26 ಅಕ್ಟೋಬರ್ 2010

ನಶಿಸುತ್ತಿರುವ ಸಾಮಾಜಿಕ ಪ್ರಜ್ನೆ...!!!

ನಾನು ಮೊದಲೇ ಹೇಳಿದಂತೆ ರೈಲಿನಲ್ಲಿ ಮೈಸೂರಿಗೆ ಹೋಗಿ ಬರುವುದು ವಾಡಿಕೆಯಾಗಿದೆ. ಅದರಂತೆಯೇ ನಿನ್ನೆಯೂ ಹೋಗಿದ್ದೆ. ಇತ್ತೀಚೆಗೆ ಬಸ್ಸಿನ ದರ ಹೆಚ್ಚಾಗಿರುವುದರಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಮುಂಜಾನೆ ಐದು ಗಂಟೆಯ ರೈಲಿಗೂ ಬಹಳ ಜನರು ಬರುತ್ತಾರೆ. ಅದರಲ್ಲಿಯೂ ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಾದ ಮೇಲಂತೂ ಪ್ರಯಾಣಿಕರ ಸಂಖ್ಯೆ ಅತಿಯಾಗಿ ಹೋಗಿದೆ. ನಾನು ಕಾವೇರಿ ಎಕ್ಷಪ್ರೆಸ್ ನಲ್ಲಿ ಹತ್ತಿ, ಮೇಲಿನ ಬರ್ತನಲ್ಲಿ ಮಲಗಿದೆ. ಕೇವಲ ಅರ್ಧ ಗಂಟೆಯಾಗಿರಬಹುದು. ಕೆಳಗಡೆ ಮಲಗಿದ್ದ ಒಬ್ಬ ಮಧ್ಯ ವಯಸ್ಸಿನ ಮಹಿಳೆ ಮತ್ತು ಗಂಡಸು ಅವರ ಕುಶೋಲೊಪರಿ ಶುರು ಮಾಡಿದರು. ನಾನಂತೂ ಮನೆ ಮಂದಿ ಪ್ರಯಾಣಿಸುವಾಗ ಮಾಡುವ ಕಿರಿಕಿರಿಯನ್ನು ಅನುಭವಿಸಿ ಬೇಸತ್ತಿದ್ದೇನೆ. ಮನೆಯಲ್ಲಿರುವಾಗೆಲ್ಲ ಟಿವಿ ರಿಮೋಟ್ ಹಿಡಿದು ಸಮಯ ವ್ಯರ್ಥ ಮಾಡುತ್ತಾರೆ. ಹೊರಗಡೆ ಬಸ್ಸಿಗೋ, ರೈಲಿಗೋ ಬಂದಾಗ ಮಾತ್ರ ಅಪರೂಪಕ್ಕೆ ಭೇಟಿಯಾದವರಂತೆ ಮಾತನಾಡುತ್ತಾರೆ. ನಿನ್ನೆ ಆದದ್ದೂ ಅದೇ. ಐದು ಮುಕ್ಕಾಲರ ಸಮಯಕ್ಕೆ ಹೆಂಗಸು ಕಾಫಿ ಬೇಕೆಂದು ಕೇಳಿ, ಸೈಡಿನ ಸೀಟಿಗೆ ಹೋಗಿ ಕುಳಿತರು. ಅವರು ಕಿಟಕಿ ತೆಗೆದದ್ದು, ಗಾಳಿ ಹೆಚ್ಚಾದ್ದರಿಂದ ಚಳಿಯಾಗತೊಡಗಿತ್ತು. ಅವರು ಮೈತುಂಬಾ ಸ್ವೆಟರ್, ಹಾಕಿ ತಲೆಗೆಲ್ಲಾ ಮಂಫ್ಲರ್ ಸುತ್ತಿಕೊಂಡಿದ್ದರಿಂದ ಬೆಳಗಿನ ತಂಗಾಳಿಯನ್ನು ಸೈವಿಯುತ್ತಿದ್ದರು, ನಾನು ಹಾಗೆಯೇ ಹೋಗಿದ್ದರಿಂದ ಸವೆಯುತ್ತಿದ್ದೆ. ಗಂಡನಿಗೆ ಏನಾಯಿತೋ ಏನೋ, ದಿಡೀರನೇ ಎದ್ದು ಬಾ ಇಲ್ಲಿಯೇ ಕುಳಿತುಕೊಳ್ಳೋಣವೆಂದು ಎದುರಿನ ಸೀಟಿಗೆ ಕರೆದನು. ಅದರಿಂದಾಗಿ, ನನ್ನ ಕೆಳಗಿನ ಸೀಟಿನ ಕಿಟಕಿ ತೆಗೆದರು. ನಾನು ಮೇಲಿರುವುದು ಅವರ ಗಮನಕ್ಕೆ ಬರಲಿಲ್ಲ, ಅವರ ಮಾತುಕತೆ ಆರಂಭವಾಯಿತು, ಅದು ರಾಷ್ಟ್ರ‍ೀಯ ಮಟ್ಟದಿಂದ ಹಿಡಿದು, ಅವರ ಮನೆಯ ಶಯನ ಗೃಹದವರೆಗೂ ಹೋಯಿತು.
ಜನರು ಎಲ್ಲಿ ಎಂಥಹ ವಿಷಯಗಳನ್ನು ಮಾತನಾಡಬೇಕೆಂಬುದನ್ನು ಅರಿಯುವುದಿಲ್ಲ. ಬಾಯಿಗೆ ಬಂದದ್ದನ್ನು ಇಚ್ಚಾಪೂರ್ವಕವಾಗಿ ಮಾತನಾಡುತ್ತಾರೆ. ಅದು ರಸಿಕತೆಯೇ ಆದರೂ ನನ್ನಂಥಹ ಪೋಲಿ ಹುಡುಗನಿಗೆ ಮುಂಜಾನೆಯ ಚಳಿಯೊಂದಿಗೆ ಇವರ ಮಾತುಗಳು ಏನನ್ನೋ ನೆನಪಿಸುತ್ತಿದ್ದೆವು. ಮದುವೆಯ ಅನಿವಾರ್ಯತೆ ಕಾಣಿಸುವುದು ಇಂಥಹ ಸಮಯದಲ್ಲಿಯೇ ಎನಿಸುತ್ತದೆ. ಅವರು ನಮ್ಮ ದೇಶದ ಬಗೆಗೆ, ಪಾಪ ಸರ್ಕಾರದ ಬಗೆಗೆ ಕೆಲವು ಅರ್ಥಪೂರ್ಣ ಬೈಗುಳಗಳನ್ನು ಹೇಳಿದರು. ಹಾಗೂ ಹೀಗೂ ಕಣ್ಮುಚ್ಚಿ ಮಲಗಿದೆ. ನನಗೆ ಸಂಜೆ ಪ್ಯಾಸೆಂಜರ್ ರೈಲಿಗೆ ಬರುವ ಮನಸ್ಸಿರಲಿಲ್ಲ. ಆದರೇ ವಿಧಿಯಿಲ್ಲದೇ ಪ್ಯಾಸೆಂಜರ್ ರೈಲಿನಲಿಯೇ ಬಂದು ಕುಳಿತೆ. ರೈಲಿನಲ್ಲಿಯೇ ಆಗಲೀ ಬಸ್ಸಿನಲ್ಲಿಯೇ ಆಗಲೀ ನಾನು ಕಂಡಂತೆ ಜನರು ಅದನ್ನು ಸಾರ್ವಜನಿಕ ವಸ್ತುವೆಂಬುದನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅವರೆಂದೂ ಅದರ ಜವಬ್ದಾರಿ ತೆಗೆದುಕೊಳ್ಳಲು ಬಯಸುವುದಿಲ್ಲ. ಅವರ ಮನೆಯಲ್ಲಿಯೂ ಅಷ್ಟೇ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರಾ ಇದು ತರ್ಕಕ್ಕೆ ನಿಲುಕದ್ದು. ನಾನು ಸೀಟು ಹುಡುಕಿಕೊಂಡು ಹೋಗುವಾಗ ಖಾಲಿಯಿದ್ದರೂ ಪಕ್ಕದಲ್ಲಿ ಅವರ ಬ್ಯಾಗುಗಳನ್ನು ಇಟ್ಟುಕೊಳ್ಳುವುದು, ಕಾಲನ್ನು ಎದುರಿನ ಸೀಟಿನ ಮೇಲೆ ಹಾಕಿ ಕುಳಿತುಕೊಳ್ಳುವುದು ಅವರ ಮುಖ ಭಾವವನ್ನು ನೋಡಿದರೇ ಸಾಕು ಅಯ್ಯೋ ಮುಂದಿನ ಮೂರು ಗಂಟೆ ಇವರ ಮುಖ ನೋಡಿ ಪಯಣ ಮಾಡುವುದು ಬೇಡವೆನಿಸುತ್ತದೆ. ಅವರು ನಿಮ್ಮನ್ನು ಸಹ ಪ್ರಯಾಣಿಕರೆಂದು ಭಾವಿಸುವುದಿಲ್ಲ, ವೈರತ್ವವನ್ನು ಸಾಧಿಸುವವರಂತೆ ಕಾಣುತ್ತಾರೆ. ಹಾಗೇ ಮುಂದುವರೆದು ಖಾಲಿ ಸೀಟಿನಲ್ಲಿ ಕುಳಿತೆ. ಎದುರು ಬದುರಿನಲ್ಲಿ ನಾಲ್ಕು ಜನರು ಕುಳಿತಿದ್ದೆವು. ಅಲ್ಲಿಗೆ ಒಂದು ದೊಡ್ಡ ತಂಡವೇ ಬಂದಿತು. ನಾಲ್ಕು ಜನ ಹೆಂಗಸರು, ನಾಲ್ಕು ಮಕ್ಕಳು, ಇಬ್ಬರು ಗಂಡಸರು ಬಂದರು. ಅಷ್ಟು ಜನ ಕುಳಿತುಕೊಳ್ಳಲು ಅಲ್ಲಿ ಜಾಗವಿಲ್ಲವೆಂಬುದು ಅವರಿಗೆ ಅರಿವಾದರೂ ಕೂಡ ಅಲ್ಲಿಯೇ ಕುಳಿತುಕೊಳ್ಳಲು ತಿರ್ಮಾನಿಸಿದರು. ಅದರಲ್ಲಿ ಮಕ್ಕಳು ಮತ್ತು ಒಬ್ಬಳು ಹೆಂಗಸು ಮೇಲೆ ಕುಳಿತುಕೊಳ್ಳಲು ನಿರ್ಧರಿಸಿದರು.
ಪ್ಯಾಸೆಂಜರ್ ರೈಲಿನಲ್ಲಿ ಮೇಲೆ ಕುಳಿತುಕೊಳ್ಳುವ ಅವಕಾಶವಿರುವುದಿಲ್ಲ. ಅಲ್ಲಿ ಕೇವಲ ಲಗ್ಗೇಜು ಇರಿಸುವ ವ್ಯವಸ್ತೆಯಿರುತ್ತದೆ. ಮೇಲೆ ಹೋಗುವಾಗ ಕೆಳಗೆ ಕುಳಿತಿರುವವರ ಬಗೆಗೆ ಸ್ವಲ್ಪವೂ ಯೋಚಿಸದೇ ಹತ್ತಿದರು. ಕಾಲಿನಲ್ಲಿದ್ದ ಚಪ್ಪಲಿಗಳನ್ನು ತೆಗೆಯದೇ ಹತ್ತಿದ್ದರಿಂದ ಬದಿಯಲ್ಲಿ ಕುಳಿತಿದ್ದವರ ತಲೆಯ ಮೇಲೆ, ಮಣ್ಣು ಬಿದ್ದಿತು. ಪಾಪ ಕುಳಿತ ತಪ್ಪಿಗೆ ಅನುಭವಿಸಿದರು. ಅವರು ಮೇಲೆ ಹೋದ ನಂತರ ಗಂಡಸರು ಬಾಗಿಲ ಬಳಿಯಲ್ಲಿ ನಿಂತು ಪ್ರಯಾಣಿಸುವುದಾಗಿ ಹೋದರು. ಹೋದ ನಂತರ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಬಂದರು. ಕುಳಿತುಕೊಳ್ಳಲು ಜಾಗವೇ ಇಲ್ಲದಿದ್ದರೂ ಅಲ್ಲಿಯೇ ತಳ ಹೂಡಿದರು. ಬಂದ ಕೆಲವೇ ಕ್ಷಣಕ್ಕೆ, ಊಟ ಮಾಡಲು ಶುರುಮಾಡಿದರು. ಊಟ ಮಾಡಿದ ಮೇಲೆ ಮಗು ಮಲಗುತ್ತೇನೆಂದಿತು, ಮಲಗಲು ಬದಿಯಲ್ಲಿಯೋ ತೊಡೆಯಮೇಲೆಯೋ ಮಲಗಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಮಗುವನ್ನು ಓಡಾಡುವ ಕಾರಿಡಾರಿನಲ್ಲಿ ಮಲಗಿಸಿದರು. ಅಯ್ಯೋ ಹೆತ್ತವರೇ! ಎನಿಸಿತು. ಪ್ಯಾಸೆಂಜರ್ ರೈಲಿನಲ್ಲಿ ಓಡಾಡುವವರು ಹೆಚ್ಚಿರುತ್ತಾರೆ, ಕಾಫಿ, ವಡೆ, ದೋಸೆ, ಚುರುಮುರಿ, ಸೀಬೆ ಕಾಯಿ, ಸಪೋಟ ಹೀಗೆ ಎಲ್ಲರೂ ಬರುವುದು, ಮಗುವನ್ನು ದಾಟುವುದು ಅನಾಗರಿಕತೆಯೆನಿಸಿತು. ಅದಕ್ಕೂ ಮುಂಚೆ, ಅವರು ಬಂದ ಸ್ವಲ್ಪ ಹೊತ್ತಿಗೆ, ಪಕ್ಕದವರನ್ನು ಈ ನಂಬರಿಗೆ ಫೋನ್ ಮಾಡಿ, ಮಂಜನಿಗೆ ಹೇಳಿ, ನಾವು ರೈಲು ಹತ್ತಿದ್ದೇವೆ ಎಂದರು. ಒಬ್ಬರೂ ನಿರಾಕರಿಸಿದರೂ ಮತ್ತೊಬ್ಬರು ಕರೆ ಮಾಡಿಕೊಟ್ಟರು, ಮೂರ್ನಾಲ್ಕು ನಿಮಿಷ ಮಾತನಾಡಿದ್ದಲ್ಲದೆ, ಬೇರೆ ಯಾರೆಲ್ಲ ಬರುತ್ತಿದ್ದಾರೆ, ಯಾವುದರಲ್ಲಿ ಬರುತ್ತಿದ್ದಾರೆಂಬುದನ್ನು ವಿಚಾರಿಸಿ ಇದೇ ನಂಬರಿಗೆ ಫೋನ್ ಮಾಡಿ ಎಂದರು. ನನಗೆ ಇದನ್ನು ಕಂಡು ನಗಬೇಕಾ? ತಿಳಿಯಲಿಲ್ಲ. ಅವರು ಕೇಳಿದ ರೀತಿ ಕೂಡ ಕೋರಿಕೆಯಂತಾಗಿರಲಿಲ್ಲ.
ಪಾಂಡವಪುರ ಬರುವಾಗ ಪಕ್ಕದಲ್ಲಿ ಜಾಗವಿದ್ದಿದ್ದರಿಂದ ಮೇಲೆ ಕುಳಿತಿದ್ದವರು ಕೆಳಗಿಳಿದರು. ಆ ಗಂಡಸು ಮೇಲೆ ಹತ್ತಿ ಮಲಗುವುದಾಗಿ ಹೋದನು. ನಾನು ಆ ಹೆಂಗಸಿಗೆ ನಿಮ್ಮ ಮಗಳನ್ನು ಮೇಲೆ ನಿಮ್ಮ ಗಂಡನ ಜೊತೆಯಲ್ಲಿ ಮಲಗಿಸಿ ಎಂದೆ. ಇಲ್ಲಾ ಅವರು ಮಲಗಿದ್ದಾರೆ ಎಂದಳು. ದಾರಿಯಲ್ಲಿ ಈ ರೀತಿ ಮಲಗಿಸುತ್ತೀರಲ್ಲಾ ಓಡಾಡುವವರು ದಾಟುವುದಿಲ್ಲವೆ? ಎಂದೆ. ಅದಕ್ಕೆ ಆ ಹೆಂಗಸಿಗೆ ಏನನ್ನಿಸಿತೋ? ಅಲ್ಲಿಂದ ಮಗುವನ್ನು ಕರೆದು, ಎರಡು ಸೀಟಿನ ನಡುವೆ ನೆಲದಲ್ಲಿ ಮಲಗಿಸಿತು. ಅಯ್ಯೋ ದೇವರೇ, ಎಂದುಕೊಂಡೆ. ಕಾಲು ಕೆಳಕ್ಕೆ ಬಿಟ್ಟರೇ ಮಗುವಿನ ದೇಹಕ್ಕೆ ತಾಕುವುದಿಲ್ಲವೇ? ಅದರ ಜೊತೆಗೆ ಪಕ್ಕದಲ್ಲಿ ಕುಳಿತ ಮಹಾಮಣಿಯರು ಕಡ್ಲೆಕಾಯಿ ತಿನ್ನಲು ಶುರುಮಾಡಿದರು. ತಿಂದ ಕಡ್ಲೆಕಾಯಿ ಸಿಪ್ಪೆಯನ್ನು ಮಗುವಿನ ಮೇಲೆ ಹಾಕುತ್ತಿದ್ದರು. ನಾನು ಮಗು ಕೆಳಗೆ ಮಲಗಿದೆ, ಸಿಪ್ಪೆಯನ್ನು ಅಲ್ಲಿಗೆ ಹಾಕಬೇಡಿ ಎಂದೆ. ಅದೆಲ್ಲಿಗೆ ಹಾಕಿದರೂ ಮಗುವಿನ ಮೇಲಂತೂ ಬೀಳಲಿಲ್ಲ. ಮಕ್ಕಳನ್ನು ಹೆತ್ತವರಿಗೆ ಅವರ ಬಗೆಗೆ ಕಾಳಜಿಯಿಲ್ಲವೆಂದರೇ ಅದೇಕೆ ಜೊತೆಯಲ್ಲಿ ಕರೆದೊಯ್ಯಬೇಕು? ಹೆಂಗಸು ಮಗಳನ್ನು ಮಾತನಾಡಿಸುವಾಗ ಮಾತ ಚಿನ್ನಿ, ಚಿನ್ನಿ ಎನ್ನುತ್ತಿದ್ದಳು. ಅದು ಬರೀ ಮಾತಿನಲ್ಲಿಯೇ ಹೊರತು ಪ್ರೀತಿಯಿರಲಿಲ್ಲ. ಇನ್ನೇನೂ ಬಿಡದಿ ಬಂತು ಎನ್ನುವಾಗ, ಬಾಗಿಲ ಬಳಿಯಲ್ಲಿ ನಿಂತಿದ್ದ ಇಬ್ಬರು ಗಂಡಸರು ಬಂದು ಕುಳಿತರು. ಕುಳಿತುಕೊಳ್ಳಲು ಜಾಗವಿಲ್ಲದಿದ್ದರೂ, ಅದರಲ್ಲಿಯೇ, ಹೆಂಗಸರನ್ನು ಒತ್ತಿಕೊಂಡು ಕುಳಿತುಕೊಂಡರು. ನಾನು ನನ್ನ ಶೂಗಳನ್ನು ತೆಗೆದು ಧರಿಸಲು, ಯತ್ನಿಸುವಾಗ, ಅವರು ಅಲುಗಾಡಲೇ ಇಲ್ಲ. ನಾನು ಕೇಳಿದಮೇಲೆಯೇ ಅವರು ತಮ್ಮ ಕಾಲುಗಳನ್ನು ಮತ್ತೊಂದು ದಿಕ್ಕಿಗೆ ಬದಲಿಸಿದ್ದು.
ಜನರಿಗೆ ಸಾಮಾನ್ಯ ಪ್ರಜ್ನೆಯೇ ಇರುವುದಿಲ್ಲವೇ? ಇವರು ಹಳ್ಳಿಯವರೂ ಅಲ್ಲಾ, ಬೆಂಗಳೂರಿನವರಂತೇಯೇ, ಜೀನ್ಸ್, ಟೀ-ಶರ್ಟ್ ಎಲ್ಲಾ ತೊಟ್ಟಿದ್ದಾರೆ. ಜೋರಾಗಿ ಹಾಡು ಬರುವ ಮೊಬೈಲ್ ಇದೆ. ಪಟ್ಟಣದವರಂತೆ ಇರಬೇಕೆಂದು ಬಯಸುವ ಇವರು ಹೋಯ್ತದೆ, ಬತ್ತದೆ, ಅನ್ನುವುದನ್ನು ಮರೆತು ಹೋಗುತ್ತದೆ, ಬರುತ್ತದೆ ಎಂದು ಕನ್ನಡ ಭಾಷೆಯನ್ನು ತಿದ್ದುಕೊಂಡಿದ್ದಾರೆ, ಆದರೇ ನಾಗರೀಕತೆಯ ವಿಷಯಕ್ಕೆ ಬಂದಾಗ ಮಾತ್ರ ಶೂನ್ಯ. ಇನ್ನೂ ಕೆಲವರು ಗದ್ದಲವೆಬ್ಬಿಸುವುದು ವೀರತನವೆಂದು ಭಾವಿಸಿದ್ದಾರೆ. ಬಸ್ಸಿನಲ್ಲಿ, ರೈಲಿನ್ನಲ್ಲಿ ಪ್ರಯಾಣಿಸುವಾಗ ಕಿರುಚುವುದು, ಯಾರಾದರೂ ಸುಮ್ಮನಿರಿ ಎಂದಾಗ ಅವರಿಗೆ ತಿರುಗಿ ಹೇಳಿ ಅವರನ್ನು ಅವಮಾನಿಸುವುದನ್ನೇ ವೀರ ಪೌರುಷವೆಂದು ಭಾವಿಸಿದ್ದಾರೆ. ಹಿರಿಯರಿಗೆ, ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮರ್ಯಾದೆ ನೀಡದೇ, ಹೆಂಗಸರಿದ್ದರೇ ಡಬ್ಬಲ್ ಮೀನಿಂಗ್ ಪದಗಳನ್ನು ಬಳಸಿ ರೇಗಿಸುವುದು, ಪಕ್ಕದಲ್ಲಿ ಕುಳಿತ ಅಪರಿಚಿತ ಹೆಂಗಸರ ಮೈಮುಟ್ಟುವುದು. ಇನ್ನೂ ಕೆಲವರು ರಸ್ತೆಯಲ್ಲಿ ನಡೆಯುವಾಗ ಡಿಕ್ಕಿ ಹೊಡೆದು ಹೋಗುವುದನ್ನು ರಸಿಕತೆಯೆಂದು ಭಾವಿಸಿದ್ದಾರೆ. ಅನಾಕರಿಕತೆ, ಅನೈತಿಕತೆ, ಅಸಂಸ್ಕೃತಿಯನ್ನು ಅರಿಯದ ಜನರು ಕೋಟಿ ಕೋಟಿ ಸಂಪಾದನೆ ಮಾಡಿದರೂ ಅವರಿಂದ ಸಮಾಜಕ್ಕೆ ಆಗುವ ಅನುಕೂಲತೆ ಅಷ್ಟಕ್ಕಷ್ಟೆ.

ಸ್ನೇಹವೆಂದಿಗೂ ನಿಸ್ವಾರ್ಥವೇ ಸರಿ.....!!!!!

ನಾನು ಆಗ್ಗಾಗ್ಗೆ ಹೇಳುತ್ತಲೇ ಇರುತ್ತೇನೆ, ಪ್ರೀತಿಯೆಂಬುದು ಸ್ವಾರ್ಥದಿಂದ ತುಂಬಿದೆ, ನಿಸ್ವಾರ್ಥ ಪ್ರಿತಿಯ ಅವಶ್ಯಕತೆ ಜಗತ್ತಿನ ಏಳಿಗೆಗೆ ಬಹಳ ಮುಖ್ಯವಾಗಿದೆ. ನಿಸ್ವಾರ್ಥ ಪ್ರೀತಿ, ಸೌಹಾರ್ದತೆಯನ್ನು ತರಲು, ಗಾಂಧೀಜಿ, ಬುದ್ದ, ಏಸು ಎಲ್ಲರೂ ಪ್ರಯತ್ನಿಸಿದರು. ಆದರೇ ಪ್ರಯತ್ನಿಸಿದಷ್ಟೂ ದೂರಕ್ಕೆ ಹೋಗಿ ಇಂದೂ ಮರೀಚಿಕೆಯಾಗಿದೆ. ನನ್ನ ಜೀವನದಲ್ಲಿಯೂ ಒಮ್ಮೊಮ್ಮೆ ಇಂಥಹ ಸನ್ನಿವೇಶಗಳಿಂದ, ಜನರಿಂದ ಮೋಸವಾಗಿರುವುದು ಸಾಮನ್ಯವೆನಿಸಿದರೂ, ನಾನೆಂದು ಪ್ರೀತಿಸುವುದರಿಂದ ಹಿಂಜರಿದಿಲ್ಲ. ಒಬ್ಬರಿಗೆ ಸಹಾಯಮಾಡುವ ಮುನ್ನವೇ ಅವರಿಂದ ಏನಾದರೂ ಸಿಗುವುದೇ? ಅಥವಾ ನಾನು ಸಹಾಯ ಮಾಡಿದರೇ ಅದರಿಂದಾಗುವ ಉಪಯೋಗವೇನು? ಎಂದು ಲೆಕ್ಕಾಚಾರ ಹಾಕುವ ಮಂದಿ ಬಹಳಷ್ಟಿದ್ದಾರೆ. ಅಂತಹ ಜನರ ನಡುವೆಯೂ ಅಪರೂಪಕ್ಕೊಮ್ಮೆ ಅಪರೂಪದ ಸ್ನೇಹಿತರು ಸಿಗುತ್ತಾರೆ. ಅವರು ನಿಮಗಾಗಿ ಏನು ಬೇಕಿದ್ದರೂ ಮಾಡಲು ಸಿದ್ದರಿರುತ್ತಾರೆ, ಅದೊಂದು ನಿಸ್ವಾರ್ಥ ಪ್ರೀತಿ, ಆದರೇ ನಿಮ್ಮ ಹೆಜ್ಜೆ ತಪ್ಪಿಟ್ಟ ಮರುಕ್ಷಣವೇ ಎಚ್ಚರಿಸುತ್ತಾರೆ, ಹೆದರಿಸುತ್ತಾರೆ. ಅವರಿಗೆ ನಿಮ್ಮ ಜೀವನ ಪೂರ್ತಿ ಕೃತಜ್ನರಾಗಿದ್ದರೂ ಕಡಿಮೆಯೇ ಸರಿ. ಅಂಥವರ ಪಟ್ಟಿಗೆ ಸೇರುವ ನನ್ನ ಕೆಲವು ಗೆಳತಿಯರಿದ್ದಾರೆ, ಮೊದಲನೆಯವಳು ರೆಜಿನಾ, ಮೈಸೂರಿನಲ್ಲಿಯೇ ಹುಟ್ಟಿ ಬೆಳೆದಿರುವ ರೆಜಿನಾಳಿಗೆ, ಸ್ನೇಹಿತರೂ, ಕಷ್ಟದಲ್ಲಿರುವವರೆಂದರೇ ಎಲ್ಲಿಲ್ಲದ ಕಾಳಜಿ. ಇಂಥಹವಳೊಬ್ಬಳು ನನಗೆ ಸ್ನೇಹಿತೆಯಾಗಿರುವುದು ನಿಜಕ್ಕೂ ನಾನು ಹೆಮ್ಮೆ ಪಡುವಂತಹದ್ದೆ, ನನಗೆ ಅವಳು ಪರಿಚಯವಾಗಿ ಎರಡು ವರ್ಷವಾಗಿದೆ. ಈ ಎರಡು ವರ್ಷದಲ್ಲಿ ನಾನು ಅವಳಿಂದ ಕಲಿತಿರುವ ವಿಷಯಗಳು ಹಲವಾರು. ಅವಳು ಬಡವರಿಗೆ, ಇಲ್ಲದವರಿಗೆ, ದೀನರಿಗೆ, ಸಹಾಯ ಮಾಡುವುದರಲ್ಲಿ, ಪರಿಸರದ ಬಗೆಗೆ, ಕೃಷಿ, ಅದರಲ್ಲಿಯೂ ಸಾವಯವ ಕೃಷಿ ಬಗೆಗೆ ಅವರಿಗೆ ಇರುವ ಧ್ಯೇಯ ಮೆಚ್ಚಲೇ ಬೇಕಾದ್ದದ್ದು. ಬೆಳ್ಳಿಗ್ಗೆಯಿಂದ ಸಂಜೆಯವರೆಗು ಕಚೇರಿಯಲ್ಲಿ ಕೆಲಸ ಮಾಡಿ ಬಂದು, ಸಂಜೆ ಅಂಗವೈಕಲ್ಯವಿರುವ ಮಕ್ಕಳಿಗೆ ಮನೆ ಪಾಠವನ್ನು ಉಚಿತವಾಗಿ ಹೇಳಿಕೊಡುತ್ತಾಳೆ. ದುಡ್ಡು ಕೊಟ್ಟರೂ ನಿಗವಹಿಸಿಕೊಂಡು ಪಾಠ ಹೇಳಿಕೊಡದ ಜನರಿರುವಾಗ ಉಚಿತವಾಗಿ ಅದೂ ಬುದ್ದಿ ಮಾಂಧ್ಯ ಮಕ್ಕಳಿಗೆ ಪಾಠ ಹೇಳಿಕೊಡುವುದು ನನಗಂತೂ ಹೆಮ್ಮೆಯ ವಿಷಯ. ರೆಜಿನಾ ಆಗ್ಗಾಗ್ಗೆ, ಅವರ ಸಂಸ್ಥೆಯವರು ನಿರ್ಮಿಸಿರುವ ಸಂಶೋಧನ ಕೇಂದ್ರಕ್ಕೆ, ಹೋಗುತ್ತಿರುತ್ತಾರೆ. ಮಹಾದೇವಪುರದಲ್ಲಿರುವ ಅವರ ಕ್ಷೇತ್ರ ಕೇಂದ್ರದಲ್ಲಿ ಅವರು ಲವಲವಿಕೆಯಿಂದ ಎಲ್ಲಾ ತರಬೇತಿ ಶಿಬಿರವನ್ನು ನಡೆಸಿಕೊಡುವುದಂತೂ ನಿಜಕ್ಕೂ ಖುಷಿ ನೀಡುತ್ತದೆ.
ಅವರು ನಡೆಸುವ ಶಿಬಿರ ತನ್ನ ಉದ್ದೇಶವನ್ನು ತಲುಪಲೇಬೇಕೆಂದು ಹಟಹಿಡಿದು, ಎಲ್ಲಾ ವರ್ಗದವರನ್ನು ತಂದು ಸಾವಯವ ಕೃಷಿ ಬಗೆಗೆ ಅರಿವು ಮೂಡಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು, ರೈತರು, ಉದ್ಯೋಗಿಗಳು ಹೀಗೆ ಎಲ್ಲಾ ವಿಧದವರನ್ನು ಮುಖ್ಯವಾಹಿನಿಗೆ ತರುತ್ತಿದ್ದಾರೆ. ಎಂದೂ ಅವಳ ಮುಖದಲ್ಲಿ ನೊಂದ ಅಥವಾ ದಣಿದ ಭಾವನೆಯನ್ನೇ ನಾನು ಕಂಡಿಲ್ಲ. ನಾನು ಅವಳನ್ನು ರೇಗಿಸುತ್ತಿರುತ್ತೇನೆ, ಇಷ್ಟೆಲ್ಲಾ ಶಕ್ತಿ ನಿನಗೆ ಎಲ್ಲಿಂದ ಬರುತ್ತದೆ, ನಿನ್ನಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ನನಗೂ ಸ್ವಲ್ಪ ನೀಡು ಎಂದು. ತಾಳ್ಮೆ ಸಹನೆಯ ವಿಷಯದಲ್ಲಿಯಂತೂ ಅವಳನ್ನು ಮೀರಿಸುವ ಮತ್ತೊಬ್ಬ ಹೆಣ್ಣನ್ನು ನಾನು ಕಂಡಿಲ್ಲ. ಇದೆಲ್ಲದಕ್ಕಿಂತಲೂ ಬಹಳ ಮೆಚ್ಚುಗೆಯಾಗುವ ವಿಷಯ ಅವಳು ಅವರ ಮಗನನ್ನು ಬೆಳೆಸುವ ರೀತಿ ಅಚ್ಚರಿಯುಂಟಾಗಿಸುತ್ತದೆ. ಎಂಟನೆಯ ತರಗತಿ ಓದುತ್ತಿರುವ ಅವರ ಮಗನನ್ನು ಸ್ನೇಹಿತನಂತೆಯೇ ಕಾಣುತ್ತಾಳೆ. ಎಲ್ಲವನ್ನು ಚರ್ಚಿಸುತ್ತಾರೆ, ಮಗನೂ ಅಷ್ಟೇ ಎಂಟನೆಯ ತರಗತಿಯ ತುಂಟತನವಿಲ್ಲ, ಕುತೂಹಲವಿದೆ, ತಿಳಿಯಬೇಕೆಂಬ ಹಂಬಲವಿದೆ.
ನನ್ನ ರೆಜಿನಾ ವಿಷಯದಲ್ಲಿ ಹೇಳಬೇಕೆಂದರೇ, ರೆಜಿನಾಳಿಂದ ಕಲಿತ್ ವಿಷಯಗಳು, ತಾಳ್ಮೆಯಿಂದರಬೇಕು, ಜೀವನದಲ್ಲಿ ಒಳ್ಳೆಯದನ್ನು ಬಯಸುವ ಮನಸ್ಸಿದ್ದರೇ ಸದಾ ಒಳ್ಳೆಯದಾಗುತ್ತದೆ. ಏನನ್ನು ಬಯಸದೇ ಸಹಾಯ ಮಾಡಬೇಕು. ಈ ಜನ್ಮದಲ್ಲಿ ಎಷ್ಟೂ ಸಾಧ್ಯವೋ ಅಷ್ಟೂ ಸಹಾಯ ಮಾಡಬೇಕು. ನಾವು ಆದಷ್ಟೂ ಬೇಡುವುದನ್ನು ನಿಲ್ಲಿಸಬೇಕು. ಯಾವುದಕ್ಕೂ ಯಾರ ಬಳಿಯಲ್ಲಿಯೂ ಬೇಡಬಾರದು. ನಮ್ಮ ಕೆಲಸವನ್ನೂ ನಾವೇ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅನಿವಾರ್ಯತೆವಿಲ್ಲದ ಹೊರತು ಬೇಡಬಾರದು. ಸಂಯಮ, ಶಾಂತಿ, ಸಹನೆ, ಪ್ರೀತಿ, ಸ್ನೇಹ ಇವೂ ಬಾಳಿನ ಮುಖ್ಯ ವಸ್ತುಗಳು.
ಎರಡನೆಯ ವ್ಯಕ್ತಿ ಪವಿತ್ರಾ, ಪವಿತ್ರಾ ನನ್ನ ಜೊತೆಯಲ್ಲಿ ಎಂಎಸ್ಸಿ ಓದಿದವಳು. ನಮ್ಮ ಸ್ನೇಹ ಆರು ವರ್ಷದ್ದಾದರೂ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಜಾಸ್ತಿ ಆಗಿರುವುದು ಸತ್ಯ. ಇಡೀ ತರಗತಿಯೇ ನನ್ನ ವಿರುದ್ದ ದನಿಯೆತ್ತಿದ ಸಮಯದಲ್ಲಿ ನನ್ನ ನೆರವಿಗೆ, ಬೆಂಬಲಕ್ಕೆ ಬಂದವಳು ಪವಿತ್ರ. ನಾವು ಕಾಲೇಜಿನಲ್ಲಿ ಮಾಡಿದ ಎಲ್ಲಾ ಸಮಾರಂಭಗಳು, ಪ್ರವಾಸಗಳು, ಯಶಸ್ವಿಯಾಗಲು ಕಾರಣವಾದದ್ದು ನನ್ನ ಜೊತೆಗಿದ್ದು ಸಹಕರಿಸಿದ ಪವಿತ್ರಾಳಿಂದ. ಅವಳು ಶ್ರಮ, ನೆರವು, ಒಳ್ಳೆತನ ಯಾರಿಗೂ ತಿಳಿದಿರಲಿಲ್ಲ. ಅವಳು ಎಲೆ ಮರೆಯ ಕಾಯಿಯಂತೆಯೇ ಇದ್ದಳು. ಇಂದಿಗೂ ಅಷ್ಟೇ ನನ್ನ ಪಿಎಚ್ ಡಿ ವಿಷಯದಲ್ಲಿಯೂ ಅಷ್ಟೇ ನನಗೆ ಸಹಾಯ ಮಾಡಿ ನನ್ನನ್ನು ಬೆಂಬಲಿಸಿದ್ದು, ರೆಜಿನಾ ಮತ್ತು ಪವಿತ್ರಾವೆಂದರೇ ತಪ್ಪಿಲ್ಲ. ಇವರಿಬ್ಬರು ಇಲ್ಲದಿದ್ದರೇ ನಾನು ಪಿಎಚ್ ಡಿಯನ್ನು ಮಾಡುತ್ತಿದ್ದೆನಾ ಎನ್ನುವಷ್ಟೂ ಅನುಮಾನ ಬರುತ್ತದೆ. ಹಲವು ಬಾರಿ ಹೇಳಿದ್ದೇನೆ, ಈ ಪಿಎಚ್ ಡಿಯಲ್ಲಾ ಬೇಕಾ ಎಂದು. ಪವಿತ್ರಾನ ವಿಷಯದಲ್ಲಿಯೂ ಅಷ್ಟೇ ಅವಳ ಒಳ್ಳೆತನವನ್ನು ದುರುಪಯೋಗಪಡೆದುಕೊಳ್ಳುವವರೇ ಹೆಚ್ಚು. ವಿಭಾಗದಲ್ಲಿ ಪವಿತ್ರಾ ಕಷ್ಟಪಟ್ಟು ಕೆಲಸ ಮಾಡಿದರೂ ಅದರ ದುರುಪಯೋಗ ಪಡೆದು ಅವರ ಹೆಸರು ಹಾಕಿಸಿಕೊಂಡು ಮೆರೆಯುವವರೇ ಹೆಚ್ಚು. ಇದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇನ್ನೊಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವುದು. ಅಲ್ಲಿ ನೈತಿಕತೆಯ ವಿಷಯವೇ ಬರುವುದಿಲ್ಲ. ಅವರಿಗೆ, ನೀತ ನಿಯತ್ತು, ನೈತಿಕತೆ, ಧರ್ಮ ಅಧರ್ಮವೆಂಬುದು ಕಾಣಿಸುವುದಿಲ್ಲ. ಸ್ನೇಹವೆಂಬ ಪದಕ್ಕೂ ಅರ್ಥವಿರುವುದಿಲ್ಲ.

19 ಅಕ್ಟೋಬರ್ 2010

ಅಜ್ಜಿಯಂದಿರಂಗಳದಲ್ಲಿ ಸುಂದರ ಹಬ್ಬ

ಕೆಲವೊಮ್ಮೆ ನೋವು ಕೊಡುವ ನೆನಪುಗಳನ್ನು ಹತ್ತಿಕ್ಕಿ ಜೀವನವನ್ನು ಮುನ್ನೆಡೆಸಲು ಸಾಕಷ್ಟು ಪ್ರಯತ್ನಿಸುತ್ತೇವೆ. ಆದರೂ ಅದೇ ನೆನಪುಗಳು ನಮ್ಮನ್ನು ಬೆಂಬಿಡದೇ ಕೊಲ್ಲುತ್ತವೆ. ನಾನು ಊರಿಗೆ ಹೋದಾಗೆಲ್ಲ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೆಲವೊಂದು ಕೊಲ್ಲುತ್ತವೆ. ಹೈಸ್ಕೂಲಿನಲ್ಲಿ ನಡೆದಾಡುತ್ತಿದ್ದ ಕಾಲುವೆ ಏರಿ, ನದಿ ದಂಡೆ. ಪಿಯುಸಿಯಲ್ಲಿ ಕದ್ದು ಮುಚ್ಚಿ ಸಿಗರೇಟು ಸೇದಲು ಕುಳಿತಿರುತ್ತಿದ್ದ ನಮ್ಮೂರಿನ ಕಟ್ಟೆ, ಅದರ ಮೇಲಿದ್ದ ನೀರು ಧುಮುಕುವಾಗ ಮಾಡುವ ಬೋರ್ಗರೆತ. ಇವೆಲ್ಲವೂ ಇಂದು ಇದ್ದರೂ ಅಂದಿನ ಆ ಸಂಚಲನವಿಲ್ಲ. ಆ ದಿನದ ಉತ್ಸಾಹ ನನಗಿಂದು ಬರುವುದಿಲ್ಲ. ನನ್ನ ಜೊತೆ ಬರುವ ನನ್ನೆಲ್ಲಾ ಸ್ನೇಹಿತರಿಗೂ ಹೇಳುತ್ತಿರುತ್ತೇನೆ, ವಿವರಿಸುತ್ತೇನೆ. ಅವರಲ್ಲಿ ಅನೇಕರು ನಾನು ಹೇಳಿದ್ದನ್ನೆ, ಕೇಳಿ ಕೇಳಿ ಬೇಸತ್ತು ಸಾಕು ನಿಲ್ಲಿಸು ತಂದೆ ಎಂದಿದ್ದಾರೆ. ವಿಜಿ ಮಂಜೇಶ್ ಅಂತೂ ನಾನು ಬಾಯಿ ತೆರೆಯುವ ಮುನ್ನವೇ, ಇದು ಹರೀಶ್ ಸಿಗರೇಟು ಹೊಡೆಯುತ್ತಿದ್ದ ಜಾಗ, ಇದು ಅವನು ಸಂಜೆ ಕುಳಿತು ಹರಟೆ ಹೊಡೆಯುತ್ತಿದ್ದ ಜಾಗವೆಂದು ಹೇಳುತ್ತಾರೆ. ಅವರು ಹೇಳುವುದು ನನ್ನಯ ಮೇಲಿನ ಅಭಿಮಾನದಿಂದಲ್ಲ, ನಾನು ಬಾಯಿ ತೆಗೆದರೆ ಅರ್ಧ ಗಂಟೆ ಅವರಿಗೆ ಬೋರು ಹೊಡೆಸುತ್ತೇನೆಂಬ ಭಯದಿಂದ. ಅದೇನೆ ಇರಲಿ, ಈ ಬಾರಿ ಹಬ್ಬಕ್ಕೆ ಹೋದಾಗ ಸಂತೋಷ ಅತಿಯಾಗಿತ್ತಾದರೂ, ಅದರ ಜೊತೆಗೆ ದೊಡ್ಡ ಮಟ್ಟದ ನೋವು ಆಯಿತು.
ಶನಿವಾರ ಬೆಳ್ಳಿಗ್ಗೆ ನಾನು ಕಿರಣ ಬೆಂಗಳೂರಿನಿಂದ ಹೊರಟು ಮೈಸೂರಿಗೆ ತಲುಪಿದೆವು. ಆಯುಧ ಪೂಜೆಯ ಸಂಜೆ ನಮ್ಮ ಮನೆಯಲ್ಲಿ ಹಬ್ಬ ಇರುತ್ತದೆ. ಮನೆಯಲ್ಲಿ ತೀರಿಹೋಗಿರುವ ಹಿರಿಯರಿಗೆ ಎಡೆ ಇಡುವುದು ನಮ್ಮ ಪದ್ದತಿ. ಕರ್ನಾಟಕದಾದ್ಯಂತ ಪ್ರತಿಯೊಬ್ಬರೂ ಇದನ್ನು ಮಾಡಿದರು ಒಬ್ಬೊಬ್ಬರು ಒಂದೊಂದು ಹಬ್ಬದಲ್ಲಿ ಒಂದೊಂದು ವಿಧವಾಗಿ ಮಾಡುತ್ತಾರೆ. ನಮ್ಮೂರಿನಲ್ಲಿ ಆಯುಧ ಪೂಜೆಯ ರಾತ್ರಿ ಮಾಡುವುದು ಪದ್ದತಿ. ಮೈಸೂರಿಗೆ ಹೋಗಿ ಅಲ್ಲಿ ನನ್ನ ಗೆಳತಿ ರೆಜಿನಾಳ ಮನೆಗೆ ಹೋಗಿ ಎರಡು ಕಪ್ ಕಾಫಿ ಕುಡಿದು, ಕಿರಣನ ಮನೆಯಲ್ಲಿ ಜ್ಯೂಸ್ ಕುಡಿದು ಹೊರಟೆನು. ಕೆಲವರು ಅಷ್ಟೇ, ಅದೆಷ್ಟು ನಮ್ಮನ್ನು ಖುಷಿ ಪಡಿಸುತ್ತಾರೆಂದರೆ, ಒಂದು ಸಣ್ಣ ವಿಚಾರಗಳು ಅವರೊಂದಿಗೆ ಬಹಳ ಮುದನೀಡುತ್ತವೆ. ಇದರ ಸಾಲಿನಲ್ಲಿ ಮೊದಲು ನಿಲ್ಲುವವಳು ರೆಜಿನಾ. ರೆಜಿನಾ ಮಾಡುವ ಕಾಫಿ ಕುಡಿದವನೇ ಧನ್ಯವೆಂದು ನಾನು ಹೇಳುತ್ತಿರುತ್ತೇನೆ. ಅದರಂತೆಯೇ ನನ್ನಜ್ಜಿ ಮಾಡುವ ರೊಟ್ಟಿ, ಅಮ್ಮ ಮಾಡುವ ಸೊಪ್ಪಿನ ಸಾರು, ಮುದ್ದೆ, ನನ್ನ ಮತ್ತೊಬ್ಬಳು ಗೆಳತಿ ಪವಿತ್ರಾ ಅವರ ಅಮ್ಮ ಮಾಡುವ ಮಾಂಸದೂಟ ಇವೆಲ್ಲವೂ ಅಷ್ಟೇ, ನಾಚಿಕೆ ಇಲ್ಲದೆ ಕೇಳಿ ಪಡೆಯೋಣವೆನಿಸುತ್ತದೆ. ಹೀಗೆ ಹೊರಟವನು ಕುಶಾಲನಗರಕ್ಕೆ ಬಂದು ರವಿ ಮನೆಯಿಂದ ಎರಡು ಫುಲ್ ಬಾಟಲು ತೆಗೆದುಕೊಂಡು ಹೊರಟೆನು. ಅವನು ಮಿಲ್ಟ್ರಿಯಲ್ಲಿರುವುದರಿಂದ ಅತ್ತ್ಯುತ್ತಮ ಹೆಂಡವು ಕಡಿಮೆ ದರದಲ್ಲಿ ಸಿಗುತ್ತದೆಂದು ಮನೆಯಲ್ಲಿ ಹಬ್ಬವಿರುವುದರಿಂದ ಬೇಕೆಂದು ಹೇಳಿದ್ದೆ. ಸೋಮಾರಿಯಾದ ಅವನು ಹೋಗದೇ ಅವನ ತಮ್ಮ ತಂದಿದ್ದರಿಂದಲೇ ಕೊಟ್ಟನು. ಮನೆ ತಲುಪುವಾಗ ಸಂಜೆ ನಾಲ್ಕಾಗಿತ್ತು.
ಸಂಜೆ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಯಾರೂ ಸ್ನೇಹಿತರಿಲ್ಲದೇ ಇದ್ದದ್ದು. ಅಂತೂ ಇಂತೂ ಪೂಜೆ ಮುಗಿಸಿ, ಎಡೆಯನ್ನು ಮನೆಯ ಮೇಲೆ ತೆಗೆದುಕೊಂಡು ಹೋಗಿ ಇಟ್ಟು ಬಂದು ಊಟ ಮಾಡುವ ಸಮಯಕ್ಕೆ, ಮನೆಗೆ ಬಂದಿದ್ದ ನನ್ನ ಅಜ್ಜಿ, ನನ್ನ ಅಜ್ಜಿಯ ಅಕ್ಕ, ಮತ್ತು ತಂಗಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡಿದರು. ನನಗೆ ಎಂದರೇ ನನ್ನ ಅಜ್ಜಿಯ ಜೊತೆ ಒಡ ಹುಟ್ಟಿದವರು ಒಟ್ಟು ಒಂಬತ್ತು ಜನ ಹೆಣ್ಣು ಮಕ್ಕಳು ನಮ್ಮ ಮುತ್ತಾತನ ಹಿರಿಯ ಹೆಂಡತಿಗೆ, ಮತ್ತು ಐದು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ಕಿರಿಯ ಹೆಂಡತಿಗೆ. ಹಾಗಾಗಿ ನಮ್ಮ ಅರಕಲಗೂಡು ತಾಲೂಕಿನ ಪ್ರತಿ ಹಳ್ಳಿಯಲ್ಲಿಯೂ ನಮಗೆ ನೆಂಟರಿದ್ದಾರೆ. ಒಬ್ಬೊಬ್ಬ ಅಜ್ಜಿಗೂ ಕಡಿಮೆಯೆಂದರೇ ಆರು ಜನ ಮಕ್ಕಳಿದ್ದಾರೆ. ಅವರ ಮದುವೆಯಾಗಿರುವುದರಿಂದ ಮಕ್ಕಳ್ಳು ಸೊಸೆಯಂದಿರೂ ಹೀಗೆ ಒಂದು ಯಾವುದೇ ಸಮಾರಂಬಕ್ಕೆ ಸೇರಿದರೂ ಸಾವಿರ ಜನ ನನ್ನ ಅಜ್ಜಿಯಂದಿರ ಕಡೆಯಿಂದಲೇ ಇರುತ್ತಾರೆ. ಅವರೆಲ್ಲರ ಒಂದೇ ಆಸೆ ನನ್ನ ಮದುವೆ ಮಾಡುವುದು. ಅಪ್ಪ ನನ್ನನ್ನು ಎಂದೂ ನೇರ ಕೇಳಿಲ್ಲ, ಆದರಂತೆಯೇ ಅಮ್ಮನಿಗೂ ಸ್ವಲ್ಪ ಭಯ ಏನಾದರೂ ಎಂದುಬಿಡುತ್ತಾನೆಂದು. ಇನ್ನೂ ಅಜ್ಜಿಯಂತೂ ಪ್ರತಿ ಸಲ ಊರಿಗೆ ಹೋದಾಗಲೂ ಯಾವುದಾದರೂ ಒಂದು ಹುಡುಗಿಯ ಬಗೆಗೆ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ನೀನು ನೋಡಿಕೊಂಡಿದ್ದರೇ ಹೇಳು ಎಂದು ಮೊದಲು ಕೇಳುತ್ತಿದ್ದರೂ ನಾನು ಒಮ್ಮೆ ಮದುವೆಯಾಗಿ ಗಂಡನಿಂದ ಬೇರ್ಪಟ್ಟವಳನ್ನು ಮದುವೆಯಾಗೋಣವೆಂದು ನಿರ್ಧರಿಸಿದ್ದೇನೆಂದು ಹೇಳಿದ ಮೇಲೆ ಆ ಬಗೆಗೆ ಹೇಳುವುದನ್ನು ನಿಲ್ಲಿಸಿಯೇ ಬಿಟ್ಟರು.
ನಮ್ಮ ಅಜ್ಜಿ ಮರು ಮದುವೆಯ ಬಗೆಗೆ ಒಳ್ಳೆಯ ಅಭಿಪ್ರಾಯವಿಟ್ಟಿಕೊಂಡಿರುವುದು ಮೆಚ್ಚಲೇ ಬೇಕಾದ ವಿಷಯ, ಆದರೇ ತನ್ನ ಮೊಮ್ಮಗ ಆ ರೀತಿ ಆಗುವುದನ್ನು ಅವರು ಒಪ್ಪುವುದಿಲ್ಲ. ನಮ್ಮ ಮನೆಯಲ್ಲಿ ಮೊದಲೇ ನೋವುಂಡಿರುವುದರಿಂದ ಮತ್ತೊಮ್ಮೆ ನೋವುನ್ನಲು ಅವರು ಸಿದ್ದವಿಲ್ಲ. ಇದು ನನ್ನನ್ನು ಬಹಳಷ್ಟು ಗೊಂದಲಕ್ಕೆ ಈಡು ಮಾಡಿತ್ತು. ಅವರಿಗೆ ಹೇಳದೇ ಆದರೂ ಅದೆಷ್ಟು ದಿನ ಬಚ್ಚಿಡಬಹುದು. ನಾನು ಕುಡಿದರೂ, ಸೇದಿದರೂ, ಊರೂರು ಸುತ್ತಿದರೂ ಎಂದೂ ಯಾವ ದಿನಕ್ಕೂ ನಮ್ಮ ಅಪ್ಪ ಅಮ್ಮ ನನ್ನ ಬಗ್ಗೆ ಕೀಳಾಗಿ ಮಾತನಾಡಿಲ್ಲ. ನಮ್ಮಪ್ಪ ಒಂದೇ ಒಂದು ದೂರು ನಾನು ಸರ್ಕಾರಿ ಕೆಲಸಕ್ಕೆ ಸೇರದೇ ಇರುವುದು ಅನ್ನುವುದನ್ನು ಬಿಟ್ಟರೇ ಮತ್ತಾವ ತಕರಾರು ಬಂದಿಲ್ಲ. ಹೀಗೆ ಆ ವಿಷಯವೂ ಮುರಿದು ಬಿದ್ದ ಮೇಲೆ, ಸುಮ್ಮನಾಗಿಬಿಟ್ಟೆ. ನೀವು ತೋರಿಸುವ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ ಆದರೇ ಸ್ವಲ್ಪ ಸಮಯ ಕೊಡಿ ಎಂದೆ. ಅದಕ್ಕೆ ಅವರು ಆ ಸಮಯದಲ್ಲಿ ಒಪ್ಪಿದರೂ ನಂತರ ಪದೇ ಪದೇ ಅದನ್ನೇ ಕೇಳುತ್ತಿರುತ್ತಾರೆ. ಇದು ಪೋಷಕರ ಸಿದ್ದ ಹಕ್ಕು, ಹುಟ್ಟುಗುಣ ಕೂಡ ಹೌದು. ಅಂದು ರಾತ್ರಿ ಮೂರು ಜನ ಅಜ್ಜಿಯಂದಿರೂ ನನ್ನ ಮದುವೆ ವಿಷಯ ಪ್ರಸ್ತಾಪಿಸಿದರು. ನಾನು ಈಗ ಬೇಡವೆಂದರೂ ಪದೇ ಪದೇ ಅವರದ್ದೇ ಆದ ರೀತಿಯಲ್ಲಿ ವಿಷಯ ಮಂಡನೆ ಮಾಡಿದರು. ನಾನು ಇದುವರೆಗೂ, ನನ್ನ ಹಿರಿಯ ಅಜ್ಜಿ ಹೇಳಿದ್ದನ್ನು ಎಂದೂ ತೆಗೆದುಹಾಕಿಲ್ಲ, ಅದರಂತೆಯೇ ಅವರಿಗೂ ಅಷ್ಟೇ ನಾನು ಹೇಳುವ ಮಾತನ್ನು ಒಪ್ಪಿಕೊಳ್ಳುತ್ತಾರೆ. ಅವರು ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾರೆ. ನನಗೆ ಹೊರಗಡೆಯಲ್ಲಿನ ಭವಿಷ್ಯ, ಜ್ಯೋತಿಷಿಗಳಲ್ಲಿ ಅಷ್ಟು ನಂಬಿಕೆಯಿಲ್ಲದಿದ್ದರೂ ಅವರ ಮಾತಿನಲ್ಲಿ ಬಹಳ ನಂಬಿಕೆಯಿದೆ. ಅದಕ್ಕೆ ನಿದರ್ಶನ ನನ್ನ ಜೀವನ. ಅವರು ಹೇಳಿದ ಉಪಕಥೆಗಳು, ನೀತಿಪಾಠಗಳು, ನನ್ನ ಅನೇಕಾ ಆದರ್ಶಗಳಲ್ಲಿ ಬೆರೆತಿವೆ.
ನಾನು ಇಂದಿನ ಈ ಮಟ್ಟಗಿನ ವ್ಯಕ್ತಿಯಾಗಿರಲು ಅವರೇ ನೇರ ಹೊಣೆ. ನನ್ನಲ್ಲಿರುವ ಒಳ್ಳೆಯ ಗುಣಗಳು ಅವರಿಂದ ಕಲಿತವು. ಕೆಟ್ಟವು ಹುಟ್ಟಿನಿಂದಲೇ ಬಂದವು. ನಾನು ಓದುತ್ತಿರುವುದೇನು? ಇದನ್ನು ಅವರಿಗೆ ವಿವರಿಸಲು ಸಾಕಾಗಿ ಹೋಗುತ್ತದೆ. ಆದರೇ ಅವರು ಎಂಥಹ ಹುಡುಗಿ ಬೇಕೆಂಬುದು ಸ್ವತಃ ನನಗೂ ತಿಳಿದಿಲ್ಲ, ನನ್ನ ತಂದೆ ತಾಯಂದರಿಗೂ ತಿಳಿದಿಲ್ಲ. ಆದ್ದರಿಂದ ನನ್ನನ್ನು ಮದುವೆಯಾಗು ಎಂದು ಪಿಯುಸಿ ಓದುತ್ತಿರುವ ಹುಡುಗಿಯನ್ನು ತೋರಿಸುತ್ತಾರೆ, ಪಿಯುಸಿ ಫೇಲಾಗಿರುವವಳನ್ನು ತೋರಿಸುತ್ತಾರೆ. ಒಬ್ಬರೂ ಗಂಟು ಕೊಡುವ ಆಸೆ ತೋರಿಸುತ್ತಾರೆ, ಕೆಲವರು ಮರ್ಯಾದಸ್ತ ಮನೆತನವೆನ್ನುತ್ತಾರೆ. ನಾನು ಕೇಳಿ, ಕೇಳಿ ಸಾಕಾಗಿ ಹೋಗುತ್ತೇನೆ. ಹೀಗೆ ಗಂಟೆಗಟ್ಟಲೇ ಮಾತನಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅವರು ನನ್ನ ಮಾತಿಗೆ ಒಪ್ಪಲಿಲ್ಲ ನಾನು ಅವರ ಮಾತಿಗೆ ಸಮ್ಮತಿಸಲಿಲ್ಲ ಅದು ಮುರಿದು ಬಿದ್ದಂತೆ ಆಯಿತು. ಬೆಳ್ಳಿಗ್ಗೆ ಎದ್ದು, ನಮ್ಮೂರಿನ ಸುಬ್ಬಣ್ಣನ ಮನೆಗೆ ಹೋಗಿ ಮಾಂಸ ತೆಗೆದುಕೊಂಡುಬರಲು ಅಪ್ಪ ಹೇಳಿದ್ದರಿಂದ ನಾನು ವಿಜಿ ಸುಬ್ಬಣ್ಣನ ಮನೆಗೆ ಹೋದೆವು. ಅಲ್ಲಿ ಇನ್ನೂ ಚರ್ಮ ಸುಳಿಯುವ ಕೆಲಸ ನಡೆಯುತ್ತಿದ್ದರಿಂದ ಹಾಗೇಯೇ ಹೊರಗೆ ಬಂದು ನಿಂತಿರುವಾಗ ಗೋವಿಂದ ಬಂದನು. ಅವನು ಬೆಳ್ಳಿಗ್ಗೆ ಎಂಟುಗಂಟೆಗೆ ಟೈಟಾಗಿ ಗಮ್ಮೆನ್ನುತ್ತಿದ್ದನು. ಬಂದವನೇ ದೊಡ್ಡ ದೊಡ್ಡ ಮಾತನಾಡಿ ಇಪ್ಪತ್ತು ರೂಪಾಯಿ ಕೇಳಿದನು. ನೀವು ನನ್ನ ಹೃದಯದ್ದಲ್ಲಿದ್ದೀರಿ ಬುದ್ದಿ ಎಂದು ಅವನ ತಲೆಯ ಮೇಲೆ ಕೈಯಿಟ್ಟನು. ಹಣೆಬರಹವೇ ನಾನೇಷ್ಟು ಜನರ ಹೃದಯದಲ್ಲಿರಲಿ, ಆಗಲೇ ಬೇರೆಯವರು ನನ್ನನ್ನು ಬಲಿತೆಗೆದುಕೊಂಡಿದ್ದಾರೆ ಬಿಡು ಎಂದು ಹೇಳಿ ಕಳುಹಿಸಿದೆ.
ಸಲ್ಪ ಹೊತ್ತು ಕಳೆದು ಮತ್ತೆ ಸುಬ್ಬಣ್ಣನ ಮನೆಗೆ ಹೋದಾಗ, ಮಾಂಸ ಕತ್ತರಿಸುತ್ತಿದ್ದರು. ನಾನು ವಿಜಿ ಹೋಗಿ ಸ್ವಲ್ಪ ಹೊತ್ತು ನಿಂತಿರುವಾಗ ಸುಬ್ಬಣ್ಣ, ಮನೆಯವರಿಗೆ ಕುರ್ಚಿ ಹಾಕಲು ಹೇಳಿದರು. ನಾನು ಪರ್ವಾಗಿಲ್ಲ ಬಿಡು ಎಂದು, ಅಲ್ಲಿಯೇ ದನ ಕಟ್ಟಿ ಹಾಕುವ ಗೊಜಲಿಕೆಯ ಬಳಿ ಕುಳಿತೆನು. ಕುರ್ಚಿಯಲ್ಲಿ ಕುಳಿತುಕೊಳ್ಳಿ ಎಂದು ಒತ್ತಾಯಿಸುವಾಗ ಬಿಡು ಬೇಡ ಎಂದದ್ದಕ್ಕೆ, ಸುಬ್ಬಣ್ಣ, ಮರ್ಯಾದೆ ನಿನಗಲ್ಲ ಕನಪ್ಪಾ ನಿನ್ನ ವಿದ್ಯಾಭ್ಯಾಸಕ್ಕೆಂದರು. ನಾನು ಅಬ್ಬಾ ಶಿವನೇ ಅಂತೂ ನಾನು ಓದಿದ್ದು ಸಾರ್ಥಕವಾಯಿತು ಎಂದುಕೊಂಡೆ. ಅಲ್ಲೇ ಇದ್ದ ಕರಿಯಣ್ಣ ಓದಿದ ಮೇಲೆ ಹಳ್ಳಿ ಹೆಸರನ್ನೇ ಹೇಳುವುದಿಲ್ಲ ಜನರು ಎಂದ. ಅದಕ್ಕೆ ನಾನು ಅಯ್ಯೋ ಕರಿಯಣ್ಣ ನಾನು ಎಲ್ಲಿಗೇ ಹೋದರೂ ಹುಟ್ಟೂರು ಬಿಡಲು ಸಾಧ್ಯವೇ, ಎಂದೆ. ಅಲ್ಲಿಯೇ ಇದ್ದ ಬೋರಣ್ಣ, ಕರಿಯಣ್ಣ ನೀನು ಹೈದ್ರಾಬಾದಿಗೆ ಹೋದರೂ ನೀನು ಹೀರೇಗೌಡ್ರ ಕರಿಯಣ್ಣ ಅಂತಾನೆ ಅನ್ನೋದು ಕಣೋ, ಬೇರೆ ಇನ್ನೇನಾದ್ರೂ ಅಂತಾರಾ ಜನ ಎಂದ. ನಾನು ಆ ಅಭಿಮಾನ, ಒಡನೆಯೇ ಬಂದ ಸಮಯ ಪ್ರಜ್ನೆಯನ್ನು ಕಂಡೂ ನಿಜಕ್ಕೂ ಆನಂದಿಸಿದೆ. ನಿಮಗೆ ಹಾಸ್ಯೆಪ್ರಜ್ನೆಯಿದ್ದರೇ ಹಳ್ಳಿಗಳಲ್ಲಿ, ಕ್ಷಣ ಕ್ಷಣಕ್ಕೂ ಆನಂದಿಸಬಹುದೆಂಬುದಕ್ಕೆ ಇದೊಂದು ಉದಾಹರಣೆ. ಕರಿಯಣ್ಣ ಅಲ್ಲಿಗೆ ಬಂದದ್ದು, ತಕ್ಕಡಿ ತೆಗೆದುಕೊಂಡು ಹೋಗಲು, ಆದರೇ ಸುಬ್ಬಣ್ಣ ತನ್ನ ಕೆಲಸ ಆಗುವ ತನಕ ತಕ್ಕಡಿ ಕೊಡುವ ಮಾತೇ ಇರಲಿಲ್ಲ ಬಿಡಿ. ಕರಿಯಣ್ಣ ಏನೆಲ್ಲಾ ಉಪಾಯ ಮಾಡಿದರೂ ಸುಬ್ಬಣ್ಣ ತಕ್ಕಡಿಯನ್ನು ಕೊಡಲೇ ಇಲ್ಲ.
ಮೂರು ಗಂಟೆಯ ಹೊತ್ತಿಗೆ, ಕಿರಣ ಕೊಣನೂರಿಗೆ ಬಂದ. ಅವನು ನಾನು ಜೊತೆಯಲ್ಲಿಯೇ ಹೈಸ್ಕೂಲು ಓದಿದ್ದೆವು. ನಂತರ ಅವರು ಮೈಸೂರಿನಲ್ಲಿ ಮನೆ ಮಾಡಿಕೊಂಡು, ಅವನು ಬಿಎ ಓದಿ, ಬೆಂಗಳೂರಿಗೆ ಬಂದು ಇಲ್ಲಿ ಕೆಲಸಮಾಡುತ್ತಿದ್ದಾನೆ. ಅವನು ನಾನು ಕಂಡ ಅನೇಕಾ ಒಳ್ಳೆಯ ಸ್ನೇಹಿತರಲ್ಲಿ ಮೊದಲನೆಯವನು. ಒಬ್ಬರಿಗೆ ಕೆಡುಕು ಮಾಡಬೇಕೆಂಬುದನ್ನು ಕನಸಿನಲ್ಲಿಯೂ ಎಣಿಸುವುದಿಲ್ಲ. ಅಪರಿಚಿತರಿಗೂ ಸಹಾಯಮಾಡುತ್ತಾನೆ. ಶಿಸ್ತಿನ ವ್ಯಕ್ತಿ, ಸದಾ ನಗುತ್ತಿರುತ್ತಾನೆ. ಬಂದವನು ಬಸ್ಸಿನಲ್ಲಿ ಇಳಿದೊಡನೆಯೇ ನನಗೆ ಹೇಳಿದ, ಹರಿ ನಾನಿದ್ದಾಗ ರೋಡಿಗೆ ತಾರು ಹಾಕಿದ್ದು ಇನ್ನೂ ಹಾಕಿಲ್ಲ? ನೀನು ನಿಮ್ಮಪ್ಪ ಊರು ಬಿಟ್ಟು ಹೋದ್ರಲ್ಲ ನೀವೆ ಇಲ್ಲದ ಮೇಲೆ ತಾರು ಯಾಕೆ ಅಂತಾ ಹಾಕಿಸಿಲ್ಲ ಎಂದೆ. ಮನೆಗೆ ಬಂದು ಊಟ ಮಾಡಿದೆವು. ಊಟ ಮಾಡಿದ ಮೇಲೆ, ಸಿಗರೇಟು ತೆಗೆದುಕೊಂಡು ಕಟ್ಟೆಕಡೆಗೆ ಹೋಗುವಾಗ ನಮ್ಮ ಮಾವನ ಮಗ ಮಂಜ ಕೂಡ ಬಂದನು. ಅವನು ಆ ಸಮಯಕ್ಕೆ ಪೂರ್ತಿ ಟೈಟಾಗಿದ್ದ. ಕಟ್ಟೆಯಲ್ಲಿಗೆ ಬಂದು ಸ್ವಲ್ಪ ಹೊತ್ತು ಕಳೆದು ಅಲ್ಲಿ ಮೀನು, ಹಿಡಿಯುತ್ತಿದ್ದವರ ಜೊತೆ ಹರಟಿ ಮನೆಗೆ ಬರುವಾಗ ನಂಜೇಶನ ನೆನಪಾಗಿ, ಅವನಿಗೆ ಕರೆ ಮಾಡಿದೆನು. ನಂಜೇಶ ನನ್ನ ಜೊತೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಜೊತೆಯಲ್ಲಿಯೇ ಓದಿ, ಈಗ ಪಶು ವೈದ್ಯನಾಗಿ ಮೈಸೂರಿನಲ್ಲಿದ್ದಾನೆ. ಅವನು ಮೈಸೂರಿಗೆ ಹೊರಟಿದ್ದು, ಕೊಣನೂರಿಗೆ ಬೈಕಿನಲ್ಲಿ ಬಿಡುವಂತೆ ಕೇಳಿದ, ಕಿರಣ ಕೂಡ ಸ್ನೇಹಿತನಾಗಿದ್ದರಿಂದ ಅವನ ಮನೆಗೆ ಹೋದೆವು. ಹೋಗಿ ಯೋಗ ಕ್ಷೇಮ ವಿಚಾರಿಸುತ್ತಿದ್ದ ಸಮಯಕ್ಕೆ ಮನೆಯೊಳಕ್ಕೆ ಯಾರೋ ಬಂದ ಹಾಗೆ ಆಯಿತು. ನಾನು ಟೀ ಕುಡೀಯುತ್ತಿದ್ದೆ, ನನ್ನೆದುರು ಕುರ್ಚಿಯಲ್ಲಿ ಒಂದು ಮದುವೆಯಾದ ಹುಡುಗಿ ಬಂದು ಕುಳಿತಳು, ಅವಳ ಜೊತೆಯಲ್ಲಿ ಬಂದ ಗಂಡಸು, ನಂಜೇಶನ ಪಕ್ಕದಲ್ಲಿ ಕುಳಿತರು. ನಾನು ಅದೆಷ್ಟೇ ಕಷ್ಟಪಟ್ಟರೂ ನನ್ನ ಮುಖದಲ್ಲಾದ ಬದಲಾವಣೆಯನ್ನು ನಿಯಂತ್ರಿಸಲಾಗಲಿಲ್ಲ. ಎರಡು ಗುಟುಕು ಟೀ ಕುಡಿಯಲು ಯುಗವೇ ಕಳೆದಂತಾಯಿತು. ನನ್ನಲ್ಲಾದ ಬದಲಾವಣೆಯನ್ನು ವಿಜಿ ಗಮನಿಸಿದ ಎಂಬುದು ನನಗೆ ತಿಳಿಯಿತು. ನನ್ನ ಮುಂದೆ ಬಂದು ಕುಳಿತ ಆ ಹುಡುಗಿ ಮತ್ತಾರು ಅಲ್ಲಾ, ನನ್ನ ಮೊದಲ ಜೀವದ ಗೆಳತಿ, ಎಂದೆಂದಿಗೂ ಮಾಸದೇ ಉಳಿದಿರುವ ನೆನಪು ,,,,,,,,,,,.
ಅವಳನ್ನು ನೋಡುವ ಮನಸ್ಸು ಆಗದೇ, ನನ್ನ ಬೈಕಿನ ಕೀಯನ್ನು ನಂಜೇಶನಿಗೆ ಕೊಟ್ಟು ಕೊಣನೂರಿಗೆ ಬರುವಂತೆ ಹೇಳಿ ಬಂದೆ. ಅವರ ಮನೆಯಿಂದ ಬರುವಾಗ ಅವರ ಅಮ್ಮನಿಗೂ ಹೇಳದೇ ಬಂದದ್ದು, ಮತ್ತು ನಾನು ಅಷ್ಟೋಂದು ಬೇಸರಗೊಂಡದ್ದು ನನಗೆ ಬಹಳ ಕ್ಷುಲ್ಲಕವೆನಿಸಿತ್ತು. ಅವಳು ಬಂದರೇನಂತೆ, ಅವಳು ನನ್ನ ಜೀವನದಲ್ಲಿ ಎಂದೋ ಮಾಸಿ ಹೋದ ಪುಟವಲ್ಲವೇ ಎಂದರೂ ಒಬ್ಬಳೇ ಇದ್ದಿದ್ದರೇ ಅಷ್ಟು ಆಗುತ್ತಿರಲಿಲ್ಲವೇನೋ? ಜೊತೆಗಿದ್ದ ಗಂಡ, ಅವನು ಬೇಡವೆಂದರೂ ನನ್ನನ್ನು ಅವನೊಂದಿಗೆ ಹೋಲಿಸಿನೋಡತೊಡಗಿತು ನನ್ನ ಮನಸ್ಸು. ಅವನ ಮಾತಲ್ಲಿ ಒಂದು ನೈಸರ್ಗಿಕತೆಯಿಲ್ಲ, ಕಾಟಾಚಾರಕ್ಕೆ ಕರೆದಂತೇ, ಕಷ್ಟಪಟ್ಟು ಮಾತನಾಡುವುಂತೆ. ಭಾವುಕತೆಯಿಲ್ಲ, ಭಾವನೆಗಳಿಲ್ಲ. ದುಡ್ಡಿದೆ, ಸಂಪಾದನೆಯಿದೆ, ಆದರೇ ಅಷ್ಟೇನಾ ಬದುಕು? ನಿನ್ನ ಕಾಲ್ಗೆಜ್ಜೆಯ ಒಂದೇ ಒಂದು ಸಣ್ಣ ಗೆಜ್ಜೆ ತುಂಡು ಮೊನ್ನೆ ಮೊನ್ನೆವರೆಗೂ ನನ್ನ ಬಳಿಯಿತ್ತು. ಅಚಲ ಹಟಹಿಡಿದು ಎಸೆಯುವ ತನಕವೂ ನನ್ನ ಪರ್ಸಿನಲ್ಲಿಯೇ ಇತ್ತು, ನಿನಗೆಂದು ಬರೆದ ಪತ್ರವೂ ಅಷ್ಟೇ, ನನ್ನೊಡನೆಯೇ ಇದೇ ಹನ್ನೆರಡು ವರ್ಷದ ಹಿಂದೆ ಬರೆದದ್ದು, ಇವೆಲ್ಲವೂ ಹುಚ್ಚು ಭಾವುಕತೆ ಎನಿಸುತ್ತದೆ. ಆದರೇನು ಮಾಡಲಿ ನಾನು ಭಾವಾನಾಜೀವಿ. ನೀನು ಭಾವುಕಳೇ, ಅದು ನನಗೆ ತಿಳಿದಿದೆ. ಆದರೇ ನಿನ್ನಯ ಭಾವುಕತೆ ಮಣ್ಣಾಗಿದೆಂಬುದು ನೀ ಆಡಿದ ನಾಲ್ಕು ಮಾತುಗಳಲ್ಲಿಯೇ ತಿಳಿಯಿತು. ನಂತರ ಅಲ್ಲಿಂದ ಹೊರಟು ಬಂದಮೇಲೆ ನನಗೆ ನಾನೇ ಸಮಾಧಾನಪಡಿಸಿಕೊಂಡೆ. ಸಮಾಧಾನ ಪಡಿಸಿಕೊಳ್ಳುವಂತದ್ದೇನೂ ಆಗಲೇಯಿಲ್ಲವೆನ್ನುತ್ತದೆ.
ಶಂಕರ ಬಂದಮೇಲೆ, ಇನ್ನೊಂದು ಬಾಟಲಿ, ಸಿಗರೇಟು, ಸ್ಪೈಟು, ಎಲ್ಲವನ್ನು ತೆಗೆದುಕೊಂಡು ಮನೆಗೆ ಹೋದೆವು. ಮನೆಗೆ ಹೋಗಿದ ನಂತರ ನಮ್ಮ ಮಿಲ್ಟ್ರಿ ಮ್ಯಾನ್ ರವಿಗೆಂದು ಕಾಯ್ದೆವು. ಅವನು ಬರುವಷ್ಟರಲ್ಲಿ, ಗಂಟೆ ಎಂಟಾಗಿತ್ತು. ನಮ್ಮ ಮನೆಯಲ್ಲಿ, ಕ್ಯಾಂಪ್ ಫೈರ್, ಕುಣಿತ ಇವಲ್ಲವೂ ಸರಿಯೇ, ಆದರೇ ಮನೆಯ ಹತ್ತಿರದಲ್ಲಿಯೇ ಹಾಕಿ ಎನ್ನುತ್ತಾರೆ. ಬೇಡವೆಂದು ತೋಟದ ಕಡೆಗೆ ಹೊರಟೆವು. ಅಜ್ಜಿಗೆ, ಹೇಳಿ, ಮಟನ್, ಚಿಕನ್, ಉಪ್ಪಿನಕಾಯಿ, ನೀರು, ಮೊಟ್ಟೆ, ಬೋಟಿ ಹೀಗೆ ಎಲ್ಲವನ್ನು ತೆಗೆದುಕೊಂಡು ಹೊರಡಲು ಅಣಿಯಾದೆವು. ಕಿರಣನಿಗೆ, ಪಂಚೆಯ ಮರೆಯಲ್ಲಿ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ತೆಗೆದುಕೊಂಡು ಬ್ಯಾಗಿಗೆ ಹಾಕು ಎಂದೆ. ಅವನು ಸರಿಯಾಗಿ ನಮ್ಮ ಅಪ್ಪನ ಎದುರಿನಲ್ಲಿಯೇ ಬೀಳಿಸಿದನು. ಅಪ್ಪನ ಜೊತೆಗೆ ಅವರ ಸ್ನೇಹಿತರು ಕುಳಿತಿದ್ದರು. ನಾವು ಹೊರಟ ಕಾರ್ಯ ಅವರಿಗೆ ಸಂಪೂರ್ಣವಾಗಿ ತಿಳಿಯಿತು. ಇದೆಲ್ಲದರ ನಡುವೆ ಚಿಂತನ್ ನಮ್ಮುರಿನ ಸಭ್ಯಾವಂತ ಯುವಕ ಮತ್ತು ಅತಿ ಹೆಚ್ಚು ಓದಿರುವ ಬಸವರಾಜು ಬಂದಿದ್ದರು,. ನಾವು ನದಿ ಹತ್ತಿರದಲ್ಲಿ ಎಂದ ತಕ್ಷಣ, ಅವರು ಉಡುಗಿಹೋದರು. ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಹೆಚ್ಚು ಓದಿದ ಅವನು ದೆವ್ವವಿದೆಯೆಂದು ಪಲಾಯಣ ಮಾಡಿದ್ದು ನನಗೆ ಬಹಳ ಅಚ್ಚರಿ ತಂದಿತು. ಅದಲ್ಲದೇ, ಊರಿನವರು ಕಂಡರೇ ಏನೆಂದಾರೆಂಬುದು ಅವನ ಇನ್ನೊಂದು ಭಯವಾಗಿತ್ತು. ನಾವು ಹೋದ ಸಮಯಕ್ಕೆ ಮಂಜ ಕೂಡ ಜಮಾಯಿಸಿದನು. ಅವನು ಬಂದದ್ದು ಬೆಂಕಿ ಹೊತ್ತಿಸಲು ಅನುಕೂಲವಾಯಿತು. ಕುಡಿದ ನಂತರ ಶುರುವಾಗಿದ್ದು, ಮಂಜನ ಆರ್ಭಟ, ಮೂರ್ನಾಲ್ಕು ಗಂಟೆಗಳು ಸತತವಾಗಿ, ಕಾಮ ಕೇಳಿಯ ಬಗೆಗೆ ಬಾಯಿಗೆ ಬಂದಂತೆ ಮಾತನಾಡಿದನು. ಅದೆಲ್ಲಾ ಮಾತನಾಡಿದ ಮೇಲೆ ಅವನು ಹೇಳಿದ ಮಾತು ನಮ್ಮ ಭಾವ ಇದಾನೆ, ಅದಕ್ಕೆ ನಾನು ಹೆಚ್ಚಿಗೆ ಮಾತನಾಡಲಿಲ್ಲ! ವಿಜಿ ನಾನು ಶಂಕರ ಕುಣಿದು ಕುಪ್ಪಳಿಸುವಾಗ ರವಿ ಮತ್ತು ಕಿರಣ ಗಡಿಯಾರ ನೋಡುತ್ತಿದ್ದರು. ಮನೆಗೆ ಬಂದು ಮತ್ತೆ ಊಟ ಮಾಡಿ ಮಲಗುವಾಗ ರಾತ್ರಿ ಮೂರುವರೆಯಾಗಿತ್ತು.
ಬೆಳ್ಳಿಗ್ಗೆ ಎದ್ದು ಎಲ್ಲರೂ ಒಬ್ಬೊಬ್ಬರಾಗಿ ಊರು ಬಿಟ್ಟರು. ರಾತ್ರಿ ಮೂವರಿದ್ದ ಅಜ್ಜಿಯರ ಜೊತೆಗೆ ಮತ್ತೊಬ್ಬ ಅಜ್ಜಿ ಸೇರ್ಪಡೆಯಾಗಿದ್ದರು. ಅವರು ನಿನ್ನೆ ರಾತ್ರಿ ಹಾಕಿದ ರೆಕಾರ್ಡನ್ನೇ ಮತ್ತೆ ಹಾಕಿದರು. ಹೊಸದಾಗಿ ಮತ್ತೊಂದು ಸೇರ್ಪಡೆಯಾಗಿತ್ತು. ಹುಡುಗಿ ನನ್ನನ್ನು ನೋಡಿದ್ದಾಳೆ, ನಾನು ಹುಡುಗಿಯನ್ನು ನೋಡಿದ್ದೇನೆಂದು. ವಿಜಿ ಮದುವೆಗೆ ಹೋದಾಗ ಅದು ಆಗಿರುವುದು ವರ್ಷದ ಹಿಂದೆ ಆಗ ನನ್ನನ್ನು ನೋಡಿ, ಹುಡುಗಿಯ ಅಣ್ಣ ವಿಚಾರಿಸಿದ್ದಾನೆ. ಅವರು ನಮ್ಮ ಅಜ್ಜಿಯಂದಿರ ಸಂಬಂಧಿಕರೇ ಆದ್ದರಿಂದ ಅಜ್ಜಿಯಂದಿರೆಲ್ಲರೂ ಹೇಳುತ್ತಿದ್ದರು. ಅವರು ಹೇಳುವ ಪ್ರಕಾರ ಹುಡುಗಿಯೂ ನೋಡಿದ್ದಾಳೆಂದು. ನಮ್ಮ ಎರಡನೆಯ ಅಜ್ಜಿ ನೀನು ನೋಡಿದ್ದೀಯಂತೆ ಎಂದರು. ಹಣೆಬರಹಕ್ಕೆ ಹೊಣೆಯಾರೆಂದು ಪದೇ ಪದೇ ಆ ಮಾತುಗಳು ಬೇಡವೆಂದೆ. ನಾವು ರಾತ್ರಿ ಅಲ್ಲಿ ಹೋಗಿ ಕುಣಿದು, ಕುಪ್ಪಳಿಸುವಾಗ ನಮ್ಮಪ್ಪ ನಾವು ಒಂಬತ್ತು ಗುಡ್ಡದಲ್ಲಿ ಕಳವಾಗಿದ್ದ ಕಥೆಯನ್ನು ಅಜ್ಜಿಯಂದಿರಿಗೆ ಹೇಳಿದ್ದರು. ಅದು ನನಗೆ ಒಲಿತೆ ಆಯಿತು. ನಾನು ಆಗ್ಗಾಗ್ಗೆ ಕಾಡು ಮೇಡು ಅಲೆಯುತ್ತಿರುತ್ತೇನೆ, ಮದುವೆ ಈಗಲೇ ಬೇಡ, ಅದೆಲ್ಲವೂ ಅರ್ಥ ಮಾಡಿಕೊಳ್ಳುವವಳು ಬೇಕೆಂದು ಸಮಜಾಯಿಸಿದೆ. ಅಜ್ಜಿಯಂದಿರೂ ಆ ಮಾತುಗಳನ್ನೆಲ್ಲಾ ಒಪ್ಪುವವರಲ್ಲ. ನಾನು ನನ್ನ ಚಾರಣಗಳ ಸುದ್ದಿಯೆಲ್ಲಾ ಹೇಳುವಾಗ ಅವರು ಅವರ ಕಥೆಗಳನ್ನು ಬಿಡಿಸಿಟ್ಟರು. ನನ್ನ ದೊಡ್ಡಜ್ಜಿ, ಇಪ್ಪತ್ತ್ಮೂರು ದಿನ ಕಾಡಿನಲ್ಲಿದ್ದು ಬಂದಿದ್ದರು. ಯಾರೋ ಜ್ಯೋತಿಷಿ ಹೇಳಿದ ಮಾತನ್ನು ನಂಬಿ ಕಾಡಿನಲ್ಲಿದ್ದು ಬಂದಿದ್ದರು. ಆಗ ಅವರ ಮಗನಿಗೆ ಹದಿನೈದು ದಿವಸ. ಹದಿನೈದು ದಿನದ ಬಾಣಂತಿ ದಟ್ಟ ಕಾಡಿನಲ್ಲಿ ಇಪ್ಪತ್ಮೂರು ದಿನ ಯಾರ ಸಂಪರ್ಕಕ್ಕೂ ಬಾರದೇ ಇದ್ದು ಬಂದಿದ್ದು ಕಡಿಮೆಯೇ?

13 ಅಕ್ಟೋಬರ್ 2010

ನೋಡುವ ದೃಷ್ಟಿಯಂತೆ ಕಾಣುವ ವಸ್ತು!!!

ಮೊನ್ನೆ ನನ್ನ ಗೆಳತಿ ಬಿಬಿಎಂಪಿ ಯವರು ಬೆಂಗಳೂರಿನ ಗೋಡೆಯ ಮೇಲೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡಿ ಸುಂದರವಾದ ಚಿತ್ರಗಳನ್ನು ಬರೆಸಿದ್ದಾರೆ. ಆದರೇ, ಪ್ಯಾಂಟು ಭದ್ರವಿಲ್ಲದ ಗಂಡಸರು ಅಲ್ಲೇ ನಿಂತು ತಮ್ಮ ಮೂತ್ರವನ್ನು ಸುರಿಸುತ್ತಾರೆಂಬುದು ಅವರ ಆರೋಪ. ಅದಕ್ಕೆ ಹಲವಾರು ಮಿತ್ರರು ದನಿಗೂಡಿಸಿ, ನಾವು ಅದು ಮಾಡಬೇಕು ಇದು ಮಾಡಬೇಕೆಂದೆಲ್ಲಾ ಸಲಹೆ ನೀಡಿದ್ದಾರೆ ಮತ್ತು ನಮ್ಮ ಜನರನ್ನು ಬೈಯ್ದಿದ್ದಾರೆ. ಮೂತ್ರ ವಿಸರ್ಜನೆಯ ವಿಷಯದಲ್ಲಿರುವ ಕಷ್ಟವನ್ನು ಅನುಭವಿಸಿದವನು ಮಾತ್ರ ಹೇಳಬಲ್ಲ. ಹೆಂಗಸರಿಗೂ ಗಂಡಸರಿಗೂ ಈ ವಿಷಯದಲ್ಲಿ ಹೋಲಿಕೆ ಬೇಡ. ಗಂಡಸರು ಮೂತ್ರವನ್ನು ತಡೆಯುವುದು ಬಹಳ ಕಷ್ಟದ ಕೆಲಸ, ಮತ್ತು ಗೋಡೆಯ ಮೇಲೆ ಹೋಗಿ ಮಾತ್ರ ಮಾಡುವವನಾರೂ ಅಲ್ಲಿರುವ ಚಿತ್ರಗಳ ಬಗೆಗೆ ಚಿಂತಿಸುವುದಿಲ್ಲ ಅದನ್ನು ಒಪ್ಪುತ್ತೇನೆ. ಹಾಗೆಂದು ಮೂತ್ರವನ್ನು ತನ್ನ ಪ್ಯಾಂಟಿನೊಳಗೆ ಬಿಟ್ಟಿಕೊಳ್ಳಬೇಕೇ? ಅವರು ಅಪಾದಿಸುವಂತೇ, ಮೆಜೆಸ್ಟಿಕ್ ಬಿಟ್ಟರೇ, ಸುತ್ತಾ ಮುತ್ತಾ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ನನಗೆ ಕೆಲಸವಿದ್ದು, ಗಾಂಧಿನಗರದಲ್ಲಿದ್ದರೇ ಕೆಲಸ ಬಿಟ್ಟು ಮೆಜೆಸ್ಟಿಕ್ ಗೆ ಬಂದು ಹೋಗಬೇಕೇ? ಅಥವಾ ಅಲ್ಲಿಯೇ ರಸ್ತೆಯ ಬದಿಯಲ್ಲಿ ಮುಗಿಸಬೇಕೇ? ಇದು ನಿವೇ ನಿರ್ಧರಿಸಿ. ದಾರಿಯಲ್ಲಿ ಮನ ಬಂದಂತೆ ಒಂದನ್ನು ಮುಗಿಸುವುದು ತಪ್ಪೆಂದಾದರೇ, ಕಾರಿನಲ್ಲಿ ಕುಳಿತು ಕುಡಿಯುವುದು? ಪಾರ್ಕಿನಲ್ಲಿ ಕುಳಿತು ಮೈಯ್ಯಿಗೆ ಮೈಯ್ಯಿ ಉಜ್ಜುವುದು? ತುಟಿಗೆ ತುಟಿ ಒತ್ತುವುದು? ಇರುವ ಪಾರ್ಕ್ ಗಳೆಲ್ಲಾ ಲಾಡ್ಜ್ ಗಳಾಗಿವೆ. ಕಂಡ ಕಂಡ ಕಡೆಗೆ ನಿರೋಧ್ ಸಿಗುತ್ತವೆ, ಇವೆಲ್ಲದರಿಂದ ನಷ್ಟವಿಲ್ಲವೇ? ರಸ್ತೆ ಬದಿಯಲ್ಲಿ ಅವರು ಮಾಡುವುದು ಸರಿ ಎಂದು ಹೇಳುವುದಿಲ್ಲ, ಆದರೇ ಅದಕ್ಕೆ ಪರಿಹಾರಬೇಕಲ್ಲವೇ? ಪ್ರತಿಯೊಂದು ಏರಿಯಾಗಳಲ್ಲಿ ಒಂದು ಉಚಿತ ಶೌಚಾಲಯ ಕಟ್ಟಿಸಿದರೇ ತಪ್ಪಾಗುತ್ತದೆಯೇ? ವಾರ್ಡ್ ಗೆ ಎರಡರಂತೆ ಕಟ್ಟಿಸಿದರೂ ನಾಲ್ಕು ನೂರು ಶೌಚಾಲಯಗಳು ಸಾಕು. ಒಂದು ಶೌಚಾಲಯಕ್ಕೆ ಐವತ್ತು ಸಾವಿರದಂತೆ ಲೆಕ್ಕ ಹಾಕಿದರೂ, ಒಂದು ಕೋಟಿ ಅಥವಾ ಎರಡು ಕೋಟಿಗಳಲ್ಲಿ ಸಂಪೂರ್ಣ ಬೆಂಗಳೂರನ್ನು ಸುಂದರಗೊಳಿಸಬಹುದು. ಗೋಡೆಗಳಿಗೆ ಬಣ್ಣ ಹೊಡೆಸಿರುವುದು ಬಣ್ಣದ ಕಂಪನಿಯವನಿಗೆ ಲಾಭವಾಯಿತೇ ಹೊರತು, ಜನಕ್ಕಲ್ಲ.
ಅದೇನೆ ಇರಲಿ, ನಮ್ಮ ಹಲವಾರು ಜನಕ್ಕೆ ನಮ್ಮ ದೇಶದ ಬಗೆಗೆ ನಮ್ಮ ಜನರ ಬಗೆಗೆ ಅದರಲ್ಲಿಯೂ ಬಡವರ ಬಗೆಗೆ ಒಂದು ಬಗೆಯ ಅಸಡ್ಡೆ. ಇದು ವ್ಯಕ್ತಿಗತ ಅಭಿಪ್ರಾಯ. ಆದರೇ ನಾವು ಒಂದನ್ನು ಗಮನಿಸಬೇಕು. ನಾನೊಬ್ಬ ವಿದ್ಯಾವಂತ ಸಮಾಜದಲ್ಲಿರುವಾಗ ನಾನು ಹೆಚ್ಚು ಯೋಚಿಸಬೇಕಿರುವುದು ಅವಿದ್ಯಾವಂತ ಸಮಾಜದ ಬಗೆಗೆ, ಯಾಕೆಂದರೇ ಅವರನ್ನು ನನ್ನಂತೆಯೇ ಮಾಡಿ ನನಗಿರುವ ಸೌಕರ್ಯಗಳೆಲ್ಲವೂ ಅವನಿಗೆ ಸಿಗುವಂತೇ ಮಾಡಬೇಕಾಗುತ್ತದೆ. ನಿಮಗೊಂದು ಉದಾಹರಣೆ ನೀಡುತ್ತೇನೆ. ನಾವು ತಿಂಗಳಿಗೆ ಶೌಚಾಲಯಕ್ಕೆಂದು ಕಟ್ಟುವ ತೆರಿಗೆಯನ್ನು ನೀವೆಂದಾದರೂ ಗಮನಿಸಿದ್ದೀರಾ? ಸ್ವಂತ ಮನೆಯಲ್ಲಿರುವ ಶೌಚಾಲಯಕ್ಕೆ ಕಟ್ಟುವ ತೆರಿಗೆ ೨೫ ರೂಪಾಯಿಗಳು. ಒಟ್ಟು ನಾಲ್ಕು ಅಥವಾ ಐದು ಜನರಿಂದರೇ ಪ್ರತಿ ತಲೆಗೆ ೫ರೂಪಾಯಿ ಒಂದು ತಿಂಗಳಿಗೆ. ಆದರೇ, ಶೌಚಾಲಯವಿಲ್ಲದವರು ವೆಚ್ಚಿಸುವುದು ನಿಮಗೆ ತಿಳಿದಿದೆಯಾ? ಪ್ರತಿ ಸಲಕ್ಕೆ ಎರಡು ರೂಗಳು ಒಬ್ಬನಿಗೆ. ಎಂದರೇ, ಒಂದು ಮನೆಗೆ ದಿನಕ್ಕೆ ೨೫ರಿಂದ ಮೂವತ್ತು ರೂಪಾಯಿಗಳು. ತಿಂಗಳಿಗೆ ೯೦೦-೧೦೦೦ರೂಪಾಯಿಗಳನ್ನು ಶೌಚಾಲಯಕ್ಕೆ ಬಳಸಿದರೇ, ಅವನ ತಿಂಗಳ ವರಮಾನ ಹತ್ತು ಸಾವಿರವಿದ್ದರೂ ಶೇಕಡ ಹತ್ತರಷ್ಟು ಅಲ್ಲಿಗೆ ವ್ಯಯಿಸಲಾಗುತ್ತಿದೆ. ಒಬ್ಬ ಸರ್ಕಾರಿ ನೌಕರನ ಅಥವಾ ಯಾವುದೇ ಉದ್ಯೋಗಿಯ ಮನೆಬಾಡಿಗೆ ಭತ್ಯೆಯನ್ನು ಬಡವನೆನಿಸಿಕೊಂಡವನು ಶೌಚಾಲಯಕ್ಕೆಂದು ವ್ಯಯಿಸಬೇಕು ಇದಲ್ಲವೇ ಭವ್ಯಭಾರತದ ನಿಯಮಗಳು. ಇದರಲ್ಲಿ ಎಲ್ಲರನ್ನು ಸೇರಿಸಲಾಗುವುದಿಲ್ಲ ಅನೇಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಜನರು ಸೌಲಭ್ಯ ಕೊಟ್ಟರೂ ಬಳಸದೇ ಅಥವಾ ದುರ್ಬಳಕೆ ಮಾಡಿಕೊಂಡಿದ್ದಾರೆ ಇದಕ್ಕೊಂದು ಉದಾಹರಣೆ, ಶೌಚಾಲಯ ಕಟ್ಟಲು ಮತ್ತು ಗೋಬರ್ ಗ್ಯಾಸ್ ಕಟ್ಟಿಸಲು ಸರ್ಕಾರ ಕೊಟ್ಟ ಧನಸಹಾಯ.
ಇವೆಲ್ಲವೂ ಒಂದು ಕಡೆಗಿರಲಿ, ನಾನು ವಾರಕ್ಕೊಮ್ಮೆಯಾದರೂ, ಮೈಸೂರಿಗೆ ಹೋಗುತ್ತಿರುತ್ತೇನೆ. ಹೆಚ್ಚಿನ ಸಲ ಹೋಗುವುದು ಬರುವುದು ರೈಲಿನಲ್ಲಿಯೇ. ಸಾಧಾರಣವಾಗಿ ಎ಼ಕ್ಷಪ್ರೆಸ್ ರೈಲನ್ನು ಬಳಸುತ್ತೇನೆ. ಒಮ್ಮೊಮ್ಮೆ ತಡವಾದರೇ ಪ್ಯಾಸೆಂಜರ್ ನಲ್ಲಿ. ನಮ್ಮ ಜನರ ನಡುವಳಿಕೆಯ ಬಗೆಗೆ ನಿಜಕ್ಕೂ ಬರೆಯಬೇಕೆಂದರೇ ಬರೆಯಲೇಬೇಕಾದದ್ದು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವ ಕುಟುಂಬಗಳ ಬಗೆಗೆ. ಇಲ್ಲಿ ನಾನು ಯಾವುದೇ ಜಾತಿ ಅಥವಾ ಧರ್ಮವನ್ನು ಅಲ್ಲಗೆಲೆಯುತ್ತಿಲ್ಲ. ಆದರೂ ಸಾಮಾನ್ಯ ಪ್ರಜ್ನೆಯೂ ಇಲ್ಲದಂತೆ ವರ್ತಿಸುವುದು ಇಲ್ಲಿಯೇ. ರೈಲಿನಲ್ಲಿ ಪ್ರಯಾಣಿಸುವುದು ಕೇವಲ ಮೂರು ಘಂಟೆಗಳು, ತಿನ್ನುವುದು, ಕುಡಿಯುವುದು ಸಾಮಾನ್ಯವೆನ್ನಲೂ ಬಹುದು. ಆದರೇ, ಅದಕ್ಕೊಂದು ನೀತಿ ನಿಯಮ ಬೇಡವೇ? ನಾನು ಕಂಡಂತೆ, ಪ್ಯಾಸೆಂಜರ್ ರೈಲನ್ನು ಹೆಚ್ಚು ಬಳಸುವುದು ಮುಸ್ಲಿಂ ಭಾಂಧವರು. ಮನೆಯಲ್ಲಿರುವ ಅಷ್ಟೂ ಜನರನ್ನೂ ಎರಡೂ ಸೀಟಿನಲ್ಲಿ ಕುಳ್ಳಿರಿಸಿದರೇ ಅಲ್ಲಿಯೇ ಒಂದು ಮಸೀದಿ ಮಾಡಿ ನಮಾಝ್ ಮಾಡಿಸಲೂಬಹುದು ಅಷ್ಟು ಜನರಿರುತ್ತಾರೆ. ಅದು ಬಿಟ್ಟರೇ, ಎ಼಼ಕ್ಷಪ್ರೆಸ್ ರೈಲನ್ನು ಕೂಡ ತಲ್ಲುವ ಗಾಡಿ ಮಟ್ಟಕ್ಕೆ ಮಾಡುವುದು ನಮ್ಮ ಸೇಠುಗಳು ಅಥವಾ ಮಾರವಾಡಿಗಳು. ಇವರು ಅಷ್ಟೇ ಒಂಟಿ ಸೇಠುಗಳು ಹೋಗುವುದೇ ಇಲ್ಲ ಇಡೀ ಊರಿಗೆ ಊರೇ ಇವರ ಜೊತೆಯಲ್ಲಿ ಹೊರಡುತ್ತದೆ. ಹೋಗುವಾಗ ಬರುವಾಗ ಇವರನ್ನು ಕಳುಹಿಸಲು ಸ್ವಾಗತಿಸಲು ತಂಡವೇ ಇರುತ್ತದೆ. ಅಲ್ಲಿ ಹಬ್ಬದ ವಾತವಾರಣಕ್ಕಿಂತ ಸಂತೆಯಂತೆಯೇ ಕಾಣುತ್ತದೆ. ಆಚರಣೆಯಿರಬೇಕು ಆದರೇ ಇವರದ್ದು ಆಚರಣೆಯಂತೆ ಕಾಣುವುದಿಲ್ಲ ಗದ್ದಲದಂತೆ ಕಾಣುತ್ತದೆ.
ನಿನ್ನೆ ಮುಂಜಾನೆ ಐದು ಗಂಟೆಯ ರೈಲಿಗೆಂದು ಹೊರಟೆ, ಹೊರಟವನು ಕಾವೇರಿ ಎ಼ಕ್ಷಪ್ರೆಸ್ ಹತ್ತು ಮೇಲಿನ ಬರ್ತಿನಲ್ಲಿ ಮಲಗಿದೆ. ಮುಂಜಾನೆ ಆರು ಮೂವತ್ತಾಗಿರಬಹುದು, ಇಡೀ ರೈಲಿನಲ್ಲಿ ಸಂತೆಯಲ್ಲಿದ್ದಂತೆ ಗದ್ದಲ ಶುರುವಾಯಿತು. ಅವರನ್ನು ಕರೆಯುವುದು ಇವರನ್ನು ಕರೆಯುವುದು. ನಾನು ದಿಡೀರನೇ ಗಾಬರಿಯಿಂದ ಕಣ್ಣು ತೆರೆದೆ, ಇದೊಲ್ಲೆ ಕಥೆಯಾಯಿತಲ್ಲಪ್ಪ ಎಂದು ಪ್ರಯತ್ನದಿಂದ ಕಣ್ಣು ಮುಚಿದೆ. ಆದರೂ ಕಣ್ಣಿಗೆ ನಿದ್ದೆ ಹತ್ತಲು ಬಿಡುತ್ತಿಲ್ಲ. ಕೋಪ ಬರಲಾರಂಬಿಸಿತು. ನನ್ನ ಕೋಪ ಅದು ಉಪಯೋಗಕ್ಕೆ ಬರುವುದಿಲ್ಲ. ಸರಿ ಮೊಬೈಲ್ ತೆಗೆದು ಹಾಡು ಕೇಳೋಣವೆಂದರೂ ಇವರ ಮಾತಿನ ಶಬ್ದದ ಮುಂದೆ ಅಶ್ವತ್ ಅವರ ಹಾಡೂ ಕೇಳಿಸುತ್ತಿರಲಿಲ್ಲ. ನನ್ನ ಹಣೆಬರಹವೇ, ಎಂದು ಅವರ ಮುಖವನ್ನಾದರೂ ನೋಡೋಣವೆಂದು ಕೆಳಗೆ ಬಾಗಿದೆ. ಬೆಳ್ಳಿಗ್ಗೆ ಏಳು ಘಂಟೆಗೆ ಪುಣ್ಯಾತ್ಗಿತ್ತಿಯರು ಖಾರಸೋಗೆ (mixtures), ತಿನ್ನುತ್ತಿದ್ದಾರೆ. ಇವರೆಲ್ಲರೂ ನಾಗರೀಕ ಸಮಾಜದ ಮಹಾಮಣಿಯರು, ಅಯ್ಯೋ ಹೆಂಗಸರೇ ಎಂದು ಕುಳಿತರು, ಮಲಗಿದರು, ಮಗ್ಗಲು ಬದಲಾಯಿಸಿದರೂ ನನ್ನ ನಿದ್ದೆಯೆಂಬುದು ಬರಲೇ ಇಲ್ಲ. ನಾನು ಬೆಳಗಿನ ರೈಲಿಗೆ ಹತ್ತುವುದು, ರೈಲು ಖಾಲಿ ಇರುತ್ತದೆ, ಕನಿಷ್ಟವೆಂದರೂ ಎರಡು ಗಂಟೆ ನಿದ್ದೆ ಮಾಡಬಹುದೆಂದು ಇವರು ನನ್ನ ನಿದ್ದೆಯನ್ನು ಕದ್ದರು, ಕದ್ದರೋ ದೋಚಿದರೋ ಅಂತು ನನ್ನ ನೆಮ್ಮದಿಗೆ ಭಂಗ ಮಾಡಿದರು. ಬೆಳ್ಳಿಗ್ಗೆ ಬೆಳ್ಳಿಗ್ಗೆ ಕಾಟವಿರುವುದು ಬೆಂಗಳೂರಿನಿಂದ ಹೈದರಾಬಾದಿಗೆ ಹೋಗುವ ಸಂಪರ್ಕ ಕ್ರಾಂತಿ ರೈಲಿನ್ನಲಿ, ಅದು ಹೈದರಾಬಾದಿನ ಮೂಲಕ ದೆಹಲಿಗೆ ಹೋಗುತ್ತದೆ. ಅದರಲ್ಲಿ ಮುಂಜಾನೆ ಆರು ಗಂಟೆಗೆ ಚಕ್ಕಗಳು, ಒಂಬತ್ತುಗಳು, ಮಾಮಾಗಳು ನೀವು ಯಾವುದನ್ನು ಬೇಕಾದರೂ ಬಳಸಿ ಅವರು ಬಂದು ವಸೂಲಿಗೆ ನಿಲ್ಲುತ್ತಾರೆ. ಮುಂಜಾನೆ ಎದ್ದು ದೇವರನ್ನು ಬೇಡುವ ಮಂದಿ ಇಲ್ಲಿ ಪ್ರಯಾಣಿಸಿದರೇ ಅವರಿಗೆ ಇವರ ದರ್ಶನ, ಇವರ ಚಪ್ಪಾಲೆ, ಇವರು ಇರಿಸು ಮುರಿಸು ವರವಾಗಿ ಸಿಗುತ್ತದೆ.
ಅದು ಸಾಯಲಿ ಎಂದು ಬೈದುಕೊಂಡು ಇಳಿದು ಹೋದೆ. ಸಂಜೆಯಾದರೂ ನಿಶಬ್ದವಾಗಿರುವ ಎಕ್ಷಪ್ರೆಸ್ಸಿನಲ್ಲಿ ಹೋಗೋಣವೆಂದರೇ ಅದು ಆಗಲಿಲ್ಲ. ಸರಿ ಎಂದು ಪ್ಯಾಸೆಂಜರಿಗೆ ಹತ್ತಿದೆ. ಬಂದು ಕುಳಿತರೆ, ರೈಲು ಹೊರಡುವ ಮುನ್ನವೇ ಶುರುವಾಯಿತು ಗದ್ದಲ. ರೈಲು ಹೊರಟಿತು ಸೀಟು ಬಿಟ್ಟರೆ ಮತ್ತೆ ಸಿಗುವುದು ಗ್ಯಾರಂಟಿಯಿಲ್ಲ. ಹಣೆಬರಹವೇ! ಇರುವ ತಂಡವೆಲ್ಲಾ ಮುಸ್ಲೀಮರದ್ದು. ರೈಲು ಹೊರಡುವ ಮುನ್ನಾವೇ ಪಾರ್ಸಲ್ ತಂದಿದ್ದ, ಇಡ್ಲಿ, ವಡೆ, ಪಲಾವ್ ತಿನ್ನತೊಡಗಿದರು. ಇದನ್ನು ರೈಲು ಎಂದು ಅವರು ಭಾವಿಸಿದಂತಿರಲಿಲ್ಲ. ತಿನ್ನುವಾ ಕೆಳಕ್ಕೆ ಬೀಳಿಸದೇ ತಿನ್ನಬೇಕು ಅಥವಾ ಬೀಳಿಸಿದ್ದನ್ನು ಬಾಚಿ ಹೊರಕ್ಕೆ ಹಾಕುವ ಸಂಯಮ ಅವರಿಗಿದ್ದಂತೆ ಕಾಣಲಿಲ್ಲ. ನನ್ನ ಒಂದೇ ಒಂದು ಅದೃಷ್ಟ ಅವರು ತಿಂದ ಪ್ಲೇಟುಗಳನ್ನು ಹೊರಕ್ಕೆ ಎಸೆದದ್ದು. ಅದನ್ನು ಅಲ್ಲಿಯೇ ಬಿಟ್ಟರೂ ಅಚ್ಚರಿಯಿರಲಿಲ್ಲ. ಅವರು ತಿನ್ನುತ್ತಿದ್ದ ರೀತಿಯನ್ನು ಯಾವೊಬ್ಬ ನಾಗರೀಕ ನೋಡಿದ್ದರೂ ಮುಂದಿನ ಒಂದ ವಾರ ಅನ್ನವನ್ನು ಮುಟ್ಟುತ್ತಿರಲಿಲ್ಲ. ಇದೆಂಥಹ ಅನಾಗರೀಕತನ! ಅದರಲ್ಲಿದ್ದವರು ಮಳೆ ಬಂದದ್ದರಿಂದಳೋ ಏನೋ ಅವರ ಅಂಗಿಗಳು ಒದ್ದೆಯಾಗಿದ್ದವು. ಅದನ್ನು ಬಿಚ್ಚಿ, ರೈಲಿನಲ್ಲಿದ್ದ ಗೂಟಕ್ಕೆ ನೇತು ಹಾಕಿದರು. ಅದು ರೈಲು, ಸಾರ್ವಜನಿಕ ಸ್ಥಳವೆಂಬುದರ ಕಲ್ಪನೆ ಕೂಡ ಇರಲಿಲ್ಲ. ಆ ಮಳೆಯಲ್ಲಿ ನೆನೆದು ಬಂದು, ಅವರ ಮೈಯಲ್ಲಿದ್ದ ಮಾರ್ಕೆಟ್ ಸೆಂಟು ಮಳೆ ನೀರು ಅಲ್ಲಿ ಕುಳಿತಿದ್ದವರನ್ನು ಅದೆಷ್ಟು ಬೇಗ ಇಳಿದಾವು ಎನ್ನುವಂತೆ ಗಬ್ಬು ಮೂಡಿಸಿತು. ತಿಂದ ಮೇಲೆ ಸುಮ್ಮನಿರಲೂ ಸಾಧ್ಯವೇ ಒಂದು ಮಲ ವಿಸರ್ಜನೆಯಾಗಬೇಕು, ಇಲ್ಲವೆಂದರೇ ವಾಯು ವಿಸರ್ಜನೆಯಾಗಬೇಕು, ಆಗ ಶುರುವಾಯಿದು ಅಶ್ರುವಾಯು ಪ್ರಯೋಗ ಅಲ್ಲಿ ಕುಳಿತರೆ ನಾನು ಆಮ್ಲಜನಕವನ್ನು ಕುಡಿಯುವುದು ಅಸಾಧ್ಯವೆಂದು ಸೀಟು ಬದಲಾಯಿಸಿದೆ. ನಾನು ಹಲವಾರು ಬಾರಿ ಹೇಳಿದ್ದೇನೆ, ಮಾಡುತ್ತಲೂ ಇದ್ದೇನೆ. ಜನರನ್ನು ತಿದ್ದುವುದು, ಅವರಲ್ಲಿ ಜ್ನಾನ ಮೂಡಿಸುವುದು ಅವಶ್ಯಕ ಅದಕ್ಕಿಂತ ಮಿಗಿಲಾಗಿ ಅವರು ಸಾರ್ವಜನಿಕ ವಸ್ತುಗಳನ್ನು ಜವಬ್ದಾರಿಯಿಂದ ನೋಡುವಂತಾಗುವ ಮನೋಭಾವ ಅವರಲ್ಲಿ ಮೂಡಬೇಕು.
ಸೀಟು ಬದಲಾಯಿಸಿ ಕುಳಿತ ನಂತರ ಎದುರಿನ ಸೀಟಿನಲ್ಲಿ ಒಂದು ಮಧ್ಯಮ ವಯಸ್ಸಿನ ಮಹಿಳೆ ಮತ್ತು ವೃದ್ದೆ ಕುಳಿತರು. ಅವರು ನನ್ನನ್ನು ಎಳಿಯೂರು ಬಂದಾಗ ಹೇಳಿ ಎಂದು ಕೇಳಿದರು. ನಾನೋ ಆಗಬಹುದು ಆಗಬಹುದು ಎಂದೆ. ರೈಲಿನಲ್ಲಿ ಪ್ರಯಾಣಿಸುವುದೇ ಮುಂಜಾನೆ, ಮುಸ್ಸಂಜೆ ಅದರಲ್ಲಿಯೂ ಹೆಚ್ಚಿನ ಸಲ ನಿದ್ದೆ ಮಾಡುತ್ತೇನೆ. ಈ ಹೆಂಗಸು ಊರು ಬಂದಾಗ ಹೇಳಿ ಎಂದದ್ದು ನನ್ನನ್ನು ಎ಼ಚ್ಚರದಿಂದ ಸ್ಟೇಷನ್ ಗಳನ್ನು ಗಮನಿಸುವಂತೆ ಮಾಡಿತು. ನಾನು ಎಲ್ಲಾ ಸ್ಟೇಷನ್ ಬಂದಾಗಲೂ ಕತ್ತಲಿದ್ದರೂ ಇದು ಯಾವುದು ಹೋ ಇದು ಬ್ಯಾಡರಹಳ್ಳಿ, ಅದು ಇನ್ನೊಂದು ಇದು ಕ್ರಾಸಿಂಗ್ ಎಂದೆಲ್ಲಾ ಎಣಿಸಿ ಎಣಿಸಿ, ನೆಮ್ಮದಿ ಹಾಳುಮಾಡಿಕೊಂಡು ಕಡೆಗೆ ಎಳಿಯೂರು ಬಂತು ಎಂದೆ. ಇದು ಆದ್ಮೇಲೆ ಮಂಡ್ಯ ಅಲ್ವಾ ಎಂದರು. ಹೌದು ಎಂದೆ. ನೀವು ಇಲ್ಲಿ ಇಳಿಯಲ್ವಾ ಎಂದೆ. ಇಲ್ಲ ಎಂದರು. ಅಯ್ಯೊ ಹೆಂಗಸೇ, ಮಂಡ್ಯ ಹತ್ತಿರ ಬರುವಾಗ ಹೇಳಿ ಎಂದಿದ್ದರೇ ಹೇಳುತ್ತಿರಲಿಲ್ಲವೇ, ಎಂದು ಶಪಿಸಿ ಸುಮ್ಮನಾದೆ. ಅವರು ಇಳಿದ ಮೇಲೆ, ನನ್ನ ಲ್ಯಾಪ್ ಟಾಪ್ ತೆಗೆದು ರಾಜ್ಯ ರಾಜಕಾರಣದ ಅರಾಜಕತೆಯನ್ನು ಬರೆಯಲೆತ್ನಿಸಿದೆ. ಚನ್ನ ಪಟ್ಟಣ ಬರುವಾಗ ಮತ್ತೊಂದು ತಂಡ ಬಂದು ಕುಳಿತಿತು. ಇವರು ಅಷ್ಟೇ, ರೈಲಿಗೆ ಪಾರ್ಸೆಲ್ ಕಟ್ಟಿಸಿಕೊಂಡು ಇಡ್ಲಿ, ವಡೆ ತಂದಿದ್ದರು. ಅವರು ತಂದಿರುವುದು ಬೇಸರವೆನಿಸಲಿಲ್ಲ ಸ್ವಲ್ಪ ನಾಗರೀಕತೆಯಂತೆಯೇ ವರ್ತಿಸಿದರು. ಆದರೇ, ಪಕ್ಕದಲ್ಲಿದ್ದವನು ಕುಡಿದಿದ್ದರಿಂದ ಅದರ ವಾಸನೆಯೊಂದೇ ಅಲ್ಲಾ ಅವನ ಮಾತುಗಳು ನನ್ನನ್ನು ಹಿಂಸಿಸಿದವು. ಅವರ ಮನೆಯ ಹೆಣ್ಣುಮಗಳನ್ನು ಚನ್ನಪಟ್ಟಣಕ್ಕೆ ಮದುವೆ ಮಾಡಿದ್ದರು. ಗಂಡ ನನ್ನ ಹಾಗೇಯೇ ಮಹಾನ್ ಕುಡುಕ ಮತ್ತು ಸೋಮಾರಿ ಕುಡಿಯುವುದೇ ಮಹಾಧರ್ಮವೆಂದು ಭಾವಿಸಿದ್ದನಂತೆ. ಹೊಡೆಯುವುದು, ಬೆದರಿಸುವುದು ಆ ಹುಡುಗಿಯೂ ಐದು ವರ್ಷದಿಂದ ನೋಡಿ ಸಾಕಾಗಿ ಕಡೆಗೆ ಇಲ್ಲಿರಲಾಗುವುದಿಲ್ಲ ನಾನು ಸಾಯುವ ಮುನ್ನಾ ಬಂದು ನೋಡಿ ಎಂದು ಹೇಳಿದ್ದಳಂತೆ. ಅದನ್ನು ತೀರ್ಮಾನಿಸಲು, ಅಮ್ಮ, ಅಪ್ಪಾ, ಅಣ್ಣ ಅವರ ಜೊತೆಗಿಬ್ಬರೂ ಸಂಬಂಧಿಕರು ಹೋಗಿದ್ದರು. ಆ ಹುಡುಗಿಯನ್ನು ನೋಡಿ ನನಗೆ ಬಹಳ ಅನುಕಂಪ ಮೂಡಿತು. ನಾನು ಬಹಳಷ್ಟು ಬಾರಿ ಹೆಣ್ಣು ಮಕ್ಕಳನ್ನು ಅವರು ಮಾಡುವ ಫ್ಲರ್ಟ್ ಬಗೆಗೆ, ಅವಕಾಶವಾದದ ಬಗೆಗೆ ಬರೆದಿದ್ದೇನೆ, ಉಗಿದಿದ್ದೇನೆ. ಆದರೇ ಮದುವೆಯಾದ ಮೇಲೆ ಹೆಂಡತಿಯನ್ನು ನೋಯಿಸುವ ಗಂಡಸರನ್ನು ನಾನು ಗಂಡಸು ಎಂದು ಭಾವಿಸುವುದಿಲ್ಲ. ಪ್ರಪಂಚ ಜಾಗತೀಕರಣದಿಂದಾಗಿ ಬದಲಾಗಿರಬಹುದು ಹೆಣ್ಣು ಗಂಡು ಎನ್ನುವುದು, ಅವರ ಅಸ್ತಿತ್ವ ಸಾಮಾಜಿಕ ಜೀವನದಲ್ಲಿ ಬದಲಾಗಿರಬಹುದು ಆದರೇ ಮದುವೆಯಾದ ಹೆಂಡತಿಗೆ ಹೊಡೆದು ಬಡಿದು ನಿಂದಿಸಿ ನೋಯಿಸುವುದು ಅಕ್ಷಮ್ಯ ಅಪರಾಧ.
ಹೆಣ್ಣು ಮಕ್ಕಳು ಅಷ್ಟೇ ಅವರಲ್ಲಿ ಒಳ್ಳೆಯವರು ಹಾಲಿನಂತೆಯೇ ಇರುತ್ತಾರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರ ಜೀವನ ಮಣ್ಣುಪಾಲಾಗುತ್ತದೆ. ಸಮಾಜಕ್ಕೆ, ಮರ್ಯಾದೆಗೆ, ಘನತೆಗೆ, ಗಾಂಬೀರ್ಯಕ್ಕೆ, ಭಾವನೆಗಳಿಗೆ ಹೆದರುತ್ತಾರೆ. ಇನ್ನೂ ಕೆಲವರು ಕೊಳಚೆ ನೀರಿನಂತೆ, ಅವರು ಎಲ್ಲಿದ್ದರೂ ಏನು ಮಾಡಿದರೂ ಅವರಷ್ಟೇ ಅಲ್ಲದೇ ಮತ್ತೊಬ್ಬರ ಜೀವನವನ್ನು ಹಾಳು ಮಾಡುತ್ತಾರೆ. ಇವರೆಲ್ಲರೂ ಸೇರಿ ಗಂಡನ ಮತ್ತು ಗಂಡನ ಮನೆಯವರನ್ನು ಬೈಯ್ಯುತ್ತಿರುವಾಗಲೂ ಪಾಪ ಆ ಹುಡುಗಿ, ಇಲ್ಲಾ ಅತ್ತೆಯದ್ದು ಏನೂ ತಪ್ಪಿಲ್ಲ ಅವರಿಗೂ ಬೇಸರವಾಗಿದೆ. ನೀನು ಹಾಗೆ ಮಾತನಾಡಬಾರದಿತ್ತು ಎಂದು ಸಮಜಾಯಿಸುತ್ತಿತ್ತು. ಇವೆಲ್ಲವೂ ಹೆಣ್ಣಿನ ಹುಟ್ಟಿನಿಂದಲೇ ಬಂದಿರುವಂತವು. ಅವಳಿಗೆ ಸೇಡು, ಇನ್ನೊಬ್ಬರನ್ನು ಹಾಳು ಮಾಡುವುದು, ಅನ್ಯಾಯ ಮಾಡುವುದು ಯಾವುದೂ ತಿಳಿದಿಲ್ಲ. ಅವಳ ಮನಸ್ಸಿನಲ್ಲಿ ಗಟ್ಟಿಯಾಗಿರುವುದು ಒಂದೇ ನಾನು ಹೆಣ್ಣು, ನಾನು ಹುಟ್ಟಿರುವುದೇ ಇದನ್ನೆಲ್ಲಾ ಅನುಭವಿಸಲು. ಇದೆಲ್ಲವೂ ನನ್ನ ತಾಯಿಯೂ ಅನುಭವಿಸಿದ್ದಾಳೆ. ಚಿಕ್ಕಂದಿನಲ್ಲಿ ಅವಳ ಕಣ್ಣೀರು ಒರೆಸುತ್ತಾ ನಾನು ಕೇಳಿದ್ದೆ, ಅಮ್ಮಾ ಯಾಕಮ್ಮಾ ನೀನು ಅಪ್ಪಾ ಹೋಡೆಯೋಕೆ ಬಂದರೂ ಬೈಯ್ಯೋಕೆ ಬಂದರೂ ಸುಮ್ಮನಿರುತ್ತೀಯಾ? ನನಗೆ ಹೋಡೆಯೋಕೆ ಬಂದಾಗ ನೀನು ಅಡ್ಡ ಬಂದು ಬೈಗುಳ ತಿನ್ನುತೀಯಾ ಎಂದು. ನನ್ನನ್ನು ಅಂದು ಆ ರೀತಿ ಪ್ರೀತಸಿದ್ದಕ್ಕೆ ಎನಿಸುತ್ತದೆ ನಾನು ಇಂದು ಹೆಣ್ಣು ಮಕ್ಕಳನ್ನು, ಹೆಣ್ಣಿನ ಸಮಸ್ಯೆಯನ್ನು ಹತ್ತಿರದಿಂದ ನೋಡಿ ಅವರಲ್ಲಿ ಸ್ನೇಹಿತನಾಗಿದ್ದು. ಇಡೀ ದಿನ ಕೆಟ್ಟದೆಂದು ಭಾವಿಸಿದ್ದ ನನಗೆ ರಾತ್ರಿ ವೇಳೆಗೆ ಅಮ್ಮನ ನೆನಪು ಮಾಡಿಕೊಟ್ಟ ಆ ಹುಡುಗಿಯ ಜೀವನ ಹಸನಾಗಲಿ, ಅವಳಿಗೆ ಧೈರ್ಯ ಬರಲಿ ಎಂದು ಹಾರೈಸುತ್ತೇನೆ. ಇಷ್ಟೆಲ್ಲಾ ಹೇಳಿದರ ಉದ್ದೇಶವಿಷ್ಟೇ, ಯಾರು ಉದ್ದೇಶಪೂರ್ವಕವಾಗಿ ಪರಿಸರ ನಾಶಮಾಡುವುದಿಲ್ಲ, ಸಮಾಜವನ್ನು ಹಾಳು ಮಾಡುವುದಿಲ್ಲ. ಇವೆಲ್ಲವೂ ಸನ್ನಿವೇಶ ಅನಿವಾರ್ಯತೆ. ಅದರಲ್ಲಿಯೂ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರು ಎಂದಿಗೂ ಮತ್ತೊಬ್ಬರಿಗೆ ಕೆಡಕು ಮಾಡಲು ಮುನ್ನುಗ್ಗುವುದಿಲ್ಲ. ಒಂದೇ ರೈಲಿನ್ನಲಿ ಸಂಬ್ರಮಿಸಲು ತಿಂದು ಕುಣಿದು ಕುಪ್ಪಳಿಸುವವರು ಸಿಗುತ್ತಾರೆ, ಅಳುತ್ತಾ ಹೊಟ್ಟೆಗಾಗಿ ತಿನ್ನುವವರು ಇರುತ್ತಾರೆ. ಆದ್ದರಿಂದ ರಸ್ತೆಯಲ್ಲಿ ಗಲೀಜು ಮಾಡಿದವನು ಉದ್ದೇಶ ಪೂರ್ವಕವಲ್ಲ ಹಾಗೆಂದು ಅದನ್ನು ಮುಂದುವರೆಸುವುದು ಸರಿಯಿಲ್ಲ.

ಸಮಾಜ ಘಾತುಕರನ್ನು ಹತ್ತಿಕ್ಕುವ ಮಾರ್ಗವಿಲ್ಲವೇ!!!!!!!!

ಕಳೆದ ಒಂದು ವಾರದಿಂದ ನಾನು ಹೋಗಿ ಬಂದು ಟಿವಿ ನೋಡುವುದನ್ನೇ ಹೆಚ್ಚು ಮಾಡುತ್ತಿದ್ದೇನೆ. ಇದಕ್ಕೆ ಕಾರಣ ನಾವೆಲ್ಲರೂ ತಿಳಿದಂತೆ ರಾಜ್ಯ ರಾಜಕಾರಣ. ಅಂತೂ ಇಂತೂ ಗರ್ವದಿಂದ ಮೆರೆಯುತಿದ್ದ, ರೆಡ್ಡಿ, ಯಡ್ಯೂರಪ್ಪ ಅವರ ಸರ್ಕಾರ ಅಳಿವಿನ ಅಂಚಿಗೆ ಬಂದಿದೆ. ಅದರ ಜೊತೆಯಲ್ಲಿಯೇ ನಮ್ಮೆಲ್ಲ ಜನಪ್ರತಿನಿಧಿಗಳ ಸಂಪೂರ್ಣ ಬಣ್ಣ ಬಯಲಾಗಿದೆ. ಯಾರೂ ಒಪ್ಪಿದರೂ ಬಿಟ್ಟರೂ ನನ್ನ ಕೆಲವು ಅಭಿಪ್ರಾಯಗಳನ್ನು ಈ ಸಮಯದಲ್ಲಿ ನಿಮ್ಮ ಮುಂದಿಡುತ್ತೇನೆ. ರಾಜಕಾರಣಿಗಳೆಲ್ಲ, ಭ್ರಷ್ಟರಾಗಿದ್ದಾರೆ, ಅಯೋಗ್ಯರಾಗಿದ್ದಾರೆ ಅನುಮಾನವೇ ಬೇಡ. ಆದರೇ ಕಡಿಮೆ ಮೋಸಗಾರರನ್ನು ನಾವು ಒಪ್ಪಿಕೊಳ್ಳುವುದು ಇಂದಿನ ಅನಿವಾರ್ಯತೆ. ಆಗಿದ್ದರೇ, ಕಡಿಮೆ ವಂಚಕರಾರು, ನನಗೆ ಬಿಜೆಪಿ, ಕಾಂಗ್ರೇಸ್ ಗಿಂತ ಕಡಿಮೆ ವಂಚಕರೆನಿಸಿವುದು ಜೆಡಿಎಸ್.
ಇದಕ್ಕೊಂದು ನಿದರ್ಶನ ಇಂದು ನಡೆದ ಬಹುಮತ ಸಾಬೀತು ಮಾಡುವಾಗ ನಡೆದ ಘಟನೆಗಳು. ವಿಧಾನಸೌಧವೆನ್ನುವುದು ರಾಜ್ಯದ ಜನತೆಯ ಪ್ರಭತ್ವದ ದೇಗುಲವೆನ್ನುವುದನ್ನು ಲೆಕ್ಕಿಸಿ, ರೈಲ್ವೇ ಸ್ಟೇಷನ್ ಸಿನೆಮಾ ಥೀಯೆಟರ್ ನಂತೆ ನಡೆಸಿಕೊಂಡರು. ಬಿಜೆಪಿ ಸರ್ಕಾರ ಬಂದ ದಿನದಿಂದ ಇಂದಿನ ತನಕವೂ ಹಲವಾರು ಹಗರಣಗಳು ಲಜ್ಜೆಗೆಟ್ಟು ಅತೀವೇಗದಿಂದ ಪಕ್ಷಾಂತರವನ್ನು ಮಾಡಿಸಿ ಆಪರೇಷನ್ ಕಮಲದ ಹೆಸರಿನಲ್ಲಿ ಬೇರೆ ಪಕ್ಷದವರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದು, ಹಣ ಮತ್ತು ಅಧಿಕಾರದ ಆಮೀಷದಿಂದಲೇ ಎನ್ನುವುದನ್ನು ನಾವು ಒಪ್ಪಲೇಬೇಕು. ಹತ್ತಾರು ವರ್ಷದಿಂದ ಸಮಾಜವಾದದಲ್ಲಿ ನಂಬಿಕೆ ಇಟ್ಟು, ಹೆಗ್ಡೆಯವರ ಕಾಲದಲ್ಲಿಯೇ, ಸಭಾಧ್ಯಕ್ಷರಾಗಿದ್ದ ಡಿ.ಬಿ.ಚಂದ್ರೇಗೌಡರೇ ಬಿಜೆಪಿಗೆ ಹೋದರೆಂದರೇ ಇದೆಂಥಹ ವಿಪರ್ಯಾಸ ನೋಡಿ. ಹಾಲಿನ ಮಂಡಳಿಯ ಹಿಂದೂ ಮುಂದು ಗೊತ್ತಿಲ್ಲದ ಸೋಮಶೇಖರ್ ರೆಡ್ಡಿ ಅಧ್ಯಕ್ಷರಾದರೆಂದರೇ ಯಡ್ಯೂರಪ್ಪ ಅವರಿಗೆ ರೈತರ ಬಗೆಗಿನ ಕಾಳಜಿ ತಿಳಿಯುತ್ತದೆ. ಕಾಂಗ್ರೇಸ್ ನಿಂದ ಗೆದ್ದು, ಗದ್ದುಗೆ ಹಿಡಿದಿದ್ದ ಜಗ್ಗೇಶ್ ಪಕ್ಷ ಬಿಟ್ಟು ಬಿಜೆಪಿಗೆ ಹಾರಿದ್ದು, ಜಿಟಿ ದೇವೆಗೌಡರಂಥವರೂ ಬಿಜೆಪಿ ಜೊತೆಗೆ ಹೋಗಿದ್ದು ರಾಜಕಾರಣದ ವ್ಯಭಿಚಾರಕ್ಕೆ ಹಿಡಿದ ಕನ್ನಡಿ.
ಜನರು ಹಿಂದಿನ ಸರ್ಕಾರಕ್ಕೆ ಬೇಸತ್ತು ಬಿಜೆಪಿಗೆ ಬಹುಮತ ನೀಡಿದ್ದರು, ಅದನ್ನು ಉಪಯೋಗಿಸಿಕೊಂಡು ಅಧಿಕಾರ ನಡೆಸಿ ಎಂದರೇ, ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರವನ್ನು ಹೆಚ್ಚಿಸಿದ್ದು ಅದೆಷ್ಟು ಸಮಂಜಸ. ಇಂದು ಬೆಳ್ಳಿಗ್ಗೆ ಬಹುಮತ ಸಾಬೀತುಪಡಿಸುವಾಗ ನಡೆದ ಘಟನೆಯಂತೂ ಎಂಥಹ ನಾಗರೀಕನೂ ನಾಚಲೇಬೇಕಿತ್ತು. ಬಿಜೆಪಿ ತೊಂಬತ್ತೈದರ ಸಮಯದಲ್ಲಿ ನಾನು ಎಂಟನೇಯ ತರಗತಿಯಲ್ಲಿರುವಾಗ ವಿರಾಜಪೇಟೆಗೆ ಹೋಗಿದ್ದೆ. ಅಲ್ಲಿನ ಜನತೆಗೆ ಪಕ್ಷದ ಬಗ್ಗೆ ಇದ್ದ ಶ್ರದ್ದೆ ಆಕಾಕ್ಷೆಗಳನ್ನು ಕಂಡು ನನಗೂ ಇಷ್ಟವಾಗಿತ್ತು. ರಾಷ್ಟಪ್ರೇಮ, ದೇಶ ಭಾಷೆ ನಮ್ಮ ಸಂಸ್ಕೃತಿಗೆ ಅಂದು ಪಕ್ಷವಿಟ್ಟುಕೊಂಡಿದ್ದ ಅಭಿಮಾನ ನನ್ನನ್ನು ಅದರ ಅಭಿಮಾನಿಯಾಗಿ, ಕೆಲವು ದಿನಗಳು ಆರ್ ಎಸ್ ಎಸ್, ಬಿಜೆಪಿ, ಭಜರಂಗದಳದ ಬಗೆಗೆ ಒಲವೊನ್ನು ತುಂಬಿತ್ತು. ಇದು, ನನ್ನ ಬಿಎಸ್ಸಿ ದಿನಗಳವರೆಗೂ ಇತ್ತು, ನಾನು ಮೈಸೂರಿನಲ್ಲಿದ್ದಾಗ ಹಲವಾರು ಭಜರಂಗದಳದ ಸಮಾರಂಭಗಳಲ್ಲಿ, ಭಾಗವಹಿಸುತ್ತಿದ್ದೆ. ಪ್ರಮೋದ್ ಮುತಾಲಿಕ್, ಪ್ರಮೋದ್ ಭಾಯ್ ತೊಗಾಡಿಯರವರ ಭಾಷಣವನ್ನು ಕೇಳಿ ರೋಮಾಂಚನಗೊಂಡಿದ್ದೆ. ವಾಜಪೇಯಿಯರು ಪ್ರಧಾನಿಯಾಗಿ ಕೇವಲ ಹದಿಮೂರು ದಿನಕ್ಕೆ ಅಧಿಕಾರ ಕಳೆದುಕೊಂಡ ದಿನ, ಅವರು ಮಾಡಿದ ಭಾಷಣವನ್ನು ಕೇಳಿ, ಕಾಂಗ್ರೇಸ್ ಮತ್ತು ಇತರ ಪಕ್ಷಗಳ ಬಗ್ಗೆ ರೋಸಿಹೋಗಿದ್ದೆ. ನನ್ನ ನೇರ ಮಾತಿನಲ್ಲಿ ಹೇಳಬೇಕೆಂದರೇ, ನನಗೆ ಬಿಜೆಪಿಯೆಂಬುದು ಭಾರತವನ್ನು ಬಹಳ ಮುಂದಕ್ಕೆ ಕರೆದೊಯ್ಯುವ ಏಕೈಕ ಪಕ್ಷವೆನಿಸಿತ್ತು. ಕಾರ್ಗಿಲ್ ಯುದ್ದದಲ್ಲಿ, ಭಾರತ ಜಯಗಳಿಸಿದ್ದನ್ನು ಕಂಡು, ಅದಕ್ಕೊಸ್ಕರ ಬೀದಿ ಬೀದಿ ಸುತ್ತಿ ಚಂದಾ ಎತ್ತಲು ಸೇರಿದ್ದೆನು. ಇಂಥಹ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಅದು, ಬಹುಮತವಿಲ್ಲದೇ, ಸಮಾನ ಮನಸ್ಕರನ್ನು ಸೇರಿಸಿಕೊಂಡು (ಎನ್.ಡಿ.ಎ) ಹೆಸರಿನಲ್ಲಿ ಅಧಿಕಾರಕ್ಕೆ ಬಂದಾಗ ಅಯ್ಯೊ ಪಾಪ ಬಹುಮತವಿದ್ದಿದ್ದರೇ ನಿಜಕ್ಕೂ ಭಾರತ ಅಮೇರಿಕಾಕ್ಕೂ ಸವಾಲೆಸೆಯುವ ಮಟ್ಟಕ್ಕೆ ಬೆಳೆಯುತ್ತಿತ್ತು ಎನಿಸಿತ್ತಾದರೂ, ಅದು ಏಕೈಕ ವ್ಯಕ್ತಿಯಾದ ವಾಜಪೇಯಿಯವರ ಶ್ರಮದಿಂದ ನಿಂತಿತ್ತು ಎಂಬುದನ್ನು ಕೆಲವೇ ದಿನಗಳಲ್ಲಿ ಮನವರಿಕೆಯಾಯಿತು.
ಹಿಂದಿನಿಂದಲೂ, ಪಕ್ಷ ಕಟ್ಟಿದವರನ್ನು ತುಳಿದು, ಬರಿ ಮಾತಿನಲ್ಲಿ ಬೆಳಕು ಹರಿಸುವಂತಹ ನಾಯಕರು ಮುಂದೆ ಬರತೊಡಗಿದರು. ಪಕ್ಷದ ಶಿಸ್ತನ್ನು ಅಕ್ಷರಸಃ ಪಾಲಿಸುತ್ತಿದ್ದ, ಕಲ್ಯಾಣ್ ಸಿಂಗ್, ಮುರುಳಿ ಮನೋಹರ್ ಜೋಷಿ, ಅಷ್ಟೇಲ್ಲಾ ಏಕೆ, ಉಮಾಭಾರತಿಯಂತವರನ್ನೇ ಮೂಲೆಗುಂಪಾಗಿಸಿ, ಮೊದಲ ಸಾಲಿನಲ್ಲಿ, ಸುಷ್ಮಾ ಸ್ವರಾಜ್, ಅನಂತಕುಮಾರ್, ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್ ರು ಬಂದಾಗ ಬಿಜೆಪಿ ಸಂಪೂರ್ಣ ಹಳ್ಳಕ್ಕೆ ಬಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ವಾಜಪೇಯಿಯೊಬ್ಬರನ್ನು ಬಿಟ್ಟರೇ ಮಿಕ್ಕಾವ ಬಿಜೆಪಿಯ ನಾಯಕನೂ ಭಾರತೀಯರಂತೆ ವರ್ತಿಸಿಲ್ಲ. ಅದೇನೆ, ಇದ್ದರೂ, ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದ್ದಿದ್ದರಲ್ಲಿಯೇ ಹೆಚ್ಚು ಮತಗಳಿಸಿ ಆಯ್ಕೆಯಾದಾಗ ಕಾಂಗ್ರೇಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಿದರು. ಕರ್ನಾಟಕ ಅದೆಂಥಹ ಪರಿಸ್ತಿತಿಯಲ್ಲಿತ್ತೆಂದರೇ ಯಾರೊ ಒಬ್ಬರೂ ಹೆಸರಿಗೆ ಮುಖ್ಯಮಂತ್ರಿ ಸಹಿ ಮಾಡಿದರೇ ಸಾಕು, ಜನರ ಜೀವನ ಹಾಗೋ ಹೀಗೋ ನಡೆಯುತ್ತದೆನ್ನುತ್ತಿತ್ತು. ಅದರಂತೆಯೇ, ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಹೇಗೋ ನಡೆಯುತ್ತಿದ್ದ ಸರ್ಕಾರವನ್ನು ಮೊದಲು ಉರುಳಿಸಿ ಪರ್ಯಾಯ ಸರ್ಕಾರ ಜೊಡಿಸಲು ಯತ್ನಿಸಿದ್ದು, ಇಂದಿನ ಈ ಯಡ್ಯೂರಪ್ಪನೇ ಎಂಬುದು ಮರೆಯುವಂತಿಲ್ಲ. ಕುಮಾರಸ್ವಾಮಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಸಚಿವರಾಗಿ, ಉಪಮುಖ್ಯಮಂತ್ರಿಯೂ ಆಗಿ ಮೆರೆದ ಬಿಜೆಪಿ ಶಾಸಕರಿಗೆ ಅಧಿಕಾರದ ರುಚಿ ಚೆನ್ನಾಗಿಯೇ ಹತ್ತಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ಕಡಿಮೆ ಅವಧಿಯಲ್ಲಿ, ಗ್ರಾಮ ವಾಸ್ತವ್ಯದಂತಹ ಹಲವಾರು ಕಾರ್ಯಕ್ರಗಳೊಂದಿಗೆ ಜನರಿಗೆ ಬಹಳ ಹತ್ತಿರವಾದರು. ಗ್ರಾಮವಾಸ್ತವ್ಯ, ಅಥವಾ ಕುಮಾರಸ್ವಾಮಿಯವರ ಭರವಸೆಗಳು ಈಡೇರಿದ್ದಾವೆಂಬುದಕ್ಕೆ ಪುರಾವೆಯೂ ಇಲ್ಲ. ಇಪ್ಪತ್ತು ತಿಂಗಳು ತಳ್ಳಿದ ಸರ್ಕಾರವೂ, ಬಿಜೆಪಿಗೆ ಅಧಿಕಾರ ವಹಿಸಿಕೊಡುವ ಸಮಯಕ್ಕೆ, ದೇವೇಗೌಡರು ಕ್ಯಾತೆ ತೆಗೆದು, ಯಡ್ಯೂರಪ್ಪನವರ ಕಣ್ಣಲ್ಲಿ ರಕ್ತ ಸುರಿಸಿದರು.
ಮೊದಲೇ ಅಧಿಕಾರದ ರುಚಿ ಹತ್ತಿಸಿಕೊಂಡ ಬಿಜೆಪಿ, ಇನ್ನಿಲ್ಲದ ಗಿಮಿಕ್, ಹಣ, ಎಮೋಷನ್ಸ್ ಎಲ್ಲವನ್ನೂ ಸೇರಿಸಿ, ವಚನ ಭ್ರಷ್ಟರೆಂದು, ಮತ್ತು ಇದೊಂದು ಒಕ್ಕಲಿಗ ಮತ್ತು ಲಿಂಗಾಯತ ವರ್ಗದ ನಡುವೆ ನಡೆದ ಚುನಾವಣೆಯಂತೆಯೇ ನಡೆಯಿತು. ಕನ್ನಡಿಗರ ಮೇಲೆ ದೇವರಿಗೆ ಅಲ್ಪ ಸ್ವಲ್ಪ ಕರುಣೆಯಿದ್ದಿದ್ದರಿಂದ, ಬಿಜೆಪಿಗೆ ಎರಡು ಸಂಖ್ಯೆ ಕಡಿಮೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಅದೃಷ್ಟಕ್ಕೆ ಆರು ಜನ ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ನೀಡಿದರು. ಬಿಜೆಪಿ ಅದೆಂಥಹ ದುರಾಸೆಯ ಪಕ್ಷವೆಂದರೇ, ಅಮಾಯಕರಂತಿದ್ದ, ಸ್ವತಂತ್ರ ಅಭ್ಯರ್ಥಿಗಳನ್ನು ಉಪಯೋಗಿಸಿಕೊಂಡು ತಳಗಟ್ಟಿಮಾಡಿಸಿಕೊಂಡರೂ ಸಮಾಧಾನದಿಂದರಿಲಿಲ್ಲ. ಆಪರೇಷನ್ ಕಮಲದ ಹೆಸರಿನಲ್ಲಿ, ಬೇರೆ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರನ್ನು ರಾಜಿನಾಮೆ ಕೊಡಿಸಿ ಮರುಚುನಾವಣೆ ನಡೆಸಿತು. ಪ್ರತಿ ಚುನಾವಣೆಗೂ ಬಿಜೆಪಿ ಮನಬಂದಂತೆ ಖರ್ಚುಮಾಡಿತು. ಪ್ರತಿಯೊಂದು ಚುನಾವಣೆಯ ವೆಚ್ಚ ಮತದಾರನ ಬೊಕ್ಕಸದ್ದು ಎನ್ನುವುದನ್ನು ನಾವು ಮರೆಯಬಾರದು. ದೇಶದ ಹಿತದ ಬಗ್ಗೆ ಬೊಬ್ಬೆ ಹೊಡೆಯುವ ಯಡ್ಯೂರಪ್ಪ ಇರುವ ಸರ್ಕಾರವನ್ನು ನಡೆಸಿಕೊಂಡು ಹೋಗುವುದನ್ನು ಬಿಟ್ಟು ಆಪರೇಷನ್ ಕಮಲದ ಹೆಸರಿನಲ್ಲಿ, ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋಣೆ ಜಾಣವೆನ್ನುವಂತೆ ನಡೆದುಕೊಂಡಿತು. ಇವರ ಸರ್ಕಾರ ಬಂದ ದಿನಂದಿಂದ ನಡೆದ ಹಗರಣಗಳು ಒಂದೆರಡಲ್ಲ. ಅವೆಲ್ಲವೂ ಬಯಲಾಗಿದ್ದರೂ ಏನೂ ಮಾಡದ ಸ್ಥಿತಿಯಲ್ಲಿ ಮತದಾರ ಬಂದು ಮಲಗಿದ್ದಾನೆ.
ಇಂದು ಕುಮಾರಸ್ವಾಮಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆಂದು ದೂರುವ ಬಿಜೆಪಿಯವರು, ಅಂದು ಅವರು ಜಮೀರ್ ಅಹ್ಮದ್ ಜೊತೆಗೆ ಅವರದ್ದೇ ಬಸ್ಸಿನಲ್ಲಿ ರೆಸಾರ್ಟ್ ಗೆ ತೆರಳಿ ನಂತರ ಇದೇ ರೀತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆಂಬುದು ಮರೆತುಹೋಗಿದೆ. ಅವೆಲ್ಲವೂ ಬಹಳ ವರ್ಷದ ಹಿಂದೆ ನಡೆದವುಗಳಲ್ಲ. ಆದರೂ ನಮ್ಮ ಜನರ ನೆನಪಿನ ಶಕ್ತಿ ದುರ್ಬಲ. ಇಂದಿನ ಬಗೆಗೆ ಮಾತನಾಡುವುದೇ ಆದರೂ, ಇವರ ಶಾಸಕರನ್ನು ಕುಮಾರಸ್ವಾಮಿ ಬೆಂಬಲಿಸಿ, ವಿರುದ್ದ ಬಳಸಿದ್ದಾರೆಂಬುದು ಇವರ ಆರೋಪ. ಯಾವ ಮುಟ್ಠಾಳ ಶಾಸಕ ತಾನೇ, ಅಧಿಕಾರವನ್ನು ಬಿಟ್ಟು ವಿರೋಧಪಕ್ಷದವರ ಜೊತೆ ಕೈಜೋಡಿಸಬಯಸುತ್ತಾರೆ. ಎಂಟು ಸಚಿವರನ್ನು ಅನರ್ಹಗೊಳಿಸಿದ್ದರು. ಎಂಟೂ ಜನ ದಲಿತ ಜನಾಂಗಕ್ಕೆ ಸೇರಿದವರು. ಬಚ್ಚೇಗೌಡ ಸಾಮಾನ್ಯ ಪ್ರಜೆಯ ಮೇಲೆ ಹಲ್ಲೆ ನಡೆಸಿದರೂ ಏನೂ ಕ್ರಮ ಕಗೊಳ್ಳಲಿಲ್ಲ. ಕಟ್ಟಾ ಅವರ ಮಗ ಜೈಲಿನ್ನಲ್ಲಿದ್ದರೂ ಏನು ಮಾಡಿಲ್ಲ. ಮಗ ಮಾಡಿದ ತಪ್ಪಿಗೆ ತಂದೆ ಜವಾಬ್ದಾರಿಯಲ್ಲವೆಂಬುದು ಯಡ್ಯೂರಪ್ಪನ ವಾದ. ಜಗದೀಶ್ ಆಯ್ಕೆಯಾಗಿರುವುದು ಅವರಪ್ಪನ ಕೃಪೆಯಿಂದವೆನ್ನುವುದು ಸುಳ್ಳಾ? ಕಟ್ಟಾ ತನ್ನ ಮಗನನ್ನು ಮೇಯರ್ ಮಾಡಬೇಕೆಂದು ಓಡಾಡಿದ್ದು ಸುಳ್ಳಾ? ಅಂದೂ ಹೇಳಬಹುದಿತ್ತು ಅಪ್ಪ ಮಕ್ಕಳೂ ಬೇರೆ ಬೇರೆ ಎಂದು.
ವಿಧಾನಸೌಧದ ಘನತೆ ಏನೆಂಬುದನ್ನು ತಿಳಿಯದ ಮೂರ್ಖ ಮುಟ್ಠಾಳರೆಲ್ಲ ನಮಗೆ ನಾಯಕರಾದರಲ್ಲವೆಂದು ಮನಸ್ಸಿಗೆ ಬಹಳ ನೋವಾಗುತ್ತದೆ. ಖಾಕಿ ಎಂಬುದು ಮೊಗಸಾಲೆಗೂ ಕಾಲಿಡಬಾರದೆಂಬುದು ತಿಳಿದಿದ್ದರೂ ಒಳಕ್ಕೆ ಬಂದ ಶಂಕರ್ ಬಿದರಿಯವರಿಗೇ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಿಲ್ಲ. ಇಂದಿಗೂ ನಮಗೆಲ್ಲರಿಗೂ ಮಾಧ್ಯಮದವರು ಆಗ್ಗಾಗ್ಗೆ ಸುದ್ದಿಯನ್ನು ಕೊಡುತ್ತಾ ಹೀನಾ ರಾಜಕಾರಣಿಗಳ ಬಟ್ಟೆ ಬಿಚ್ಚಿ ನಿಲ್ಲಿಸುತ್ತಿದ್ದಾರೆ. ಸುದ್ದಿ ಮಾಧ್ಯಮದವರನ್ನೂ ಒಳಕ್ಕೆ ಬಿಡುತ್ತಿರಲಿಲ್ಲವೆಂದರೇ ಇವರ ದುರಾಡಳಿತ ಯಾವ ಮಟ್ಟಕ್ಕಿರಬಹುದು. ಹುಡುಗಾಟಿಕೆಯೆಂಬಂತೆ, ಹೀಗೆ ಬಂದು ಹಾಗೆ ಹೋಗಿದ್ದಾರೆ ಬಿಜೆಪಿಯ ಶಾಸಕರು. ಅದರ ಜೊತೆಗೆ, ವಿಧಾನಪರಿಷತ್ ನ ಸದಸ್ಯರೆಲ್ಲರೂ ಒಳಕ್ಕೆ ಬಂದು ಕುಳಿತಿದ್ದರು. ಕೇಳಿದರೇ ಸಂಭ್ರಮಿಸಲು ಬಂದಿದ್ದೆ ಎಂದು ವಿಜಯ್ ಶಂಕರ್ ಹೇಳುತ್ತಾರೆ. ಅಧಿಕಾರ ನಡೆಸಿ ಎಂದು ಆಯ್ಕೆ ಮಾಡಿ ಕಳುಹಿಸಿದರೇ, ಆಚರಿಸಲು ಹೋಗಿದ್ದೆ ಎಂದು ಹೋಗಿರುವುದನ್ನು ಸಮರ್ಥಿಸಿಕೊಳ್ಳಬೇಕಾ? ಇದೆಲ್ಲದರ ಜೊತೆಗೆ ಮತ್ತೊಂದು ತಮಾಷೆಯ ವಿಷವೆಂದರೇ, ಸ್ವತಂತ್ರ ಅಭ್ಯರ್ಥಿ ಸುಧಾಕರ್ ಮತ್ತು ಸುರೇಶ್ ಗೌಡ ಜಗಳವಾಡಿದ್ದು, ಅವರು ಬಳಸಿದ ಪದಗಳು ನಮ್ಮುರ ಗೋವಿಂದ ಕೂಡ ಬಳಸುವ ಮುಂದೆ ಯೋಚಿಸಿ ಹೇಳುತ್ತಾನೆ. ಅಮ್ಮನ್, ಅವ್ವನ್, ಇಂದ ಹಿಡಿದು, ತಾಯಿನಡವೆನ್ನುವ ತನಕ ಬೈಯ್ದರೆಂದರೇ ಚೀ ಹೀನ ಬದುಕೇ ಎನಿಸುವುದಿಲ್ಲವೇ? ಸಂವಿಧಾನವನ್ನೂ ಓದಿಲ್ಲದ, ತಿಳಿದಿಲ್ಲದ, ಮೂರ್ಖ ಶಿಕಾಮಣಿಗಳೆಲ್ಲಾ ನಮ್ಮನ್ನು ಆಳಬೇಕೇ?ಇಂಥಹ ಸನ್ನಿವೇಶಗಳನ್ನು ಉಗ್ರಗಾಮಿಗಳು ನೋಡಿ ಬಹುಮತ ಸಾಬೀತು ಪಡಿಸುವ ದಿನದಂದು ವಿಧಾನಸೌಧಕ್ಕೆ ಒಂದೇ ಒಂದು ಬಾಂಬ್ ಹಾಕಿದ್ದರೂ ನಮ್ಮ ರಾಜ್ಯದ ಜನತೆ ಉಗ್ರಗಾಮಿಗಳು ಇಂದಿನ ತನಕ ಮಾಡಿರುವ ಎಲ್ಲಾ ತಪ್ಪುಗಳನ್ನು ಮಣ್ಣಿಸುತ್ತಿದ್ದರೆನಿಸುತ್ತದೆ. ಆ ಪಾಪಿಗಳು ಪಾಪದ ಅಮಾಯಕರ ಜೀವವನ್ನು ತೆಗೆಯುತ್ತಾರೆ, ಇಂಥಹ ಹೀನರನ್ನಾದರೂ ಕೊಲ್ಲಬಾರದೇ? ನಮ್ಮ ನಕ್ಷಲೈಟ್ ಗಳು ಅದೇನೋ ಕಡಿದು ಕಟ್ಟೆ ಹಾಕುತ್ತೇವೆಂದು ಕಾಡಿನಲ್ಲಿ ಸೇರಿಕೊಂಡು ಪೋಲಿಸರ ಹೆಂಡತಿಯರ ಅರಿಶಿನ ಕುಂಕುಮ ಅಳಿಸುವ ಬದಲು ಇವರ ಉತ್ತರ ಕ್ರಿಯಾದಿಗೆ ನೆರವಾಗಬಾರದೇ?

08 ಅಕ್ಟೋಬರ್ 2010

ನೀ ಹೋದರೂ ನಿನ್ನಯ ನೆನಪು ಮಾಸದು!!!!!!!!

ಈ ಪ್ರೀತಿಸುವ ಹುಡುಗಿಯರಿಗೂ ನಾವು ಕುಡಿಯುವ ಹೆಂಡಕ್ಕೂ ಭಾರಿ ಮಟ್ಟದ ಹೋಳಿಕೆಯಿದೆಯೆನಿಸುತ್ತದೆ. ನಾನು ಬೇಡವೆಂದು ಕುಳಿತಿದ್ದಾಗ ಯಾರಾದರೂ ಬಂದು ನಡಿಯೋ ಕುಡಿಯೋಣವೆನ್ನುತ್ತಾರೆ ಮತ್ತೆ ಕುಡಿಯೋಣವೆನಿಸುತ್ತದೆ. ಒಂದು ಸಲಕ್ಕೆ ನಿಲ್ಲಿಸಲಾಗುವುದಿಲ್ಲವಲ್ಲ ಪದೇ ಪದೇ ಕುಡಿದು ಹಗಲು ರಾತ್ರಿಯೆನ್ನದೇ ಕುಡುಕನಾಗಿಯೇ ಬಿಡುತ್ತೇನೆ. ನನ್ನ ಹುಡುಗಿಯ ವಿಷಯವೂ ಅಷ್ಟೇ, ನಾನು ನಿನ್ನನ್ನು ಪ್ರಾಣಕಿಂತ, ಜೀವಕ್ಕಿಂತವೆಂದು ಪ್ರೀತಿಸಿದರೂ ಕೂಡ, ನಾಳೆ ಬೆಳ್ಳಿಗ್ಗೆಯೇ ಎದ್ದು, ನಾನು ನಿನ್ನ ಜೀವನವನ್ನು ಹಾಳು ಮಾಡುತ್ತಿದ್ದೇನೆಂದು, ಅಥವಾ ನನ್ನಯ ಬಗೆಗೆ ಒಡನೆಯೇ, ತಾತ್ಸಾರ ತೋರಿಸಿದಾಗ, ನನಗೆ ಸಹಿಸಲಾರದಷ್ಟು ನೋವು ಬರುತ್ತದೆ. ಕೆಲವು ದಿನಗಳು ಅವಳನನ್ನು ಮರೆತು ಸುಮ್ಮನೆ ಇರೋಣವೆನಿಸಿದರೂ ಕೂಡ ಮತ್ತೆ ಮತ್ತೇ ಅದೇ ಹಳೆಯ ನೆನಪುಗಳು, ಹಂಗಿಸಿದ ಮಾತುಗಳು, ಹೊಗಳಿದ ಪದಗಳು, ಪ್ರತಿಯೊಂದು ಕೂಡ ನೆನಪಾಗಿ ಕಾಡುತ್ತದೆ, ಕೆಲವೊಮ್ಮೆ ಕೊಲ್ಲುತ್ತದೆ. ಪ್ರೀತಿಯಲ್ಲಿಯ ನೋವು ನನಗೆ ತಿಳಿದಿತ್ತು, ಆದರೇ ಪ್ರೀತಿಸಿದ ಹುಡುಗಿ ದೂರಾದಾಗ ಆಗುವ ಹೊಡೆತದ ವಿಪರೀತ ಈ ಮಟ್ಟಕ್ಕೆ ಇರುತ್ತದೆನಿಸಿರಲಿಲ್ಲ. ಇತ್ತೀಚೆಗೆ ಅದರಲ್ಲಿಯೂ ನಾನು ಪಿಎಚ್ ಡಿ ಎಂಬ ಜೇಡರ ಬಲೆಯಲ್ಲಿ ಬಿದ್ದು, ಥಿಸೀಸ್ ಬರೆಯಲು ಕುಳಿತ ದಿನದಿಂದ ಇಂದಿನ ತನಕವೂ ಕುಳಿತ ಒಂದೆರಡು ದಿನಗಳಲ್ಲಿ, ಏನಾದರೊಂದು ಪಜೀತಿ ಬಂದು ಸಿಕ್ಕಿ ಹಾಕಿಕೊಳ್ಳುತ್ತಿರುತ್ತದೆ. ಅದರಲ್ಲಿ ಮೊದಲನೆಯದು ನನ್ನ ಜೀವದ ಗೆಳತಿಯದೆಂದರೂ ತಪ್ಪಿಲ್ಲ. ನಾನು ಸಂತೋಷವಾಗಿರಲು ಕಾರಣವಿರುವ ಏಕೈಕ ಕಾರಣವೆಂದರೇ ನೀನು, ಅದರಂತೆಯೇ ನಾನು ಅತಿ ಹೆಚ್ಚು ನೊಂದಿರುವುದು ನಿನ್ನಿಂದಲೇ ಎನಿಸುತ್ತದೆ. ಅದರಲ್ಲಿಯೂ ತಾತ್ಸಾರ ತಿರಸ್ಕಾರವೆನ್ನುವ ಪದಗಳು ಮಾತ್ರ ಜೀವಕ್ಕೆ ಬಹಳಷ್ಟು ನೋವುಂಟುಮಾಡುತ್ತವೆ.
ನಮ್ಮ ಮನಸ್ಸು ಅದೆಂಥಹ ದುರಾಸೆಗೊಳ್ಳುತ್ತದೆಯೆಂದರೇ ಹೇಳತೀರದು, ಒಮ್ಮೊಮ್ಮೆ ನಾವು ಪ್ರೀತಿಸಿದವರು ನಮಗೆ ನಮ್ಮ ಸ್ವಂತದವರೆಂದು ಭಾವಿಸಿ ಸುಮ್ಮನಿರುವುದಿಲ್ಲ. ಅವರು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕೆನ್ನುವ ಮಟ್ಟಕ್ಕೆ ಹೋಗುತ್ತದೆ. ನಾನು ಅಷ್ಟೇ, ಹಲವಾರು ಬಾರಿ ನೀನು ನಿನಗೆ ಇಷ್ಟಬಂದಂತೆ ಇರು ನಾನು ನಿನಗೆ ಯಾವುದಕ್ಕೂ ಒತ್ತಾಯಿಸುವುದಿಲ್ಲವೆಂದರೂ, ಒಮ್ಮೊಮ್ಮೆ ನೀನು ನನ್ನೊಂದಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಬೈಕಿನಲ್ಲಿ ಬರುವಂತೆ ಒತ್ತಾಯಿಸುವುದು, ಸಿನೆಮಾಗೆ ಹೋಗೋಣವೆನ್ನುವುದು, ನಿನಗೆ ಅದು ಕೊಡುತ್ತೇನೆ, ಇದು ಕೊಡುತ್ತೇನೆಂದು ಕಡೆಗೆ ಏನನ್ನು ಕೊಡದೇ ಕೈಯೆತ್ತಿಬಿಡುವುದು. ನಾನು ಕಂಡಂತೆ ನನಗೆ ಸಮಸ್ಯೆ ಇರುವಾಗಲೇ ಅಂತಹ ಸಮಸ್ಯೆಗಳು ಪದೆಪದೇ ಬರುತ್ತಿರುತವೆ. ನಾನು ಹಣವಿಲ್ಲದ ಸಮಯದಲ್ಲಿ, ಒಂದು ರೂಪಾಯಿ ಉಳಿಸಲು ಮೂರು ಕೀಮಿ ನಡೆದ ದಿನಗಳಿವೆ. ದುಡ್ಡಿರುವಾಗ ಬ್ಲಾಕ್ ಡಾಗ್ ಕುಡಿದ, ಸ್ಕಾಚ್ ಕುಡಿದ ದಿನಗಳೂ ಇವೆ. ಇದರಿಂದ ನಾನು ಕಲಿತ ಪಾಠವೆಂದರೇ, ಯಾವುದು ಶಾಶ್ವತವಲ್ಲ ಇವೆಲ್ಲವೂ ಕ್ಷಣಿಕ. ಇರುವಾಗ ಅನುಭವಿಸಿದವನು ಇಲ್ಲದಿದ್ದಾಗಲೂ ಇರುವುದಕ್ಕೆ ತಕ್ಕಂತೆ ಇರಬೇಕು. ಮೊನ್ನೆ ನಿನಗೆ ಹಣದ ಅಗತ್ಯವಿತ್ತೆಂಬುದು ನನಗೆ ತಿಳಿದಿದೆ, ಆದರೇ, ಸುದರ್ಶನ್ ಅಪಘಾತ ಮಾಡಿಕೊಂಡು ಆಸ್ಪತ್ರೆ ಸೇರಿದಾಗ ಎರಡು ದಿನ ಹಣ ಒದಗಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಧ್ಯಮ ವರ್ಗದವರಿಗೆ ಹಣವೆಂಬುದು ಸದಾ ಚಿವುಟಿ ಖುಷಿ ಪಡೆಯುವ ವಸ್ತು. ಇದು ಯಾವಾಗಲೂ ಅಷ್ಟೇ, ನಿಮ್ಮಲ್ಲಿ ಇರುವ ತನಕ ಏನೂ ಮಾಡುವುದಿಲ್ಲ. ನಿಮ್ಮಲ್ಲಿ ಇಲ್ಲವೆಂದರೇ ಶುರುವಾಗುತ್ತದೆ, ಅದರ ದೊಂಬರಾಟ. ಅದು ಯಾವ ಪರಿಯಾಗುತ್ತದೆಯೆಂದರೇ ನಿಮ್ಮನ್ನು ಭೂಗರ್ಭದೊಳಕ್ಕೂ ತಳ್ಳಿ ಬಿಡುತ್ತದೆ. ಮೊನ್ನೆ ಸುದರ್ಶನನ ವಿಷಯಕ್ಕಾಗಿ ಕೇಳಬಾರದವರನ್ನೆಲ್ಲಾ ಕೇಳಿ ಹಣ ಒದಗಿಸಿದೆವು. ಅದೇನೆ ಇರಲಿ, ನಾನು ನನ್ನ ನಿನ್ನಯ ವಿಷಯ ಮಾತನಾಡುವಾಗ ಹಣದ ವಿಷಯ ಬೇಡವೆಂದರೂ ಪದೇ ಪದೇ ಕಾಡುತ್ತದೆ.
ನಿನ್ನ ಒಂದು ಎಸ್ ಎಂಎಸ್ ಗೋಸ್ಕರ, ಒಂದು ಕರೆಗೊಸ್ಕರ ದಿನಗಟ್ಟಲೇ ಕಾಯ್ದ ದಿನಗಳಿವೆ. ಈಗಲೂ ಕಾಯುತ್ತಿರುತ್ತೇನೆ, ನಿನ್ನಿಂದ ತಿರಸ್ಕಾರಗೊಂಡ ಭಾವನೆ ನನ್ನಲ್ಲಿ ಸದಾ ನನ್ನನ್ನು ಕರಗಿಸುತ್ತದೆ, ಕೊರಗುವಂತೆ ಮಾಡುತ್ತದೆ. ನೀನು ನನ್ನನ್ನು ಹಂಗಿಸಿದೆಯಾ? ತಿರಸ್ಕರಿಸಿದೆಯಾ?ಚೇಡಿಸಿದೆಯಾ?ರೇಗಿಸಿದೇಯಾ?ನಾನು ನಿನಗೆ ಇಷ್ಟವಿಲ್ಲವೆಂದು ಹೋದೇಯಾ?ಇಷ್ಟವಿದ್ದು ದೂರಾದೆಯಾ?ಪ್ರಶ್ನೆಗಳೆ ಜೀವನವಾಗಿಬಿಟ್ಟಿದೆ ಎನಿಸುತ್ತದೆ. ನೀನು ನನ್ನ ನಡೆಯಿಂದ ಹಿಡಿದು,, ನಡುವಳಿಕೆಯ ವರೆಗೂ ನನ್ನನ್ನು ಹಂಗಿಸಿದ್ದು, ನಿನಗೆ ಖುಷಿಕೊಟ್ಟಿ ಆ ಕ್ಷಣಕ್ಕಾದರೂ ನೀನು ನಕ್ಕಿರುವುದು ನನಗೂ ಸಮಧಾನವಿದೆ. ಆದರೇ, ನೀನು ನನ್ನ ಪ್ರೀತಿಯ ಬಗೆಗೆ ಆಡಿದ ಮಾತುಗಳು ಮಾತ್ರ ನನ್ನನ್ನು ದಿಗ್ಬ್ರಮೆ ಮೂಡಿಸಿದೆ. ನಾನು ನಿನ್ನನ್ನು ಪ್ರೀತಿಸಿದ್ದು , ಸತ್ಯ. ಅಲ್ಲಿ ಕೇವಲ ನಿನ್ನಯ ಅನಿವಾರ್ಯತೆಯಿತ್ತು. ಅವಶ್ಯಕತೆಯೂ ಇತ್ತು. ನೀನು ಹೇಳುವಂತೆ, ನಾನು ಕೂಡ ಸ್ವಹಿತವನ್ನು ಬೆಂಬಲಿಸುತ್ತೇನೆ. ನಿನ್ನಯ ಜೀವನ ಸುಂದರವಾಗಿರಬೇಕು, ನಿನ್ನಯ ಆಸೆಗಳು ಕನಸುಗಳು ಸದಾ ಹಸಿರಾಗಿರಬೇಕು, ಅವುಗಳೆಲ್ಲವೂ ಈಡೇರಿ, ನೀನೊಬ್ಬಳು ಪ್ರಖ್ಯಾತಿಯಾಗಬೇಕು, ಅದನ್ನು ನಾನು ಇಷ್ಟಪಡುತ್ತೇನೆ, ಆನಂದಿಸುತೇನೆ. ಆದರೇ ಸ್ವಾರ್ಥದ ಮನಸ್ಸು ನನ್ನದು, ಆ ಸಡಗರ ಸಂಭ್ರಮವನ್ನು ನೀನು ನನ್ನೊಂದಿಗೆ ಆಚರಿಸಬೇಕು, ನಿನ್ನಯ ಪ್ರತಿಯೊಂದು ಏಳಿಗೆಯಲ್ಲಿಯೂ ನಾನಿರಬೇಕೆಂಬುದು ನನ್ನಂತರಾಳದ ಬಯಕೆ. ಕೆಲವು ದಿನಗಳು ಮುಂಜಾನೆ ನಿನ್ನಯ ಎಸ್ ಎಂಎಸ್ ಬರುತ್ತಿತ್ತು, ನಾನು ಕಳುಹಿಸದೇ ಇದ್ದರೂ ಅದನ್ನು ಓದಿ ನಾನು ಖುಷಿಪಡುತ್ತಿದೆ, ರಾತ್ರಿ ಮಲಗುವ ಮುನ್ನ ಬರುತ್ತಿದ್ದ ನಿನ್ನ್ಯ ಎಸ್ ಎಂಎಸ್ ಗಳು ಅಷ್ಟೇ ಮಲಗಲು ನೆಮ್ಮದಿ ನೀಡುತ್ತಿತ್ತು. ಆದರೀಗ ಒಂದೇ ಒಂದು ಎಸ್ ಎಂಎಸ್ ಇಲ್ಲ, ಫೋನ್ ಕೂಡ ಮಾಡುವುದು ಅಪರೂಪ, ಮಾಡಿದರೂ, ಮಾಡದೇ ಇದ್ದರೂ, ನಾನು ಕೇಳಿದರೇ, ನಾನು ಮಾಡಿದ್ದೇನೆ, ನೀನೇ ಮಾಡುತ್ತಿಲ್ಲವೆನ್ನುತ್ತೀಯಾ? ಇದರರ್ಥ ಕಾಲಕ್ರಮೇಣ ಪ್ರೀತಿ ಕುಗ್ಗಿತಾ?ಇಂಗಿ ಹೋಯಿತಾ?ಬೇಸತ್ತಿ ಹೋಯಿತಾ?ತಿಂಗಳುಗಳಿಗೆ ಬೇಸರವಾದರೇ, ಇನ್ನೂ ವರ್ಷಗಟ್ಟಲೇ?
ನೀನು ನನ್ನನ್ನು ಪ್ರೀತಿಸಿದ್ದು, ಸತ್ಯವೇ ಅದು ನನಗೂ ತಿಳಿದಿದೆ. ಪರಿಸ್ಥಿತಿ ಒತ್ತಡಕ್ಕೋ ಸನ್ನಿವೇಶಕ್ಕೋ ನೀನು ನನ್ನಿಂದ ದೂರಾಗುತ್ತಿರುವುದು, ಅಥವಾ ದೂರಾಗಿದ್ದು ನನಗೆ ಅಲ್ಪ ಮಟ್ಟದ ನೋವನ್ನು ಕೊಡುತ್ತದೆ. ಆದರೇ, ನೀನು ನನ್ನನ್ನು ಪ್ರೀತಿಸಿಯೇ ಇರಲಿಲ್ಲವೆಂದರೇ ಅಥವಾ ಪ್ರೀತಿಸಿ ತಪ್ಪು ಮಾಡಿದೇ ಎಂದರೇ ಆಗುವ ಆಘಾತ ಅಷ್ಟಿಷ್ಟಲ್ಲ. ಏನೋ ಬಲವಂತಕ್ಕೆ ಪ್ರೀತಿಸಿದೇ, ನೀನು ಪೀಡಿಸಿದ್ದಕ್ಕೆ ನಿನ್ನನ್ನು ಪ್ರೀತಿಸಿದೇ ಎಂದರೇ, ಅಥವಾ ಅಂದು ಹೇಳಿ ಇಂದು ಹೋದೆ ಎಂದರೇ ನಾನು ಸಹಿಸಲಾರೆ. ಸದಾ ನಾನು ನಿನ್ನನ್ನು ಸತ್ಯ ಹೇಳು ಎಂದು ಕೇಳುತ್ತಿದ್ದೆ. ಇದೊಂದು ಬಾರಿ ಸುಳ್ಳು ಹೇಳು, ನೀನು ನನ್ನನ್ನು ಪ್ರೀತಿಸಿದ್ದೆ ಎಂದು ಹೇಳು.
ನಾನು ಗುರುತು ಪರಿಚಯವಿರದವರಿಗೆ ಮರುಗಿ, ಕರಗುವವನು, ಇನ್ನೂ ಸಾವಿರಾರು ಕನಸು ಕಟ್ಟಿದ ನಿನಗೆ ಬೆಂಬಲವಾಗಿ ನಿಲ್ಲಲ್ಲು ಹೆದರುವುದಿಲ್ಲ. ನೀನು ಭಾವಿಸಿದಂತೆ, ನೀನು ನನಗೆ ಹೊರೆಯಾಗುತ್ತೀಯಾ ಎಂದಾಗಲೀ, ಅಥವಾ ನನಗೆ ದುಡ್ಡು ಕೇಳಿ ಅದನ್ನು ನಾನು ತೀರಿಸಲಾಗುವುದಿಲ್ಲವೆಂದಾಗಲೀ ಹೆದರುವ ವ್ಯಕ್ತಿಯಲ್ಲ. ನನ್ನ ಎಲ್ಲವೂ ನೀನೆ ಆಗಿರುವಾಗ ಆದನ್ನು ನಿನಗೆಂದು ಮಾಡುವುದರಲ್ಲಿ ತಪ್ಪೇನು. ಆದರೂ ನೀನು ನನ್ನನ್ನು ರೇಗಿಸಿದ, ಹಂಗಿಸಿದ ಮಾತುಗಳು ನೆನಪಾಗಿ ಕಣ್ಣೀರು ಸುರಿಸುತ್ತವೆ. ನನ್ನ ಓದಿನ ಬಗೆಗೆ ನನ್ನ ಸಂಶೋಧನೆಯ ಬಗೆಗೆ, ನನ್ನ ಕೆಲಸದ ಬಗೆಗೆ, ಕೆಲಸಕ್ಕೆ ಬಾರದ ಸೋಮಾರಿತನದ ಬಗೆಗೆ ನೀನು ಹೇಳಿದ ಬುದ್ದಿಮಾತುಗಳು, ಅಥವಾ ಚೇಡಿಸಿದ ಮಾತುಗಳು ನನ್ನ ಕಿವಿಯಲ್ಲಿಯೇ ಗುಯ್ಯ್ ಎನ್ನುತ್ತಿವೆ. ನೀನು ಮತ್ತದೇ ಪ್ರಶ್ನೆ ಕೇಳಬಹುದು, ನಾನು ಎಷ್ಟನೆಯವಳು? ಹದಿನಾರನೆಯವಳಾ? ಹದಿನೆಂಟನೆಯವಳಾ? ಜೊತೆಯಲ್ಲಿರುವಾಗಲೇ ಮೂರು ನಾಲ್ಕು ಜನರ ಜೊತೆ ಓಡಾಡುವ ಹುಡುಗರು, ಇನ್ನೂ ನೀವು ಮಾತನಾಡುವ ಸ್ಪೀಡ್ ನೋಡಿದರೇ ಇಷ್ಟೊತ್ತಿಗೆ ಅದೆಷ್ಟು ಹುಡುಗಿಯರ ಜೀವನ ಹಾಳು ಮಾಡಿಲ್ಲವೆನ್ನಲೂಬಹುದು. ನಾನು ಮನಸಲ್ಲಿರುವುದನ್ನು ನೇರ ಹೇಳುವವನು. ನೀನು ತಿಳಿದಂತೆ ನೀನಿರುವ ಪರಿಸ್ತಿತಿಯನ್ನು ದುರುಪಯೋಗಪಡಿಸಿಕೊಳ್ಳಲು ನಾನೆಂದು ಯತ್ನಿಸಿಲ್ಲ. ಆದರೂ ನಿನ್ನಯ ಮನಸಿನಲ್ಲಿ ಆ ಅನುಮಾನವಿದೆಯೆನ್ನುವುದು ನನಗೆ ತಿಳಿದಿದೆ. ನಾನು ನಿನ್ನಯ ಬಗೆಗೆ ಅನುಕಂಪ ತೋರಿಸಿ ನಿನ್ನಯ ದಾರಿತಪ್ಪಿಸಿ, ಬಳಸಿಕೊಳ್ಳಲು ಆಲೋಚಿಸಿದ್ದೆ. ನೀನು ಬೇಗ ಎಚ್ಚೆತ್ತುಕೊಂಡೆ. ನಾನು ಎಚ್ಚೆತ್ತುಕೊಳ್ಳಲು ಆಗದೇ ಅಲ್ಲಿಯೇ ಕೊರಗಿ ಕೊರಗಿ ಕರಗಿ ನರುಳುತಿದ್ದೇನೆ. ಅದೇನೆ ಇದ್ದರೂ ನೀನು ನನ್ನ ಜೀವದ ಗೆಳತಿಯೆನ್ನುವುದು ನನ್ನ ಮಾತ್ರಕ್ಕೆ ಆನಂದವೆನಿಸುತ್ತದೆ.

02 ಅಕ್ಟೋಬರ್ 2010

ಪ್ರೀತಿಸಿದವರ ಸಂಖ್ಯೆಯಲ್ಲೇನಾದರೂ......!!!!!!!!!!

ನಾವು ಕೆಲವೊಮ್ಮೆ ಬೇರೆಯವರ ಚಾರಿತ್ರ್ಯದ ಬಗೆಗೆ ಬರೆಯುವಾಗ ಅಥವಾ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅದರಿಂದ ಅವರ ಮನಸ್ಸಿಗೆ ಆಗುವ ನೋವನ್ನು ಗಮನಿಸಬೇಕಾಗುತ್ತದೆ. ಅದು ಹೆಣ್ಣಾಗಲಿ ಗಂಡಾಗಲಿ ಒಂದೇ. ಇದಕ್ಕೆ ಉದಾಹರಣೆಯಾಗಿ, ನಿನ್ನೆ ನನ್ನ ಗೆಳತಿಯೊಬ್ಬಳು ನನ್ನನ್ನು ಕೇಳಿದ ಪ್ರಶ್ನೆ ನನಗೆ ಬಹಳ ಮುಜುಗರವಾಯಿತು. ನಾನು ಐಸೆಕ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ನನಗೆ ಸ್ಮಿತ ಎನ್ನುವ ಗೆಳತಿಯಿದ್ದಳು. ತಮಾಷೆಯಾಗಿ ಚೆನ್ನಾಗಿಯೇ ಮಾತನಾಡುತ್ತಿದ್ದೆವು. ಮತ್ತು ನನಗೆ ಕೆಲವೊಂದು ವಿಷಯಗಳ ಕುರಿತು ಬೇಕಿದ್ದ ಸಾಮಗ್ರಿಗಳನ್ನು ನೀಡಿದ್ದಳು ಅದಕ್ಕೆ ನಾನು ಕೃತಜ್ನ. ಆದರೇ, ನಿನ್ನೆ ನನ್ನ ಗೆಳತಿ ನನ್ನನ್ನು ಕೇಳಿದ್ದು, ನಾನು ಅವಳನ್ನು ಪ್ರೀತಿಸುತ್ತಿದ್ದೆ, ಮತ್ತು ಅದನ್ನು ಅವಳಿಗೆ ವ್ಯಕ್ತಪಡಿಸಿದ್ದೆ ಎಂದು. ಇದರಿಂದ ನನಗೆ ಸ್ವಲ್ಪ ಮುಜುಗರ ಮತ್ತು ಬೇಸರವಾಯಿತು. ಅವಳು ಇನ್ನೂ ಚಿಕ್ಕ ಹುಡುಗಿಯಂತೆ ಇದ್ದಿದ್ದರಿಂದ ಅವಳನ್ನು ತಂಗಿಯಂತೆಯೇ ಕಾಣುತ್ತಿದ್ದೆ, ಮತ್ತು ಅವಳು ಆಗ್ಗಾಗ್ಗೆ ನನ್ನನ್ನು ಅಣ್ಣಾ ಎಂದು ಕರೆದಿದ್ದಳು. ಇಂಥವಳು ಅವಳ ಸ್ನೇಹಿತನೊಂದಿಗೆ ಹೋಗಿ, ಹರೀಶ್ ನನ್ನನ್ನು ಇಷ್ಟ ಪಡುತ್ತಿದ್ದಾನೆಂದು ಹೇಳಿದ್ದಾಳೆ. ಅದು ಆಗಿರುವುದು, ಮೂರು ವರ್ಷದ ಹಿಂದೆ, ನನ್ನ ಗೆಳತಿ ನನಗೆ ತಿಳಿಸಿದ್ದು ನಿನ್ನೆ. ನಾನು ದಿಡೀರನೆ ಅವಳಿಂದ ಸ್ಮಿತಾಳ ಮೊಬೈಲ್ ನಂಬರ್ ತೆಗೆದುಕೊಂಡು ಕರೆ ಮಾಡಿದೆ. ನೀನು ನನ್ನಯ ಬಗೆಗೆ ಹೀಗೆಲ್ಲಾ ಹೇಳಿದ್ದು, ಸತ್ಯವೇ? ಹೌದು ನಾನು ಹೇಳಿದ್ದು ಸತ್ಯ. ನಾನು ಕೇಳಿದೆ, ನಾನು ನಿನಗೆ ಪ್ರೀತಿಸುತ್ತೇನೆಂದು ಹೇಳಿದ್ದೇನಾ? ಇಲ್ಲಾ ನೇರವಾಗಿ ಹೇಳಿಲ್ಲಾ, ಆದರೇ, ನೀವು ಒಂದು ದಿನ ಸಂಜೆ ಹೊತ್ತಿನಲ್ಲಿ, ನಾನು ಮನೆಗೆ ಹೋಗುವ ಸಮಯದಲ್ಲಿ ಬಹಳ ಕೋಪದಿಂದ, ನೀನು ನನ್ನ ಗರ್ಲ್ ಫ್ರೆಂಡ್, ನಾನು ಯಾವಾಗ ಫೋನ್ ಮಾಡಿದರೂ ಮಾತನಾಡಬೇಕೆಂದು ಹೇಳಿದ್ದಿರಿ, ಎಂದಳು. ನಾನೆಂದು ಹಾಗೆ ಹೇಳಿಲ್ಲ, ಎಂದೆ. ಅವಳು ನೀವು ಆ ದಿನ ಬಹಳ ಕೋಪದಿಂದ ನನ್ನಯ ಮೇಲೆ ಒತ್ತಡ ಹೇರುವಂತೆ ಹೇಳಿದ್ದಿರಿ ಎಂದಳು. ನೀವು ಕುಡಿದಿದ್ದಿರಿ ಎನಿಸುತ್ತದೆ, ಎಂದಳು. ಹೌದೇ? ನಾನು ಕುಡಿದಿದ್ದೇನೆ? ಯಾವ ವರ್ಷದಲ್ಲಿ? ೨೦೦೭-೨೦೦೮ರ ನಡುವೆಯಲ್ಲಿ? ಆ ಸಮಯದಲ್ಲಿ ನಾನು ಕುಡೀಯುತ್ತಿರಲಿಲ್ಲ, ಮಾಂಸಹಾರಿಯೂ ಆಗಿರಲಿಲ್ಲ. ನಾನು ಕುಡಿಯುತ್ತೇನೆಂದು ನನ್ನ ಬರವಣಿಗೆಯಲ್ಲಿ ಬರೆಯುತ್ತೇನೆಂದ ಮಾತ್ರಕ್ಕೆ, ನಾನು ದಿನವೂ ಕುಡಿಯುತ್ತೇನೆಂದು ಭಾವಿಸಿದ್ದರೇ ತಪ್ಪಾಗುತ್ತದೆ. ದಿನವೂ ಕುಡಿಯಲೂಬಹುದು, ತಿಂಗಳುಗಟ್ಟಲೇ ಕುಡಿಯದೇ ಇರಬಹುದು. ಆದರೇ, ಮಧ್ಯಾಹ್ನವೇ ಕುಡಿಯುವ, ಅಥವಾ ಕುಡಿದು ಕೆಲಸಕ್ಕೆ ಹೋಗುವ ಮನಸ್ಥಿತಿ ನನಗೆಂದೂ ಬಂದಿಲ್ಲ.
ನೀವು ಹೇಳುವುದು ಸತ್ಯವೇ? ನಾನು ಅಂದು ಕುಡಿದಿದ್ದೇನೆ? ಅದು ನನಗೆ ಗೊತ್ತಿಲ್ಲ, ನಾನು ಹೆಚ್ಚು ಸಮಯ ನಿಲ್ಲಲ್ಲಿಲ್ಲ. ಕುಡಿದವರ ವಾಸನೆ ತಿಳಿಯುವುದಿಲ್ಲವೇ? ಕುಡಿದವರ ನಡುವಳಿಕೆ ನೋಡಿದೊಡನೆ ತಿಳಿಯುವುದಿಲ್ಲವೇ? ಅದು ನನಗೆ ತಿಳಿಯಲಿಲ್ಲ ನೀವು ಸ್ವಲ್ಪ ಕುಡಿದಿರಬಹುದು, ಸ್ವಲ್ಪ ಕುಡಿದವನು, ಕಛೇರಿಗೆ ಹೋಗಿ ಕೆಲಸ ಮಾಡುವಷ್ಟು ಆರಾಮಾ ಕೆಲಸವಿತ್ತೇ ಐಸೆಕ್ ನಲ್ಲಿ? ಸರಿ, ನಾನು ಅದೊಂದೇ ದಿನವೇ ನಿಮ್ಮೊಂದಿಗೆ ತಪ್ಪಾಗಿ ನಡೆದುಕೊಂಡದ್ದು? ಹೌದು. ಅದಕ್ಕೆ ಮುಂಚೆ, ಎಂದೂ ಆ ರೀತಿ ನಡೆದುಕೊಂಡಿಲ್ಲವೇ? ಇಲ್ಲ. ಅದಾದ ಮೇಲೂ ನಡೆದುಕೊಂಡಿಲ್ಲ. ಅಂದರೇ, ಆ ದಿನಕ್ಕೆ, ಆ ಕ್ಷಣಕ್ಕೆ ಮಾತ್ರ, ನಾನು ಬೇರೆಯವನಾಗಿ ನಡೆದುಕೊಂಡನೇ? ಅದೆಲ್ಲ, ನನಗೆ ಗೊತ್ತಿಲ್ಲ ಆ ದಿನ ನೀವು ಹೇಳಿದ್ದು ಹೌದು. ಮಾರನೇ ದಿನ ನೀವು ಫೀಲ್ಡ್ ಗೆ ಹೋಗಿದ್ದಿರಿ, ನಾನು ನಿಮ್ಮನ್ನು ಸ್ವಲ್ಪ ಅವೈಡ್ ಮಾಡಿದೆ. ನನ್ನನು ಸ್ವಲ್ಪದೂರವಿರಿಸಿದ್ದೇ ಆದರೇ ಆಮೇಲೆ ಮಾತನಾಡಿದ್ದಿರಿ ಅಲ್ಲವೇ? ಹೌದು ಮಾತನಾಡಿಸಿದ್ದೇ, ಆ ದಿನ ನಡೆದದ್ದು ಅಚಾತುರ್ಯವೆಂದು ನಿಮ್ಮನ್ನು ಮಾತನಾಡಿಸಿದೆ. ಸರಿ ನನ್ನನ್ನೇ ಕೇಳಬಹುದಿತ್ತಲ್ಲವೇ? ಅದರಲ್ಲಿ ತಪ್ಪೇನಿತ್ತು, ನೀವು ನಿಮ್ಮ ಗೆಳೆಯನ ಬಳಿಗೆ ಹೇಳುವ ಅವಶ್ಯಕತೆಯಿತ್ತೇ? ಇಲ್ಲ ಆ ದಿನ ನಾನು ಬಹಳ ನೊಂದಿದ್ದೆ, ಆದ್ದರಿಂದ ನಾನು ಅವನ ಬಳಿಯಲ್ಲಿ ಅದನ್ನು ಹೇಳಿಕೊಂಡಿದ್ದೆ, ಅವನು ಇಂದು ನನ್ನಿಂದ ದೂರಾಗಿದ್ದಾನೆ, ಆದ್ದರಿಂದ ನನ್ನಯ ಬಗೆಗೆ ಈ ರೀತಿ ಅಪವಾದ ಹೊರಸುತ್ತಿದ್ದಾನೆ. ಅದೇನೇ ಆಗಿದ್ದರೂ, ನಾನು ಮಾಡದ ತಪ್ಪನ್ನು, ಒಂದು ಹುಡುಗಿಗೆ ಪ್ರೀತಿಸುತಿದ್ದೇನೆಂದು ಹೇಳುವುದು ತಪ್ಪಲ್ಲ, ನಾನು ಅನೇಕಾ ಹುಡುಗಿಯರಿಗೂ ಹೇಳಿದ್ದೇನೆ, ಮದುವೆಯಾದವರಿಗೂ ಹೇಳಿದ್ದೇನೆ. ಆದರೇ, ಹೇಳದೇ ಇರುವುದನ್ನು ಹೇಗೆ ಒಪ್ಪಿಕೊಳ್ಳಲಿ? ನಾನು ಒಮ್ಮೆ ಸ್ನೇಹಿತರೆಂದು ಪರಿಗಣಿಸಿದವರನ್ನು ಪ್ರೇಯಸಿ ಎಂದು ಬಯಸುವುದಿಲ್ಲ, ಒಮ್ಮೆ ಪ್ರೇಯಸಿಯೆಂದು ಮನಗೆದ್ದವಳು, ಸದಾ ಪ್ರೇಯಸಿಯಾಗಿರಬೇಕೆಂದು ಬಯಸುತ್ತೇನೆ. ಪ್ರೀತಿಸಿ, ನಂತರ ನಾವಿಬ್ಬರೂ ಕೇವಲ ಸ್ನೇಹಿತರೆಂದು ಪ್ಲೇಟು ಬದಲಾಯಿಸುವುದು ನನಗೆ ದುಃಖದ ಸಂಗತಿಯೇ ಸರಿ.
ಸ್ಮಿತಾಳ ವಿಷಯದಲ್ಲಿಯೂ ಅಷ್ಟೇ, ನಾನು ಮಾಡಿಲ್ಲದ ಕೆಲಸವನ್ನು, ನನ್ನಯ ಮೇಲೆ ಹಾಕಿದ್ದರ ಹಿಂದಿನ ಉದ್ದೇಶ ನನಗೆ ತಿಳಿದಿಲ್ಲ, ಕೆಲವರು ಮತ್ತೊಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿಯ ಅಪವಾದ ಮಾಡುತ್ತಾರೆ. ಆದರೇ, ಸ್ಮಿತಾ ಆ ಬಗೆಗೆ ನನ್ನಯ ಮೇಲೆ ಸೇಡು ತೀರಿಸಿಕೊಳ್ಳುವ ಅಗತ್ಯವಿರಲಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮ ಮನೆಗೆ ಬಂದು ಹೋಗುವಷ್ಟು ಸಲುಗೆಯಿದ್ದ ಗೆಳತಿ, ಈ ರೀತಿ ಹೇಳಿರುವುದು ಬಹಳ ಮುಜುಗರವೆನಿಸುತ್ತದೆ. ದುರಾದೃಷ್ಟವೆಂದರೇ, ಅವಳು ಹೇಳಿದ ಮೂರು ವರ್ಷಗಳ ನಂತರ ನನಗೆ ತಿಳಿದಿದೆ. ಇದೇ ಬಗೆಯ ಅಪವಾದವನ್ನು, ನನ್ನ ಜೊತೆಯಲ್ಲಿ ಓದಿದ, ಸುಷ್ಮಿತಾ ಮಾಡಿದ್ದಳು. ಅವಳು ನನ್ನ ಆತ್ಮೀಯ ಗೆಳತಿಯಾಗಿದ್ದಳು, ದಿನ ನಿತ್ಯದ ನಮ್ಮ ಚಟುವಟಿಕೆಗಳು, ಕನಿಷ್ಟವೆಂದರೂ ದಿನದ ಹನ್ನೆರಡು ಹದಿ ಮೂರು ಗಂಟೆಗಳು ಜೊತೆಯಲ್ಲಿಯೇ ಕಳೆಯುತ್ತಿದೆವು, ಕಾಲೇಜಿನಲ್ಲಿ, ಲೈಬ್ರರಿಯಲ್ಲಿ, ನಂತರ ವಿಜಯನಗರ, ಬಸವೇಶ್ವರನಗರ ಹೀಗೆ, ಒಳ್ಳೊಳ್ಳೆ ಹೋಟೇಲುಗಳಲ್ಲಿ, ಪಾನಿಪೂರಿ, ಚುರುಮುರಿ ಅಂಗಡಿಗಳು, ಒಟ್ಟಾರೆ ಬೆಳ್ಳಿಗೆ ಹತ್ತು ಗಂಟೆಗೆ ಭೇಟಿಯಾಗಿ, ರಾತ್ರಿ ಒಂಬತ್ತರ ತನಕ ಜೊತೆಯಲ್ಲಿರುತ್ತಿದ್ದೆವು. ಅವಳು ಒಂದು ಹುಡುಗನನ್ನು ಬಹಳ ಪ್ರೀತಿಸುತ್ತಿದ್ದು, ಅವನು ಇವಳಿಂದ ದೂರಾಗಲು ಪ್ರಯತ್ನಿಸುತ್ತಿದ್ದದ್ದು, ನಾನು ಅವಳನ್ನು ಅದರಿಂದ ಹೊರತರಲು ಬಹಳ ಕಷ್ಟಪಡುತ್ತಿದ್ದೆ. ಇಷ್ಟೆಲ್ಲಾ ಮಾಡಿಯೂ, ನಮ್ಮ ಕ್ಲಾಸಿನಲ್ಲಿ ಸ್ವಂತ ಅಹಂ ನಿಂದಾಗಿ, ನನ್ನ ಮತ್ತು ಕೆಲವು ಹುಡುಗಿಯರ ಜೊತೆಗೆ ಜಗಳ ಶುರುವಾಯಿತು. ಆ ಸಮಯದಲ್ಲಿ, ನನ್ನ ಮೇಲೆ, ಸ್ನೇಹಿತ ಎಂಬುದನ್ನು ಮರೆತು, ಶತ್ರುಪಡೆ ಸೇರಿದಳು. ನಾನು ಅವಳನ್ನು ಪ್ರೀತಿಸುತ್ತಿದ್ದೆ, ಅವಳಿಗೆ ಅದನ್ನು ವ್ಯಕ್ತ ಪಡಿಸಿದ್ದೆ ಎಂದು ಎಲ್ಲರ ಜೊತೆಯಲ್ಲಿಯೂ ಹೇಳಿದ್ದು, ನಮ್ಮ ವಿದ್ಯಭ್ಯಾಸದ ಕಡೆಯಲ್ಲಿ ತಿಳಿಯಿತು. ಇದು ನಾನು ನಂಬಿದ ಸ್ನೇಹಕ್ಕೆ ಹಾಕಿದ ಚೂರಿಯಲ್ಲದೇ ಮತ್ತೇನೂ ಅಲ್ಲ. ಈ ಬಾರಿಯೂ ಅಷ್ಟೇ, ಸ್ಮಿತಾ ಮಾಡಿರುವುದು ನಾನು ಅವಳ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಬಗೆದ ದ್ರೋಹ.
ನಾನೇನು ಬಹಳ ಸಾಚನೆಂದು ಹೇಳಿಕೊಳ್ಳುವುದಿಲ್ಲ, ಅನೇಕಾ ಹುಡುಗಿಯರನ್ನು ಇಷ್ಟಪಟ್ಟಿದ್ದೇನೆ, ಕೆಲವರನ್ನು ಕಾಡಿಸಿದ್ದೇನೆ, ಪೀಡಿಸಿದ್ದೇನೆ. ಅವರು ಒಪ್ಪಿಕೊಳ್ಳುವ ತನಕ ಹಟ ಹಿಡಿದಿದ್ದೇನೆ, ಒಪ್ಪದೇ ಇದ್ದಾಗ ಸಾಯುವಷ್ಟು ಕುಡಿದಿದ್ದೇನೆ, ಅತ್ತಿದ್ದೇನೆ, ನೊಂದಿದ್ದೇನೆ. ಆದರೇ, ಅಷ್ಟೇ ನಿಯತ್ತಿನಲ್ಲಿ ಪ್ರೀತಿಸಿದ್ದೇನೆ. ಸ್ನೇಹಿತರ ವಿಷಯದಲ್ಲಿಯೂ ಅಷ್ಟೇ, ಅದು ಹುಡುಗನಾಗಲೀ, ಹುಡುಗಿಯಾಗಲಿ, ಒಮ್ಮೆ ನನ್ನ ಸ್ನೇಹಿತರೆಂದ ಮೇಲ ನಾನು ಅವರಿಗಾಗಿ ಹಾತೊರೆಯುತ್ತೇನೆ. ಸದಾ ಅವರ ಬಗೆಗೆ ಚಿಂತಿಸುತ್ತೇನೆ, ಯಾರನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ. ಅಂದು, ಸುಷ್ಮಿತಾ ತನ್ನ ಸ್ನೇಹಿತರೊಡನೆ ಸೇರಿ, ನನ್ನನ್ನು ಮಾತನಾಡಿಸದೇ ಹೋದಾಗಲೂ ಅಷ್ಟೇ ನೊಂದಿದ್ದೇನೆ, ಕೊರಗಿದ್ದೇನೆ, ಅತ್ತಿದ್ದೇನೆ, ಮತ್ತೆ ಅವಳ ಬಳಿಗೆ ಹೋಗಿ ನನ್ನತನವನ್ನು ಮರೆತು ಬೇಡಿದ್ದೇನೆ. ಅದು ಒಂದು ನಿಷ್ಕಲ್ಮಶವಾದ ಸ್ನೇಹವನ್ನು ಕಳೆದುಕೊಳ್ಳಲಾರದೇ ಬೇಡಿದ್ದೇ ಹೊರತು ಅವಳನ್ನು ಮತ್ತಾವ ಉದ್ದೇಶದಿಂದಲೂ ಅಲ್ಲ. ಇವೆಲ್ಲವನ್ನು ಇಲ್ಲಿ ಬರೆಯುವ ಅವಶ್ಯಕತೆಯಿಲ್ಲವಾದರೂ, ಸುಮ್ಮನೆ ಇಲ್ಲಸಲ್ಲದ ಅಪವಾದ ಮಾಡುವ ಗುಣವೇಕೆ ಈ ಹುಡುಗಿಯರಿಗೆ ಬರುತ್ತದೆಂಬುದು ಅರಿವಾಗುವುದಿಲ್ಲ. ನಿಮಗೆ ತಿಳಿದಿದ್ದರೇ ತಿಳಿಸಿಕೊಡಿ. ನಾನು ದಿನ ಬೆಳ್ಳಿಗ್ಗೆಯಾದರೇ ಪೀಡಿಸುವ ಹುಡುಗಿಯಾದರೂ ಇದನ್ನು ನೆನಪಿಸಿಕೊಂಡರೇ ನನಗೆ ಖುಷಿಯಾಗುತ್ತದೆ, ಕೆಲಸಕ್ಕೆ ಬಾರದವು ಈ ರೀತಿ ನಮ್ಮನ್ನು, ನಮ್ಮ ಬಗೆಗೆ ಹೇಳಿ ಕುಡುಕನ ಜೊತೆಗೆ ಫ್ಲರ್ಟ್ ಎಂಬ ಹೊಸ ಪದವನ್ನು ಸೇರಿಸಬೇಕೇ?

ಪ್ರೀತಿಸಿದವರ ಸಂಖ್ಯೆಯಲ್ಲೇನಾದರೂ......!!!!!!!!!!

ನಾವು ಕೆಲವೊಮ್ಮೆ ಬೇರೆಯವರ ಚಾರಿತ್ರ್ಯದ ಬಗೆಗೆ ಬರೆಯುವಾಗ ಅಥವಾ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅದರಿಂದ ಅವರ ಮನಸ್ಸಿಗೆ ಆಗುವ ನೋವನ್ನು ಗಮನಿಸಬೇಕಾಗುತ್ತದೆ. ಅದು ಹೆಣ್ಣಾಗಲಿ ಗಂಡಾಗಲಿ ಒಂದೇ. ಇದಕ್ಕೆ ಉದಾಹರಣೆಯಾಗಿ, ನಿನ್ನೆ ನನ್ನ ಗೆಳತಿಯೊಬ್ಬಳು ನನ್ನನ್ನು ಕೇಳಿದ ಪ್ರಶ್ನೆ ನನಗೆ ಬಹಳ ಮುಜುಗರವಾಯಿತು. ನಾನು ಐಸೆಕ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ನನಗೆ ಸ್ಮಿತ ಎನ್ನುವ ಗೆಳತಿಯಿದ್ದಳು. ತಮಾಷೆಯಾಗಿ ಚೆನ್ನಾಗಿಯೇ ಮಾತನಾಡುತ್ತಿದ್ದೆವು. ಮತ್ತು ನನಗೆ ಕೆಲವೊಂದು ವಿಷಯಗಳ ಕುರಿತು ಬೇಕಿದ್ದ ಸಾಮಗ್ರಿಗಳನ್ನು ನೀಡಿದ್ದಳು ಅದಕ್ಕೆ ನಾನು ಕೃತಜ್ನ. ಆದರೇ, ನಿನ್ನೆ ನನ್ನ ಗೆಳತಿ ನನ್ನನ್ನು ಕೇಳಿದ್ದು, ನಾನು ಅವಳನ್ನು ಪ್ರೀತಿಸುತ್ತಿದ್ದೆ, ಮತ್ತು ಅದನ್ನು ಅವಳಿಗೆ ವ್ಯಕ್ತಪಡಿಸಿದ್ದೆ ಎಂದು. ಇದರಿಂದ ನನಗೆ ಸ್ವಲ್ಪ ಮುಜುಗರ ಮತ್ತು ಬೇಸರವಾಯಿತು. ಅವಳು ಇನ್ನೂ ಚಿಕ್ಕ ಹುಡುಗಿಯಂತೆ ಇದ್ದಿದ್ದರಿಂದ ಅವಳನ್ನು ತಂಗಿಯಂತೆಯೇ ಕಾಣುತ್ತಿದ್ದೆ, ಮತ್ತು ಅವಳು ಆಗ್ಗಾಗ್ಗೆ ನನ್ನನ್ನು ಅಣ್ಣಾ ಎಂದು ಕರೆದಿದ್ದಳು. ಇಂಥವಳು ಅವಳ ಸ್ನೇಹಿತನೊಂದಿಗೆ ಹೋಗಿ, ಹರೀಶ್ ನನ್ನನ್ನು ಇಷ್ಟ ಪಡುತ್ತಿದ್ದಾನೆಂದು ಹೇಳಿದ್ದಾಳೆ. ಅದು ಆಗಿರುವುದು, ಮೂರು ವರ್ಷದ ಹಿಂದೆ, ನನ್ನ ಗೆಳತಿ ನನಗೆ ತಿಳಿಸಿದ್ದು ನಿನ್ನೆ. ನಾನು ದಿಡೀರನೆ ಅವಳಿಂದ ಸ್ಮಿತಾಳ ಮೊಬೈಲ್ ನಂಬರ್ ತೆಗೆದುಕೊಂಡು ಕರೆ ಮಾಡಿದೆ. ನೀನು ನನ್ನಯ ಬಗೆಗೆ ಹೀಗೆಲ್ಲಾ ಹೇಳಿದ್ದು, ಸತ್ಯವೇ? ಹೌದು ನಾನು ಹೇಳಿದ್ದು ಸತ್ಯ. ನಾನು ಕೇಳಿದೆ, ನಾನು ನಿನಗೆ ಪ್ರೀತಿಸುತ್ತೇನೆಂದು ಹೇಳಿದ್ದೇನಾ? ಇಲ್ಲಾ ನೇರವಾಗಿ ಹೇಳಿಲ್ಲಾ, ಆದರೇ, ನೀವು ಒಂದು ದಿನ ಸಂಜೆ ಹೊತ್ತಿನಲ್ಲಿ, ನಾನು ಮನೆಗೆ ಹೋಗುವ ಸಮಯದಲ್ಲಿ ಬಹಳ ಕೋಪದಿಂದ, ನೀನು ನನ್ನ ಗರ್ಲ್ ಫ್ರೆಂಡ್, ನಾನು ಯಾವಾಗ ಫೋನ್ ಮಾಡಿದರೂ ಮಾತನಾಡಬೇಕೆಂದು ಹೇಳಿದ್ದಿರಿ, ಎಂದಳು. ನಾನೆಂದು ಹಾಗೆ ಹೇಳಿಲ್ಲ, ಎಂದೆ. ಅವಳು ನೀವು ಆ ದಿನ ಬಹಳ ಕೋಪದಿಂದ ನನ್ನಯ ಮೇಲೆ ಒತ್ತಡ ಹೇರುವಂತೆ ಹೇಳಿದ್ದಿರಿ ಎಂದಳು. ನೀವು ಕುಡಿದಿದ್ದಿರಿ ಎನಿಸುತ್ತದೆ, ಎಂದಳು. ಹೌದೇ? ನಾನು ಕುಡಿದಿದ್ದೇನೆ? ಯಾವ ವರ್ಷದಲ್ಲಿ? ೨೦೦೭-೨೦೦೮ರ ನಡುವೆಯಲ್ಲಿ? ಆ ಸಮಯದಲ್ಲಿ ನಾನು ಕುಡೀಯುತ್ತಿರಲಿಲ್ಲ, ಮಾಂಸಹಾರಿಯೂ ಆಗಿರಲಿಲ್ಲ. ನಾನು ಕುಡಿಯುತ್ತೇನೆಂದು ನನ್ನ ಬರವಣಿಗೆಯಲ್ಲಿ ಬರೆಯುತ್ತೇನೆಂದ ಮಾತ್ರಕ್ಕೆ, ನಾನು ದಿನವೂ ಕುಡಿಯುತ್ತೇನೆಂದು ಭಾವಿಸಿದ್ದರೇ ತಪ್ಪಾಗುತ್ತದೆ. ದಿನವೂ ಕುಡಿಯಲೂಬಹುದು, ತಿಂಗಳುಗಟ್ಟಲೇ ಕುಡಿಯದೇ ಇರಬಹುದು. ಆದರೇ, ಮಧ್ಯಾಹ್ನವೇ ಕುಡಿಯುವ, ಅಥವಾ ಕುಡಿದು ಕೆಲಸಕ್ಕೆ ಹೋಗುವ ಮನಸ್ಥಿತಿ ನನಗೆಂದೂ ಬಂದಿಲ್ಲ.
ನೀವು ಹೇಳುವುದು ಸತ್ಯವೇ? ನಾನು ಅಂದು ಕುಡಿದಿದ್ದೇನೆ? ಅದು ನನಗೆ ಗೊತ್ತಿಲ್ಲ, ನಾನು ಹೆಚ್ಚು ಸಮಯ ನಿಲ್ಲಲ್ಲಿಲ್ಲ. ಕುಡಿದವರ ವಾಸನೆ ತಿಳಿಯುವುದಿಲ್ಲವೇ? ಕುಡಿದವರ ನಡುವಳಿಕೆ ನೋಡಿದೊಡನೆ ತಿಳಿಯುವುದಿಲ್ಲವೇ? ಅದು ನನಗೆ ತಿಳಿಯಲಿಲ್ಲ ನೀವು ಸ್ವಲ್ಪ ಕುಡಿದಿರಬಹುದು, ಸ್ವಲ್ಪ ಕುಡಿದವನು, ಕಛೇರಿಗೆ ಹೋಗಿ ಕೆಲಸ ಮಾಡುವಷ್ಟು ಆರಾಮಾ ಕೆಲಸವಿತ್ತೇ ಐಸೆಕ್ ನಲ್ಲಿ? ಸರಿ, ನಾನು ಅದೊಂದೇ ದಿನವೇ ನಿಮ್ಮೊಂದಿಗೆ ತಪ್ಪಾಗಿ ನಡೆದುಕೊಂಡದ್ದು? ಹೌದು. ಅದಕ್ಕೆ ಮುಂಚೆ, ಎಂದೂ ಆ ರೀತಿ ನಡೆದುಕೊಂಡಿಲ್ಲವೇ? ಇಲ್ಲ. ಅದಾದ ಮೇಲೂ ನಡೆದುಕೊಂಡಿಲ್ಲ. ಅಂದರೇ, ಆ ದಿನಕ್ಕೆ, ಆ ಕ್ಷಣಕ್ಕೆ ಮಾತ್ರ, ನಾನು ಬೇರೆಯವನಾಗಿ ನಡೆದುಕೊಂಡನೇ? ಅದೆಲ್ಲ, ನನಗೆ ಗೊತ್ತಿಲ್ಲ ಆ ದಿನ ನೀವು ಹೇಳಿದ್ದು ಹೌದು. ಮಾರನೇ ದಿನ ನೀವು ಫೀಲ್ಡ್ ಗೆ ಹೋಗಿದ್ದಿರಿ, ನಾನು ನಿಮ್ಮನ್ನು ಸ್ವಲ್ಪ ಅವೈಡ್ ಮಾಡಿದೆ. ನನ್ನನು ಸ್ವಲ್ಪದೂರವಿರಿಸಿದ್ದೇ ಆದರೇ ಆಮೇಲೆ ಮಾತನಾಡಿದ್ದಿರಿ ಅಲ್ಲವೇ? ಹೌದು ಮಾತನಾಡಿಸಿದ್ದೇ, ಆ ದಿನ ನಡೆದದ್ದು ಅಚಾತುರ್ಯವೆಂದು ನಿಮ್ಮನ್ನು ಮಾತನಾಡಿಸಿದೆ. ಸರಿ ನನ್ನನ್ನೇ ಕೇಳಬಹುದಿತ್ತಲ್ಲವೇ? ಅದರಲ್ಲಿ ತಪ್ಪೇನಿತ್ತು, ನೀವು ನಿಮ್ಮ ಗೆಳೆಯನ ಬಳಿಗೆ ಹೇಳುವ ಅವಶ್ಯಕತೆಯಿತ್ತೇ? ಇಲ್ಲ ಆ ದಿನ ನಾನು ಬಹಳ ನೊಂದಿದ್ದೆ, ಆದ್ದರಿಂದ ನಾನು ಅವನ ಬಳಿಯಲ್ಲಿ ಅದನ್ನು ಹೇಳಿಕೊಂಡಿದ್ದೆ, ಅವನು ಇಂದು ನನ್ನಿಂದ ದೂರಾಗಿದ್ದಾನೆ, ಆದ್ದರಿಂದ ನನ್ನಯ ಬಗೆಗೆ ಈ ರೀತಿ ಅಪವಾದ ಹೊರಸುತ್ತಿದ್ದಾನೆ. ಅದೇನೇ ಆಗಿದ್ದರೂ, ನಾನು ಮಾಡದ ತಪ್ಪನ್ನು, ಒಂದು ಹುಡುಗಿಗೆ ಪ್ರೀತಿಸುತಿದ್ದೇನೆಂದು ಹೇಳುವುದು ತಪ್ಪಲ್ಲ, ನಾನು ಅನೇಕಾ ಹುಡುಗಿಯರಿಗೂ ಹೇಳಿದ್ದೇನೆ, ಮದುವೆಯಾದವರಿಗೂ ಹೇಳಿದ್ದೇನೆ. ಆದರೇ, ಹೇಳದೇ ಇರುವುದನ್ನು ಹೇಗೆ ಒಪ್ಪಿಕೊಳ್ಳಲಿ? ನಾನು ಒಮ್ಮೆ ಸ್ನೇಹಿತರೆಂದು ಪರಿಗಣಿಸಿದವರನ್ನು ಪ್ರೇಯಸಿ ಎಂದು ಬಯಸುವುದಿಲ್ಲ, ಒಮ್ಮೆ ಪ್ರೇಯಸಿಯೆಂದು ಮನಗೆದ್ದವಳು, ಸದಾ ಪ್ರೇಯಸಿಯಾಗಿರಬೇಕೆಂದು ಬಯಸುತ್ತೇನೆ. ಪ್ರೀತಿಸಿ, ನಂತರ ನಾವಿಬ್ಬರೂ ಕೇವಲ ಸ್ನೇಹಿತರೆಂದು ಪ್ಲೇಟು ಬದಲಾಯಿಸುವುದು ನನಗೆ ದುಃಖದ ಸಂಗತಿಯೇ ಸರಿ.
ಸ್ಮಿತಾಳ ವಿಷಯದಲ್ಲಿಯೂ ಅಷ್ಟೇ, ನಾನು ಮಾಡಿಲ್ಲದ ಕೆಲಸವನ್ನು, ನನ್ನಯ ಮೇಲೆ ಹಾಕಿದ್ದರ ಹಿಂದಿನ ಉದ್ದೇಶ ನನಗೆ ತಿಳಿದಿಲ್ಲ, ಕೆಲವರು ಮತ್ತೊಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿಯ ಅಪವಾದ ಮಾಡುತ್ತಾರೆ. ಆದರೇ, ಸ್ಮಿತಾ ಆ ಬಗೆಗೆ ನನ್ನಯ ಮೇಲೆ ಸೇಡು ತೀರಿಸಿಕೊಳ್ಳುವ ಅಗತ್ಯವಿರಲಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮ ಮನೆಗೆ ಬಂದು ಹೋಗುವಷ್ಟು ಸಲುಗೆಯಿದ್ದ ಗೆಳತಿ, ಈ ರೀತಿ ಹೇಳಿರುವುದು ಬಹಳ ಮುಜುಗರವೆನಿಸುತ್ತದೆ. ದುರಾದೃಷ್ಟವೆಂದರೇ, ಅವಳು ಹೇಳಿದ ಮೂರು ವರ್ಷಗಳ ನಂತರ ನನಗೆ ತಿಳಿದಿದೆ. ಇದೇ ಬಗೆಯ ಅಪವಾದವನ್ನು, ನನ್ನ ಜೊತೆಯಲ್ಲಿ ಓದಿದ, ಸುಷ್ಮಿತಾ ಮಾಡಿದ್ದಳು. ಅವಳು ನನ್ನ ಆತ್ಮೀಯ ಗೆಳತಿಯಾಗಿದ್ದಳು, ದಿನ ನಿತ್ಯದ ನಮ್ಮ ಚಟುವಟಿಕೆಗಳು, ಕನಿಷ್ಟವೆಂದರೂ ದಿನದ ಹನ್ನೆರಡು ಹದಿ ಮೂರು ಗಂಟೆಗಳು ಜೊತೆಯಲ್ಲಿಯೇ ಕಳೆಯುತ್ತಿದೆವು, ಕಾಲೇಜಿನಲ್ಲಿ, ಲೈಬ್ರರಿಯಲ್ಲಿ, ನಂತರ ವಿಜಯನಗರ, ಬಸವೇಶ್ವರನಗರ ಹೀಗೆ, ಒಳ್ಳೊಳ್ಳೆ ಹೋಟೇಲುಗಳಲ್ಲಿ, ಪಾನಿಪೂರಿ, ಚುರುಮುರಿ ಅಂಗಡಿಗಳು, ಒಟ್ಟಾರೆ ಬೆಳ್ಳಿಗೆ ಹತ್ತು ಗಂಟೆಗೆ ಭೇಟಿಯಾಗಿ, ರಾತ್ರಿ ಒಂಬತ್ತರ ತನಕ ಜೊತೆಯಲ್ಲಿರುತ್ತಿದ್ದೆವು. ಅವಳು ಒಂದು ಹುಡುಗನನ್ನು ಬಹಳ ಪ್ರೀತಿಸುತ್ತಿದ್ದು, ಅವನು ಇವಳಿಂದ ದೂರಾಗಲು ಪ್ರಯತ್ನಿಸುತ್ತಿದ್ದದ್ದು, ನಾನು ಅವಳನ್ನು ಅದರಿಂದ ಹೊರತರಲು ಬಹಳ ಕಷ್ಟಪಡುತ್ತಿದ್ದೆ. ಇಷ್ಟೆಲ್ಲಾ ಮಾಡಿಯೂ, ನಮ್ಮ ಕ್ಲಾಸಿನಲ್ಲಿ ಸ್ವಂತ ಅಹಂ ನಿಂದಾಗಿ, ನನ್ನ ಮತ್ತು ಕೆಲವು ಹುಡುಗಿಯರ ಜೊತೆಗೆ ಜಗಳ ಶುರುವಾಯಿತು. ಆ ಸಮಯದಲ್ಲಿ, ನನ್ನ ಮೇಲೆ, ಸ್ನೇಹಿತ ಎಂಬುದನ್ನು ಮರೆತು, ಶತ್ರುಪಡೆ ಸೇರಿದಳು. ನಾನು ಅವಳನ್ನು ಪ್ರೀತಿಸುತ್ತಿದ್ದೆ, ಅವಳಿಗೆ ಅದನ್ನು ವ್ಯಕ್ತ ಪಡಿಸಿದ್ದೆ ಎಂದು ಎಲ್ಲರ ಜೊತೆಯಲ್ಲಿಯೂ ಹೇಳಿದ್ದು, ನಮ್ಮ ವಿದ್ಯಭ್ಯಾಸದ ಕಡೆಯಲ್ಲಿ ತಿಳಿಯಿತು. ಇದು ನಾನು ನಂಬಿದ ಸ್ನೇಹಕ್ಕೆ ಹಾಕಿದ ಚೂರಿಯಲ್ಲದೇ ಮತ್ತೇನೂ ಅಲ್ಲ. ಈ ಬಾರಿಯೂ ಅಷ್ಟೇ, ಸ್ಮಿತಾ ಮಾಡಿರುವುದು ನಾನು ಅವಳ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಬಗೆದ ದ್ರೋಹ.
ನಾನೇನು ಬಹಳ ಸಾಚನೆಂದು ಹೇಳಿಕೊಳ್ಳುವುದಿಲ್ಲ, ಅನೇಕಾ ಹುಡುಗಿಯರನ್ನು ಇಷ್ಟಪಟ್ಟಿದ್ದೇನೆ, ಕೆಲವರನ್ನು ಕಾಡಿಸಿದ್ದೇನೆ, ಪೀಡಿಸಿದ್ದೇನೆ. ಅವರು ಒಪ್ಪಿಕೊಳ್ಳುವ ತನಕ ಹಟ ಹಿಡಿದಿದ್ದೇನೆ, ಒಪ್ಪದೇ ಇದ್ದಾಗ ಸಾಯುವಷ್ಟು ಕುಡಿದಿದ್ದೇನೆ, ಅತ್ತಿದ್ದೇನೆ, ನೊಂದಿದ್ದೇನೆ. ಆದರೇ, ಅಷ್ಟೇ ನಿಯತ್ತಿನಲ್ಲಿ ಪ್ರೀತಿಸಿದ್ದೇನೆ. ಸ್ನೇಹಿತರ ವಿಷಯದಲ್ಲಿಯೂ ಅಷ್ಟೇ, ಅದು ಹುಡುಗನಾಗಲೀ, ಹುಡುಗಿಯಾಗಲಿ, ಒಮ್ಮೆ ನನ್ನ ಸ್ನೇಹಿತರೆಂದ ಮೇಲ ನಾನು ಅವರಿಗಾಗಿ ಹಾತೊರೆಯುತ್ತೇನೆ. ಸದಾ ಅವರ ಬಗೆಗೆ ಚಿಂತಿಸುತ್ತೇನೆ, ಯಾರನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ. ಅಂದು, ಸುಷ್ಮಿತಾ ತನ್ನ ಸ್ನೇಹಿತರೊಡನೆ ಸೇರಿ, ನನ್ನನ್ನು ಮಾತನಾಡಿಸದೇ ಹೋದಾಗಲೂ ಅಷ್ಟೇ ನೊಂದಿದ್ದೇನೆ, ಕೊರಗಿದ್ದೇನೆ, ಅತ್ತಿದ್ದೇನೆ, ಮತ್ತೆ ಅವಳ ಬಳಿಗೆ ಹೋಗಿ ನನ್ನತನವನ್ನು ಮರೆತು ಬೇಡಿದ್ದೇನೆ. ಅದು ಒಂದು ನಿಷ್ಕಲ್ಮಶವಾದ ಸ್ನೇಹವನ್ನು ಕಳೆದುಕೊಳ್ಳಲಾರದೇ ಬೇಡಿದ್ದೇ ಹೊರತು ಅವಳನ್ನು ಮತ್ತಾವ ಉದ್ದೇಶದಿಂದಲೂ ಅಲ್ಲ. ಇವೆಲ್ಲವನ್ನು ಇಲ್ಲಿ ಬರೆಯುವ ಅವಶ್ಯಕತೆಯಿಲ್ಲವಾದರೂ, ಸುಮ್ಮನೆ ಇಲ್ಲಸಲ್ಲದ ಅಪವಾದ ಮಾಡುವ ಗುಣವೇಕೆ ಈ ಹುಡುಗಿಯರಿಗೆ ಬರುತ್ತದೆಂಬುದು ಅರಿವಾಗುವುದಿಲ್ಲ. ನಿಮಗೆ ತಿಳಿದಿದ್ದರೇ ತಿಳಿಸಿಕೊಡಿ. ನಾನು ದಿನ ಬೆಳ್ಳಿಗ್ಗೆಯಾದರೇ ಪೀಡಿಸುವ ಹುಡುಗಿಯಾದರೂ ಇದನ್ನು ನೆನಪಿಸಿಕೊಂಡರೇ ನನಗೆ ಖುಷಿಯಾಗುತ್ತದೆ, ಕೆಲಸಕ್ಕೆ ಬಾರದವು ಈ ರೀತಿ ನಮ್ಮನ್ನು, ನಮ್ಮ ಬಗೆಗೆ ಹೇಳಿ ಕುಡುಕನ ಜೊತೆಗೆ ಫ್ಲರ್ಟ್ ಎಂಬ ಹೊಸ ಪದವನ್ನು ಸೇರಿಸಬೇಕೇ?

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...