ಯಾವುದು ಸರಿ ಯಾವುದು ತಪ್ಪು, ಒಬ್ಬ ಹಾಲಿನಿಂದ ದೇವರಿಗೆ ಅಭಿಷೇಕ ಮಾಡ್ತಾನೆ, ಆ ದೇವರು ಸಸ್ಯಹಾರಿ ನೈವೇದ್ಯವನ್ನು ಮಾತ್ರ ಬಯಸುತ್ತೆ, ಅಲ್ಲಿ ಮಾಂಸಹಾರಕ್ಕೆ, ಹಿಂಸೆಗೆ ಸ್ಥಳವಿಲ್ಲ. ಅದು ಮುಂಜಾನೆಯ ಸ್ನಾನ ಮಡಿ ಗುಡಿಯಿಂದ ಶುರುವಾಗಬೇಕು. ಮಧ್ಯಾಹ್ನ ಪೂಜೆ ಇಲ್ಲ ಮತ್ತೇ ಸಂಜೆ ಪೂಜೆಯಾಗುತ್ತದೆ, ರಾತ್ರಿ ದೇವರು ಮಲಗುತ್ತಾನೆ, ತನ್ನದೇ ಸಮಸ್ಯೆಗಳನ್ನು ಹೊದ್ದಿಕೊಂಡು ಭಕ್ತರು ಮಲಗುತ್ತಾರೆ. ಮತ್ತೊಂದೆಡೆ, ಪೂಜಾರಿ ನಡುರಾತ್ರಿಯಲ್ಲಿ ಏಳುತ್ತಾನೆ. ಕತ್ತಲೂ, ಸುತ್ತಲೂ ಕತ್ತಲೂ, ಭಯಂಕರ ಜಡೆ, ಜಡೆಯೆಂದರೇ ನಿಜಕ್ಕೂ ಜಡೆಗೆಟ್ಟಿದೆ ಪೂಜಾರಿಯ ಕೂದಲು, ಎಣ್ಣೆ ಕಂಡಿಲ್ಲ, ಗಂಟು ಕಟ್ಟಿದೆ, ಮುಖವೂ ವಿಕಾರವೋ, ವಿರೂಪವೋ? ಭಯವನ್ನುಂಟು ಮಾಡುವ ಶಕ್ತಿಯಿದೆ. ಅಲ್ಲಿಗೆ ಬರುವ ಭಕ್ತರೂ ಅಷ್ಟೇ ಯಾವುದೋ ಪಾಪ ಮಾಡಿರಬಹುದು, ಇನ್ಯಾರಿಗೋ ಅನ್ಯಾಯ ಮಾಡಿರಬಹುದು, ಅಥವಾ ಮತ್ತಾರೋ ಮಾಡುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ಶಕ್ತಿ ಬೇಕೆಂದು ಬೇಡುತ್ತಿರಬಹುದು. ಒಂದೆಡೆ ಬೆಳಕು, ಮತ್ತೊಂದೆಡೆ ಕಡುಗಪ್ಪು. ದೇವರೆಲ್ಲರೂ ಒಂದೆ ಎಲ್ಲವೇ? ಅದು ಹೇಗೆ ಸಾಧ್ಯ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವೇ? ಇಷ್ಟ ಶಕ್ತಿ ದುಷ್ಟ ಶಕ್ತಿ ಇಲ್ಲವೇ? ಋಷಿಗಳೆಲ್ಲರೂ ಸಮಾನರೇ? ಅಘೋರಿಗಳು ಅರ್ಧ ಸುಟ್ಟ ಹೆಣಗಳನ್ನು ತಿನ್ನುವುದಿಲ್ಲವೇ? ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿ ಇಲ್ಲಿ ಸತ್ತಿರುವುದನ್ನು ಮುಟ್ಟಲು ಹಿಂಜರಿಯುವುದಿಲ್ಲವೇ? ಇಬ್ಬರೂ ಹೇಗೆ ಸಮನಾದರು? ದುರ್ಯೋಧನ ಅಷ್ಟೊಂದು ಕ್ರೂರಿಯಾಗಿ ಸ್ವಾರ್ಥಿಯಾಗಿರಲಿಲ್ಲವೇ? ಧರ್ಮರಾಯ ಹುಲ್ಲು ಕಡ್ಡಿಗೆ ಅನ್ಯಾಯ ಮಾಡದೇ ಬದುಕು ನೀಗಲಿಲ್ಲವೇ? ಎಲ್ಲರೂ ಸಮನಾದರೇ, ವೈವಿಧ್ಯವೆಲ್ಲಿ? ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ ದೋಷ ನಿವಾರಣೆ ಮಾಡುವುದೊಂದೆಡೆಯಾದರೇ, ನರಬಲಿಯನ್ನು ಮಾಡಿ ದೋಷ ನೀಗಿಸುವುದು ಮತ್ತೊಂದು ವಿಧಿಯಲ್ಲವೇ? ವಿಧಿಯನ್ನು ನಡೆಸುವವನ ಮೇಲೆ ಅವಲಂಬಿತವಾಗಿರುತ್ತದೆ.
ಇಲ್ಲಿ ಮೂಡಿರುವ ಅಕ್ಷರಗಳು ಕೇವಲ ಅಕ್ಷರಗಳಲ್ಲ, ನನ್ನಂತರಾಳದಿಂದ ಹೊಮ್ಮುತ್ತಿರುವ ಭಾವನೆಗಳ ಅಲೆಗಳು. ಒಂದೊಂದು ಪದವೂ ನನ್ನೊಳಗಿನಿಂದ ಅರಳುತ್ತಿರುವ ಪ್ರೀತಿಯ ಸುಮಧುರ ಸುಗಂಧದ ಪರಿಮಳವೂ. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣವನ್ನು ಸೀಕೋ ಸಂಸ್ಥೆಯು ಕಲಿಸುತ್ತಿದೆ. ಅದರ ಜೊತೆಯಲ್ಲಿ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ನೈರ್ಮಲ್ಯ, ಸಮಗ್ರ ಜಲಸಂರಕ್ಷಣೆ, ನದಿ ಆರೋಗ್ಯ, ಪರಿಸರ ಸಾಹಿತ್ಯ, ಸಮಗ್ರ ಗ್ರಾಮೀಣಾಭಿವೃದ್ಧಿಯ ಕುರಿತು ಸಮಾನ ಮನಸ್ಕರುಗಳ ಅಭಿಪ್ರಾಯ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಒಳಗೊಂಡು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗೋಣ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!
೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...
-
ನಾನು ಈ ಕುರಿತು ಬಹಳ ವರ್ಷಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಸಮಯದ ನೆಪವೋ ಅಥವಾ ನನ್ನ ಸೋಮಾರಿತನವೋ ಬರೆಯುವುದಕ್ಕೆ ಬಿಟ್ಟಿರಲಿಲ್ಲ. ಈ ದಿನ ನಿರ್ಧಾರ ಮಾಡಿ ಬ...
-
ನಮ್ಮ ತಂಡದ ಹಿರಿಯ ಸದಸ್ಯರಾದ ರಾಮಕೃಷ್ಣಪ್ಪ (ಆರ್.ಕೆ.)ಸರ್, ಪ್ರೊ.ಎನ್.ಇಂದಿರಮ್ಮ (ಎನ್.ಐ.)ಮೇಡಮ್, ಪ್ರೊ.ಉಮಾ ದೇವಿ ಮೇಡಮ್ ಮತ್ತು ನಾನು ಕಳೆದ ವಾರ ಐದು ದಿನಗಳ...
-
ಇಂದು (ಮೇ 22 ರಂದು) " ವಿಶ್ವ ಜೀವ – ವೈವಿಧ್ಯ ದಿನ". ( World Biodiversity Day) ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ