18 ಜುಲೈ 2021

ಕೂಡಿಗೆ ಡಯಟ್ ನಲ್ಲಿ ವನ ಸಂವರ್ಧನಾ ಅಭಿಯಾನಕ್ಕೆ ಚಾಲನೆ: ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಮಾದೇಗೌಡ ಸಲಹೆ!!

ಚಿತ್ರ : ಕೂಡಿಗೆ ಡಯಟ್ ನಲ್ಲಿ ನಡೆದ ವನ ಸಂವರ್ಧನಾ ಅಭಿಯಾನದಲ್ಲಿ ರಾಜ್ಯ ಪಠ್ಯಪುಸ್ತಕ ಸಂಘದ ನಿರ್ದೇಶಕ ಮಾದೇಗೌಡ ಗಿಡನೆಟ್ಟರು. ಡಿಡಿಪಿಐ ಎ.ಶ್ರೀಧರನ್, ಬಿಇಓಗಳಾದ ಎಚ್.ಕೆ.ಪಾಂಡು, ಶ್ರೀಶೈಲ ಬೀಳಗಿ, ಗುರುರಾಜ್, ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಇತರರು ಇದ್ದರು.



ಕೂಡಿಗೆ(ಕುಶಾಲನಗರ), ಜು.18 : ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಹಸಿರು ಪಡೆ, ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವನ ಸಂವರ್ಧನಾ ಅಭಿಯಾನದಡಿ ನಮ್ಮ ನಡೆ ಹಸಿರೆಡೆಗೆ ಎಂಬ ಧ್ಯೇಯ ವಾಕ್ಯದಡಿ ವನ ಮಹೋತ್ಸವದ ಅಂಗವಾಗಿ ಸಸಿ ನೆಡಲಾಯಿತು.

ಡಯಟ್ ಸಂಸ್ಥೆ ಆವರಣದಲ್ಲಿ ಸಸಿ ನೆಡುವ ಮೂಲಕ ವನ ಸಂವರ್ಧನಾ ಅಭಿಯಾನಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಮಾದೇಗೌಡ ಮಾತನಾಡಿ, ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮೂಲಕ ಅವರನ್ನು ಭವಿಷ್ಯದ ಪರಿಸರ ರಾಯಭಾರಿಗಳಾಗಿ ರೂಪಿಸಲು ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದರು.



ಸುಂದರ ಹಾಗೂ ಹಸಿರು ಪರಿಸರಕ್ಕೆ ಹೆಸರಾದ ಕೊಡಗಿನ ಜನತೆ  ಸ್ವಾಭಾವಿಕವಾಗಿ ಪ್ರಕೃತಿ ಪ್ರೇಮ ಮತ್ತು ಪರಿಸರ ಕಾಳಜಿ ಹೊಂದಿರುವುದು ಇತರರಿಗೆ ಮಾದರಿಯಾದುದು ಎಂದರು.

ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ   ಶಾಲಾ ಪರಿಸರವನ್ನು ಉತ್ತಮಪಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಮಾದೇಗೌಡ ಕರೆ ನೀಡಿದರು.

 ಡಯಟ್ ಸಂಸ್ಥೆಯ ಪ್ರಾಂಶುಪಾಲರೂ ಆದ ಡಿಡಿಪಿಐ ಎ.ಶ್ರೀಧರನ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಮತ್ತು ಇಕೋ ಕ್ಲಬ್ ಗಳ ಮೂಲಕ ಶಾಲೆಗಳಲ್ಲಿ ಹಸಿರು ಪರಿಸರ ನಿರ್ಮಿಸಲು ಕೈಗೊಂಡಿರುವ ವನ ಸಂವರ್ಧನೆ ಅಭಿಯಾನದ ಮೂಲಕ ಶಾಲಾವರಣದಲ್ಲಿ ಅರಣ್ಯ ಸಸಿನೆಟ್ಟು ಬೆಳೆಸಬೇಕು ಎಂದರು.

ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ    ಪರಿಸರ ಸಂರಕ್ಷಣೆಗಾಗಿ ಕಂಕಣಬದ್ಧರಾಗಿ ಶ್ರಮಿಸುವ ಮೂಲಕ ಶಾಲಾ ಪರಿಸರವನ್ನು ಉತ್ತಮಪಡಿಸಲು ಸಾಧ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಕೆ.ಪಾಂಡು, ಶ್ರೀಶೈಲ ಬೀಳಗಿ, ಗುರುರಾಜ್, ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಡಿವೈಪಿಸಿ ಎಂ.ಕೃಷ್ಣಪ್ಪ,  ಡಯಟ್ ಉಪನ್ಯಾಸಕರಾದ ಕೃಷ್ಣಪ್ಪ, ವಿ.ವಿಜಯ್, ಯು.ಸಿದ್ದೇಶಿ, ಕೆ.ಜಿ.ನೀಲಕಂಠಪ್ಪ , ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಎಸ್.ಪಲ್ಲೇದ್,  ಶಿಕ್ಷಣ ಸಂಯೋಜಕರಾದ ಎಂ.ಎಚ್.ಹರೀಶ್, ಪಿ.ಎಂ.ಅಯ್ಯಪ್ಪ, ಎಸ್.ಆರ್.ಶಿವಲಿಂಗ ,ಇತರರು ಇದ್ದರು


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀ ಮುತ್ತಪ್ಪ ದೇವರ ಉತ್ಸವ: ದೈವ, ಆಚರಣೆ, ಭಕ್ತಿ ಮತ್ತು ಸಂಘಟನೆ!!!

  ಈ ಲೇಖನವನ್ನು ಕಳೆದ ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ ಎಂಬುದು ಇರಬಹುದು. ಮಾರ್ಚ್‌ ತಿಂಗಳ ಮೂವತ್ತು ಮತ್...