08 ಏಪ್ರಿಲ್ 2016

ಮಾಸಿದ ನೆನಪಿಂದ ಚಿಗುರಿದ ಭರವಸೆ!!!


ಪ್ರತಿ ಬಾರಿ ಬರೆಯುವಾಗಲೂ ಬಹಳ ದಿನಗಳ ನಂತರ ಎಂಬ ಪದ ಪ್ರವೇಶ ಪಡೆಯುತ್ತದೆ. ಇದು ತಿಳಿದು ಬರುತ್ತದೆಯೋ ಅಥವಾ ಒತ್ತಾಯವಾಗಿ ನಾನು ಸೇರಿಸುತ್ತೀನೋ ಗೊತ್ತಿಲ್ಲ, ಆದರೂ ಆ ಪದ ಬಳಕೆಗೆ ಒಗ್ಗಿ ಹೋಗಿದ್ದೇನೆ. ಈ ಬಾರಿ ಬಳಸುತ್ತಿರುವುದು, ಬಹಳ ವರ್ಷಗಳ ನಂತರ ಮೊದಲ ಬಾರಿಗೆ ನಾನು ಮಧ್ಯ ರಾತ್ರಿ ಮೂರು ಗಂಟೆಗೆ ಬರೆಯುತ್ತಿರುವುದು ಅದರಲ್ಲಿಯೂ ವಿಶೇಷತೆ ನಮ್ಮ ಸಂಪ್ರದಾಯಿಕ ಯುಗಾದಿ ಹಬ್ಬದ ದಿನ ಬರೆಯುತ್ತಿರುವುದು. ಮಧ್ಯ ರಾತ್ರಿ ಬರೆಯುವಂತಹ ವಿಶೇಷ ಬರವಣಿಗೆಯಾಗಲೀ ನೀವು ಓದಲೇ ಬೇಕೆಂಬ ಓದುವ ಸರಕಾಗಲೀ ಇದರಲಿಲ್ಲ. ನೇರವಾಗಿ ಹೇಳುವುದಾದರೆ ಬಹಳ ದಿನಗಳ ನಂತರ ನಿದ್ದೆ ಬಾರದೇ ಇರುವುದರಿಂದ ಬೇಗ ಎದ್ದಿದ್ದೇನೆ. ಕೆಲವು ದಿನಗಳು ಬೇಸಿಗೆಯ ದಗೆಗೆ ನಿದ್ದೆ ಬಾರದೆ ಇದ್ದರೂ ಮಗ್ಗಲು ಬದಲಾಯಿಸಿ, ಹೊರಲಾಡುತ್ತಿದ್ದೆ. ಒಂದೆರಡು ಬಾರಿ ಹೆಂಡತಿಯ ಬಾಯಿಯಲ್ಲಿ ಸುಮಧುರ ಬೈಗುಳಗಳು ಬರುತ್ತಿದ್ದವು. ರೀ ಸರಿಯಾಗಿ ಮಲಗೋಕೆ ಆಗಲ್ವಾ? ಯಾಕಿಷ್ಟು ಒದ್ದಾಡ್ತೀರಾ? ಈ ಸೆಕೆಗೆ ಮೊದಲೇ ನಿದ್ದೆ ಬರುವುದಿಲ್ಲ ನಿಮ್ಮದು ಬೇರೆ? ಇಂಥಹ ಮಾತುಗಳನ್ನು ಹಬ್ಬದ ದಿನವು ಕೇಳುವುದು, ಮನಸ್ಸಿಗೆ ಘಾಸಿ ಮಾಡಿಕೊಳ್ಳವುದಕ್ಕಿಂತ ಎದ್ದು ನಾಲ್ಕು ಸಾಲು ಗೀಚಿ, ಫೇಸ್‍ಬುಕ್ಕಿನಲ್ಲಿ ಅಪಡೇಟ್ ಮಾಡಿ, ಯಾರಾದರೂ ಲೈಕ್ ಮಾಡಿದರ? ಕಾಮೆಂಟ್ ಮಾಡಿದ್ದಾರಾ ನೋಡೊಣವೆನಿಸಿತು. 

ಯಾರು ಓದಿದರು ಬಿಟ್ಟರೂ ನಾನು ಬರೆಯುತ್ತೇನೆ ಮತ್ತು ಬರೆಯುತ್ತಲೇ ಇರುತ್ತೇನೆ. ನಾನು ಉತ್ತಮ ಬರಹಗಾರನೆಂಬ ಭ್ರಮೆಯಿಂದಲ್ಲ, ನನ್ನ ಕನ್ನಡ ನನ್ನೊಳಗೆ ಜೀವಂತವಾಗಿರಲೆಂದು ಮಾತ್ರ. ಪೀಠಿಕೆ ಜಾಸ್ತಿಯಾಯ್ತು ವಿಷಯಕ್ಕೆ ಬರೋಣ. ನಾನು ಹಿಂದೆ ಒಂದು ಬರವಣಿಗೆಯಲ್ಲಿ ಯುಗಾದಿಯ ಬಗ್ಗೆ ಬರೆದಿದ್ದೆ. ಈಗ ಅಲ್ಲಿ ಏನು ಬರೆದಿದ್ದೆ ಎಂಬುದರ ಬಗ್ಗೆ ಬರೆಯುವುದಿಲ್ಲ. ಆದರೆ ಇಂದಿನ ನನ್ನ ಮನಸ್ಥಿತಿಯ ಬಗ್ಗೆ ಬರೆಯುತ್ತಿದ್ದೇನೆ. ನನಗೀಗ, ಮೂವತ್ತ್ಮೂರು ತುಂಬುತ್ತಿದೆ, ಮೂವತ್ತಾನಾಲ್ಕಕ್ಕೆ ಕಾಲಿಡುತ್ತಿದ್ದೇನೆ. ಇಷ್ಟೂ ವರ್ಷದಲ್ಲಿ, ನಾನು ಇಷ್ಟಪಟ್ಟು ಆಚರಿಸುತ್ತಿರುವ ಏಕೈಕ ಯುಗಾದಿ ಹಬ್ಬವೆಂದರೆ ಈ ವರ್ಷ ಮಾತ್ರ. ಅತಿ ಕೆಟ್ಟ ಮತ್ತು ನನಗೆ ಬೇಸರ ತರಿಸಿದ ಹಬ್ಬ 2015ರ ಯುಗಾದಿ. ಒಂದು ವರ್ಷ ಮನುಷ್ಯನ ಜೀವನದಲ್ಲಿ ಅಥವಾ ಒಬ್ಬ ವ್ಯಕ್ತಿಯ ಬದುಕಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದೆಂಬುದಕ್ಕೆ ನಾನೇ ಜೀವಂತ ಉದಾಹರಣೆ. 

ನಾನು ನನ್ನ ಬಾಲ್ಯದ ಹಲವು ನೆನಪುಗಳನ್ನು ಈ ದೃಷ್ಟಿಕೋನದಿಂದ ನೋಡಲಿಚ್ಛಿಸುತ್ತಿದ್ದೇನೆ. ಇದು ಮೊದಲ ಪ್ರಯತ್ನ. ಹಳ್ಳಿಯಲ್ಲಿ ಜನಿಸಿದ ನನಗೆ ಯುಗಾದಿ ಸಾಮಾನ್ಯವಾಗಿ ದೊಡ್ಡ ಹಬ್ಬವೇ ಸರಿ. ಹಳ್ಳಿಯ ಜನರಿಗೆ ಬೇರೆ ಬೇರೆ ಊರುಗಳಿಗೆ ಬೇರೆ ರೀತಿಯಲ್ಲಿ ಆಚರಣೆಗಳಿರುತ್ತವೆ. ನಾನು ನನ್ನೂರು ಬಾನುಗೊಂದಿಯಲ್ಲಿ ಕಂಡಂತೆ, ಯುಗಾದಿಯ ದಿನ ಬೆಳ್ಳಿಗ್ಗೆ ಎದ್ದು ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ತಂದು, ಮನೆಗೆ ತೋರಣ ಕಟ್ಟಿ ನಂತರ ದನ ಕರುಗಳನ್ನು ತೊಳೆದು, ಹಂಬು/ಬಳ್ಳಿಯನ್ನು ಕಟ್ಟಿ, ಕಾವೇರಿ ನದಿಗೆ ಹೋಗಿ ಸ್ನಾನ ಮಾಡಿ, ನಮ್ಮೂರಲ್ಲಿ ಎರಡು ಕಡೆಯಲ್ಲಿ ಹೊಳೆಗೆ ಹೋಗಬಹುದಾದ್ದರಿಂದ, ಹೊಳೆಕಡ/ಬಟ್ಟೆ ಒಗೆಯುವ ಸೋಪಾನ ಕಟ್ಟೆ ಇರುವ ಕಡೆಗೆ ಹೋದವರು ಹೊಳೆ ಬಸಪ್ಪನಿಗೆ ಪೂಜೆ ಹಣ್ಣು ತುಪ್ಪ ಮಾಡಿಕೊಂಡು ನಗರದವರ ಭಾಷೆಯಲ್ಲಿ ರಸಾಯನ, ಅಥವಾ ಕಟ್ಟೆ ಕಡೆಗೆ ಹೋದವರು ಸ್ನಾನ ಮಾಡಿ ನಮ್ಮೂರ ದಾಸಯ್ಯನ ಕೈಯಿಂದ ಹಣೆಗೆ ಎರಡು ಕೆಂಪು ಒಂದು ಬಿಳಿ ಹಾಕಿಸಿಕೊಂಡು, ಮನೆಗೆ ಬರುವಾಗ ಹನೆರಡೋ ಒಂದೋ ಗಂಟೆಯಾಗಿರುತ್ತಿತ್ತು. ಆ ಸಮಯಕ್ಕೆ ಮನೆಯಲ್ಲಿ ಹುಳಿ ಅನ್ನ ಅಥವಾ ಪುಳಿಯೋಗರೆ ನಿಮ್ಮ ಭಾಷೆಯಲ್ಲಿ, ಅದನ್ನು ತಿಂದು ಸ್ವಲ್ಪ ಹೊತ್ತು ಕುಳಿತು ಗಟ್ಟೆ ಮನೆಯೋ, ಹರಳು ಮನೆಯೋ ಆಡಿ, ಸಂಜೆ ಎತ್ತುಗಳಿಂದ ಆರು ಕಟ್ಟಿ ನಾಲ್ಕು ಸುತ್ತು ನೇಗಿಲು ಸುತ್ತಿ ಬರುವುದು ಹಬ್ಬದ ಮುಕ್ತಾಯ. ಮಾರನೆಯ ಬೆಳಿಗ್ಗೆ ಊರಲ್ಲಿ ಅಥವಾ ಹೊರಗಡೆಯಿಂದ ಮಾಂಸ ತಂದು ತಿಂದರೆ ಅಲ್ಲಿಗೆ ಯುಗಾದಿಯ ನೆಲಸಮ. 

ಈ ರೀತಿಯ ಆಚರಣೆಯಲ್ಲಿ ನನಗೆ ಅಂಥಹ ವಿಶೇಷವೇನೂ ಕಾಣಿಸುತ್ತಿರಲಿಲ್ಲ. ನಮ್ಮ ಹೊಸ ವರ್ಷ ಅದೂ ಇದೂ ಇವೆಲ್ಲವೂ ನನಗೆ ಆಗಲಿ ನಮ್ಮ ಊರಿನ ಅನೇಕರಿಗೆ ಆಗಲಿ ಅಂಥಹ ಕಾಳಜಿ ಇರಲಿಲ್ಲ. ನನಗೆ ಈ ಹಬ್ಬಗಳು ಬಂದರೆ ಖುಷಿಗಿಂತ ಬೇಸರವೇ ಹೆಚ್ಚಿರುತ್ತಿತ್ತು. ನಾನು ಮೊದಲೇ ಸೋಮಾರಿ, ಅದರ ಜೊತಗೆ ಅಪ್ಪನ ಬೈಗುಳದ ಕೂಸು. ಮುಂಜಾನೆ ಬೇಗ ಏಳಬೇಕು. ನಮ್ಮೂರು ಹೇಳಿ ಕೊಳ್ಳುವುದಕ್ಕೆ ಹಳ್ಳಿ ಅಷ್ಟೇ, ಒಂದು ಮಾವಿನ ಮರಕ್ಕೆ , ಮಾವಿನ ಸೊಪ್ಪಿಗೆ ಅಲೆದಾಡಬೇಕಿತ್ತು. ತೋಪಿಗೆ ಹೋದರೆ, ಆ ಮರಗಳು ಭೂಮಿಯಿಂದ ಇಪ್ಪತ್ತು ಮೂವತ್ತು ಅಡಿ ಮೇಲಕ್ಕೆ ಇರುತ್ತಿದ್ದವು. ಆ ಮರ ಹತ್ತುವುದಕ್ಕೆ ನನಗೆ ಬರುವುದಿಲ್ಲ, ಅವರನ್ನೋ ಇವರನ್ನೋ ಕಾಡಿ ಬೇಡಿ ಸ್ವಲ್ಪ ಸೊಪ್ಪು ತಂದರೆ ನಮ್ಮಪ್ಪನ ಕೊಂಕು, ಒಳ್ಳೆಯ ಸೊಪ್ಪು ತಂದಿಲ್ಲವೆಂದು. ನಮ್ಮ ಮನೆಯ ಹಿಂದಿದ್ದ ಮಾವಿನ ಮರವನ್ನು ಕಳೆದ ವರ್ಷ ಕಡಿದು ಹಾಕಿದರು, ಆಗ ನನಗೆ ನಾನು ಬಾಲ್ಯದಲ್ಲಿ ಕಷ್ಟ ಪಡುತ್ತಿದ್ದ ನೆನಪು ಬಂತು. ಇನ್ನು ಬೇವಿನ ಸೊಪ್ಪು ಈಗ ನಮ್ಮ ಮನೆಯ ಪಕ್ಕದಲ್ಲಿ ಎರಡು ಮೂರು ಮರಗಳಿವೆ, ಆಗ ಯಾರದೋ ಮನೆಯ ಮುಂದೆ ಹೋಗಬೇಕಿತ್ತು, ಹಳ್ಳಿ ಜನ ಬಹಳ ಸಣ್ಣ ಮನಸ್ಸಿನವರು, ಅವರು ದೊಡ್ಡದನ್ನು ಕೊಡುತ್ತಾರೆ ಚಿಕ್ಕವುಗಳೆಂದರೆ ಸಹಿಸುವುದಿಲ್ಲ. ಪ್ರಾಣ ಕೊಡುತ್ತಾರೆ, ಹೊಟ್ಟೆ ಬಿರಿಯುವಷ್ಟು ಊಟ ಹಾಕುತ್ತಾರೆ ಆದರೆ ಹೂವುಗಳು, ಹಣ್ಣುಗಳು ಇಂಥವೆಂದರೆ ಮೈಮೇಲೆ ಬರುತ್ತಾರೆ. ಈ ಕಷ್ಟಗಳು ಅಥವಾ ನನ್ನ ಸೋಮಾರಿತನ ಈ ಹಬ್ಬಗಳು ಯಾಕೆ ಬರ್ತಾವೆ ಎನಿಸುತ್ತಿದ್ದವು. 

ಅದರ ಜೊತಗೆ ನಮ್ಮನೆಯಲ್ಲಿ ದನಕರುಗಳಿರಲಿಲ್ಲ, ಆದ್ದರಿಂದ ನಾನು ಸೊಪ್ಪನ್ನು ತಂದ ಮೇಲೆ ಸ್ನಾನ ಮಾಡಬೇಕಿತ್ತು. ಊರಿನಲ್ಲಿ ಬಹುತೇಕೆ ಎಲ್ಲರ ಮನೆಯಲ್ಲೂ ದನಕರು ಇದ್ದಿದ್ದರಿಂದ ಅವರು ಹೊಳೆಗೆ ಸ್ನಾನಕ್ಕೆ ಹೋಗುವುದು ತಡವಾಗುತ್ತಿತ್ತು. ನಾನು ಕಾಯ್ದು ಕಾಯ್ದು ಮನೆಯಲ್ಲಿಯೇ ಸ್ನಾನ ಮಾಡುತ್ತಿದ್ದೆ. ನಾನು ತಾಳ್ಮೆಗೇಡಿ, ನನಗೆ ಸಹನೆಯಿಲ್ಲ, ಆತುರ. ನಾನು ಅಂದುಕೊಂಡದ್ದು ಆಗಲೇ ಆಗಬೇಕು. ಕೆಲವೊಮ್ಮೆ ಅಮ್ಮ ನನಗೆ ಬೈಯುತ್ತಿದ್ದರು, ಆಗಲೇ ಹುಟ್ಟಿ ಆಗಲೇ ಬೆಳಕಾಗಬೇಕು ಇವನಿಗೆ ಎಂದು. ಸ್ನಾನ ಮಾಡಿದ ಕೆಲವೇ ಕ್ಷಣಕ್ಕೆ ಪೂಜೆ ಬೇವು ಬೆಲ್ಲ ಅದರ ಹಿಂದೆಯೇ ಹುಳಿ ಅನ್ನ, ಕೊಸಂಬರಿ, ಅದಾದ ಮೇಲೆ ಒಬ್ಬಟ್ಟು. ನನ್ನ ಕವರ್iವೆಂದರೆ ನಾನು ಸಹಿಯಾಗಿರುವುದನ್ನು ಇಷ್ಟಪಡುವುದಿಲ್ಲ, ಪುಳಿಯೊಗರೆ ಇಷ್ಟವಿಲ್ಲ ಇನ್ಯಾವ ಹಬ್ಬವೆಂದು ಆಚರಿಸುವುದು? ಬಟ್ಟೆಯ ಬಗ್ಗೆ ಹೇಳುವುದಾದರೆ ನಮ್ಮ ಅಪ್ಪನೇ ನನಗೆ ಆಯ್ಕೆ ಮಾಡಿ ತರುತ್ತಿದ್ದದ್ದು, ತರುವುದು ಎನ್ನುವುದಕ್ಕಿಂತ ಬಟ್ಟೆ ತೆಗೆದು ಹೊಲಿಸುತ್ತಿದ್ದದ್ದು. ಅವರ ಟೈಲರ್‍ಗಳು ತಲೆ ಹರಟೆಗಳು ಇಲ್ಲವೆಂದರೆ ಮುದುಕರು ತುಂಬಾ ಉದ್ದ ಹೊಲೆಯುವುದು, ಸಾದಾ ಗುಂಡಿಗಳನ್ನು ಹಾಕುವುದು. ಅಪ್ಪ ಆಯ್ಕೆ ಮಾಡುತ್ತಿದ್ದ ಬಣ್ಣವೂ ಅಷ್ಟೇ ಎಲ್ಲವು ಮಾಸಲು ಬಣ್ಣ. ನನ್ನ ಸ್ನೇಹಿತರೆಲ್ಲರು ಮಿಂಚುವ ಬಣ್ಣಗಳು, ಕೆಲವರು ಟಿ-ಷರ್ಟ್‍ಗಳು. ನಾನು ಆ ಕನಸನ್ನು ಕಾಣವಂತೆಯೇ ಇರಲಿಲ್ಲ ಬಿಡಿ. 

ದಿನ ಬೆಳೆದಂತೆ ವರ್ಷಗಳು ಕಳೆದಂತೆ, ಹೈಸ್ಕೂಲಿನಲ್ಲಿ ಸ್ವಲ್ಪ ಚಾಯ್ಸ್ ಹತ್ತಿರ ಬಟ್ಟೆ ಹೊಲೆಸುವುದಕ್ಕೆ ಹಾಕುತ್ತಿದ್ದೆ. ಆ ಪುಣ್ಯಾತ್ಮನೋ ತಡವೆಂದರೆ ತಡ, ಅವನ ಬಳಿಗೆ ಹೋಗಿ ಕೇಳವುದಕ್ಕೂ ಭಯ. ಕೊಣನೂರಿಗೆ ಇದ್ದ ಏಕೈಕ ಫೇಮಸ್ ಟೈಲರ್‍ ಅವನು. ರೇಟು ಜಾಸ್ತಿ ಅಂತ ಅಪ್ಪ, ಆದರೂ ಅಲ್ಲಿಯೇ ಕೊಡಬೇಕೆಂದು ಹಟ ಮಾಡಿ ಕೊಡುತ್ತಿದ್ದೆ. ನಾವು ಸ್ವಲ್ಪ ಲೈನ್ ಹಾಕೋ ವಯಸ್ಸಗೆ ಬಂದೆವು. ಆದರು ಹಬ್ಬ ಆಚರಣೆಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ. ಸಮಾಧಾನಕರವೆಂದರೆ, ಕಟ್ಟೆಯ ಹತ್ತಿರಕ್ಕೆ ಸ್ನಾನಕ್ಕೆ ಹೋಗುತ್ತಿದ್ದೆ, ಅಲ್ಲಿಂದ ಬಂದು ಹೊಸ ಬಟ್ಟೆ ಹಾಕಿಕೊಂಡು ಹೊಳೆ ಬಸಪ್ಪನಿಗೆ ಹಣ್ಣು ತುಪ್ಪ ಮಾಡಿಸಿಕೊಂಡು ಬರುತ್ತಿದ್ದೆ, ಬೇಸಿಗೆಯ ಕಾಲದಲ್ಲಿ ಹಬ್ಬ ಬರುತ್ತಿದ್ದರಿಂದ ಕೆಲವೊಮ್ಮೆ ನಮ್ಮ ಅಜ್ಜಿಯ ಮನೆಗೆ ಹೋಗಿರುತ್ತಿದ್ದೆ ಅಲ್ಲಿದು ಮಜವೋ ಮಜ. ನಾನು ಏನು ಹೇಳುವುದಕ್ಕೆ ಹೋದೆ ಮತ್ತು ನೀವು ಏನನ್ನು ಓದುತ್ತಿದ್ದೀರಾ ಎಂಬ ಗೊಂದಲ ಬೇಡ. ನೀವು ಓದಿತ್ತಿರುವುದು ಸರಿಯಾಗಿದೆ ಮುಂದುವರೆಸಿ. 

ಅಲ್ಲಿಂದ ನಂತರ ಪಿಯುಸಿ ಜೀವನದಲ್ಲಿ ಮೊದ¯ ವರ್ಷ ನೆಮ್ಮದಿ ಎನಿಸಿದರೂ, ಎರಡನೆಯ ವರ್ಷಕ್ಕೆ ಯಾಕೋ ಪರೀಕ್ಷೆಯ ಭಯ, ಅಷ್ಟೊರೊಳಗೆ ದಾರಿ ತಪ್ಪಿದ ಮನಸ್ಸು ಯಾವುದನ್ನು ಆಚರಿಸಲು ಬಿಡಲಿಲ್ಲ. ಪಿಯುಸಿ ಹೆಚ್ಚು ತಿಳಿಯುವ ಸಲುವಾಗಿ ಮತ್ತೊಮ್ಮೆ ಬರೆಯಲು ಯತ್ನಿಸಿದ್ದರಿಂದ ಹಬ್ಬ ಆಚರಣೆಯ ಆಸಕ್ತಿ ಸಂಪೂರ್ಣ ನೆಲಕಚ್ಚಿತು. ಅದಾದ ನಂತರ ಮೈಸೂರು ಮಹರಾಜ ಹಾಸ್ಟೆಲ್ ಸೇರಿದ್ದರಿಂದ ಮಾಚ್ ಅಥವ ಏಪ್ರಿಲ್ ಯಾವಾಗಲೂ ಪರೀಕ್ಷೆಯ ಸಮಯ, ಮೊದಲೆ ಸೋತು ಕಂಗಾಲಾಗಿದ್ದ ನನಗೆ ಓದುವುದನ್ನು ಬಿಟ್ಟರೆ ಬೇರಾವ ಹಬ್ಬದ ಜಗತ್ತು ಕಾಣಲಿಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಬುದ್ದಿಜೀವಿ ಸಂಘದ ಸಲುವಾಗಿ ಹಬ್ಬ ಆಚರಣೆ ಸ್ವಲ್ಪ ದೂರವೇ ಉಳಿದೆ. ಓದು ಮುಗಿದ ನಂತರ ಐಸೆಕ್, ಆನಂತರ ಒಂದು ವರ್ಷ ಹೈದರಾಬಾದ್, ಮತ್ತೆ ಕೆಲವು ವರ್ಷಗಳು ಬೆಂಗಳೂರು, ಪಿಎಚ್‍ಡಿ ಮದುವೆ ಅದು ಇದು ಅಂತ ಆಗಿ ಯಾವ ವರ್ಷವೂ ಆಚರಣೆಗೆ ಒತ್ತು ನೀಡಲಿಲ್ಲ.

ಈ ವರ್ಷ ಇದ್ದಕ್ಕಿದ್ದ ಹಾಗೆ ಯುಗಾದಿಯ ಬಗ್ಗೆ ವಿಶೇಷ ಕಾಳಜಿ ಬಂತು. ಯಾವುದೇ ಹೊಸ ಧಿರಿಸ್ಸೇನು ತೆಗೆದುಕೊಂಡಿಲ್ಲ. ಆದರೂ, ನಿನ್ನೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಕೆ.ಆರ್. ಮಾರ್ಕೆಟ್ ಗೆ ಹೋಗಿ ಹೂವು, ಮಾವಿನ ಸೊಪ್ಪು, ಬೇವಿನ ಸೊಪ್ಪು ತಂದೆ. ನನಗೆ ಮುಂಜಾನೆ ಮಾರ್ಕೆಟ್ ಹೋಗುವುದೆಂದರೆ ಬಹಳ ಸಂತಸದ ವಿಷಯ. ನನ್ನ ಎಂಎಸ್ಸಿ ಸಮಯದಲ್ಲಿಯೂ ಅಷ್ಟೆ, ಕಾಲೇಜಿನ ಯಾವುದೇ ಸಮಾರಂಭವೆಂದರು ಮಾರ್ಕೆಟ್ ಹೋಗುತ್ತಿದ್ದೆ. ಅದರಲ್ಲಿಯೂ ಬೆಳಿಗ್ಗೆ ನಾಲ್ಕು ಅಥವಾ ಐದು ಗಂಟೆಗೆ ಹಳ್ಳಿಗಳಿಂದ ಬರುವ ಜನ, ತಾಜಾ ತರಕಾರಿ, ಬಣ್ಣ ಬಣ್ಣದ ಹೂವುಗಳು ಕಣ್ಣೆರೆಡು ಸಾಲದು. ಮೊದಲ ಬಾರಿಗೆ ಮನಸ್ಪೂರ್ತಿಯಾಗಿ ನನ್ನ ಹೆಂಡತಿಗೆ ಸಹಾಯ ಮಾಡಿದೆ. ಮನೆಗೆಲ್ಲ ತೋರಣ ಕಟ್ಟಿ, ಮನೆ ಮುಂದಕ್ಕೆ ಅಲ್ಲಿಗೆ ಇಲ್ಲಿಗೆ ಎಂದೆಲ್ಲಾ ಹಾಕಿದೆವು. ಈ ಬದಲಾವಣೆಗೆ ಕಾರಣವೇನು? ನಾನೇಕೆ ಬದಲಾದೆ? ಬದಲಾವಣೆ ನಿರಂತರ ಆದರೂ ಈ ಪರಿವರ್ತನೆ ಹೇಗೆ ಸಾಧ್ಯವಾಯಿತು ಎಂದು ಹುಡುಕುವಾಗ ಉತ್ತರವೊಂದೆ ಲ್ಯಾಂಡ್‍ಮಾರ್ಕ್.

ನಾನು ನಿನ್ನೆ ಲ್ಯಾಂಡ್‍ಮಾರ್ಕ್ ಸ್ನೇಹಿತೆ ಉಮಾ ಅವರ ವಾಟ್ಸಪ್ ಸ್ಟೇಟಸ್ ನೋಡುತ್ತಿದ್ದೆ. ಆಗ ನನಗೆ ಹೊಳೆದಿದ್ದು ಅದೆಂತಹ ಮಹತ್ತರ ಬದಲಾವಣೆಯ ಪರ್ವ ಕಂಡಿದೆ ನನ್ನ ಬದುಕು ಎಂದು. ನನ್ನ ಫೇಸ್‍ಬುಕ್ ನೋಡುತ್ತಿರುವ ನಿಮ್ಮೆಲ್ಲರಿಗೂ ಅರಿವಾಗಿರುತ್ತದೆ. ಅದರಂತೆಯೇ ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗು ತಿಳಿದಿದೆ. ನಾನು ಬಯಸಿದ ಬದುಕನ್ನು ಕಟ್ಟುವತ್ತ ಹೆಜ್ಜೆ ಹಾಕಲು ಕಾರಣ ನಾನು ಮಾಡಿದ ಲ್ಯಾಂಡ್‍ಮಾರ್ಕ್ ಎಜುಕೇಷನ್. 2015ರ ಯುಗಾದಿಯ ಕರಾಳ ನೆನಪು ನನ್ನನ್ನು ಬಹುತೇಕ ನಿಷ್ಕ್ರೀಯಗೊಳಿಸಿತ್ತು. ಅದೆಷ್ಟರ ಮಟ್ಟಿಗೆ ನಾನು ನೊಂದಿದ್ದೆ ಎಂದರೇ ಯಾಕೆ ಬೇಕು ಈ ಬದುಕು ಎನಿಸುವಷ್ಟು ಜಿಗುಪ್ಸೆ ಹೊಂದಿದ್ದೆ. ಈ ಭೂಮಿ ಕೇವಲ ಕೆಟ್ಟವರಿಂದ ತುಂಬಿದೆ ಎಂಬ ಭಾವನೆ ಬರುವಂತೆ ನಿಮ್ಮ ಸುತ್ತ ಮುತ್ತಲಿನವರು ನಡೆದುಕೊಳ್ಳುತ್ತಾರ, ಅವರ ನಡುವಳಿಕೆಗಳು ನಮ್ಮನ್ನು ಎಂದೂ ಬಾರದ ನಕರಾತ್ಮಕ ಜೀವನಕ್ಕೆ ದೂಡುತ್ತವೆ. ಉದಾಹರಣೆಗೆ, ರಾಜಕಾರಣಿಗಳು ಮೂರನೆ ದರ್ಜೆಯ ನಡುವಳಿಕೆ, ನಮಗೆ ಅವರನ್ನು ಕಂಡರೆ ಅಸಹ್ಯವೆನಿಸುವಂತೆ ಮಾಡಿ ಜೀವನ ಪರ್ಯಂತ ಅವರಿಂದ ದೂರ ಉಳಿಯಲು ಯತ್ನಿಸುತ್ತೇವೆ. ಕೆಲವರಿಗೆ ಸಹಾಯ ಮಾಡಿರುತ್ತೇವೆ ಅವರು ಬೆನ್ನಿಗೆ ಚೂರಿ ಹಾಕಿದ್ದು, ಹಣ ತೆಗೆದುಕೊಂಡು ಮೊಸ ಮಾಡಿದ್ದು ಬೇರಾವ ಮನುಷ್ಯನನ್ನು ನಂಬದ ಹಾಗೆ ಮಾಡುತ್ತವೆ. 

ನಾನು ನನ್ನೂರು ಬಾನುಗೊಂದಿಯ ಕಾರ್ಯಕ್ರಮ ಮಾಡುವಾಗಲು ಅಷ್ಟೆ, ಕೆಲವರ ಮೂರನೆಯ ದರ್ಜೆಯ ನಡುವಳಿಕೆ ಸಣ್ಣತನ ಅದೆಂತಹ ಘಾಸಿಕೊಳಿಸಿತೆಂದರೆ ಥೂ ಈ ನನ್ ಮಗನ್ ಜನಕ್ಕೆ ಏನೂ ಸಹಾಯ ಮಾಡಬಾರದೆನಿಸುವಷ್ಟು. ಕೆಲವು ನೀಚರಿಂದ ನಾವು ಒಳ್ಳೆಯದನ್ನು ಮಾಡಬಾರದೆಂಬ ತೀರ್ಮಾನಕ್ಕೆ ಬಂದು ನಮ್ಮ ಬದುಕನ್ನು ಚಿಕ್ಕದಾಗಿಸಿಕೊಳ್ಳುತ್ತೇವೆ. ನನ್ನ ಬದುಕು ಅದರತ್ತ ಸಾಗುತ್ತಿತ್ತು. ಯಾರೋ ಹಣ ಪಡೆದವರು ಹಿಂದಿರುಗಿಸಿಲ್ಲ, ಯಾರೋ ನಾಲ್ಕು ಜನ ಮನ ಬಂದಂತೆ ನನ್ನ ಬಗ್ಗೆ ಮಾತನಾಡಿದ್ದು, ಉಂಡ ಮನೆಗೆ ಎರಡು ಬಗೆದದ್ದು, ಯಾರೋ ಮೂರು ಜನ ಅಯೋಗ್ಯರ ನಡುವಳಿಕೆ ನನಗೆ ಯಾರ ಹಂಗು ಬೇಡ, ನನ್ನ ಮನೆ ಬಾಗಿಲಿಗೆ ಯಾರೂ ಬರುವುದು ಬೇಡವೆನಿಸಿಬಿಟ್ಟಿತ್ತು. 

ಆದರೇ, ಈಗ ಹಾಗೆನಿಸುತ್ತಿಲ್ಲ, ಬಾನುಗೊಂದಿ ಶಾಲೆಯ ಕಾರ್ಯಕ್ರಮವೇ ಉದಾಹರಣೆಯಾದರೂ, ಅಲ್ಲಿ ಮೂರು ಮತ್ತೊಂದು ಜನರಿಂದ ಕಾರ್ಯಕ್ರಮದ ಗುಣಮಟ್ಟ ಹಾಳು ಮಾಡಲು ಯತ್ನಿಸಿರಬಹುದು. ಆದರೆ, ಅದೇ ಸಮಯದಲ್ಲಿ ನನಗೆ ಸಹಾಯ ಮಾಡಿದ ಹದಿನೈದು ಯುವಕರ ಅದ್ಬುತ ಶಕ್ತಿ ಮನಸ್ಸಲ್ಲಿ ಉಳಿದಿದೆ. ಅದಮ್ಯರೆನಿಸಿದ ಚನ್ನೇಗೌಡರ ಸಾಂಗತ್ಯ ದೊರಕಿದೆ. ನನ್ನೊಳಗಿದ್ದ ನನಗೆ ತಿಳಿಯದ ಶಕ್ತಿಯೊಂದು ಹೊರಬಂದಿದೆ. ಇವೆಲ್ಲವೂ ಸಾಧ್ಯವಾದದ್ದು ಲ್ಯಾಂಡ್‍ಮಾರ್ಕ್‍ಯಿಂದ ಮಾತ್ರ. ಈ ವರ್ಷ ಮನ ಮೆಚ್ಚಿ ಯುಗಾದಿಯನ್ನು ಸ್ವಾಗತಿಸುತ್ತಿರುವ ಕಾರಣವೂ ನನ್ನ ಲ್ಯಾಂಡ್‍ಮಾರ್ಕ್ ಪಯಣದಿಂದಲೆ. ಏಪ್ರಿಲ್ ಹದಿನೈದರಿಂದ ಲ್ಯಾಂಡ್‍ಮಾರ್ಕಿನ ಮತ್ತೊಂದು ಕೋರ್ಸಿಗೆ ಸೇರುತಿದ್ದೇನೆ. ನನ್ನ ಬದುಕಿನ ಜೊತೆಗೆ ನನ್ನ ಸುತ್ತ ಮುತ್ತಲಿರುವ ನಿಮ್ಮೆಲ್ಲರ ಬದುಕಿನ ಬದಲಾವಣೆಯ ಪರ್ವವನ್ನು ಕಾಣು ದಿಕ್ಕಿಗೆ ಮುಖ ಮಾಡಿದ್ದೇನೆ. 

ಬೇವಿನ ಕಹಿಯನ್ನು ಅಳಿಸಿ, ಬೆಲ್ಲದ ನೆನಪುಗಳು ಮಾತ್ರ ಉಳಿಯಲಿ ಮನದಲಿ. ಬದುಕಿ ಹೋಗುವ ಮೂರು ದಿನದಲಿ, ಸಿಹಿಯನ್ನು ಹಂಚೋಣ, ಪ್ರೀತಿಯ ಪಸರುತ್ತ ಬದುಕನ್ನು ಹಸನಾಗಿಸೋನ. ನಕರಾತ್ಮಕೆ ಬದುಕನ್ನು ಸರಿಸೋನ, ಒಳ್ಳೆಯದನ್ನೆ ಆಲೋಚಿಸೋನ, ಚಿಂತಿಸೋನ, ಸೃಷ್ಟಿಸೋನ. ಭೂಮಿ ಹಸಿರಾಗುವುದು ಮಳೆ ನೀರಿಂದಲ್ಲ, ನೀರುಣಿಸುವ ಕೈಗಳಿಂದ, ಮನ ಮುಟ್ಟುವ ಪ್ರೀತಿಯಿಂದ. ದ್ವೇಷಿಸೋನ ದ್ವೇಷವ, ಪ್ರೀತಿಸೋನ ಸರ್ವವ.
¸ÀªÀðjUÀÆ AiÀÄÄUÁ¢AiÀÄ ±ÀĨsÁµÀAiÀÄUÀ¼ÀÄ, ¤ÃªÀÅ §AiÀĹzÉÝ®èªÀÇ ¤ªÀÄUÉ ¹UÀ°

03 ಏಪ್ರಿಲ್ 2016

ಆಟಿಸಂ ಎಂಬ ಹೊಸ ಲೋಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು!!!


ನಾನು ನನ್ನ ಲ್ಯಾಂಡ್‍ಮಾರ್ಕ್ ಎಸ್.ಇ.ಎಲ್.ಪಿ. ಸಮಯದಲ್ಲಿ ನನ್ನ ಕಿವಿಗೆ ಬಿದ್ದ ಪದ ಆಟಿಸಂ, ಈ ಪದವನ್ನು ಮೊದಲು ಕೇಳಿರಲಿಲ್ಲ. ಇದ್ಯಾವ ಈ ಖಾಯಿಲೆಯೆಂಬ ಕುತೂಹಲವಿತ್ತು. ಡಾ. ಸುಧಾ ಎಂಬ ಕೋಚ್ ಒಬ್ಬರು ಸದಾ ಅವರ ಮಗನ ಬಗ್ಗೆ ಹೇಳುವಾಗ ನನಗೆ ಕುತೂಹಲ ಮೂಡಿತ್ತು. ಅದಾದ ಮೇಲೆ ಸ್ವಲ್ಪ ಗೂಗಲ್ ಮಾಡಿ, ನನ್ನ ಸ್ನೇಹಿತರ ಬಳಿಯಲ್ಲಿ ಕೇಳಿದೆ. ವಿಷಯ ಸ್ವಲ್ಪ ಗಂಬೀರವಾಗಿದೆ ಎನಿಸಿತು. ಅದರ ಬಗ್ಗೆ ಒಂದು ಲೇಖನ ಬರೆಯಬೇಕೆಂದಿದ್ದರು ಅದು ಸಾಧ್ಯವಾಗಲಿಲ್ಲ. ನನ್ನ ಬಳಿಯಲ್ಲಿ ಅಷ್ಟು ಸರಕು ಇರಲಿಲ್ಲ. ಆದರು ಅವರು ಕೊಟ್ಟಿರುವ ಒಂದು ಇಂಗ್ಲೀಷ್ ಬರವಣಿಗೆಯನ್ನು ಕನ್ನಡಕ್ಕೆ ತುರ್ಜುಮೆ ಮಾಡಿದೆ. ಮಾಡುವ ಸಮಯದಲ್ಲಿ ಅಲ್ಪ ಸ್ವಲ್ಪ ಗೊತ್ತಾಯಿತು. ನಿನ್ನೆ ಎಂದರೇ, 2ನೇ ಏಪ್ರಿಲ್ 2016ರಂದು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಹೋಗಿದ್ದೆ. ಸ್ವಲೀನತೆ ಕುರಿತು ಜಾಗೃತಿ ಕಾರ್ಯಕ್ರಮವಿತ್ತು. 

ನಾನು ಅಲ್ಲಿಗೆ ತಲುಪಿದಾಗ 3.15 ಆಗಿತ್ತು ತಡವಾಯಿತಲ್ಲವೆಂದು ಓಡಿದೆ. ಕಾರ್ಯಕ್ರಮ ಇನ್ನೂ ಶುರುವಾಗಿರಲಿಲ್ಲ. ಹೋದವನು ಡಾ. ಸುಧಾ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಸ್ವಾಗತಿಸಿ, ಸ್ವಲೀನತೆಯಿರುವ ಅವರ ಮಗ ಕವಿನ್ ಅನ್ನು ಪರಿಚಯಿಸಿದರು. ಆ ಮಗುವು ನನ್ನ ಕಡೆಗೂ ಗಮನ ನೀಡದೇ ಹರೀಶ್ ಎಂದು ತನ್ನ ಕೆಲಸದಲ್ಲಿ ತೊಡಗಿತು. ಸಾಮಾಜಿಕತೆಯ ಒಳಗೆ ಮುಳುಗಿರುವ ನಮಗೆ ಇವೆಲ್ಲವು ಇರಿಸು ಮುರಿಸುಂಟಾಗುವಂತವು. ನಮ್ಮ ಮನೆಗಳಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಸರಿಯಾಗಿ ಮಾತನಾಡಿಸಿಲ್ಲವೆಂದರೆ ಯಾವ ಮಟ್ಟಗಿನ ಜಗಳವಾಗಬಹುದು ಅಲ್ಲವೇ? ಅಂತಹದ್ದರಲ್ಲಿ ಆ ಮಗು ಮನೆಗೆ ಯಾರು ಬಂದರೂ ಹೋದರೂ ನನಗೆ ಸಂಬಂಧವೇ ಇಲ್ಲವೆನ್ನುವಂತಿದ್ದರೆ?ಮನಸ್ಸಿಗೆ ಅದೆಷ್ಟು ನೋವಾಗುವುದಲ್ಲವೇ? ನಾನು ಹಾಗೆಯೇ ಸ್ವಲ್ಪ ಆಚೆ ಈಚೆ ಸುತ್ತಾಡಿದೆ. ಮಕ್ಕಳು ನೋಡುವುದಕ್ಕೆ ಸಾಮಾನ್ಯರಂತೆಯೇ ಇದ್ದಾರೆ, ಆದರೆ ಅಲ್ಪ ಸ್ವಲ್ಪ ಬೆಳವಣಿಗೆಯ ಕುಂಠಿತ, ಬೌತಿಕವಾಗಿ ಅಲ್ಲವೇ ಅಲ್ಲ, ಮಾನಸಿಕವಾಗಿ ಮಾತ್ರ. 

ಮೊದಲ ಬಾರಿಗೆ ನೋಡಿದರೆ ನಮಗೇನು ಗೊತ್ತಾಗುವುದಿಲ್ಲ. ನಮ್ಮಂತೆಯೇ ಸಾಮಾನ್ಯರಾಗಿಯೇ ಕಾಣುತ್ತಾರೆ. ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ ನಾನು ಒಳಗೆ ಹೋಗಿ ಕುಳಿತಿದ್ದೆ. ಬರುತ್ತಿದ್ದ ಮಕ್ಕಳನ್ನು ಗಮನಿಸುತ್ತಿರುವಾಗ, ಅವರ ತುಂಟತನ, ಮುಗ್ದತೆ, ಪೋಷಕರ ತಾಳ್ಮೆ ಹೆಮೆ ಎನಿಸಿತು. ತಾಯಂದಿರು ಹೇಳಿದ ಸ್ಥಳದಲ್ಲಿ ಮಕ್ಕಳು ಕೂರುವುದಕ್ಕೆ ಇಷ್ಟಪಡುತ್ತಿಲ್ಲ, ವೇದಿಕೆಯ ಮೇಲೆ ಓಡುತ್ತಾರೆ, ಜೋರಾಗಿ ಕೂಗುತ್ತಾರೆ, ಅಳುತ್ತಾರೆ, ನಗುತ್ತಾರೆ ಅವರದ್ದೇ ಪ್ರಪಂಚದಲ್ಲಿ ಅವರಿದ್ದಾರೆ. ಆ ಕ್ಷಣಕ್ಕೆ ನೆನಪಾಗಿದ್ದು ಮನಸಾರೆ ಸಿನೆಮಾದ ಹಾಡು “ನಾನು ಮನಸಾರೆ ನಗುವೇ, ನಗುವೇ”... ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ಸಣ್ಣ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಆ ವಿಡಿಯೋ ನನ್ನನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಿತೆಂದರೆ ತಪ್ಪಿಲ್ಲ. ನನಗೆ ಆಟಿಸಂ ಬಗ್ಗೆ, ಅದರಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮೂಡಿತೆಂದರು ತಪ್ಪಿಲ್ಲ. ನಾನು ಕೆಲವೊಮ್ಮೆ, ಸ್ವಲೀನತೆಯಿರುವ ಜನರನ್ನು ಹಿಯಾಳಿಸಿದ್ದೆನಾ? ಹಾಗೇನಾದರು ಮಾಡಿದ್ದರೆ ನಾನೆಂಥಹ ಘೋರ ಅಪರಾಧ ಮಾಡಿದ್ದೇನೆ ಎನಿಸಿತು. ಸ್ವಲೀನತೆಯ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ, ಏಕೆಂದರೆ ನನ್ನ ಹಳೆಯ ಬರಹದಲ್ಲಿ ಅದರ ವಿವರಣೆಯನ್ನು ನೀಡಿದ್ದೆ. ಕಾರ್ಯಕ್ರಮದಲ್ಲಿ ಡ್ಯಾನ್ಸ್ ಇತ್ತು, ಅದೆಂತಹ ಅದ್ಬುತಾ ಪ್ರತಿಭೆಗಳು, ಹಾಡು ಹೇಳಿದರು. ಡಾ. ಸುಧಾ ಅವರ ಮಗ ಇಂಗ್ಲೀಷ್‍ನ ಒಂದು ಸಣ್ಣ ಕಥೆಯನ್ನು ವ್ಯಾಕನಿಸಿದ, ಅದ್ಬುತವೆನಿಸಿತು ನನಗೆ. ನಾನು ನಿಜಕ್ಕೂ ಕಳೆದು ಹೋದೆ. ಅದೆಂತಹ ಸೊಗಸಾಗಿ ಮೂಡಿ ಬಂತೆಂದರೆ, ವೇದಿಕೆಯ ಮೇಲೆ ಬಹಳ ಸರಾಳವಾಗಿ ಪದಗಳನ್ನು ಏರಿಳಿತದ ಮೂಲಕ ಪ್ರಸ್ತುತ ಪಡಿಸಿದನು. 

ಒಂದೆರಡು ಮಕ್ಕಳು ಸ್ವಲ್ಪ ತುಂಟತನವನ್ನು, ಕೆಲವರು ನಾಚಿಕೆಯನ್ನು ತೋರ್ಪಡಿಸಿದರು. ಅವರ ತಂದೆ ತಾಯಂದರು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ಅತಿವಿನಯದಿಂದ, ಪ್ರೀತಿಯಿಂದ ಅವರನ್ನು ಮುದ್ದಾಡಿಸಿದರು. ನನಗೆ ಅನಿಸಿದ್ದು ಆ ಮಟ್ಟದ ತಾಳ್ಮೆ, ಆ ಪ್ರೀತಿ, ಸಂಯಮ ಹೆಮ್ಮೆಯ ವಿಷಯ. ಸಂಗೀತದಲ್ಲಿ ಸಾಧನೆ ಮಾಡಿದವರು ಸ್ವಲೀನತೆಯಿಂದ ಬಳಲಿದ್ದರು ಎಂಬುದನ್ನು ನಂಬುವುದಕ್ಕೆ ಆಗಲಿಲ್ಲ. ನಾವು ನಮ್ಮ ಜೊತೆಯವರಿಗೆ ಸರಿಯಾದ ಪ್ರೀತಿ ನೀಡಿದರೆ ಎಂಥಹ ಅದ್ಬುತವನ್ನು ಬೇಕಿದ್ದರೂ ಸೃಷ್ಟಿಸಬಹುದೆಂಬುದಕ್ಕೆ ನಿನ್ನೆಯ ಕಾರ್ಯಕ್ರಮ ಉತ್ತಮ ಉದಾಹರಣೆ. ಎಲ್ಲರಲ್ಲಿಯೂ ಇದರ ಕುರಿತು ಜಾಗೃತಿಯ ಅನಿವಾರ್ಯತೆಯಿದೆ. ಆ ಹಾದಿಯಲ್ಲಿ ಸಾಗುತ್ತಿರುವ ಡಾ. ಸುಧಾ ತಂಡಕ್ಕೆ ಅಭಿನಂದನೆಗಳು. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...