ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

30 March 2016

Autism Awareness programme - 2nd April 2016, Freedom Park Bangalore

ಮಕ್ಕಳ ಸಮಗ್ರ ಅಭಿವೃದ್ಧಿ ಬಗ್ಗೆ ಗಮನ ನೀಡಿ:
ನಾನು ಲ್ಯಾಂಡ್‍ಮಾರ್ಕ್ ಎಸ್.ಇ.ಎಲ್.ಪಿ ಮಾಡುವಾಗ ಒಬ್ಬರು ವೈದ್ಯರು ನಮ್ಮ ತಂಡಗಳಿಗೆ ಕೋಚ್ ಆಗಿದ್ದರು. ಅವರ ಹೆಸರು ಡಾ. ಸುಧಾ, ಅವರು ಅವರ ಸ್ವಂತ ಅನುಭವವನ್ನು ಹಂಚಿಕೊಳ್ಳುವಾಗ ನನ್ನ ಕಣ್ಣಲ್ಲಿ ನೀರು ತುಂಬಿರುತ್ತಿತ್ತು. ಯಾವುದೇ ತಾಯಿಗೂ ತನ್ನ ಮಗುವೇ ಸರ್ವಸ್ವವಾಗಿರುತ್ತದೆ. ತನ್ನ ಮಗುವು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ಬೆಳವಣಿಗೆ ಹೊಂದಿಲ್ಲದಿದ್ದರೆ ಆ ತಾಯಿಗೆ ಆಗುವ ನೋವೆಷ್ಟಿರಬಹುದು. ಅಂತಹ ನೋವಿಟ್ಟುಕೊಂಡು ಕೊರಗಿ ಸೊರಗಿದ್ದ ಡಾಕ್ಟರಿಗೆ ಮರುಜೀವನ ಕೊಟ್ಟಿದ್ದು ಲ್ಯಾಂಡ್‍ಮಾರ್ಕ್. ನನಗೆ ಶುರುವಿನಲ್ಲಿ ಸ್ವಲೀನತೆ ಅಥವಾ ಆಟೀಸಮ್ ಬಗ್ಗೆ ಹೆಚ್ಚೆನೂ ತಿಳಿದಿರಲಿಲ್ಲ. ಆದರೇ ಅವರು ಯು.ಎಸ್.ಎ. ಗೆ ಹೋಗಿ ತರಬೇತಿ ಪಡೆದು, ತನ್ನ ಮಗುವು ದಿನ ದಿನಕ್ಕೆ ಬೆಳವಣಿಗೆಯತ್ತ ಹೆಜ್ಜೆ ಇಡುವಾಗ ಆ ತಾಯಿಯ ನೆಮ್ಮದಿ ಖುಷಿಯನ್ನು ನಾನು ವಾರ ವಾರವೂ ಗಮನಿಸುತ್ತಿದ್ದೆ. ನಮ್ಮ ಎಸ್.ಇ.ಎಲ್.ಪಿ ಯ ಕೊನೆ ದಿನಗಳಲ್ಲಿ ನಿಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ನಾನು ಬ್ಲಾಗಿನಲ್ಲಿ ಅಥವಾ ಯಾವುದಾದರೂ ಪೇಪರಿನಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡೋಣವೆಂದಿದ್ದೆ. ಇದಾಗಿ ಎರಡು ತಿಂಗಳುಗಳು ತುಂಬಿದರೂ ನಾನು ಅದನ್ನು ಮಾಡಲಾಗಿಲ್ಲ. ನಾನು ಬ್ಯುಸಿಯಿದ್ದೆ ಎನ್ನುವುದು ಒಂದು ನೆಪ ಮಾತ್ರ. 

ಡಾ. ಸುಧಾ ಅವರು ಜಾಗೃತಿಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂದು, ಏಪ್ರಿಲ್ ತಿಂಗಳ 2ನೇ ತಾರೀಖಿನಂದು ಮಧ್ಯಾಹ್ನ 3ರಿಂದ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಾಗೃತಿ ಸಮಾವೇಶವನ್ನು ಆಯೋಜಿಸಿದ್ದಾರೆ. ಅದರ ಕುರಿತ ಕನ್ನಡ ಅನುತರಣಿಕೆಯನ್ನು ನಾನು ನಿಮ್ಮ ಮುಂದಿಡುತ್ತದ್ದೇನೆ. ದಯವಿಟ್ಟು ಪಾಲ್ಗೊಳ್ಳಿ.

ಸ್ವಲೀನತೆ
ಸ್ವಲೀನತೆ ಅಥವಾ ಆಟೀಸಮ್ ಎಂಬ ಪದವನ್ನು ಕೆಲವರು ಕೇಳಿದ್ದೇವೆ. ಕೇಲವರಿಗೆ ಅದರ ಬಗ್ಗೆ ಸ್ವಲ್ಪ ಗೊತ್ತಿರಬಹುದು, ಇನ್ನೂ ಬಹಳಷ್ಟು ಮಂದಿಗೆ ಆ ಪದವೇ ಹೊಸದು. ಹಾಗಾದರೇ ಈ ಸ್ವಲೀನತೆ ಅಥವಾ ಆಟೀಸಮ್ ಎಂದರೇ ಏನು? ಅದರ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ತಿಳಿದುಕೊಂಡು ನಾವೇನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೆಳಗಿದೆ.
ಸ್ವಲೀನತೆಯೆಂಬುದು ಮಕ್ಕಳಿಗೆ ಕಾಣಿಸಿಕೊಳ್ಳುವ ನರಗಳ ಅಭಿವೃದ್ದಿ ಕುಂಠಿತಕ್ಕೆ ಸಂಭಂದಿಸಿದ ವೈಕಲ್ಯ. ಈ ವೈಕಲ್ಯದ ಕುರಿತು ಮೂರು ವರ್ಷದ ಒಳಗೆ ತಿಳಿದುಕೊಂಡು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮಕ್ಕಳು ಭೌತಿಕವಾಗಿ ಮಗುವಿನ ಬೆಳವಣಿಗೆ ಸಹಜವೆನಿಸಿದರೂ, ಭೌದ್ಧಿಕವಾಗಿ ಬೆಳವಣಿಗೆ ಕುಂಠಿತವಾಗಿರುತ್ತದೆ. ಆದರೆ, ಮಗುವಿನ ಭಾಷಾ, ಆಟೋಟಗಳು ಹಾಗೂ ಸಮಾಜಿಕತೆಯಲ್ಲಿ ಸ್ವಲ್ಪ ಅಸಹಜ ಬೆಳವಣಿಗೆಯಿರುತ್ತದೆ. ಸ್ವಲೀನತೆಯ ತೀವ್ರತೆಯು ಸಾಧಾರಣದಿಂದ ವಿಪರೀತವಾಗಿಯೂ ಇರುತ್ತದೆ. ಕೆಲವೊಂದು ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡರೂ ಕೆಲವು ಮಕ್ಕಳಲ್ಲಿ ಅತಿಯಾದ ಬುದ್ದಿವಂತಿಕೆಯ ಬಗ್ಗೆಯೂ ಎಚ್ಚರವಹಿಸಬೇಕಾಗುತ್ತದೆ.

ಸ್ವಲೀನತೆಗೆ ಕಾರಣಗಳೇನು?
ಐವತ್ತು ವರ್ಷಗಳು ಕಳೆದರೂ ಸ್ವಲೀನತೆಗೆ ನಿರ್ದಿಷ್ಟವಾದ ಕಾರಣಗಳು ಕಂಡುಬಂದಿಲ್ಲ. ಇದಕ್ಕೆ ಅನುವಂಶಿಕವಾಗಿಯೂ ಕೆಲವೊಮ್ಮೆ ಸುತ್ತ ಮುತ್ತಲಿನ ಪರಿಸರವು ಕಾರಣವಾಗಬಹುದು. ಆದ್ದರಿಂದಲೇ ನಿಖರವಾದ ಔಷಧಿಗಳು ಇಲ್ಲ.

ಸ್ವಲೀನತೆ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ಅದರ ವಿಶೇಷತೆ ಏನು?
ಇದು ಎಚ್ಚರಿಕೆಯ ಘಂಟೆ. ಮೂರು ದಶಕಗಳ ಹಿಂದೆ ಎರಡು ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಸ್ವಲೀನತೆ ಕಾಣಿಸುತ್ತಿತ್ತು. ಆದರೆ ಈಗ 2016ರಲ್ಲಿ 66 ಮಕ್ಕಳಲ್ಲಿ ಒಂದು ಮಗುವಿಗೆ ಈ ವೈಕಲ್ಯ ಕಾಣಿಸುತ್ತಿದೆ. ತಜ್ಞರ ಅನಿಸಿಕೆ ಪ್ರಕಾರ ಇದು 2030ರ ವೇಳೆಗೆ ಶೇ. 600ರಷ್ಟು ಏರುವ ಸಾಧ್ಯತೆಗಳಿವೆ. ನಾವು ಇದರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ ಅದನ್ನು ತಡೆಯುವ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸರಿಯಾದ ಸಮಯ.

ಸ್ವಲೀನತೆ ಇರುವ ಮಕ್ಕಳು ತನ್ನದೆಯಾದ ಪ್ರಪಂಚದಲ್ಲಿರುತ್ತಾರೆ. ಅವರು ಬೇರೆ ಜನರಿಂದ ದೂರ ಉಳಿದಿರುತ್ತಾರೆ. ಸಾಮಾನ್ಯವಾಗಿ ನಾವುಗಳು, ನಮ್ಮ ಸುತ್ತ ಮುತ್ತಲಿನ ಪರಿಸರದಿಂದ, ಬೇರೆ ಜನರಿಂದ, ಅವರ ಹಾವ ಭಾವಗಳಿಂದ ನೋಡುತ್ತ ಬೆಳಯುತ್ತೇವೆ. ಸ್ವಲೀನತೆ ಇರುವ ಮಕ್ಕಳ ನರಗಳು ಸಾಮಾನ್ಯವಾಗಿಲ್ಲದೆ ಇರುವುದರಿಂದ ಅವರು ಅಕ್ಕ ಪಕ್ಕದ ಪರಿಸರವನ್ನು ಗಮನಿಸುವ ಕೌಶಲ್ಯವಿರುವುದಿಲ್ಲ. ಆದ್ದರಿಂದ ಅವರು ತಮ್ಮದೇ ಪ್ರಪಂಚದಲ್ಲಿ ತಮಗೆ ಸುಲಭವೆನಿಸುವ ಚಪ್ಪಾಲೆ ಹೊಡೆಯುವುದು, ಯಾವುದೋ ಒಂದು ಆಟಿಕೆಯೊಂದಿಗೆ ಆಡುವ ಅದೇ ತೆರೆನಾದ ಚಟುವಟಿಕೆಗಳೊಂದಿಗೆ ದಿನ ಕಳೆಯುತ್ತಾರೆ. ಅವರಿಗೆ ಆ ರೀತಿಯ ಚಟುವಟಿಕೆಗಳು ಸಮಾಧಾನಕರವೆನಿಸುತ್ತವೆ. ಅವರ ವಿಶ್ವದಿಂದ ಹೊರಗಿನದೆಲ್ಲಾ ಅವರಿಗೆ ಮಾನ್ಯವೆನಿಸುವುದಿಲ್ಲ, ಅವರ ಹೆಸರನ್ನು ಬೇರೆಯವರು ಕರೆದಾಗ ಅದಕ್ಕೆ ಪ್ರತಿಕ್ರಿಯಿಸುವುದು ಕೂಡ ಅರ್ಥಹೀನವೆನಿಸುತ್ತದೆ ಅವರಿಗೆ.

ಇದೆಲ್ಲವನ್ನು ತಿಳಿದ ಮೇಲೆ ಮುಂದಿನ ಹೆಜ್ಜೆ ಏನು? ಏನು ಮಾಡಬೇಕು? ಹೇಗೆ ಇದನ್ನು ಗುರುತಿಸುವುದು? ರಕ್ತ ಪರೀಕ್ಷೆಯಾಗಲಿ, ಎಂಆರ್‍ಐ ಸ್ಕ್ಯಾನಿಂಗ್ ಆಗಲಿ ಬೇಡ. ಬಹಳ ಸರಳವಾದ ಎಂಚಾಟ್ ಆರ್/ಎಫ್ ಪ್ರಶ್ನಾವಳಿಯನ್ನು ವೈದ್ಯರ ಅಥವಾ ಅನುಭವಿ ನರ್ಸ್‍ಗಳ ಸಹಾಯದಿಂದ ತುಂಬಿದರೆ ಸಾಕು. ಇದನ್ನು ತುಂಬಲು ಹೆಚ್ಚೆಂದರೇ ಹದಿನೈದು ನಿಮಿಷಗಳು ಸಾಕು. ಹದಿನೆಂಟನೇ ತಿಂಗಳಿನಲ್ಲಿ ಇದನ್ನು ಮಾಡಿಸಬೇಕಾಗುತ್ತದೆ. ಕೇವಲ ನೆಡೆಯುವುದಾಗಲಿ ಅಥವಾ ಮಾತನಾಡುವುದಾಗಲಿ ಮಗುವಿನ ಬೆಳವಣಿಗೆ ಎನ್ನಲು ಸಾಧ್ಯವಾಗುವುದಿಲ್ಲ. ಮಗು ತನ್ನ ಆಸಕ್ತಿಯನ್ನು ತನ್ನ ಪೋಷಕರ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ತನಗೆ ಇಷ್ಟವಾಗುದನ್ನು ತೋರಿಕೆಯ ಮೂಲಕ ವ್ಯಕ್ತಪಡಿಸುವುದು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಮತ್ತು ಮೊದಲ ಹೆಜ್ಜೆ. ಯಾವುದಾದರೂ ಹೊಸ ಆಟಿಕೆಯನ್ನು ನೋಡಿದಾಗ ಅದನ್ನು ತನ್ನ ಪೋಷಕರಿಗೆ ಬೆರಳುಗಳ ಮೂಲಕ ತೋರಿಸುತ್ತದೆ. ಆ ರೀತಿಯಿಂದ ಬೆರಳುಗಳ ಬೆಳವಣಿಗೆಯಾಗುತ್ತದೆ. ಇದು ಸಾಮಾನ್ಯವಾಗಿ ಹದಿನೆಂಟನೆಯ ತಿಂಗಳಿನಿಂದ ಪ್ರಾರಂಭವಾಗುತ್ತದೆ.  ಆ ರೀತಿಯ ಬೆಳವಣಿಗೆಯಲ್ಲಿ ಕೊರತೆ ಕಂಡು ಬಂದರೆ ಆ ಕಡೆಗೆ ಗಮನ ಹರಿಸಬೇಕಾಗುತ್ತದೆ.

ಮುಂದಿನ ಹೆಜ್ಜೆ?
ಮಗುವಿನ ಬೆಳವಣಿಗೆಯನ್ನು ಮತ್ತು ಸ್ವಲೀನತೆಯ ಕುರಿತು 18-24 ತಿಂಗಳ ಒಳಗೆ ಗುರುತಿಸುವುದು ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳಿಗೆ ಸರಿಯಾದ ಸಹಕಾರ ನೀಡಿದರೆ ಸುಂದರವಾದ ಮಗುವಿನಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಾಣಬಹುದು. ಮಗುವನ್ನು ಪ್ರೀತಿಯಿಂದ ಕಾಣುವುದು ಮತ್ತು ಸ್ವೀಕರಿಸುವುದು ಪ್ರಮುಖ ಪಾತ್ರವಹಿಸುತ್ತದೆ.

ಈ ಹಿನ್ನಲೆಯಲ್ಲಿ ಪೋಷಕರ ಪಾತ್ರ ಅವಿಸ್ಮರಣೀಯ. ನನ್ನ ಮಗುವಿಗೆ ಸ್ವಲೀನತೆ ಇದೆ. ನನ್ನ ಮಗುವನ್ನು ನಾನು ಪ್ರೀತಿಸುತ್ತೇನೆ. ಅದರ ಮೂಗು, ಬಾಯಿ, ಕಣ್ಣು ಹೀಗೆ ಅವನ/ಳ ಎಲ್ಲವನ್ನು ನಾನು ಆನಂದಿಸುತ್ತೇನೆ. ಅವನಿಗೆ ಇರುವ ಸ್ವಲೀನತೆಯನ್ನು ಹೋಗಲಾಡಿಸಲು ವೈದ್ಯರ ಸಲಗೆ ಪಡೆದು ಅದರಂತೆಯೆ ನಾನು ಮಾಡುತ್ತೇನೆ ಎಂಬ ದೃಢಸಂಕಲ್ಪ ಪೋಷಕರಿಗೆ ಬರಬೇಕಾಗುತ್ತದೆ.

ಸ್ವಲೀನತೆ ಇರುವ ಮಕ್ಕಳಲ್ಲಿ ವಿಶೇಷ ಶಕ್ತಿಯಿರುತ್ತದೆ. ಕೆಲವರು ಅತಿಯಾದ ಜ್ಞಾಪಕ ಶಕ್ತಿ, ಬುದ್ದಿವಂತಿಕೆ, ಪ್ರಾಮಾನಿಕತೆ, ಸತ್ಯತೆ, ಇವೆಲ್ಲವೂ ಅವರನ್ನು ಜೀವನದ ಉತ್ತುಂಗಕ್ಕೆ ಏರುವುದಕ್ಕೆ ಸಹಾಯ ಮಾಡುತ್ತದೆ.

ವಿಝ್ಥಾರಾ:
ಸ್ವಲೀನತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಮತ್ತು ಸಹಕಾರ ನೀಡುವುದಕ್ಕೆ ಸ್ಥಾಪಿಸಿರುವ ಸಂಸ್ಥೆ. ಈ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣ ಡಾ. ಸುಧಾ ಮತ್ತು ಡಾ. ಕೃತಿಕಾ. ಅವರ ಸ್ವಂತ ಮಕ್ಕಳ ಸ್ವಲೀನತೆಯ ಪ್ರಯಾಣದಿಂದ ಸ್ಫೂರ್ತಿಪಡೆದು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಭಾರತದಲ್ಲಿ ಸ್ವಲೀನತೆಯ ಕುರಿತ ಜಾಗೃತಿಯ ಮಟ್ಟ ಇನ್ನೂ ಶೈವಾವಸ್ಥೆಯಲ್ಲಿದೆ. ತಂಡದವರು ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅರಿವನ್ನು ಮೂಡಿಸುತ್ತಿದೆ. ಏಪ್ರಿಲ್ 2ನೇ ತಾರೀಖಿನಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಧ್ಯಾಹ್ನ 3ರಿಂದ 6ರವರೆಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

No comments:

Post a Comment