10 ಜನವರಿ 2011

ಸಿಇಇಕೊ ಹುಟ್ಟಿನ ಹಿಂದೆ!!!

ನಾನು ಮತ್ತು ನನ್ನ ಅನೇಕಾ ಸ್ನೇಹಿತರು ಸಮಾಜದ ಬಗ್ಗೆ ನಮ್ಮ ವ್ಯವಸ್ಥೆಯ ಬಗ್ಗೆ ಆಗ್ಗಾಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ಉಗಿಯುತ್ತಿದ್ದೆವು, ಬೈಯ್ದುಕೊಳ್ಳುತ್ತಿದ್ದೆವು, ಕ್ರಮೇಣ ನಮ್ಮ ದೇಶದ ಬಗೆಗೆ ನಮಗಿರುವ ಅಭಿಮಾನ ಒಂದು ಕಡೆಗೆ, ನಿಸರ್ಗದೆಡೆಗಿರುವ ಒಲವು ಮತ್ತೊಂದು ಕಡೆಗೆ ಆದರೂ ಈ ರಾಜಕಾರಣಿಗಳು, ಸರ್ಕಾರಿ ಉದ್ಯೋಗಿಗಳು ಸಮಾಜದೆಡೆಗೆ ತೋರುವ ನಿರಾಸಕ್ತಿ ನಮಗೆ ಬಹಳಷ್ಟು ಬಾರಿ ನೋವುಂಟುಮಾಡಿದೆ. ನಮ್ಮ ವಿವಿಗಳಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಸಂಬಳ ಪಡೆದು, ಮೂರು ಕಾಸಿನ ಕೆಲಸವನ್ನು ಮಾಡದೆ, ಸದಾ ಜಾತಿ ರಾಜಕಾರಣ ಮಾಡುತ್ತ, ಸಹದ್ಯೋಗಿಗಳ ವಿರುದ್ದ ಕತ್ತಿ ಮಸೆಯುತ್ತಾ ಇರುವ ಹೊಟ್ಟೆಬಾಕರನ್ನು ಕಂಡು ಅಸಹ್ಯ ಹುಟ್ಟುವ ಸಮಯದಲ್ಲಿ ಮನಸ್ಸಿಗೆ ಮೂಡಿ ಬಂದದ್ದು ಇದಕ್ಕೆಲ್ಲ ಕಾರಣವೇನು? ಪರಿಹಾರವೇನು?
ಸದಾ ಸಮಸ್ಯೆಯನ್ನೇ ಉತ್ಪ್ರೇಕ್ಷೆಯಿಂದ ನೋಡುವ ಪತ್ರಕರ್ತ ಸಮಾಜ, ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಕೆಲಸ ಮಾಡದೆ ದಿನಕ್ಕೆ ಆರು ಬಾರಿ ಟೀ ಕುಡಿದು ರಾಜಕೀಯ ಮಾತನಾಡುತ್ತ ಬರುವ ಸರ್ಕಾರಿ ನೌಕರರನ್ನು ಮರೆತು, ನಾವುಗಳೇ ಒಂದು ಸುಂದರ ಸಮಾಜ ಕಟ್ಟುವ ಕನಸ್ಸನ್ನು ಕಾಣುವುದರಲ್ಲಿ ತಪ್ಪೇನು? ಸುತ್ತಲೂ ಶತ್ರುಗಳಿರುವಾಗ ಎತ್ತ ಕಡೆಗೆ ಗುಂಡು ಹಾರಿಸಿದರೂ ಶತ್ರು ಸಾಯುತ್ತಾನೆ. ಹಾಗೇಯೇ, ನಮ್ಮ ದೇಶಕ್ಕೆ ಎಲ್ಲವೂ ಸಮಸ್ಯೆಯಂತೆಯೇ ಆಗಿ, ಸಮಸ್ಯೆಯ ಭಾರತವಾಗಿರುವಾಗ ಯಾವ ಸಮಸ್ಯೆ ಬಗೆಹರಿದರೂ ಸಂತಸದ ವಿಷಯ. ಈ ಶತಮಾನದ ಸಮಸ್ಯೆಗಳಲ್ಲಿ ಬಹುಮುಖ್ಯವಾದವುಗಳೆಂದರೆ ಪರಿಸರ ಜಾಗೃತಿ, ನೀರಿನ ಸಮಸ್ಯೆ, ಆರೋಗ್ಯ, ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ನಿಟ್ಟಿನಲ್ಲಿ ಶುರುವಾದದ್ದು, ಸೆಂಟರ್ ಫಾರ್ ಎನ್ವಿರಾನ್ ಮೆಂಟ್, ಆಂಡ್ ಕಮ್ಯುನಿಟಿ (ಸಿಇಇಕೊ), ಬಾನುಗೊಂದಿಯಲ್ಲಿ ಇದರ ಪ್ರಧಾನ ಕಛೇರಿಯಿದೆ. ಸಂಸ್ಥೆಯು ಸಾರ್ವಜನಿಕ ದತ್ತಿಯಾಗಿ ನೋಂದಾಯಿಸಲ್ಪಟ್ಟಿದೆ.
ಸಂಸ್ಥೆಯು ಸದ್ಯದಲ್ಲಿ ಜಲಸಂಪನ್ಮೂಲಗಳ ಅಭಿವೃದ್ದಿ ಮತ್ತು ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮನ್ನು ನಡೆಸುತ್ತಿದೆ. ಪ್ರಾರ್ಥಮಿಕವಾಗಿ ಅರಕಲಗೂಡು ತಾಲ್ಲೂಕಿನ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ನೀರು, ಪರಿಸರದ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಂಡಿದ್ದರು ಅದು ಪರೀಕ್ಷೆಯ ಉದ್ದೇಶದಿಂದ ತಿಳಿದುಕೊಂಡಿದ್ದಾರೆ. ಅವರ ಆ ಜ್ನಾನವನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಎಲ್ಲಾ ವಿದ್ಯಾರ್ಥಿಗಳು, ನೀರಿನ ಲಭ್ಯತೆಯ ಬಗ್ಗೆ ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟರು. ನೀರಿನ ಮಹತ್ವ, ಸಂರಕ್ಷಣೆಯ ವಿಧಾನಗಳು, ಕಲುಷಿತ ನೀರಿನಿಂದಾಗು ಪರಿಣಾಮಗಳು, ಶುದ್ದಿಕರಣ, ಮಳೆ ನೀರು ಕೊಯ್ಲು, ಅಂತರ್ಜಲ ಹೆಚ್ಚಿಸುವುದು, ಅಮೆಜಾನ್ ನದಿಯಿಂದ ಹಿಡಿದು ಪಕ್ಕದಲ್ಲಿಯೇ ಹರಿಯುವ ನದಿಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಸರ್ಕಾರಿ ಶಾಲೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ, ಶಿಕ್ಷಕರು ಎಡವಿದ್ದಾರೆ. ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ, ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೆ, ಮುಂದಿನ ಪೀಳಿಗೆ ನೀರಿನ ಬಗ್ಗೆ ತಾತ್ಸಾರ ತೋರುವುದಿಲ್ಲವೆಂಬುದು ನನ್ನ ಅನಿಸಿಕೆ.

2 ಕಾಮೆಂಟ್‌ಗಳು:

  1. ಹರೀಶ್ ಅವರೆ ನಿಮ್ಮ ಪ್ರಯತ್ನಕ್ಕೆ ನಮ್ಮ ಸಹಕಾರ ಎಂದೆಂದಿಗೂ ಇರುತ್ತದೆ ...ಸಮಾಜದಲ್ಲಿ ಅಭಿವೃದ್ದಿಯ ಚಿಂತನೆ ಮತ್ತು ಅವುಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಕೆಲವ ಸರ್ಕಾರವೇ ಮಾಡಲಿ ಎಂದು ಸುಮ್ಮನೆ ಕೂರುವುದಕ್ಕಿಂತ ನಮ್ಮ ಕೈಲಾದ ಪ್ರಯತ್ನ ಮಾಡುವುದು ಅಗತ್ಯವಾಗಿರುತ್ತದೆ...ಅನೇಕ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರುವ ನಮ್ಮ ಸಮಾಜಕ್ಕೆ ನೀವು ಕನಸು ಕಂಡಂತೆ ಒಂದು ಸುಂದರ ರೂಪ ಕೊಡುವ ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ಖಂಡಿತ ಇದೆ... All The Best...

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...