27 ಫೆಬ್ರವರಿ 2012


ಒಂದು ಊರಿನಲ್ಲಿ ಒಬ್ಬ ಋಷಿ ಇದ್ದನಂತೆ, ಅವನು ಮಹಾ ಸಂಯಮದ ವ್ಯಕ್ತಿ, ಯಾರಿಗೂ ಎಂದೂ ನೋವು ಮಾಡಿದವನಲ್ಲ, ಒಂದು ಹುಳುವಿಗೂ ತೊಂದರೆ ಕೊಟ್ಟವನಲ್ಲ. ಅವನ ಮೇಲೆ ಅಪಾರ ಪ್ರೀತಿ ವಿಶ್ವಾಸ ಬೆಳೆಯಿತ್ತಂತೆ. ಬರ ಬರುತ್ತಾ ಅವನು ನಾನು ದೇವರಿಗಿಂತಲೂ ಮೇಲು, ಎಲ್ಲಾ ದೇವರು ಒಬ್ಬರಲ್ಲ ಒಬ್ಬರಿಗೆ ನೋವು ಕೊಟ್ಟಿದ್ದಾರೆ, ಸಾಯಿಸಿದ್ದಾರೆ. ಆದರೇ ನಾನು ಯಾರಿಗೂ ನೋವನ್ನುಂಟು ಮಾಡಿಲ್ಲ, ನಾನು ದೇವರಿಗಿಂತಲೂ ಮಿಗಿಲೆಂಬ ಅಹಂಕಾರ ಬಂತು. ಇದನ್ನು ನೋಡಿದ ದೇವರು, ಅವನು ತಪಸ್ಸು ಮಾಡುವ ಸಮಯದಲ್ಲಿ, ಅವನ ಗಡ್ಡದೊಳಕ್ಕೆ, ಇರುವೆಗಳು ಹೋಗುವಂತೆ ಮಾಡಿದ. ಸನ್ಯಾಸಿ ಕೋಪದಿಂದ ಕುಪಿತನಾಗಿ, ಗಡ್ಡದ ಮೇಲೆ, ಅವನ ಮೈಮೇಲೆ ಇದ್ದ ಎಲ್ಲಾ ಇರುವೆಗಳನ್ನು ಸಾಯಿಸಿಬಿಟ್ಟ. ಕ್ಷಣದಲ್ಲಿ ಸತ್ತು ಇರುವೆಗಳ ಸಂಖ್ಯೆ ಸಾವಿರಾರು. ಸಾವಿರಾರು ಜೀವಿಗಳನ್ನು ಕೊಂದ ತಪ್ಪಿಗೆ ಅವನು ಇಲ್ಲಿಯ ತನಕ ಕಾಪಾಡಿದ ಎಲ್ಲ ಆದರ್ಶಗಳು ಮಣ್ಣು ಪಾಲಾದವಂತೆ. ಹಾಗೇಯೇ ನಾವು ನಮ್ಮ ಜೀವನದಲ್ಲಿ ಹಾದಿಯಲ್ಲಿ ಹೋಗುವವರ ಬರುವವರ ಬಗ್ಗೆ ಬಹಳ ಕಾಳಜಿವಹಿಸುತ್ತೇವೆ. ಯಾರಿಗೂ ಅನ್ಯಾಯ ಮಾಡದೇ, ನೋವು ಕೊಡದೆ ಬದುಕನ್ನು ಕಟ್ಟಿಕೊಂಡು ಬರುತ್ತೇವೆ, ಆದರೇ ನಮಗೆ ತಿಳಿಯದೇ ಮಾಡುವ ಕೆಲವು ತಪ್ಪುಗಳು ನಮ್ಮನ್ನೇ ನಂಬಿಕೊಂಡು ಬಂದವರ ಜೀವನವನ್ನೇ ನುಚ್ಚುನೂರಾಗಿಸುತ್ತದೆ. ನಾನು ಯಾರಿಗೂ ಅನ್ಯಾಯ ಮಾಡದೇ ಹೋದರೂ, ಪ್ರಪಂಚಕ್ಕೆಲ್ಲಾ ಒಳ್ಳೆಯವನೆನಿಸಿಕೊಂಡರೂ ಕುಡಿದ ಅಮಲಿನಲ್ಲಿ ನನ್ನ ಹೆಂಡತಿಗೆ ಹೊಡೆದರೇ ನನ್ನೆಲ್ಲಾ ಆದರ್ಶಗಳು ಮಣ್ಣು ಪಾಲಾಗುತ್ತದೆ. ನನ್ನೀಡಿ ಜೀವನವೆಲ್ಲಾ ಮರುಗಿದರೂ ನಾನು ಹಿಂದಿನ ವ್ಯಕ್ತಿ ಆಗಲಾರೆ. ಆದರ್ಶಗಳು ಬಹಳಷ್ಟು ಬಾರಿ ನಮ್ಮನ್ನು ಕಷ್ಟಕ್ಕೆ ಈಡು ಮಾಡಿಸುತ್ತವೆ. ಕೋಟ್ಯಾಂತರ ರೂಪಾಯಿ ಲಂಚ ಹೊಡೆದು, ತಲೆ ಹಿಡಿದು, ತಲೆ ಹೊಡೆದವರಿಗೆ ಅಂಥಹ ನೋವಾಗುವುದಿಲ್ಲ, ಆದರೇ ಐವತ್ತು ಪೈಸೆಯನ್ನು ಒಂದು ರೂಪಾಯಿಯನ್ನೋ ಎಲೆ ಮಾರುವವರಿಗೆ, ಹೂ ಮಾರುವವರಿಗೆ ಮೋಸ ಮಾಡಿದ ತಕ್ಷಣ ಎದೆ ಉರಿಯುತ್ತದೆ. ಸಣ್ಣ ಸಣ್ಣ ವಿಷಯಗಳು ನಮ್ಮನ್ನು ಕಾಡುತ್ತವೆ. ಆದರೇ ಕೆಲವೊಮ್ಮೆ ನಮ್ಮ ಬಗ್ಗೆ ಅದೆಷ್ಟೇ ಕ್ರೂರವಾಗಿ ವರ್ತಿಸಿದರೂ ಅದನ್ನು ನಾವು ಸಹಿಸಲೇಬೇಕಾಗುತ್ತದೆ. ಯಾಕೆಂದರೇ, ನಾವು ಯಾರಿಗೂ ಅನ್ಯಾಯ ಮಾಡಿಲ್ಲವೆಂಬುದು ನಮಗೆ ತಿಳಿದಿರುತ್ತದೆ. ಮಾಸ್ಟರು ನಮಗೆ ಹೊಡೆದಾಗಲೆಲ್ಲ ಅವರ ಬಗ್ಗೆ ಆ ದಿನಕ್ಕೆ ಕೋಪ ಬಂದಿರುತ್ತದೆ, ಮಾಸ್ಟರಿಗೂ ನಮ್ಮ ಮೇಲೆ ಯಾವುದೇ ಸೇಡು ಇರುವುದಿಲ್ಲ ಆದರೂ ಅವರು ನಮ್ಮನ್ನು ತಿದ್ದಲು ಆ ರೀತಿ ವರ್ತಿಸಿರುತ್ತಾರೆ. ಇಂದು ಅಂಥಹದ್ದೆ ಒಂದು ಹಂತದಲ್ಲಿ ನಾನಿದ್ದೇನೆ. ನಾನು ಕಾಪಾಡಿಕೊಂಡು ಬಂದಿರುವ ಆದರ್ಶಗಳ ಬುನಾದಿ ಅಲುಗಾಡುತ್ತಿದೆ, ಆದರೂ ದೇವರ ಮೇಲೆ ವಿಶ್ವಾಸ ಇಡುತ್ತೇನೆ. ನಮಗೆ ಎಲ್ಲವನ್ನು ಕೊಟ್ಟವನು ಅವನೇ, ಅದನ್ನು ಕಿತ್ತುಕೊಳ್ಳುವ ಅಧಿಕಾರ ಅವನಿಗೆ ಮಾತ್ರವೇ ಇರುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀ ಮುತ್ತಪ್ಪ ದೇವರ ಉತ್ಸವ: ದೈವ, ಆಚರಣೆ, ಭಕ್ತಿ ಮತ್ತು ಸಂಘಟನೆ!!!

  ಈ ಲೇಖನವನ್ನು ಕಳೆದ ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ ಎಂಬುದು ಇರಬಹುದು. ಮಾರ್ಚ್‌ ತಿಂಗಳ ಮೂವತ್ತು ಮತ್...