ತರ ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದೆ, ಆ ನದಿಯ ದಂಡೆಯಲ್ಲಿ ಕೊಳಲು ಗೋಪಾಲಸ್ವಾಮಿ ದೇವಸ್ಥಾನವಿತ್ತೆಂದು ಅದರಿಂದಲೇ ಈ ಊರಿಗೆ ಈ ಹೆಸರು ಬಂತೆಂದು ಅದು ನಂತರ ಬದಲಾಯಿತೆಂದು ಹೀಗೆ ಚರಿತ್ರೆ ಶುರುವಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಇದು ನನ್ನೂರು ಅಲ್ಲಾ ಎನ್ನುವುದನ್ನೂ ಹೇಳಲೇ ಬೇಕಾಗುತ್ತದೆ. ಇದು ನಮ್ಮೂರಿಗೆ ಏಕ ಹತ್ತಿರವಿರುವ ಏಕಮಾತ್ರ ಪಟ್ಟಣ ಪ್ರದೇಶ. ಕೊಣನೂರನ್ನು ದಾಟಿ ಕುಶಾಲನಗರದ ರಸ್ತೆ ಹಿಡಿದು ಹೋದರೆ, ಒಂದೆರಡು ಕೀ.ಮೀ.ನಲ್ಲಿ ಒಂದು ಬೋರ್ಡ್ ಕಲ್ಲು ಸಿಗುತ್ತದೆ, ಅಲ್ಲಿ ಬರೆದಿರುವುದನ್ನು ಓದಲು ನಿಮಗೆ ಸಾಧ್ಯವಿಲ್ಲವಾದ್ದರಿಂದ ಅದನ್ನು ಓದುವ ಗೋಜಿಗೆ ಹೋಗದೇ ಎಡಕ್ಕೆ ತಿರುಗಿದರೆ, ಒಂದು ದೊಡ್ಡ ಊರು ಸಿಗುತ್ತದೆ ಅದರ ಹೆಸರನ್ನು ಕಂಡು ಹಿಡಿಯುವುದು ಕಷ್ಟ ಏಕೆಂದರೇ ನಮ್ಮ ಹಳ್ಳಿಗಳಲ್ಲಿ ಶಾಲೆಯ ಮುಂದೆ ಬಿಟ್ಟರೆ ಮತ್ತೆಲ್ಲೂ ಹೆಸರು ಬರೆದಿರುವುದಿಲ್ಲ. ಬರೆಯುದೇ ಇರುವುದಕ್ಕೇ ರಹಸ್ಯವೇನೂ ಇಲ್ಲದಿದ್ದರೂ, ಊರಿನ ಪರಿಚಯವಿಲ್ಲದೇ ದಾರಿ ತಪ್ಪಿಸಿಕೊಂಡು ಇಲ್ಲಿವರೆಗೂ ಯಾರೂ ಬರುವುದಿಲ್ಲವೆಂಬ ನಂಬಿಕೆ. ಈ ಊರಿನ ಹೆಸರು ಸರಗೂರು, ನಾನು ಈ ರೀತಿ ದಾರಿಯಲ್ಲಿ ಸಿಕ್ಕ ಸಿಕ್ಕ ಊರಿನ ಪರಿಚಯ ಮಾಡುತ್ತ ಕುಳಿತರೇ, ನನ್ನೂರಿನ ಪರಿಚಯ ಬರುವ ವೇಳೆಗೆ ನೀವು ಎದ್ದೇ ಹೋಗಿ ಬಿಡುತ್ತೀರಾ ಅಷ್ಟೇ. ಸರಗೂರಿನಿಂದ ಎರಡು ಕಿಲೋಮೀಟರ್ ನಡೆದು ಎಡಕ್ಕೆ ತಿರುಗಿ ನಡೆದು ಒಂದು ಇಳಿಜಾರು ಇಳಿದರೇ ಅಲ್ಲಿ ಕಾಣುವುದೇ ನನ್ನೂರು, ಊರಿಗೆ ಹೋಗುವ ಸರದಿಯಲ್ಲಿ ಒಂದೆರಡು ಅಡಿಕೆ ತೋಟಗಳು ಸಿಗುವುದರಿಂದ, ಓ ಊರು ಚೆನ್ನಾಗಿದೆ ಅನ್ನಿಸುತ್ತದೆ, ಚೆನ್ನಾಗಿಯೂ ಇದೆ ಎನ್ನಿ. ಹಾಗೆಯೇ ಸ್ವಲ್ಪ ಮುಂದುವರೆದರೇ ನಮ್ಮೂರ ಶಾಲೆ ಎದುರಾಗುತ್ತದೆ, ಅಲ್ಲಿಯೇ ನೀವು ನಮ್ಮೂರಿನ ಹೆಸರು ಓದಬಹುದು, ಸರಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆ, ಬಾನುಗೊಂದಿ, ಹಾಸನ ಜಿಲ್ಲೆ. ಅದಕ್ಕಿಂತ ದೊಡ್ಡದಾಗಿ ಕಾಣುವುದು ಆ ಬೋರ್ಡ ಬರೆಸಿಕೊಟ್ಟ ದಾನಿಗಳ ಹೆಸರು, ನಮ್ಮಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ದೃಶ್ಯವಿದು. ದೇವಸ್ಥಾನದಲ್ಲಿ, ದಾನ ಕೊಟ್ಟ ಫ್ಯಾನ್ ಗಳಲ್ಲಿ, ಗಂಟೆಗಳ ಮೇಲೆ, ಏನೇ ದಾನ ಕೊಟ್ಟಿದ್ದರೂ, ಕೊಡುಗೆಯೆಂದು ಅವರ ಮನೆತನದಿಂದ ಹಿಡಿದು ಮೊಮ್ಮಕ್ಕಳವರೆಗೂ ಅವರೆಲ್ಲ ಹೆಸರನ್ನು ಬರೆಸಿಲ್ಲವೆಂದರೇ ಅವರಿಗೆ ಸಮಧಾನವಿಲ್ಲ. ಇನ್ನೂ ಶಾಲೆಯ ಒಳಕ್ಕೆ ಹೋದರೇ, ಮುಗಿದೇ ಹೋಯಿತು, ನೀರು ಕುಡಿಯುವ ಲೋಟದಿಂದ ಹಿಡಿದು ತೂಗಾಡುವ ಗಡಿಯಾರದವರೆಗೂ ಎಲ್ಲದರ ಮೇಲೂ ದಾನಿಗಳ, ಕೊಡುಗೆಗಳ ಹೆಸರಿದೆ, ಮೇಜು, ಕುರ್ಚಿ, ಬೀರು, ಹೀಗೆ ಯಾವೊಂದನ್ನೂ ಹೊರೆತು ಪಡಿಸುವ ಹಾಗಿಲ್ಲ. ಅದರ ಪಕ್ಕದಲ್ಲೇ ಇರುವ ನಮ್ಮೂರ ಮದುವೆ ಮಂಟಪ ನೋಡಿದರೆ ಅದರ ವಿಸ್ತೀರ್ಣ ನಿಮಗೆ ಅರ್ಥವಾಗುತ್ತದೆ. ಎಲ್ಲಾ ಫ್ಯಾನಿನ ರೆಕ್ಕೆಯ ಮೇಲೂ ಕೊಡುಗೈ ದಾನಿಗಳ ಹೆಸರಿದೆ. ಇನ್ನು ಎಡಕ್ಕೆ ತಿರುಗಿ ನಡೆದರೆ ನಮ್ಮೂರಿನ ಒಳಕ್ಕೆ ಹೋಗಬಹುದು. ಊರಿನಲ್ಲಿ ಒಟ್ಟು, ೧೮೭ ಮನೆಗಳಿವೆ, ಒಕ್ಕಲಿಗರೇ ಹೆಚ್ಚಿರುವ ಈ ಊರಿನಲ್ಲಿ, ಮಡಿವಾಳರೂ, ನಾಯಕರೂ, ಮತ್ತು ಹರಿಜನ ಜಾತಿಗೆ ಸೇರಿದ ಒಂದಿಪ್ಪತ್ತು ಮನೆಗಳಿವೆ.

ನಮ್ಮೂರಿನ ನಕ್ಷೆ ನಿಮಗೆ ಹೇಳಿಬಿಡ್ತಿನಿ, ಆಮೇಲೆ ಜನರ ಬಗ್ಗೆ ಹೇಳ್ತಿನಿ. ನಮ್ಮೂರನ್ನು ಒಂದು ಗೋಳಾಕರದಲ್ಲಿದೆ ಅಂತಾ ತಿಳಿದುಕೊಳ್ಳಿ, ಪಶ್ಚಿಮದಿಕ್ಕಿನಿಂದ ಊರಿಗೆ ಪ್ರವೇಶಿಸಿ ಹೊರಟರೆ ಬಲಕ್ಕೆ ಹರಿಜನರ ಮನೆಗಳು ಸಿಗುತ್ತವೆ, ನಂತರ ಎಡಕ್ಕು ಬಲಕ್ಕೂ ಒಂದೆ ಸಮನೆ ಚೂರು ಜಾಗವನ್ನು ಬಿಡದೆ ಕಟ್ಟಿರುವ ಸಣ್ಣ ಉದ್ದಕ್ಕು ಹಿಂದಕ್ಕೆ ಹೋಗಿರುವ ಮನೆಗಳು ಸಿಗುತ್ತವೆ. ಸಾಮಾನ್ಯವಾಗಿ ಎಲ್ಲ ಮನೆಯ ಮುಂದೆಯೂ ಇರುವ ಜಗಲಿಯ ಮೇಲೆ ವಯಸ್ಸಾದ ಅಜ್ಜಿಯರು ಕುಳಿತಿರುವುದು ಕಾಣಸಿಗುತ್ತದೆ. ನಮ್ಮೂರಿನಲ್ಲಿರುವುದು ಮೂರು ಮುತ್ತಿನ ಅಂಗಡಿಗಳು, ಒಂದೊಂದು ಒಂದೊಂದು ಪಕ್ಷಕ್ಕೆ ಸೇರುತ್ತದೆ. ಬಿ.ಜೆ.ಪಿ., ದಳ, ಕಾಂಗ್ರೇಸ್ ಆದ್ದರಿಂದ ತಾವು ಯಾವ ಅಂಗಡಿಯ ಮುಂದೆ ನಿಂತು ಮಾತನಾಡುತ್ತಿದ್ದೀರೆಂಬುದು ಮುಖ್ಯ. ಇಂದಿನ ಎಲ್ಲ ಹಳ್ಳಿಗಳಲ್ಲು ಕಂಡುಬರುವ ಈ ವಿಚಿತ್ರಗಳು ಹಳ್ಳಿಗರಿಗೇ ಸಾಮಾನ್ಯವೆನಿಸುತ್ತದೆ, ಹೊರಗಿನವರಿಗೆ ಇದೊಂದು ಕೌತುಕವೆನಿಸಿದರೂ ಸರಿಯೆ. ಆದರೇ ನಾನು ಯಾವ ಪಕ್ಷಕ್ಕೂ ನನ್ನ ಬೆಂಬಲವನ್ನು ಘೋಷಿಸದೆ ಇರುವುದರಿಂದ ನಾನು ಯಾವ ಅಂಗಡಿಯ ಮುಂದೆಯೂ ಕಾಣಸಿಗುವುದಿಲ್ಲವೇ ಸರಿ. ನಾನು ಘೋಷಿಸಿಲ್ಲ ಎಂಬುವುದಕ್ಕಿಂತ ಅವರು ನನ್ನನ್ನು ಸೇರಿಸಿಕೊಂಡಿಲ್ಲ. ನಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಕೆಲವೊಂದು ದೇಶಾಭಿಮಾನಿ ದೊರೆಗಳಿಗೆ ಬೇಸರ ತರಿಸಬಹುದು, ಆದರೂ, ನಾನು ಹೇಳುವುದನ್ನ ಹೇಳುತ್ತಲೇ ಇರುತ್ತೇನೆ. ನಾನು ಕಾಣದ ದೇಶಪ್ರೇಮವೇನಲ್ಲ ಸಾಕು ಸುಮ್ಮನಿರಿ ಅಂತಾ ಹೇಳುತ್ತಲೂ ಇದ್ದೆನೆ.

ಹೀಗೆ ಊರಿನ್ನು ಬಿಟ್ಟು, ಹೊರಕ್ಕೆ ಅರ್ಧ ಕಿಲೋಮೀಟರ್ ನಡೆದರೆ, ಒಂದು ಬಿಳಿ ಬಣ್ಣದ ಒಂಟಿ ಮನೆ ಕಾಣುತ್ತದೆ, ಅದೇ ನಮ್ಮ ಮನೆ. ಜೋರಾಗಿ ನಮ್ಮ ಮನೆ ಅನ್ನೊ ಹಾಗೆ ಇಲ್ಲ, ನಮ್ಮಪ್ಪ ಬೈತಾರೆ, ಇವನೇನು ದುಡಿದಿಲ್ಲ, ನಮ್ಮಪ್ಪನ ಹತ್ತಿರನೂ ಬಂದಿರಲಿಲ್ಲ, ನಾನು ಸಂಪಾದನೆ ಮಾಡಿದ್ದು ಅಂತಾ.
ನಮ್ಮ ದೇಶದ ಮಟ್ಟದಲ್ಲಿಯೂ ಅಷ್ಟೆ, ಇದನ್ನಾ ನೀವು ಗಮನಿಸುತ್ತಲೇ ಇರುತ್ತೀರಿ, ನಮ್ಮ ದೇಶ, ನಮ್ಮ ಧರ್ಮ, ನಮ್ಮ ಜಾತಿ, ಹೀಗೆ ಎಲ್ಲವೂ ನಮ್ಮದು ನಮ್ಮದು ಎಂದು ಘೋಷಿಸುವವರನ್ನ ಒಮ್ಮೆ ಹಿಡಿದು ಕೇಳಿ, ನಿನ್ನ ಧರ್ಮದ ಬಗ್ಗೆ ಸ್ವಲ್ಪ ನನಗೂ ತಿಳಿಸು ಎಂದು, ನಿನ್ನ ದೇಶದ ಸ್ತಿತಿಗತಿ ಹೇಳು ಎಂದು ಇಲ್ಲ ಅವನಲ್ಲಿ ಉತ್ತರವಿರುವುದಿಲ್ಲ. ಅವನಲ್ಲೇ ಅಲ್ಲಾ, ನಮ್ಮನ್ನು ಆಳುತ್ತಿರುವ ಮಹಾಮಣಿಗಳಲ್ಲೂ ಇರುವುದಿಲ್ಲ, ಎಲ್ಲರೂ ಭೂತಕಾಲವನ್ನೆ ಜಪಿಸುತ್ತಾ ನಿನಗೆ ಗೊತ್ತಾ, ನಮ್ಮ ತಾತನಿಗೆ ೩೦೦ ಎಕರೆ ತೆಂಗಿತ್ತಂತೆ, ೫೦೦ ಎಕರೆ ಅದು ಇತ್ತಂತೆ, ಅಂತಾ ಅವನ ಕುಟುಂಬದ ಇತಿಹಾಸ ಬಿಚ್ಚುತ್ತಾನೆ. ದೇಶಾಭಿಮಾನಿಗಳು ಅಷ್ಟೆ, ಗಾಂಧಿಯುಗವನ್ನೆ ಹೊಗಳುತ್ತಾ ನಾವು ದಾನ ಮಾಡಿದ ಪಾಕಿಸ್ತಾನವೆಂದು, ಧರ್ಮಾಂದರದ್ದು ಇದೇ ಗೋಳು, ಅವರು ವರ್ತಮಾನವನ್ನು ಅರಗಿಸಿಕೊಳ್ಳಲು ಸಿದ್ದವೇ ಇಲ್ಲ. ಅಳಲೆ ಕಾಯಿ ಪಂಡಿತನೂ ಅಷ್ಟೇ, ತನ್ನ ಮನೆಯ ಪಕ್ಕದ ಅಂಗಡಿಗೆ ಬಂದ ಜೆಂಡು ಬಾಮ್, ಬಗ್ಗೆ ಯೋಚಿಸುವುದನ್ನು ಬಿಟ್ಟು ಅದೆಲ್ಲಾ ಏನ್ ಮಾಡುತ್ತೆ ಅನ್ನೋ ಉಡಾಫೆತನ ತೋರಿಸುತ್ತಾನೆ. ಅವನು ಚರಕ ಸುಷೃತರ ಕಥೆ ಹೇಳತೊಡಗುತ್ತಾನೆ.


ಮಾತು ಎಲ್ಲಿಗೋ ಬೆಳೆಯಿತು, ನಮ್ಮೂರಿನ ಮಹಾನಿಯರದ್ದೆಲ್ಲಾ ಇದೆ ಸಮಸ್ಯೆ ಅವರಾರು ಇಂದಿನ, ವಾಸ್ತವಿಕತೆಯ ಬದುಕಿಗೆ ಬರುವುದೇ ಇಲ್ಲ. ಅದಕೊಂದು ಉದಾಹರಣೆ ನೋಡಿ, ದಲಿತರ ಮೇಲಿನ ಶೋಷಣೆ ಇಂದು ನಿನ್ನೆಯದಲ್ಲ, ಇದು ನಿರಂತರವಾಗಿ ನಡೆಯುತ್ತಲೇ ಇತ್ತು. ಇಡಿ ಭಾರತವೇ ಎಚ್ಚೆತ್ತಿದ್ದರೂ ಬಾನುಗೊಂದಿ ಮಾತ್ರ ಮಲಗಿ ನಿದ್ರಿಸುತ್ತಿತ್ತು, ನಮ್ಮೂರಿನ ನಾರಯಣಿ, ನಾರಾಯಣ ಹೆಸರಿನಿಂದ ನಾಮಕರಣವಾದ ಇವನು, ನಾಣಿ ಆಗೋ ತನಕ ಬಂತು ಇವನ ಹೆಸರು. ಇದ್ದಿದ್ದರಲ್ಲಿ, ಪಿ.ಯು.ಸಿ ಡುಮುಕಿ ಹೊಡೆದಿದ್ದ ನಾರಯಣನೇ ಹೆಚ್ಚು ಓದಿದವನು. ಬಹಳ ಶಾಂತ ಪ್ರಾಣೀಯಾದ ಇವನು, ಇವನಾಯಿತು ಇವನ ಕೆಲಸವಾಯಿತು ಅಂತಾ ಕಾಲ ಕಳೆಯುತ್ತಾ ಇದ್ದ. ಒಂದು ದಿನ ಹೀಗೆ, ಅವನ ಜಮೀನಿನ ಪಕ್ಕದಲ್ಲಿ ರಸ್ತೆ ಚರಂಡಿ ತೋಡಬೇಕು, ರಸ್ತೆಗೆ ಟಾರ್ ಹಾಕ್ತಾರೆ ಅಂತಾ ಕುಂಟು ನೆಪ ಹೇಳಿ, ಮರನೇ ಕಡಿದು ಬಿಟ್ಟರು. ಅದು ಒಂದು ಅಸಡ್ಡೆ ಅಂದ್ರೂ ಸರಿನೇ, ಉಡಾಫ್ಎ ಅಂದರೂ ಸರಿನೆ, ಇದಕ್ಕೆ ತಿರುಗಿ ಬಿದ್ದ ನಾರಯಣ ದಿಡಿರ್ ನೇ ಪೋಲಿಸ್ ಕರೆದುಕೊಂಡು ಬಂದಿದ್ದ, ಆಗಲೇ ನಮ್ಮೂರಿನ ಮುಖಂಡಿರಿಗೆ ಗೊತ್ತಾದದ್ದು ದೇಶ ಬದಲಾಗುತ್ತಿದೆ ಅಂತಾ.
ಇಷ್ಟೆಲ್ಲಾ ಆಗುತ್ತಾ ಇದ್ದರೂ ನಮ್ಮೂರಿನಲ್ಲಿ ಏನು ನಡೆಯುತ್ತಿದೆಂಬುದು, ಯಾರಿಗೂ ತಿಳಿದಿಲ್ಲ ಅನ್ನಿಸುತ್ತದೆ, ಆದರೇ, ಎಲ್ಲರೂ ಬದಲಾಗುತ್ತಿದೆ, ಅನ್ನೊದನ್ನ ಒಪ್ಪಿಕೊಳ್ತಾರೆ. ಏನು ಬದಲಾಗುತ್ತಿದೆ ಅನ್ನೊದನ್ನ, ನಾನು ಬರೆದ ನಂತರ ಹೇಳ್ತೆನೆ.

22 ನವೆಂಬರ್ 2008

ನಾನರಿಯ(ದ) ನನ್ನಂತಾರಳ ೧

ಕವನಗಳು
ನೆನಪಾಗದೇ...........?
ಗೆಳತಿ ನಿನಗೆ ನೆನಪಿದೆಯಾ?
ಆ ಸಂಜೆಗಳು, ನಾನು ನಿನ್ನನ್ನು ಬೆನ್ನಟ್ಟಿ ಬರುತಿದ್ದ ದಿನಗಳು,
ಗಂಟೆಗಳು ಕಳೆದಿವೆ ನಿನ್ನ ಬರುವಿಗೆ ಕಾಯಲು,
ನಿನ್ನ ಆ ನಗು, ಆ ಸಣ್ಣ ನೋಟಕ್ಕಾಗಿ
ಮುಗಿದೆವು ನನ್ನೆರಡು ವರುಶ...
ಅದೆನು ನಾಚಿಕೆ ಆಗ ನಿನ್ನ ಕಣ್ಣಲ್ಲಿ,
ಮೊದಲೇ ಕೆಂಗುಲಾಬಿ ಬಣ್ಣ ನಿನ್ನ ಕೆನ್ನೆ,,,,
ನಾ ಬಂದ ಕ್ಷಣ ಅದಿನ್ನು ರಂಗೇರುತ್ತಿತ್ತು,
ನನಗಾಗ ಅದರ ಅರಿವಿರಲಿಲ್ಲ ಆದರೀಗ,
ಎಲ್ಲಾ ಎಳೆ ಎಳೆಯಾಗಿ ನೆನಪಾಗುತಿದೆ,

ರಾತ್ರಿ ಇದ್ದಕ್ಕಿದ್ದ ಹಾಗೆ ನೆನಪಾಯಿತು,
ಹೌದು ಕಳೆದಿವೆ ವರುಶಗಳು,
ಸುಮಾರು ಎಂಟು ವರ್ಷವಾಯಿತು,
ಆದರು ಇಂದು ಕಂಡೆನೆನೋ ಎಂಬಂತಿದೆ,
ಇಂದು ನೀನು ಎರಡು ಮಕ್ಕಳ ತಾಯಿ,
ನಾನಿನ್ನು ಹುಡುಗಾಟದ ಹುಡುಗ,
ನಿನಗೆ ಇದೆಲ್ಲ ನೆನಪಿರಲು ಸಾಧ್ಯ್ವವಾ? ನಾ ಅರಿಯೇ ಅದು
ನಾನಿನ್ನ ನೋಡಬೇಕೇಂಬ ಆಸೆ ಇಲ್ಲವೇ ಇಲ್ಲ,
ಆದರು ಆ ನೆನಪು ಕಾಡುತಿದೆ,
ಆ ಮುಸಂಜೆ, ಕೆರೆ ಏರಿಯ ಮೇಲಿನ ಜೊತೆ ನಡುಗೆ,
ನೀ ಬೇಕೆನ್ನಿಸುತಿದೆ,
ಇದೇನಾ ಪ್ರೀತಿ?
ನಾ ಅರಿಯೆ ಅದನು, ಯಾಕೇ?
ನನಗೆ ತಿಳಿಯದು ಅದರ ಅರ್ಥ,
ನಿನ್ನೋಡನೆ ಬೇಕೇಂಬುದೋಂದೆ ಆ ದಿನದ ಬಯಕೆ............
ಅಲ್ಲಿ ಅರ್ಥ ಹುಡುಕುವ ಸಮಯವೆಲ್ಲಿತ್ತು? ನೀನೇ ಹೇಳು....
ಯಾರದರು ಕಂಡರೆಂಬ ಬಯದೀ,
ನೀ ದೂರ ನಾ ದೂರ
ಎಲ್ಲೋ ನಿಂತು ಮಾತಡುತಿದ್ದೆವು.............

ನಾಚಿಕೆ ನಿನಗೆ ಮೀಸಲಿತ್ತೇನೋ ಅನಿಸಿದೆ,
ಆ ಮಟ್ಟದ ನಾಚಿಕೆ ಇನ್ನು ಮುಂದೆ ಕಾಣಲೇ ಇಲ್ಲ
ಯಾವ ಹೆಣ್ಣಿನ ಮೊಗದಲ್ಲು..........
ನೀನು ಬೆರೋಬ್ಬರ ಮನದಾಕೆ
ಯಾಕೆ ಕಾಡುತೀ ನನ್ನ ಹೀಗೆ?
ಬೇಡ ಈ ಪ್ರೀತಿಯ ನಂಟು ಸಾಕೆನಗೆ..............

ನಿನ್ನವ....೨೬-೧೦-೦೭

ನೀನಿಲ್ಲದೆ. . . . .!

ನೀ ಬಿಟ್ಟ ನೆನಪಲ್ಲ ಅದು ಮರೆತರೆ ತಾನೆ ನೆನಪಾಗುವುದು
ನಿನ್ನದೆ ತಾಣವಿದು ಮತ್ತೆ ನಿನ್ನಯ ಬರುವಿಕೆಗೆ ಕಾಯುತ್ತಿದೆ ನನ್ನಯ ಮನ
ನೀನಿಲ್ಲದ ಬದುಕು ಬೇಡವೆಂದೆನಿಸಿರಬಹುದು,
ನೀನಿಲ್ಲದೆ ಬದುಕಲಾಗುವುದಿಲ್ಲವೆಂದು ನಾನೆಂದು ಹೇಳಿಲ್ಲ,
ಬದುಕುತ್ತೇನೆ, ಬದುಕಲೇ ಬೇಕು, ಸಾವೆಂಬುದು ಬರುವುದಿಲ್ಲ ಎನಗೆ,
ನಾನೊಬ್ಬ ಪಾಪಿ, ಪಾಪಿಯೆಂದಿಗೂ ಚಿರಾಯು,
ಅದೇನು ಮೋಡಿಯೋ, ಈ ಪ್ರೀತಿಯೊಳು,
ಹೃದಯಕ್ಕೆ ನೆತ್ತರಾಗಿದ್ದ ಗೆಳತಿ ದೂರ ಸರಿದಳು ಯಾವ ಮಾತು ಹೇಳದೆ,
ನನ್ನದೇ ತಪ್ಪಿದ್ದರೂ ಸರಿಯೆ, ಅವಳದೇ ತಪ್ಪಿದ್ದರೂ ಸರಿಯೆ,
ನಾನು ನ್ಯಾಯವ ಕೇಳ ಹೊರಟಿಲ್ಲ,
ಅನ್ಯಾಯದ ಮಾತು ನನಗೆ ತಿಳಿದಿಲ್ಲ, ನನ್ನ ಹೃದಯದ ಬಡಿತ ನಿಲ್ಲಿಸಲೂ ಕಾರಣವೇಕಾದೆ ನೀನು,
ಅಂತರಾಳದ ವೇದನೆಯನ್ನು ನಿನ್ನೊಡನೆ ಹಂಚುವ ಮಹದಾಸೆ ಎನಗಿಲ್ಲ,

ಭಾವನೆಗಳ ಸಂಗಮವೇ..?
ಮನದಾಳದ ಭಾವನೆಯೇ ಅದೆನ ಆಳುವೆ ಈ ಮನವ
ಹೇಳಳಾರದ ನೋವಾ ಇದು?
ತಡೆಯಲಾರದೆ ಉಕ್ಕುವ ....ಇದು?
ಅದೆಂತೋ ಅರಿಯೇ ಇದರ ಪರಿಯ
ಆದರು ಹೇಳುವ ಬಯಕೆ ಮೂಡಿದೆ

ಆತುರವೋ ಅವಸರವೋ
ಹೇಳ ಹೋರಟರೆ ಹರಿವೆ ನದಿ ನೀರಿನಂತೆ,
ನಂಬಿಕೆಯೆನಗೆ ಬಾವನೆಗೆ ಕೊನೆಯಿಲ್ಲವೆಂದು
ಸಾಕಾಗಿದೆ ಈ ಬದುಕು ಸಾಕೆನಗೆ ಈ ಯಾತನೆ
ಆದಾವ ಪರಿ ಕಾಡುವೆಯನಗೆ?
ಭಾವ ಜೀವಿಯ ನೋವು ನಿನಗರಿವಿಲ್ಲವೆ?
ಬಾವನೆಯೊಂದಿಗಿನ ಈ ನಾಟಕದ ತೆರೆಯಂದು?
ಕಲರವ, ನೂಕಾಟ, ಗೊಂದಲ ಸಾಕು, ಸಾಕೆನಗೆ...

ಭಾವ ಜೀವಿಯ ಬದುಕು ಬಲು ಬೇಸರವೆಂದು ಹೇಳಲಾರೆ

ನಿನ್ನವ........೦೨-೧೧-೦೭
ಆಸೆ
ಕಳೆದಿವೆ ೫೭೦ ಮಿಲಿಯನ್ ವರ್ಷಗಳು,
ಭೂಮಿ ಆಳಿದವರು,
ಆಳ ಅಳೆದವರು ಯಾರು ಉಳಿಯಲಿಲ್ಲ ಆದರು ನಿಂತೆ ಇಲ್ಲ
ನಮ್ಮ ಆಸೆಯ ಹೂಡೆದಾಟ
ಪ್ರೀತಿಯ ಹುಡುಕಾಟ
ನಮಗು ಗೊತ್ತು ಏನು ಹೊತ್ತು ಹೋಗಲಾರೆವೆಂದು
ಆದರು ಬಿಡಲೊಲ್ಲದೀ ಮನಸು
ಹುರಿದುಂಬಿಸಿ ಹಾಳು ಮಾಡಿದೆಯೆನ್ನ
ಬೇಡವೆಂದರೂ ಮೋಹದ ಸುಳಿಗೆ ಕರೆದ್ಡೊಯ್ಯುತಿದೆ
ಅದು ಸುಳಿ ಅಲ್ಲಿಂದ ಬರಲಾರೆ ಹೊರಗೆ
ಆದರೇನ ಹೇಳಲಿ ನಿನ್ನ ಮೋಡಿಗೆ ಸಿಲುಕದವರಾರು?

ಬಣ್ಣ ವಿಲ್ಲದ ಸರಳ ಚಿಟ್ಟೆ ನೀನು,
ಮೋಸವೋಗುವೆನೆಂಬ ಭಯವೆನಗೆ
ಆದರೆನಂತೆ ನಿನ್ನ ಮೋಹಕ್ಕೆ ಸೋಲದ ಗಂಡಸಾರು?
ಬೆಂಕಿಯ ಮೋಡಿಗೆ ಸೋತ ಪತಂಗ ನಾನು
ನಿನ್ನ ಸೆಳೆತ ಬಿಡದೆನ್ನ
ಅದು ಸುಳಿಯೋ, ಪ್ರಪಾತವೋ ನಾ ಕಾಣೇ.....
ನಿನ್ನವ...೧೫-೧೧-೦೭
ವಾಹಿನಿ
ನಾ ಏನ ಬಲ್ಲ್ಲೆ ಗೆಳತಿ
ನಿನ್ನ ಮನದಾಳದ ಭಾವನೆಯ
ತಿಂದುಂಡು ಅಲೆದಾಡುವ ಉಂಡಾಡಿ ನಾನು
ಸೋಮಾರಿಯ ಸೋದರ
ತಿಳಿಯದು ನಿನ್ನಯ ಆಳ
ದೊರೆಯು ಕಾಯ್ವನು ನಿನಗಾಗಿ
ಚಿಂತೆ ಬೇಡ ನನಗೊಂದೆ ಬಯಕೆ
ದೊರೆಯು ಸೇರಲು ಸಾಲು ಸಾಲು ವಾಹಿನಿಯರು
ಅವರ ಗುಂಗಿನಲ್ಲಿ ನಿನ್ನ ಮರೆವನೇ ?
ಇಲ್ಲವೆಂದಿತು ನನ್ನ ಮನಸಾಕ್ಷಿ
ಒಮ್ಮ್ವೆ ದೂಡಿತೆನ್ನ
ಅಯ್ಯೊ ಅಪಶಕುನವೇ ನಿನೊಬ್ಬ ಮೂಡ
ನಿನಗೆನು ತಿಳಿದುದು ವಾಹಿನಿಯ ಶಕ್ತಿ
ಅದರ ಸೆಳೆತ ನೀನರಿಯೆ ತೊಳಗಾಚೆ...........:)

ನಾ ಯಾಕೆ ಹೆಳಲಿ ಸುಳ್ಳು
ನನಗೇನು ಬಂದಿತು
ಇಲ್ಲದ ಸುಳ್ಹೇಳಿ ನನಗೇನು ಬರುವುದು
ಇನ್ಯಾವ ನರಕಕ್ಕೆ ನಾ ತೆರಳಲಿ,,,,,
ಇದಕ್ಕಿಂತ ಪಾಪಿ ಜನ್ಮದೊರೆಯದಂತೆ ಹೇಳಿದ ನನ್ನ್ನ ಪ್ರೀತಿಯ ಮಾವ
ಅವನಂತೆ ಎಲ್ಲರ ಹಣೆಬರಹ ಗೀಚೋದು
ಅದೇನೋ ಹೆಸರದು ಆ ಬೊಮ್ಮ ಅಲ್ಲಲ್ಲ ಬ್ರಹ್ಮ

ನಾನು ನಿಮ್ಮಷ್ಟು ಬಲ್ಲವನಲ್ಲ
ನಿಮ್ಮಷ್ಟು ತಿಳಿದವನೂ ಅಲ್ಲ
ತಿಳಿಯಬೇಕೆಂಬ ಬಯಕೆ
ಆದರೇನು ಮಾಡಲಿ
ಹಣೆ ಬರಹಕ್ಕೆ ಹೊಣೆಯಾರೆಂಬಂತಿದೆ ನನ್ನ ಬದುಕು
ವಿವೇಚನೆ ನಿಮಗಿರಲಿ
ಸಾಧಾರಣ ಬಾಳು ಸಾಕೆನಗೆ.......
ಎತ್ತ ಹರಿದಿದೆ ವಾಹಿನಿಯ ಮನಸು
ಸಾಗರದೊರೆಯ ಸಂಗಮವೆಂದು?

ತುಂಗಾ ನದಿಯೇ?
ತುಂಗೆ... ಅದಾರೋ ಶಂಕರ,
ಶಾರದೆ ದೇವಿಯ ಕಾಣಲು ಬಂದು ಅಲ್ಲೇ ನೆಲಸಿದ.......
ಮಾರು ಹೋದನವ ನಿನ ಕಂಡು, ನಿನ್ನ ಬಿಂಕ ಬಿನ್ನಾಣ ನೋಡಿ,

ಗಂಗಾಮೂಲ ಹುಟ್ಟೂರು ನಿನ್ನದು, ಎಂಥಹ ಸೊಬಗಿನ ನಾಡು,
ನಿನ್ನಂತ ಚಲುವಿಗೆ ಜನ್ಮವಿಡಲೆ ಜನಿಸಿದ ನಾಡದು,
ಅದಾರು ಕರೆದರೊ ಅದನ್ನು ಕುದುರೆಮುಖವೆಂದು,
ಭದ್ರೆ ಬಂದಳೂರಿಗೆಂದು ಮುನಿಸಿ ಹೊರಟೆಯೇ ನೀನು
ತೀರ್ಥಳ್ಳಿ ಬಳಸಿ ಬರಲು,
ಅದೇನು ಹುಚ್ಚೆ ನಿನ್ನದು ಹೊರಟೆಯಾಕೆ ಕ್ರಿಷ್ಣೆಯ ಸೇರಲು,
ಭದ್ರೆಯ ಮೇಲೆ ಅಸೂಯೆ ನಿನಗೆ
ಅವಳ ಮುಂಚೆ ಸೇರುವ ಬಯಕೆ,
ಅವಳು ನಿನಗಿಂತ ಚೆಲುವೆ
ಅವಳ ಸಖಿಯರು ಗೊತ್ತಾ ನಿನಗೆ,
ಸೋಮವಾಹಿನಿ, ಸಂಸೆ, ಇನಾರಾರೋ ನಾ ಅರಿಯೆ ಅವರೆಸರ,

ನಿನಗೆಂತು ಮರ್ಯಾದೆ ತಾಯಿ,
ಹೇಳಿದರಲ್ಲಿ ಗಂಗಾ ಸ್ನಾನ ತುಂಗಾ ಪಾನ,
ತುಂಗಾ ತೀರಾ ನಿವಾಸಿನಿಯಂತೆ ತಾಯಿ ಶಾರದೆ,
ಗಾಜನೂರು ನಿನ ತಡೆದ ತಾಣವಲ್ಲವೇ,
ಪಾಪ ಭದ್ರೆ ಲಕ್ಕವಳ್ಳಿಯಂತೆ ಕಟ್ಟೆ ಬಿಟ್ಟಿದ್ದಾರೆ,
ಅಲ್ಲಿಂದ ಅದೆಲ್ಲೋ ದೂರದ ಊರಂತೆ ಕೋಲಾರ ಅಲ್ಲಿಗೆ ಕರಿತಾರೆ,
ಅದೇಗೆ ಹೋದಾಳು ಹೇಳು, ಅವಳಿಗು ಆಸೆ ಸಾಗರ ಕಾಣಲು,
ಅಂತು ನಿನ ದಯೆ ಸೇರಿದವಳು ಕೂಡ್ಲಿಯಲ್ಲಿ

ಭದ್ರಾವತಿಯಂತೆ ಹೆಸರು ಅವಳದು,
ಪಾಪಿ ಜನ ಕಪ್ಪು ಬಳಿದವರೆ,
ಒಮ್ಮೆ ನೋಡವಳ ಕಳಸದಲಿ ಆ ತೊರೆಯ ಸಿರಿ
ಸಾಗರ ದೊರೆಯು ನಾಚಬೇಕು,
ಅರಣ್ಯ ದೇವಿ ಅವಳ ನಂಟಸ್ಥೆಯಂತೆ,
ಆದರು ಅವಳೆಲ್ಲಿಯತನಕ, ಒಂಟಿಯಾದಲು ಗೋಂದಿಯ ಬಳಿ,
ಮಲೀನವಾದಳು ಭದ್ರಾವತಿಯಲಿ,
ನೀನ್ಯಾಕೆ ಸೇರಿದೆ ಅವಳ, ಹರಿಹರವೋ ಏನೋ,
ಹರಿದ್ರೆಯಂತೆ ಅವಳಿಗು ಆಸೆ ನಿನ ಸಂಗ ಸೇರಲು,
ಮತ್ತಾರೋ ಬಂದರಿಲ್ಲಿ ನಿಮ ಮುಖ ಕೆಡಿಸಲು
ಹರಿಹರ ಕಂಪನಿಯಾ? ಹೌದಂತೆ........

ನಿನ್ನವ...೨೬-೧೦-೦೭
ಬೆಂದಕಾಳೂರಿನಿಂದ ಬಳು ದೂರ ನನ್ನೂರು
ಕಾವೇರಿ ನದಿದಂಡೆ, ಪಶ್ಚಿಮಘಟ್ಟದ ತಪ್ಪಲು,
ಮಳೆಗಾಲ ಶುರುವಾಗಿದೆ, ಅಮ್ಮ ಕೈ ಅಡುಗೆ,
ಅಪ್ಪನ ಬೈಗುಳ, ಓದಿ ಓದಿ ಮರುಳಾದ ಕೂಚುಬಟ್ಟ
ಓದಲಿಲ್ಲ ಬರೆಯಲಿಲ್ಲ ಅನ್ನಕೊಟ್ಟ ನಮ್ಮ ರೈತ,

ಬೆಂಗಾಡಿನ ಹೊಗೆ,ಟ್ರಾಫಿಕ್ ಜಂಜಾಟ,
ಫ್ಲರ್ಟಿಂಗ್ಸ್ ಮಾಯಾ, ದುಡ್ಡಿನ ಅಬ್ಬರ,
ಮಧ್ಯೆ ಹಣದುಬ್ಬರ,ಸಾಕೆನಗೆ ನನ್ನೂರೇ ಕುಷಿಯೆನಗೆ,
ಆಧುರೀಕರನದ ವೈಭವವಿಲ್ಲ, ಕಂಪ್ಯೂಟರಿಕರಣವಿಲ್ಲ,
ಬರುವುದೊಂದು ಬಸ್ಸು ನನ್ನೂರಿಗೆ, ಅದು ಬಂದು ಹೋಗುವಾಗ ನಾನಿರುವೆ ನಿದ್ದೆಯಲಿ,
ಪಟ್ಟಣಕ್ಕೆ ಹೋಗುವ ಮಾತೇ ಕನಸಾಗಿದೆ,
ಆದರೂ ಅಂದೋ ಇಂದೋ ಒಮ್ಮೋಮ್ಮೆ ಬಂದು ಹೋಗುವೆ,
ಆ ದಿನವೆ ನನಗೆ ಅಂತರ್ಜಾಲದ ಬೆಸುಗೆ,
ಬನ್ನಿ ಒಮ್ಮೆ ಎನ್ನಯ ಮನೆಗೆ, ಅದೋ ಆ ಪಟದಲ್ಲಿರುವುದೆ ನನ್ನ ಮನೆ,
ಮನೆಯೆಂದರೆ ಬರೀ ಮನೆಯಲ್ಲ,
ಶಾಂತಿಯ ನೆಲೆ,
ನನ್ನೊಳಗಿನ ಆಸೆಗಳು ಗರಿ ಬಿಚ್ಚಿ ಹಾರಾಡುವ ಬಾನಂಗಳವದು,
ನಲ್ಲೆ ಬಿಟ್ಟು ಹೋದ ನೆನಪುಗಳ ಗರಿಗರಿಯಾಗಿ,
ಎಳೆ ಎಳೆಯಾಗಿ ಹರಿದಾಡಿಸುವ,
ಆಂತರ್ಯವನ್ನು ಕೆದಕಿ ಸಿಡಿದೆಬ್ಬಿಸುವ ಮನೆಯದು.
ನನ್ನದೇ ಜಗತ್ತು, ನನ್ನದೇ ಬದುಕು ಯಾರ ಹಂಗಿಲ್ಲ,
ಯಾರ ಭಯವಿಲ್ಲ ನನಗೆ ನಾನೇ ಸಾರ್ವಭೌಮ
ನನ್ನ ಕನಸುಗಳೇ ನನ್ನ ಮಿತ್ರರು

ವಿರಹ
ನಿನ ನೋಡುವ ಬಯಕೆ ಅತಿಯಾಗಿದೆ,
ಅದೇಗೆ ತಡೆಯಲಿ ಈ ವೇದನೆ,
ಅಯ್ಯೊ ಕೋಪಬೇಡ ಹ್ರುದಯದೊಡತಿ
ವೇದನೆಯಲ್ಲ ನಿನದೆ ನೆನಪು,
ನೆನಪಲ್ಲ ಅದು ಮರೆತರೆ ತಾನೆ ನೆನಪಾಗುವುದು
ನನ್ನುಸಿರು ನೀನು ನಿನ ಮರೆತರೆ ಉಸಿರು ನಿಂತು ಮಣ್ಣು ಪಾಲಾಗದೀ ದೇಹ
ಕೆಟ್ಟ ಮನುಷ್ಯ ನಾನು ನನ್ನೆದೆ ಸೇರಿದೆ ನೀನು
ಅದೇನು ಮೋಡಿಯೋ ನಾ ಮರೆತೆ ನನ್ನನೆ
ಸದಾ ನಿನ್ನದೇ ಯೋಚನೆ, ತಳಮಳ, ಕಾಣುವ, ಸೇರುವ ಬಯಕೆ ಮುಗಿಲು ಮುಟ್ಟುತ್ತಿದೆ,
ನಿನಗಾಗದೆ ಈ ತಳಮಳ

ದಾರಿದೀಪ
ನನ್ನೊಲವೇ,
ನಿನ ಕಣ್ಣಂಚಿನ ನಗುವಿನ ನೋಟದ ಪರಿ ನಾ ತಡೆಯೆನು
ಸಾಕು ನಿಲ್ಲಿಸು ಆ ನಗುವ, ತುಟಿಯಂಚಲಿ ಮಿನುಗುವ ನಗುವೇ
ನನ ಕೊಲ್ಲುವೆ ನೀನು ಜೇನ್ ತುಟಿಯೋ ಅದೆನಡಗಿದೆಯೋ
ಮಾಡಿದ ಮೋಡಿಯು ಮರೆತ ಮೈ ಮನದ ನಾಡಿಯೋ
ಸೋತೆ ಗೆಳತಿ ನಿನ್ನಂದಕೆ,
ಆ ಸೊಬಗು ಬಿನ್ನಾನ ಸಾಕೆನಗೆ ತಡೆಯೆನು ಅತಿಯಾದರೆ,
ಚುಂಬಿಸಲೇ ನಲ್ಲೆ ಆ ಕೆಂದುಟಿಯಾ?
ನೋಡೊಮ್ಮೆ ನಿನ್ನ ಬಟ್ಟಲು ಕಣ್ಣುಗಳ ಹರಿಸು ನನ್ನೆಡೆಗೆ
ಅದಾಗಲೀ ದಾರಿ ದೀಪ ಎನ ಬಾಳಿಗೆ,

ನಲ್ಲೆಯ ಸವಿರಾತ್ರಿ
ನಲ್ಲೆಯ ಮನವೇಕೋ ಬಾಡಿದೆ
ಚಿಂತೆಯಳು ಮುಳುಗಿದೆ ಅವಳಂತರಾಳ,
ನನ್ನೆಯ ಚಿಂತೆಯಲ್ಲವದೂ ನನ್ನಯ ಚಿಂತನೆಯಲ್ಲ,

ನನ್ನ ನಲ್ಲೆಯು ನೋಟಕೆ ದಿನ ಕಳೆದಿಹೆನು ನಾನು
ಅವಳಿಗಾಗಿ ಕಾಲ ಕಳೆದಿಹೆನು
ಅವಳೆಂದು ನನ್ನ ನೋಡಬೇಕೆನ್ನಲಿಲ್ಲ,
ನಿನ್ನೆಯಾಕೆ ಕರೆದೊಳು ನಾನನರಿಯೆ,
ನಿನ್ನೆ ಅವಳೊಳಗಿದ್ದ ರತಿ ಕುಣಿದಳೇನೋ,

ಅವಳಿದ್ದಳು ನಿನ್ನೆ ಒಳ್ಳೆಯ ಮನದಲ್ಲಿ
ಆಸೆಯ ಚಿಗುರು ಕುಡಿ ಒಡೆದು
ಹೂವಾಗ ಹೊರಟಿತ್ತು
ಮುತ್ತಿನ ಮಳೆ ಸುರಿದಳು ಚಿರ ಯೌವ್ವನ ಅವಳದು
ಮಗುವಿನಂತವಳು ಒಂದು ಮುತ್ತಿಗೆ ನಿಲ್ಲುವವಳಲ್ಲ,
ರತಿಯ ಮತ್ತೊಂದು ರೂಪವೆ ಅವಳಲ್ಲವೇ,

ಅವಳೆಂದರೆ ಕಾಮದೇವನು ಬೆರಗಾಗಬೇಕು,
ಅದೆಂಥಹ ಹುರುಪು ಅವಳಲ್ಲಿ,
ನಿಸರ್ಗದ ಪ್ರತಿರೂಪ ನಿನ್ನಯ ಅವತಾರ
ನಿನ್ನ ಒಂದೊಂದು ಅಂಗವೂ ಒಂದೊಂದು ನಿಸರ್ಗವೇ ಸರಿ

ಒಂಟಿಯಾಗಿ ಹುಟ್ಟಿ ಜೊತೆಯಾಗಿ ಬೆಳೆದರೂ, ನಾನೊಬ್ಬ ಒಂಟಿಯೆಂದು, ಬದುಕುತಿದ್ದವನ ಬಾಳಿಗೆ ಜೊತೆಯಾಗಿರುವೆನೆಂದು ಬಂದೆ, ನಿನ್ನಯ ಬರುವಿಕೆಯನ್ನು ನಾನೆಂದು ನ್ರಿರೀಕ್ಷಿಸಿರಲಿಲ್ಲ ಆದರೂ ನೀನಾಗೆ ಬಂದೆ, ನನ್ನೊಡನಿದ್ದೆ, ನನ್ನಯ ಹೃದಯದಲ್ಲಿ ನಿನ್ನಯ ಸ್ಥಾನವ ಮಾಡಿಕೊಂಡೆ, ಅಲ್ಲಿಯೆ ನೆಲೆಸಿದ್ದೆ ವರುಷಗಳು, ನಾನು ನಿನ್ನನ್ನು ಒಮ್ಮೆಯು ಯಾಕೆಂದು ಕೇಳಲಿಲ್ಲ. ನಿನ್ನಯ ಬಗೆಗೆ ಒಮ್ಮೆಯು ತಿರುಗಿ ಮಾತಾಡಾಲಿಲ್ಲ, ರಾತ್ರಿ ನನ್ನೊಡನೆ ಕೋಪಿಸಿಮಲಗಿದಾಗಲೂ ಕೇಳಲಿಲ್ಲ, ಮುಂಜಾನೆಯ ಚಳಿಯಲ್ಲಿ ನೀನೆ ಬಂದು ಬಿಗಿದಪ್ಪಿ ನನ್ನ ನರನಾಡಿಯಲ್ಲೆ ಬಿಗಿಯಂತೆ ತಪ್ಪಿದಾಗಲೂ ಉಸಿರಾಡಲಿಲ್ಲ, ನನ್ನೊಳಗಿದ್ದ ಕಾಮದೇವನೊಡನೆ ನೀನು ಕದನಕ್ಕಿಳಿದು ನನ್ನ ಗಂಡಸುತನಕ್ಕೆ ಪರೀಕ್ಶೆ ಒಡ್ಡಿದಾಗಲೂ ಮಾತನಾಡಲಿಲ್ಲ, ನೀ ದೂರಾಗಬೇಕೆಂಬ ಬಯಕೆ ನಿನಗೆ ಬಂದದ್ದು ತಪ್ಪಿಲ್ಲ, ಅದು ಸಹಜವೇ ಸರಿ, ಹರಿಯುವ ನದಿ ಒಂದೆಡೆ ನಿಲ್ಲುಎಂದು ಹೇಳಲಾಗದು ಆದರೂ ನನಗೊಂದು ಕುತುಹಲ ನೀನು ನನ್ನೆಡೆಗೆ ಬಂದದ್ದಾದರೂ ಯಾಕೆ,,, ನನ್ನಿಂದ ದೂರಾಗಿದ್ದಾದರೂ ಯಾಕೆ?

ಪ್ರೀತಿಯ ತೀವ್ರತೆಯಲ್ಲಿ ಮುಳುಗಿ, ಕಾಮದೇವತೆಯಲ್ಲಿ ತೇಳಲು ಹೋಗಿ,
ಅಲ್ಲಿಯೆ ನನ್ನತನವನ್ನು ಕಂಡು
ಕಾಮದೇವಿಯ ಕೋಪಕ್ಕೆ ತುತ್ತಾಗಿ,
ವಿರಹತೆಯಲ್ಲಿ ನಲುಗುತ್ತಿದ್ದೇನೆ......
ಕಲ್ಪನೆಯ ಜಗತ್ತೆ ಉತ್ತಮ
ಒಂಟಿತನವೇ ಸುಖಾತನ.....
ನಿನ್ನವ
4:16 PM 8/12/2008

ಮುಸ್ಸಂಜೆ
ಮುಸ್ಸಂಜೆಯಲ್ಲಿ ಮಳೆ ಸುರಿಯುತಿದೆ
ಜುಳು ಜುಳು ನೀರಿನ ದನಿ ಮೊಳಗಿದೆ
ತಂಗಾಳಿಯಾಗಿದ್ದು ಬಿರುಸಾಗಿ ಬೀಸಿ ಚಳಿ ಮೂಡಿಸಿದೆ
ನನ್ನೊಡನೆ ನಿನ್ನಯ ವಿರಹದ ಬೇಗೆಯೂ ಏರಿದೆ
ಕಾಣುವ ಬಯಕೇಯೋ, ಅನಿವಾರ್ಯತೆಗೆ ತಲುಪಿದೆ,
ಕಾಣಲೇಬೇಕು ನಿನ್ನ, ನೀನೀಲ್ಲದೇ ಹೋದರೇ ಈ ಮಳೆ ಸುರಿದೇನು ಸುಖ,
ಭೂಮಿ ತಣಿಸಲು ಮಳೆ ಬೇಡ ನನ್ನೊಳಗೆ ಅಡಗಿರುವ ಪ್ರೀತಿಯ ದಾಹವಿಂಗಿಸಲು ಬೇಕು,
ಮಳೆಯಲ್ಲಿ ನೆನೆದು ನೀ ಬಂದು ನನ್ನ ಮುಂದೆ ಕುಣಿದು ಕುಪ್ಪಳಿಸಬೇಕು,
ನಿನ್ನ ನಗುವಿನ, ಕುಣಿತದ ಸಪ್ಪಳಕ್ಕೆ ಈ ಭೂಮಿಯೊಮ್ಮೆ ನಾಚಬೇಕು.
ನೀ ಕುಣೀಯುವುದನ್ನು ಕಂಡು ನಾಚಲೀ ಆ ನವಿಲು,
ನನಗೊಬ್ಬಳು ಸ್ಪರ್ಧಿ ಬಂದಳೆಂದು ಕೊರಗಳಿ ಆ ಕೋಗಿಲೆ ನಿನ್ನ ಗಾನಸುಧೆಗೆ ಮರುಳಾಗಿ.

ನೀನಾ ಇದು ಮಾಯೆ?

ಎಲ್ಲಿ ಅಡಗಿತ್ತೋ ನಾನರಿಯೆ,
ಇಂದು ತೀರಿಸಿತು ನನ ಜನ್ಮವ,
ಪ್ರೀತಿಯೆಂಬ ಮಾಯೆಯ ಹೆಸರು ಕೇಳಿದರೆ ಕಣ್ಣೀರು ಸುರಿವುದು ಧಾರಾಕಾರವಾಗಿ,
ನೊಂದಮನದ ಅಳುವಿದು ಎನ್ನಲೇ, ಇದ್ದರೂ ಇರಬಹುದು,
ಜಗತ್ತಿನಲ್ಲಿ ಊಟದ ಹಸಿವಿಗಿಂತ ಪ್ರೀತಿಯ ಹಸಿವಿನಿಂದ ನೊಂದವರೆಚ್ಚು,
ಅದೇನಡಗಿದೆಯೋ ಈ ಪ್ರೀತಿಯ ಮಡಿಲಲ್ಲಿ ಇದು ಪ್ರೀತಿಯ ನನಗೆಂತು ಗೊತ್ತು,
ನೀ ನಗುವಾಗ ನನ್ನೊಳಗೆ ನಾನಕ್ಕೆ, ನೀ ಮಂಕಾಗಿದ್ದಾಗ ನನ್ನೊಳಗೆ ನಾನತ್ತೆ.
ನಿನ ಮೊಗ ಬಾಡುವುದ ಕಾಣಲೇ ಇಲ್ಲ ಸದಾ ಹಸುರಾಗಿರಲಿ ಎಂದು
ನನ್ನ ನೆತ್ತರಲೀ ಪ್ರೇಮಪತ್ರವ ಗೀಚಿದೆ,
ಆ ಪತ್ರವ ನೀಡುವ ಮನಸಾಗದೆ ನನ್ನೊಳಗೆ ಅಡಗಿಸಿದೆ,
ಅದಕ್ಕೆಂದ್ದು ಬೆಂಕಿ ಇಡಲಿ ಎನ್ನುವ ಮುನ್ನವೇ ನನ್ನ ಚಿತೆಗೇರಿಸಲು ಸಿದ್ದಪಟ್ಟೀತೆ ನಿನ್ನಯ ಮದುವೆ,
ದುಃಖ ದುಮ್ಮಾನ ಎನಗಿಲ್ಲ, ನಿನ್ನ ಕೊರಗಲ್ಲವೇ ಅಲ್ಲ, ಆದರೂ ಕೊಲ್ಲುತಿದೆ ಜೀವವ ತೇಯಿದಾದರೂ
ನಿನ್ನೊಡನಿರಲು ಬಯಸಿದ ಕನಸುಗಳು ಮಂಕಾಗದೆ ಕಾಡುತಿವೆ,
ಅವು ನನ್ನನ್ನು ಹಂಗಿಸಲು ಕಾದಿದ್ದ ದಿನ ಬಂದಿರುವ ಹಾಗಿದೆ,

ಪರನಾರಿ

ಮಂಕಾಗಿರೆ ಯಾಕೀ ನನ್ನೀಮನವೇ,
ರಂಗಾದ ಯುಗಾದಿಯೊಳು ಅವಳ ನೆನಪೇಕೆ,
ಬಿಡು ನಿನ್ನೀ ಹುಚ್ಚಾಟವ
ಜಗ ಮುನ್ನೆಡೆದಿರೆ ನಿನ್ನದೇನೀ ಮತಿ ಹೀನಾ ಸಲಹೆ
ಹೋದವಳ ನೆನೆ ನೆನೆದೇಕೆ ಅಳುವೆ,
ಕಣ್ಣೀರು ಬರದ ಪಾಪಿಯ ದೇಹದೊಳೇಕೀ ಕೊರಗು

ಎನಿತು ಬಯಸುವೆ ಅವಳ ಆಸರೆ
ಪರನಾರಿಯಾದವಳ ಕೊರಗೇಕೆ ನಿನಗೆ
ಮಂಕಾಗಿದೆ ನನ್ನೀಮನ, ತೊಳಲಾಡುತಿಹೆ
ಕಾಡುತಿದೆ ನಿನ್ನೊಲವು ನನ ಮನವೇ
ಕಣ್ಮುಚ್ಚಿ ನಡೆದೊಡೆ ನನ್ನೆದೆಯಲಿ

ನಿನ್ನೊಡನೆ ಕಳೆದ ದಿನಗಳು

ನಿನ್ನೊಡನೆ ಕಳೆದ ಈ ಸಂಜೆಗಳು,
ಅವು ಸಂಜೆಗಳಲ್ಲ
ನನ್ನ ಅಮೃತ ಘಳಿಗೆಗಳು,
ಒಟ್ಟಿಗೆ ನಡೆದ ಆ ನಾಲ್ಕು ಹೆಜ್ಜೆಗಳು,
ಜೊತೆಯಲ್ಲಿ ಕುಳಿತು ಪಯಣಿಸಿದ ಆ ಸಂಜೆಯ ಕ್ಷಣಗಳು,
ಮಬ್ಬಿನ ಬೆಳಕಲ್ಲಿ ನಿನ್ನ ಕಣ್ಣಿನ ಕಾಂತಿಯಲ್ಲಿ ನನ್ನ ನಗು ನೋಡಿದ ದಿನಗಳು,
ನಿನ ಪಾದದಲಿ ನನ್ನ ಬಿಂಬವ ನೋಡಲೆತ್ನಿಸಿದ ನಿಮಿಷಗಳು,
ಕೆಂದುಟಿಯ ಮೇಲೆ ನನ್ನ ಬೆರಳಿಡಲು ಯತ್ನಿಸಿದ ಕ್ಷಣ
ಕಣ್ಮುಚ್ಚಿದ ನಿನ್ನಯ ಮೊಗದಲ್ಲಿದ್ದ ಆ ಪರಮಸುಖದ ನಗು
ಆ ನಗುವಿನಲ್ಲಿ ನಾಕಂಡ ಸ್ವರ್ಗ,
ಮಳಯಲ್ಲಿ ಅಪ್ಪಿ ನಡೆದು ದಣಿದು, ಬಿಗಿದಪ್ಪಿದ ಕ್ಷಣಗಳು,
ಬರಲಾರದೇ ಆ ದಿನ ಮತ್ತೊಮ್ಮೆ, ನನಗರಿವಿಲ್ಲ,
ನೀನಿದ್ದ ಈ ಮೂವತ್ತು ದಿನಗಳು
ನನ್ನ ಬಾಳಿನ ಪುಟದಲ್ಲಿ ಬರೆಸುವ ಬಂಗಾರದ ದಿನಗಳು,
ನಿನ್ನ ಬರುವಿಗಾಗಿ ನಾ ಕಾದ ಆ ಸಂಜೆಗಳು,
ನನ್ನ ಸಂತೋಷದ ಸಂಜೆಯನ್ನು ಕಾಣಲು ಅಸೂಯೆ ಪಟ್ಟು ಹೋರಟ ಸೂರ್ಯ,
ನಿನ್ನೊಡನಿರುವುದನ್ನು ಸಹಿಸಲಾರದೆ ಬಾರದ ಚಂದ್ರ, ನಮಗೆ ತೊಡಕು ನೀಡಲು ಬಂದ ಮಳೆರಾಯ,
ನಮ್ಮ ಬಿಸಿಯಪ್ಪುಗೆ ಕಂಡು ದೂರಾದ ರಾತ್ರಿ,
ಮಳೆ ನಿಂತರು ಬಿಗಿದಪ್ಪಿದ ದೇಹಗಳು,
ನಿನ್ನ ಮೈ ಶಾಖ, ನನ್ನೆದುಸಿರು ನಿನ್ನೆದೆ ತಾಕುತ್ತಿದ್ದರು
ನೀನು ಬಂಗಾರದ ಗೊಂಬೆಯಂತಿದ್ದೆ ಅದೇನೂ ಚಿಂತಿಸುತ್ತಿದ್ದೆ,

ಅಂದೊಂದು ದಿನ ೨೫ ವರುಶಗಳ ಕೆಳಗೆ, ನನ್ನಜ್ಜಿ ಹೇಳಿದ ಕಥೆಯಿದು, ಅದು ೧೯೮೩ ನೇ ಇಸವಿ, ಎಪ್ರಿಲ್ ತಿಂಗಳ ೧೮ನೇ ತಾರೀಖು ಸೋಮವಾರ. ಬ್ರಹ್ಮನೆಂಬ ಹಣೆಬರಹ ಬರೆಯುವ ಅಧಿಕಾರಿ ಬಾನುವಾರ ರಾತ್ರಿ ಕುಡಿದು ಟೈಟ್ ಆಗಿ, ಹ್ಯಾಂಗ್ ಓವರ್ ನಿಂದ ಸ್ವಲ್ಪ ತಡವಾಗಿ ಎದ್ದು ಕುಳಿತ. ಸಮಯ ನೋಡುವಾಗ ೧೨. ೪೫ ಮುಂಜಾನೆಯಿಂದ ಒಂದೆ ಒಂದು ಹಣೆಬರಹ ಗೀಚಿರಲಿಲ್ಲ ಆ ವಾರದ ಟಾರ್ಗೆಟ್ ಮುಟ್ಟಲಿಲ್ಲವೆಂದು ಆತುರದಿಂದ ಒಳಗೆ ಹೋಗಿ, ಪೆನ್ನು ಹುಡುಕಿದ ಸಿಗಲೇ ಇಲ್ಲ. ಕೊನೆಗೆ ಅಲ್ಲೆ ಇದ್ದ ಜಾಲಿ ಮುಳ್ಳು ಹಿಡಿದು ಹೊರಗೆ ಬಂದ. ಭೂಲೋಕದಲ್ಲಿ, ಧನಲಕ್ಷ್ಮಿಯೆಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತಿದ್ದದ್ದು ಕೇಳಿಸಿತು. ದಿಡೀರನೆ ಆ ಮಗುವಿನ ಹಣೆ ಹಿಡಿದು ಜಾಲಿ ಮುಳ್ಳಿನಲ್ಲಿ ಗೀಚಿದ, ಆ ಒಂದು ಕ್ಷಣದ ತಪ್ಪಿಗೆ ಇಂದಿಗೂ ಪಶ್ಚತ್ತಾಪ ಪಡುತಿದ್ದಾನೆ ಬ್ರಹ್ಮ. ಆ ಮಗುವಿಗೆ ನವೆಂಬರ್ ತಿಂಗಳಲ್ಲಿ ಹರಿಶ್ ಬಾನುಗೊಂದಿಯೆಂದು ನಾಮಕರಣ ಮಾಡಲಾಯಿತು. ಆ ಮಗು ಆನಂದದಿಂದ ಬೆಳೆದು ಅನ್ನಕ್ಕೆ ದಂಡವಾಗಿ ಭೂಮಿಗೆ ಭಾರವಾಗಿ ೨೫ ವರ್ಷ ತುಂಬಿಸಿ ಕಾಲ ಹರಣ ಮಾಡುತಿದೆ. ಕೆಲವೊಮ್ಮೆ ದುಡುಕಿ ಮಾಡುವ ಕ್ಷಣದ ತಪ್ಪಿಗೆ ಜೀವನವನ್ನೆ ದಂಡವಾಗಿ ಪಣವಿಡಬೇಕಾಗುತದೆ. ಈ ಮೇಲಿನ ಕತೆ ಅದಕ್ಕೋಂದು ನಿದರ್ಶನ. ಅವನ ಕುಡಿತದಿಂದ ಮಾಡಿದ ತಪ್ಪು, ಏನು ತಿಳಿಯದ ಎರಡು ದಂಪತಿಗಳು ಕಣ್ಣೀರಿಡುವಂತೆ ಮಾಡಿದೆ. ಇದು ನನ್ನ ಕತೆ! ಬ್ರಹ್ಮನ ತಪ್ಪಿಗೆ ನಾನು ಹೊಣೆಯಲ್ಲ.



ನಲ್ಲೆಯ ಸವಿರಾತ್ರಿ

ನಲ್ಲೆಯ ಮನವೇಕೋ ಬಾಡಿದೆ
ಚಿಂತೆಯಳು ಮುಳುಗಿದೆ ಅವಳಂತರಾಳ,
ನನ್ನೆಯ ಚಿಂತೆಯಲ್ಲವದೂ ನನ್ನಯ ಚಿಂತನೆಯಲ್ಲ,

ನನ್ನ ನಲ್ಲೆಯು ನೋಟಕೆ ದಿನ ಕಳೆದಿಹೆನು ನಾನು
ಅವಳಿಗಾಗಿ ಕಾಲ ಕಳೆದಿಹೆನು
ಅವಳೆಂದು ನನ್ನ ನೋಡಬೇಕೆನ್ನಲಿಲ್ಲ,
ನಿನ್ನೆಯಾಕೆ ಕರೆದೊಳು ನಾನನರಿಯೆ,
ನಿನ್ನೆ ಅವಳೊಳಗಿದ್ದ ರತಿ ಕುಣಿದಳೇನೋ,

ಅವಳಿದ್ದಳು ನಿನ್ನೆ ಒಳ್ಳೆಯ ಮನದಲ್ಲಿ
ಆಸೆಯ ಚಿಗುರು ಕುಡಿ ಒಡೆದು
ಹೂವಾಗ ಹೊರಟಿತ್ತು
ಮುತ್ತಿನ ಮಳೆ ಸುರಿದಳು ಚಿರ ಯೌವ್ವನ ಅವಳದು
ಮಗುವಿನಂತವಳು ಒಂದು ಮುತ್ತಿಗೆ ನಿಲ್ಲುವವಳಲ್ಲ,
ರತಿಯ ಮತ್ತೊಂದು ರೂಪವೆ ಅವಳಲ್ಲವೇ,

ಅವಳೆಂದರೆ ಕಾಮದೇವನು ಬೆರಗಾಗಬೇಕು,
ಅದೆಂಥಹ ಹುರುಪು ಅವಳಲ್ಲಿ,
ನಿಸರ್ಗದ ಪ್ರತಿರೂಪ ನಿನ್ನಯ ಅವತಾರ
ನಿನ್ನ ಒಂದೊಂದು ಅಂಗವೂ ಒಂದೊಂದು ನಿಸರ್ಗವೇ ಸರಿ

ನಿನ್ನಯ ಕಣ್ಣುಗಳು ಜಮ್ಮು ಕಾಶ್ಮೀರಾದ ಸಾಲ್ಟ್ ಸರೋವರಗಳು
ಕಣ್ಣುಬ್ಬುಗಳು ಉತ್ತಾರಾಂಚಲ ಮತ್ತು ಹಿಮಚಾಲ
ನಿನ್ನಯ ತುಟಿಗಳು ದೆಹಲಿಯ ಸೊಬಗು
ನಿನ್ನಯ ಮೊಲೆಗಳು ಹಿಮಲಾಯದ ಮಂಜಿನ ಮುಂಜಾನೆ,
ನಿನ್ನಯ ಹೊಟ್ಟೆಯೋ ರಾಜಸ್ಥಾನದ ಥಾರ್ ಮರುಭೂಮಿ
ನಿನ್ನಯ ಹೊಕ್ಕುಲು ಗುಜರಾತ್ ಸಬರ್ಮತಿ ನದಿಯು
ನಿನ್ನಯ ತೊಡೆಗಳು ಮುನ್ನಾರ್ ಬೆಟ್ಟಗಳು
ನಿನ್ನಯ ಕುಂಡಿಯು ಪಶ್ಚಿಮ ಘಟ್ಟದ ತಪ್ಪಲು,
ನಿನ್ನಯ ತೊಡೆ ಮಧ್ಯದ ಕಣಿವೆಯೊ ಸೈಲೆಂಟ್ ವ್ಯಾಲ್ಲೀಯೂ,
ಅಲ್ಲಿರುವ ಕೂದಲುಗಳು ಸಹ್ಯಾದ್ರಿಯ ಚಿಗುರೆಲೆಗಳು,
ನಿನ್ನಯ ಕಾಲು ಗಳು ಮದುರೈ ರಸ್ತೆಗಳು,
ನಿನ್ನಯ ಕಾಲ್ಬೆರಲು ಪುದುಚೇರಿಯ ತೀರವೂ,
ನಿನೆಂದರೆ ಸೊಬಗಿನ ತಾನ,
ನಿನೆಂದರೆ ನನ್ನಯ ಪ್ರಾಣ

ನಿನ್ನವ
4:16 PM 8/12/2008

ಮನುಷ್ಯನ ಜೀವನವೆಂಬುದು ಸದಾ ಚಿತ್ರ ವಿಚಿತ್ರ ತಿರುವುಗಳಿಂದ ತುಂಬಿರುತ್ತದೆ, ಅದು ತನ್ನನ್ನು ಎಲ್ಲಿಂದ ಎಲ್ಲಿಗೆ ಬೇಕಿದ್ದರೂ ಕರೆದೊಯ್ಯಬಹುದು. ಇದು ನನ್ನ ಜೀವನಕ್ಕೂ ಅನ್ವಯವಾಗಿದೆ. ನಾನು ನನ್ನಲ್ಲಿ ಈ ಮಟ್ಟದ ತಳಮಳವನ್ನು ಇನ್ನೆಂದು ಕಂಡಿರಲಿಲ್ಲವೆಂದರೇ ತಪ್ಪಿಲ್ಲ. ಹೌದು ನನ್ನೊಳಗೆ, ನೂರಾರು ಆಸೆಗಳು ಹರಿದಾಡುತ್ತಿದ್ದದ್ದು ನಿಜವೇ ಸರಿ, ಆದರೇ ಎಂದೂ ಯಾರ ಆಸರೆಯೆನ್ನು ಬಯಸಿರಲಿಲ್ಲ, ಯಾರ ಉಪಸ್ಥಿತಿಯ ಅವಶ್ಯಕತೆಯೂ ಇರಲಿಲ್ಲ. ನಾನು ಕರ್ನಾಟಕದ ಬಹುತೇಕ ಎಲ್ಲಾ ತಾಲ್ಲೂಕುಗಳನ್ನು ಸುತ್ತಾಡಿದ್ದೇನೆ. ಎಂದೂ ನಾನು ಒಂಟಿಯಾಗಿ ಸುತ್ತಾಡುತ್ತಿದ್ದೇನೆ, ಎನಿಸಿರಲಿಲ್ಲ. ಆದರೀಗ, ನೀನು ನನ್ನೊಳಗೆ ಬರುವ ವೇಳೆ, ಕ್ಷಣ ಕ್ಷಣಕ್ಕೂ ನಿನ್ನಯ ಉಪಸ್ಥಿತಿಯ ಅನಿವಾರ್ಯತೆ ನನಗೆ ಕಾಡುತ್ತಿದೆ. ನಿನ್ನ ಮಿಂಚಿನ ಕಂಗಳ ಸೆಳೆತ, ಆ ಸಿಹಿನಗೆ, ಸೂಜಿ ಮಲ್ಲಿಗೆಯ ಮೂಗು, ನಿನ್ನೆದೆಯ ಬಡಿತ, ಆ ಬಿಸಿಯುಸಿರು, ಎಲ್ಲವೂ ನನ್ನೊಳಗೆ ಮನೆ ಮಾಡಿಕೊಂಡಿದ್ದರೂ ನಿನ್ನೊಡನೆ ನನ್ನ ಆತ್ಮ ಬೆರೆತು ಹೋಗಿದ್ದರೂ ನಿನ್ನಯ ಮೇಲಿನ ತಪಸ್ಸು ಕುಗ್ಗುತ್ತಿಲ್ಲ.

ನಿನ್ನೊಂದಿಗೆ

ನನಗೀಗ ಬೇಕಿರುವುದು ದೈಹಿಕ ಆಕರ್ಷಣೆಯಾ? ಗೊತ್ತಿಲ್ಲ ನಿನ್ನ ಮೋಹ ಬಿಡುತ್ತಿಲ್ಲ ನಿನ್ನ ಸಾಮಿಪ್ಯ ನನ್ನನ್ನು ಆಕರ್ಷಿಸುತ್ತಿದೆ. ಅದು ಏನನ್ನು ಬಯಸುತ್ತಿದೆ ಎಂದು ಹೇಳುವುದು ನನ್ನಿಂದ ಆಗುತ್ತಿಲ್ಲ, ನಿನ್ನ ಸೌಂದರ್ಯ ನನ್ನನ್ನು ಮತ್ತೆ ಮತ್ತೆ ಕೆಣಕುತಿದೆ, ನಿನ್ನ ಮಿಂಚಿನ ಕಣ್ಣುಗಳು ನನ್ನನ್ನೆ ನಾನು ಮರೆಯುವಂತೆ ಮಾಡಿವೆ, ಆ ನಿನ್ನ ಸೂಜಿಮಲ್ಲಿಗೆಯ ಮೂಗು ನನ್ನ ತಾಳ್ಮೆಯನ್ನು ಕೆಣಕುತಿದೆ, ಕೆಂದುಟಿಗಳು ನನ್ನ ಅಂತರಾಳದಲ್ಲಿ ಅಡಗಿರುವ ಮನ್ಮತನೊಡನೆ ಕದನಕ್ಕಿಳಿದಿವೆ. ನಿನ್ನ ಗದ್ದವ ಮುಟ್ಟಲೇನೋ, ನನ್ನ ಕೈಗಳು ಹವನಿಸುತ್ತಿವೆ. ನನಗೆ ಇದೆಲ್ಲ ಕಾಮಚೇಷ್ಟೆ ಎನಿಸುತ್ತಿದೆ ಯಾದರೂ, ಇದು ಪ್ರೀತಿಯಲ್ಲ ಕಾಮದ ಬಯಕೆ ಎನ್ನುತ್ತಿದ್ದರೂ, ನನ್ನ ಮನ ಅದನ್ನು ಒಪ್ಪಲು ಸಿದ್ದವಿಲ್ಲ. ನಿನ್ನ ಪೌಷ್ಟಿಕ ದೇಹದ ಒಂದೊಂದು ಅಂಗವು ನನ್ನನ್ನು ನೆನಪಿಸಿ ನೆನಪಿಸಿ ಕೊಲ್ಲುತ್ತಿದೆ.ಇದು ನಿನ್ನೊಡನೆ ಚರ್ಚಿಸುವ ವಿಷಯವಲ್ಲ. ಇಲ್ಲಿಯವರೆಗು ನಾನು ನಿನ್ನ ಪ್ರೀತಿಸುತಿದ್ದೇನೆ, ನಾನು ಬಯಸುತ್ತಿರುವುದು ನಿನ್ನ ಹೃದಯದ ಮಿಡಿತವನ್ನಿರಬೇಕು ಎಂದು ತಿಳಿದಿದ್ದೆ, ಇಲ್ಲ ಈ ಪ್ರೀತಿಯೆಂಬ ಮಾಯೆ ಅದನ್ನು ಮೀರಿ ಬೆಳೆದಿದೆ, ನನ್ನ ಕಣ್ಣುಗಳು ನಿನ್ನ ವದನ ಸೌಂದರ್ಯವನ್ನು ಬಿಟ್ಟು ನಿನ್ನ ಅಡಿಯಿಂದ ಮುಡಿವರೆಗಿನ ಅಂಗ ರಾಶಿಯನ್ನು ಹರಸುತ್ತಿದೆ. ಇದೆಲ್ಲ ನನ್ನ ಆಂತರಿಕ ಸಂಘರ್ಷವಿರಬಹುದು ಆದರೂ ನಿನಗೆ ಹೇಳುವ ಅನಿವಾರ್ಯ ನನ್ನ ಮುಂದಿದೆ. ನಾನು ಎಂದೂ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದವನಲ್ಲ, ಆದರೆ ನಿನ್ನ ಮುಂದೆ ತಡೆಯಲಾಗದ ಹೇಡಿಯಾಗಿದ್ದೇನೆ.

ನಿನ್ನ ಅನುರುಕ್ತಿಯಾಗುವ ಬಯಕೆ ಮೂಡುತಿದೆ. ಇದು ಆಗುವ ಕೆಲಸವಾ? ಆಗದ ಕಾರ್ಯವ ಎಂದು ನನ್ನನ್ನು ನಾನೆ ಪ್ರಶ್ನಿಸುವಂತೆ ಮಾಡಿದೆ. ನಿನ್ನ ನಿತಂಬಗಳೆಡೆಗೆ ನನ್ನ ಕಣ್ಣು ಪದೆ ಪದೆ ಹೊಗಿದ್ದಾದರೂ ಯಾಕೆ? ನಿನ್ನೆದೆಯೆಡೆಗೆ ನನ್ನ ದೃಶ್ಠಿ ಹರಿದುದ್ದೇಕೆ? ನನ್ನನ್ನು ನಾನೆ ಮತ್ತೆ ಮತ್ತೆ ಕೇಳಿದರೂ ಉತ್ತರ ದೊರೆಯುತ್ತಿಲ್ಲ. ನಾನೆಂತ ನೀಚನೆನಿಸುತಿದೆ. ದೈಹಿಕ ಮೋಹಕ್ಕೆ ಒಳಗಾಗುವುದಾ? ಬೇರೆಯವರ ಒಡತಿಯಾಗುವ ಹೆಣ್ಣನ್ನು ವರಿಸುವುದು, ನನ್ನನ್ನು ವರಿಸು ಎಂದು ಕೇಳುವುದು ಅಬ್ಬಾ! ಎಷ್ಟು ಘೋರವೆನಿಸುತ್ತಿಲ್ಲ? ನನ್ನ ಕಾಮುಕ ಮನಸ್ಸು ಉತ್ತೇಜನ ನೀಡುತ್ತಿದೆ. ಪ್ರೀತಿಯ ಕೊನೆ ಹಂತವೇ ಕಾಮವೆಂದು ಪ್ರಚೋದಿಸುತ್ತಿದೆ ಇದು ಸತ್ಯವಾ? ನಾನರಿಯೆ, ತಪ್ಪು ಎಂದು ಮತ್ತೆ ಮತ್ತೆ ನನಗೆ ನಾನೆ ಹೇಳಿದರು, ನಿನ್ನ ಕಂಗಳ ಕಾಂತಿ ನನ್ನನ್ನು ಪ್ರೇರೆಪಿಸುತ್ತಿದೆ. ನಮ್ಮಿಬ್ಬರ ಸಮಾಗಮ ಎಂತಹ ಮೂರ್ಖತನದ ಪ್ರಶ್ನೆ? ನನಗೀಗ ಮುಕ್ತಿ ಬೇಕು. ನೀನು ನನ್ನನ್ನು ವರಿಸುವೆಯಾ ಎಂದು ಕೇಳಲಾ? ಅದು ಸಾಧ್ಯವಾ? ಇಲ್ಲ ನಾನು ದೂರ ಹೋಗಲು ನಿರ್ಧರಿಸಿದ್ದೇನೆ ಗೆಳತಿ, ಎಲ್ಲಿಗೆ ಎಂದು ಕೇಳಬೇಡ, ಮುಂದಿನ ಜನ್ಮವೆಂಬುದಿದ್ದರೆ ಕಂಡಿತವಾಗಿಯು ನಿನ್ನ ಪ್ರೇಮಿಯಾಗಿ ನಿನ್ನ ಬಾಳ ಸಂಗಾತಿಯಾಗಿ ಬಾಳುತ್ತೇನೆ. ಇಂದಿನ ಬಾಕಿ ಪ್ರೀತಿಯನ್ನು ಅಲ್ಲೇ ಹರಿಸು ನನ್ನೆಡೆಗೆ. ನಿನ್ನ ದೇಹದ ಮೋಹ ನಿನ್ನಲ್ಲಿಗೆ ಕರೆದೋಯ್ಯುತ್ತದೆ. ನಿನ್ನ ಒಡನಾಡಿಯಾಗಿ ಚಿರಾಯುವಾಗುತ್ತೇನೆ. ಈ ಜನ್ಮಕ್ಕೆ ಸಾಕು ನನ್ನನ್ನು ಕ್ಷಮಿಸು. ನನ್ನ ಮನಸಲ್ಲಿ ಮುಂದಿನ ಯೋಜನೆಯಿಲ್ಲ. ಆದರೆ ಈ ಊರು ಈ ಜನ ಬಿಡುವ ಯೋಜನೆಯಿದೆ. ಎಲ್ಲಿಗೆ, ಯಾಕೆ ಕೇಳಬೇಡ. ನಿನ್ನ ನಂಬಿಕೆಗೆ ದ್ರೋಹ ಬಗೆದಿದ್ದರೆ, ಬಗೆದಿದ್ದರೆ ಏನು ಬಗೆದಿದ್ದೇನೆ. ಸದಾ ನಿನ್ನವನಾಗಳು ಬಯಸುವ.....ನಿನ್ನವ...

















ಪ್ರಥಮ ಪ್ರೇಮ ಪತ್ರವೇ....?

ಹೇಗೆ ಪ್ರಾಂಭಬಿಸಬೇಕೋ ತಿಳಿಯುತಿಲ್ಲ, ಆದರೂ ಹೇಳಲೇ ಬೇಕಾದ ಮನಸ್ಥಿತಿ ಒದಗಿಬಂದಿದೆ. ಇಲ್ಲಿ ಏನನ್ನೋ ಹೇಳಬಯಸುತ್ತಿದ್ದೇನೆಂದರೆ ತಪ್ಪಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಬೆತ್ತಲಾಗಿಸಿ ನಿನಗೆ ತೋರಿಸುವ ಒಂದು ಚಿಕ್ಕ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನಂತರಾಳದಲ್ಲಿ ಅಡಗಿರು ನೋವು, ವ್ಯಥೆ, ಸುಖ, ದುಃಖಗಳನ್ನು ನಿನ್ನ ಮಡಿಲಿಗೆ ಹಾಕುತ್ತಿದೇನೆ. ಬರೀ ನೋವು ನಲೈವು ಅನ್ನುವುದಕ್ಕಿಂತ ನನ್ನ ಬದುಕನ್ನೆ ನಿನಗೆ ನಿನ್ನ ಮಡಿಲಿಗೆ ಹಾಕುತ್ತಿದ್ದೇನೆ. ಇನ್ನೇನು ನನ್ನ ಬದುಕು ಮುಗಿದೇ ಹೋಯಿತು, ನನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆಂದು ತಿಳಿದಿದ್ದ ನಾನು ಮತ್ತೆ ನನ್ನ ಬದುಕು ಹಸನಾಗುವ ದಿನ ಬಂದಿದೆ ಎಂಬ ಬರವಸೆ ಮೂಡಿದೆ. ಇದು ನಿನ್ನಿಂದಲೇ ಹೊರತು ಅದಕ್ಕೆ ಮತ್ತ್ಯಾರು ಕಾರಣವಲ್ಲ. ಅಂದು ನಾನು ನಿನಗೆ ನನ್ನ ಪ್ರೀತಿಯ ವಿಷಯ ತಿಳಿದ ಮೇಲೆ, ನನ್ನನ್ನು ಕಾಡುತ್ತಿರುವ ಕೆಲವು ಅಂಶಗಳನ್ನು ಹೇಳಬಯಸುತ್ತೇನೆ. ನೀನು ನನ್ನನ್ನು ''ಪ್ರೀತಿಸಲು ನಿನಗೆ ಏನು ಅರ್ಹತೆಯಿದೆ" ಎಂಬ ಒಂದೇ ಒಂದು ಪ್ರಶ್ನೆ ಸಾಕು. ನನ್ನನ್ನು ಕೊಂದು ಬಿಡುತ್ತದೆ. ಹೌದು ನನಗೆ ಏನು ಅರ್ಹತೆಯಿದೆ, ಎಂದು ಪದೇ ಪದೇ ಚಿಂತಿಸುತ್ತಿದ್ದೇನೆ. ಪ್ರೀತಿಸುವ ಮನಸ್ಸಿದೆ, ಸ್ಪಂದಿಸುವ ಹೃದಯವಿದೆ. ನಿನ್ನನ್ನ್ನು ಅರಿತು ಸದಾ ನಿನ್ನ ನೆರಳಾಗಿರುವ ಶಕ್ತಿಯಿದೆ. ಆದರೇ, ಅದನ್ನು ಬಿಟ್ಟು, ಆರ್ಥಿಕ ವಿಷಯ ಬಂದಾಗ ನಿಷ್ಪ್ರಯೋಜಕನಾಗ್ತೇನೆ. ಇಂದಿಗೂ, ನನ್ನ ಬಳಿಯಿರುವುದು, ನಾಲ್ಕೈದು, ಜೊತೆ ಬಟ್ಟಗಳು, ಒಂದು ಜೊತೆ ಚಪ್ಪಲಿ, ಹಳೇ ಬೂಟ್ಸುಗಳು. ಆದರೆ ನಾನು ಅದನ್ನು ನನ್ನ ಸರಳತೆಯೆಂದು ಹೇಳಬಹುದು, ಆದರೂ ನನಗೆ ಅದನ್ನೆಲಾ ಸಂಪಾದಿಸಲಾಗದೇ ಹೀಗೆ ಇರುವೆನೆಂದರೆ. ಇರಬಹುದೆನಿಸಿ ನನ್ನ ಮನಸ್ಸು ಮಂಕಾಗುತ್ತದೆ.

ನಾನು ಎಂ.ಎಸ್ಸಿ. ಮಾಡಿದ ಮೇಲೆ ಹಣ ಸಂಪಾದಿಸೋಣಾವೆಂದು, ಮೂರ್ನಾಲ್ಕು ತಿಂಗಳು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದೆ, ಆದರೇ ಅದು ನನಗೆ ಒಗ್ಗ್ಗದೇ, ನಾನು ಉನ್ನತ ವ್ಯಾಸಾಂಗ ಮಾಡಬೇಕೇಂದು, ತೀರ್ಮಾನಿಸಿದೆ. ಇದು ನನ್ನ ತಂದೆ ತಾಯಿಯರಿಗೆ ಅಷ್ಟು ಇಷ್ಟವಿದ್ದಂತೆ ಕಾಣಲಿಲ್ಲ. ಅದರಿಂದ, ನಾನು ನನ್ನದೇ ಆದ ಸಮಸ್ಯೆಗಳಿಗೆ ಆಹ್ವಾನವಿಟ್ಟುಕೊಂಡೆ. ಇಂದಿಗೂ ನನಗಿರುವ ಸಮಸ್ಯೆಗಳು ನನ್ನನ್ನು ಬಿಟ್ಟು ಮತ್ತ್ಯಾರಿಗು ತಿಳಿದಿಲ್ಲ. ನನ್ನದು ಸ್ವಾಭಿಮಾನವೆಂದರೂ ಸರಿಯೆ ಅಥವಾ ಅತೀವಿನಯತೆಯೆಂದರೂ ಸರಿಯೆ. ಅದರ ಬಗ್ಗೆ ನನಗೆ ಒಲವಿಲ್ಲ. ನಾನು ಬಹಳ ಸೂಕ್ಷ್ಮಜೀವಿ. ನನ್ನಿಂದ ಪ್ರತಿದಿನ ಒಬ್ಬರಿಗಾದರೂ ಸಹಾಯವಾಗಲೇ ಬೇಕೇಂದು ಬಯಸಿ ಹೊರಡುತ್ತೇನೆ.ಕೆಲವೊಮ್ಮೆ ಬೇರೆಯವರಿಗೆ ಸಹಾಯ ಮಾಡಲು ಹೋಗಿ ನಾನು ಸಂಕಟದಲ್ಲಿ ಬಿದ್ದದ್ದು ಇದೆ, ಇದು ಒಂದು ಬಾರಿಯಲ್ಲ ಹಲವಾರು ಸಾರಿ ಆಗಿದೆ. ಆದರೂ ನಾನು ನನ್ನ ಈ ಕೆಲಸ ನಿಲ್ಲಿಸಿಲ್ಲ, ಯಾಕೆಂದರೇ ಒಬ್ಬ ಮನುಷ್ಯನೇ ಪ್ರಪಂಚವಲ್ಲ, ಒಬ್ಬ ಮೋಸಮಾಡಿದನೆಂದು ಎಲ್ಲರನ್ನೂ, ದೂರಿದರೆ ನಮ್ಮದು ಹಳದಿ ಕಣ್ಣಾಗುತ್ತದೆ.

ನಿನ್ನಲ್ಲಿ ನನಗೆ ಆಕರ್ಷಣೆಯಿದೆಯೆಂದರೆ ಒಪ್ಪುವುದಿಲ್ಲ, ಅದು ಸೆಳೆತ, ಯಾವುದೋ ಜನ್ಮದಿಂದ ನಿನ್ನನ್ನು ನಾನು ಬಲ್ಲೆನೆಂಬ ಅರಿವು ನನ್ನಲ್ಲಿ ತಲೆದೋರಿದೆ. ನೀನು ಈ ಜನ್ಮಕ್ಕೆ ಅಷ್ಟೇ ಮಾತ್ರ ಬಂದವಳಲ್ಲವೆನಿಸುತ್ತದೆ. ನೀನು ನನ್ನ ಕೈ ಹಿಡಿದು ನಡೆಸಲು ಬಂದವಳೇನೋ, ಆ ದೇವತೆಯ ಪ್ರತಿರೂಪವೇನೋ ಎನಿಸುತ್ತಿದೆ. ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈ ಸೆರೆ ಎಂಬುದು ಸತ್ಯವಾಗಿದೆ. ನಾನು ನಿನ್ನ ಸೇವಕನಾಗಿದ್ದೇನೆಂದರೂ ತಪ್ಪಿಲ್ಲ. ನಿನ್ನ ದೂರವಾಣಿ ಕರೆಗೆ, ನಿನ್ನ ನಗುವಿಗೆ ನನ್ನ ದಿನಗಳನ್ನೆಲ್ಲಾ ಮುಡುಪಾಗಿಸಲು ಅಣಿಯಾಗಿದೆ ನನ್ನ ಮನಸ್ಸು. ನೀನು ನನಗಿಂತ ದೊಡ್ಡವಳೆಂಬುದು ನನಗೆ ಖುಷಿ ತಂದಿದೆ, ಕಾರಣ ನೀನು ನನ್ನನ್ನು ದಾರಿ ತಪ್ಪದ ಹಾಗೆ ನಡೆಸುತ್ತೀಯಾ ಎಂಬ ಬಯಕೆ. ಆದರೇ ನೀನು ನನಗಿಂತ ದಪ್ಪವಿರುವುದು, ನನಗೆ ಮತ್ತೊಂದು ಖುಷಿಯ ವಿಚಾರ ಕಾರಣ, ನಿನ್ನ ಮೇಲೆ ಸದಾ ಮಲಗಿರಬಹುದು. ನಿನ್ನ ಕಂಗಳ ಬೆಳಕಲ್ಲಿ ನಾನು ನಡೆಯಬಯಸುತ್ತೇನೆ. ಆ ಬೆಳಕು ಸದಾ ಪ್ರಜ್ವಲಿಸುತ್ತಿರಬೇಕು,ನೀನು ನನಗೆ ದಾರಿದೀಪವಾಗಬೇಕೆಂಬ ಬಯಕೆ ಮೂಡಿದೆ. ನಿನ್ನನ್ನು ನನ್ನ ಕಂಗಳಲ್ಲಿ ಇಟ್ಟು ಜೋಪಾನ ಮಾಡಬೇಕೆಂಬ ಆಸೆ. ಕಣ್ಣೀರಲ್ಲಿ ಬಿದ್ದರೆನ್ನಬೇಡ, ನೀನು ನನ್ನ ಬಾಳಲ್ಲಿದ್ದ ಮೇಲೆ ಕಣ್ಣೀರು ಬರುವ ಮಾತೇ ಇಲ್ಲವೆಂಬುದು ನನ್ನ ನಂಬಿಕೆ.

ನಾನು ನನ್ನ ನೋವಿನ ಅಥವಾ ದುಃಖದ ಮುಖವನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ನನ್ನ ತಂದೆ ತಾಯಿಯರಿಗೂ ಅದನ್ನು ತೋರಿಸಿಲ್ಲ. ಎಲ್ಲರಿಗೂ ಗೊತ್ತಿರುವ ಹರಿಶ್ ಎಂದರೆ, ಸಂತೋಷದ ಒಂದು ಜೀವ. ಆದರೇ ನಿನಗೆ ಇದನ್ನೆಲ್ಲಾ ಹೇಳಲೇಬೇಕು, ಇದು ಅವಶ್ಯಕತೆಯೆನ್ನುವುದಕಿಂತ, ಅನಿವಾರ್ಯತೆ. ನೀನೆ ನನ್ನ ಸರ್ವಸ್ವವೆಂದ ಮೇಲೆ, ನಮ್ಮಿಬ್ಬರ ನಡುವೆ, ತಿಳಿ ಸಂಬಂಧವೆರ್ಪಡಲಿ, ಅಲ್ಲಿ ಚಿಕ್ಕ ಚುಕ್ಕಿಯೂ ಇರಬಾರದು. ನನ್ನ ಬೇಡಿಕೆಗಳು ನಿನಗೆ ಅತಿ ಎನಿಸುತ್ತಿವೆಯಾದರೂ ಇದನ್ನೆಲ್ಲಾ ಹೇಳಲೇಬೇಕು. ಹೇಳಿದ್ದೇನೆ.....ಇದು ಇನ್ನು ಮುಗಿದಿಲ್ಲ, ನನ್ನ ಪ್ರೀತಿ ನಿರಂತರ.,.,.,.ಮುಂದುವರೆಸುತ್ತೇನೆ.,.,





ಇದು ನನ್ನ ಜೀವನ

ಜೀವನದಲ್ಲಿ ಏನಾದರೂ ಸಾಧಿಸಿದವರು ತಮ್ಮ ಜೀವನ ಚರಿತ್ರೆ ಬರೆಯುವುದು ವಾಡಿಕೆ ಮತ್ತು ನ್ಯಾಯಸಮ್ಮತ ಕೂಡ ಆದರೆ ಸಾಮನ್ಯ ಮನುಷ್ಯನಿಗೆ ಆ ಅರ್ಹತೆಯಾಕಿಲ್ಲವೆಂಬುದು ನನ್ನ ಪ್ರಶ್ನೆ? ಅದಕೊಂದು ಚಿಕ್ಕ ಮತ್ತು ನೇರ ಪ್ರಯತ್ನ ಮಾಡುತ್ತಿದ್ದೆನೆ. ಇಲ್ಲಿ ನನ್ನನ್ನು ವಿಭ್ರಂಜಿಸುವ ಆಸೆಯೆಂದು ಬಂದಿಲ್ಲ ನನಗೆ ನನ್ನ ಜೀವನದಲ್ಲಿ ಇದುವರೆಗೆ ನಡೆದ ಆಂತರಿಕ ಸಂಘರ್ಷ, ಅರ್ಥವಿಲ್ಲದ ತಪ್ಪು, ಆತುರಪಟ್ಟ ಕ್ಷಣಗಳು, ಅದಕ್ಕೆಪಟ್ಟ ಪಶ್ಚಾತ್ತಾಪ ಪಡುತ್ತಿರುವ ವ್ಯತೆ ನನ್ನೊಳಗೆ ಅಡಗಿರುವ ಧೂರ್ತನನ್ನು ಹೊರಗೆಡವಲು ಮಾಡುತ್ತಿರುವ ಪ್ರಯತ್ನಗಳು ಮತ್ತು ಈವರೆಗೆ ಮಾಡಿದ ತಪ್ಪಿಗೆ ತೆತ್ತ ದಂಡವನ್ನು ತೆರೆದಿಡುವ ಪ್ರಯತ್ನ ಮಾಡುತಿದ್ದೇನೆ. ನನ್ನ ಈ ಚಿಕ್ಕ ಜೀವನದಲ್ಲಿ ಬಂದು ಹೋದ ಎಲ್ಲ ಪಾತ್ರಗಳನ್ನು ನೆನಪಿಸಿಕೊಳ್ಳುವ ಪ್ರಾಮಾನಿಕ ಪ್ರಯತ್ನ ಇದಾಗಿದೆ. ನನಗೆ ಶತ್ರುವೆಂಬುವುರಾರು ಇಲ್ಲವೆಂಬುದು ನನ್ನ ನಂಬಿಕೆ ಇದ್ದರು ಆ ಕ್ಷಣದ ಮುನಿಸೆಂದು ಭಾವಿಸಿದ್ದೇನೆ ಹೊರತು ಶತ್ರುತ್ವವೆಂದಲ್ಲ.

ಅಂದೊಂದು ದಿನ ೨೫ ವರುಶಗಳ ಕೆಳಗೆ, ನನ್ನಜ್ಜಿ ಹೇಳಿದ ಕಥೆಯಿದು, ಅದು ೧೯೮೩ ನೇ ಇಸವಿ, ಎಪ್ರಿಲ್ ತಿಂಗಳ ೧೮ನೇ ತಾರೀಖು ಸೋಮವಾರ. ಬ್ರಹ್ಮನೆಂಬ ಹಣೆಬರಹ ಬರೆಯುವ ಅಧಿಕಾರಿ ಬಾನುವಾರ ರಾತ್ರಿ ಕುಡಿದು ಟೈಟ್ ಆಗಿ, ಹ್ಯಾಂಗ್ ಓವರ್ ನಿಂದ ಸ್ವಲ್ಪ ತಡವಾಗಿ ಎದ್ದು ಕುಳಿತ. ಸಮಯ ನೋಡುವಾಗ ೧೨. ೪೫ ಮುಂಜಾನೆಯಿಂದ ಒಂದೆ ಒಂದು ಹಣೆಬರಹ ಗೀಚಿರಲಿಲ್ಲ ಆ ವಾರದ ಟಾರ್ಗೆಟ್ ಮುಟ್ಟಲಿಲ್ಲವೆಂದು ಆತುರದಿಂದ ಒಳಗೆ ಹೋಗಿ, ಪೆನ್ನು ಹುಡುಕಿದ ಸಿಗಲೇ ಇಲ್ಲ. ಕೊನೆಗೆ ಅಲ್ಲೆ ಇದ್ದ ಜಾಲಿ ಮುಳ್ಳು ಹಿಡಿದು ಹೊರಗೆ ಬಂದ. ಭೂಲೋಕದಲ್ಲಿ, ಧನಲಕ್ಷ್ಮಿಯೆಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತಿದ್ದದ್ದು ಕೇಳಿಸಿತು. ದಿಡೀರನೆ ಆ ಮಗುವಿನ ಹಣೆ ಹಿಡಿದು ಜಾಲಿ ಮುಳ್ಳಿನಲ್ಲಿ ಗೀಚಿದ, ಆ ಒಂದು ಕ್ಷಣದ ತಪ್ಪಿಗೆ ಇಂದಿಗೂ ಪಶ್ಚತ್ತಾಪ ಪಡುತಿದ್ದಾನೆ ಬ್ರಹ್ಮ. ಆ ಮಗುವಿಗೆ ನವೆಂಬರ್ ತಿಂಗಳಲ್ಲಿ ಹರಿಶ್ ಬಾನುಗೊಂದಿಯೆಂದು ನಾಮಕರಣ ಮಾಡಲಾಯಿತು. ಆ ಮಗು ಆನಂದದಿಂದ ಬೆಳೆದು ಅನ್ನಕ್ಕೆ ದಂಡವಾಗಿ ಭೂಮಿಗೆ ಭಾರವಾಗಿ ೨೫ ವರ್ಷ ತುಂಬಿಸಿ ಕಾಲ ಹರಣ ಮಾಡುತಿದೆ. ಕೆಲವೊಮ್ಮೆ ದುಡುಕಿ ಮಾಡುವ ಕ್ಷಣದ ತಪ್ಪಿಗೆ ಜೀವನವನ್ನೆ ದಂಡವಾಗಿ ಪಣವಿಡಬೇಕಾಗುತದೆ. ಈ ಮೇಲಿನ ಕತೆ ಅದಕ್ಕೋಂದು ನಿದರ್ಶನ. ಅವನ ಕುಡಿತದಿಂದ ಮಾಡಿದ ತಪ್ಪು, ಏನು ತಿಳಿಯದ ಎರಡು ದಂಪತಿಗಳು ಕಣ್ಣೀರಿಡುವಂತೆ ಮಾಡಿದೆ. ಇದು ನನ್ನ ಕತೆ! ಬ್ರಹ್ಮನ ತಪ್ಪಿಗೆ ನಾನು ಹೊಣೆಯಲ್ಲ.











































ಬೆಳ್ಳಿ ಮಹೋತ್ಸವದೆಡೆಗೆ ಸೋಮಾರಿ ಜೀವನ

ಕಾಟಚಾರದ ಮಿತ್ರರೇ, ಕಾಲಹರಣಕ್ಕಾಗಿ ಸ್ನೇಹ ಬೆಳೆಸುವ ಗೆಳೆಯರೆ, ದಯವಿಟ್ಟು ದೂರವಿರಿ, ಹೀಗೆ ಬಂದು ಹಾಗೆ ಹೋಗುವ ಪ್ರಯತ್ನ ಮಾಡುವ ಬಂಧುಗಳೆ ನೀವು ಸ್ವಲ್ಪ ದೂರವೆ ಉಳಿಯಿರಿ, ನನಗೆ ನಿಮ್ಮ ಅವಶ್ಯಕತೆಯಿಲ್ಲ. ಇಲ್ಲಿಗೆ ಬಂದರೆ ತಿರುಗಿ ಹೋಗುವ ಆಸೆ ಬಿಟ್ಟು ಬನ್ನಿ, ಬಂಧಿತರಾಗುವ ಧೈರ್ಯವಿದ್ದರೆ ಬನ್ನಿ, ನಮ್ಮ ನಮ್ಮಲ್ಲೆ ಅಸೂಯೆ, ಆಂತಂಕ, ಅನ್ಯಾಯ, ಭೇಧ ಭಾವ, ಮುನಿಸು, ಕೋಪ, ವಂಚನೆ, ಮೋಸ, ಸುಳ್ಳು, ನೋವು, ಇವುಗಳೆಲ್ಲವ ಮರೆಯಲು ಸಾಧ್ಯವಾದರೆ ಮಾತ್ರ ಇಲ್ಲಿಗೆ ಬನ್ನಿ. ಇಲ್ಲದಿದ್ದಲ್ಲಿ ದಯವಿಟ್ಟು ದೂರ ಹೋಗಿ. ಸಮಯ ಅತ್ಯಮೂಲ್ಯ ಅದನ್ನು ನಿಮ್ಮಿಂದಾಗುವ ನೋವಿಗೆ ಔಷಧಿ ಹಚ್ಚಲು ಬಳಸಲಾಗುವುದಿಲ್ಲ. ಈಗಾಗಲೇ ನೋವು ನೀಡಿರುವ ಮಹಾ ಮಣಿಯರೇ ಮತ್ತೆ ನನ್ನತ್ತ ಸುಳಿಯ ಬೇಡಿ, ಪದೆ ಪದೆ ನಾನು ನಿಮ್ಮನ್ನು "ಹೇಳಿ ಹೋಗು ಕಾರಣ" ಎನ್ನಲಾರೆ. ನೊಂದ ಮನಕ್ಕೆ ಸಾಂತ್ವಾನ ನೀಡಲು ಬರುವ ಗೆಳೆಯರೆ, ಹುಚ್ಚು ಮನಸ್ಸಿನ ಹತ್ತು ಮುಖಗಳ ಮೇಲೆ ಚಿಂತಿಸಬೇಡಿ, ಇದು ವಿಸ್ಮಯವೇನಲ್ಲ, ಮಿಸ್ಸಿಂಗ್ ಲಿಂಕ್ ಎಂದು ಕೊಳ್ಳಬೇಡಿ, ಬೆಟ್ಟದ ಜಿವ, ಮೂಕಜ್ಜಿಯ ಕನಸುಗಳು ಸದಾ ಪರಿಸರದ ಕತೆ ಹೇಳುತ್ತಿರುತ್ತವೆ, ಪ್ಯಾಪಿಲೋನ್ ನಂತೆ ಓಡುತ್ತಿರುತದೆ, ಬರ್ಮುಡಾ ಟ್ರೈಯಾಂಗಲ್ ಎನಿಸಿದರೂ, ಧರ್ಮಶ್ರೀ ಆಗುವುದೇ ವಿನಃ ತಬ್ಬಲಿಯೂ ನೀನಾದೆ ಮಗನೆ ಎನ್ನುವುದಿಲ್ಲ, ಟ್ರೈನ್ ಟು ಪಾಕಿಸ್ತಾನ್ ಎಂದರೂ ದಿ ಕಂಪನಿ ಆಫ್ ವುಮೆನ್ ಎನ್ನುವುದು ಕಷ್ಟ, ಅಲ್ಲಿ ಯಾವುದೇ ಮನ್ವಂತರವಿಲ್ಲ, ಕರ್ವಾಲೋ ಆಗಬೇಕೆಂಬ ಆಸೆಯಿಲ್ಲ, ನೆನಪಿನ ದೋಣಿಯ ನಾವಿಕನಾಗುವ ಬಯಕೆ ಮೊದಲೆಯಿಲ್ಲ, ಆವರಣವೆನಿಸಿದರು, ನನ್ನ ಪ್ರೀತಿಯ ಹುಡುಗಿಗೆ ಹೊರತು ದೂರ ಸರಿದರು ಎನ್ನುವುದು ನಿರಾಕರಣ,

ಸರಿಯುತಿವೆ ೨೫ ವಸಂತಗಳು ಬದುಕಿದೆ ಎನ್ನಬಹುದೇ ವಿನಃ ಬಾಳಿದೆ ಎನ್ನಲಾಗುವುದಿಲ್ಲ. ನಾಯಿಯ ಮೊಲೆಯಲ್ಲಿ ಹಾಲಿದ್ದರೆ ದೇವರಿಗು ಇಲ್ಲ ದಿಂಡರಿಗು ಇಲ್ಲ ಎನ್ನುವುದೊಂದು ಆಡು ಮಾತು ಅನ್ವಯಿಸುತದೆ ನನ್ನ ೨೫ ವರುಷದ ಅನ್ನ ವ್ಯಯಕ್ಕೆ, ಅದ್ ಹೇಗೆ ತಡೆದರೋ ನನ್ನ ಈ ಪಾಪಿ ಕಾಟವ ನನ್ನ ತಂದೆ ತಾಯಿಗಳು ಹುಟ್ಟಿಸಿದೆವೆಂಬ ಮಮಕಾರ, ಎಂದೂ ಏನೂ ಅನ್ನಲಿಲ್ಲ, ಅಜ್ಜಿ ತಾತ, ಚಿಕ್ಕಮ್ಮ ಚಿಕ್ಕಪ್ಪ, ಮಾವಂದಿರು, ದೊಡ್ಡಪ್ಪ ದೊಡ್ಡಮ್ಮ, ೧೭ ಜನ ಅಜ್ಜಿಯರು,ನನ್ನ ಪ್ರೀತಿಯ ಅಕ್ಕ, ನನ್ನ ನೆಚ್ಚಿನ ಭಾವ ಮತ್ತು ನನ್ನ ಜಿವವೇ ಅಂದುಕೊಂಡಿರುವ ನನ್ನ ಶ್ರೇಯ, ಯಾರೂ ನನ್ನನ್ನು ದೂರಲಿಲ್ಲ, ಬೈಯಲಿಲ್ಲ ಯಾಕೆಂಬುದು ತಿಳಿಯಲೇ ಇಲ್ಲ, ವಾರಕ್ಕೊಮ್ಮೆ ಅಜ್ಜಿಮನೆ, ತಿಂಗಳಿಗೊಮ್ಮೆ ಚಿಕ್ಕಮ್ಮನ ಮನೆ, ಆಗ್ಗಾಗ್ಗೆ ನೆಂಟರ ಮನೆಗಳು ನನ್ನ ಬಾಲ್ಯ ಅತಿ ವೇಗದಿಂದ ಓಡಿಸಿಬಿಟ್ಟಿರಿ ನೀವುಗಳು, ನನ್ನ ಮುದ್ದಿನ ಮಾತುಗಳನ್ನು ಹೊಗಳಿ ನನ್ನನ್ನು ಹಾಳು ಮಾಡಿದಿರಿ, ನನಗೆ ನಿಮ್ಮ ಮೇಲೆ ಶಾಶ್ವತ ಪ್ರೀತಿ ಉಳಿಯುವ ಹಾಗೆ ಮಾಡಿದ ನನ್ನ ಬಂದುಗಳೇ ನನ್ನ ೨೫ ವರುಶದ ಅರ್ಥಪೂರ್ಣ ಬದುಕಿಗೆ ನಾಂದಿ ಹಾಡಿದ ನಿಮಗೆ ನಾನು ಸದ ಋಣಿಯಾಗಿರುತ್ತೇನೆ.

ಪಾಪಿ ಸ್ನೇಹಿತರು ಯಾರು ನೊಂದು ದೂರ ಹೋಗಳೇ ಇಲ್ಲ, ಅನುಭವಿಸಿದರು, ಆನಂದಿಸಿದರು, ಮಕ್ಕಳಾಟವಾ ಗೆಳೆಯರೆ ಅದು ನೆನಪಿಸಿಕೊಳ್ಳಿ ನಮ್ಮೂರ ನದಿ ದಂಡೆಯಲ್ಲಿ ಅಲೆದಿದ್ದು, ಮರಕೋತಿ ಆಟವೆಂದು ನಿಮ್ಮ ಗೋಳು ಉಯ್ದದ್ದು, ಸೈಕಲ್ ಕಲಿಯುವಾಗ ನಿಮ್ಮನ್ನು ಬೀಳಿಸಿದ್ದು, ಮನೆಗೆ ಚಾಡಿ ಹೇಳಿ ಬೈಸಿದ್ದು, ಮಾಷ್ಟರ್ ಮುಂದೆ ನಾನೇ ಬುದ್ದಿವಂತ ಅಂತ ಮೊದಲು ಬಂದು ಹೊಡೆಸಿದ್ದು, ರೇಗಿಸುವುದು ನಿಮ್ಮ ಸಹವಾಸದಿಂದ ಬಂತೋ ಏನೋ ಗೊತ್ತಿಲ್ಲ ಅಂದು ನೀವು ಹಾಕಿದ ಕಣ್ಣೀರು, ಮುನಿಸು ನನಗೆ ಉತ್ತೇಜನ ನೀಡಿ ಅದನ್ನು ಮುಂದುವರೆಸುವಂತೆ ಮಾಡಿತು. ಇಂದಿಗೂ ನಾನು ಎಲ್ಲರನ್ನು ರೇಗಿಸುವುದು, ಕಾಡುವುದು ನಂತರ ಕ್ಷಮೆ ಬೇಡುವುದು ಮಾಮೂಲಿಯಾಗಿದೆ. ಎಲ್ಲ ಆಟೋಟಗಳಲ್ಲಿ ಬಹುಮಾನ ದೋಚಿ ನಿಮಗೆ ಬೇಸರ ತಂದಿದ್ದು, ನಿಮ್ಮನ್ನು ರೇಗಿಸಿಯೇ ನನ್ನ ೧೫ ವರುಷ ಕಳೆದೆ ಆದರೂ ನಿಮಗೆ ನನ್ನ ಮೇಲೆ ಕೋಪ ಬರಲಿಲ್ಲ
ಶತ್ರುಗಳಾಗಲಿಲ್ಲ ಯಾಕೆ? ನಿಮಗಿದೋ ವಂದನೆಗಳು ನನ್ನ ಬಾಲ್ಯದ ಮಿತ್ರರೇ

ಮೂರು ವರುಷ ಹೈಸ್ಕೂಲ್ ಎಂಬ ಸ್ವರ್ಗದ ಅಧಿಪತಿಗಳೇ ನನ್ನ ಪ್ರಿಯ ಮಿತ್ರರೇ, ನಿಮ್ಮ ರೇಗಿಸದ ದಿನವ ನೋಡಲೇ ಇಲ್ಲ ಆ ಮೂರು ವರುಷಗಳಲ್ಲಿ, ಕಾಡಿದೆ, ಗೋಳಾಡಿಸಿದೆ, ನಿಮ್ಮ ಸೈಕಲ್ ಚಕ್ರದ ಗಾಳಿ ಬಿಟ್ಟೆ, ಕನ್ನಡಿ ಒಡೆದೆ, ನಿಮ್ಮ ಶೂ ಒಳಗೆ ಚಿವಿಂಗ್ ಗಮ್ ಇಟ್ಟೆ, ಆಟ ಆಡುವಾಗ ಬ್ಯಾಟ್ ಬಾಲ್ ಬಚ್ಚಿಟ್ಟೆ, ಸರ್ ಎಂಬ ದೂತರಿಗೆ ಚಾಡಿ ಹೇಳಿ ಸಮಯಕ್ಕೆ ತಕ್ಕ ಪ್ರಾಸ್ತಿ ಮಾಡಿಸಿದೆ ಟೂರ್ ಎಂಬ ವಿಲಾಸ ಪಯಣದಲ್ಲಿ ಕುಣಿದ ನೆನಪಿದೆಯಾ ನಿಮಗೆ, ಕೋಲುಮಂಡೆ ಜಂಗಮ ನೆನೆದು ಕುಣಿದು ಕುಪ್ಪಳಿಸಿ ಕೊನೆಗೆ ಕುಡಿದು ಬಿಟ್ಟೆ, ಕುಡಿದು ಬೈದುಬಿಟ್ಟೆ, ಆದರೂ ಕೋಪಿಸದೆ ಇನ್ನೂ ಗೆಳೆಯಾರಾಗೆ ಉಳಿದಿರುವ ನನ್ನ ರಕ್ತನಾಳಾಗಳೇ ನಿಮಗಿದೋ ವಂದನೆ,

ಯೌವನದ ಹೊಳೆಗೆ ಕಾಲಿಟ್ಟ ನನ್ನನ್ನು ಮುಳುಗಿಸಿ ಪಿ.ಯು.ಸಿ ಎಂಬೆರಡು ವರ್ಷದ ಕೋರ್ಸನ್ನು ಮೂರು ವರ್ಷ ಓದಲು ಸಹಾಯ ಮಾಡಿದ ನನ್ನ ಕುಡುಕು ಮಿತ್ರರೇ,ಎರಡು ವರುಷದಲ್ಲಿ ನಿಮ್ಮ ಜೊತೆ ಕಳೆದ ದಿನಗಳು, ಅವು ದಿನಗಳಲ್ಲ ಸ್ವರ್ಗದ ಕ್ಷಣಗಳು, ಸ್ವರ್ಗವೆಂಬುದು ಬರಿ ಕಲ್ಪನೆಯಷ್ಟೆ ಅದು ದೊರೆಯುವುದೆಂದರೆ ನಮ್ಮ ಪಿ ಯು ಸಿ ಜೀವನದಲ್ಲಿ ಮಾತ್ರ. ಅಂತಹ ಸ್ವರ್ಗದಲ್ಲಿ ಸಹಚರರಾಗಿದ್ದ ನಿಮಗೆ ನನ್ನ ಅನಂತ ಧನ್ಯವಾದಗಳು. ಕುಡಿದು ಕುಣಿದಾಡಿದ ಸಂಜೆಗಳು,ಹ್ಯಾಂಗ್ ಓವರ್ ಆಗಿ ಬೀದಿಲಿ ಬಿದ್ದದ್ದು, ಯಾವುದೇ ಕುಡುಕರಿಗು ಒಪನ್ ಚಾಲೆಂಜ್ ಹಾಕುವಷ್ಟು ಮೇಲೆರಿದ್ದು, ಬೀದಿ ಟ್ಯೂಬ್ ಲೈಟ್ ಹೊಡೆದಿದ್ದು, ಸಿನೆಮಾಗೆಂದು ೩೦-೪೦ ಕಿ.ಮೀವರೆಗೂ ಓಡಾಡಿದ ದಿನಗಳು, ವೀರಭೂಮಿ ಬೆಟ್ಟ ಏರಿದ್ದು, ಬೆಟ್ಟದಪುರ ಬೆಟ್ಟಕ್ಕೆ ಹೋಗಿದ್ದು, ನಿಸರ್ಗಧಾಮದಲ್ಲಿ ಓದುವ ನೆಪದಲ್ಲಿ ಸೀನು ನೋಡಿದ್ದು, ಸಿಗರೇಟ್ ಎಂಬ ಮಹಾ ಮಾಯೆಗೆ ಅಲೆದದ್ದು, ಲೇಜರ್ ಲೈಟ್ ಬಿಟ್ಟಿದ್ದು, ಹುಡುಗಿಯರ ರೆಕಾರ್ಡ್ ಬಚ್ಚಿಟ್ಟಿದ್ದು, ಟ್ಯೂಷನ್ ಫೀ ಕೊಡದೆ ಮುಂಡಾಯಿಸಿದ್ದು, ಒಂದಾ ಎರೆಡಾ ? ಒಳ್ಳೆಯದೆಂಬುದರ ಸುಳಿವೆ ಆಗುತ್ತಿರಲಿಲ್ಲ ನಮಗೆ, ವಾಕರಿಕೆ ಬರುತ್ತಿತ್ತು, ಆದರೂ ಬಸ್ ಸ್ಟ್ಯಾಂಡ್ ನಲ್ಲಿ ನನ್ನ ಜೊತೆ ನಿಂತು ಲೈನ್ ಹೊಡೆಯಲು ಕುಮ್ಮಕ್ಕು ನೀಡಿ ಅವಳು ನನಗೆ ಸಿಗದೆ ಹೋದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು, ಹಾಲು ಕುಡಿದದ್ದು ಮರೆಯಾಳಗದ ನೆನಪುಗಳು ನನ್ನೊಡನಾಡಿಗಳೇ, ನಿಮಗಿದೋ ಫುಲ್ ಬಾಟಲ್ ವಂದನೆಗಳು,

ನನ್ನನ್ನು ನಾನೇ ಬೆರಗುಗೊಳಿಸುವಂತೆ ಮಾಡಿದ ಯುವರಾಜ ಕಾಲೇಜು ಮತ್ತು ಮಹರಾಜ ಕಾಲೇಜು ಕುಡುಕು ಮಿತ್ರರೇ, ಕುಡಿದು ಕುಣಿದು, ಒಡಾಡಿ, ತೆರೆಕಂಡ ಸಿನೆಮಾಗಳನ್ನೆಲ್ಲಾ ನೋಡಿ, ಜಾತಿಯತೆಯ ಪರಮಾವಧಿ ತಲುಪಿಸಿ, ಮತಿಯತೆಯನ್ನು ಮೆರೆಸಿ, ಕೆಟ್ಟದ್ದನ್ನು ಅತಿರೇಕಕ್ಕೇರಿಸಿ, ದಿಡೀರನೇ ಓದಿಗೆ ಹಚ್ಚಿ, ಜವಬ್ದಾರಿಯ ಅರಿವು ಮೂಡಿಸಿ, ಚಿಂತನೆಗೆ ತಲೆ ಹಚ್ಚಿಸಿ, ಚರ್ಚೆಗೆ ಕೂಡಿಸಿ, ನನ್ನ ಕಥೆ ಕವನಗಳಿಗೆ ಬೆಲೆ ಕೊಟ್ಟು, ಮಾನವೀಯತೆಯ ಮೌಲ್ಯಗಳಿಗೆ ಬೆಲೆ ಕೊಟ್ಟ ನನ್ನ ಪ್ರಿಯ ಮಿತ್ರರೆ, ಕೆಸರಿನಲ್ಲಿದ್ದರೂ ಕಮಲದಂತಾಗಿ ಉಳಿದ ನನ್ನ ಬಂದುಗಳೇ, ನನ್ನ ಜೀವಮಾನದಲ್ಲಿ ಮರೆಯಳಾಗದ ತಿರುವು ಕೊಟ್ಟ ಮಹರಾಜ ಕಾಲೇಜು ಹಾಸ್ಟೆಲ್ ನಿನಗಿದೋ ನನ್ನ ವಂದನೆಗಳು.

ಜೀವಮಾನದ ಮತ್ತೊಂದು ಘಟ್ಟವೇ ನನ್ನ ಬೆಂಗಳೂರು ಜೀವನ, ವಿಧ್ಯಾರ್ಥಿ ಜೀವನದ ಸಂಗಾತಿಗಳೇ ನಿಮ್ಮ ಸಹಾಯಕ್ಕೆ, ಪ್ರೀತಿಗೆ, ನಿಮ್ಮ ಸಹಕಾರಕ್ಕೆ ವಂದನೆ ತಿಳಿಸಲು ಪದಗಳು ಸಿಗುತ್ತಿಲ್ಲ. ರಾತ್ರಿ ಈಡಿ ನಡೆದ ಚರ್ಚೆಗಳು, ಕಾಲೇಜಿನಲ್ಲಿ ನಡೆದ ರಾಜಕೀಯ ದೊಂಬರಾಟ, ಯುನಿವರ್ಸಿಟಿಯ ಕೊಳಕು ವ್ಯವಸ್ಥೆ, ಕಲಿಸಿದ ಪಾಠ ಮರೆಯಲಾರದ್ದು, ಹಾಸ್ಟೆಲ್ ಜೀವನ, ಸವಿ ಸವಿ ನೆನಪಿನ ಸುಳಿಯಲ್ಲಿ ಸದಾ ನಗು ತರಿಸುವುದೇ ಆಗಿದೆ.

ವೃತ್ತಿ ಜೀವನದಲ್ಲಿ ಕಾಲಿಟ್ಟ ಕ್ಷಣದಿಂದ ಕಾಯಕವೇ ಕೈಲಾಸವೆಂದು ಮಾಡಿದ ನನ್ನ ವೃತ್ತಿ ಧರ್ಮವೇ ನಿನಗಿದೋ ವಂದನೆ. ನನಗೆ ಸಾಧನೆಯ ಹುಚ್ಚು ಹಚ್ಚಿಸಿದ ಮಹಾನ್ ಪುರುಷರೇ ನಿಮಗಿದೋ ವಂದನೆ. ನಿಸರ್ಗದ ಮೇಲೆ ಪ್ರೀತಿ ಬೆಳೆಯುವಂತೆ ಮಾಡಿ ತಿಂಗಳಿಗೊಮ್ಮೆಯಾದರು ಬರುವಂತೆ ಮಾಡಿದ ಪ್ರಕೃತಿಯೆ ನಿನಗೆ ನಾ ಚಿರಋಣಿ. ನನ್ನ ಜೊತೆ ಕೆಲಸ ಮಾಡಿ ರೆಗಿಸಿಕೊಂಡ ನನ್ನ ಮಿತ್ರರೇ ನಿಮಗೆ ನನ್ನ ವಂದನೆಗಳು. ಫೋನ್, ಇಂಟರ್ನೆಟ್, ಆರ್ಕುಟ್ ಕಡೆಯಿಂದ ಸ್ನೇಹಿತರಾಗಿ ಹತ್ತಿರವಾಗಿರುವ ಗೆಳೆಯರೇ ನಿಮಗೆ ನನ್ನ ವಂದನೆಗಳು.

ಸೌಂದರ್ಯದ ಬಗ್ಗೆ ನನಗೆ ಹುಚ್ಚು ಹಚ್ಚಿಸಿ ಅವರ ಕೋಮಲತೆಯಿಂದ, ನನ್ನನ್ನು ಕೆರಳಿಸಿದ ಸೌಂದರ್ಯವತಿಯರೇ ನಿಮಗೆ ನನ್ನ ಹಾರೈಕೆಗಳು, ಬೊಗಸೆ ಕಣ್ಣುಗಳ ಚೆಲುವೆ, ನಿನ್ನ ಹಿಂದೆ ಬಂದು ಕಾಡಿದೆನೆಂದು, ನನ್ನ ಪಿ ಯು ಸಿ ಜೀವನವನ್ನು ಸರ್ವನಾಶ ಮಾಡಿದ ಮೋಹಕ ಚೆಲುವೆ ನಿನಗಿದೋ ವಂದನೆ, ದಾರಿಯಲ್ಲಿ ಹೋಗುವಾಗ ಬರುವಾಗ ನಿಮ್ಮ ಸೌಂದರ್ಯದಿಂದ ನನ್ನ ಹೃದಯ ಮೀಟಿದ ನಾರಿಮಣಿಯರೇ, ನಿಮ್ಮ ಸೌಂದರ್ಯಕ್ಕೆ ನಾನು ಸದಾ ಸೇವಕ, ರಾತ್ರಿ ಕನಸಿನಲ್ಲಿ ಕಾಡುವುದ ಬಿಡಿ ನೀವು ಬೇಗ, ನನ್ನ ಹೃದಯ ಗೆಳತಿ ನಾಡಿಗಳ ಮಿಡಿತವನರಿತವಳೆ, ಅವಳಿಗೆ ಸಿಕ್ಕಿಬಿದ್ದರೆ ಅವಳ ಕೋಪಕ್ಕೆ ಬಲಿಯಾದರೆ ಅಂದಿಗೆ ಮುಗಿಯಿತು ನನ್ನ ಬಾಳು.

ನನ್ನ ಕಷ್ಟಕಾಲದಲ್ಲಿ ನನ್ನ ಕೈ ಹಿಡಿದು ಸಾಲ ನೀಡಿ ಬದುಕಿಸಿದ ನನ್ನ ಗೆಳೆಯ ಗೆಳತಿಯರೆ, ಮಿತ್ರರೆ, ನಿಮಗೆ ನನ್ನ ವಂದನೆಗಳು. ನಿಮ್ಮ ಸಹಾಯ ಸಹಕಾರಗಳು ಹೀಗೆ ಮುಂದುವರೆಯಲಿ.

***

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...