25 ಫೆಬ್ರವರಿ 2010

ಮರೆಯಬೇಡ ಮಾನವೀಯತೆಯ ಮೆರೆಯಲು!!!!!!!!!

ನಾನು ಪ್ರಸ್ತಾಪಿಸುತ್ತಿರುವ ವಿಷಯ ಬಹಳಷ್ಟೂ ಮಂದಿಗೆ ಬಹಳ ಸಲ ಬಂದಿರುತ್ತದೆ, ನಮ್ಮ ದೇಶದ ಇಂದಿನ ಪರಿಸ್ತಿತಿಗೆ ಕಾರಣಗಳೇನು? ಮೊದಲನೆಯೆದಾಗಿ ನಮ್ಮ ದೇಶ ಹೇಗಿರಬೇಕೆಂದು ಬಯಸುತ್ತಿದ್ದೆವೆಂಬುದರ ಅರಿವು ನಮಗಿದೆಯಾ? ಉದಾಹರಣೆಗೆ ಒಂದು ಹಳ್ಳಿಯನ್ನು ತೆಗೆದುಕೊಂಡರೇ, ನನ್ನೂರು ಬಾನುಗೊಂದಿ, ಸುತ್ತಲೂ ಕಾವೇರಿ ನದಿ ಹರಿಯುತ್ತಿದೆ, ಸುಮಾರು ೧೮೦ ಮನೆಗಳಿವೆ, ವಾರ್ಷಿಕ ಆದಾಯ, ೨೦ಸಾವಿರಗಳಿಂದ ೨೦ ಲಕ್ಷಗಳವರೆಗೂ ಇದೆ, ಒಂದೇ ಊರಿನಲ್ಲಿ, ಅದು ಒಂದು ಚಿಕ್ಕ ಊರಿನಲ್ಲಿ ಇಷ್ಟೊಂದು ವ್ಯತ್ಯಾಸವಾಗಿದ್ದು ಏಕೆ? ಇದನ್ನು ಸರಿದೂಗಿಸಲು ಸಾದ್ಯವೇ? ಅಥವಾ ಸರಿದೂಗಿಸುವ ಅವಶ್ಯಕತೆ ಇದೆಯೇ? ಉತ್ತರ ಸಿಗುವುದು ಬಹಳ ಕಷ್ಟವಾಗುತ್ತದೆ. ಸರಿದೂಗಿಸಬೇಕೆಂದರೇ ಇರುವ ಜನರಿಂದ ಕಿತ್ತು ಇಲ್ಲದೇ ಇರುವವರಿಗೆ ಕೊಡಬೇಕಾಗುತ್ತದೆ. ಬೇಡವೆಂದರೇ ಇರುವ ಬಡವರ ಸಂಖ್ಯೆ ಹಾಗೆ ಉಳಿಯುತ್ತದೆ. ಇದರಂತೆಯೇ ನಮ್ಮ ದೇಶದಲ್ಲಿನ ಸಮಸ್ಯೆಯೂ ಕೂಡ, ಸಮಾನತೆ ಯಾವುದರಲ್ಲಿ ಇರಬೇಕೆಂಬುದು ನಮ್ಮ ಮುಂದಿರುವ ಪ್ರಶ್ನೆ. ಅಂತಸ್ತಿನಲ್ಲಿಯಾ?ಉದ್ಯೋಗದಲ್ಲಿಯಾ? ಇಲ್ಲ ಇದಾವುದರಲ್ಲಿಯೂ ಅಲ್ಲ ನಮಗೆ ಅವಶ್ಯಕತೆಯಿರುವುದು ಮನುಷ್ಯನ ಸಂತೋಷದಲ್ಲಿ, ಅವನ ನೆಮ್ಮದಿಯ ಬದುಕಿನಲ್ಲಿ, ಅವನ ದಿನ ನಿತ್ಯದ ಬದುಕಿನ ಕ್ಷಣಗಳಲ್ಲಿ ಎಂದರೇ, ಯಾವುದನ್ನು ನಂಬಿ ನಿರ್ಧರಿಸುವುದು. ಮಾನವ ಸಂಬಂಧಗಳು ಎಂದಾದಲ್ಲಿ, ಯಾವ ಮನುಷ್ಯ ಈ ದಿನಗಳಲ್ಲಿ, ಜೊತೆಗಾರರ ಜೊತೆಯಲ್ಲಿ ದಿನವಿಡಿ ಅಥವಾ ದಿನದ ಬಹುತೇಕ ಕ್ಷಣಗಳನ್ನು ಕಳೆಯುತ್ತಿದ್ದಾನೆ? ಮನೆಯಿಂದ ಕೆಲಸಕ್ಕೆ ಮುಂಜಾನೆ ಹೊರಟರೆ ಬರುವುದು ನಡು ರಾತ್ರಿಗೆ. ಸಮಯದ ಕೊರತೆ ಇದೆಯಾ? ಅಥವಾ ಮನೆಯಲ್ಲಿ ಇದ್ದಾಗ ದಿನ ನಿತ್ಯ ನೋಡುವ ರಿಯಾಲಿಟಿ ಶೋ ಗಳನ್ನು ಬದಿಗೊತ್ತಿ ನಾವು ಮಾತನಾಡುತ್ತ ಹಂಚಿಕೊಳ್ಳುತ್ತ ಇದ್ದೇವಾ? ಅದನ್ನು ಮಾಡುತ್ತಿಲ್ಲ.
ನಮ್ಮೂರಿನ ಜನರನ್ನು ಬಹಳ ಸಾರಿ ಕೇಳಿದ್ದೇನೆ. ನಿಮ್ಮ ಅನಿವಾರ್ಯತೆಗಳೇನು? ಅವಶ್ಯಕತೆಗಳೇನು? ಎಂದು. ಉತ್ತರಿಸಲು ಹಿಂಜರಿಯುತ್ತಾರೆ, ಅವರ ಬಳಿಯಲ್ಲಿ ಉತ್ತರವಿಲ್ಲ, ಯಾಕೆಂದರೆ ನಾವೆಂದು ಅದರ ಬಗ್ಗೆ ಚಿಂತನೆ ಮಾಡಿರುವುದಿಲ್ಲ. ನಾವು ವಸ್ತುಗಳ ಬಗೆಗೆ ಹೆಚ್ಚೆಚ್ಚು ಒತ್ತು ನೀಡಿ ನಮಗೆ ಬೇಕಿರುವ ಅವಶ್ಯಕತೆಗಳನ್ನು ಕಡೆಗನಿಸಿದ್ದೆವೆ. ಮೊಬೈಲ್, ಅದರಲ್ಲಿಯೂ ಕ್ಯಾಮೆರಾ, ಎಂ ಪಿ ತ್ರಿ ಇರುವ ಮೋಮೈಲ್, ೨೦ಸಾವಿರಕ್ಕೆ ಮೀರಿದ ಮೊಬೈಲ್ ಬೇಕೆನ್ನುವ ನಾವು, ಮನಸ್ಸಿಗೆ ಮುದ ನೀಡುವ ಸಂಗೀತ ಬೇಕೆಂದು ಬಯಸುವುದಿಲ್ಲವೇಕೆ? ನಮ್ಮ ಮನಸ್ಸಿನ ಶಕ್ತಿಯನ್ನು ಹಿಗ್ಗಿಸುವ ಪುಸ್ತಕಗಳನ್ನು ಕೊಡು ಓದುವುದಿಲ್ಲವೇಕೆ? ನಮಗೆ ಜ್ನಾನ ಹೆಚ್ಚಿಸುವ ಅಥವಾ ವಿಶ್ವದ ಬಗ್ಗೆ ತಿಳಿಸಿ ಕೊಡುವ ಕಾರ್ಯಕ್ರಮಗಳನ್ನು ಬಿಟ್ಟು ಹೆಚ್ಚೆಚ್ಚು ರಿಯಾಲಿಟಿ ಶೋ ಹಿಂದೆ ಬೀಳುವುದೇಕೆ? ಓದಿದ ಅಥವಾ ಓದುತ್ತಿರುವ ವಿಷಯದಲ್ಲಿ ಆಗುವ ಬದಲಾವಣೆಗಳ ಬಗೆಗೆ ತಿಳಿದು ಹಂಚಿಕೊಳ್ಳುವುದಿಲ್ಲವೇಕೆ? ಜಗತ್ತಿಗೆ ಅಥವಾ ಸಮಾಜಕ್ಕೆ ಬೇಕಿರುವುದೇನು ನಮಗೆ ಬೇಕಿರುವುದೇನು ಎಂದು ಒಮ್ಮೆಯೂ ಚರ್ಚಿಸುವುದಿಲ್ಲ ಏಕೆ? ನಮ ದೈನಂದಿನ ಬದುಕಲ್ಲಿ ಕೇವಲ ಹತ್ತು ನಿಮಿಷ ಚಿಂತಿಸಿದರೂ, ೧೧೧ ಕೋಟಿ ಜನರ ಹತ್ತು ನಿಮಿಷ ಅದೆಷ್ಟು ಬದಲಾವಣೆ ತರಿಸಬಲ್ಲದೆಂಬುದನ್ನು ಯೋಚಿಸಿ. ಹಾಕಿದ ಆಲದ ಮರವನ್ನೆ ಮತ್ತೆ ಮತ್ತೆ ಸುತ್ತಿ ನಮ್ಮ ಇಡೀ ಆಯುಷ್ಯವನ್ನು ಕಳೆಯಬೇಕೇ? ಕಳೆದ ಹದಿನೈದು ದಿನಗಳಿಂದ ಗೋಹತ್ಯೆಯ ವಿಷಯದಲ್ಲಿ ಮಾಡಬಾರದ ಮಟ್ಟದಲ್ಲಿ ಬಂದ್, ಚಳುವಳಿ ಮಾಡಿ ಬಿಂಬಿಸುವ ಅವಶ್ಯಕತೆ ಇದೆಯಾ? ತುಂಬಾ ಸೂಕ್ಷ್ಮ ವಿಷಯಗಳನ್ನು ಹೇಗೆ ಪರಿಹರಿಸಬೇಕೆಂಬ ಸಾಮಾನ್ಯ ಜ್ನಾನವಾದರೂ ಇರಬಾರದೇ, ಹಿಂದು ಮುಸ್ಲಿಮ್ ಎಂದು ಏಕೆ ನಾವು ಭೇಧ ಮಾಡಿ ತೋರಿಸಬೇಕು. ನಾನು ಕಂಡಂತೆ ಅದೆಷ್ಟೋ ಮುಸ್ಲಿಂ ಸ್ನೇಹಿತರು ದನದ ಮಾಂಸ ತಿನ್ನುವುದಿಲ್ಲ, ನನ್ನ ಬಹಳಷ್ಟು ಹಿಂದು ಧರ್ಮ ಎಂದು ಬೊಬ್ಬೆ ಹೊಡೆಯುವ ಸ್ನೇಹಿತರು ತಿನ್ನುತ್ತಾರೆ. ದನವನ್ನು ಸಾಕುತ್ತಿರುವ ಅದನ್ನು ಪೂಜಿಸುವ ಮಂದಿ ಯಾರು ಮುಂದೆ ಬಂದು ಚಳುವಳಿ ಮಾಡುತ್ತಿಲ್ಲ. ದನ ಸಾಕಣಿಕೆ ಇಳಿಮುಖವಾಗಿದೆ. ಸಾಕುವ ಕಷ್ಟ ಅವರಿಗೆ ತಿಳಿದಿದೆ. ಮಾನವ ಪ್ರಾಣಿಗಳನ್ನು ಪ್ರೀತಿಸುವಂತೆ ಆದರೇ ಸಾಕು, ಅದರ ಬಗ್ಗೆ ಜಾಗೃತೆ ಅವಶ್ಯಕತೆ ಇದೆಯೇ ಹೊರತು, ನಮ್ಮ ಧರ್ಮ ಹೀಗೆ ಹೇಳಿದೆ, ನಮ್ಮ ತಾತ ಹೇಳಿದ ಎಂದರೇ ಮೂರ್ಖತನವಾದೀತು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಅದು ಮಾನವೀಯತೆಯ ತಳಹದಿ. ಅದನ್ನು ಬಿಟ್ಟು ಬದುಕಿದ್ದ ನಾಲ್ಕು ದಿನಗಳು ಇಲ್ಲ ಸಲ್ಲದ ಜಗಳದಲ್ಲಿ, ದ್ವೇಷದಲ್ಲಿ ಬದುಕಿದರೇ ಕಳೆದುಹೋದ ಕ್ಷಣಗಳು ಮತ್ತೆ ಬರಲಾರವು. ನಾವು ಪ್ರೀತಿಸಬೇಕಿರುವುದು ನಮ್ಮೊಳಗಿರುವ ನಮ್ಮನ್ನು, ನಮ್ಮೊಳಗಿರುವ ನಮ್ಮ ಸ್ನೇಹಿತರನ್ನು, ಅವರ ಭಾವನೆಗಳನ್ನು, ವಸ್ತುಗಳನ್ನಲ್ಲ.

1 ಕಾಮೆಂಟ್‌:

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...