15 ಡಿಸೆಂಬರ್ 2011

ಏನೋ ಹೇಳಲು ಹೋಗಿ ಏನೋ ಹೇಳಿದೆ ನಾನು!!!

ಬರೆಯಬೇಕೆನಿಸುತ್ತದೆ, ಸಮಯದ ಅಭಾವ, ಇತ್ತಿಚೆಗೆ ನಾನು ಹೆಚ್ಚು ಮಾತನಾಡುತ್ತೇನೆಂಬ ದೂರು ಬಂದಿದೆ, ಆದ್ದರಿಂದ ಮಾತು ಕಡಿಮೆ ಮಾಡಿ ಬರೆಯಬೇಕೆಂದು ತೀರ್ಮಾನಿಸಿದ್ದೇನೆ. ನಾನು ಬರೆದರೇ! ಓದುವವರು ಬೇಕಲ್ಲವೇ! ಓದುಗ ದೊರೆಗಳು ನೀವಿದ್ದೀರಲ್ಲಾ! ನನ್ನ ಒತ್ತಡಕ್ಕೋ, ಒತ್ತಾಯಕ್ಕೋ ಒಮ್ಮೆಯಾದರೂ ಓದಲೇಬೇಕು ಓದಿಸಿಯೇ ತೀರುತ್ತೇನೆ. ಇಲ್ಲದಿದ್ದರೇ ಹಠಮಾಡುತ್ತೇನೆ. ಓದುವುದೇವಿಲ್ಲವೆಂದು ಹಠ ಮಾಡಿದರೇ ನಾನೇನೂ ಮಾಡುವುದಿಲ್ಲ. ನನ್ನ ಬರವಣಿಗೆಗಳು ನನ್ನ ಜೀವನದ ಸಾರವನ್ನು ಹೇಳುತ್ತಿದ್ದರೂ ನನ್ನ ಜೀವನಕ್ಕೂ ನಿಮ್ಮಗಳ ಜೀವನಕ್ಕೂ ಅಂಥಹ ದೊಡ್ಡ ಪ್ರಮಾಣದ ವ್ಯತ್ಯಾಸವಿಲ್ಲ. ನಾವೆಲ್ಲರೂ ಒಂದೇ! ಎಲ್ಲರೂ ಸ್ವಲ್ಪ ಕೆಟ್ಟವರು ಹೆಚ್ಚು ಒಳ್ಳೆಯವರು. ನೀವೆಲ್ಲರೂ ಕೇಳುವಂತೆ, ಅದೇನು ನಿನಗೆ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತವೆ, ಬಸ್ಸಿನಲ್ಲಿ, ಆಟೋದಲ್ಲಿ, ಹಾದಿಯಲ್ಲಿ ಬೀದಿಯಲ್ಲಿ? ಸಣ್ಣ ಪುಟ್ಟ ವಿಷಯಗಳನ್ನು ಅದ್ಯಾಕೆ ಅಷ್ಟೊಂದು ಕೊರೆಯುವುದು? ಇದು ನಿಮ್ಮೆಲ್ಲರ ಅಭಿಪ್ರಾಯಗಳು. ಒಬ್ಬ ಮನುಷ್ಯನ ಮಾತುಗಳು ನಿಮಗೆ ಬೇಸರ ತರಿಸುವುದಿಲ್ಲ ಎನ್ನುವುದಾದರೇ ಕೇಳುವುದರಲ್ಲಿ ತಪ್ಪೇನು? ನನ್ನ ಗೆಳತಿ ಪ್ರಪಂಚದ ಯಾವ ವಿಷಯವನ್ನು ಹೇಳಿದರೂ ನನಗೆ ಬೇಸರವಾಗುವುದಿಲ್ಲ. ಅವಳ ಮನೆಯ ವಿಷಯದಿಂದ ಹಿಡಿದು, ಕೆಲಸದ, ಜೊತೆಗಾರರ ವಿಷಯವನ್ನು ಹೇಳಿದರೂ ನನಗೆಂದು ಸಾಕು ನಿಲ್ಲಿಸು ನಿನ್ನ ಪುರಾಣವೆನಿಸುವುದಿಲ್ಲ. ಅಲ್ಲಿ ಸುದ್ದಿ ಮುಖ್ಯವಲ್ಲ, ಕೇಳುವ ಮನಸ್ಸು ಮತ್ತು ಹೇಳುವ ಆ ಮಧುರ ಮಾತುಗಳು. ಹಾಗೆಯೇ, ನನ್ನ ಮಧುರ ಕಂಠದಿಂದ ನಿಮಗೆ ಮಾತುಗಳು ಕೇಳಿಸಿ, ನಿಮ್ಮ ಕಿವಿಯಲ್ಲಿ ರಕ್ತ ಬಾರದಿದ್ದಲ್ಲಿ ನಾನು ಮಾತನಾಡಿದರೇ ತಪ್ಪೇನು?

ಇದೆಲ್ಲವನ್ನು ಬದಿಗಿಟ್ಟು ವಿಷಯಕ್ಕೆ ಬರೋಣ! ಕಳೆದ ಬಾರಿ ಊರಿಗೆ ಹೋಗಿ ಬಂದ ವಿಷಯವನ್ನು ನಿಮಗೆ ತಿಳಿಸುವುದಕ್ಕೆ ಪ್ರಯತ್ನಿಸುತ್ತೇನೆ. ಏನು ಸೀಮೆಗಿಲ್ಲದ ಊರು ಇವನದ್ದು ಎಂದರೇ ಹೌದೆನ್ನುತ್ತೇನೆ ನಾನು. ನನ್ನದು ಇಡೀ ಭೂಮಂಡಲಕ್ಕೆ ಒಂದೇ ಊರು ಅದು ನನ್ನೂರು ಬಾನುಗೊಂದಿ. ವಿಷಯ ಊರಿನ ಬಗ್ಗೆ ಪ್ರಶಸ್ತಿ ಕೊಡುವುದಲ್ಲ. ನಾನು ಡೆವಲಪ್ ಮೆಂಟ್ ಫೌಂಡೇಶನ್ ಗೆ ಸೇರಿದ ಮೇಲೆ ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ. ಕಾರಣ ಕೆಲಸದ ಒತ್ತಡ. ನಾನು ಮುಂಜಾನೆಯಿಂದ ರಾತ್ರಿ ಒಂಬತ್ತರ ತನಕ ಕೆಲಸ ಮಾಡಿದರೂ ಹಿಡಿ ಮಣ್ಣೀನಷ್ಟು ಕೆಲಸ ಮಾಡಿರುವುದಿಲ್ಲ. ಆದರೂ ಸದಾ ಬಿಡುವಿಲ್ಲದೇ ದುಡಿಯುತ್ತಿರುತ್ತೇನೆ. ನಾಯಿಗೆ ಮಾಡುವುದಕ್ಕೆ ಕೆಲಸವಿಲ್ಲ, ಕೂರುವುದಕ್ಕೆ ಬಿಡುವಿಲ್ಲವೆಂಬಂತೆ ನನ್ನ ಜೀವನ. ಏನೂ ಕೆಲಸ ಮಾಡುವುದಿಲ್ಲ ಆದರೂ ಬಿಡುವಿಲ್ಲ. ಆ ಬಿಡುವಿಲ್ಲದ ಜೀವನದಿಂದ ಸ್ವಲ್ಪ ಬಿಡುವು ಮಾಡಿಕೊಂಡು, ನನ್ನ ಸ್ನೇಹಿತನ ತಂಗಿಯ ಮದುವೆಗೆ ಹೋಗಿ ಬರಲು ಹೊರಟೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡಿದೆ. ಆ ಪ್ರಯಾಣದ ವಿವರಣೆ ಇಲ್ಲಿ ಅಪ್ರಸ್ತುತ. ಬಸ್ಸಿನಿಂದ ಇಳಿದವನು ಸಿಕ್ಕಿದ ಬಸ್ಸನ್ನು ಹತ್ತದೇ, ನನಗೆ ಡಿಲಕ್ಸ್ ಬೇಕು, ವೋಲ್ವೋ ಬೇಕೆಂದು ಕಾಯುತ್ತಾ ನಿಂತೆ. ಅಂತು ಇಂತೂ ಒಂದು ರಾಜಹಂಸ ಹೆಸರಿನ ಬಸ್ಸು ಹೊರಡಲು ಅಣಿಯಾಯಿತು. ಸರಿ ಸುಮಾರು ಒಂದು ಗಂಟೆ ಕಳೆದಮೇಲೆ ಹೊರಟಂತಾಯಿತು. ಮದುವೆ ಮನೆಯಲ್ಲಿ ನನ್ನ ಸ್ನೇಹಿತರು ಕಾಯ್ದು ಕಾಯ್ದು, ಜೀವನದಲ್ಲಿ ಒಮ್ಮೆಯಾದರೂ ಸರಿಯಾದ ಸಮಯಕ್ಕೆ ಬರುವುದನ್ನು ಕಲಿ ಎಂದು ಫೋನಿನಲ್ಲಿಯೇ ಬೋಧನೆಮಾಡಿದರು. ನಾಯಿ ಬಾಲಕ್ಕೆ ದಬ್ಬೆ ಕಟ್ಟುವ ಪ್ರಯತ್ನ. ನಾನು ಬದಲಾಗುವುದುಂಟೇ! ಸಮಯ ಪಾಲನೆ ನನ್ನ ಜೀವನಕ್ಕೆ ಅಂಟುವ ಮಾತಲ್ಲ ಬಿಡಿ. ಬಸ್ಸು ಹತ್ತುವಾಗ ಬಸ್ ಸ್ಟಾಂಡಿನಲ್ಲಿ, ನಾಲ್ಕು ಜನರು ಒಬ್ಬನನ್ನು ಕೈ ಹಿಡಿದುಕೊಂಡು ಬಂದರು. ಬಂದವರು, ಭಟ್ಕಳಕ್ಕೆ ಹೋಗುವ ಬಸ್ಸಿಗೆ ಹತ್ತಿಸಿದರು. ಹತ್ತಿಸಿದ ಬಸ್ಸಿನ ಡ್ರೈವರ್ ಸ್ವಲ್ಪ ಸಮಯ ನೋಡಿದ ಮೇಲೆ, ನಮ್ಮ ಬಸ್ಸು ಹೊರಡುವುದು ತಡವಾಗುತ್ತದೆ, ಪಕ್ಕದಲ್ಲಿ ನಿಂತಿರುವ ಬಸ್ಸಿನಲ್ಲಿ ಕಳುಹಿಸಿ ಎಂದ.ಸರಿ ಎಂದು ನಾನು ಕುಳಿತ ಬಸ್ಸಿಗೆ ಕಳುಹಿಸಿದರು. ನಮ್ಮ ಬಸ್ಸಿನ ಕಂಡಕ್ಟರ್ ಕುಡಿದು ಹಣ್ಣಾಗಿದ್ದವನನ್ನು ನೋಡೀ ಗಾಬರಿಯಾದ. ಅದರ ಜೊತೆಗೆ ಅವನ ನಮ್ಮ ಬಸ್ಸಿನಲ್ಲಿ ಕುಳಿತುಕೊಳ್ಳಲು ಕಾರಣವಾದದ್ದು, ಪಕ್ಕದ ಬಸ್ಸಿನ ಡ್ರೈವರ್ ಎಂದು ತಿಳಿದ ತಕ್ಷಣ ಅವನ ಜೊತೆಗೆ ಜಗಳಕ್ಕೆ ಇಳಿದ. ದಕ್ಷಿಣ ಕನ್ನಡದವರು ಜಗಳವಾಡುವುದೇ ಒಂದು ಸೊಗಸು, ಎಂಥ ಮಾರಯರೇ ನೀವು ಹೀಗೆ ಮಾಡಿದ್ದು, .....ಹೀಗೆ ನಡೆಯಿತು.

ಪ್ರಯಾಣ ಮಾಡುವಾಗ ತಿಳಿದು ಬಂದ ವಿಷಯವೇನೆಂದರೇ, ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮನುಷ್ಯ ಸುಮಾರು ಅರವತ್ತು ವರ್ಷ ವಯಸ್ಸಾಗಿರಬಹುದು. ಅವನು ಭಟ್ಕಳದವನು, ಮನಸ್ಸಿಗೆ ಬೇಸರವಾಗಿ ಮನೆಯವರ ಜೊತೆಯಲ್ಲಿ ಜಗಳವಾಡಿಕೊಂಡು ಜೇಬಿಗೆ ಒಂದೈದತ್ತು ಸಾವಿರ ದುಡ್ಡು ಇಟ್ಟುಕೊಂಡು ಮೈಸೂರಿಗೆ ಬಂದಿದ್ದಾನೆ. ಬಂದವನೇ ಯಾವುದೋ ಬಾರಿನಲ್ಲಿ ಕುಳಿತು ಕುಡಿಯತೊಡಗಿದ್ದಾನೆ. ಪಕ್ಕದ ಸೀಟಿನಲ್ಲಿ ಕುಳಿತು ಕುಡಿಯುತ್ತಿದ್ದವರು ಇವನ ಜೊತೆ ಮಾತನಾಡಿ, ಪರಿಚಯ ಮಾಡಿಕೊಂಡಿದ್ದಾರೆ, ಇವನ ದುಡ್ಡಿನಲ್ಲಿಯೇ ಐದು ಜನ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮೇಲೆ ಜೇಬಿನಲ್ಲಿದ್ದ ಸ್ವಲ್ಪ ಹಣವನ್ನು ಅವರು ತೆಗೆದುಕೊಂಡು, ಇವನನ್ನು ಬಸ್ಸಿಗೆ ತಂದು ಬಿಟ್ಟಿದ್ದಾರೆ. ಅವರು ಸ್ವತ: ಮೋಸಗಾರರಲ್ಲ ಆದರೇ ಒಳ್ಳೆಯವರು ಅಲ್ಲಾ! ಜನರು ಸುಲಭವಾಗಿ ಸಿಗುವುದನ್ನು ದೋಚುವುದಕ್ಕೆ ಕಾಯುತ್ತಿರುವುದಿಲ್ಲ, ಆದರೇ ಸಿಕ್ಕಿದನ್ನು ಯಾವತ್ತು ಬಿಡುವುದಿಲ್ಲ. ಉಚಿತವಾಗಿ ಉಪ್ಪು ಕೊಟ್ಟರೂ ತಿನ್ನುತ್ತಾರೆ. ಕುಡಿದ ನಶೆ ಇಳಿದ ಮೇಲೆ ಅವನು ಚಿಂತಿಸತೊಡಗಿದ್ದ, ಬೆಳ್ಳಿಗ್ಗೆಯಿಂದ ಊಟ ಮಾಡಿಲ್ಲ, ಹೊಟ್ಟೆ ಹಸಿವು ಎನ್ನುತ್ತಿದ್ದ. ನಂತರ, ಮನೆಯವರು ಇವನ ಫೋನಿಗೆ ಕರೆ ಮಾಡುತ್ತಿದ್ದರು ಇವನು ನಿರ್ಲಕ್ಷಿಸುತ್ತಿದ್ದ. ಪಕ್ಕದ್ದಲ್ಲಿದ್ದವನು ಕೇಳಿದ್ದಕ್ಕೇ! ಅಯ್ಯೋ ಬೇಜಾರು ಅವರ ಜೊತೆ ಮಾತನಾಡುವುದಕ್ಕೆ ಎಂದ. ಅಂತೂ ಇಂತೂ ಇವರಿಬ್ಬರ ಸಂಭಾಷಣೆಯನ್ನು ಆಲಿಸುತ್ತಾ ಕುಶಾಲನಗರಕ್ಕೆ ತಲುಪಿದ್ದು ತಿಳಿಯಲೇ ಇಲ್ಲ. ಅಲ್ಲಿಂದ ಹೋಗಿ, ಮದುವೆ ಮನೆಗೆ ಹೋಗಿ ಸ್ವಲ್ಪ ಊಟ ಮಾಡಿ, ನಂತರ ಹರಟೆ ಹೊಡೆದವು. ಕುಳಿತ ಜಾಗದಲ್ಲಿಯೇ ಮೂರು ಗಂಟೆಯ ತನಕ ಹರಟೆ ಕಾರ್ಯಕ್ರಮ ನಡೆದಿತ್ತು. ಮುಂಜಾನೆ ಎದ್ದು, ಮದುವೆ ಮನೆಗೆ ಹೋಗಿ, ಅಲ್ಲಿಯೂ ನಮ್ಮ ಹರಟೆ ಚರ್ಚೆ ನಡೆದವು. ವಯಸ್ಸಿಗೆ ಬರ ಬರುತ್ತಾ ಎಷ್ಟೇಲ್ಲಾ ವಿಷಯಗಳಿರುತ್ತವೆ ಎನಿಸುತ್ತದೆ. ಮೊದಲೆಲ್ಲ ಮಾತನಾಡುವಾಗ ಮತ್ತೆ ಇನ್ನೇನು ಸಮಾಚಾರವೆನ್ನುತ್ತಿದ್ದೆ. ಈಗ ಮಾತನಾಡುವುದಕ್ಕೆ ವಿಷಯದ ಕೊರತೆಯಿಲ್ಲವೆನಿಸುತ್ತದೆ. ಆದರೇ,, ಕೇಳುಗರ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರವಹಿಸಬೇಕಾಗುತ್ತದೆ.

ಮದುವೆ ಮುಗಿದ ಮೇಲೆ, ಬಸ್ಸ್ ಹಿಡಿದು ಊರಿಗೆ ಹೊರಟೆವು. ಕುಶಾಲನಗರದಿಂದ ಕೊಣನೂರಿಗೆ ಇರುವ ರಸ್ತೆಯನ್ನು ನೋಡಿದರೇ ಹೃದಯಾಘಾತವಾಗುವುದು ಖಚಿತ. ಹದಿನಾಲ್ಕು ಕೀಮೀ ದೂರವನ್ನು ತಲುಪಲು ನಿಮಗೆ ಒಂದು ಗಂಟೆ ಬೇಕು. ಅದೊಂದು ರಸ್ತೆಯಲ್ಲ ಹೊಂಡಗಳು ಇರುವ ಕೆರೆ. ಆದರೂ ದಿನ ನಿತ್ಯ ಅದೇ ರಸ್ತೆಯಲ್ಲಿ ಓಡಾಡುವವರ ಪರಿಸ್ಥಿತಿ ಚಿಂತಾಜನಕ. ಬಹಳ ವರ್ಷಗಳ ನಂತರ ನಾನು ಬಸ್ಸು ಇಳಿದ ಮೇಲೆ ನನ್ನೂರಿಗೆ ನಡೆದುಕೊಂಡು ಹೋದದ್ದು. ಊರಿನ ಬೀದಿಗಳಲ್ಲಿ ನಡೆಯುವುದು ನನಗೆ ಹೆಚ್ಚಿನ ಮುಜುಗರ ಕೊಡಿಸುತ್ತದೆ. ದಾರಿಉದ್ದಕ್ಕೂ ಊರಿನವರು ಮಾತನಾಡಿಸುತ್ತಾರೆ, ಕೆಲಸದ ಬಗ್ಗೆ ಓದಿನ ಬಗ್ಗೆ ಕೇಳುತ್ತಾರೆ ಅವರಿಗೆ ಅರ್ಥ ಮಾಡಿಸುವುದು ತುಂಬಾ ಕಷ್ಟದ ಕೆಲಸ. ಸಂಶೋಧನೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸುವುದು ಅಸಾಧ್ಯ. ಅಂತೂ ಹೋಗುವಾಗ ಯಾರೋ ಕೂಗಿದ ಹಾಗೆ ಆಯಿತು. ನೋಡಿದರೇ ರಂಗ! ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಅವನು ನನಗಿಂತ ಎರಡು ಕ್ಲಾಸು ಮುಂದೆ ಇದ್ದಹಾಗೆ ನೆನಪು! ಅವನು ಮಾತನಾಡಿಸತೊಡಗಿದ. ಹರಿ ಗವರ್ನ್ ಮೆಂಟ್ ಆಯ್ತಾ ನಿನಗೆ ?ಎಂದ. ಅಂದ್ರೇ? ನಿಮ್ಮ ಅಣ್ಣ ಹೇಳ್ತಾ ಇತ್ತು ಹರಿಗೆ ಗವರ್ನ್ ಮೆಂಟ್ ಆಯ್ತು ಅಂತಾ ಎಂದ. ಇಲ್ಲಪ್ಪ ಗವರ್ನ್ ಮೆಂಟ್ ಕೆಲ್ಸ ಏನೂ ಇಲ್ಲ ಎಂದೆ. ಹೌದಾ? ಮತ್ತೇ ನಿಮ್ಮಣ್ಣ ಹೇಳಿದ್ದು ಸುಳ್ಳಾ? ಹೌದು ಎಂದು ತಪ್ಪಿಸಿಕೊಳ್ಳೂವುದಕ್ಕೆ ನೋಡಿದರೆ ಬಿಡುತ್ತಿಲ್ಲ ಮನುಷ್ಯ. ಹರಿ ನಾನು ಊರು ಬಿಡಬೇಕು, ಎಂದ. ಊರು ಯಾಕೆ ಬಿಡಬೇಕು ನೀನು ಎಂದೆ. ದೇಶ ಸುತ್ತಬೇಕು ಎಂದ, ದೇಶ ಸುತ್ತಿ? ತಿಳ್ಕೊಬೇಕು ಎಂದ. ತಿಳ್ಕೊಂಡು ಏನು ಮಾಡ್ತೀಯಾ ಎಂದೆ. ಏನು ಮಾಡೋದು ತಿಳ್ಕೊಬೇಕು ಅಷ್ಟೇ. ಸರಿನಪ್ಪಾ ಯಾಕೆ ತಿಳ್ಕೊಬೇಕು, ಈಗ ಏನಾಗಿದೆ ಊರು, ಜೀವನ ನಡಿತಾ ಇಲ್ವಾ? ನೀನು ಡ್ರೈವಿಂಗ್ ಕಲ್ತಿದ್ದಿಯಾ ಅಲ್ವಾ? ಯಾಕೆ ಕಲಿತೆ, ಏನೋ ಒಂದು ಕಡೆ ಡ್ರೈವರ್ ಆಗಿರಬಹುದು ಅಂತಾ ತಾನೇ? ಹೌದು ಎಂದ. ಉಪಯೋಗಕ್ಕೆ ಬಾರದಿದ್ದ ಮೇಲೆ ನೀನು ಕಲಿತು ಏನು ಮಾಡ್ತೀಯಾ ಎಂದೆ. ಅವನಲ್ಲಿ ಉತ್ತರ ಇರಲಿಲ್ಲ.

ನಾನು ಡ್ರವಿಂಗ್ ಲೈಸೆನ್ಸ್ ಮಾಡಿಸಬೇಕು ಎಂದ. ಮಾಡಿಸು ಎಂದೆ. ಮಾಡಿಸ್ತಿನಿ ಹೇಗೆ ಮಾಡಿಸೋದು ಹೇಳು. ಬಸ್ ಡ್ರೈವರ್ ಆಗೋದು ಹೇಗೆ ಹೇಳು ಎಂದ. ನಾನು ಲೈಸೆನ್ಸ್ ಮಾಡಿಸುವ ರ್ರೀತಿಯನ್ನು ವಿವರಿಸಿದೆ, ಬೇಕಿರುವ ಸರ್ಟಿಫಿಕೇಟ್, ಬಗ್ಗೆ ಹೇಳಿದೆ. ಏಳನೇ ಕ್ಲಾಸೇನು ಎಂಟನೇ ಕ್ಲಾಸಿನದ್ದೇ ತರ್ಸೊಣ ಟಿಸಿ ನ ಎಂದ. ಅದಾದ ಮೇಲೆ, ಸರಿ ನೀನೇ ಮಾಡಿಸಿಕೊಡು ಎಂದ. ಅಪ್ಪಾ ದೇವರೇ, ದಯವಿಟ್ಟು ಹೋಗಿ ಕೆಲಸ ನೋಡು ಸುಮ್ಮನೇ ಟೈಮ್ ಪಾಸ್ಸಿಗೆ ಮಾತಾಡಬೇಡ ಎಂದೆ. ದಾರಿಯಲ್ಲಿ ಬೇರೆಯವರೆಲ್ಲರೂ ಕುಳಿತ್ತಿದ್ದರು, ಅವರು ನನ್ನನ್ನು ಮಾತನಾಡಿಸಿ ರಂಗ ಏನೋ ಹೇಳ್ತಾ ಇದ್ದಾನೆ ಎಂದರು. ಅದಕ್ಕೆ ರಂಗ, ಹರಿ ಕೊಣನೂರಲ್ಲಿ ಸಿಕ್ಕಿದ, ಅರ್ಧ ಬಾಟಲಿ ಎಣ್ಣೆ ಕುಡಿಸಿದ, ಅದಕ್ಕೆ ಅವರ ಮನೆ ತನಕ ಬಿಟ್ಟು ಬರೋಣ ಅಂತ ಹೋಗ್ತಾ ಇದ್ದೀನಿ ಎಂದ. ಸದ್ಯ ಅಲ್ಲಿದ್ದ ಯಾರೂ ಅದನ್ನು ಗಂಬೀರವಾಗಿ ಪರಿಗಣಿಸಲಿಲ್ಲ. ನನಗೆ ಸಂಪೂರ್ಣವಾಗಿ ಅರ್ಥವಾಗಿದೆ ನಿಮಗೆಲ್ಲರಿಗೂ ಇದು ಖಂಡಿತವಾಗಿಯೂ ಇಷ್ಟವಾಗಿಲ್ಲ. ನಾನು ಏನನ್ನೋ ಹೇಳಲು ಹೋಗಿ ಮತ್ತೇನನ್ನೋ ಹೇಳಿದ್ದೇನೆ, ದಯವಿಟ್ಟು ಕ್ಷಮಿಸಿ, ಮುಂದಿನದನ್ನು ನಂತರ ಬರೆಯುತ್ತೇನೆ.

25 ನವೆಂಬರ್ 2011

ಅವರವರ ನಂಬಿಕೆ ಅವರವರ ಭಾವಕ್ಕೆ ಬಿಟ್ಟಿದ್ದು!!!

ಕೆಲವೊಮ್ಮೆ  ಏನಾದರೂ ಬರೆಯಬೇಕೆನಿಸುತ್ತದೆ. ಆದರೇ ಏನು ಬರೆಯುವುದೆಂಬುದೇ ದೊಡ್ಡ ಚಿಂತೆಯಾಗುತ್ತದೆ. ಬರೆಯಲೇಬೇಕೆಂದು ನಿರ್ಧರಿಸಿದ ಮೇಲೆ ಬರೆಯಲೇಬೇಕಲ್ಲವೇ? ಏನನ್ನೋ ಗೀಚಿದರೇ, ಬರವಣಿಗೆಯನ್ನು ತಿರುವಿ ಹಾಕುವವರು ಸಿಗುವುದಿಲ್ಲ! ನನ್ನ ಬರವಣಿಗೆಯನ್ನು ಯಾರಾದರೂ ಓದುತ್ತಾರೆಂಬ ಭರವಸೆ ನನಗೂ ಇಲ್ಲ ಬಿಡಿ! ಆದರೂ ನಾಳೆ ನಾನು ಬರೆದ ಸಾಲುಗಳನ್ನು ನಾನೇ ಮೆಲಕು ಹಾಕುವಾಗ ಇದು ಯಾವ ತಲೆ ಕೆಟ್ಟವನು ಬರೆದಿದ್ದಾನೆ, ಅಥವಾ ನಾನು ಇಷ್ಟು ಕೆಟ್ಟದ್ದಾಗಿ ಬರೆಯುತ್ತೀನಾ? ಎಂದು ನನ್ನ ಮೇಲೆ ನನಗೆ ಜಿಗುಪ್ಸೆ ಬರಬಾರದಲ್ಲ. ಆದ್ದರಿಂದ, ಅಳೆದು ತೂಗಿ ಬರೆಯುತ್ತಿದ್ದೇನೆ. ಬರವಣಿಗೆಯ ತೂಕ ಓದಿದ ಮೇಲೆಯೇ ತಿಳಿಯುವುದು. ನಾನೆಂದು ಆ ಕೆಲಸ ಮಾಡಿದವನಲ್ಲವೆಂದು ತಮಗೂ ತಿಳಿದಿದೆ. ಇದ್ದಿದ್ದನ್ನು ನೇರವಾಗಿ ಹೇಳಿ ನಿಮ್ಮೆಲ್ಲರ ಹತ್ತಿರನೂ ಒಮ್ಮೊಮ್ಮೆಯಾದರೂ ಬೈಗುಳ ತಿಂದಿದ್ದೇನೆ. ಸರಿ ಈಗ ವಿಷಯಕ್ಕೆ ಬರುವ ಸಮಯ, ಇದ್ದಕ್ಕಿದ್ದ ಹಾಗೆ, ನನ್ನ ಬ್ಲಾಗ್ ನೋಡಿ, ಏನ್ರೀ, full acknowledgement ಹಾಕಿದ್ದೀರಾ ಎಂದರು. ನಾನು ಹೌದು ಎಂದೆ. ನನಗೆ ಇಷ್ಟ ಆಗಲಿಲ್ಲ, silly and unmatured ಅನ್ಸುತ್ತೆ  ಎಂದರು. ಏನು ಮಾಡುವುದು ನಾನೂ ಇನ್ನು ಮೆಚುರ್ ಆಗಿಲ್ಲವಲ್ಲ ಎಂದೆ

ನೀವು ಹಿಂದೆ ದೇವರನ್ನು ನಂಬುವುದಿಲ್ಲ ಅಂತಾ ಇದ್ರಿ ಅಲ್ವಾ ಎಂದರು. ನಾನು ಹೌದು ಎಂದೆ, ಅವರು ಮತ್ತೆ ಈಗ ಇದ್ದಕ್ಕಿದ್ದ ಹಾಗೆ ಭಕ್ತಿ ಉಕ್ಕಿ ಹರಿತಾ ಇದೆ. ಇದು ಕೇವಲ ಇವರೊಬ್ಬರು ಕೇಳಿದ ಪ್ರಶ್ನೆಯಲ್ಲ. ಬಹಳಷ್ಟು ಜನರು ನನ್ನನ್ನೇ ಕೇಳಿದ್ದಾರೆ, ಎದುರುಗಡೆ, ಹಿಂದುಗಡೆಯೂ ಮಾತನಾಡಿದ್ದಾರೆ. ನಾಟಕ ಆಡ್ತಾನೆ, ಎನ್ನುವಷ್ಟರ ಮಟ್ಟಿಗೆ ಮಾತುಗಳು ಬಂದಿವೆ. ಹೌದು ಮನುಷ್ಯನ ಜೀವನದಲ್ಲಿ ಬದಲಾವಣೆ ನಿರಂತರ. ದಿನ ದಿನಕ್ಕೂ ಬದಲಾಗಲೇ ಬೇಕು. ಕೆಲವರು ಅದನ್ನು ಅಬಿವೃದ್ದಿ ಎನ್ನುತ್ತಾರೆ ಮತ್ತೆ ಕೆಲವರು ಬದಲಾವಣೆ ಎನ್ನುತ್ತಾರೆ. ಅದೆಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ನಾನು ನನ್ನನ್ನು ಬಹಳಷ್ಟು ಬಾರಿ ನನ್ನ ಕಣ್ಣುಗಳಿಂದ ನನ್ನ ಮನಸ್ಸಿನ ಕನ್ನಡಿಯಿಂದ ನೋಡಿಕೊಂಡಿದ್ದೇನೆ. ನನ್ನ ದಿನ ದಿನದ ನಡುವಳಿಕೆಗಳನ್ನು ಗಮನಿಸುತ್ತಾ ಬೆಳೆಯುತ್ತಿದ್ದೇನೆ/ಬದುಕುತಿದ್ದೇನೆ. ಏನಾದರೂ ಏರು ಪೇರಾದರೂ ನನಗಂತಹ ದೊಡ್ಡ ಪೆಟ್ಟು ಆಗುವುದಿಲ್ಲ. ಆದ್ದರಿಂದ ನಾನೇ ಗಮನಿಸಿದಂತೆ ನನ್ನ ಮನಸ್ಸಿಗೆ ಬೇಸರವಾದರೂ ಕೇವಲ ನಿಮಿಷಗಳಲ್ಲಿ ನಾನು ಅದರಿಂದ ಹೊರಕ್ಕೆ ಬಂದಿರುತ್ತೇನೆ. ನಿಮಗೆ ಮುಂಚಿತವಾಗಿಯೇ ಆಗುವುದರ ಅರಿವಿದ್ದರೇ ನೀವು ಹೆಚ್ಚು ದುಃಖ ಪಡುವುದಿಲ್ಲವೆಂಬುದು ನನ್ನ ವಾದ. ಯಾಕೆಂದರೇ ಬಹಳಷ್ಟು ಬಾರಿ ನಿಮ್ಮ ಮನಸ್ಸು ಅದಕ್ಕೆ ಹೊಂದಿಕೊಂಡಿರುತ್ತದೆ. ವಯಸ್ಸಿಗೆ ಬಂದ ಮಗ ಸತ್ತಾಗ ನೋವು ಅಧಿಕವಾಗಿರುತ್ತದೆ, ಯಾಕೆಂದರೇ ಅದು ಅನಿಶ್ಚಿತವಾಗಿ ಬಂದದ್ದು. ನಿನ್ನೆಯ ತನಕ ಜೊತೆಯಲ್ಲಿದ್ದ ಗೆಳತಿ ಇಂದು ಬೆಳ್ಳಿಗ್ಗೆ ಕಣ್ಮರೆಯಾದಾಗ ಹೃದಯ ಒಡೆದು ಬರುತ್ತದೆ. ಆದರೇ, ಕಾಲೇಜು ಮುಗಿದು ಹೋಗುವ ದಿನ ನಮಗೆ ಅಂಥಹ ನೋವಾಗುವುದಿಲ್ಲ, ನಾವೇ ಕೆಲಸ ಬಿಡುವಾಗ ನೋವಾಗುವುದಿಲ್ಲ. ಯಾಕೆಂದರೇ ನಾವು ಕೆಲಸ ಬಿಡುತ್ತಿದ್ದೇವೆಂಬುದು ನಮಗೆ ಮುಂಚಿತವಾಗಿಯೇ ತಿಳಿದಿರುತ್ತದೆ. ನಾನು ಬರೀ ಪೀಠಿಕೆಯಲ್ಲಿಯೇ ನಿಮ್ಮನ್ನು ಮುಗಿಸುತ್ತಿದ್ದೇನೆಂದು ಭಾವಿಸಬೇಡಿ.


ದೇವರ ವಿಷಯವನ್ನು ಕುರಿತು ಮಾತನಾಡುತ್ತೇನೆ. ಇದು ಸಂಪೂರ್ಣ ನನ್ನ ಈ ದಿನದ ನಂಬಿಕೆ, ಇಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಅಥವಾ ಅದರ ಬಗ್ಗೆ ಕೀಳರಿಮೆಯಾಗಲಿ ಅಥವಾ ಹೆಮ್ಮೆಯಾಗಲಿ ತೋರಿಸುವುದಿಲ್ಲ. ಚಿಕ್ಕವನಿದ್ದಾಗ ನಾನು ದೇವರಿಗೆ ಪೂಜೆ ಮಾಡುತ್ತಿದ್ದೆ, ಹೆಚ್ಚಿನ ಸಲ ಅಮ್ಮ ಅಪ್ಪನ ಒತ್ತಾಯಕ್ಕೆ, ನಮ್ಮ ಮನೆಗಳಲ್ಲಿ ದಿನ ನಿತ್ಯ ಪೂಜೆ ಮಾಡಲೇ ಬೇಕೆಂಬ ನಿಯಮವೇನು ಇಲ್ಲದಿದ್ದರೂ ಸಂಜೆ ದೀಪ ಹಚ್ಚಿ, ಓದುವುದಕ್ಕೆ ಕುಳಿತುಕೊಳ್ಳುವುದು ನಿಯಮವಾಗಿ ಮಾರ್ಪಾಡಾಯಿತು. ಆದರೂ ಪರೀಕ್ಷೆಯ ಸಮಯದಲ್ಲಿ ದೇವರಿಗೆ ಹರಕೆ ಕಟ್ಟುವುದು, ಪೂಜೆ ಮಾಡಿಸಿಕೊಂಡು ಬರುವುದು. ವರ್ಷಕ್ಕೊಮ್ಮೆ ಮನೆದೇವರಿಗೆ ಹೋಗಿ ಬರುವುದು, ಧರ್ಮಸ್ಥಳ ನೋಡುವುದು ಹೀಗೆ ನನಗೆ ಅರಿವಿಲ್ಲದಂತೆಯೇ ದೇವರೆನ್ನುವ  ದೇವರು ನನ್ನೊಳಗೆ ಪ್ರವೇಶ ಪಡೆದಿದ್ದ.


ಆ ದೇವರ ಬಗ್ಗೆ ಒಂದು ಭಯ, ಮತ್ತೊಂದೆಡೆ ಬೇಡಿದ್ದನ್ನು ನೀಡುವವನು ಎನಿಸತೊಡಗಿತು. ಅದನ್ನೇ ನಂಬಿ ಬಹಳಷ್ಟು ದಿನ ಅಲೆದಿದ್ದು ಆಯಿತು. ಓದದೇ ಇದ್ದರೂ ಪಾಸು ಮಾಡು ಎಂದು ಹರಕೆ ಕಟ್ಟುವುದು, ಕ್ರಿಕೇಟ್ ಆಡಿಕೊಂಡು, ಬೇಡದ ಸಿನೆಮಾ ನೋಡಿಕೊಂಡು, ಹೆಂಡ ಸಿಗರೇಟು ಎಂದು ಕಾಲ ಕಳೆದು ಪರೀಕ್ಷೆಯ ಹಿಂದಿನ ದಿನ ಹರಕೆ ಕಟ್ಟುವುದು, ದೇವರು ಎಂಬುವನೊಬ್ಬನಿದ್ದರೇ ನನ್ನನ್ನು ಪಾಸ್ ಮಾಡಲಿ ಎಂದು ದೇವರಿಗೆ ಸವಾಲು ಹಾಕುವುದು. ಅಯ್ಯೋ ದೇವರೇ ನೀನೆ ನನ್ನ ಕೈ ಬಿಟ್ಟರೇ ಮತ್ತಾರು ಎಂದು ಗೋಗರೆಯುವುದು ಇವೆಲ್ಲವೂ ಮನಸ್ಸಿನೊಳಗೆ ಹರಿದಾಡತೊಡಗಿದವು.


ಇವೆಲ್ಲದರ ನಡುವೆ, ಒಮ್ಮೊಮ್ಮೆ ದೇವರೆಂಬುವನು ಎಲ್ಲಿದ್ದಾನೆಂಬ ದೊಡ್ಡ ಪ್ರಶ್ನೆ ಎದುರಾಗತೊಡಗಿತು. ನಾನು ಇಲ್ಲಿ ಯಾವುದೇ ಇಸ್ಂ ಆಗಲೀ ಐಡಿಯಾಲಾಜಿಯಿಂದಾಗಲಿ ಮಾತನಾಡುತ್ತಿಲ್ಲ. ಇಲ್ಲಿ ಬರೆಯುತ್ತಿರುವುದೆಲ್ಲವೂ ನನ್ನ ಸ್ವಂತ ಅನುಭವ. ಇಂಥಹ ಪ್ರಶ್ನೆಯನ್ನು ಹುಡುಕುವ ಸಮಯದಲ್ಲಿ, ದೇವರಿಗೆ ಪೂಜೆ ಮಾಡುವುದು, ಇಲ್ಲದ ದೇವರ ಬಗ್ಗೆ ಕಥೆ ಕಟ್ಟಿ ಜನರನ್ನು ಭಯ ಬೀಳಿಸಿವುದು ಬಹಳ ವಿಚಿತ್ರವೆನಿಸತೊಡಗಿತು. ಜೊತೆಯಲ್ಲಿ ಬದುಕುವ ಸ್ನೇಹಿತರನ್ನೇ ನಂಬದ ಜನರು ಕಾಣದ ದೇವರ ಮೇಲೆ ನಂಬಿಕೆಯಿಡುವುದು, ಅವನ ಮೇಲೆ ಆಣೆ ಮಾಡುವುದು. ಅವನು ನೋಡಿಕೊಳ್ಳಲಿ ಎನ್ನುವುದು. ದೇವರ ಗುಡಿ ಒಡೆಯುವಾಗ ದೇವರೇಕೆ ಬರುವುದಿಲ್ಲ, ಮಸೀದಿ ಒಡೆಯುವಾಗ ಅಲ್ಲಾ, ಚರ್ಚ್ ಒಡೆಯುವಾಗ ಏಸು ಯಾಕೆ ಬರಲಿಲ್ಲವೆಂದು ಎಲ್ಲ ಧರ್ಮದ ಎಲ್ಲ ದೇವರುಗಳ ಮೇಲೆ ಅನುಮಾನ ಬರತೊಡಗಿತು. ಅಂಧಕಾರದಲ್ಲಿ ಸಮಾಜ ಮುಳುಗಿದೆ ಎನಿಸತೊಡಗಿತು. ದೇವರ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿದ್ದಾರೆ. ದೇವರೆನ್ನುವವನೊಬ್ಬನಿದ್ದರೇ ಹೀಗೆ ಆಗುತ್ತಿರಲಿಲ್ಲವೆನಿಸಿತ್ತು. ಎಂದು ಪೂಜೆ ಪುರಸ್ಕಾರದಿಂದ ದೂರ ಹೋದೆ.

ಭೂಮಿ ಇರುವುದು ಮನುಷ್ಯನಿಂದ ಅವನ ಬುದ್ದಿವಂತಿಕೆಯಿಂದ ಯಾವ ದೇವರು ಆಚರಣೆಗಳೆಲ್ಲ ಮೋಸವೆನ್ನುವ ಸ್ಥಿತಿ ತಲುಪಿದೆ. ಕೆಲವೊಮ್ಮೆಯಂತು ಮನೆಯಲ್ಲಿ ಪೂಜೆ ಮಾಡೆಂದರೇ ದೂರ ನಡೆದು ನಿಲ್ಲುತ್ತಿದ್ದೆ. ಮನೆಯವರೆಲ್ಲರೂ ಕೋಪದಿಂದ,ಬೇಸರದಿಂದ ಅತಿ ಹೆಚ್ಚು ಓದಿದರೇ ಹೀಗೆ ಆಗುವುದು, ದುರಹಂಕಾರದ ಪರಮಾವಧಿ ಎನ್ನುವ ಮಟ್ಟಕ್ಕಿಳಿದೆ. ಇದೆಲ್ಲದಕ್ಕೂ ಥಿಯರಿಗಳಿವೆ, ಇಸಂ ಗಳಿವೆ. ಬಹಳ ನೇರ ನಡೆಯಲ್ಲಿ ಹೇಳುವುದಾದರೇ ಇದೆಲ್ಲವೂ ನನ್ನೊಳಗೆ ಮೂಡಿದ್ದು. ಇದರ ವಿಷಯವಾಗಿ ಹಲವಾರು ಬಾರಿ ನನ್ನ ಅನೇಕ ಸ್ನೇಹಿತರೊಡನೆ ಹಂಚಿಕೊಂಡಿದ್ದೇನೆ. ನನ್ನಿಂದಲೇ ಎಲ್ಲವೂ, ಮನುಷ್ಯನಿಂದಲೇ ದೇವರಿರುವುದು, ಮನುಷ್ಯನೇ ಇಲ್ಲದಿದ್ದಲ್ಲಿ ದೇವರನ್ನು ಪೂಜಿಸುವವರು, ಆರಾಧಿಸುವವರು ಎಲ್ಲಿದ್ದರು? ಯಾರಿದ್ದರು? ಎಂದು ಹುಂಬದಿಂದ ಬೀಗುತ್ತಿದ್ದೆ.


ಇಂಥಹ ಸಮಯದಲ್ಲಿ, ನನ್ನೊಳಗೆ ನನಗೆ ಕಾಡಿದ ಹಲವಾರು ಪ್ರಶ್ನೆಗಳು, ಇಡೀ ಭೂಮಂಡಲದಲ್ಲಿ ಅಥವಾ ಭಾರತದಲ್ಲಿ ಅದೆಷ್ಟೋ ಮಂದಿ ದೇವರನ್ನು ನಂಬಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವರನ್ನೇ ನಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಅವರೆಲ್ಲರೂ ಮೂರ್ಖರ? ಯಾರೋ ಒಬ್ಬರು ಇಬ್ಬರು ಅಥವಾ ಒಂದು ಕೋಟಿ ಎರಡು ಕೋಟಿ ಜನರು ದಡ್ಡರಿರಬಹುದು, ಆದರೇ ಇಡೀ ಭೂಮಂಡಲವೇ, ಜಗತ್ತಿನ ವಿಸ್ಮಯಕ್ಕೆ ಬೆರಗಾಗಿದೆ ಎಂದರೇ? ಯಾವುದೋ ಶಕ್ತಿ ನಮ್ಮನ್ನು ಆಳುತ್ತಲೇ ಇರಬೇಕು ಅಥವಾ ಅದು ನಮ್ಮನ್ನು ನಡೆಸುತ್ತಲೇ ಇರಬೇಕು. ಇದೆಲ್ಲದರ ಹಿಂದೆ ಏನೋ ಇದೆ, ಅದನ್ನು ಅರಿಯಬೇಕೆಂದರೇ ಅದರ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು. ನಂಬಿಕೆ ಮತ್ತು ಶ್ರದ್ದೆಯಿಲ್ಲದೇ ಏನನ್ನು ಕಲಿಯಲಾಗುವುದಿಲ್ಲ. ಅದರಂತೆಯೇ, ನಾನು ನನ್ನನ್ನೇ ಪ್ರಶ್ನಿಸತೊಡಗಿದೆ, ಎಲ್ಲವನ್ನೂ ಪ್ರಶ್ನಿಸುತ್ತಾ ಹೋದರೇ, ಸರಿ ತಪ್ಪೆಂದು ಅನುಮಾನಿಸುತ್ತಾ ಹೋದರೇ ನಿಮಗೆ ಅಲ್ಲಿರುವುದನ್ನು ಗಮನಿಸಲಾಗುವುದಿಲ್ಲ.

ನನ್ನ ಮನಸ್ಸಿಗೆ ಆ ದಿನಗಳಲ್ಲಿ ತಟ್ಟನೇ ಹೊಳೆದಿದ್ದು, ಮದರ್ ತೆರೆಸಾರವರ ಒಂದು ಮಾತು ದೊಡ್ಡ ಮಟ್ಟಿಗೆ ನನ್ನೊಳಗೆ ನಾಟಿತ್ತು, ನೀವು ಯಾರನ್ನಾದರೂ ಸರಿ ತಪ್ಪೆಂದು ತಿರ್ಮಾನಿಸುತ್ತಾ ಹೋದರೇ ಅವರನ್ನು ಪ್ರೀತಿಸಲು ಸಮಯವಿರುವುದಿಲ್ಲವೆಂದು. ಹೌದು ನನ್ನ ವಿಷಯದಲ್ಲಿ ಅದು ನೂರಕ್ಕೆ ನೂರು ಸತ್ಯವೆನಿಸಿತು. ನಾವು ಮನುಷ್ಯರು, ಒಬ್ಬರನ್ನು ಮತ್ತೊಬ್ಬರು ಪ್ರೀತಿಸಬೇಕು, ಅದನ್ನು ಯಾವುದೇ ಬೈಬಲ್ ಆಗಲಿ, ಕುರಾನ್ ಆಗಲೀ ಗೀತಾಸಾರವಾಗಲಿ ಬರೆದು ತೋರಿಸಬೇಕಿಲ್ಲ. ನಾನು ಯಾರಿಗೂ ಮೋಸ ಮಾಡುವುದಿಲ್ಲ, ಎಲ್ಲರನ್ನೂ ಪ್ರೀತಿಸುತ್ತೇನೆಂಬುದನ್ನು ನಾನು ಅರಿಯುವಂತೆ ಮಾಡುತ್ತಿರುವುದು ಆ ದೇವರೊಬ್ಬನೆ. ಅವನನ್ನು ನಂಬು ನಿನಗೆ ನೆಮ್ಮದಿ ಕೊಡುವ ದೇವಸ್ಥಾನಕ್ಕೆ ಹೋಗು, ಅದು ನಿನ್ನ ಹಿಂದಿನಿಂದ ಬಂದಿರುವ ಪದ್ದತಿ. ನಾನು ಓದಿದ ಮಾತ್ರಕ್ಕೆ, ಬೆಳೆದ ಮಾತ್ರಕ್ಕೆ ನಮ್ಮ ಮನೆಯಲ್ಲಿ ಹಿಂದಿನಿಂದ ಬಂದಿರುವ ಆಚರಣೆಯನ್ನು ದೂರ ಮಾಡಲಾಗುವುದಿಲ್ಲ. ಈ ವಿಷಯದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ.


ಎಲ್ಲರೂ ಒಂದೇ ರೀತಿಯಲ್ಲಿರಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ, ನಾಗರೀಕತೆ, ಅನಾಗರೀಕತೆ, ನಂಬಿಕೆ, ವಿಶ್ವಾಸ ಇವೆಲ್ಲವೂ ಅವರವರ ಭಾವಕ್ಕೆ ಬಿಟ್ಟಿರುದು. ಆದರೇ, ಅದು ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಾರದು. ಇದು ಜಾತಿಯ, ಧರ್ಮದ ವಿಷಯದಲ್ಲಿಯೂ ಅಷ್ಟೇ! ಜಾತಿಯನ್ನು ಯಾರೂ ಮೇಲಿಟ್ಟಿ ನೋಡಬಾರದು, ಅದು ಅವರವರ ಆಚರಣೆಗೆ ಬಿಟ್ಟಿದ್ದು. ಜಾತಿಯತೆ ಮಾಡುವುದು ಅಥವಾ ಧರ್ಮದಿಂದ ಮತ್ತೊಬ್ಬನನ್ನು ನೋಡುವುದು ಮಹಪರಾಧ. ನಾನು ದೇವಸ್ಥಾನಕ್ಕೆ ಹೋಗುವುದು ನನ್ನ ವ್ಯಕ್ತಿಗತ ಅಭಿಪ್ರಾಯ, ಅದನ್ನು ನನ್ನ ಹೆತ್ತವರು ಕೇಳುವ ಹಾಗಿಲ್ಲ. ಆದರೇ, ನಾನು ಯಾವುದೋ ಧರ್ಮದ ವಿರುದ್ದ ಮಾತನಾಡುವುದಕ್ಕೆ ನನಗೆ ಹಕ್ಕಿಲ್ಲ, ನನ್ನ ಸ್ನೇಹಿತನಾದವನು ನನಗೆ ಉಗಿದು ಹೇಳಬಹುದು. ವಿಷಯ ವ್ಯಾಪ್ತಿಗೆ ಮೀರಿದೆ ಎನಿಸುತ್ತದೆ. ನಾನು ಹೇಳ ಹೊರಟಿದ್ದು, ದೇವರ ಮೇಲೆ ನನಗೆ ನಂಬಿಕೆ ಯಾಕೆ ಬಂತೆನ್ನುವುದಕ್ಕೆ.

ನಾನು, ಮೊದಲೇ ಹೇಳಿರುವಂತೆ ಎಲ್ಲಾ ದೇವಸ್ಥಾನಗಳು, ನನಗೆ ಖುಷಿ ನೀಡುವುದಿಲ್ಲ. ನನಗೆ ಧರ್ಮಸ್ಥಳ, ಬೇಲೂರು ಸಂತೋಷ ಕೊಡುವಷ್ಟು ಬೇರೆಲ್ಲೂ ಕೊಡುವುದಿಲ್ಲ. ಅದರಂತೆಯೇ ನಮ್ಮೂರ ಪಕ್ಕದಲ್ಲಿರುವ ರಾಮನಾಥಪುರ ದೇವಸ್ಥಾನದ ಪೂಜಾರಿಗಳನ್ನು ಕಂಡರೇ ಬರುವಷ್ಟೂ ಕೋಪ ಮತ್ತೆಲ್ಲೂ ಬರುವುದಿಲ್ಲ. ಅಯೋಗ್ಯರೆಂದರೇ, ಥೂ ಎನಿಸುವಷ್ಟು ಅಯೋಗ್ಯರು. ದೇವರಿಲ್ಲ, ಎಲ್ಲವೂ ನಾನೇ ಅಥವಾ ನನ್ನ ಆತ್ಮಭಿಮಾನ, ನನ್ನ ಮೇಲೆ ನನಗಿರುವ ಆತ್ಮ ವಿಶ್ವಾಸದಿಂದ ಪ್ರಪಂಚವನ್ನೇ ಅಲ್ಲಾಡಿಸಬಹುದೆಂಬುದು ಬಹಳ ನಿರ್ದಿಷ್ಟವಾಗಿ ಭ್ರಮೆ ಎನಿಸಿದೆ. ನಾನು ಇದನ್ನು ನಿಮಗೆ ಹೇಳಿದರೇ, ಉಪದೇಶವೆನಿಸುತ್ತದೆ. ಆದರೇ, ಕುಳಿತು ಆಲೋಚಿಸಿ ನೋಡಿ, ನಮ್ಮ ಕೈಯ್ಯಾರೆ ನಾವು ಏನನ್ನು ಮಾಡಲಾಗುವುದಿಲ್ಲ. ಹತ್ತು ವರ್ಷ ಓದಿರುವು ಮನುಷ್ಯ ಪರೀಕ್ಷೆ ದಿನ ಆರೋಗ್ಯ ತಪ್ಪಿ ಬಿದ್ದರೇ, ನಿಮ್ಮ ಕೈಯಲ್ಲಿ ಎಲ್ಲವೂ ಇದ್ದಿದ್ದರೇ ಅದನ್ನು ತಪ್ಪಿಸಬಹುದಿತ್ತು!

ನಾನು ಇಲ್ಲಿ ದೇವರ ಪರವಾಗಿಯೋ ಅಥವಾ ಯಾವುದೋ ಒಂದು ವರ್ಗದ ಪರವಾಗಿಯೋ ವಾದ ಮಾಡುತ್ತಿಲ್ಲ. ನಾವೆಷ್ಟೇ ಮೇಲೆ ಹೋದರೂ, ನಮ್ಮ ಬೇರು ಬಹಳ ಮುಖ್ಯವಾಗುತ್ತದೆ. ಅಂತಿಮವಾಗಿ ನಿಮ್ಮ ಆತ್ಮ ತೃಪ್ತಿ ಮುಖ್ಯವಾಗುತ್ತದೆ. ಎಲ್ಲವನ್ನೂ ವಸ್ತುವಿನಿಂದಲೇ ಗೆಲ್ಲುತ್ತೇನೆಂಬುದು ಶುದ್ದ ಮೂರ್ಖತನ. ಹಣ, ಆಸ್ತಿ, ಹೆಸರು ಗಳಿಕೆ ನಿಮಗೆ ನೆಮ್ಮದಿ ಕೊಡುವುದಿಲ್ಲ. ನೆಮ್ಮದಿ ಕೊಡುವುದು ಒಬ್ಬರಿಗೆ ಸಹಾಯ ಮಾಡಿದಾಗ ಮಾತ್ರ. ಒಬ್ಬರೂ ಯಾವುದೇ ಸಂಕೋಚವಿಲ್ಲದೆ ನೀವು ಮಾಡಿದ ಸಹಾಯವನ್ನು ನೆನೆದಾಗ ಮಾತ್ರ. ನಾನು ನನ್ನ ನೆಮ್ಮದಿಯ ಬದುಕನ್ನು ಆ ನಿಟ್ಟಿನಲ್ಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

22 ನವೆಂಬರ್ 2011

ದೈನತೆಯ ಬದುಕಿಗೆ ಧನ್ಯತೆ ಇದ್ದೇ ಇರುತ್ತದೆ!!

ನಾನು ಈ ಕ್ಷಣದಲ್ಲಿ ಈ ಬರವಣಿಗೆಯನ್ನು ಬರೆಯಲೇ ಬೇಕಾದದ್ದು, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡ ಹೌದು. ನನಗೆ ಇಂದು ಪಿ ಎಚ್ ಡಿ ಸಿಕ್ಕಿರುವ ಸಂಭ್ರಮವೊಂದೆಡೆಯಾದರೆ, ಮತ್ತೊಂದೆಡೆ ಇದೆಲ್ಲವೂ ಆಗಿದ್ದು ಒಂದು ಕನಸೆಂಬಂತೆ ನನ್ನ ಕಣ್ಣುಗಳನ್ನು ನಾನೆ ನಂಬಲಾರದೇ ಕುಳಿತಿದ್ದೇನೆ. ಈ ದಿನಗಳಲ್ಲಿ ಯಾವುದೂ ಸಾಧನೆಯಲ್ಲ, ಎಲ್ಲವೂ ಸಾಧನೆ. ಪಿ ಎಚ್ ಡಿ ಮಾಡುವುದು ಅಂಥಹ ವೀಶೇಷವೇನಲ್ಲ. ಆದರೂ ಒಮ್ಮೊಮ್ಮೆ ಇದೊಂದು ಜೀವನದ ಸಾಧನೆಯ ಮೆಟ್ಟಿಲು ಎನಿಸುತ್ತದೆ. ಬಂದ ಡಾಕ್ಟರೇಟ್ ನಿಂದ ಬೀಗುವುದಕ್ಕಲ್ಲ. ಆದರೇ ಒಂದು ಪಿ ಎಚ್ ಡಿ ಅದೆಷ್ಟೋ ಜನರ ಮನಸ್ಸಿಗೆ ಮುದ ನೀಡುತ್ತದೆಂಬ ಒಲವಿನಿಂದ. ನಾನು ಪಿ ಎಚ್ ಡಿ ಮಾಡಲು ಹೋರಟಾಗ ಅನೇಕ ಮಂದಿ ಬೇಡವೆಂದಿದ್ದರೂ ಕೆಲವರು ಮಾಡೆಂದು ಪ್ರೋತ್ಸಾಹಿಸಿದ್ದರು. ಅವರವರ ಭಾವಕ್ಕೆ ತಕ್ಕಂತೆ ನನಗೂ ಅವರ ಅಭಿಪ್ರಾಯಗಳನ್ನು ಹಂಚಿದ್ದರು. ಕೆಲವರು ಮೈಸೂರು ವಿವಿ ಯಾಕೆ? ವಿದೇಶ ನೋಡು ಎಂದಿದ್ದರು, ಇನ್ನೂ ಕೆಲವರು ಆ ಗೈಡ್ ಯಾಕೆ ಎಂದಿದ್ದರು? ಟಾಪಿಕ್ ಬದಲಾಯಿಸು ಎಂದಿದ್ದರು! ಹೀಗೆ ಎಲ್ಲ ಬಗೆಯ ಉಚಿತ ಸಲಹೆಗಳು ಬಂದಿದ್ದವು. ಹೊಸದರಲ್ಲಿ ನಾನು ಎರಡು ವರ್ಷಕ್ಕೆ ಮುಗಿಸಬಹುದೆಂಬ ನಿರೀಕ್ಷೆಯಲ್ಲಿದ್ದೆ ಆದರೇ ಮುಗಿಯುವಾಗ ನಾಲ್ಕು ವರ್ಷ ತುಂಬಿತ್ತು.

ಅದೇನೇ ಇರಲಿ, ಶುರುವಾಗಿದ್ದ ಉತ್ಸಾಹ ಮುಗಿಯುವ ಹಂತದಲ್ಲಿರಲಿಲ್ಲ. ಕನಸುಗಳನ್ನು ಹೊತ್ತು ಹೋದ ನನಗೆ ಅಂತಿಮವಾಗಿ ಒಂದು ಪದವಿ ಸಿಕ್ಕಿದೆಂಬ ಸಮಧಾನ ಒಂದನ್ನು ಬಿಟ್ಟರೆ ನಾನು ಮಾಡ ಹೋರಟಿದ್ದನ್ನು ಮಾಡಲಿಲ್ಲವೆಂಬ ಕೊರಗು ಇದ್ದೇ ಇದೆ. ನಾನು ಶುರುವಿನಲ್ಲಿ ನನ್ನ ಪಿ ಎಚ್ ಡಿ ಒಂದು ಮಾದರಿಯಾಗಬೇಕು, ವಿಜ್ನಾನಕ್ಕೆ ಪರಿಸರಕ್ಕೆ ಒಂದು ಉತ್ತಮ ಕೊಡುಗೆಯಾಗಬೇಕೆಂದು ಬಯಸಿದ್ದೆ. ಕಡೆ ಕಡೆಗೆ ನನಗೆ ನನ್ನ ಡಿಗ್ರಿ ಸಿಕ್ಕರೇ ಸಾಕೆನ್ನುವ ಮಟ್ಟಕ್ಕೆ ತಲುಪಿದ್ದೆ. ಕೆಲವೊಮ್ಮೆ ಈ ಡಿಗ್ರಿಯೂ ಸಾಕು, ಈ ಜೀವನವೂ ಸಾಕೆನ್ನುವ ಜಿಗುಪ್ಸೆ ಮೂಡಿತ್ತು. ಬೇಡವೇ ಬೇಡವೆಂದು ಬಿಟ್ಟು ಬಿಡಲು ನಿರ್ಧರಿಸಿದ್ದೆ. ಆದರೇ ಆ ಕ್ಷಣದಲ್ಲಿ ನನ್ನ ಕೈ ಬಿಡದೆ ಕೆಲವರು ಸಹಾಯ ಮಾಡಿದರು. ನಾನು ಯಾವುದೇ ಕೆಲಸ ಮಾಡುವ ಮುನ್ನ, ಧರ್ಮಸ್ಥಳಕ್ಕೆ ಹೋಗಿ ಬರುವುದು ನನ್ನ ನಂಬಿಕೆ. ನಾನು ನಂಬಿರುವ ದೇವರು ನನಗೆ ಉತ್ತಮ ಮಾರ್ಗವನ್ನು ತೋರಿಸುತ್ತಾನೆ, ಶಕ್ತಿಯನ್ನು ನೀಡುತ್ತಾನೆಂಬುದು ನನ್ನ ವಿಶ್ವಾಸ. ಆ ದೇವರು ನನ್ನನೆಂದು ಕೈ ಬಿಟ್ಟಿಲ್ಲ. ದೇವರು ಇಡಿಸುವ ಹೆಜ್ಜೆ ನನ್ನದು ಅವನ ಅನುಮತಿಯಿಲ್ಲದೆ ಒಂದು ಹುಳ್ಳುಕಡ್ಡಿಯೂ ಸರಿಯದೆಂಬ ನಂಬಿಕೆ ನನ್ನದು. ದೇವರು ಎಲ್ಲರಿಗೂ ಇದ್ದಾನೆ, ವೀರಪ್ಪನ್ ಅಂಥಹ ಕ್ರೂರಿಯೂ ದೇವರನ್ನು ನಂಬುತಿದ್ದನೆಂಬುದು ಕೆಲವರ ವಾದವಾಗುತ್ತದೆ. ಅದೇನೆ ಇರಲಿ, ನನಗೆ ಪಿ ಎಚ್ ಡಿ ಬಂದಿರುವುದು ಹೆಮ್ಮೆಯ ವಿಷಯವಂತೂ ಅನಿಸಿಲ್ಲ. ಇದು ನಾನು ನಂಬಿದ ದೇವರು ಕೊಟ್ಟ ಭಿಕ್ಷೆ, ನನ್ನ ಸ್ನೇಹಿತರು ನನಗೆ ಮಾಡಿದ ಸಹಾಯ. ಆ ಸಹಾಯಕ್ಕೆ ನಾನು ಚಿರ ಋಣಿ. ಒಂದು ಒಳ್ಳೆಯ ಮನಸ್ಸಿನಿಂದ ನಿಸ್ವಾರ್ಥದಿಂದ ಸಹಾಯವನ್ನು ಬೇಡಿದಾಗ ಸರ್ವರು ನಿಮಗೆ ಸಹಾಯ ಮಾಡುತ್ತಾರೆಂಬುದಕ್ಕೆ ನನ್ನ ಪಿ ಎಚ್ ಡಿಯೊಂದು ನಿದರ್ಶನ.

ನಾನು ಎರಡು ವರ್ಷ ಕಳೆದ ಮೇಲೂ ಪಿ ಎಚ್ ಡಿ ಮಾಡುವುದನ್ನು ನಿಲ್ಲಿಸುವ ತೀರ್ಮಾನ ಕೈಗೊಂಡಿದ್ದೆ. ಮನಸ್ಸಿನ ಯಾವುದೋ ಮೂಲೆಯಲ್ಲಿ ಎನೋ ಒಂದು ಬಗೆಯ ಕೊರಗು ನೋವು ನನ್ನನ್ನು ಕಾಡುತ್ತಲೇ ಇತ್ತು. ಕೇವಲ ಡಿಗ್ರಿಗಾಗಿ, ಮಾನವೀಯತೆ, ಸ್ವಾಭಿಮಾನ ಬಿಟ್ಟು ಉಪಯೋಗಕ್ಕೇ ಬಾರದ, ನಾಲ್ಕು ಜನರಿಗೆ ಅನುಕೂಲವಾಗದ ನಿನ್ನ ಡಿಗ್ರಿಗೆ ಏನು ಬೆಲೆಯೆಂಬುದು ನನ್ನಂತರಳಾವನ್ನು ಕೆದುಕುತ್ತಲೇ ಇತ್ತು. ನಾನು ಹೊರಗೆಷ್ಟೇ ಖುಷಿಯಾಗಿದ್ದರೂ ಪಿ ಎಚ್ ಡಿ ವಿಷಯ ಬಂದಾಗ ನನಗೆ ಪಾಪ ಪ್ರಜ್ನೆ ಕಾಡುತ್ತಿತ್ತು. ಎಲ್ಲರನ್ನೂ ಆಡಿಕೊಳ್ಳುವ ಗೇಲಿ ಮಾಡುವ ನಾನು, ಮಾಡುತ್ತಿರುವುದಾದರೂ ಏನೆಂಬುದು, ನನ್ನನ್ನು ಕುಬ್ಜನನ್ನಾಗಿಸುತ್ತಿತ್ತು. ಮೊದಲಿಗೆ ಎನ್ವಿರಾನ್ ಮೆಂಟಲ್ ಫ಼್ಲೋಸ್ ಎಂಬ ವಿಷಯವನ್ನು ಕೈಗೆತ್ತಿಕೊಂಡಾಗ, ದೇಶದಲ್ಲಿಯೇ ಯಾರೂ ಮಾಡದ ವಿಷಯದ ಮೇಲೆ, ಎಲ್ಲರೂ ಕಷ್ಟವೆನ್ನುವ ವಿಷಯದ ಮೇಲೆ ನಾನು ಸಂಶೋಧನೆ ಮಾಡಲು ಹೊರಟಿರುವುದು ಹೆಮ್ಮೆಯ ವಿಷಯವೆನಿಸಿತ್ತು. ಆದರೇ ಆ ಹೆಮ್ಮೆಯಾಗಿದ್ದ ವಿಷಯ ಕೇವಲ ಆರು ತಿಂಗಳಿನಲ್ಲಿಯೇ ನನ್ನ ಕನಸಿನ ಗೋಪುರವನ್ನು ಒಡೆದುಹಾಕಿತ್ತು. ನಾನು ಇಂದು ಮೆಟ್ಟಿಲು ಏರಿದ ಮೇಲೆ ಯಾರನ್ನಾದರೂ ಗೇಲಿ ಮಾಡಿದರೇ ಅದು ನಂಬಿಕೆ ದ್ರೋಹವಾದೀತು. ಆದ್ದರಿಂದ ಇಲ್ಲಿ ಯಾರನ್ನು ಗೇಲಿ ಮಾಡುವುದಿಲ್ಲ, ಅನೇಕರಿಂದ ನನಗೆ ಅನ್ಯಾಯವಾಗಿದೆ, ಕೆಲವರು ನಾನು ಏನನ್ನು ಮಾಡುವುದು ಬೇಡವೆನ್ನುವ ಮಟ್ಟಿಗೆ ವಿಷ ಕಾರಿದ್ದಾರೆ. ಅಂಥವರ ಹೆಸರನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ, ಅವರೆಲ್ಲರನ್ನು ಆ ದೇವರು ನೋಡಿಕೊಳ್ಳಲಿ.

ನಾನು ಇಲ್ಲಿ ಬರೆಯುವುದು ನನ್ನ ವಿದ್ಯಾಬ್ಯಾಸಕ್ಕೆ ಸಹಾಯ ಮಾಡಿದವರ ಬಗೆಗೆ ಮಾತ್ರ. ನಾನು ಮೊದಲೇ ಹೆಳಿದಂತೆ ನನಗೆ ಬಂದಿರುವ ಈ ಡಿಗ್ರಿ ಸಲ್ಲಬೇಕಿರುವುದು, ನನ್ನ ದೇವರಿಗೆ ಮತ್ತು ನನ್ನ ಸ್ನೇಹಿತರಿಗೆ. ನಾನು ಕೈಚೆಲ್ಲಿ ಕುಳಿತ ಸಮಯದಲ್ಲಿ, ನನ್ನ ನೆರವಿಗೆ ಬಂದವರು, ನಂದ ಮತ್ತು ವಿಜಯ್, ಅವರಿಬ್ಬರೂ ಪ್ರೋತ್ಸಾಹಿಸಿ ನನ್ನ ಫೀಲ್ಡ್ ಸರ್ವೇ ಮಾಡದೇ ಇದ್ದಿದ್ದರೇ ನನಗೆ ಇಂದಿಗೆ ನಿಮ್ಮ ಮುಂದಿರುವ ಅರ್ಹತೆ ಇರುತ್ತಿರಲಿಲ್ಲ. ನಂತರ ನನ್ನ ಡಿಗ್ರಿಗೆ ಮುಖ್ಯ ಕಾರಣರಾದವರು, ಬೆಂಗಳೂರು ವಿವಿಯ ರಿಸರ್ಚ್ ವರ್ಗ. ಪವಿತ್ರ, ದುರ್ಗೇಶ್, ಕುಮಾರ್, ಖಯೂಮ್ ಮತ್ತು ವಿಜಯ್. ಎಷ್ಟರ ಮಟ್ಟಿಗೆ ಸಹಾಯ ಮಾಡಿದರೆಂದರೇ ಅವರ ಪದವಿಗೆ ಕೆಲಸ ಮಾಡುತ್ತಿರುವ ಮಟ್ಟಿಗೆ ನನಗೆ ಸಹಾಯ ಮಾಡಿದ್ದಾರೆ. ಅವರನ್ನು ನಾನೆಂದು ಮರೆಯುವಂತಿಲ್ಲ. ಅದಾದ ನಂತರ ನನಗೆ ಅತಿಯಾಗಿ ಸಹಾಯ ಮಾಡಿದ್ದು, ಡಾ|| ಲೆನಿನ್ ಬಾಬು, ನಾನು ಬರೆಯುತ್ತಿದ ಹಾಗೇಯೇ ಅವರು ಅದನ್ನು ಓದಿ, ತಿದ್ದಿಕೊಡುತ್ತಿದ್ದರು, ಅವರ ಜೊತೆಯಲ್ಲಿಯೇ ಡಾ|| ರೆಜಿನಾ ಅವರು ಸಹ ಅತಿ ಹೆಚ್ಚಿನ ಮಟ್ಟದಲ್ಲಿ ನನಗೆ ಸಹಾಯ ಮಾಡಿದರು. ಡಾ|| ಬೇಲಾ ಅವರು ನನಗೆ ಅದೆಷ್ಟರ ಮಟ್ಟಿಗೆ ವಿಷಯವನ್ನು ಅರ್ಥೈಸಿದರೆಂದರೇ ಪ್ಲಾಂಕ್ಟನ್ ವಿಷಯದಲ್ಲಿ ಎಬಿಸಿಡಿ ಬಾರದ ನನಗೆ ಕೊನೆಯಲ್ಲಿ ನಾಲ್ಕು ಸಾಲು ಬರೆಯುವ ಮಟ್ಟಿಗೆ ಪ್ರೋತ್ಸಾಹಿಸಿದರು. ಈ ಎಲ್ಲದರ ನಡುವೆ, ಸವಿತಾ ನನ್ನ ಥೀಸಿಸ್ ಓದುವುದರಿಂದ, ಎಲ್ಲ ಸಲಹೆಗಳನ್ನು ಕೊಟ್ಟು ಸಹಕರಿಸಿದರು. ಇದೆಲ್ಲದರ ನಡುವೆ, ಮೀನುಗಾರಿಕೆ ಇಲಾಖೆಯಲ್ಲಿ ಪರಿಚಯರಾದ ಅದರಲ್ಲೂ ನನ್ನ ಸ್ನೇಹಿತ ದ್ವಾರಕೀಶ್, ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲರನ್ನು ಪರಿಚಯ ಮಾಡಿಸಿ ಸಹಾಯ ಮಾಡಿಸಿದರು, ಅವರ ಜೊತೆಗೆ ಕಿರಣ್, ನವೀನ, ಸೀನಪ್ಪ, ಮಗದ ಹೀಗೆ ಅದೆಷ್ಟೋ ಮಂದಿ ಮೀನುಗಾರಿಕೆ ಇಲಾಖೆಯವರು ನನಗೆ ಸ್ನೇಹಿತರಾದರು. ಜೊತೆಜೊತೆಯಲ್ಲಿಯೇ ನನಗೆ ಆರ್ಥಿಕ ಸಹಾಯವನ್ನು, ನನ್ನ ಸ್ನೇಹಿತ ಮಂಜೇಶ್, ನಮ್ಮಪ್ಪ ನಮ್ಮ ಅಕ್ಕ ಭಾವ ನೀಡಿ ಸಹಕರಿಸಿದರು. ಶ್ರ‍ೀಕಂಠಸ್ವಾಮಿಯ ಶಿಷ್ಯರಾದ ಶಿವಕುಮಾರ್ ಮತ್ತು ವಿವೇಕ್ ಬಹಳಷ್ಟು ಸಹಾಯ ಮಾಡಿದರು. ನಾನು ಮೈಸೂರಿನಲ್ಲಿದ್ದಷ್ಟು ದಿನ ಆಶ್ರಯ ನೀಡಿದವರು ಅನಿಲ್ ಮತ್ತು ರಾಜಣ್ಣ. ನಾನು ನನ್ನ ಥೀಸಿಸ್ ಗೆ ಮ್ಯಾಪ್ ಗಳು ಬೇಕೆಂದು ಒದ್ದಾಡುತ್ತಿರುವಾಗ ಸಹಾಯಕ್ಕೆ ಬಂದವನು ಕೃಷ್ಣಮೂರ್ತಿ, ಅವನಿಗೂ ನನಗೂ ದೊಡ್ಡ ಮಟ್ಟದ ಸ್ನೇಹವಿರಲಿಲ್ಲ, ನಮ್ಮ ಹಾಸ್ಟೇಲ್ ನಲ್ಲಿದ್ದ ಎನ್ನುವ ಸಲುಗೆಯಿದ್ದ, ಸಹಾಯ ಬೇಡಿದೆ, ಅರ್ಧ ದಿನದಲ್ಲಿ ಕುಳಿತು ಹತ್ತು ಮ್ಯಾಪ್ ಗಳನ್ನು ಮಾಡಿಕೊಟ್ಟ.

ಮೇಲೆ ಹೆಸರಿಸಿದ ಯಾರೊಬ್ಬರಿಗೂ, ನನ್ನ ಟಾಪಿಕ್ ಬಗ್ಗೆ ಏನೂ ತಿಳಿದಿರಲಿಲ್ಲ, ಇದಕ್ಕೆ ಮುಂಚೆ ನಾನು ಅವರಿಗೆ ಯಾವೊಂದು ಸಹಾಯವನ್ನು ಮಾಡಿದವನಲ್ಲ. ಆದರೂ ಇವರೆಲ್ಲರೂ ತಮ್ಮದೇ ಥೀಸಿಸ್ ಎನ್ನುವ ಮಟ್ಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು, ಇದು ಇಂದಿಗೂ ನನಗೆ ಕೌತುಕದ ವಿಷಯ. ಇವರೆಲ್ಲರೂ ನನಗೇಕೆ ಇಷ್ಟೊಂದು ಸಹಾಯ ಮಾಡಿದರು? ಆ ದೇವರು ಇವರಿಗೆ ಆ ಮನಸ್ಸನ್ನು ನೀಡಿದನಾ? ಅಥವಾ ಇವರಲ್ಲಿರುವ ದೊಡ್ಡಗುಣವಾ? ನನ್ನ ಬಗೆಗೆ ಇವರಲ್ಲಿರುವ ಸ್ನೇಹವಾ? ನಾನು ಡಿಗ್ರಿ ಬಂದಾಗಿನಿಂದ ನಾನು ಅನುಭವಿಸಿದ ಕಹಿ ನೆನಪುಗಳ ಬಗ್ಗೆ ಚಿಂತಿಸುತ್ತಲೇ ಇಲ್ಲಾ, ಇವರೆಲ್ಲರೂ ಮಾಡಿದ ಸಹಾಯದ ಬಗೆಗೆ ಚಿಂತಿಸುತ್ತಿದ್ದೇನೆ. ನನ್ನ ಅಜ್ಜಿ ಹೇಳುವಂತೆ, ಅವನು ಬರೆದಂತೆ ಎಲ್ಲವೂ ನಡೆಯಲೇ ಬೇಕು, ಎಲ್ಲವೂ ನಿರ್ಧಾರವಾಗಿರುತ್ತದೆ. ನಾವು ಕೇವಲ ನಟನೆಗೆ ಮಾತ್ರ. ಎಲ್ಲವನ್ನೂ ಅವನು ಕೊಟ್ಟಮೇಲೂ ಅವನನ್ನು ಬೇಡುವುದೇಕೆ, ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಸಹೃದಯವಂತರು ನಮ್ಮ ನೆರವಿಗಿರುತ್ತಾರೆ ಅವರೆಲ್ಲರನ್ನೂ ದೇವರೇ ನಮ್ಮಲ್ಲಿಗೆ ಅಟ್ಟಿರುತ್ತಾನೆ, ಅವರ ಸಹಾಯವನ್ನು ಒಳ್ಳೆಯ ಕಾರ್ಯಕ್ಕೆ ಮಾತ್ರ ಬೇಡಬೇಕು.

21 ನವೆಂಬರ್ 2011


ಒಮ್ಮೊಮ್ಮೆ ಜನರ ನಡುವಳಿಕೆಗಳು ನಮ್ಮನ್ನು ಬಹಳ ಬೇಸರಗೊಳಿಸುತ್ತವೆ. ಸಹಾಯಮಾಡುವುದಕ್ಕೆ ಹೋದವರು ಮತ್ತೊಮ್ಮೆ ಸಹಾಯವನ್ನೇ ಮಾಡಬಾರದೆಂಬಂತೆ ಮಾಡಿಬಿಡುತ್ತವೆ. ನೀರಲ್ಲಿ ಮುಳುಗುತ್ತಿರುವವನನ್ನು ಉಳಿಸಲು ಹೋಗಿ ತಾನು ಸಾಯುವಂತೆಯೋ, ಹಾದಿಯಲ್ಲಿ ಹೋಗುವ ಮಾರಮ್ಮನನ್ನು ಮನೆಗೆ ಕರೆದಂತೆಯೋ ಆಗಿ ಬಿಡುತ್ತದೆ. ಮೊನ್ನೆ ಇಂಥಹದ್ದೆ ಒಂದು ಸನ್ನಿವೇಶ ನನಗೂ ಒದಗಿಬಂತು, ಅನುಭವಿಸಿದೆ, ಅದನ್ನು ಆನಂದಿಸುವ ಸರದಿ ತಮ್ಮದು. ಆಫೀಸಿಗೆಂದು ಬರುತ್ತಿದ್ದೆ, ಮಲ್ಲೇಶ್ವರದ ಹದಿನೇಳನೆ ಕ್ರಾಸಿನಿಂದ ಬರುವುದು ನಂತರ, ಎಂಈಎಸ್ ಕಾಲೇಜು ಪಕ್ಕದಲ್ಲಿ ಬರುವುದು ನನ್ನ ದಿನಚರಿ. ಬರುವ ದಾರಿಯಲ್ಲಿ ಒಬ್ಬ ಅಜ್ಜ ನನ್ನ ಬೈಕ್ ಅನ್ನು ಅಡ್ಡ ಹಾಕಿದರು. ಆರೋಗ್ಯ ಸರಿಯಿಲ್ಲ ಅಲ್ಲಿಯ ತನಕ ಬಿಡಿ ಎಂದರು. ನಾನು ಹೋಗುವುದು ಹದಿನಾಲ್ಕನೇ ಕ್ರಾಸಿನ ತನಕ ಮಾತ್ರವೆಂದೆ. ನಾನು ಗೀತಾಂಜಲಿ ಹತ್ತಿರ ಹೋಗಬೇಕೆಂದರು. ನಾನು ಆ ಮಾರ್ಗವಾಗಿ ಹೋಗುವುದಿಲ್ಲ ನನ್ನ ಆಫೀಸಿರುವುದು ಇಲ್ಲೇ ಮುಂದಿನ ರಸ್ತೆಯಲ್ಲಿ ಎಂದೆ. ಆ ಮನುಷ್ಯ ದೇವರ ಹೆಸರನ್ನು ಹೇಳುತ್ತಾ ಕುಳಿತೇ ಬಿಟ್ಟರು. ರಾಘವೇಂದ್ರ ಕಾಪಾಡು ತಂದೆ ಎಂದರು. ದೇವರ ಹೆಸರು ಹೇಳಿ ಕುಳಿತಿದ್ದರಿಂದ ನನಗು ಸ್ವಲ್ಪ ಕನಿಕರ ಬಂದಿರಬಹುದು. ಕುಳಿತ ಎರಡೇ ನಿಮಿಷದಲ್ಲಿ, ನನಗೆ ಸರ್ಜರಿಯಾಗಿದೆ, ಎದೆಯಲ್ಲಿ ನೋವಿದೆ ಎನ್ನತೊಡಗಿದರು. ಅಯ್ಯೋ ಹಣೆಬರಹವೇ! ಈ ಮನುಷ್ಯನಿಗೆ ಏನಾದರೂ ಆದರೇ? ಭಯವೆನಿಸತೊಡಗಿತು. ರಸ್ತೆ ಬೇರೆ ಚೆನ್ನಾಗಿರಲಿಲ್ಲ. ಆ ವಿಷಯಕ್ಕೆ ಬಂದರೇ, ಬೆಂಗಳೂರಿನಲ್ಲಿ ಯಾವ ರಸ್ತೆ ಚೆನ್ನಾಗಿದೆ! ಎನ್ನುವ ಪ್ರಶ್ನೆಯೂ ಹುಟ್ಟಬಹುದು. ನಾನು ಅವರಿಗೆ ಹೇಳತೊಡಗಿದೆ, ಮುಂದಿನ ಬಸ್ ಸ್ಟಾಪ್ ವರೆಗೆ ಬಿಡುತ್ತೇನೆ. ಆನಂತರ ನೀವು ಬಸ್ಸಿನಲ್ಲಿ ಹೋಗಿ ಎಂದು. ಆ ಮನುಷ್ಯ ತನ್ನ ಎದೆಯಲ್ಲಿರುವ ಗಾಯವನ್ನೇ ತೋರುವಂತೆ ಮಾಡತೊಡಗಿದರು!!

ನನಗಂತೂ ಆ ಕ್ಷಣ ಅಸಹ್ಯ, ಭಯ ಬೇಸರ ಎಲ್ಲವೂ ಒಮ್ಮೇಗೆ ಬಂದಹಾಗಾಯಿತು. ದಾರಿ ಹೋಕನಿಗೆ ಸಹಾಯ ಮಾಡಲು ಹೋಗಿ, ಈಗ ಅವನನ್ನು ಅವನಿಗೆ ಕೆಲಸವಿರುವಲ್ಲಿಗೇ ಕರೆದೊಯ್ಯಬೇಕಾ? ಮಾನವನ ದುರಾಸೆಗೆ, ದುರುಪಯೋಗಕ್ಕೆ, ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಾರದೆನಿಸಿತು. ಜನರು ಬೆಂಗಳೂರಿನಂಥಹ ನಗರಗಳಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ಯಾಕೆ ಹಿಂಜರಯುತ್ತಾರೆಂಬುದಕ್ಕೆ ಕ್ಷಣಾರ್ಧದಲ್ಲಿಯೇ ಉತ್ತರೆ ದೊರಕಿತು. ಅಲ್ಲಾ ಮಾರಾಯರೇ, ಆಟೋದಲ್ಲಿ ಹೋಗಬಹುದಲ್ಲ ಎನ್ನುವ ನನ್ನ ಪ್ರಶ್ನೆಗೆ ಮನುಷ್ಯ ಮೌನವಹಿಸಿದ್ದರು. ಇದು ಯಾಕೋ ಅತಿಯಾಯಿತೆನಿಸಿ, ಸ್ವಾಮಿ ಆಟೋದಲ್ಲಿ ಹೋಗಿ ಎಂದರೇ, ಇಲ್ಲ ಆಟೋ ಅಲ್ಲಿಯ ತನಕ ಬರುವುದಿಲ್ಲವೆಂದರು. ನಾನು ನಿಮ್ಮನ್ನು ಆಟೋಗೆ ಹತ್ತಿಸುತ್ತೇನೆ, ಇಳಿಯಿರಿ ಎಂದರೇ ಇಳಿಯುವುದಿಲ್ಲವೆಂದು ಹಠಮಾಡತೊಡಗಿದರು.

ಅಯ್ಯೋ ನನ್ನ ಹಣೆಬರಹವೇ! ಎಂದು ಸ್ವಲ್ಪ ದೂರ ಮುನ್ನುಗ್ಗುವ ಮುಂಚೆಯೇ ದಾರಿ ತೋರಿಸಲು ಶುರು ಮಾಡಿದರು. ಹೀಗೆ ಹೋಗಿ, ಇಲ್ಲಿ ಎಡಕ್ಕೆ ಅಲ್ಲಿ ಬಲಕ್ಕೆ, ಕಡೆಯದಾಗಿ ನಾನು ನಿಮ್ಮನ್ನು ಎಲ್ಲಿಗೆ ಬಿಡಬೇಕು ಸ್ವಾಮಿ ಎನ್ನುವಾಗ, ಗೀತಾಂಜಲಿ ಹತ್ತಿರವೆಂದರು. ದೇವರೇ! ಸ್ವಾಮಿ ನನ್ನ ಆಫೀಸಿರುವುದು, ಹದಿನಾಲ್ಕನೇಯ ಕ್ರಾಸಿನಲ್ಲಿ ನೀವು ಹೇಳುತ್ತಿರುವಲ್ಲಿಗೆ ಇಲ್ಲಿಂದ ಮೂರು ಕೀಲೋಮೀಟರ್ ನಾನು ಆಫೀಸಿಗೆ ಹೋಗಬೇಕು. ಯಾಕೆ ಹೀಗೆ ಮತ್ತೊಬ್ಬರಿಗೆ ತೊಂದರೆ ಕೊಡುತ್ತೀರಾ? ಅರ್ಥವಾಗುವುದಿಲ್ಲವೇ? ಎಂದರೇ ಮತ್ತೆ ನಿರಾಳ ಮೌನ. ಸ್ವಾಮಿ ನಾನೇ ನಿಮಗೆ ಆಟೋಗೆ ದುಡ್ಡು ಕೊಡುತ್ತೇನೆ ಇಳಿಯಿರಿ ಎಂದರೂ ಇಳಿಯುವುದಿಲ್ಲವೆಂದರು. ಅಯ್ಯೋ, ಯಾಕ್ರಿ ಇಳಿದು ಆಟೋದಲ್ಲಿ ಹೋದರೇನು ಬಂತು ನಾನೇ ನಿಮಗೆ ದುಡ್ಡೂ ಕೋಡುತ್ತೇನಲ್ಲ. ಇಲ್ಲಾ ಆಟೋಗೆಲ್ಲಾ ದುಡ್ಡೂ ಬೇಡ, ನೀವು ಅಲ್ಲಿಗೆ ಬಿಟ್ಟು ಹೋಗಿ ಎಂದರು. ಎಲ್ಲಿಗೆ ಎಂದೆ. ಮಲ್ಲೇಶ್ವರಂ ಸರ್ಕಲ್ ತನಕ ಬಿಡಿ ಸಾಕೆಂದರು. ನಾನು ನನ್ನ ಮೂರ್ಖತನವನ್ನು ಶಪಿಸುತ್ತಾ, ಗಾಡಿ ಓಡಿಸತೊಡಗಿದೆ. ಸ್ವಲ್ಪವೇ ದೂರ ಹೋದಾಕ್ಷಣ, ಮನುಷ್ಯ ಕಿರುಚತೊಡಗಿದ, ನಿಧಾನವೆನ್ನತೊಡಗಿದರು. ಇನ್ನೆಷ್ಟು ನಿಧಾನ, ಹಿಂದುಗಡೆಯಿಂದ ಗಾಡಿಗಳು ಹಾರ್ನ್ ಮಾಡತೊಡಗಿದರು. ಒಂದು ಗುಂಡಿಯನ್ನು ಇಳಿಸುವಂತಿಲ್ಲ, ನನ್ನ ಭುಜದ ಮೇಲೆ ಕೈಹಾಕಿ ಅದುಮತೊಡಗಿದರು.

ನನ್ನೊಳಗೆ ಕೋಪ ಕುದಿಯತೊಡಗಿತು, ಅದೇನೋ ಗೊತ್ತಿಲ್ಲ, ಇತ್ತೀಚೆಗೆ ಕೋಪವೇ ಬರುವುದಿಲ್ಲ. ಬಂದರೂ ಹಿಂದಿನಷ್ಟು ವೇಗವಾಗಿಯೂ ಅಥವಾ ದಿಡೀರನೇ ಬರುವುದಿಲ್ಲ. ಅದೆಷ್ಟು ನಿಧಾನವಾಗಿ ಗಾಡಿ ಓಡಿಸಿಕೊಂಡು ಬಂದೆನೆಂದರೇ, ಹೂವಿಗೂ ನೋವಾಗದಷ್ಟೂ ಮೃದುವಾಗಿ ಬಂದೆ, ಬಂದವನು, ಅಲ್ಲಿ ಕಾಣುತ್ತಿರುವುದೇ ಮಲ್ಲೇಶ್ವರಂ ಸರ್ಕಲ್ ಎಂದರೇ, ಆಗಲೂ ಮನುಷ್ಯ ಇಳಿಯುತ್ತಿಲ್ಲ. ಇಲ್ಲಾ, ಇಲ್ಲಿಯವರೆಗೂ ಬಂದಿರುವ ನೀವು, ಅಲ್ಲಿ ಗೀತಾಂಜಲಿಯ ಹತ್ತಿರಕ್ಕೆ ಬಿಡಿ ಎಂದರು. ನನಗಂತು ಮೈಕೈಯೆಲ್ಲಾ ಉರಿದು ಹೋಯಿತು. ಥೂ ದರಿದ್ರ ಬದುಕೇ, ಮಾಡುವ ಕೆಲಸ ಬಿಟ್ಟು ಹೀಗೆ ಮಾಡಿಕೊಂಡು ಓಡಾಡುತ್ತೀಯಾ? ಎನಿಸಿತು.ಅಲ್ಲಿಂದ ಸೇತುವೆಯ ಅಡಿಯಿಂದ ಮುನ್ನುಗ್ಗಿ, ಗೀತಾಂಜಲಿಯ ಹತ್ತಿರಕ್ಕೆ ಬಿಟ್ಟೆ.

ಅವರು ಅಲ್ಲಿಯೇ ಒಂದು ಆಸ್ಪತ್ರೆಯನ್ನು ತೋರಿಸಿದರು, ಅದರ ಬಾಗಿಲಿಗೆ ನಿಲ್ಲಿಸುವಂತೆ ಕೇಳಿದರೂ, ನಾನು ನಾಲ್ಕು ಹೆಜ್ಜೆ ಮುಂದಕ್ಕೆ ನಿಲ್ಲಿಸಿದೆ. ಮನುಷ್ಯ ಕೋಪಗೊಂಡಂತೆ ಕಾಣಿಸಿತು. ದೇವರೇ! ಎಲ್ಲವನ್ನೂ ನೀನೆ ಮಾಡಿಸುತ್ತಿರುವೆಂಬುದು ನನ್ನ ಬಲವಾದ ನಂಬಿಕೆ. ಆದರೇ, ಇಂಥಹ ಕೆಲಸವನ್ನೇಕೆ ಮಾಡಿಸುತ್ತೀಯಾ??? ಜನರು, ಅದೆಷ್ಟು ಬಾರಿ ನಮ್ಮ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳುತಾರೆಂಬುದಕ್ಕೆ ಇದೊಂದು ನಿದರ್ಶನ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬುದು ಸಹಾಯದ ವಿಷಯದಲ್ಲಿ, ಅಪ್ಪಟ ಸತ್ಯ, ನಾನು ಅದನ್ನೇ ನಂಬಿ ಬದುಕುವವನು. ಆದರೇ, ಈ ಬಗೆಯ ಸಹಾಯ ಮಾಡಿದಾಗ, ಅಥವ ಅವರು ನಮ್ಮನ್ನು ದುರುಪಯೋಗ ಪಡಿಸಿಕೊಂಡಾಗ ಎಲ್ಲಿಲ್ಲದ ಅಸಮಾಧಾನವುಂಟಾಗುತ್ತದೆ. ನನ್ನ ಶ್ರಮಕ್ಕೆ, ಅಥವಾ ಒಳ್ಳೆಯವರಿಗೆ ಒಳ್ಳೆಯತನಕ್ಕೆ ಸಹಾಯ ಮಾಡುವ ಯೊಗ್ಯತೆ ನನಗಿಲ್ಲವೆಂಬ ಕೊರಗುಂಟಾಗುತ್ತದೆ.

 
ಇಂಥಹದ್ದೇ, ಸನ್ನಿವೇಶಗಳು, ಬೆಂಗಳೂರು ವಿವಿಯಿಂದ ನಾಗರಭಾವಿಗೆ ಬರುವ ಹಾದಿಯಲ್ಲಿ ನಡೆಯುತ್ತವೆ, ನೀವು ಆ ರಸ್ತೆಯಲ್ಲಿ ಗಮನಿಸಿದ್ದೇ ಆದರೇ, ಜ್ನಾನಭಾರತಿಯಿಂದ ಬರುವಾಗ, ಮೊದಲು ಗಾಂಧಿಭವನ ಸಿಗುತ್ತದೆ. ಆದಾದ ನಂತರ ಮೊದಲಿಗೆ ಲಾ ಕಾಲೇಜು ಹಾಸ್ಟೇಲು ಸಿಗುತ್ತದೆ. ಹಾಸ್ಟೇಲ್ ದಾಟಿ ಬಂದರೇ, ನಂತರ ಕಾಲೇಜು ಸಿಗುತ್ತದೆ. ಕ್ಯಾಂಪಸ್ಸಿನ ಒಳಗೆ ಎಲ್ಲವೂ ಇದೆ. ಆದರೇ ಹಾಸ್ಟಲ್ಲಿಗೆ ಒಂದು ಗೇಟು, ಕಾಲೇಜಿಗೆ ಮತ್ತೊಂದು ಗೇಟಿದೆ. ಎರಡು ಗೇಟಿಗೆ, ಹೆಚ್ಚೆಂದರೇ, ಇನ್ನೂರು ಮೀಟರು ದೂರವಿರಬಹುದೆನ್ನಿ. ಅನೇಕ ಬಾರಿ, ಅಲ್ಲಿನ ವಿದ್ಯಾರ್ಥಿಗಳು, ಹೋಗಿ ಬರುವ ಗಾಡಿಗಳಲ್ಲಿ, ಡ್ರಾಪ್ ಕೇಳುತ್ತಾರೆ. ಹತ್ತಿ ಮೂರು ನಿಮಿಷದೊಳಗೆ ಅವರು ಇಳಿಯುವ ಸ್ಥಳ ಬಂದಿರುತ್ತದೆ. ಕೇವಲ ಇನ್ನೂರು ಮೀಟರು ದೂರಕ್ಕೆ, ನೀವು ನಿಮ್ಮ ಗಾಡಿಯನ್ನು ಎರಡು ಬಾರಿ ನಿಲ್ಲಿಸಿ ಅವರಿಗೆ ಸಹಾಯ ಮಾಡಬೇಕು. ಜನರನ್ನು ದುರುಪಯೋಗ ಪಡಿಸಿಕೊಳ್ಳುವುದೆಂದರೇ ಇದೇಯಲ್ಲವೇ? ನಾನು ಮೊದಲಿನ ದಿನಗಳಲ್ಲಿ ಅವರಿಗೆ ಗಾಡಿ ನಿಲ್ಲಿಸುತ್ತಿದ್ದೆ. ಪಾಪ ನಾಗರಭಾವಿ ಸರ್ಕಲ್ಲಿಗಿರಬೇಕೆಂದು. ನಂತರ ಅದನ್ನು ಮಾಡುವುದಿಲ್ಲವೆಂದು ತೀರ್ಮಾನಿಸಿದೆ. ಈಗ ಅದೆಷ್ಟೋ ಮಂದಿ, ನಾಗರಭಾವಿಗೆ ಬರುವವರಿದ್ದರೂ ಅವರು ಇದರಿಂದ ವಂಚಿತರಾಗುತ್ತಾರೆ.

14 ನವೆಂಬರ್ 2011

ಈ ಮಾತುಗಳನ್ನು ಹೇಳಲು ಅಥವಾ ಬರೆಯಲು ನಾನೆಷ್ಟು ಯೋಗ್ಯನೆಂದು ನನಗೆ ತಿಳಿದಿಲ್ಲ
, ಆದರೂ ಸ್ವಾತಂತ್ರ್ಯದ ಹೆಸರನ್ನು ಬಳಸಿಕೊಂಡು, ನನಗೂ ಬರೆಯುವ ಹಕ್ಕಿದೆಯೆಂದು ಬರೆಯುತಿದ್ದೇನೆ. ನಾವು, ಭಾರತೀಯರಾಗಿ ಬಹಳಷ್ಟು ಮೆರೆಯುತ್ತೇವೆ, ಹೆಮ್ಮೆ ಪಡುತ್ತೇವೆ, ನಮ್ಮಲ್ಲಿ ಹಿಂದೆ ಅದಿತ್ತಂತೆ, ಇದಿತ್ತಂದೆ ಎಂದು. ನನ್ನೂರಿನಲ್ಲಿಯೂ ಬಹಳಷ್ಟು ಬಾರಿ ನಾನು ಕೇಳಿದ್ದೇನೆ, ಇದೆಲ್ಲವೂ ನಮ್ಮ ತಾತನ ಆಸ್ತಿಯಂತೆ, ಅವರು ಕಳೆದರಂತೆ! ನಮ್ಮೂರಿನಲ್ಲಿ ಅಗಾಧ ಸಂಪತಿತ್ತಂತೆ, ಕಳೆದರಂತೆ, ದೋಚಿದರಂತೆ. ಈ ಅಂತೆ ಕಂತೆಗಳ ಮಾತನ್ನು ನಾವು ಸ್ವಲ್ಪ ಬದಿಗಿಟ್ಟು ನೋಡಬೇಕಾಗುತ್ತದೆ. ನಮ್ಮಲ್ಲಿರುವುದಕ್ಕೊಂದು ಲೆಕ್ಕ ಪತ್ರ ಬೇಡವೇ? ಹಿಂದೆ ಇರಲಿಲ್ಲ ಬೇಡ ಆದರೇ ಇವತ್ತಿಗೂ ಅದನ್ನು ಇಟ್ಟಿಕೊಳ್ಳಬಾರದೇ? ಅದಕ್ಕೂ ಮೀರಿ ನಮ್ಮಲ್ಲಿ ನಡೆಯುವ ಯಾವೊಂದು ಆಚರಣೆಗಳನ್ನು ಎಲ್ಲಿಯೂ ದಾಖಲಿಸದೇ ಹೋದದ್ದು ಒಂದು ದುರಂತ. ನಮ್ಮಲ್ಲಿ ಪುರಾಣಗಳ ಬಗ್ಗೆ, ಇತಿಹಾಸದ ಬಗ್ಗೆ, ಕಥೆಗಳನ್ನು ಹೇಳುವವರು ಹೆಚ್ಚು, ಆದರೇ ಬರೆದವರು ಬಹಳ ಕಡಿಮೆ. ನಾವೆಷ್ಟೇ ಮಾತನಾಡಿದರೂ ಕೇಳಿಸಿಕೊಂಡವರು ಅದನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಪೀಳಿಗೆಗೆ ರವಾನಿಸುವುದು ಅಷ್ಟಕಷ್ಟೇ! ಮುಂದಿನ ಪೀಳಿಗೆಯ ವಿಚಾರ ಬದಿಗಿಡಿ, ಕೆಲವರು ಅವರ ಮೇಲಧಿಕಾರಿ, ಅವರ ಬಾಸ್ ಹೇಳಿದ ಮಾತನ್ನೇ ಜೊತೆಯವರಿಗೆ ತಿಳಿಸುವುದಿಲ್ಲ. ಜೊತೆಯಲ್ಲಿರುವವರು ಬುದ್ದಿವಂತರಾಗುವುದು ಅದೆಷ್ಟೊ ಮಂದಿಗೆ ಇಷ್ಟವೇ ಆಗುವುದಿಲ್ಲ. ನನ್ನ ಪಿ ಎಚ್ ಡಿಯ ಸಮಯದಲ್ಲಿ ಕೆಲವು ಮಂದಿ ಆ ರೀತಿ ವರ್ತಿಸಿದ್ದಾರೆ. ನಾನು ನನ್ನ ಥೀಸಿಸ್ ಮೈಸೂರು ವಿವಿಗೆ ಕೊಡುವ ಮುನ್ನವೇ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಜ್ನಾನ ಎಂದಿಗೂ ಒಬ್ಬರಿಂದ ಒಬ್ಬರಿಗೆ ಪಸರಬೇಕು. ಇನ್ನೊಬ್ಬರನ್ನು ಗೇಲಿ ಮಾಡುವುದೇ ಬದುಕಾಗಬಾರದು. ಇರುವ ಒಳ್ಳೆಯದನ್ನು ಕಲಿಯೋಣ, ಕಲಿತಿರುವುದನ್ನು ಇತರರೊಂದಿಗೆ ಹಂಚಿ ಬದುಕೋಣ.
ನಾನು ಎಲ್ಲಿಯೋ ಶುರು ಮಾಡಿ ಮತ್ತೆಲ್ಲಿಗೋ ಕರೆದೊಯ್ದದಕ್ಕೆ ಕ್ಷಮೆಯಿರಲಿ. ಈಗ ಹೇಳ ಹೊರಟದ್ದು, ನಾವು ದಿನ ನಿತ್ಯನ ಕಾಣುವ ಅನುಭವಿಸುವ ವಿಷಯಗಳನ್ನು, ವಿಚಾರಗಳನ್ನು ಬರೆದಿಡುವುದರ ಬಗೆಗೆ. ನನ್ನೂರು ನನ್ನ ಬಾಲ್ಯದಲ್ಲಿ ಹೇಗಿತ್ತೆಂಬುದನ್ನು ನನ್ನ ಒಂದು ಬರಹದಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಆದರೇ ನಾನು ಮಾತನಾಡುವಾಗ ಅದೆಷ್ಟೋ ವಿಚಾರಗಳನ್ನು ಮರೆತು ಹೇಳುವುದುಂಟು. ನನ್ನೂರಿನ ಬಗ್ಗೆ ನನ್ನ ಸ್ನೇಹಿತರಿಗೆ ಹೇಳಿರುವುದಕಿಂತ ಅವರು ಓದಿ ತಿಳಿದುಕೊಂಡಿರುವವರು ನನ್ನೂರಿಗೆ ಬಂದೊಡನೆಯೇ ಕೇಳುತ್ತಾರೆ, ಮತ್ತು ಅದನ್ನು ಅಲ್ಲಿನ ಸ್ಥಳ ಪುರಾಣಕ್ಕೆ ನಂಟುಮಾಡಿಕೊಳ್ಳುತ್ತಾರೆ. ಇತಿಹಾಸವನ್ನು ಹೆಕ್ಕಿ ನೋಡಿದರೇ ಭಾರತದ ಬಗೆಗೆ ಭಾರತೀಯರು ಬರೆದಿರುವುದು ಬಹಳ ಕಡಿಮೆ. ಹೊರಗಿನಿಂದ ಬಂದವರು ಬರೆದಿರುವುದೇ ಹೆಚ್ಚು. ಹೊರಗಿನವನು, ಅವನ ದೃಷ್ಟಿಕೋನದಿಂದ ನೋಡಿರುತ್ತಾನೆ. ಆದ್ದರಿಂದಲೇ ಬಹುತೇಕ ವಿದೇಶಿ ಚರಿತ್ರಕಾರರಿಗೆ ಭಾರತ ಅಂಧಕಾರದಲ್ಲಿ ಮುಳುಗಿದ್ದ ದೇಶವೆನಿಸುತ್ತದೆ. ನನ್ನೂರು ಹೊರಗಿನಿಂದ ಬಂದವನಿಗೆ ಹಳ್ಳಿ, ಹಿಂದುವರೆದ ಗ್ರಾಮವೆನಿಸುತ್ತದೆ. ಏಕೆಂದರೇ ನೀವು ಬಾನುಗೊಂದಿಯನ್ನು, ಬೆಂಗಳೂರಿಗೆ ಹೋಲಿಕೆ ಮಾಡಿ ನೋಡಿರುತ್ತೀರಾ! ಅದಕ್ಕಾಗಿಯೇ ಒಬ್ಬರು ಇನ್ನೊಬ್ಬರನ್ನು ಹೋಲಿಸಿ ನೋಡುವಾಗ ಬೇಸರವಾಗುವುದು. ತಂದೆ ತಾಯಂದಿರು ತಮ್ಮ ಮಕ್ಕಳನ್ನು ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಸಿದಾಗ ಬೇಸರ ಉಂಟಾಗುತ್ತದೆ. ತಾನು ತನ್ನ ಜೀವನವನ್ನು ತನ್ನ ಅನುಭವದಿಂದಲೇ ಅನುಭವಿಸಬೇಕು, ಇದು ಭಾರತ. ಆದರೇ ಅವನ ಅನುಭವಗಳನ್ನು ಪುಸ್ತಕದಲ್ಲಿಟ್ಟರೇ ಮುಂದೆಂದೊ ಯಾರಿಗಾದರೂ ಅನುಕೂಲವಾಗಬಹುದು.
ಪುಸ್ತಕಗಳು ಎಲ್ಲ ಸಮಯದಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ. ಅವರು ಅವರ ಯೋಗ್ಯತೆಗೆ ತಕ್ಕಂತೆ, ಅನುಭವಕ್ಕೆ ತಕ್ಕಂತೆ ಬರೆದಿಡುತ್ತಾರೆ. ಆದರೇ ಸಮಯದಲ್ಲಿದ್ದ, ಕ್ಷಣಗಳು ಮಾತ್ರ ನಮ್ಮ ಆ ದಿನಗಳಿಗೆ ಕರೆದೊಯ್ಯಬಹುದು. ಆದ್ದರಿಂದ, ನಾವು ಮಾತನಾಡುವ ವಿಷಯಗಳು ಬರವಣಿಗೆಯಾಗಿ ಮಾರ್ಪಾಡಾಗಳೆಂದು ಬಯಸುತ್ತೇನೆ. ಬ್ಲಾಗ್ ಯುಗದಲ್ಲಿ ಬರವಣಿಗೆಗಳಿಗೆ ಬರವಿಲ್ಲವಾದರೂ, ವಿಷಯಗಳಿಗೆ ನೀಡುವ ಮನ್ನಣೆ ಮುಖ್ಯವಾಗುತ್ತದೆ.
ದೇವಲೋಕದ ಪಾರಿಜಾತ ಭೂಮಿಗೆ ಜಾರಿದೆ
ಅದು ನೀನೆಂದು ನಾ ಹೇಳಿದೆ,
ಹೇಳಲು ಭಯ ನನಗೆ ದೇವರು ಕಿತ್ತುಕೊಂಡಾನೆಂಬ ದುಗುಡ
ನೀನೆಂದರೇ ನೀನು ನಂಬಳು ನನ್ನ ಮಾತನು,
ಆ ದೇವನಿಗೆ ತಿಳಿದಿದೆ ನನ್ನ ಮಾತಿನ ಅರ್ಥ
ಹುಡುಗಾಟ ಸಾಕು ಕೆಲಸ ಮಾಡೆಂಬುದು ನಿನ್ನಯ ತರ್ಕ
ನಿನ್ನ ಬಗ್ಗೆ ಬರೆವುದೇ ನನ್ನ ಕಾರ್ಯವೆಂದರೇ ನಗುವೇ ನೀನು
ಬರೆವುದು ಸುಲಭ ಬರೆಸಿಕೊಳ್ಳುವ ಮನಸ್ಸು ಬೇಕು
ಬರೆವ ಮನಸ್ಸಿದೆ ಬರೆಸಿಕೊಳ್ಳುವ ಹಾಳೆಯಾಗಬಾರದೇ ನೀನು
ಹಾಳೆಯಲ್ಲ, ಪದಗಳಾಗು, ಪದಗಳೆಲ್ಲಾ ಉದುರಳಲಿ ಮುತ್ತಿನಂತೆ
ಮುತ್ತಿನ ಮಳೆ ಸುರಿಯಲಿ ಮುತ್ತಿನ ಹಾರವಾಗಲಿ ಈ ನನ್ನ ಬರವಣಿಗೆ
ನೀ ಕವಿಯಾ?ಎಂದರೇ ಉತ್ತರವಿಲ್ಲ, ನಾನೆಂದು ಕವಿಯಾಗಲು ಬರೆದವನಲ್ಲ
ನನ್ನ ಬರವಣಿಗೆ ಏನಿದ್ದರೂ ನಿನಗೋಸ್ಕರ ಕೇವಲ ನಿನಗೋಸ್ಕರ
ನನ್ನ ಪದಗಳಲ್ಲಿರುವುದು ನೀ ಮಾತ್ರ ನನ್ನ ಪ್ರತಿಯೊಂದು ಅಕ್ಷರವಿರುವುದು ನಿನಗೊಸ್ಕರ
ಬರೆವುದು ನಾನಲ್ಲ ಬರೆಸುತ್ತಿರುವುದು ನೀನು, ಬರೆಸಿಕೊಳ್ಳುತ್ತಿರುವುದು ಆ ನಿನ್ನ ಚೆಲುವು
ಮರುಭೂಮಿಯಲ್ಲಿ ನದಿ ಹರಿದಂತೆ ನಿನ್ನಯ ಚೆಲುವು
ಬರಡಾಗಿರುವ ಈ ಬದುಕಿಗೆ ನೀನೇ ಹರಿವ ತೊರೆ

19 ಸೆಪ್ಟೆಂಬರ್ 2011

ಭವ್ಯ ದೇಶ ಭ್ಯವ ಜನ ಅಲ್ಪ ನೀಚರು!!!

ಭಾರತದಂತಹ ಒಂದು ಸುಂದರವಾದ ದೇಶ, ಸಮಾಜ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಎನಿಸುತ್ತದೆ ನನಗೆ. ಇಲ್ಲಿ ಎಲ್ಲಾ ಇದ್ದರೂ, ಏನೂ ಇಲ್ಲದಿದ್ದರೂ ಒಂದೇ ರೀತಿಯಲ್ಲಿರುತ್ತಾರೆ. ಹಾಗೇಯೇ ನೀವು ಗಮನಿಸಿ, ನಮ್ಮ ಸುತ್ತಲಿನ ಶೇ.೯೫ ರಷ್ಟು ಜನರು ನಮ್ಮ ನಿಮ್ಮಂತೆಯೇ ಇದ್ದಾರೆ. ಸಣ್ಣ ಸಣ್ಣ ವಿಷಯಗಳಿ ಚಿಂತಿಸುತ್ತಾರೆ, ದೊಡ್ಡ ವಿಷಯಗಳು ನಮ್ಮದಲ್ಲವೆನ್ನುತ್ತಾರೆ, ಸಮಾಜ, ಶ್ರೀಮಂತರು, ರಾಜಕಾರಿಣಿಗಳು, ಅಧಿಕಾರಿಗಳು ಇವರೆಲ್ಲರೂ ನಮ್ಮಂತೆಯೇ ಮನುಷ್ಯರೆಂದು ನಾವೆಂದೂ ಭಾವಿಸುವುದಿಲ್ಲ. ಒಳ್ಳೆಯವನಿದ್ದರೇ ದೇವರಂಥವನು ಎನ್ನುತ್ತೇವೆ, ಕೆಟ್ಟವರಿದ್ದರೇ ದೆವ್ವ, ರಾಕ್ಷಸ ಎನ್ನುತ್ತೇವೆ. ಇದೆಲ್ಲವೂ ಏಕೆ? ನಮ್ಮ ಮನದಾಳದಲ್ಲಿ ಶತಮಾನದ ಹಿಂದೆಯಿಂದಲೇ ಒಂದು ಛಾಪು ಮೂಡಿದೆ, ನಮ್ಮ ಕರ್ಮಶಾಸ್ತ್ರ ನಮ್ಮನ್ನು ಆವರಿಸಿದೆ. ಇದೆಷ್ಟರ ಮಟ್ಟಿಗೆ ಸರಿ ತಪ್ಪು ಎನ್ನುವ ರೇಜಿಗೆ ನಮಗೀಗ ಬೇಡ. ಚಿಕ್ಕ ಪುಟ್ಟ ಉದಾಹರಣೆಗಳನ್ನು ತೆಗೆದುಕೊಳ್ಳಿ, ಒಂದು ಸ್ಕೂಲಿಗೆ ಸೇರಿಸಲು ಅರ್ಜಿ ತರಲು ಹೋಗುವ ತಂದೆಯನ್ನು ತಾಯಿಯನ್ನು ನೋಡಿ, ಅಲ್ಲಿರುವ ವಾ಼ಚ್ ಮ್ಯಾನ್ ಕಂಡರೂ ಭಯ, ಭಕ್ತಿ, ಅಯ್ಯೋ ನನ್ನ ಮಗುವಿಗೆ ಸೀಟು ಸಿಗುತ್ತದೋ ಇಲ್ಲವೋ ಎಂದು ಅವನಿಗೂ ನಮಸ್ಕಾರ ಹೊಡೆದು ಹೋಗುತ್ತಾರೆ. ಮೆಜೆಸ್ಟಿಕ್ ನಲ್ಲಿ ಬೈಕ್ ಪಾರ್ಕ್ ಮಾಡಿ ಬರುವಾಗ ನೋಡಿ, ಮನೆಯಲ್ಲಿ ಸ್ವಂತ ಮಗನಿಗಿಂತ ಹೆಚ್ಚು ಮುದ್ದು ಮಾಡುವ ಬೈಕ್ ಅನ್ನು ದರ ದರ್ ಎಳೆದರೂ ಮಾತನಾಡುವುದಿಲ್ಲ, ಒಂದು ಬಗೆಯ ಅಂಜಿಕೆ, ಭಯ. ಎಂಥೆಂತವರಿಗೆಲ್ಲಾ ಹೆದರಿ ಬದುಕುತ್ತಾರೆ. ಕೆ.ಎಸ್.ಆರ್.ಟಿಸಿ ಬಸ್ಸಿನಲ್ಲಿ ಬರುವವರನ್ನು ನೋಡಿ, ಡ್ರೈವರ್ ಸಾಹೇಬರೇ ಸ್ವಲ್ಪ ಇಲ್ಲೇ ನಿಲ್ಲಿಸಿ ಅಂತಾ ಗೋಗರೆಯುತ್ತಾರೆ, ಡ್ರೈವರ್ ನಿಲ್ಲಿಸುವುದೇ ಇಲ್ಲಾ. ಒಬ್ಬ ವಾಚ್ ಮ್ಯಾನ್, ಒಬ್ಬ ಡ್ರೈವರ್, ಒಬ್ಬ ಕಂಡಕ್ಟರ್, ಒಬ್ಬ ಹೋಟೆಲ್ ಮಾಲಿ, ಒಬ್ಬ ಬೈಕ್ ಪಾರ್ಕಿಂಗ್ ನವನು, ಅಲಂಕಾರ್ ಪ್ಲಾಜ಼ಾದಲ್ಲಿ ಕೆಲಸ ಮಾಡುವ ಹುಡುಗ, ಹೂವು ಮಾರುವವನು ಕಡಿಮೆ ದುಡ್ಡಿಗೆ ಕೇಳಿದರೇ ಉಗಿಯುತ್ತಾನೆ. ಇವರೆಲ್ಲರೂ ಅಷ್ಟೇ, ಸಾಮಾನ್ಯ ಮನುಷ್ಯನನ್ನು ಕಂಡರೆ ಸಿಡಿದು ಬೀಳುತ್ತಾರೆ. ಎರಡು ರೂಪಾಯಿ ಟಿಪ್ಸ್ ಸಿಗದೇ ಇದ್ದರೇ ಬಾಯಿಗೆ ಬಂದಂತೆ ಬೈಯುತ್ತಾರೆ.
ಪ್ರಶ್ನಿಸುತ್ತಾ ಹೋದರೇ, ಏಕೆ ಒಂದು ವರ್ಗದವರು ಹೆದರಿ, ಅಂಜಿಕೊಂಡು ಬದುಕುತ್ತಾರೆ, ಮತ್ತೊಂದು ಗುಂಪು ದೌರ್ಜನ್ಯ ನಡೆಸುತ್ತದೆ? ಹಾಗೆ ಯೋಚಿಸಿ ನೋಡಿದರೇ, ದೌರ್ಜನ್ಯ ಮಾಡುವ, ದಬ್ಬಾಳಿಕೆ ನಡೆಸುವವರು ಮಧ್ಯಮ ವರ್ಗದವರೇ ಆಗಿರುತ್ತಾರೆ, ಅವರು ಇಂಥಹ ಸಮಸ್ಯೆಗಳೊಳಗೆ ಮುಳುಗಿರುತ್ತಾರೆ. ಆದರೇ ಅವರಿಗೆಲ್ಲಾ ಕೆಟ್ಟ ವ್ಯಕ್ತಿಗಳು ಪರಿಣಾಮ ಬೀರಿರುತ್ತಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲು ಇಪ್ಪತ್ತು ವರ್ಷದ ಹಿಂದೆ ಏನು ಇಲ್ಲದೇ ಇಂದು ರಾಜ್ಯವನ್ನೇ ಆಳಲು ಹೊರಟಿದ್ದು ಮಾದರಿಯಾಗಿರುತ್ತದೆ. ಗತ್ತಿನಿಂದ ಯಾರೋ ಒಬ್ಬ ರಾಜಕಾರಣಿ ಮಾತನಾಡುವುದು ಸಾವಿರಾರು ಯುವಕರಿಗೆ ಮಾದರಿಯಾಗಿರುತ್ತದೆ. ಹಿರಿಯವರಿಗೆ ಮರ್ಯಾದೆ ಕೊಡದೆ ಇದ್ದರೇ ನಾವು ಮೇಲೆ ಬೆಳೆಯಬಹುದೆಂಬುದು ಒಂದು ಬಗೆಯ ತಪ್ಪು ಮಾಹಿತಿಯನ್ನು ಯುವಕರಲ್ಲಿ ತುಂಬಿರುತ್ತದೆ. ದುನಿಯಾ ವಿಜಿ, ಲೂಸ್ ಮಾದಾ ನಂತವರು ನಾಯಕರಾದ ಮೇಲೆ ನಾನು ಆಗಬಹುದೆಂಬು ಹುಂಬತನ ಹುಡುಗರನ್ನು ದಾರಿ ತಪ್ಪಿಸಿರುತ್ತದೆ. ಇದು ವಿವಿ ಗಳ ಮಟ್ಟದಲ್ಲಿಯೂ ಅಷ್ಟೇ, ಬೆಂಗಳೂರು ವಿವಿಯಲ್ಲಿ, ನಂದಿನಿ ಹೆಚ್ಚು ಹೆಚ್ಚು ಮೋಸ ವಂಚನೆ ಮಾಡಲು ಕಾರಣ ಸೋಮ ಶೇಖರ್. ಸೋಮಶೇಖರ್ ಮನೆ ಕಟ್ಟುವಾಗ ಮನೆಗೆ ಮರ ಮುಟ್ಟುಗಳನ್ನು ತಂದು ಕೊಟ್ಟಿದ್ದು ಅವರ ವಿದ್ಯಾರ್ಥಿಗಳು ಆದ್ದರಿಂದ ಇಂದು ನಂದಿನಿ ಅದನ್ನೇ ಮುಂದುವರೆಸುತ್ತಾರೆ. ಒಬ್ಬ ಎರಡು ಲಕ್ಷ ಪಡೆದು ಪಿಎಚ್ ಡಿ ಕೊಟ್ಟರೇ ಎಲ್ಲಾ ಗೈಡುಗಳು ಅದನ್ನೇ ಮಾದರಿಯನ್ನಾಗಿಸುತ್ತಾರೆ. ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಸುವುದು, ಮನೆಗೆ ಸಾಮಾನು ತರಿಸುವುದು, ಮಗಳಿಗೆ ಬೈಕ್ ತೆಗೆಸಿಕೊಳ್ಳುವುದು, ಶಾಲೆ ಕಾಲೇಜಿಗೆ ಸೇರಿಸಲು ಅರ್ಜಿ ತರಿಸುವುದು, ಬ್ಯಾಂಕ್, ಪಾಸ್ ಪೋರ್ಟ್ ಒಂದಲ್ಲ ಎರಡಲ್ಲ, ಕೊನೆಗೆ ಅವರು ಗಡ್ಡ ಬೋಳಿಸಲು ಬ್ಲೇಡ್ ಕೂಡ ವಿದ್ಯಾರ್ಥಿಗಳ ದುಡ್ಡಿನಿಂದಲೇ. ಇವೆಲ್ಲವೂ ಏಕೆ ಹೀಗೆ? ನೈತಿಕತೆ, ನ್ಯಾಯ, ಅನ್ಯಾಯ ಇದಾವುದು ಇವರಾರಿಗೂ ಸಂಭಂಧಿಸಿಯೇ ಇಲ್ಲವೆಂಬಂತೆ ವರ್ತಿಸುವುದಾದರೂ ಏಕೆ?
ಇದು ಕೇವಲ ವಿವಿಗಳಲ್ಲಿ ಮಾತ್ರವಲ್ಲ, ಎಲ್ಲಾ ಇಲಾಖೆಯಲ್ಲಿಯೂ ಅಷ್ಟೇ, ಮಾನ ಬಿಟ್ಟು ಲಂಚ ಕೇಳುತ್ತಾರೆ. ಮೈಸೂರಿನಲ್ಲಿ ನನ್ನ ಸ್ನೇಹಿತ ದ್ವಾರಕೀಶ್ ಜೊತೆಯಲ್ಲಿ ಕೆಲಸ ಮಾಡುವ ಒಬ್ಬ ಅಯೋಗ್ಯ ಸ್ವಂತ ಹಣದಲ್ಲಿಯೂ ಊಟ ಮಾಡುವುದಿಲ್ಲ. ಒಮ್ಮೆ ಬಂದ ರೈತನನ್ನು ಜೇಬಿನಲ್ಲಿದ್ದ ಎಲ್ಲ ಹಣವನ್ನು ಕಿತ್ತು ಖಾಲಿ ಕೈಯಲ್ಲಿ ಕಳುಹಿಸಿದ್ದಾನೆ. ಇಂತಹ ಅನಾಗರೀಕರ ವಿರುದ್ದ ಯಾರು ಏನು ಮಾಡಲಾಗುವುದಿಲ್ಲ. ಜನರು ಇದು ನಮ್ಮ ಹಣೆಬರಹವೆಂದು ಸುಮ್ಮನಾಗುತ್ತಾರೆ. ಮಾಧ್ಯಮದವರು, ಗಂಡ ಹೆಂಡತಿಯ ಜಗಳವನ್ನು, ಬೈಯ್ದಾಟವನ್ನು ತೋರಿಸಲು ತಳೆಯುವ ಆಸಕ್ತಿಯನ್ನು ಇಂಥಹ ನೀಚರ ಮೇಲೆ ತೋರಿಸುವುದಿಲ್ಲ.

ಐಡಿಯಾಲಜಿಗೆ ಕೆಲಸ ಮಾಡು ಕೂಲಿ ಕೆಲಸ ಬೇಡ!!!

ನಾನೆಂದು ಮನಸ್ಸಿನೊಳಗೆ ಬಚ್ಚಿಟ್ಟು ಕೊರಗುವವನಲ್ಲ, ಹೇಳಬೇಕಿರುವುದನ್ನು ಹೇಳಿಯೇ ತೀರುತ್ತೇನೆ, ಇಲ್ಲವೆಂದರೇ ಬರೆದು ತೀರಿಸಿಕೊಳ್ಳುತ್ತೇನೆ. ನನಗೆ ಕಾಡುವ ಪ್ರಶ್ನೆಗಳು ಎಲ್ಲರಿಗೂ ಕಾಡುತ್ತಿದ್ದೆಯಾ? ಇಂಥಹದೊಂದು ಪ್ರಶ್ನೆ ನನ್ನನ್ನು ಬಹಳ ವರ್ಷಗಳಿಂದ ಕೊಲ್ಲುತ್ತಿದೆ. ಮಲಗಿದ್ದವನಿಗೆ ದಿಡೀರನೆ ಎಚ್ಚರವಾಗುತ್ತದೆ, ಒಂದು ರೀತಿಯ ಭಯ, ರಾತ್ರಿ ನೋಡಿದ ವಾರ್ತೆಗಳ ನೆನಪು ನಿನ್ನೆ ಇಡೀ ದಿನ ಕಳೆದ ಕ್ಷಣಗಳು, ಸಂಜೆ ಬರುವಾಗ ಬಸ್ಸಿನಲ್ಲಿ ಕಂಡಕ್ಟರ್ ಚಿಲ್ಲರೆಯನ್ನು ನಂತರ ತೆಗೆದುಕೊಳ್ಳಿ ಎಂದು ಬರೆದುಕೊಟ್ಟಿದ್ದ, ಚಿಲ್ಲರೆಯನ್ನು ಮರೆತು ಬಂದೆ ಒಂದಲ್ಲ ಎರಡಲ್ಲ ಮುನ್ನೂರೈವತ್ತು ರೂಪಾಯಿಗಳು, ಅಯ್ಯೋ ದೇವರೇ ಎರಡು ದಿವಸ ದುಡಿಯಬೇಕಲ್ಲ, ಹದಿನೈದು ದಿನದ ಬಸ್ ಪಾಸಿಗೆ ಆಗುತ್ತಿತ್ತು. ಯಾಕೆ ಜನರು ನಮಗೆ ಹೀಗೆ ಮೋಸ ಮಾಡುತ್ತಾರೆ? ಬಸ್ಸಿನಿಂದ ಇಳಿದ ಮೇಲೆ ಊರಿನಿಂದ ಅಲ್ಪ ಸ್ವಲ್ಪ ದುಡ್ಡು ಉಳಿಸಲು ತಂದಿದ್ದ, ಅಕ್ಕಿ, ತೆಂಗಿನಕಾಯಿ, ಸ್ವಲ್ಪ ಅಡುಗೆ ಸಾಮಾನುಗಳನ್ನು ಹೊತ್ತುಕೊಂಡು ಸಿಟಿ ಬಸ್ ಕಾಯುತ್ತಿದ್ದರೇ ಬಸ್ಸೇ ಬರುತ್ತಿಲ್ಲ. ಆಟೋದವನನ್ನು ಕೇಳಿದ ಇರುವ ಎರಡು ಕೀಮೀರಿಗೆ ನೂರೈವತ್ತು ಕೇಳಿದ, ದೇವರೇ ಇಪ್ಪತು ರೂಪಾಯಿ ಇರುವ ಬೆಲೆಗೆ ನೂರೈವತ್ತು ರೂಪಾಯಿ? ನ್ಯಾಯವೆಂಬ ಮಾತಿಗೂ ನಿಲುಕದ್ದು. ಊರಿನಿಂದ ಇಪ್ಪತ್ತೈದು ಕೆಜಿ ಅಕ್ಕಿ ತಂದರೇ ಐದು ನೂರು ಉಳಿಸಬಹುದೆಂದು ನೋಡಿದರೇ, ಬಸ್ಸಿನಲ್ಲಿ ಮುನ್ನೂರೈವತ್ತು ಈಗ ಇಲ್ಲಿ ನೂರೈವತ್ತು, ಉಳಿಸಿದ್ದೇನು ಬಂತು. ಮನೆಯ ಹತ್ತಿರ ಬಂದೊಡನೆ, ಸಾರ್ ವಾಪಸ್ ಖಾಲಿ ಹೋಗಬೇಕು ಒಂದಿಪ್ಪತು ಸೇರಿಸಿ ಕೊಡಿ ಸಾರ್ ಎಂದ, ದೇವರೇ! ಇದೇನಪ್ಪಾ ಇದು ನನ್ನ ಕಥೆ ಎನಿಸಿತು. ನಾನು ಎರಡು ಚೀಲವನ್ನು ಹೊತ್ತು ಆಟೋಗೆ ಹಾಕುವಾಗ ನೆಪ ಮಾತ್ರಕ್ಕೂ ಸಹಾಯ ಮಾಡಲಿಲ್ಲ, ಅದರ ಬದಲಿಗೆ ಸಾಹುಕಾರನಂತೆ, ಕುಳಿತು, ನೋಡಿ ಹಾಕ್ರಿ ಸೀಟು ಜೋಪಾನ, ಎಂದ. ಮನೆಯ ಬಳಿಯಲ್ಲಿ ಇಳಿಸುವಾಗಲೂ ಅಷ್ಟೇ ಮನೆಯ ಒಳಕ್ಕೆ ಹಾಕಿ ಬರುತ್ತೇನೆಂದರೇ ಅಯ್ಯೋ ಲೇಟ್ ಆಗುತ್ತೇ ಸ್ವಾಮಿ ಮೊದಲು ಬಾಡಿಗೆ ಕೊಡಿ, ಬಿಟ್ಟರೇ ಅಕ್ಕಿ ಹಾಕಿ ಅಡುಗೆ ಮಾಡೋ ತನಕ ಇರು ಅಂತೀರ ಎಂದ. ನನಗಂತೂ ಕಣ್ಣು ಮಂಜಾದಂತಾಯಿತು.

ನಾನು ಎಲ್ಲಿ ಬದುಕುತ್ತಿದ್ದೇನೆ, ಜನರು ಯಾಕೆ ಹೀಗೆ ವರ್ತಿಸುತ್ತಾರೆ, ನನ್ನೂರಲ್ಲಿ ಚಿಕ್ಕವನಾಗಿದ್ದಾಗ ಮನೆಗೆ ಯಾರದ್ದೋ ಎತ್ತಿನ ಗಾಡಿಯನ್ನು ಹಿಡಿದು ಬಂದರೂ ಅವನು ಮನೆಯ ತನಕ ಬಂದು ಮನೆಯ ಒಳಕ್ಕೆ ಸಾಮಗ್ರಿಗಳನ್ನು ಹಾಕಿ ಜೋಡಿಸುವ ತನಕ ನಿಂತು ಹೋಗುತ್ತಿದ್ದ. ಇಂದೇಕೆ ಹೀಗಾಯಿತು? ಮುಂದುವರೆಯುವುದು, ಅಬಿವೃದಿ ಎಂದರೇ ಹೀಗೇನಾ? ಎಂದು ಯೋಚಿಸುವಾಗ ಬಿದ್ದ ಕನಸೇ ಇಷ್ಟೊಂದು ನೋವುಂಟು ಮಾಡುವುದಾದರೇ ದಿನನಿತ್ಯ ಇಂಥಹ ನೋವುಗಳನ್ನು ಅನುಭವಿಸುತ್ತಿರುವವರು? ನೆನೆದಾಗ ಕಣ್ಣುಗಳು ತೇವವಾಗಿದ್ದವು.

ನಾವು ಯೋಚಿಸುವುದೆಲ್ಲ ಕನಸಿನ್ನಲ್ಲಿ ಬರುತ್ತವೆ, ನಮ್ಮನ್ನು ಕಾಡುತ್ತವೆ. ದಿನದ ಮುಕ್ಕಾಲು ಭಾಗ ನನ್ನಂಥ ಲಕ್ಷಾಂತರ ಜನ ಸಾಮಾನ್ಯರು ಒಪ್ಪತ್ತಿನ ಊಟದ ಬಗ್ಗೆ, ಅನ್ಯಾಯದ ಬಗ್ಗೆ ಮನಸ್ಸಿನೊಳಗೆ ಕೊರಗುತ್ತೇವೆ. ಅನ್ಯಾಯ ಮಾಡುವವನಿಗೆ ಅದೇನು ಎನಿಸುವುದೇ ಇಲ್ಲ. ನನ್ನ ಪರ್ಸ್ ಕಳೆದು ಹೋಗಿ, ಅಲ್ಲಿರುವ ಎಟಿಎಂ ಕಾರ್ಡುಗಳು, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಹೀಗೆ ಎಲ್ಲವನ್ನು ಕಳೆದುಕೊಂಡು ಪೋಲಿಸರ ಬಳಿಗೆ ಹೋಗಿ ದಯವಿಟ್ಟು ಕಂಪ್ಲೈಂಟ್ ತೆಗೆದುಕೊಳ್ಳಿ, ಡೂಪ್ಲಿಕೇಟ್ ತೆಗೆದುಕೊಳ್ಳಬೇಕು, ನೀವೇನು ಹುಡುಕಿಕೊಡುವುದು ಬೇಡವೆಂದರೂ ಲಂಚಕೊಡಬೇಕು, ವಕೀಲರಿಂದ ಅಫಿಡವಿಟ್ ತರಬೇಕು. ಆರ್ ಟಿ.ಓ.ದಲ್ಲಿ ಕೂಡ ಅಫಿಡವಿಟ್ ಕೊಡಬೇಕು. ನೂರು ರೂಪಾಯಿ ಕೊಟ್ಟರೇ ಬೈಕ್ ಇಲ್ಲದೇ ಇರುವವನಿಗೂ ಅಫ್ಹಿಡವಿಟ್ ರೆಡಿ. ಇದೆಂಥಹ ಬದುಕು ಎನಿಸುತ್ತದೆ. ಜನರು ಇಷ್ಟೊಂದು ಬಟ್ಟ ಬಯಲಾಗಿ ಮಾನ ಮರ್ಯಾದೆಬಿಟ್ಟು ಕಾಸಿಗೆ ಹೇಸಿಗೆ ತಿನ್ನಲು ನಿಂತ್ತಿದಾರಲ್ಲ ಎನಿಸುತ್ತದೆ.

ಇವಲ್ಲವೂ ಒಂದೆಡೆಗಿದ್ದರೆ, ಇನ್ನು ರಾಜಕಾರಿಣಿಗಳು ನಮ್ಮನ್ನು ಅನಾಗರೀಕರೆಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಅದಕ್ಕೊಂದು ಸೂಕ್ತ ಉದಾಹರಣೆಯನ್ನು ನೀಡುತ್ತೇನೆ. ನಾನು ವೈಯಕ್ತಿಕವಾಗಿ ಯಾವ ರಾಜಕಾರಿಣಿಯ ಮನೆಗೂ ಹೋಗುವುದಿಲ್ಲ, ಮತ್ತು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ರಾಜಕಾರಣವೆಂಬುದೇ ಹೇಸಿಗೆಯ ವಿಷಯ ನನಗೆ. ಮೊನ್ನೆ ಮೊನ್ನೆ ನಮ್ಮ ಕ್ಷೇತ್ರದ ಶಾಸಕರ ಮನೆಗೆ ಹೋಗುವ ಅನಿವಾರ್ಯತೆ ಬಂತು, ಅಲ್ಲಿ ಹೋದಾಗ, ನನಗೆ ನಮ್ಮ ಶಾಸಕರ ಬಗ್ಗೆ ಒಳ್ಳೆಯ ಅಬಿಪ್ರಾಯಗಳು ಇಲ್ಲ. ಆದರೂ ಮನೆಗೆ ಹೋದಾಗ ಶಾಸಕರ ಪತ್ನಿ, ಮಾತನಾಡಿದ ರೀತ ನೋಡಿ ಬಹಳ ಆಶ್ಚರ‍್ಯವಾಯಿತು. ರಾಜಕಾರಿಣಿಯಾಗಿ ಅವರು ಸಮಾಜದ ಬಗ್ಗೆ, ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವುದು ನನಗೆ ಅತೀವ ಸಂತೋಷವನ್ನುಂಟುಮಾಡಿತು. ಅದರ ಪರಿಣಾಮವಾಗಿ ಅವರು ತಮ್ಮ ಮಗನನ್ನು ಭೇಟಿ ಮಾಡಿ, ಅವನು ಪರಿಸರದ ಬಗ್ಗೆ ಸಮಾಜದ ಬಗ್ಗೆ ಬಹಳ ಕಾಳಜಿ ಹೊಂದಿದ್ದಾನೆಂದು ತಿಳಿಸಿದರು. ಅದರಂತೆಯೇ ಅವನನ್ನು ಭೇಟಿ ಮಾಡುವ ಸಮಯ ಬಂದಿತು.

ಆತ ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ, ಕೆಂಪೇಗೌಡ ಆಸ್ಪತ್ರೆಯಲ್ಲಿಗೆ ಹೋದೆ. ಹತ್ತು ನಿಮಿಷದಲ್ಲಿ ಬರುತ್ತೇನೆಂದವನು, ಹೆಚ್ಚು ಕಡಿಮೆ ಎರಡು ಗಂಟೆಗಳ ಕಾಲ ನನ್ನನ್ನು ಕಾಯಿಸಿದ. ನನಗೆ ಕೋಪ ಬಂದಿತ್ತಾದರೂ ತಡೆದುಕೊಂಡೆ. ಅವನಿಗೂ ನನಗೂ ಆಗಬೇಕಿರುವ ಕೆಲಸವೇನೂ ಇರಲಿಲ್ಲ, ಕೇವಲ ಒಬ್ಬ ಖಾಸಗಿ ಆಸ್ಪತ್ರೆಯ ವೈದ್ಯ. ಅವರಪ್ಪ ಶಾಸಕನಾಗಿದ್ದರೂ ನಾನು ಶಾಸಕರಿಂದ ಕೆಲಸ ಮಾಡಿಸಿಕೊಳ್ಳುವ ಅಥವಾ ನೆರವು ಪಡೆದಿಲ್ಲ. ಆದರೂ ಇವನನ್ನು ನಾನೇಕೆ ಕಾಯಬೇಕು, ಇವನಿಂದ ನನಗೆ ಆಗಬೇಕಿರುವುದೇನು? ಯಾವುದೇ ರಾಜಕಾರಿಣಿಯಿಂದ ಜನಸಾಮಾನ್ಯರ ಕೆಲಸ ಆಗುತ್ತದೆಂಬುದನ್ನು ನಾನು ಒಪ್ಪುವುದಿಲ್ಲ, ನಮ್ಮ ವ್ಯವಸ್ಥೆಯಲ್ಲಿ ಅಧಿಕಾರಿಗಳು ಯಾವು ಅನಾಗರೀಕ, ರಾಜಕಾರಿಣಿಯನ್ನು ನಂಬಿ ಕೆಲಸ ಮಾಡುವುದಿಲ್ಲ, ಅದರ ಬಗ್ಗೆ ನನಗೆ ಬಹಳ ಸಂತೋಷವಿದೆ. ತಡವಾಗಿ ಬಂದರೂ ಅವನಿಗೆ ನನ್ನನ್ನು ಕಾಯಿಸಿದೆ ಎನ್ನುವುದರ ಬಗ್ಗೆ ಸ್ವಲ್ಪವೂ ಬೇಜಾರಿರಲಿಲ್ಲ. ನನ್ನ ಕೋಪ ನೆತ್ತಿಯಲ್ಲಿತ್ತು. ನಾನು ನಮ್ಮ ನಡುವೆ ನಡೆದ ಸಂಪೂರ್ಣ ಸಂವಾದವನ್ನು ಇಲ್ಲಿ ಹೇಳುವುದಿಲ್ಲ, ಸಂಕ್ಷೀಪ್ತವಾಗಿ ಸಾರಾಂಶವನ್ನುಮಾತ್ರ ಇಡುತ್ತೇನೆ.

ಅವನ ದೃಷ್ಠಿಯಲ್ಲಿ, ಭಾರತವೆಂಬ ದೇಶ ಹುಟ್ಟುವುದಕ್ಕೆ ಕಾರಣ ಬ್ರಿಟೀಷರು, ಅವರು ಬಂದ ನಂತರವೇ ನಾವು ಬೆಳಕಿಗೆ ಬಂದದ್ದು, ನಾಕರೀಕರಾದದ್ದು. ಹತ್ತು ಸಾವಿರ ವರ್ಷಗಳ ಇತಿಹಾಸ ಇರುವ ಭಾರತಕ್ಕೆ ಆಂಗ್ಲರು ಬಂದು ನಾಗರೀಕತೆಯನ್ನು ತೋರಿಸಿದರೆಂಬುದು ಅವನ ಅಬಿಪ್ರಾಯ. ಕೃಷಿ ರಂಗದಲ್ಲಿ, ರಸಾಯನಿಕ, ಟ್ರಾಕ್ಟರು, ಟಿಲ್ಲರು, ಬಂದಮೇಲೆ ಕೃಷಿ ಉದ್ದಾರವಾಯಿತೆಂಬುದು ಅವರ ನಂಬಿಕೆ. ಶತಮಾನಗಳಿಂದ, ದನಕರುಗಳು, ಕುರಿ ಮೇಕೆ, ಎಲ್ಲವನ್ನು ಜೊತೆಯಲ್ಲಿರಿಸಿಕೊಂಡು ಬದುಕಿರುವ ನಮ್ಮ ದೇಶದ ರೈತಾಪಿ ವರ್ಗ, ಇವತ್ತಿಗೆ ಹಾಲು, ಬೆಣ್ಣೆ ತುಪ್ಪ ತಿನ್ನಲು ಆಗದೇ ಬದುಕುತ್ತಿರುವುದು, ನಾವೇ ಕಟ್ಟಿರುವ ಈ ತಂತ್ರಜ್ನಾನದಿಂದ ವೆನ್ನುವುದು ನನ್ನ ಅನಿಸಿಕೆ. ಇಂಗ್ಲೀಷ್ ಮೆಡಿಸಿನ್ ಭಾರತಕ್ಕೆ ಬಂದ ಮೇಲೆ ನಾವೆಲ್ಲ ಆರೋಗ್ಯವಂತರಾಗಿರುವುದೆಂಬುದು ಅವರ ಅನಿಸಿಕೆ, ಶತಮಾನದ ಹಿಂದೆಯೇ ಚರಕ ಶುಷ್ರುತ ಆಯುರ್ವೇದದಲ್ಲಿ ಎಲ್ಲವನ್ನೂ ಸಾಧಿಸಿ ಹೋಗಿದ್ದಾರೆಂಬುದು ನಮ್ಮ ನಿಲುವು. ಜನರಿಗೆ ದುಡ್ಡು ಕೊಟ್ಟಿಲ್ಲ ಎಂದರೇ ವೋಟು ಹಾಕುವುದೇ ಇಲ್ಲ, ಆದ್ದರಿಂದ ಖರ್ಚು ಮಾಡಿರುವ ಹಣವನ್ನು ದೋಚಲೇಬೇಕು, ಜನರು ಸರಿಯಿಲ್ಲವೆಂಬುದು ಅವರ ನಿಲುವು. ಊರಿಗೆ ಯಾರೋ ನಾಲ್ಕು ಜನರಿಗೆ ದುಡ್ಡು ಕೊಟ್ಟಿರುತ್ತಾರೆ ಇಡೀ ಊರಿಗೆ ದುಡ್ಡು ಕೊಟ್ಟೇ, ಪ್ರತಿಯೊಬ್ಬರಿಗೂ ತಲೆ ಎಣಿಸಿ ದುಡ್ಡು ಕೊಟ್ಟಿದ್ದೇವೆಂದರೇ ಅದು ಅವರು ಹುಟ್ಟು ಮೂರ್ಖತನವೆಂಬುದು ನನ್ನ ಅಬಿಪ್ರಾಯ. ನಾನು ಕಳೆದ ಹನ್ನೆರಡು ವರ್ಷಗಳಿಂದ ವೋಟು ಹಾಕುತ್ತಿದ್ದೇನೆ, ಯಾವುದೇ ಚುನಾವಣೆಯಲ್ಲಿಯೂ ತಪ್ಪದೇ, ನಾನು ಮಾತ್ರವಲ್ಲ, ನಮ್ಮನೆಯವರೆಲ್ಲರೂ ಹಾಕಿದ್ದೇವೇ ಯಾವ ಒಬ್ಬ ಬಿ.ಮಗಾ ರಾಜಕಾರಿಣಿಯೂ ದುಡ್ಡು ಕೊಟ್ಟಿಲ್ಲ ಆ ನೀಚರ ದುಡ್ಡು ನಮಗೆ ಬೇಡ. ನನಗೆ ಪರಿಚಯವಿರುವ ಸಾವಿರಾರು ಸ್ನೇಹಿತರಲ್ಲಿ ದುಡ್ಡು ಪಡೆದು ಮತ ಹಾಕಿರುವವರು ಒಬ್ಬರೇ ಒಬ್ಬರೂ ಇಲ್ಲ. ನೀಚ ರಾಜಕಾರಿಣಿಗಳು ಅವರ ನೀಚ ಬುದ್ದಿಯ ನೇರಕ್ಕೆ ಯೋಚಿಸುತ್ತಾರೆಂಬುದಕ್ಕೆ ಇದೇ ಸಾಕ್ಷಿ. ನೂರು ಮತದಾರರ ಪೈಕಿ, ಐದು ಜನಕ್ಕೆ ದುಡ್ಡು ಕೊಟ್ಟರೇ ಎಲ್ಲರಿಗೂ ಕೊಟ್ಟಂತೆಂಬು ಅಂಧಕಾರದಲ್ಲಿ ಮುಳುಗಿದ್ದಾರೆ.

ಅತಿ ಮುಖ್ಯವಾದ ಮತ್ತೊಂದು ವಿಷಯ ನಮಗೆ ಅವನು ತಿಳಿಸಲೆತ್ನಿಸಿದ್ದು, ಅವನು ವೈದ್ಯನಾಗಿರುವುದರಿಂದ ಮತ್ತು ರಾಜಕಾರಿಣಿಯ ಮಗನಾಗಿರುವುದರಿಂದ, ಅವನು ನೋಡೀರುವಷ್ಟು ಜನರನ್ನು ನಾನು ನೋಡಿಲ್ಲ, ನಾವು ಪುಸ್ತಕದ ಮಧ್ಯದಲ್ಲಿ ಕುಳಿತು ನಿದ್ರಿಸುವವರೆಂಬುದು ಅವರ ಅಬಿಪ್ರಾಯ. ವೈದ್ಯರಾಗಿರುವುದರಿಂದ, ತಾವು ಬಹಳಷ್ಟು ಜನ ರೋಗಿಗಳನ್ನೇ ನೋಡುತ್ತೀರಾ, ಆದ್ದರಿಂದ ಇಡೀ ಸಮಾಜ ರೋಗಿಗಳಿಂದ ತುಂಬಿದೆ ಎಂಬುದು ನಿಮ್ಮ ನಂಬಿಕೆಯಾಗಿದೆ, ಅದಲ್ಲದೇ ಅವರೆಲ್ಲರೂ ನಿಮ್ಮನ್ನು ಡಾಕ್ಟರು ಎಂದು ನೋಡುವುದರಿಂದ ತಾವು ಅವರಿಗಿಂತ ಬಹಳ ಎತ್ತರಕ್ಕೆ ಬಿಂಬಿಸಿಕೊಳ್ಳುತ್ತೀರಾ, ನೀವು ಅವರನ್ನು ಅವರಲ್ಲಿರುವ ಮನಸನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ರಾಜಕಾರಿಣಿಯ ಮಗನಾದ ಮಾತ್ರಕ್ಕೆ ಎಲ್ಲರಿಗೂ ನೀವು ದೊರೆಗಳೆಂಬ ಭಾವನೆ ಬೇಡ. ನಿಮ್ಮ ತಂದೆ ಶಾಸಕರಾಗಿದ್ದರೂ ಅವರು ಊರಿಗೆ ಬರುವುದೇ ಅಪರೂಪ, ಅವರನ್ನು ಕಾಣಬೇಕೆಂದರೇ ದುರ್ಬಿನ್ ಹಾಕಿಕೊಂಡು ಹುಡುಕಬೇಕು, ಇನ್ನೂ ತಾವು ಅದ್ಯಾವ ಜನರ ನಡುವೆ ಬೆರೆತಿದ್ದೀರೆಂಬುದು ಅರ್ಥವಾಗಲಿಲ್ಲ. ತಮ್ಮ ಮನೆಯಿರುವುದು, ಲಾವೆಲ್ಲೆ ರಸ್ತೆಯಲ್ಲಿ, ಆ ರಸ್ತೆಗೆ ಹೋಗಬೇಕೆಂದರೇ ಸಿಟಿ ಬಸ್ ಕೂಡ ಬರುವುದಿಲ್ಲ, ಇನ್ನೂ ಜನ ಸಾಮಾನ್ಯ ನಿಮ್ಮ ಮನೆಗೆ ಬಂದು ತಮ್ಮನ್ನು ಕಂಡು ಅವನ ಸಮಸ್ಯೆಯನ್ನು ತಾವು ಲಾಲಿಸುತ್ತೀರೆಂರೆ ನನಗೆ ತಡೆಯಲಾರದ ನೋವಿನ ನಗು ಬರುತ್ತದೆ. ತಾವುಗಳು ಹೇಳುವ ರೀತಿಯಲ್ಲಿ ನಾವು ಪುಸ್ತಕದ ಮಧ್ಯೆ ಮಲಗಿದ್ದರೂ, ಸದಾ ಎಲ್ಲಾ ವರ್ಗದ ಜನರೊಂದಿಗೆ ಸಂಪರ್ಕದಲ್ಲಿರುತ್ತೇವೆ, ಅಲ್ಲಿ ಪ್ರೊಫೆಸ್ಸರುಗಳಿದ್ದಾರೆ, ವಿದ್ಯಾರ್ಥಿಗಳಿದ್ದಾರೆ, ಜನ ಸಾಮಾನ್ಯರಿದ್ದಾರೆ, ರೈತರಿದ್ದಾರೆ, ಕೈಗಾರಿಕೊದ್ಯಮಿಗಳಿದ್ದಾರೆ, ಮಹಿಳೆಯರು, ಮಕ್ಕಳು, ರಾಜಕಾರಿಣಿಗಳು. ಅಷ್ಟೇ ಅಲ್ಲಾ, ನಾವು ಇಲ್ಲಿಂದ ಊರಿಗೆ ಹೋಗುವ ನಡುವೆ ಆರು ಗಂಟೆಗಳಲ್ಲಿ ಕನಿಷ್ಟ ಆರು ಜನ ಸಹ ಪ್ರಯಾಣಿಕರ ಜೊತೆ ಸ್ನೇಹ ಬೆಳೆಸುತ್ತೇವೆ, ಸಮಾಜದ ಆಗು ಹೋಗುಗಳ ಬಗ್ಗೆ ತಿಳಿಯಲು ಯತ್ನಿಸುತ್ತೇವೆ. ನಿಮ್ಮಂತೆ ಊರಿಗೆ ಕಾರಿನಲ್ಲಿ ಹೋಗಿ, ನಿಮ್ಮ ಪಕ್ಷದ ಕಾರ್ಯಕರ್ತರ ನಡುವೆ ಕುಳಿತು ಹೊಗಳಿಕೆಯ ಮಾತನ್ನು ಮಾತ್ರ ಕೇಳುವುದಿಲ್ಲ. ಎಲ್ಲ ಪಕ್ಷದವರನ್ನು ಸಮಾನ ರೀತಿಯಲ್ಲಿ ಕಾಣುತ್ತೇವೆ. ಅಣ್ಣಾ ಹಜ಼ಾರೆಯವರ ಬಗ್ಗೆಯೂ ತೀರಾ ಉಢಾಫೆತನದ ಮಾತುಗಳನ್ನು ಆಡಿದ, ಅವನ ಮಾತುಗಳನ್ನು ಕೇಳಿದ ಮೇಲೆ, ಇದು ಅರೆಬೆಂದ ಮಡಕೆ, ಮತ್ತು ಎಲ್ಲವನ್ನೂ ತಿಳಿದಿದ್ದೇನೆ, ಇರುವ ದುಡ್ಡಿನಿಂದ ಎಲ್ಲವನ್ನೂ ಸಾಧಿಸಬಹುದೆಂಬು ಅಹಂ ಮತ್ತು ಅಂಧಕಾರ ತುಂಬಿದೆ. ತಾವು ಮುಂದೆ ರಾಜಕೀಯಕ್ಕೆ ಬಂದು ಸಾಧಿಸಬೇಕೆಂದಿದ್ದರೇ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿರಿ, ಇಲ್ಲವಾದರೇ ಒಳ್ಳೆಯ ವೈದ್ಯರಾಗುವುದು ಅಸಾಧ್ಯ. ಪ್ರತಿಯೊಬ್ಬನಿಗೂ ತನ್ನದೇ ಆದ, ಆತ್ಮಗೌರವ ಇರುತ್ತದೆ, ಕೋಟಿ ಕೊಟ್ಟರೂ ಜನಸಾಮಾನ್ಯ ತನ್ನತನವನ್ನು ಬಿಟ್ಟು ಕೊಡುವುದಿಲ್ಲ, ರಾಜಕಾರಿಣಿಗಳಂತೆ ಎಲ್ಲರೂ ನೀಚರೆಂಬುದನ್ನು ತಮ್ಮ ನೀಚ ಲೆನ್ಸ್ ಗಳಿಂದ ನೋಡುವುದನ್ನ್ನು ಕೈ ಬಿಡಿ. ಯುವಶಕ್ತಿ ಬರಲಿ.

01 ಆಗಸ್ಟ್ 2011

ನಿನ್ನ ಕಣ್ಣೀರ ಹಿಂದೆ ನನ್ನ ಕೈವಾಡ!!!


ಹುಚ್ಚುಮನಸ್ಸು ಒಮ್ಮೊಮ್ಮೆ ಮನಸಾರೆ ಅತ್ತರೂ ನಾಟಕೀಯವೆನಿಸುತ್ತದೆ ಪ್ರಪಂಚಕ್ಕೆ, ನಾ ಅಳುವುದು ದುಃಖಕ್ಕಲ್ಲ, ಕಣ್ಣೀರಿಟ್ಟು ಕರುಣೆ ಹುಟ್ಟಿಸುವುದಕ್ಕಲ್ಲ, ಅಳುವುದೊಂದು ನೆಮ್ಮದಿ ನನಗೆ. ಒಬ್ಬಳೇ ಕುಳಿತು ಅಳುವ ಮನಸ್ಸು ಅವಳದ್ದು, ಅದೇಕೇ ಅಳುತ್ತಾಳೆಂಬುದರ ಬಗೆ ಅವಳಿಗೆ ಅರಿವಿಲ್ಲ. ನನಗೂ ತಿಳಿಯುತ್ತಿಲ್ಲ. ಒಮ್ಮೊಮ್ಮೆ ಒಂಟಿತನಕ್ಕೆ ಅಳುತ್ತಾಳೆ, ಮತ್ತೊಮ್ಮೆ ನನ್ನೊಂದಿಗೆ ಜಗಳವಾಡಿ ಅಳುತ್ತಾಳೆ, ಮಗದೊಮ್ಮೆ ನಾ ಮಾಡಿದ ಮೋಸ ನೆನೆದೆ ಅಳುತ್ತಾಳೆ. ಅಳುವೊಂದು ಬಳುವಳಿ ಎಂದರೂ ತಪ್ಪಿಲ್ಲ. ನಾನು ಕೆಲವೊಮ್ಮೆ ಅಳುವಂತಾಗುತ್ತದೆ, ನಾನು ಅತ್ತರೆ ನನ್ನ ನೋಡಿ ಮತ್ತೂ ಅಳುತ್ತಾಳೆಂಬ ಅಳುಕು ನನ್ನನ್ನು ಮನಸಾರೆ ಅಳುವುದಕ್ಕೂ ಬಿಡುವುದಿಲ್ಲ. ಅಳುವುದರಲ್ಲಿ ನಾನೇಕೆ ಅಂಜಬೇಕಿನಿಸಿದರೂ ನಾನಿನ್ನ ಕಣ್ಣೀರು ಕಂಡ ದಿನ ನನ್ನ ಬದುಕೇ ಅಂತಿಮವೆನ್ನುತ್ತಾಳೆ. ನಾನು ಹಾಗೇಯೇ ಅವಳಿಗೆ ಭರವಸೆಯ ಮಹಾಪೂರವನ್ನೇ ಹರಿಸಿದ್ದೇ, ಆದರೇ ಅವೆಲ್ಲವೂ ಭರವಸೆಗಳಾಗಿಯೇ ಉಳಿದವು. ಅವಳ ಪ್ರತಿಯೊಂದು ಕಣ್ಣ ಹನಿಗಳಿಗೂ ನಾನೇ ಪಿತೃ. ಅವಳ ಸಣ್ಣ ಕಣ್ಣ ಹನಿಗಳು, ಕೆನ್ನೆಯ ಮೇಲಿರುವ ಹನಿಯ ಗುರುತುಗಳು ನನ್ನನ್ನು ನೋಡಿ ಗೇಲಿ ಮಾಡುತ್ತಿವೆ. ನಾನು ಅವುಗಳನ್ನು ಕಂಡಾಗ ಕಣ್ಣಿಗೆ ಕಾಣದವನಂತೆ ಮರೆಯಾಗುತ್ತೇನೆ. ಇವೆಲ್ಲವೂ ನನ್ನಿಂದಲೇ ಆದದ್ದಲ್ಲವೇ? ಇದು ಪ್ರಶ್ನಾತೀತ, ನಿನ್ನ ಕಣ್ಣ ಹನಿಗಳ ಹುಟ್ಟಿಗೆ ಕಾರಣ ನಾನು, ನಾನೇಕೆ ನೀ ಅಳುವಂತೆ ಮಾಡಿದೆ, ನೀ ಅತ್ತ ಮರು ಕ್ಷಣ ನನ್ನೊಳಗೂ ದುಗುಡ, ದುಮ್ಮಾನ ಹೆಚ್ಚಾಗುತ್ತದೆ. ನಿನಗೆ ಮೋಸ ಮಾಡಿಲ್ಲವೆಂದು ಯಾವ ಬಾಯಿಯಿಂದ ಹೇಳಲಿ, ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಬಚ್ಚಿಟ್ಟ ಸತ್ಯ ಪದೇ ಪದೇ ಭುಗಿಯೆದ್ದು ನನ್ನನ್ನು ಹೀಗೆ ಕೊಲ್ಲಬೇಕೆ?

29 ಜುಲೈ 2011

ಹೇಡಿತನಕ್ಕೆ ಮುಖವಾಡ!!

ಕುಡಿತಕ್ಕೆ ಸಮನಾದದ್ದು ಬೇರೊಂದಿಲ್ಲ, ಇದು ನಾನು ನಂಬಿರುವ ಸತ್ಯ. ಅದೆಷ್ಟು ಬಾರಿ ಯೋಚಿಸಿದರೂ, ಚಿಂತಿಸಿದರೂ ಕೊರಗಿದರೂ ನೆಮ್ಮದಿಯ ಉಸಿರು ಬಿಡಿಸುವುದು ಒಂದಿಷ್ಟು ಕುಡಿದ ಮೇಲೆ. ಸರ್ವ ರೋಗಕ್ಕೂ ಸಾರಾಯಿ ಮದ್ದು, ನಾನು ಕುಡಿಯುವುದು ಮೋಜಿಗಲ್ಲ, ಮನರಂಜನೆಗಲ್ಲ, ಚಟವೂ ಅಲ್ಲಾ, ನನ್ನೊಳಗಿರುವ ಸೋಮಾರಿತನ, ನೋವು ದುಃಖಗಳನ್ನು ಮರೆಮಾಚಲು ಕುಡಿಯುತಿದ್ದೇನೆ. ಕುಡಿದು ನಾ ಅಳಬಲ್ಲೇ, ನೋಡಿದವರು ಕುಡಿದು ಅಳುತ್ತಿದ್ದಾನೆಂದು ಸುಮ್ಮನಾಗುತ್ತಾರೆ. ಕುಡಿದು ನನ್ನ ಮೈ ನಾನೇ ಪರಚಿಕೊಳ್ಳಬಲ್ಲೆ, ನನ್ನೊಳಗೇ ನಾನೇ ಅಳಬಲ್ಲೆ, ನಗಬಲ್ಲೆ, ತಮಾಷೆ, ನಗು, ನೋವು ದುಃಖ ದುಮ್ಮಾನ ಎಲ್ಲವೂ ಸೇರುತ್ತವೆ. ಆದರೂ ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಡಿದು ನಾನು ಯಾರೊಂದಿಗೂ ಜಗಳವಾಡುವುದಿಲ್ಲ, ಯಾರು ನನ್ನೊಂದಿಗೂ ಆಡುವುದಿಲ್ಲ, ಕುಡಿದಾಗ ನಾನು ಹೊಡೆದಾಡುವುದು ನನ್ನೊಂದಿಗೆ, ಕೇವಲ ನನ್ನೊಂದಿಗೆ. ನಾನು ಕುಡುಕನಾಗಿದ್ದು ನನ್ನಿಂದ, ನಾನು ಕುಡಿಯುತ್ತಿರುವುದು ನನ್ನಿಂದ, ಕುಡಿದು ಕೊರಗುವುದು ನನ್ನ ಮೇಲೆ. ಇದು ನನ್ನಯ ಮೇಲಿನ ಪ್ರೀತಿ, ಪ್ರೇಮ, ಅತಿಯಾದ ಅಬಿಮಾನ, ಇವೆಲ್ಲದರ ಮಿಶ್ರಣದಲ್ಲಿ ಮಿಂದೇಳುವುದೇ ನಾ ಕುಡಿದಾಗ, ನಾ ಕುಡಿಯುವುದೇ ಮಿಂದೇಳಲು.

ನನ್ನ ಕುಡಿತ, ನನ್ನ ದುಷ್ಟ ಬಾಳು, ನನ್ನ ಈ ಹೇಯ ಜೀವನ ಸ್ಥಿತಿ ಇವೆಲ್ಲವೂ ನಾನೇ ನನ್ನಿಂದ ಸೃಷ್ಟಿಸಿಕೊಂಡಿರುವುದು. ನಾನೊಬ್ಬ ಹೇಯ, ನಾನೊಬ್ಬ ಸೋಮಾರಿ, ನಾನೊಬ್ಬ ಕುಡುಕ, ನನ್ನಳೊಗೆ ಕಳ್ಳತನವಿಲ್ಲ, ದ್ರೋಹವೆಂಬುದಿಲ್ಲ, ಅದಿದ್ದರೇ ನಾ ಕುಡಿದು ನನ್ನೊಳಗೆ ನಾನು ಸಾಯುತ್ತಿರಲಿಲ್ಲ. ನಾನು ಕುಡಿಯುವುದಕ್ಕೆ ಕಾರಣವಿಲ್ಲ. ಕಾರಣವಿದ್ದು ಕುಡಿಯುವಷ್ಟು ಯೊಗ್ಯನಲ್ಲ. ನಾನೇಕೆ ಕುಡುಕನಾದೆ? ನೀ ನೇಕೆ ಕುಡೀಯುತ್ತೀಯಾ? ಕುಡಿತವನ್ನು ಬಿಡುವುದಕ್ಕೆ ನಾ ಸಹಾಯ ಮಾಡಲೇ ಎನ್ನುವ ಹತ್ತು ಹಲವು ಬುದ್ದಿವಂತರಿದ್ದಾರೆ, ಒಳ್ಳೆಯ ಸ್ನೇಹಿತರು ಅನುಮಾನವಿಲ್ಲ. ಆದರೇ ನಾನು ಒಳ್ಳೆಯವನಾಗಲಿಲ್ಲ. ಇದು ನನ್ನೊಳಗೆ ಇರುವ ದುಷ್ಟ ಮನಸ್ಥಿತಿ. ಕುಡುಕನ ಪರಿಸ್ಥಿತಿ ಯಾವ ನನ್ನ ಶತ್ರುವಿಗೂ ಬೇಡ. ಕುಡುಕನೆಂಬುವನು ನೆಪ ಮಾತ್ರಕ್ಕೆ ಮನುಷ್ಯ ಅವನ ಒಳಗೆ ಅತಿರೇಕಕ್ಕೇರಿದ ಹುಚ್ಚಾಸ್ಪತ್ರೆ ಇರುತ್ತದೆ. ಅದು ಸಾಮಾನ್ಯ ಹುಚ್ಚರ ಸಂತೆಯಲ್ಲ, ಅಲ್ಲಿರುವವರೆಲ್ಲರೂ ವಿಕೃತ ಮನಸ್ಸಿನವರೇ! ನಾನು ಕುಡಿದಾಗ ನನ್ನೊಳಗೆ ಆಗುವ ಬದಲಾವಣೆಯನ್ನೂ ನಾನು ನಡೆದುಕೊಳ್ಳುವುದನ್ನು ನೆನೆ ನೆನೆದು ಮತ್ತೆ ಕುಡಿಯುತ್ತೇನೆ.
ಕುಡಿಯುವವರಿಗೊಂದು ನೆಪ ಬೇಕು ಅಷ್ಟೇ, ಇಂಥಹ ಸಾವಿರಾರು ಬೊಗಳೆ ಮಾತುಗಳನ್ನು ನಾನು ಕಂಡಿದ್ದೇನೆ. ನಾನು ನಾನಾಗಿದ್ದರೇ ಚೆನ್ನಾಗಿರುತ್ತದೆ ಹೊರತು ಬೇರಯವರ ಪಾತ್ರ ಮಾಡಲು ಹೋದರೇ ಅದೆಂದಿಗೂ ಸಾದ್ಯವಿಲ್ಲ. ಇವೆಲ್ಲಾ ಮಾತುಗಳು ನನ್ನ ಸ್ವಂತದಲ್ಲ, ನನ್ನ ತಾತ ಹತ್ತು ವರ್ಷದ ಹಿಂದೆ ಹೇಳಿದ ಮಾತುಗಳು. ಅವುಗಳು ಇನ್ನು ಗುಯ್ಂ ಎನ್ನುತಿವೆ.

22 ಮಾರ್ಚ್ 2011

ಅನರ್ಥವೇ ಬದುಕು ಇನ್ನೂ ಈ ಬರಹಕ್ಕೆ ಅರ್ಥ ಬರಲು ಸಾದ್ಯವೇ?


ಬದುಕು ಜೀವನ ಬೇಸರಗೊಂಡು ಕಟ್ಟ ಕಡೆಯದಾಗಿ, ಹೆಂಡಕ್ಕೊ, ಸಿಗರೇಟಿಗೋ, ಅಥವಾ ಮತ್ತಾವುದೋ ಚಟಕ್ಕೆ ಬಲಿಯಾಗಿ, ಬದುಕಿನ ಕೊನೆಯ ದಿನಗಳು ಹತ್ತಿರ ಸಮೀಪಿಸುತ್ತಿದ್ದಾಗ, ಮನದಾಳದೊಳಗೆ ಯಾವುದೋ ತುಡಿತ, ಬಯಕೆ ಬುಗೆದ್ದು ಬರುತ್ತದೆ. ಅದೊಂದು ಮುಂಜಾವಿನಲ್ಲಿ ಕಾಣುವ ಕನಸಿನಂತೆ, ಯಾವುದು ತಿಳಿಯಾಗಿಲ್ಲ, ಅಲ್ಲೊಂದು, ಅಪಘಾತ, ರಕ್ತ, ಅಳು, ಆಕ್ರಂದನ, ನಗು, ಕುಹುಕತನ, ನನ್ನನ್ನೆ ನೋಡಿ ಹಂಗಿಸುತ್ತಿರುವ ಭಾವನೆ. ಭಾವನೆಯನ್ನು ಅರ್ಥೈಸಿಕೊಳ್ಳದ ಪರಿಸ್ಥಿತಿ ನನ್ನದು. ಯಾರನ್ನೋ ಹಳ್ಳಕ್ಕೆ ತಳ್ಳಿದ, ಯಾರನ್ನೊ ಕೊಲೆಗೈದ, ಅಪರಾಧ ಪ್ರಜ್ನೆ ನನ್ನನ್ನು ಕಾಡುತ್ತಿದೆ, ನೋಡು ನೋಡುತ್ತಲೇ ಯಾರೋ ನನ್ನನ್ನು ಪ್ರಪಾತಕ್ಕೆ, ತಳ್ಳುತ್ತಿದ್ದಾರೆ, ನಾನು ಸಂಪೂರ್ಣ ಮುಳುಗುತ್ತಿದ್ದೇನೆ, ಯಾರೂ ಅಳುತ್ತಿಲ್ಲ, ಯಾರ ಮೊಗದಲ್ಲಿಯೂ ಕರುಣೆಯಿಲ್ಲ, ಎಲ್ಲರ ಮೊಗದಲ್ಲಿ ಅದೇ ಭಾವನೇ, ಇವನಿಗೆ ಹೀಗೆ ಆಗಬೇಕಿತ್ತು ಅವನು ಮೆರೆದದ್ದು ಕಡಿಮೆಯೇ, ದೃಷ್ಟ, ಕಲ್ಲಲ್ಲಿ ಹೊಡೆದು ಸಾಯಿಸಿದರೂ ಕಡಿಮೆಯೇ, ಆದರೂ ಅವನು ತೋಡಿದ ಹಳ್ಳಕ್ಕೆ ಅವನೆ ಬಿದ್ದಿದ್ದಾನೆ. ಅವನೆಂದು ಮೇಲೇರಲಾರ, ಮೇಲೇಲುವುದಕ್ಕೆ ಶಕ್ತಿಯಿದ್ದರೇ ತಾನೇ, ಶಕ್ತಿ ಬರುವುದಕ್ಕೆ ಜೀವವಿದ್ದರೇ ತಾನೇ. ಹೀಗೆ ನನ್ನ ಸಾವನ್ನು ಹಂಗಿಸುವವರೆಲ್ಲರನ್ನೂ ನಾನು ದಿಟ್ಟಿಸುತ್ತಿದ್ದೇನೆ, ಅವರೆಲ್ಲರೂ ಇದ್ದಾರೆ.
ನಾನು ಶಾಲೆಗೆ ಹೋಗುವುದಿಲ್ಲವೆಂದು ಹಟ ಹಿಡಿದಾಗ, ನನ್ನನ್ನು ಸಮಜಾಯಿಸಿ ಇಲ್ಲದ ಸುಳ್ಳು ಹೇಳಿ ಶಾಲೆಗೆ ಕರೆದುಕೊಂಡು ಹೋದ, ಮಾಸ್ಟರುಗಳು. ಮುದ್ದಿನ ಮಾತಾಡಿ ಶಾಲೆಗೆ ತಳ್ಳಿದ ನಮ್ಮಮ್ಮ, ಹೋಗದಿದ್ದಲ್ಲಿ ಕೊಂದುಬಿಡುವೆ ಎಂದ ನಮ್ಮಪ್ಪ, ಕಚ್ಚಾಡಿದ ಸ್ನೇಹಿತರು, ಒಂದು ಬುತ್ತಿಯಲ್ಲಿ ಹಂಚಿ ತಿಂದ ಗೆಳೆಯರು, ಒಂದೇ ಲೋಟದಲ್ಲಿ ಕುಡಿದ ನನ್ನ ಆತ್ಮೀಯರು, ನಾನೇ ಸರ್ವಸ್ವವೆಂದಿದ್ದ ನನ್ನ ಜೀವದ ಗೆಳತಿ, ನನ್ನ ಮಾತಿಗೆ ಸದಾ ನಗುತಿದ್ದ ನನ್ನ ಗೆಳೆಯ ಗೆಳತಿಯರು, ನನ್ನ ಮೇಲೆ ದ್ವೇಷ ತಿರಿಸಲೆಂದೆ ಹುಟ್ಟಿದ್ದೇವೆಂದು ಅಲೆದಾಡುತಿದ್ದ ನನ್ನ ಶತ್ರುಗಳು, ಇವರೆಲ್ಲರೂ ನನ್ನ ಸಾವಿನ ದಿನ ನಿಂತು ನನ್ನನ್ನು ನೋಡಿ ಹುಸಿನಗುತಿದ್ದದ್ದು ಏಕೆ? ಬದುಕಿದ್ದಾಗಲೂ ಅರ್ಥವಾಗದ ಬದುಕು ನನ್ನದು, ಸತ್ತ ಮೇಲೂ ಅರ್ಥವಾಗುತ್ತಿಲ್ಲವಲ್ಲ, ನಾನೆಂಬುದೇ ದುಗುಡವೇ? ನಾನೆಂಬುದೇ ಅನರ್ಥವೇ, ಈ ಬದುಕು ಅನರ್ಥವೋ? ಈ ಜೀವನ ಅನರ್ಥವೋ? ಯಾವುದು ಅರ್ಥ, ಯಾವುದು ಅನರ್ಥ? ಕ್ಷಣ ಕ್ಷಣ ಭೂಲೋಕದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯ ಸಾಲದೇ? ಹುಟ್ಟುವಾಗಲೇ ಅಳುತ್ತಾ ಹುಟ್ಟಿದ ನನಗೆ, ತಿನ್ನಿಸುವಾಗಲೂ ಹೊಡೆದು ಬಡಿದು ತಿನ್ನಿಸಿದರು, ಓದಲು ಹೋದಾಗಲೂ ಹೊಡೆತ ಬಡಿತಗಳು, ಸಹಪಾಠಿಗಳು ಹೊಡೆದಾಟಕ್ಕೆ ಮುನ್ನುಗ್ಗುತ್ತಿದ್ದರು, ನಾನು ಅವರಿಂದ ಏಟು ತಪ್ಪಿಸಿಕೊಳ್ಳುವುದಕ್ಕಾದರೂ ಅವರಿಗೆ ಹೊಡೆಯಬೇಕಿತ್ತು, ಅದು ಕೀಟಲೆಯೋ, ಪ್ರೀತಿಯೋ, ದ್ವೇಷವೋ ಅಂತೂ ಹೊಡೆದಾಡುವುದರಲ್ಲೊಂದು ಮಜ, ನಗು, ಬಿದ್ದವನನ್ನು ಎತ್ತುವುದಕ್ಕಿಂತ ಬಿದ್ದ ಎಂದು ನಗುವುದೇ ಹೆಚ್ಚು, ಬಾಲ್ಯದಲ್ಲಿ ಕಲಿತ ಆ ಗುಣ, ಸಾಯುವ ತನಕ ಮುಂದುವರೆಯಿತು. ನನ್ನ ಜೀವದ ಗೆಳೆತಿ ದೂರಾದಳೆಂದರೆ, ಅವಳು ಕೈಕೊಟ್ಟಳಾ? ಎಂದು ಹಂಗಿಸಿದರೇ ಹೊರತು ಸಮಧಾನ ಮಾಡಿ ನನ್ನೊಂದಿಗಿರಲಿಲ್ಲ.
ಇವೆಲ್ಲವೂ ಕೇವಲ ಹತ್ತು ಹದಿನಾರು ನನ್ನ ಬಳಗದವರ ಕಥೆಯಾದರೇ, ಇನ್ನೂ ಕೋಟ್ಯಾಂತರ ಮಂದಿ ಇರುವ ಸಮಾಜ ನನ್ನನ್ನು ನಡೆಸಿಕೊಂಡ ರೀತಿಯಂತೂ ಅತಿ ಘೋರವೆನಿಸುತ್ತದೆ. ನಾನು ಹುಟ್ಟಬೇಕೆಂದು ನಾನು ಬಯಸಿರಲಿಲ್ಲ, ಹುಟ್ಟಿದ್ದು ಯಾವುದೋ ಕಾರಣಕ್ಕೆ, ಜನಿಸಿದ ನಂತರ ನಾನು ಬಯಸಿದಂತೆ ಬದುಕಲು ಯಾರು ಬಿಟ್ಟಿಲ್ಲ, ಇಷ್ಟಪಟ್ಟಿದ್ದನ್ನು ಓದಿಲ್ಲ, ಇಷ್ಟಪಟ್ಟಂತೆ ಬದುಕಿಲ್ಲ, ಇಷ್ಟಬಂದತ್ತೆ ಏನೂ ಮಾಡಿಲ್ಲ, ಆದರೂ ನಾನು ಬದುಕಿದೆ, ಜೀವಿಸಿದೆ, ಯಾರಿಗೆ ಬದುಕಿದೆ, ಯಾವುದಕ್ಕಾಗಿ ಬದುಕಿದೆ, ಯಾವುದಕ್ಕೂ ಉತ್ತರವಿಲ್ಲ, ಪ್ರಶ್ನೆಗಳೇ ಬದುಕಾಗಿತ್ತು, ಸಾವಿನ ಹಿಂದೆಯೂ ಅಷ್ಟೇ ಉತ್ತರವಿಲ್ಲ, ಬರೀ ಪ್ರಶ್ನೆಗಳೇ. ಇವೆಲ್ಲವೂ ಏಕೆ ಹೀಗೆಂದು ಪ್ರಶ್ನಿಸುತ್ತಾ ಹೋದರೇ ಮತ್ತೆ ಮತ್ತೆ ಪ್ರಶ್ನೆಗಳ ಸರಮಾಲೆ ಸಿಗುವುದೇ ವಿನಾಃ ಉತ್ತರದ ಸುಳಿವಿಲ್ಲ. ಮೊದಲ ಬಾರಿಗೆ ಶಾಲೆಗೆ ಸೇರಿದ ದಿನದಿಂದಲೂ, ಜಾತಿಯ ಆಧಾರ ಮೇಲೆ, ಅಥವಾ ಅಪ್ಪ ಅಮ್ಮನ ಪ್ರತಿಷ್ಟೆಯನ್ನು ಮುಂದಿಟ್ಟುಕೊಂಡು ವಿಧ್ಯಾರ್ಥಿಗಳನ್ನು ನಡೆಸಿಕೊಂಡು ಭೇಧಭಾವ ಮೂಡಿಸುವ, ಓಡುವ ಕುದುರೆಯ ಬಾಲವನ್ನು ಹಿಡಿದು, ಕೇವಲ ಓದುವ ಮುಖಗಳನ್ನು ಮುಂದೆ ತಂದು ಒದಲು ಆಸಕ್ತಿಯಿಲ್ಲದ ನನ್ನಂಥ ದಡ್ಡ ಶಿಖಾಮಣಿಗಳನ್ನು ಉಗಿದು ಮನ ಬಂದಂತೆ ಬಡಿದು, ದಂಡಿಸಿದ ಮಹಾಮಣಿಯರು ನಗುತ್ತಾರೆ ನಾನು ಹಾಳಾಗಿ ಹಳ್ಳದಲ್ಲಿ ಮಲಗಿದ್ದಾಗ. ಒಂದೊಂದು ಹಂತದಲ್ಲಿಯೂ ಅಷ್ಟೇ, ಜಗತ್ತು ಆಚಾರ, ಅನಾಚಾರಗಳನ್ನು ತೋರಿಸಿ, ನಂತರ ಅನಾಚಾರದಿಂದ ಮಾತ್ರ ನೀನು ಬದುಕಲು ಸಾಧ್ಯ ನೀನು ಬದುಕಲೇ ಬೇಕೆಂದರೇ ಮತ್ತೊಬ್ಬನಿಗೆ ದ್ರೋಹ ಮಾಡಬೇಕು, ಅವನನ್ನು ಗೆಲ್ಲಬೇಕು, ಜೀವನವೆಂಬುದು ಒಂದು ಹೋರಾಟ, ರಾಜ ಮಹಾರಾಜರು ಯಾವ ತೆವಳಿಗಾಗಿ ಹೋರಾಡಿದರೋ ಗೊತ್ತಿಲ್ಲ, ಜಾತಿಗೆ, ಧರ್ಮಕ್ಕೆ, ಭಾಷೆಗೆ, ರಾಜ್ಯಕ್ಕೆ, ದೇಶಕ್ಕೆ, ಹೀಗೆ ಎಲ್ಲದಕ್ಕೂ ಹೋರಾಡಲೇಬೇಕು, ಅಣ್ಣತಮ್ಮಂದಿರು ದಾಯಾದಿಗಳಾಗಬೇಕು, ಒಂದು ಊರು ನುಚ್ಚಿ ನೂರಾಗಬೇಕು, ನೀನು ಪಕ್ಕದ ಮನೆಯವನ ಹಿತಕ್ಕೆ ತಲೆಗೆಡೆಸಿಕೊಳ್ಳಬಾರದು, ಅವನನ್ನು ತುಳಿಯಲು ಯತ್ನಿಸು, ಅವನ ಮನೆಗೆ ಬೆಂಕಿ ಬಿದ್ದಾಗ ಕೆಂಡದಿಂದ ಬೀಡಿ ಹಚ್ಚಿಕೋ, ಇವೆಲ್ಲವನ್ನು ಹೇಳಿಕೊಟ್ಟಿದ್ದು ನನ್ನ ಸಮಾಜ. ಕೆಲವು ಬಾರಿ ನೇರವಾಗಿ ಮತ್ತು ಕೆಲವು ಬಾರಿ ಹಿಂದುಗಡೆಯಿಂದ ಕಲಿಸಿದೆ. ಈಡಿ ಸಮುದಾಯ ಎದುರುಗಡೆ ಸಮಾಜವನ್ನು, ಸಮಾಜದ ಹಿತವನ್ನು ಬಯುಸುತ್ತಿರುವುದಾಗಿ, ಸಾಮಾನ್ಯ ಮನ್ನುಷ್ಯನಿಗೆ ಅರ್ಥವಾಗದ ಪದಗಳಾದ ನೈತಿಕತೆ, ಸಮಾಜ ಬದ್ದತೆ, ಮೌಲ್ಯಗಳು, ಎಂದೆಲ್ಲಾ ಬಿಂಬಿಸಿದರೂ ಇವೆಲ್ಲವೂ ವೇದಿಕೆಯ ಮೇಲೆ ಭಾಷಣ ಬಿಗಿಯುವುದಕ್ಕೆ ಯೋಗ್ಯ ಪದಗಳೇ ಹೊರತು, ಜೀವನ ಮಾಡುವುದಕ್ಕಲ್ಲವೆಂಬು ಕಟು ಸತ್ಯ.
ಯಾರು ಇಲ್ಲಿ ಯಾರಿಗೆ ಬದುಕುತ್ತಿದ್ದಾರೆ, ಗೊಂದಲದ ಬದುಕು, ಗೊಂದಲಮಯ ಮನಸ್ಥಿತಿ, ಎಲ್ಲವನ್ನು ತಿಳಿದಿರುವಂತೆ ಬೀಗುವವರೇ ಹೆಚ್ಚು, ಅರ್ಥವಾಗಲಿಲ್ಲವೆಂದರೇ ಅವನನ್ನು ಶತಮೂರ್ಖನೆಂದು, ದಡ್ಡನೆಂದು ಬಿಂಬಿಸಲಾಗುತ್ತದೆ. ಒಬ್ಬ ಮತ್ತೊಬ್ಬನಿಗೆ ನಡುಬೀದಿಯಲ್ಲಿ ಬೈಯ್ದರೇ ಅವನು ನಾಯಕನಾಗುತ್ತಾನೆ. ನೂರಾರು ಕೋಟಿ ನುಂಗಿದ ರಾಜಕಾರಣಿಗೆ ಅಭಿಮಾನಿಗಳು ಹುಟ್ಟುತ್ತಾರೆ, ಭ್ರಷ್ಟ ಅಧಿಕಾರಿಗಳಿಗೆ ಬೆಂಬಲಿಗರಿರುತ್ತಾರೆ, ಆಡಳಿತವಿದ್ದರೇ ಏನು ಬೇಕಾದರು ಮಾಡಬಹುದೆಂಬುದು ಅರಿವಾಗಿ ಎಲ್ಲರೂ ಅಧಿಕಾರ ಹಿಡಿಯುವ ರೇಸಿನಲ್ಲಿ ಓಡಾಡುತ್ತಾರೆ. ಲಂಚ ಕೊಟ್ಟು ಕೆಲಸ ಕೇಳುವ ಅಭ್ಯರ್ಥಿ ಲಂಚ ಹುಡುಕುವುದೇ ಜೀವನವಾಗಿಸಿಕೊಳ್ಳುತ್ತಾನೆ. ಹಣದ ಆಸೆಯಿಂದಾಗಿ, ವ್ಯವಸಾಯ ಬಿಟ್ಟು ವ್ಯಾಪಾರಕ್ಕಿಳಿಯುತ್ತಾನೆ, ತಲೆಮಾರುಗಳಿಂದ ಬಂದ ವೃತ್ತಿ ಜೀವನ ಬೇಸರವಾಗುತ್ತದೆ, ಸುಂದರವಾದ ಹಳ್ಳಿ ಏನೇನು ಇಲ್ಲದ ಮರುಗಾಡಾಗತೊಡಗುತ್ತದೆ. ಮರುಗಾಡಿನಲ್ಲಿಯೂ ಚಿತ್ರೀಕರಣ ನಡೆಯುತ್ತಿರುತ್ತದೆ. ಇವೆಲ್ಲವು ಬಂದು ಹೋಗುವ ನಡುವೆ ಎಚ್ಚರವಾಗುತ್ತದೆ, ಸ್ನಾನ ಮಾಡಿ ಆಫೀಸಿಗೆ ಲಗ್ಗೆಯಿಟ್ಟು ದುಡಿಯಬೇಕು ಅಷ್ಟೇ.

14 ಜನವರಿ 2011

ಹೀಗೊಮ್ಮೆ ಮಾಡ ಹೊರಟರೆ ಹೇಗೆ?

ಜೀವನದ ಬಗೆಗೆ ಮಾತನಾಡುತ್ತಿರುವಾಗ, ಒಮ್ಮೊಮ್ಮೆ ದಿಡೀರನೆ ಬಹಳ ಭಾವುಕರಾಗಿ ಮಾತನಾಡಲಾರಂಬಿಸುತ್ತೇವೆ. ಇದು ಕೇವಲ ಭಾವುಕತೆಯಲ್ಲ, ನಮ್ಮೊಳಗಿರುವ ನೋವು ಅಡಗಿರುತ್ತದೆ, ಸಮಾಜದ ವಿರುದ್ದ, ಅಥವಾ ಮತ್ತಾವುದೋ ವ್ಯವಸ್ಥೆಯಿಂದ ಬೇಸತ್ತ ನೋವು ಇಲ್ಲಿ ಸೇರಿರುತ್ತದೆ. ದಿನ ನಿತ್ಯ, ಕೇವಲ ಮೋಸ, ವಂಚನೆ, ದ್ರೋಹ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಹೀಗೆ ಇಂಥವುಗಳನ್ನೇ ಕಂಡು ಕರಗಿಹೋಗಿರುವಾಗ ಇದ್ದಕ್ಕಿದ್ದ ಹಾಗೆ ಕೋಪ ಬರುವುದು ಸರಿಯೆ! ಒಂದು ಕಡೆ ವಿದ್ಯಾವಂತ ಸ್ನೇಹಿತರೆಲ್ಲರೂ ಸೇರಿ ಸಮಾಜದ ಬಗೆಗೆ ಚಿಂತಿಸುತ್ತಿರುವಾಗ, ನಡುವಲ್ಲಿಯೇ, ಯಾರೋ ಒಬ್ಬ ಸ್ನೇಹಿತ, ಲಂಚಕೊಟ್ಟೂ ಪೋಲಿಸ್ ಆದ, ಮತ್ತೊಬ್ಬ ಕೆ ಎ ಎಸ್ ಮಾಡಿದ, ಮತ್ತೊಬ್ಬ ಇಪ್ಪತ್ತು ಲಕ್ಷ ವರದಕ್ಷಿಣೆಗೆ ಸೋತ ಎಂದಾಗ, ನಮಗೆ ಎನಿಸುವುದಿಷ್ಟೇ ಊರ ಉಸಾಬರಿ ನಮಗೇಕೆ? ಯಾರಿಗೂ ಇಲ್ಲದ ಉತ್ಸಾಹ ಅಭಿಮಾನ ನಮಗೇಕೆ. ಭೂಮಿ ಹುಟ್ಟಿ ಸಾವಿರಾರು ವರ್ಷವಾಗಿದೆ, ಕೋಟ್ಯಾಂತರ ಜನ ಸತ್ತಿದ್ದಾರೆ, ಸಾಧಿಸಿದ್ದಾರೆ, ಯಾವುದೂ ಶಾಶ್ವತವಲ್ಲ, ನಾವೆಕೆ ಹೊಡೆದಾಡಬೇಕು, ಮನೆ ಮಂದಿಯಿಂದ ಶಾಪ ಹಾಕಿಸಿಕೊಳ್ಳಬೇಕು?

ರೇಡಿಯೋ ದಲ್ಲಿ, ಟಿವಿಗಳಲ್ಲಿ ನಿರೂಪಕರಾಗಿರುವವರು ಕನ್ನಡಿಗರು, ಕರುನಾಡಲ್ಲಿ ಹುಟ್ಟಿದವರು, ಕನ್ನಡದ ಹೆಸರಲ್ಲಿ ಅನ್ನ ತಿನ್ನುತ್ತಿರುವವರು ಆದರೇ ಅವರ ಆ ಪದಗಳ ಉಚ್ಚಾರಣೆ, ಕನ್ನಡದ ಬಗೆಗಿರುವ ಧೋರಣೆ ಮಾತ್ರ ಕಂಡನೀಯ. ಒಬ್ಬೊಬ್ಬ u2 ನಲ್ಲಿ ಮಾತನಾಡುವ ನಿರೂಪಕರನ್ನು ನೋಡಿ, ಅವರ ಭಾಷೆಯನ್ನು ಕೇಳಿ, ಎಫ್ ಎಂ ನಲ್ಲಿ ಮಾತನಾಡುವ ಮಹನೀಯರನ್ನು ಆಲಿಸಿನೋಡಿ, ಅವರು ಹಂಗಿಸಲು ಆಯ್ಕೆ ಮಾಡುವ ವಿಷಯಗಳು ನಾಡಿನ ಗಣ್ಯ ವ್ಯಕ್ತಿಗಳನ್ನ! ರಾಜ್ಯದ, ನಾಡಿನ, ಭಾಷೆಯ ಬಗೆಗೆ ಸ್ವಲ್ಪವೂ ಗಂಭೀರತೆಯಿಲ್ಲದೆ ತಾವು ಆಡಿದ್ದೆ ಆಟ ಅಥವಾ ಭಂಡತನವನ್ನೋ ಮೆರೆದುಕೊಳ್ಳುವುದೇ ಇಂಥವರ ಜಾಯಮಾನವೆಂದರೇ ನಾವೇಕೆ ಹೊಡೆದಾಡಬೇಕು? ಸಮಾಜ ಹಾಳಾದರೇ ಎಲ್ಲರಿಗೂ ಹಾಳೆಂದು ನಮ್ಮ ಮನ್ನಸೇಕೆ ಕೇಳುವುದಿಲ್ಲ. ದೇಶ ಉದ್ದಾರ ಮಾಡಲು ಸಾಧ್ಯವಿಲ್ಲ, ಆದರೇ ಕೊಳೆತು ನಾರುತ್ತಿರುವ ಸಮಾಜದಲ್ಲಿ ಬದುಕಲು ಅರ್ಹರಲ್ಲ, ಹುಟ್ಟಿದ್ದು ತಪ್ಪಾ, ಅಥವಾ ಭಾವುಕರಾಗಿ, ದೇಶದ, ನಾಡಿನ, ಭಾಷೆಯ ಬಗೆಗೆ ಒಲವನ್ನು ಬೆಳೆಸಿಕೊಂಡದ್ದು ತಪ್ಪಾ?
ಗಾಂಧೀಜಿ ದೇಶದ ಸ್ವಾತಂತ್ರ್ಯ ಶ್ರಮ ಪಟ್ಟ ಅರಿವು ನಮಗೆಂದಿಗೂ ಬರುವುದಿಲ್ಲ, ಆದರೇ ಫೇಸ್ ಬುಕ್ ನಲ್ಲಿ ನಮ್ಮ ದೇಶದ ನೋಟಿನಲ್ಲಿರುವ ರಾಷ್ಟ್ರಪಿತನಿಗೆ ಪೆನ್ಸಿಲ್, ಪೆನ್ನಿನಿಂದ ವಿಚಿತ್ರವಾಗಿ ಬರೆದು ಗಡ್ಡ ಮೀಸೆ ಬರೆದರೆ, ಪೂಜಾ ಗಾಂಧಿಯಂತವರು ಇಷ್ಟಪಟ್ಟಿರುತ್ತಾರೆ. ಚೀನಾ ದೇಶ ಒಂದು ಕಡೆ ಅವಕಾಶಕ್ಕೆ ಕಾಯುತ್ತಿದ್ದರೆ, ಪಾಕಿಸ್ತಾನ ದೇಶದೊಳಗೆ ನುಗ್ಗಿ ಹಾವಳಿ ನೀಡುತ್ತಿದ್ದರೂ ನಮ್ಮ ದೇಶದ ಬಗ್ಗೆ ನಮಗೆ ಗೌರವ ಬಂದಿಲ್ಲವೆಂದರೇ ನಮ್ಮ ವಿದ್ಯಾವಂತ ಜನರನ್ನು ಅಭಿನಂದಿಸಲೇಬೇಕು. ನಾವು ನಮ್ಮಗಳ ಕೆಲಸವನ್ನು ಮಾಡಿದರೇ ನಮ್ಮ ದೇಶ ಉನ್ನತಿ ಹೊಂದುತ್ತದೆಂಬುದರಲ್ಲಿ ಅನುಮಾನವಿಲ್ಲ, ಆದರೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಹಂ ನೊಂದಿಗೆ ತಮ್ಮದೇ ಸರಿಯೆಂದು ಮುಗಿಬಿದ್ದು, ಬೀದಿಗಿಳಿದು ಜಗಳವಾಡುತ್ತಿರುವಾಗ ಮಾಡುವುದೇನು? ಪತ್ರಿಕಾರಂಗದವರು ಸುದ್ದಿಗೆಂದು ಯಾವ ಮಟ್ಟಕ್ಕೆ ಬೇಕಿದ್ದರೂ ಇಳಿಯಲು ಸಿದ್ದ, ಇನ್ನೂ ರಾಜಕೀಯದ ವಿಷಯ ಬೇಡವೇ ಬೇಡ, ಪರಿಸರ, ನೀರು ನಿರ್ವಹಣೆಯ ವಿಷಯಕ್ಕೆ ಬಂದರೇ, ದೊಡ್ಡ ಯುದ್ದವೇ ನಡೆಯುತ್ತಿದೆ, ಒಬ್ಬರು ಮಳೆ ನೀರು ಕೊಯ್ಲು ಎಂದರೇ ಮತ್ತೊಬ್ಬ ಬೇಡವೇ ಬೇಡವೆನ್ನುತ್ತಾನೆ, ಒಂದು ತಂಡ ಪರಿಸರವೆಂದರೆ ಮತ್ತೊಂದು ತಂಡ ನೀರಾವರಿ ಎನ್ನುತ್ತಾರೆ.
ದೊಡ್ಡ ಅಣೆಕಟ್ಟು ಕಟ್ಟಿ, ಭೂಮಿಗೆ ರಸಗೊಬ್ಬರ ಸುರಿದು, ಭೂಮಿಯನ್ನು ಸಂಪೂರ್ಣ ನಾಶಮಾಡುವ ತನಕ ಸುಮ್ಮನಿರುವುದಿಲ್ಲ ನಮ್ಮ ರೈತಾಪಿ ಜನ. ಮೂರು ದಿನದ ಕೆಲಸ ಭತ್ತ ಬೆಳೆಯುವುದು ಮಿಕ್ಕಿದ ದಿನಗಳಲ್ಲಿ ಹಳ್ಳಿ ರಾಜಕೀಯ ಮಾಡಿಕೊಂಡಿರಬಹುದೆಂಬುದು ನಮ್ಮ ಜನರ ಆಶಯ. ಹೆಚ್ಚು ಹಣ ಸಂಪಾದಿಸಿದರೇ ಬದುಕಲು ಸಾಧ್ಯವೆಂಬುದನ್ನು ಪ್ರತಿಯೊಬ್ಬ ಭಾರತೀಯನೂ ಪಾಲಿಸತೊಡಗಿದ್ದಾನೆ. ದೇಶದ ಅಭಿವೃದ್ದಿಯಿರುವುದು ತನ್ನಲ್ಲಿರುವ ಪರಿಸರ ಮತ್ತು ನೈಸರ್ಗಿಕ ಸಂಪತ್ತಿನಿಂದವೆಂಬುದನ್ನು ನಮ್ಮವರೇಕೋ ತಿಳಿಯುತ್ತಿಲ್ಲ. ನಾನು ಇಷ್ಟೇಲ್ಲಾ ಬೊಗಳೆ ಹಾಕಿದಮೇಲೆ ವಿಷಯಕ್ಕೆ ಬರುತ್ತೇನೆ. ಒಂದು ಊರು ಅಥವಾ ಒಂದು ತಾಲ್ಲೂಕು, ಅಥವಾ ಒಂದು ಜಿಲ್ಲೆಯ ಅಭಿವೃದ್ದಿಯಾಗಬೇಕಾದರೇ ಏನು ಮಾಡಬೇಕು? ಅದಕ್ಕೆ ನನ್ನಲ್ಲಿ ಬಹಳ ದಿನಗಳ ಹಿಂದೆ ಹುಟ್ಟಿ ಈಗ ಒಂದು ರೂಪು ಪಡೆಯುತ್ತಿರುವ ಉತ್ತರೆವಿದೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಹೀಗೊಮ್ಮೆ ಮಾಡ ಹೊರಟರೆ ಹೇಗೆ?
ನಮ್ಮ ಸಮಾಜದ ಬಹುತೇಕ ಮಂದಿ ಸದಾ ಸರ್ಕಾರವನ್ನು ವ್ಯವಸ್ಥೆಯನ್ನು ದೂರುತ್ತಾ ಅನ್ಯಮನಸ್ಕರಾಗಿ ಜೀವನ ಸಾಗಿಸುತ್ತಿದ್ದೇವೆ. ಆಗುವುದಕ್ಕೆಲ್ಲಾ ಶನೀಶ್ವರನೇ ಕಾರಣವೆಂಬುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಒಮ್ಮೆ ವಿಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೇ ಆಗುವ ಅನುಕೂಲತೆಗಳೇನು? ಅನುಕೂಲತೆವಿಲ್ಲವೆಂದರೂ ಅನಾನೂಕೂಲತೆಗಳಿಲ್ಲವೆಂಬುದು ನನ್ನ ಅನಿಸಿಕೆ. ನಾವು ಒಂದು ದಿನ ಹೀಗೆ ಆಲೋಚಿಸಬಾರದೇ? ನಾನೊಬ್ಬ ವ್ಯಕ್ತಿಗತವಾಗಿ ಯೋಚಿಸಿದರೇ, ನಾನು ದಿನದಲ್ಲಿ ಕಚೇರಿಯಲ್ಲಿ ಎಂಟುಗಂಟೆಗಳ ಕಾಲ ಕೆಲಸ ಮಾಡುತ್ತೇನೆ, ಮನೆಯಿಂದು ಹೋಗುವುದುಕ್ಕೆ ಬರುವುದಕ್ಕೆ ಹೆಚ್ಚಿನ ನಾಲ್ಕು ಗಂಟೆಗಳು ಬೇಕು, ನಿದ್ದೆಗೆಂದು ಎಂಟು ಗಂಟೆಗಳು ಕಳೆದರೂ, ಇನ್ನೂ ಮೂರರಿಂದ ನಾಲ್ಕು ಗಂಟೆಗಳು ನನ್ನಲ್ಲಿಯೇ ಉಳಿಯುತ್ತದೆ. ಆ ಸಮಯವನ್ನು ಏನು ಮಾಡಬಹುದು? ಅದರಲ್ಲಿ ಕೇವಲ ಒಂದು ಗಂಟೆಯನ್ನು ನಾನು ನನ್ನ ದೇಶ ಸೇವೆಗೆ ಸಲ್ಲಿಸಿದರೇ ಹೇಗೆ? ನಮಗೆ ತಿಳಿದಿರುವಂತೆ ಪ್ರತಿಯೊಬ್ಬನಲ್ಲಿಯೂ ಕಂಪ್ಯೂಟರ್ ಇದೆ, ಇಂಟರ್ನೆಟ್ ಇದೆ, ಮಹಿತಿ ಕಗೆಟಕುತ್ತಿದೆ. ಸಮಾಜದ ಅಭಿವೃದ್ದಿಗೆ ತನ್ನ ದಿನದ ಒಂದು ಗಂಟೆಯನ್ನು ಮನೆಯಿಂದಲೇ ಕೊಡಲು ಸಾಧ್ಯವಿಲ್ಲವೇ? ಮನೆಯಿಂದ ಕಚೇರಿಗೆ ಹೋಗುವಾಗ ಅಥವಾ ಬರುವಾಗ ನೀಡಲಾಗುವುದಿಲ್ಲವೇ? ಸಮಾಜದ ಏಳಿಗೆಗೆ ಮಾಡಬೇಕಿರುವುದೇನು?
ಸಮಾಜದ ಅಭಿವೃದ್ದಿಯಾಗಬೇಕೆಂದರೆ, ಸರ್ವತೋಮುಖ ಅಭಿವೃದ್ದಿ ಮುಖ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳು ಮುಖ್ಯವಾಗುತ್ತವೆ. ಉದಾಹರಣೆಗೆ, ಶಿಕ್ಷಣ, ಭಾಷೆ, ಸಂಸ್ಕೃತಿ, ಕಲೆ, ಕೃಷಿ, ಪರಿಸರ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆ, ನೀರು, ಅಂತರ್ಜಲ, ತಾಂತ್ರಿಕತೆ, ವಿಜ್ನಾನ, ನೈತಿಕತೆ, ಆರ್ಥಿಕತೆ, ಸುರಕ್ಷತೆ, ಆರೋಗ್ಯ, ಮಹಿಳಾ ಸಬಲೀಕರಣ, ನೈರ್ಮಲೀಕರಣ, ಕೈಗಾರಿಕೆಗಳು,

ಸರ್ಕಾರ ಈಗಾಗಲೇ ಎಲ್ಲಾ ರಂಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕಾಗಿಯೇ ಒಂದೊಂದು ಇಲಾಖೆಗಳು, ಅಧಿಕಾರಿ ವರ್ಗಗಳು ಇವೆ. ಆದರೇ ಇವರೆಲ್ಲರೂ ಸರ್ಕಾರದಿಂದ ಬರುವ ಹಣವನ್ನು ಅಭಿವೃದ್ದಿಗಾಗಿ ಸದುಪಯೋಗಪಡಿಸುತ್ತಿದ್ದಾರೆಯೇ? ಸರ್ಕಾರ ಮಾಡುವ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ಸೇರುತ್ತಿವೆಯೇ?ಒಂದೊಂದು ಇಲಾಖೆಗಳು ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ವ್ಯಯಿಸುತ್ತಿವೆ, ಆದರೇ ಅಭಿವೃದ್ದಿಯನ್ನು ಗಮನಿಸಿದರೇ ಮಾತ್ರ ಶೂನ್ಯ. ಬಂದ ಹಣವೆಲ್ಲಾ ಪೋಲಾದದ್ದು ಎಲ್ಲಿ? ಇಲ್ಲಿ ಯಾವುದೇ ತಾರತಮ್ಯ ಮಾಡದೇ ಒಂದೇ ಒಂದು ತಾಲ್ಲೂಕನ್ನು ತೆಗೆದುಕೊಂಡು ಅದನ್ನು ಮಾದರಿಯನ್ನಾಗಿಸಲು ಮಾಡಬೇಕಿರುವ ನಿಟ್ಟಿನಲ್ಲಿ ನಾವೇಕೆ ಚಿಂತಿಸಬಾರದು? ಚಿಂತಿಸಿದರೇ ಬರುವ ಲಾಭವೇನು? ಚಿಂತನೆಯಿಂದ ದೇಶದ ಉದ್ದಾರ ಸಾಧ್ಯವಿದೆ.

ನಮ್ಮಲ್ಲಿ ಪ್ರತಿಭೆಯಿರುವ ದೇಶದ ಅಭಿವೃದ್ದಿಯ ಬಗೆಗೆ ಕನಸುಗಳನ್ನು ಕಾಣುತ್ತಿರುವ ಕಂಡಿರುವ ಅನೇಕರಿದ್ದಾರೆ. ಅವರೆಲ್ಲರ ಕನಸುಗಳನ್ನು ಒಂದೆಡೆಗೆ ತಂದು ಸಾಕಾರಗೊಳಿಸುವ ಪ್ರಯತ್ನವೇ ಹೀಗೊಮ್ಮೆ ಮಾಡಿದರೆ ಹೇಗೆ? ಯಾರು ದೈಹಿಕವಾಗಿ ನಮ್ಮೊಂದಿಗೆ ಇರಬೇಕಾದದ್ದು ಇಲ್ಲ, ಇರುವಲ್ಲಿಯೇ ಕುಳಿತು, ಅವರು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಂಡರೇ ಸಾಕು. ಒಂದೊಂದು ವಿಷಯಗಳಿಗೂ ಒಂದೊಂದು ಯೋಜನೆಗಳನ್ನು ರೂಪಿಸಿ, ಒಟ್ಟಾರೆ ಯೋಜನೆಗೆ ತೆಗಳುವ ವೆಚ್ಚವನ್ನು ಸಿದ್ದಪಡಿಸುವುದು ನಮ್ಮ ಗುರಿ. ಉದಾ:ಗೆ ವಿಜ್ನಾನ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಬಗೆ ಹೇಗೆ? ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ವಿಷಯದಲ್ಲಿ, ಅಥವಾ ಒಂದೊಂದು ವಸ್ತುವಿನ ಬಗ್ಗೆ ಆಸಕ್ತಿ ಹೊಂದಿರುತ್ತಾನೆ. ಭೌತಶಾಸ್ತ್ರದ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಒಂದೆಡೆಗೆ ಕೂಡಿಸಿ, ಅದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರಿಗೆ ಹೆಚ್ಚಿನ ಜ್ನಾನ ಒದಗಿಸಿಕೊಡಬಹುದು. ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಕ್ಕಳಿಗೆ ಇಂದಿನಿಂದಲೇ ಜಾಗೃತಿ ಮೂಡಿಸಿದರೇ ಮುಂದಿನ ಭಾರತ ಪ್ರಜ್ವಲಿಸುವುದು.

ರೈತರಿಗೆ, ಮಾದರಿ ರೈತರನ್ನು ಕರೆಸಿ ತರಬೇತಿ ನೀಡುವುದರಿಂದ ಅವರ ಅನುಭವಕ್ಕೆ ಬರುವುದು. ಅತಿ ಹೆಚ್ಚು ಹಾಳಾದ ಪರಿಸರವನ್ನು ಇಲ್ಲಿನ ರೈತರಿಗೆ ತೋರಿಸಿದರೇ ಅವರೇ ಎಚ್ಚೆತ್ತುಕೊಳ್ಳೂತ್ತಾರೆ. ರೈತ ಭೂಮಿಯನ್ನು ಪ್ರೀತಿಸುವಂತಾಗಬೇಕು. ಭೂಮಿ ಒಂದು ವಸ್ತುವೆಂಬುದನ್ನು ಮರೆತು ಅದು ನಮ್ಮೊಳಗಿರುವ ನಮ್ಮದೇ ಉಸಿರೆಂಬುದನ್ನು ಅರ್ಥೈಸಿಕೊಳ್ಳಬೇಕು.
ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯಬೇಕು. ನದಿ ಕೊಳ್ಳದ ಬಹುತೇಕ ಜನರು, ಮರಳು ತೆಗೆಯುವುದನ್ನು ನಿತ್ಯ ದುಡಿಮೆಯಾಗಿಸಿಕೊಂಡಿದ್ದಾರೆ, ಅದರಿಂದಾಗುವ ಪ್ರತಿಯೊಂದು ದುಷ್ಪರಿಣಾಮಗಳನ್ನು ಚಿತ್ರಗಳ ಮೂಲಕ ಅಥವಾ ಸಿನೆಮಾಗಳ ಮೂಲಕ ತಿಳಿಸಬೇಕು. ವಿದ್ಯಾವಂತ ಸಮಾಜ ಎಚ್ಚೆತ್ತಿಕೊಳ್ಳಬೇಕು, ನಾವು ದುಡಿಯುವುದು, ಕುಡಿಯುವುದು, ಕುಣಿಯುವುದೇ ಬದುಕೆಂಬ ಭ್ರಮೆಯಿಂದ ಹೊರಗೆ ಬರಬೇಕು. ಕೆಲವೊಂದು ಖಾಸಗಿ ಕಂಪನಿಗಳು ಅದೆಷ್ಟರ ಮಟ್ಟಿಗೆ ತಪ್ಪುಗಳನ್ನು ಮಾಡುತ್ತಿದ್ದಾರೆಂದರೇ, ಅರ್ಹ ಅಭ್ಯರ್ಥಿಗಳಿದ್ದರೂ ಅನರ್ಹರನ್ನೇ ತುಂಬಿಕೊಂಡು ದೊಂಬರಾಟ ನಡೆಸುತ್ತಿದ್ದಾರೆ. ಅನೈತಿಕತೆಯ ಪರಮಾವಧಿ ತಲುಪಿರುವ ಮಂದಿ ಸ್ವಲ್ಪ ಆಲೋಚಿಸಬೇಕಾಗಿದೆ.

10 ಜನವರಿ 2011

ಸಿಇಇಕೊ ಹುಟ್ಟಿನ ಹಿಂದೆ!!!

ನಾನು ಮತ್ತು ನನ್ನ ಅನೇಕಾ ಸ್ನೇಹಿತರು ಸಮಾಜದ ಬಗ್ಗೆ ನಮ್ಮ ವ್ಯವಸ್ಥೆಯ ಬಗ್ಗೆ ಆಗ್ಗಾಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ಉಗಿಯುತ್ತಿದ್ದೆವು, ಬೈಯ್ದುಕೊಳ್ಳುತ್ತಿದ್ದೆವು, ಕ್ರಮೇಣ ನಮ್ಮ ದೇಶದ ಬಗೆಗೆ ನಮಗಿರುವ ಅಭಿಮಾನ ಒಂದು ಕಡೆಗೆ, ನಿಸರ್ಗದೆಡೆಗಿರುವ ಒಲವು ಮತ್ತೊಂದು ಕಡೆಗೆ ಆದರೂ ಈ ರಾಜಕಾರಣಿಗಳು, ಸರ್ಕಾರಿ ಉದ್ಯೋಗಿಗಳು ಸಮಾಜದೆಡೆಗೆ ತೋರುವ ನಿರಾಸಕ್ತಿ ನಮಗೆ ಬಹಳಷ್ಟು ಬಾರಿ ನೋವುಂಟುಮಾಡಿದೆ. ನಮ್ಮ ವಿವಿಗಳಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಸಂಬಳ ಪಡೆದು, ಮೂರು ಕಾಸಿನ ಕೆಲಸವನ್ನು ಮಾಡದೆ, ಸದಾ ಜಾತಿ ರಾಜಕಾರಣ ಮಾಡುತ್ತ, ಸಹದ್ಯೋಗಿಗಳ ವಿರುದ್ದ ಕತ್ತಿ ಮಸೆಯುತ್ತಾ ಇರುವ ಹೊಟ್ಟೆಬಾಕರನ್ನು ಕಂಡು ಅಸಹ್ಯ ಹುಟ್ಟುವ ಸಮಯದಲ್ಲಿ ಮನಸ್ಸಿಗೆ ಮೂಡಿ ಬಂದದ್ದು ಇದಕ್ಕೆಲ್ಲ ಕಾರಣವೇನು? ಪರಿಹಾರವೇನು?
ಸದಾ ಸಮಸ್ಯೆಯನ್ನೇ ಉತ್ಪ್ರೇಕ್ಷೆಯಿಂದ ನೋಡುವ ಪತ್ರಕರ್ತ ಸಮಾಜ, ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಕೆಲಸ ಮಾಡದೆ ದಿನಕ್ಕೆ ಆರು ಬಾರಿ ಟೀ ಕುಡಿದು ರಾಜಕೀಯ ಮಾತನಾಡುತ್ತ ಬರುವ ಸರ್ಕಾರಿ ನೌಕರರನ್ನು ಮರೆತು, ನಾವುಗಳೇ ಒಂದು ಸುಂದರ ಸಮಾಜ ಕಟ್ಟುವ ಕನಸ್ಸನ್ನು ಕಾಣುವುದರಲ್ಲಿ ತಪ್ಪೇನು? ಸುತ್ತಲೂ ಶತ್ರುಗಳಿರುವಾಗ ಎತ್ತ ಕಡೆಗೆ ಗುಂಡು ಹಾರಿಸಿದರೂ ಶತ್ರು ಸಾಯುತ್ತಾನೆ. ಹಾಗೇಯೇ, ನಮ್ಮ ದೇಶಕ್ಕೆ ಎಲ್ಲವೂ ಸಮಸ್ಯೆಯಂತೆಯೇ ಆಗಿ, ಸಮಸ್ಯೆಯ ಭಾರತವಾಗಿರುವಾಗ ಯಾವ ಸಮಸ್ಯೆ ಬಗೆಹರಿದರೂ ಸಂತಸದ ವಿಷಯ. ಈ ಶತಮಾನದ ಸಮಸ್ಯೆಗಳಲ್ಲಿ ಬಹುಮುಖ್ಯವಾದವುಗಳೆಂದರೆ ಪರಿಸರ ಜಾಗೃತಿ, ನೀರಿನ ಸಮಸ್ಯೆ, ಆರೋಗ್ಯ, ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ನಿಟ್ಟಿನಲ್ಲಿ ಶುರುವಾದದ್ದು, ಸೆಂಟರ್ ಫಾರ್ ಎನ್ವಿರಾನ್ ಮೆಂಟ್, ಆಂಡ್ ಕಮ್ಯುನಿಟಿ (ಸಿಇಇಕೊ), ಬಾನುಗೊಂದಿಯಲ್ಲಿ ಇದರ ಪ್ರಧಾನ ಕಛೇರಿಯಿದೆ. ಸಂಸ್ಥೆಯು ಸಾರ್ವಜನಿಕ ದತ್ತಿಯಾಗಿ ನೋಂದಾಯಿಸಲ್ಪಟ್ಟಿದೆ.
ಸಂಸ್ಥೆಯು ಸದ್ಯದಲ್ಲಿ ಜಲಸಂಪನ್ಮೂಲಗಳ ಅಭಿವೃದ್ದಿ ಮತ್ತು ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮನ್ನು ನಡೆಸುತ್ತಿದೆ. ಪ್ರಾರ್ಥಮಿಕವಾಗಿ ಅರಕಲಗೂಡು ತಾಲ್ಲೂಕಿನ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ನೀರು, ಪರಿಸರದ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಂಡಿದ್ದರು ಅದು ಪರೀಕ್ಷೆಯ ಉದ್ದೇಶದಿಂದ ತಿಳಿದುಕೊಂಡಿದ್ದಾರೆ. ಅವರ ಆ ಜ್ನಾನವನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಎಲ್ಲಾ ವಿದ್ಯಾರ್ಥಿಗಳು, ನೀರಿನ ಲಭ್ಯತೆಯ ಬಗ್ಗೆ ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟರು. ನೀರಿನ ಮಹತ್ವ, ಸಂರಕ್ಷಣೆಯ ವಿಧಾನಗಳು, ಕಲುಷಿತ ನೀರಿನಿಂದಾಗು ಪರಿಣಾಮಗಳು, ಶುದ್ದಿಕರಣ, ಮಳೆ ನೀರು ಕೊಯ್ಲು, ಅಂತರ್ಜಲ ಹೆಚ್ಚಿಸುವುದು, ಅಮೆಜಾನ್ ನದಿಯಿಂದ ಹಿಡಿದು ಪಕ್ಕದಲ್ಲಿಯೇ ಹರಿಯುವ ನದಿಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಸರ್ಕಾರಿ ಶಾಲೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ, ಶಿಕ್ಷಕರು ಎಡವಿದ್ದಾರೆ. ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ, ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೆ, ಮುಂದಿನ ಪೀಳಿಗೆ ನೀರಿನ ಬಗ್ಗೆ ತಾತ್ಸಾರ ತೋರುವುದಿಲ್ಲವೆಂಬುದು ನನ್ನ ಅನಿಸಿಕೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...