30 ಮೇ 2010

ವಿವಿಯಲ್ಲಿಯ ಬಿಳಿ ಐರಾವತಗಳ ದರ್ಬಾರ್!!!!!!!

ಸದಾ ಇಲ್ಲ ಸಲ್ಲದ ಆರೋಪಗಳು ನನ್ನ ಬರವಣಿಗೆಯಿಂದ ಅಥವಾ ನನ್ನ ಬಾಯಿಯಿಂದ ಬರುತ್ತಲೇ ಇರುತ್ತವೆ, ಇದಕ್ಕೆ ನಮ್ಮಲ್ಲಿರುವ ವ್ಯವಸ್ಥೆ ಕಾರಣವೋ ಅಥವಾ ನನ್ನ ಮನಸ್ಥಿತಿ ಕಾರಣವೋ ತಿಳಿದಿಲ್ಲ.

ಇಂಥಹದೊಂದು ನಡೆಯುವುದು ಮೈಸೂರು ವಿವಿ ಯಲ್ಲಿ ಮಾತ್ರ, ಎಂಟು ವರ್ಷದ ನಂತರ ನಿಮ್ಮ ಅಂಕ ಪಟ್ಟಿಯಲ್ಲಿ ನೀವು ಪಡೆದಿರುವ ಅಂಕಗಳು ತಪ್ಪಾಗಿವೆ, ಯಾರೋ ಎಲ್ಲಿಯೋ ಭ್ರಷ್ಟಾಚಾರ ನಡೆಸಿ ವಿಧ್ಯಾರ್ಥಿಗಳಿಗೆ ಅಧಿಕ ಅಂಕಗಳನ್ನು ನೀಡಿದ್ದಾರೆ, ಅದು ನಮ್ಮ ಗಮನಕ್ಕೆ ಬಂದಿದೆ ನೀವು ನಾವು ತಿಳಿಸಿದ ಸಮಯಕ್ಕೆ ಬರಬೇಕು ನಿಮ್ಮ ಮೂಲ ಪ್ರತಿಯನ್ನು ನಮಗೆ ಕೊಡಬೇಕು, ಇಲ್ಲದ್ದಿದ್ದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇಂಥಹ ಒಂದು ಪತ್ರ ಮೈಸೂರು ವಿವಿಯಿಂದ ೩ನೆ ತಾರಿಖಿಗೆ ಬರೆದಿದ್ದು, ೭ನೇ ತಾರೀಖಿಗೆ ಬರಬೇಕು. ನಮಗೆ ಪತ್ರ ತಲುಪಿದ್ದು, ಏಳನೇ ತಾರಿಖಿನಂದು, ಅಂದು ಬಾರದೇ ಇದ್ದರೇ ಉದ್ದೇಶಪೂರ್ವಕವೆಂದು ತೀರ್ಮಾನಿಸುತ್ತಾರೆ. ನಾವು ಬದುಕುತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವದಲ್ಲಿಯೇ?

ಮೊದಲಿಗೆ ನಾನು ವಿವಿ ಯ ಮುಂದೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

1) ಕಳೆದ ಎಂಟು ವರ್ಷಗಳ ತನಕ ತಮ್ಮ ಗಮನಕ್ಕೆ ಬಾರದೇ ದೀಡೀರನೇ ಬಂದಿರಲು ಕಾರಣ? ನಮಗೆ ಕಡಿಮೆ ಅಂಕ ಬಂದಿದ್ದರಿಂದ ತಾವು ಕರೆಯುತ್ತಿರುವಿರಿ,

2) ಯಾವುದಾದರೂ ಅಂಕಪತ್ರಿಕೆಯಲ್ಲಿ ಕಡಿಮೆ ಬಂದಿದ್ದರೇ ತಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು?

3) ನಮ್ಮನ್ನು ೨.೩೦ಕ್ಕೆ ಬರುವುದಕ್ಕೆ ಹೇಳಿ, ತಾವು ಆಗಮಿಸಿದ್ದು, ೪ ಗಂಟೆಗೆ ನಮ್ಮ ಸಮಯದ ಬಗೆಗೆ ತಮ್ಮ ಅನಿಸಿಕೆ ಏನು?

4) ೩ನೇ ತಾರಿಖಿಗೆ ಪತ್ರ ಬರೆದು ಕೇವಲ ಮೂರು ದಿನಗಳ ಸಮಯದಲ್ಲಿ ಬರಬೇಕೆಂದು ಬಯಸುವ ತಾವುಗಳ ನಮ್ಮ ಕೆಲಸದ ಬಗೆಗೆ ನಮ್ಮ ಪರಿಸ್ತಿತಿಯ ಬಗೆಗೆ ಎಂದಾದರೂ ಚಿಂತಿಸಿದ್ದಿರಾ?

5) ಅದಾದ ನಂತರ ತರ್ಕದ ಸಲುವಾಗಿ ಹಗುರವಾದ ಪ್ರಶ್ನೆಗಳಿಂದ ನಮ್ಮನ್ನು ಕೆಣಕಲು ಯತ್ನಿಸುವುದರ ಹಿಂದಿನ ಮರ್ಮವೇನು?

6) ಸಮಿತಿಯವರು ತಾವು ಚರ್ಚಿಸುತ್ತಿರುವುದು, ವಿದ್ಯಾವಂತ ಸಮೂಹದೊಂದಿಗೆ ಎನ್ನುವುದನ್ನು ಮರೆತು, ಸರ್ವಾಧಿಕಾರ ದೋರಣೆ ಮಾಡುವುದು ನಮಗೆ ಹಿಡಿಸುವುದಿಲ್ಲ, ಮೊದಲಿಗೆ ಹೆಚ್ಚಾಗಿ ಏಕವಚನ ಬಳಸುವುದು, ಹೇಳಿದಂತೆ ಸಹಿ ಹಾಕಿ ಇಲ್ಲದಿದ್ದಲ್ಲಿ ನಿರಾಕರಿಸಿದ್ದಾರೆ ಎಂದು ಬರೆಯುತ್ತೇವೆ ಎನ್ನುವುದು.

7) ಒಂದು ಪ್ರತಿಯನ್ನು ಅಚ್ಚು ಹಾಕಿಸಲು, ಕನಿಷ್ಟ ನಾಲ್ಕು ಬಾರಿ ಪ್ರಿಂಟ್ ತೆಗೆದು ಅದನ್ನು ವೆಚ್ಚ ಮಾಡಿಸುವುದು, ಎರಡು ಸಾಲುಗಳನ್ನು ಪ್ರಿಂಟ್ ಮಾಡಿ, ಇಡೀ ಒಂದು ಹಾಳೆಯನ್ನು ವ್ಯರ್ಥಮಾಡುತ್ತಿರುವುದು, ಇವೆಲ್ಲದರ ಮೇಲೆ ಸ್ವಲ್ಪ ನಿಗ ಇಟ್ಟರೇ ಒಲಿತು.

8) ನಾನು ಓದಿದ್ದು, ಪರಿಸರ ವಿಜ್ನಾನ, ಅದರಲ್ಲಿ ನಾವುಗಳು ಇದ್ದದ್ದು, ಕೇವಲ್ ೫ ಜನರು, ಉಪಯೋಗಕ್ಕೆ ಬಾರದ ವಿಷಯವಾಗಿದ್ದ ಪರಿಸರ ವಿಜ್ನಾನ ವಿಷಯಕ್ಕೆ ಹಣ ಕೊಟ್ಟು ಪಾಸ್ ಮಾಡಿಸುವುದರ ಅಗತ್ಯ ಇರುತ್ತದೆಯೆ? ಅವರ ಪ್ರಕಾರದ ಅಂಕಗಳು ಬಂದರೂ ನಾನು ಉತ್ತೀರ್ಣರಾಗಿರುತ್ತಿದ್ದೆ, ಇದರಲ್ಲಿ ವ್ಯತ್ಯಾಸ ಎಲ್ಲಿದೆ? ಅದು ಅಲ್ಲದೇ ಅತಿ ಹೆಚ್ಚು ಅಂಕ ತೆಗೆದಿದ್ದರೂ ನಾವು, ಬಿ.ಎಡ್ ಆಗಲಿ ಮತ್ತೊಂದೆಡೆಗೆ ಹೋಗಲು ಅವಕಾಶವಿಲ್ಲದಿದ್ದರಿಂದ ಅದರ ಅವಶ್ಯಕತೆ ನಮಗೆ ಇದೆಯಾ?

9) ನನ್ನ ಸ್ನೇಹಿತನದು, ಫೇಲ್ ಆಗಿದ್ದರೂ ಕೂಡ, ಅಂಕಗಳು ಹೆಚ್ಚಾಗಿವೆ ಎಂದು ಪತ್ರ ಬರೆದು ಕಳಿಸಿದ್ದಾರೆ, ಅನುತ್ತೀರ್ಣರಾದ ಮೇಲೆ ಅಂಕ ಹೆಚ್ಚಾದರೂ ಕಡಿಮೆಯಾದರೂ ವ್ಯತ್ಯಾಸ ವಿದೆಯೇ?

ಇದರ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಮಗೆ ಬರೆಯುತ್ತಿದ್ದೇನೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...